ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಕೆ ದೇವೇಂದ್ರಪ್ಪ ಇನ್ನಿಲ್ಲ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ‘ಸ್ವತಂತ್ರ ಹಳ್ಳಿ’ ಎಂದು ಘೋಷಿಸಿಕೊಂಡು ಇತಿಹಾಸ ಸೃಷ್ಟಿಸಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿದ್ದ ಕೊನೆಯ ಕೊಂಡಿ ಕಳಚಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಕೆ. ದೇವೇಂದ್ರಪ್ಪ (99) ಅವರು ಇಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಶಿಕಾರಿಪುರ ತಾಲ್ಲೂಕಿನ ತಿಮ್ಲಾಪುರ ಗ್ರಾಮದ ನಿವಾಸಿಯಾಗಿದ್ದ ದೇವೇಂದ್ರಪ್ಪ ಅವರು, 1942ರ ‘ಕ್ವಿಟ್ ಇಂಡಿಯಾ’ ಚಳುವಳಿಯ ಸಂದರ್ಭದಲ್ಲಿ ನಡೆದ ಐತಿಹಾಸಿಕ ಈಸೂರು ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ”ಏಸೂರು ಕೊಟ್ಟರೂ ಈಸೂರು ಬಿಡೆವು” ಎಂಬ ವೀರ ಘೋಷಣೆಯೊಂದಿಗೆ ಬ್ರಿಟಿಷ್ ಅಧಿಕಾರಿಗಳನ್ನು ಊರ ಹೊರಗೆ ಹಾಕಿದ್ದ ಈಸೂರಿನ ಹೋರಾಟಗಾರರೊಂದಿಗೆ ದೇವೇಂದ್ರಪ್ಪ ಹೋರಾಡಿದ್ದರು. ಈ ಚಳುವಳಿಯಲ್ಲಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿನಲ್ಲಿ ಸೆರೆಮನೆ ವಾಸವನ್ನು ಅನುಭವಿಸಿದ್ದರು. ಈಸೂರು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಹೋರಾಟಗಾರರು ಈ ಮೊದಲೇ ಮೃತರಾಗಿದ್ದು, ದೇವೇಂದ್ರಪ್ಪ ಅವರು ಆ ಹೋರಾಟದ ಜೀವಂತ ಸಾಕ್ಷಿಯಾಗಿದ್ದ ಕೊನೆಯ ಕೊಂಡಿಯಾಗಿದ್ದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿವರ್ಷ ಆಗಸ್ಟ್ 9ರಂದು ತಾಲ್ಲೂಕು ಕಚೇರಿ ಮುಂದೆ ಇರುವ ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕದ ಬಳಿ ಇವರಿಂದಲೇ ಧ್ವಜಾರೋಹಣ ನೆರವೇರಿಸಿ ಸನ್ಮಾನಿಸಲಾಗುತ್ತಿತ್ತು. ದೇವೇಂದ್ರಪ್ಪ ಅವರ ಸಾವು ಒಂದು ಸಾರ್ಥಕ ಜೀವನದ ಅಂತ್ಯ. ಅವರು ಈಸೂರು ಹೋರಾಟದ ಕೊನೆಯ ಕೊಂಡಿಯಾಗಿದ್ದರು. ಅವರ ಬದುಕು ಮತ್ತು ದೇಶಪ್ರೇಮ ಇಂದಿನ ಯುವ ಪೀಳಿಗೆಗೆ ಸದಾ ಮಾದರಿ.” ಕೆ.ಎಸ್. ಹುಚ್ರಾಯಪ್ಪ ಹಿರಿಯ ಪತ್ರಕರ್ತರು. ಮೃತರ ಅಗಲಿಕೆಗೆ ಜಿಲ್ಲೆಯ ಗಣ್ಯರು ಹಾಗೂ ಸ್ವಾತಂತ್ರ್ಯ ಹೋರಾಟದ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ದೇವೇಂದ್ರಪ್ಪ ಅವರ ನಿಧನದೊಂದಿಗೆ ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಂತಾಗಿದೆ. ಇದೇ ಸಂದರ್ಭದಲ್ಲಿ ಬಿ.ಸಿ ವೇಣುಗೋಪಾಲ್ ಇ .ಹೆಚ್ ಬಸವರಾಜ್. ಬಿ .ಎಲ್ ರಾಜಪ್ಪ ಉಪಸ್ಥಿತರಿದ್ದರು.
ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಕೆ ದೇವೇಂದ್ರಪ್ಪ ಇನ್ನಿಲ್ಲ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಮೊದಲ ಬಾರಿಗೆ ‘ಸ್ವತಂತ್ರ ಹಳ್ಳಿ’ ಎಂದು ಘೋಷಿಸಿಕೊಂಡು ಇತಿಹಾಸ ಸೃಷ್ಟಿಸಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿದ್ದ ಕೊನೆಯ ಕೊಂಡಿ ಕಳಚಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಟಿ.ಕೆ. ದೇವೇಂದ್ರಪ್ಪ (99) ಅವರು ಇಂದು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಶಿಕಾರಿಪುರ
ತಾಲ್ಲೂಕಿನ ತಿಮ್ಲಾಪುರ ಗ್ರಾಮದ ನಿವಾಸಿಯಾಗಿದ್ದ ದೇವೇಂದ್ರಪ್ಪ ಅವರು, 1942ರ ‘ಕ್ವಿಟ್ ಇಂಡಿಯಾ’ ಚಳುವಳಿಯ ಸಂದರ್ಭದಲ್ಲಿ ನಡೆದ ಐತಿಹಾಸಿಕ ಈಸೂರು ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ”ಏಸೂರು ಕೊಟ್ಟರೂ ಈಸೂರು ಬಿಡೆವು” ಎಂಬ ವೀರ ಘೋಷಣೆಯೊಂದಿಗೆ ಬ್ರಿಟಿಷ್ ಅಧಿಕಾರಿಗಳನ್ನು ಊರ ಹೊರಗೆ ಹಾಕಿದ್ದ ಈಸೂರಿನ ಹೋರಾಟಗಾರರೊಂದಿಗೆ ದೇವೇಂದ್ರಪ್ಪ ಹೋರಾಡಿದ್ದರು. ಈ ಚಳುವಳಿಯಲ್ಲಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಆಗ್ರಹಾರ ಜೈಲಿನಲ್ಲಿ ಸೆರೆಮನೆ ವಾಸವನ್ನು ಅನುಭವಿಸಿದ್ದರು. ಈಸೂರು
ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಹೋರಾಟಗಾರರು ಈ ಮೊದಲೇ ಮೃತರಾಗಿದ್ದು, ದೇವೇಂದ್ರಪ್ಪ ಅವರು ಆ ಹೋರಾಟದ ಜೀವಂತ ಸಾಕ್ಷಿಯಾಗಿದ್ದ ಕೊನೆಯ ಕೊಂಡಿಯಾಗಿದ್ದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿವರ್ಷ ಆಗಸ್ಟ್ 9ರಂದು ತಾಲ್ಲೂಕು ಕಚೇರಿ ಮುಂದೆ ಇರುವ ಸ್ವಾತಂತ್ರ್ಯ ಹೋರಾಟಗಾರ ಸ್ಮಾರಕದ ಬಳಿ ಇವರಿಂದಲೇ ಧ್ವಜಾರೋಹಣ ನೆರವೇರಿಸಿ ಸನ್ಮಾನಿಸಲಾಗುತ್ತಿತ್ತು. ದೇವೇಂದ್ರಪ್ಪ ಅವರ ಸಾವು ಒಂದು ಸಾರ್ಥಕ ಜೀವನದ ಅಂತ್ಯ. ಅವರು ಈಸೂರು ಹೋರಾಟದ ಕೊನೆಯ
ಕೊಂಡಿಯಾಗಿದ್ದರು. ಅವರ ಬದುಕು ಮತ್ತು ದೇಶಪ್ರೇಮ ಇಂದಿನ ಯುವ ಪೀಳಿಗೆಗೆ ಸದಾ ಮಾದರಿ.” ಕೆ.ಎಸ್. ಹುಚ್ರಾಯಪ್ಪ ಹಿರಿಯ ಪತ್ರಕರ್ತರು. ಮೃತರ ಅಗಲಿಕೆಗೆ ಜಿಲ್ಲೆಯ ಗಣ್ಯರು ಹಾಗೂ ಸ್ವಾತಂತ್ರ್ಯ ಹೋರಾಟದ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ದೇವೇಂದ್ರಪ್ಪ ಅವರ ನಿಧನದೊಂದಿಗೆ ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಒಂದು ಸುವರ್ಣ ಅಧ್ಯಾಯ ಮುಕ್ತಾಯಗೊಂಡಂತಾಗಿದೆ. ಇದೇ ಸಂದರ್ಭದಲ್ಲಿ ಬಿ.ಸಿ ವೇಣುಗೋಪಾಲ್ ಇ .ಹೆಚ್ ಬಸವರಾಜ್. ಬಿ .ಎಲ್ ರಾಜಪ್ಪ ಉಪಸ್ಥಿತರಿದ್ದರು.
- ಶಿವಮೊಗ್ಗ: ನಗರದಲ್ಲಿ ಜೀವ ತೆಗೆಯುತ್ತಿರುವ ಹಂಪ್ ಗಳ ಹಿಂದೆ ಇದೀಗ ಪೊಲೀಸ್ ಇಲಾಖೆ ಮತ್ತು ಮಹಾನಗರ ಪಾಲಿಕೆ ಪ್ರತ್ಯೇಕ ಪ್ರತ್ಯೇಕವಾಗಿಯೇ ಬೆನ್ನು ಬಿದ್ದು ಹಂಪ್ ಗಳ ನಿರ್ಮಾಣಗಳಲ್ಲಿ ಆಗಿರುವ ತಪ್ಪು ಹುಡುಕಿ ಸರಿ ಮಾಡುತ್ತಿವೆ. ಒಂದು ಕಡೆ ಮಹಾನಗರ ಪಾಲಿಕೆಯ ಆಯುಕ್ತ ಮಾಯಣ್ಣ ಗೌಡರು ಶಿವಮೊಗ್ಗದ ಹಂಪ್ ಗಳನ್ನು ಹುಡುಕಿ ಪರಿಶೀಲಿಸುತ್ತಿ ದ್ದಾರೆ. ಮತ್ತೊಂದು ಕಡೆ ಪೊಲೀಸ್ ಇಲಾಖೆಯ ಎಸ್ ಪಿ ನಿಖಿಲ್ ಬಿ. ಮತ್ತು ಟ್ರಾಫಿಕ್ ಇನ್ಸ್ ಪೆಕ್ಟರ್ ದೇವರಾಜ್ ಸಿಬ್ಬಂದಿ ಗಳೊಂದಿಗೆ ಅವೈಜ್ಞಾನಿಕ ಹಂಪ್ ಗಳ ಹುಡುಕಾಟ ಆರಂಭಿಸಿ ಸ್ಥಳ ಪರಿಶೀಲಿಸಿ, ಸರಿ ಪಡಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿಸುವ ಉದ್ದೇಶದಿಂದ ಹಾಕಲಾದ ಹಂಪ್ ಗಳೇ ಜನರ ಜೀವಗಳ ಜೊತೆ ಆಟವಾಡಲಾರಂಭಿಸಿದ್ದು ಜನಾಕ್ರೋಶಕ್ಕೆ ಕಾರಣವಾಗುತ್ತಿದೆ. ಒಂದೆರಡು ಕಡೆ ಪ್ರಮುಖ ಜಾಗಗಳಲ್ಲಿ ಹಂಪ್ ಗಳನ್ನು ಹಾಕಲು ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಜಂಟಿ ಕಾರ್ಯಾಚರಣೆ ಆರಂಭಿಸಿದಾಗ ಕೆಲವು ಕಡೆ ಜನರೇ ಒತ್ತಡ ಮಾಡಿ ಹಲವು ಕಡೆ ಹಂಪ್ ಗಳನ್ನು ಹಾಕಿಸಿಕೊಂಡಿದ್ದರು. ಅಪಘಾತ ಸಂಭವಿಸಿದ ರಸ್ತೆಗಳಲ್ಲಿರುವ ಹಂಪ್ ಗಳ ಬಳಿ ಎರಡೂ ಇಲಾಖೆಯ ಅಧಿಕಾರಿಗಳು ತೆರಳಿ ಪರಿಶೀಲಿಸಿ ಅವುಗಳನ್ನು ತೆಗೆಸುವ ಅಥವಾ ಸರಿ ಮಾಡುವ ಕೆಲಸ ತಕ್ಷಣದಿಂದ ಮಾಡುತ್ತಿರುವುದರಿಂದ ಬಹಳಷ್ಟು ಜೀವಗಳು ಉಳಿಯುವುದರಲ್ಲಿ ಸಂದೇಹವಿಲ್ಲ.1
- ತೀರ್ಥಹಳ್ಳಿ: ಪಟ್ಟಣದ ಹೃದಯ ಭಾಗದಲ್ಲಿ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯು ನಿನ್ನೆಯಿಂದ ನಡೆಯುತ್ತಿದ್ದು ಎರಡನೇ ದಿನವಾದ ಇಂದು ಬುಧವಾರದ ಶ್ರೀ ದೇವಿಯ ಅಲಂಕಾರ ಮತ್ತು ಪೂಜೆ2
- ಭದ್ರಾವತಿ ತಾಲ್ಲೂಕು ಬಂಜಾರ ಸಂಘ ಹಾಗೂ ಸಮಾಜದ ವತಿಯಿಂದ ಅದ್ದೂರಿಯಾಗಿ ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಆಚರಣೆ1
- ದಾವಣಗೆರೆ : ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ಹಾಗೂ ಜನರಲ್ಲಿ ಸುರಕ್ಷತೆ ಭಾವನೆ ಕಾಪಾಡುವ ನಿಟ್ಟಿನಲ್ಲಿ ಇಂದು ಬೆಳಗ್ಗೆ ದಾವಣಗೆರೆ ನಗರದಲ್ಲಿ ಎಸ್ಪಿ ಶೇಖರ್ ಹೆಚ್ ಟಿ ಐಪಿಎಸ್ ರವರ ನೇತೃತ್ವದಲ್ಲಿ ಪೊಲೀಸ್ ಪಥ ಸಂಚಲನ ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಫಥ ಸಂಚಲನವು ನಗರದ ಹೊಂಡದ ವೃತ್ತದಿಂದ ಆರಂಭವಾಗಿ ಅಂಬೇಡ್ಕರ್ ವೃತ್ತ, ಹಗೆದಿಬ್ಬ ವೃತ್ತ, ಕಾಳಿಕ ದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್ ಕೆ ಪಿ ರಸ್ತೆ ಮೂಲಕ ದರ್ಗಾಂಬಿಕಾ ದೇವಾಸ್ಥಾನ ಮೂಲಕ ನೇರವಾಗಿ ಹೊಂಡದ ವೃತ್ತಕ್ಕೆ ಮುಕ್ತಾಯವಾಗಿತು. ಹಗೆದಿಬ್ಬ ವೃತ್ತ, ಕಾಳಿಕ ದೇವಿ ರಸ್ತೆ, ಗ್ಯಾಸ್ ಕಟ್ಟೆ ವೃತ್ತ, ಎಸ್ ಕೆ ಪಿ ರಸ್ತೆ ಮೂಲಕ ದರ್ಗಾಂಬಿಕಾ ದೇವಾಸ್ಥಾನ ಮೂಲಕ ನೇರವಾಗಿ ಹೊಂಡದ ವೃತ್ತದಲ್ಲಿ ಸಮಾಪ್ತಿಯಾಯಿತು. ಪೊಲೀಸ್ ಪಥ ಸಂಚಲನದಲ್ಲಿ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ ರವರು, ಪೊಲೀಸ್ ನಿರೀಕ್ಷಕರಾದ ಶ್ರೀ ವಸಂತ್, ಶ್ರೀ ಸುನೀಲ್ ಕುಮಾರ್, ಶ್ರೀಮತಿ ಶಿಲ್ಪಾ, ಶ್ರೀ ನಂಜುಂಡಸ್ವಾಮಿ, ಶ್ರೀ ಮಂಜುನಾಥ ಕುಪ್ಪೇಲೂರು, ಪಿ ಎಸ್ ಐ ರವರಾದ ಶ್ರೀ ರವಿನಾಯ್ಕ, ಶ್ರೀ ಸಚಿನ್, ಶ್ರೀ ಮತಿ ಶಕುಂತಲಾ ಇತರರು, ಆರ್ ಎ ಎಫ್ ತಂಡದ ಪೊಲೀಸ್ ನಿರೀಕ್ಷಕರಾದ ಶ್ರೀ ರಾಜು ಹಾಗೂ ಸಿಬ್ಬಂದಿಗಳು, ನಗರ ಪೊಲೀಸ್ ಹಾಗೂ ಡಿ ಎ ಆರ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು. ರಾಜು4
- ಹಾವೇರಿ ಜಿಲ್ಲೆ, ಸವಣೂರು ತಾಲೂಕ್ ಮಾದಾಪುರ ಗ್ರಾಮದ ಲಾಲ್ ಸಾಬ ಉಡೆದ ಎಂಬುವರಿಗೆ ಸೇರಿದ ಗುಡಿಸಲು 5 ಕೆಜಿ ಗ್ಯಾಸ್ ಲೀಕ್ ಆಗಿ ಹೊತ್ತಿ ಉರಿದ ಪರಿಣಾಮ , ಗುಡಿಸಿಲಲ್ಲಿ ಇದ್ದ ಮೆಕ್ಕೆಜೋಳದ ಪಟ್ಟಿ ಗುಡಿಸಲಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಬಸ್ಮ ಮನೆ ಇಲ್ಲದೆ ಬೀದಿಗೆ ಬಂದ ಕುಟುಂಬ, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೀದಿಗೆ ಬಂದ ಕುಟುಂಬಕ್ಕೆ ಆಸರೆ ನೀಡಬೇಕೆಂದು ನಮ್ಮ ಕಳಕಳಿ,4
- ಭಂದುಗಳೇ. 🙏 ದಿನಾಂಕ 18-2-26ರಂದು 5:30 ಸಮಯ ದಂದು ಹೊಳಲ್ಕೆರೆ -ದಾವಣಗೆರೆ ಮುಖ್ಯ ರಸ್ತೆ ಚಿಕ್ಕಜಾಜೂರು ರೈಲ್ವೆ ಗೇಟ್ ಹತ್ತಿರ ಪೊಲೀಸ್ ರವರು ವಾಹನ ನಿಲ್ಲಿಸಿ ಫೈನ್ ಹಾಕುತ್ತಿದ್ದಾರೆ ಆದರೆ ಇಲ್ಲಿ ಗಮನಿಸಬಹುದು ಎಷ್ಟು ಬೈಕ್ ಸವಾರರು ಹೆಲ್ಮೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದಾರೆ ಹಾಗೂ ಎಷ್ಟು ಇತರೆ ವಾಹನ ಹೋಗುತ್ತಿದವೇ ಪೋಲೀಸ್ ಅಧಿಕಾರಿಗಳು ಕೇವಲ ಹೊರ ಜಿಲ್ಲೆಯ ವಾಹನ ನಿಲ್ಲಿಸಿ ಫೈನ್ ಹಾಕುವುದು ಎಷ್ಟು ಸರಿ. ಜೈ ಕೆ ಆರ್ ಎಸ್4
- ಬೆಳಗಾವಿ ನಗರದ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಬಲು ಜೋರಾಗಿ ನಡೆಯುತ್ತಿರುವ ಮಟಕಾ ದಂಧೆ ಕಡಿವಾಣ ಯಾವಾಗ1
- ಬೀಡಾಡಿ ದನಗಳ ಕಾಟಕ್ಕೆ ಬೆಸತ್ತ ಸಾರ್ವಜನಿಕರು. ಬೀಡಾಡಿ ದನಗಳನ್ನ ಹಿಡಿದು ಗೋಶಾಲೆಗೆ ಬಿಡಲು ಮುಂದಾದ ನಗರಸಭೆ.. ಚಳ್ಳಕೆರೆ ನಗರದ ತರಕಾರಿ ಮಾರುಕಟ್ಟೆ ಮುಖ್ಯರಸ್ತೆ ಸೇರಿದಂತೆ ನಗರದ ತುಂಬೆಲ್ಲಾ ಸಾರ್ವಜನಿಕರಿಗೆ ಉಪಟಲ ನೀಡುತ್ತಿದ್ದ ಬೀಡಾಡಿದನಗಳನ್ನ ಹಿಡಿದು ಗೋಶಾಲೆಗೆ ಬೀಡಲು ನಗರಸಭೆ ಮುಂದಾಗಿದೆ. ನಗರಸಭೆ ಪ್ರಭಾರ ಪೌರಯಯಕರಾದ ಡಾ.ನಾಗವೇಣಿ (ಕೆಎಎಸ್) ಇವರ ಸೂಚನೆ ಮೇರೆಗೆ ನಗರಸಭೆ ಇಂಜಿನಿಯರ್ ನರೇಂದ್ರಬಾಬು ಆರೋಗ್ಯ ನಿರೀಕ್ಷಕರಾದ ಗೀತಾ, ಗಣೇಶ್ ಹಾಗೂ ಸಾಗರ್ ಇವರ ನೇತೃತ್ವದಲ್ಲಿ ಚಳ್ಳಕೆರೆ ಪಶು ಸಂಗೋಪನ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಯೋಗದೊಂದಿಗೆ ಇಂದು ಬೀದಿ ದನಗಳನ್ನು ಹಿಡಿದು ಗೋಶಾಲೆಗೆ ಸಾಗಿಸಲು ಮುಂದಾಗಿದ್ದಾರೆ.. ಇದೆ ತಿಂಗಳು 24 ನೇ ತಾರೀಖಿನ ವರೆಗೆ ಬೀಡಾಡಿದನಗಳನ್ನ ಹಿಡಿದು ಗೋಶಾಲೆಗೆ ಬಿಡಲಾಗುವುದು ಬೀಡಾಡಿದನಗಳ ಮಾಲೀಕರು ಹೆಚ್ಚೆತ್ತುಕೊಂಡು ತಮ್ಮ ಜಾನುವಾರುಗಳನ್ನ ಬೀದಿಗೆ ಬೀಡದಂತೆ ನೋಡಿಕೊಳ್ಳಬೇಕು ಇಲ್ಲವಾದರೆ ಬೀದಿದನಗಳನ್ನ ಮಾಲೀಕರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಪ್ರಬಾರಿ ಪೌರಯುಕ್ತೆ ಡಾ.ನಾಗವೇಣಿ ಎಚ್ಚರಿಕೆ ನೀಡಿದ್ದಾರೆ..1