ಸಮಾಜ ಸುಧಾರಣೆಯ ಸಂತ "ಅಣ್ಣ ಬಸವಣ್ಣ" ಜಗತ್ತಿಗೆ ಜ್ಯೋತಿ ಬಸವಣ್ಣ. ಕಾಯ ಅಳಿದರು ಕಾಯಕ ಉಳಿಯಬೇಕು ಎಂಬ ಮಾತಿನಂತೆ ಕಾಯಕವೇ ಕೈಲಾಸ ಎಂದು ಸಾರಿ ಕಾಯಕದಲ್ಲಿ ದೇವರನ್ನು ಕಂಡ ಅಪರೂಪದ ಕಾಯಕಯೋಗಿ ಭಕ್ತಿ ಬಾಂಡಾರಿ ಅಣ್ಣ ಬಸವಣ್ಣನವರಾಗಿದ್ದಾರೆ. ಸಮಾಜದಲ್ಲಿ ಆಯಾ ಕಾಲಘಟ್ಟದಲ್ಲಿ ಸಾಮಾಜಿಕ, ಧಾರ್ಮಿಕ, ಸ್ಥಿತಿಗತಿಗಳಲ್ಲಿ ವ್ಯತ್ಯಾಸ ಉಂಟಾದಾಗ ಅವುಗಳನ್ನು ಸರಿಪಡಿಸಲು ಮಹಾನ್ ವ್ಯಕ್ತಿ ಜನಿಸಿ ಮಾನವರಲ್ಲಿ ಜನಜಾಗೃತಿ ಉಂಟು ಮಾಡಿ ಒಂದು ಹೊಸ ವರ್ಗಕ್ಕೆ ನಾಂದಿ ಹಾಡಿದವರು ಎಂಬ ಮಾತಿದೆ. ಹೀಗೆ 12ನೇ ಶತಮಾನದಲ್ಲಿದ್ದ ಅಸ್ಪೃಶ್ಯತೆ, ಮೌಢಾಚಾರ, ಅಸಮಾನತೆ ಇನ್ನಿತರ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸಲು ಜನಿಸಿದ ಮಹಾನ್ ವ್ಯಕ್ತಿ ಕಾಯಕಯೋಗಿಯೇ ಅಣ್ಣ ಬಸವಣ್ಣ. 12ನೆಯ ಶತಮಾನದಲ್ಲಿ ಇವರ ನೇತೃತ್ವದಲ್ಲಿ ನಡೆದ ಅನುಭವ ಮಂಟಪ ಅದರ ಕಾರ್ಯ ಸದಾ ಮೆಚ್ಚುಗೆಗೆ ಪಾತ್ರವಾದ್ದದ್ದು, ಅಲ್ಲಮಪ್ರಭುಗಳ ನಾಯಕತ್ವದಲ್ಲಿ ಪ್ರತಿದಿನ ನೂರಾರು ಶರಣರು, ಸಂತರು, ಶರಣೆಯರು ಸೇರಿ ನೂರಾರು ವಚನ ರಚಿಸಿ ಅದರ ಬಗ್ಗೆ ಚರ್ಚೆ ಮಾಡಿ ತಮ್ಮ ಜೀವನ ಅನುಭವಗಳನ್ನು ಪರಸ್ಪರ ಹಂಚಿಕೊಂಡು ಸಮಾಜ ಸುಧಾರಣೆ ಕುರಿತು ಚಿಂತಿಸುತ್ತಿದ್ದರು. ಮುಖ್ಯವಾಗಿ ಇಲ್ಲಿ ಸೇರುವ ಶರಣ - ಶರಣೀಯರು ಕಾಯಕ ಬಗ್ಗೆ ಪ್ರೀತಿ ಬದುಕಿನ ಬಗ್ಗೆ ಮಮತೆ ಸರ್ವರು ಸಮಾನರೆಂಬ ಕಳಕಳಿ ಮೇಲು- ಕೀಲು ಎಂಬ ಭಾವನೆ ದೂರ ಮಾಡುವ ಚಿಂತನೆಗಳನ್ನು ಹೊಂದಿದ್ದರು. ಅದರಂತೆ ಬದುಕಿದ್ದರೂ ಕೂಡ. ಇಂತಹ ಅಪರೂಪದ ಅನುಭವ ಮಂಟಪದ ಯಶಸ್ವಿನಲ್ಲಿ ಪ್ರಧಾನ ಪಾತ್ರ ವಹಿಸಿದವರು ಅಣ್ಣ ಬಸವಣ್ಣನವರು. ನಂಬಿದ ಸಿದ್ಧಾಂತಕ್ಕಾಗಿ ಹುದ್ದೆ ತ್ಯಾಗ ಮಾಡಿದ ಅಪರೂಪದ ನಿಸ್ವಾರ್ಥ ವ್ಯಕ್ತಿ ಅಣ್ಣ ಬಸವಣ್ಣನವರು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ಕೆಲಸ ಮಾಡುವಾಗ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರು. ಇವರ ಎಳಿಗೆಯನ್ನು ಸಹಿಸದ ಕೆಲವರು ಇಲ್ಲಸಲ್ಲದ ಆರೋಪ ಮಾಡಿ ಹಣದ ದುರುಪಯೋಗದ ಆರೋಪ ಇವರ ಮೇಲೆ ಹೇರಿದರು. ಇದರಿಂದ ಬಸವಣ್ಣ ನವರು ಮನನೊಂದು ತಾನು ತಪ್ಪು ಮಾಡದಿದ್ದರೂ ಆರೋಪ ಮಾಡುವವರ ತಪ್ಪು ಸಾಬೀತಾಗಲಿ ಎಂದು ಹುದ್ದೆ ಬಿಟ್ಟುಕೊಟ್ಟರು. ಮುಂದೆ ಕಾಲಾಯ ತಸ್ಮೈ ನಮಃ ಎಂಬಂತೆ ಮುಂದೊಂದು ದಿನ ತನಿಖೆ ನಡೆದಾಗ ಹಣದ ದುರುಪಯೋಗವಾಗಿಲ್ಲ ಎಂದು ತಿಳಿಯಿತು. ಆಗ ಬಿಜ್ಜಳರಾಜನು ತುಂಬಾ ನೊಂದುಕೊಂಡು ತನ್ನ ತಪ್ಪಿನ ಅರಿವಾಯಿತು. ಹೀಗೆ ನಂಬಿದ ಸಿದ್ಧಾಂತ ತತ್ವಕ್ಕಾಗಿ ಹುದ್ದೆಯನ್ನು ತ್ಯಾಗ ಮಾಡಿದ ತ್ಯಾಗಿ ಅಣ್ಣ ಬಸವಣ್ಣನವರು. ಲೌಕಿಕ ಬದುಕಿನಲ್ಲಿ ಇದ್ದರೂ ಆಧ್ಯಾತ್ಮಿಕ ಸಾಧನೆ ಮಾಡುತ್ತಾ ಜಗತ್ತಿನಲ್ಲಿ ಆಧ್ಯಾತ್ಮಿಕ ಜಾಗೃತಿ ಉಂಟು ಮಾಡುತ್ತಾ ಸರಳ ವಿಚಾರಗಳನ್ನು ಮಂಡನೆ ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾದರು. ಬಸವಣ್ಣನವರು ಸಾಮಾನ್ಯವಾಗಿ ಹುಟ್ಟಿ, ಅಸಾಮಾನ್ಯರಾಗಿ ಬೆಳೆದು, ಯುವ ಪರಿವರ್ತಕ ಶಕ್ತಿಯಾಗಿ ಎತ್ತರಕ್ಕೆ ಏರಿ ಸಮಾಜದ ಒಳಿತಿಗಾಗಿ ಹೋರಾಟ ಮಾಡಿದರು. ಆಗಿನ ಕಾಲದಲ್ಲಿ ಜಾತೀಯತೆ ಎಂಬುದು ಮನೆ ಮಾಡಿತ್ತು. ಇದನ್ನು ಹೋಗಲಾಡಿಸಲು ಅವಿರತವಾಗಿ ಶ್ರಮಿಸಿದರು ಮಾದಾರ ಚೆನ್ನಯ್ಯ ಮಡಿವಾಳ ಮಾಚಯ್ಯ ಅಂಬಿಗರ ಚೌಡಯ್ಯ ಡೋರಾ ಕಕ್ಕಯ್ಯ ಸೊನ್ನಲಿಗೆ ಸಿದ್ದರಾಮಯ್ಯ ಆಯ್ದಕ್ಕಿ ಲಕ್ಕಮ್ಮ ಹೀಗೆ ಹಲವು ವ್ಯಕ್ತಿ ಮಾಡುವ ಚರಣ್ ಶರಣಿಯರು ಬಸವಣ್ಣನವರ ಜೊತೆಗೂಡಿದರು ಅಸ್ಪೃಶ್ಯ ಬಗ್ಗೆದೊಡ್ಡ ಕ್ರಾಂತಿಗೆ ಮುನ್ನುಡಿ ಬರೆದರು. ಅವರೇ ಅಣ್ಣ ಬಸವಣ್ಣ. ವಚನಕಾರರಾಗಿ ಬಸವಣ್ಣನವರದು ಬಹುದೊಡ್ಡ ಸಾಧನೆ. ಅವರು ವಚನಗಳಲ್ಲಿ ಸಾಮಾಜಿಕ ಚಿಂತನೆ, ಕಾಯಕದ ಪ್ರೀತಿ, ಬದುಕಿನ ಒಲವು, ಸಮಾನತೆ ,ಮಾನವಿಯ ಗುಣಗಳ ಮೌಲ್ಯಗಳನ್ನು ದೇವರ ಹಾಗೂ ಭಕ್ತನ ನಂಟು ಶರಣರ ಚಿಂತನ ಲಹರಿ ಏಕತಿಯ ಅಗತ್ಯ ಹೀಗೆ ಅನೇಕ ಮೌಲ್ಯಗಳನ್ನು ಒಳಗೊಂಡು ರಚಿತವಾಗಿದೆ ಅಣ್ಣ ಬಸವಣ್ಣನವರು ತಮ್ಮ ಸಾಧನೆಯ ಮೂಲಕ ಜಾತಿಮೀರಿ ಬೆಳೆದವರು ಇಂತಹ ಮಹಾನ್ ಪುರುಷನ ಜಯಂತಿ ಆಚರಣೆ ಮಾಡುವುದರ ಜನತೆಗೆ ಅವರ ಆದರ್ಶಗಳು ಮೈಗೂಡಿಸಿಕೊಳ್ಳೋಣ. ✍️ ಶರಣ ವಿನಯ್ ಪಾಟೀಲ (ಕಾರ್ಯದರ್ಶಿಗಳು) ಶ್ರೀ ಚನ್ನಬಸವೇಶ್ವರ ಸ್ಕೂಲ್ ಗೇರುಮರ

- Post by Onlinetv24x71
- ಏ. 20 : ಅರಸೀಕೆರೆ ತಾಲೂಕು ರಾಮಸಾಗರ ಗ್ರಾಮದ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ ಶರಣ ಸಿದ್ದಪ್ಪ ಶರಣೆ ಮಲ್ಲಮ್ಮನವರು ಸ್ಥಾಪಿಸಿರುವ ಶ್ರೀ ಬಸವ ತತ್ವ ಪ್ರಸಾರ ಕೇಂದ್ರವನ್ನು 2013ರಲ್ಲಿ 12ನೇ ಶತಮಾನದ ಆಗಿಹೋದ ಶರಣರ ಆಚರಣೆ ಅನುಭಾವ, ಅನುಕರಣೆ, ಪ್ರಚಾರಕ್ಕೋಸ್ಕರ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆಗೆ ಯಾರ ಸಹಾಯವಿಲ್ಲದೆ ತನು-ಮನ ಧನವನ್ನು ಬಸವ ತತ್ವ ಪ್ರಚಾರಕ್ಕೆ ಮುಡುಪಾಗಿಟ್ಟಂತಹ ದಂಪತಿಗಳಿವರು. ಈವರು ಸ್ಥಾಪಿಸಲ್ಪಟ್ಟ ಬಸವ ತತ್ವ ಪ್ರಸಾರ ಕೇಂದ್ರದಲ್ಲಿ ಅದ್ದೂರಿಯಾಗಿ ಬಸವ ಜಯಂತಿ ಆಚರಣೆ ಮಾಡಲಾಯಿತು. ಪ್ರತಿ ತಿಂಗಳು ಒಂದರಂದು ಲಿಂಗ ಪೂಜೆ, ಅನುಭಾವ, ಪ್ರಸಾದ, ಪ್ರಚಾರ ಈತರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ಈ ಕಾರ್ಯಕ್ರಮಗಳಿಗೆ ನಾವೆಲ್ಲರೂ ಅಭಿನಂದಿಸೋಣ. ಇಂದು ಈ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಶರಣ ಹಾಲಪ್ಪ ಹಿರಿಯೂರ್, ಶರಣ ಸಿದ್ದೇಶ, ಪುಟಾಣಿ ಮಕ್ಕಳು ಹಾಗೂ ಶರಣ ಶ್ರೀ ವಿನಯ್ ಪಾಟೀಲ್ ರವರು ಷಟಸ್ಥಲ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಾಮಸಾಗರ ಗ್ರಾಮಸ್ಥರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.2
- ಶಿಗ್ಗಾಂವ ತಾಲೂಕಿನ ಅಂಬೇಡ್ಕರ್ ಸಂಕೀರ್ಣದಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡಂತ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಶಿಗ್ಗಾವ ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಸಂಗನಬಸವ ಪೂಜ್ಯಶ್ರೀಗಳು, ಹಾಗೂ ಮಾಜಿ ಸಂಸದರಾದ ಶ್ರೀ ಮಂಜುನಾಥ ಕುನ್ನೂರ್ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ, ತಾಲೂಕ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ರಾಗಿ ವಕೀಲರು, ಶಿಗ್ಗಾಂವ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುಡ್ಡಪ್ಪ ಜಲ್ದಿ, ಗ್ಯಾರೆಂಟಿ ಸಮಿತಿಯ ತಾಲೂಕ ಅಧ್ಯಕ್ಷರಾದ ಎಸ್ ಎಫ್ ಮನಕಟ್ಟಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- ಕುಷ್ಟಗಿ:- ಪಟ್ಟಣದಲ್ಲಿ 893ನೇ ಬಸವೇಶ್ವರ ಜಯಂತಿ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನೆಡೆಯಿತು. ಬೆಳಿಗ್ಗೆ ೧೦ ಗಂಟೆಗೆ ಬಸವೇಶ್ವರ ಸರ್ಕಲ್ ನಲ್ಲಿನ ಶ್ರೀ ಬಸವಣ್ಣನವರ ಪುತ್ತಳಿಗೆ ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ಗಣ್ಯರಿಂದ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಅದ್ದೂರಿ ಚಾಲನೆ ನೀಡಲಾಯಿತು . ಬಸವೇಶ್ವರ ಸರ್ಕಲ್ ಮಾರ್ಗವಾಗಿ, ತೆರೆದ ವಾಹನದಲ್ಲಿ ಬಸವೇಶ್ವರ ಭಾವಚಿತ್ರದೊಂದಿಗೆ ಹಾಗೂ ಮಹಿಳೆಯರಿಂದ ವಚನ ಪುಸ್ತಕವತ್ತ ಬುತ್ತಿಯನ್ನು ತಲೆ ಮೇಲೆ ಇಟ್ಟುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಮಾರುತಿ ವೃತ್ತ, ಕನಕಸರ ವೃತ್ತ, ಪುರಸಭೆ ಸೇರಿದಂತೆ ಪಟ್ಟಣದ ಅನೇಕ ವೃತ್ತಗಳಲ್ಲಿ ಸಂಚರಿಸಿ ಬಸವ ಭವನದ ವರಗೆ ಮೆರವಣಿಗೆಯನ್ನು ಕರೆತರಲಾಯಿತು. ನಂತರ ಬಸವ ಭವದಲ್ಲಿ ವೇದಿಕೆ ಕಾರ್ಯಕ್ರಮ ಏರ್ಪಡಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ಚಾಲನೆ ನೀಡಿದರು. ತದನಂತರ ಮಾತನಾಡಿ ಈ ಬಸವ ಭವನ ಸಮಗ್ರ ಅಭಿವೃದ್ಧಿಗೆ ಸುಮಾರು ೨೦ ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು. ಸಮಾನತೆಗಾಗಿ ಹೋರಾಡಿ ಮಹಾನ್ ದಾರ್ಶನಿಕರನ್ನು ಸದಾ ಸ್ಮರಿಸಬೇಕಿದೆ. ಕೇವಲ ಜಾತಿ ಆಧಾರಿತ ಮೇಲೆ ಜಯಂತಿ ನಡೆಯುತ್ತಿದ್ದು, ಮಹಾನ್ ವ್ಯಕ್ತಿಗಳ ಕಾರ್ಯಕ್ರಮ ಸೀಮಿತವಾಗಬಾರದು. ಹನ್ನೆರಡನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮೂಲಕ ಸಮಾನತೆಗೆ ಸಾರಿದ ವಿಶ್ವಗುರು ಬಸವಣ್ಣನವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ.ಮಹಾನ್ ಮೇಧಾವಿಗಳಾದ ಸಿದ್ದೇಶ್ವರ ಸ್ವಾಮೀಜಿ, ಪುಟ್ಟರಾಜ ಗವಾಯಿಗಳ ಪುಣ್ಯ ಜನಭೂಮಿಯಲ್ಲಿ ಜನಸಿದ ನಾವೆಲ್ಲರೂ ಪುಣ್ಯ ಪಡೆದಿದ್ದೇವೆ. ಕಾಯಕವೇ ಕೈಲಾಸ* ಇವನಾರವ ಇವನಾರವ ಇವನಮ್ಮವ ಎಂದು ಸಾರಿದ ಬಸವಣ್ಣನವರ ಕೊಡುಗೆ ಹಿರಿದು. ಬಸವ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗವುದು. ಬಸವ ಸಮಿತಿಯವರು ಭವನದಲ್ಲಿ ಆರಂಭಿಸಿದ ಜ್ಞಾನಭಂಡಾರದ ಕೇಂದ್ರದಲ್ಲಿ ಸಮಯ ಕಳೆಯಲು ಮುಂದಾಗಬೇಕು ಎಂದರು. ನಿವೃತ್ತ ಶಿಕ್ಷಕ ಹಂಪಣ್ಣ ಗುಡದೂರು ಮಾತನಾಡಿ, ಇಡೀ ನಾಡಿಗೆ ವಚನ ಮೂಲಕ ಸಾರಿದ ಬಸವಣ್ಣನವರ ಕಾರ್ಯ ಎಲ್ಲರೂ ಮೆಚ್ಚಿಗೆಗೆ ಪಾತ್ರರಾಗಿದ್ದಾರೆ. ಸಮಾನತೆಗೆ ಅನುಭವ ಮಂಟಪ ಮಾದರಿ ಮಾಡಿದ ಬಸವಣ್ಣನವರ ಸಾರಿದ್ದಾರೆ. ವಚನ ಕ್ರಾಂತಿ ಮೂಲಕ ನಾಡಿಗೆ ಕೀರ್ತಿ ಸಾರಿದ ಫ.ಗು.ಹಳಕಟ್ಟಿ, ಅಲ್ಲಮಪ್ರಭು, ಹರ್ಡೇಕರ್ ಮಂಜಪ್ಪ, ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ ಸೇರಿದಂತೆ ನೂರಾರು ಶರಣರಿಗೆ ಸಲ್ಲುತ್ತದೆ ಎಂದರು. ಸಿಪಿಐ ವಿಶ್ವನಾಥ್ ಹಿರೇಗೌಡ್ರ ಮಾತನಾಡಿದರು.ಲಾಲ್‌ಸಾಬ್ ಕಂದಗಲ್ ಉಪನ್ಯಾಸ ನೀಡಿದರು. ಮಾಜಿ ಶಾಸಕ ಕೆ.ಶರಣಪ್ಪ ವಕೀಲರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ಅಶೋಕ್ ಶಿಗ್ಗಾಂವಿ, ಬಿಇಒ ಉಮಾದೇವಿ ಬಸಾಪೂರ, ಸಿಡಿಪಿಒ ಯಲ್ಲಮ್ಮ ಹಂಡಿ, ತಾಪಂ ಇಒ ಪಂಪಾಪತಿ ಹಿರೇಮಠ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಟಿ.ಬಸವರಾಜ್, ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಜಾಗತಿಕ ಲಿಂಗಾಯತ ಸಮಿತಿ ಸದಸ್ಯೆ ಗೌರಮ್ಮ ಕುಡತಿನಿ,ಮುಖಂಡ ವಸಂತಕುಮಾರ ಮೇಲಿನಮನಿ, ಸಮಿತಿ ಪದಾಧಿಕಾರಿಗಳಾದ ರವೀಂದ್ರಸ್ವಾಮಿ, ಶಂಕರಗೌಡ ಪಾಟೀಲ್, ಮಹೇಶ ಹಡಪದ,ಶಿವಾಜಿ ಹಡಪದ, ತಾಲೂಕು ವಕೀಲರ ಮಾಜಿ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ್ ಹಾಗೂ ಸಮಿತಿ ಪದಾಧಿಕಾರಿಗಳು, ಮುಖಂಡರು ಇನ್ನಿತರರು ಭಾಗವಹಿಸಿದ್ದರು. ಈ ವೇಳೆ ಬಸವ ಜಯಂತಿ ನಿಮಿತ್ತ ಹಮ್ಮಿಕೊಂಡ ವಚನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು ----------------------------------4
- ಕುಂದಗೋಳ: ತಾಲ್ಲೂಕಿನ ಹಿರೇನರ್ತಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ತಲೆದೋರಿದ ಹಳೆಯ ದ್ವೇಷವೊಂದು ವಿಕೋಪಕ್ಕೆ ತಿರುಗಿದ್ದು, ಒಂದೇ ಮನೆತನದವರ ನಡುವಿನ ಜಗಳದಲ್ಲಿ ಮುಂದುವರೆದು ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಈ ಭೀಕರ ಗಲಾಟೆಯಲ್ಲಿ ಕರಿಯಪ್ಪಗೌಡ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆಗೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜಾಗದ ವಿಷಯವಾಗಿ ಮಾತಿಗೆ ಮಾತು ಬೆಳೆದು, ಒಂದೇ ಮನೆತನದ ಅಣ್ಣತಮ್ಮಂದಿರಾದ ಪ್ರಜ್ವಲ್ ಗೌಡ , ಸಿದ್ದನಗೌಡ ಹಾಗೂ ಶಿವನಗೌಡ (ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು) ನಡುವೆ ಸಂಘರ್ಷ ಏರ್ಪಟ್ಟಿದೆ. ಕರಿಯಪ್ಪಗೌಡ ಅವರು ಬಣವೆ ಒಟ್ಟುತ್ತಿದ್ದ ಸಮಯದಲ್ಲಿ ಸ್ಥಳಕ್ಕೆ ಬಂದ ಪ್ರಜ್ವಲ್ ಗೌಡ ಹಾಗೂ ಆತನ ಸಹಚರರು, ಕಲ್ಲು ಮತ್ತು ಬಡಿಗೆಗಳಿಂದ ಏಕಾಏಕಿ ಅಟ್ಟಹಾಸ ಮೆರೆದಿದ್ದಾರೆ ಎಂದು ಸ್ವತಃ ಹಲ್ಲೆಗೊಳಗಾದ ಕರಿಯಪ್ಪಗೌಡರು ತಮ್ಮ ನೋವಿನ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಆರೋಪಿಗಳು ಕರಿಯಪ್ಪಗೌಡರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ, ಅವರ ತಲೆ ಹಾಗೂ ಮೈಮೇಲೆ ರಕ್ತಸಿಕ್ತ ಗಾಯಗಳಾಗಿವೆ. ರಕ್ತದ ಘಾಯದಿಂದ ಬಿದ್ದಿದ್ದ ಅವರನ್ನು ಗ್ರಾಮಸ್ಥರು ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಗಾಯಾಳು ಕರಿಯಪ್ಪಗೌಡರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಸದ್ಯ ಕುಂದಗೋಲ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಯತ್ತಿದ್ದು ಇದು ಎಪ್ ಆಯ್ ಆರ್ ಆಗುತ್ತಾ ರಾಜಿ ಸಂಧಾನದ ಮೂಲಕ ಇಥ್ಯರ್ಥ ಆಗುತ್ತದೆಯಾ ಎಂದುದನ್ನು ಕಾದು ನೋಡಬೇಕು. ಘಟನೆಯಿಂದಾಗಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.1
- ಧಾರವಾಡ: ಧಾರವಾಡ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಸ್ಥಳಾಂತರಿಸುವುದಾಗಿ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೆರೆ ಆಗ್ರಹಿಸಿದರು. ಧಾರವಾಡ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಪ್ರಾದೇಶಿಕ ಸುದ್ದಿ ವಿಭಾಗಕ್ಕೆ 45 ವರ್ಷಗಳ ಇತಿಹಾಸವಿದೆ. ಈ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಕಾಶವಾಣಿ ಸುದ್ದಿ ವಿಭಾಗವನ್ನು ಧಾರವಾಡದಲ್ಲಿ ಉಳಿಸಿಕೊಳ್ಳಲು ಕೇಂದ್ರ ಸಚಿವರಿಗೆ ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಡ ತರಲಾಗುವುದು. ಈ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘವು ಶೀಘ್ರ ಸಭೆ ಕರೆದು ನಿರ್ಧಾರ ಕೈಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ, ವೀರಣ್ಣ ಒಡ್ಡೀನ ಸೇರಿದಂತೆ ಇತರರಿದ್ದರು.1
- Post by Onlinetv24x71