ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು : ಬಿಇಒ ಗುಬ್ಬಿ : ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಎಸ್ ನಟರಾಜು ತಿಳಿಸಿದರು. ಪಟ್ಟಣದ ಶುಭೋದಯ ಪ್ರೌಢಶಾಲಾ ಆವರಣದಲ್ಲಿ ಕಸಬಾ ಹೋಬಳಿಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ನಾಲ್ಕು ಗೋಡೆಯ ಮಧ್ಯದಲ್ಲಿ ಕಲಿಯುವ ಶಿಕ್ಷಣದ ಜೊತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುವುದಕ್ಕೆ ಎಲ್ಲಾ ರೀತಿಯ ಶಿಕ್ಷಣ ಮತ್ತು ಶಿಕ್ಷಣೇತರ ಚಟುವಟಿಕೆಗಳು ಅವಶ್ಯಕತೆ ಇದೆ ಆಗ ಮಾತ್ರ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಪರಿಪೂರ್ಣವಾಗುತ್ತದೆ ಎಂದು ಹೇಳಿದರು. ಶುಭೋದಯ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಅಮರ್ ಮಾತನಾಡಿ, 38 ವರ್ಷಗಳಿಂದಲೂ ಸಹ ನಮ್ಮ ಸಂಸ್ಥೆಯು ಶಿಕ್ಷಣ ಮತ್ತು, ಕ್ರೀಡೆಗೆ ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿದ್ದು, ಈ ಬಾರಿ ಕಸಬಾ ಹೋಬಳಿಯ ಕ್ರೀಡಾಕೂಟ ನಮ್ಮ ಸಂಸ್ಥೆಯಲ್ಲಿ ನಡೆಯುತ್ತಿರುವುದು ಸಂತೋಷ. ವಿದ್ಯಾರ್ಥಿಗಳು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡೆಯಲ್ಲಿ ಭಾಗವಹಿಸಿದಾಗ ಖಂಡಿತವಾಗಿ ಯಶಸ್ಸು ಕಾಣಬಹುದು ಎಂದರು. ಕ್ರೀಡ ಪ್ರೋತ್ಸಾಹಕ ಶಂಕರ್ ಕುಮಾರ್ ಮಾತನಾಡಿ ಚಿಕ್ಕ ವಯಸ್ಸಿನಿಂದಲೇ ವಿದ್ಯಾರ್ಥಿಗಳು ಕ್ರೀಡೆಯತ್ತ ಮನಸು ಮಾಡಿದರೆ ಮುಂದಿನ ದಿನದಲ್ಲಿ ಉತ್ತಮವಾದ ಕ್ರೀಡಾಪಟುಗಳಾಗಿ ಬೆಳೆಯಬಹುದು ಎಂದರು. ಕ್ರೀಡಾಕೂಟದಲ್ಲಿ ಬಿ.ಆರ್.ಸಿ ಮಧುಸೂದನ್, ಪಪಂ ಮಾಜಿ ಸದಸ್ಯರಾದ ಶಿವಕುಮಾರ್, ಕೃಷ್ಣಮೂರ್ತಿ, ಕ್ರೀಡಾ ನಿರ್ದೇಶಕಿ ಪ್ರಾಥಮಿಕ ಪಾಠಶಾಲೆಯ ಪದಾಧಿಕಾರಿಗಳಾದ ಅರುಣ್ ಕುಮಾರ್ ಸಿಂಧು, ಶಶಿಧರ್, ಸಹಾಯಕ ನಿರ್ದೇಶಕ ಜಗದೀಶ್, ದೈಹಿಕ ಶಿಕ್ಷಣಾಧಿಕಾರಿ ನಾಗರತ್ನ, ಕಾಂತರಾಜು, ಚನ್ನಬಸವ ಆರಾಧ್ಯ, ಶುಭೋದಯ ವಿದ್ಯಾ ಸಂಸ್ಥೆಯ ಎಲ್ಲಾ ಬೋಧಕರು ಬೋಧಕೇತರರು ಸಿಬ್ಬಂದಿ ವರ್ಗ, ಕ್ರೀಡಾಕೂಟದ ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.

- ಕನ್ನಡ ಸಂಘದ ಸಂಸ್ಥಾಪಕ ದಿವಂಗತ 'ಸೀಮೆಎಣ್ಣೆ ಕೃಷ್ಣಯ್ಯ' 9ನೇ ವರ್ಷದ ನುಡಿನಮನ: ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಮಾತು ಕನ್ನಡ ಸಂಘದ ಸಂಸ್ಥಾಪಕ ದಿವಂಗತ 'ಸೀಮೆಎಣ್ಣೆ ಕೃಷ್ಣಯ್ಯ' 9ನೇ ವರ್ಷದ ನುಡಿನಮನ: ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಮಾತು ------------------- ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಕನ್ನಡ ಪರ ಚಟುವಟಿಕೆಗಳಿಗೆ ಬಲ ತುಂಬಲು ವೇದಿಕೆ ನಿರ್ಮಿಸಿ, ಶಾಶ್ವತ ಕಾರ್ಯಕ್ರಮಗಳನ್ನು ನೀಡಿದ ಕನ್ನಡ ಸಂಘದ ಸಂಸ್ಥಾಪಕ ಹಾಗೂ ಅಧ್ಯಕ್ಷ ದಿವಂಗತ 'ಸೀಮೆಎಣ್ಣೆ ಕೃಷ್ಣಯ್ಯ' ಅವರ ಸೇವೆ ಅತ್ಯಂತ ಸ್ಮರಣೀಯ ಎಂದು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ಬಣ್ಣಿಸಿದರು. ಪಟ್ಟಣದ ಕನ್ನಡ ಸಂಘದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದಿವಂಗತ ಸೀಮೆಎಣ್ಣೆ ಕೃಷ್ಣಯ್ಯ ಅವರ 9 ನೇ ವರ್ಷದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. "ತಾಲೂಕಿನಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ಕೃಷ್ಣಯ್ಯನವರು ಮತ್ತು ಅವರ ತಂಡದ ಕೊಡುಗೆ ಹಿರಿದಾದುದು. ಈ ಕ್ಷೇತ್ರದಲ್ಲಿ ಎಷ್ಟು ದಿನಗಳ ಕಾಲ ಕನ್ನಡ ಕಾರ್ಯಕ್ರಮಗಳು ನಡೆಯುತ್ತವೆಯೋ ಅಲ್ಲಿಯವರೆಗೂ ಕೃಷ್ಣಯ್ಯನವರ ಹೆಸರು ಅಮರವಾಗಿರಲಿದೆ," ಎಂದರು. ಬಡತನ ಮೆಟ್ಟಿ ಬೆಳೆದ ಧೀಮಂತ: "ನಾವು ಸಣ್ಣ ಹುಡುಗರಿದ್ದಾಗಿನಿಂದಲೂ ಕೃಷ್ಣಯ್ಯನವರ ಹೆಸರು ಮತ್ತು ಕಾರ್ಯಕ್ರಮಗಳನ್ನು ಕೇಳುತ್ತಾ ಬೆಳೆದಿದ್ದೇವೆ. ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದ ಅವರು, ಬಡತನದಲ್ಲೇ ಬೆಳೆದು ತಮ್ಮ ಸ್ವಪ್ರಯತ್ನದಿಂದ ಉನ್ನತ ಶಿಕ್ಷಣ ಪಡೆದು ಪದವೀಧರರಾದರು. ನಂತರ ಉತ್ತಮ ಕೆಲಸದಲ್ಲಿದ್ದರೂ, ಕನ್ನಡ ನೆಲ-ಜಲ ಮತ್ತು ಸಮಾಜ ಸೇವೆಯತ್ತ ತೀವ್ರ ಒಲವು ಹೊಂದಿದ್ದರು. ವಿ.ಎನ್. ಪಾಟೀಲ್, ರಾಮಕೃಷ್ಣ ಹೆಗಡೆ ಅವರಂತಹ ಹಿರಿಯ ರಾಜಕಾರಣಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು," ಎಂದು ಕೃಷ್ಣಯ್ಯನವರ ವ್ಯಕ್ತಿತ್ವವನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಪದಾಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.1
- ಡೆಲಿವರಿ ಸಿಬ್ಬಂದಿ ವರ್ತನೆಗೆ ಮಹಿಳೆ ಆತಂಕ! ಜೆಪ್ಪೋ ಪಾರ್ಟ್ನರ್ ಐಡಿ ರದ್ದು! ಡೆಲಿವರಿ ಸಿಬ್ಬಂದಿ ವರ್ತನೆಗೆ ಮಹಿಳೆ ಆತಂಕ! ಜೆಪ್ಪೋ ಪಾರ್ಟ್ನರ್ ಐಡಿ ರದ್ದು!1
- ಮಂಡ್ಯ ಬ್ರಿಡ್ಜ್ ಹದಗೆಟ್ಟಿದೆ ಸರಿ ಮಾಡಿಸಿಕೊಡಿ ಅಂತ ಸಾಮಾಜಿಕ ಜಾಲ ತಾಣದಲ್ಲಿ ಶಾಸಕರಿಗೆ ಆಗ್ರಹಿಸಿದ ಯುವಕ ವಿಡಿಯೋ ವೈರಲ್ ಮಂಡ್ಯ - ಬ್ರಿಡ್ಜ್ ಹದಗೆಟ್ಟಿದೆ ಸರಿ ಮಾಡಿಸಿಕೊಡಿ ಅಂತ ಸಾಮಾಜಿಕ ಜಾಲ ತಾಣದಲ್ಲಿ ಆಗ್ರಹಿಸಿದ ಯುವಕ ವಿಡಿಯೋ ವೈರಲ್, ಮಂಡ್ಯದ ಅರಕೇಶ್ವರ ಸ್ವಾಮಿ ದೇವಾಲಯದ ರಸ್ತೆಯಲ್ಲಿಬರುವ ಬ್ರಿಡ್ಜ್ ಹಳ್ಳ ಬಿದ್ದಿದೆ ಈ ರಸ್ತೆಯಲ್ಲಿ ಹಲವಾರು ವಾಹನ ಓಡಾಡುತ್ತಿದ್ದು ಶಾಲಾವಾಹನಗಳು ಹೆಚ್ಚಾಗಿ ಒಡಾಡುತ್ತಿದ್ದು ಅತಾಚುರ್ಯ ವಾಗುವ ಮೊದಲು ಸರಿಪಡಿಸಿ ಅಂತ ಯುವಕ ಮನವಿ ಮಾಡಿದ್ದಾನೆ.1
- Post by ರಾಮಲಿಂಗೇಗೌಡ ಎನ್1
- *ಆರೋಗ್ಯ ಇಲಾಖೆಯಲ್ಲಿ ಸೇವಾ ಮನೋಭಾವನೆಯಿಂದ ವಿಶಿಷ್ಟ ಛಾಪು ಮೂಡಿಸಿದ ಜಯಚಂದ್ರಾರೆಡ್ಡಿ-ಡಿ ಎಚ್ ಓ ಡಾ. ಚೇತನ್* ಚಿಕ್ಕಬಳ್ಳಾಪುರ : ಭಾಗ್ಯನಗರ ತಾಲೂಕಿನ ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಜಯಚಂದ್ರಾರೆಡ್ಡಿ ಅವರು ಆರೋಗ್ಯ ಇಲಾಖೆಯ ಹೆಮ್ಮೆ ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಯಾಗಿ ಔಷಧ ವಿತರಣೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಅವರು ತೋರಿದ ಜವಾಬ್ದಾರಿಯುತ ಕಾರ್ಯವೈಖರಿ ಇಲಾಖೆಗೆ ಉತ್ತಮ ಹೆಸರು ತಂದುಕೊಟ್ಟಿದೆ ಎಂದು ಜಿಲ್ಲಾ ಅರೋಗ್ಯಧಿಕಾರಿ ಡಾ! ಚೇತನ್ ತಿಳಿಸಿದ್ದಾರೆ. ಪಟ್ಟಣದ ಕೊಡಿಕೊಂಡ ರಸ್ತೆಯ ಜಾಮೀಯಾ ಷಾದಿ ಮಹಲ್ ಆವರಣದಲ್ಲಿ ಕೇಂದ್ರದ ಫಾರ್ಮಸಿ ಅಧಿಕಾರಿಯಾಗಿದ್ದ ಸಿ.ಹೆಚ್. ಜಯಚಂದ್ರಾರೆಡ್ಡಿ ವಯೋನಿವೃತ್ತಿ ಅಂಗವಾಗಿ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮನಡೆಯಿತು,ಬೀಳ್ಕೊಡುಗೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಅರೋಗ್ಯಧಿಕಾರಿ ಡಾ! ಚೇತನ್,ಸರ್ಕಾರಿ ಸೇವೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸಿ ಸಾರ್ವಜನಿಕರ ವಿಶ್ವಾಸ ಗಳಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮಸಿ ಅಧಿಕಾರಿಗಳಾದ ಸಿ.ಹೆಚ್. ಜಯಚಂದ್ರಾರೆಡ್ಡಿ ಅವರ ವಯೋನಿವೃತ್ತಿ ಸುಖಮಯವಾಗಿ ಇರಬೇಕು ಹಾಗೂ ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಜಯಚಂದ್ರಾರೆಡ್ಡಿ ಅವರು ಆರೋಗ್ಯ ಇಲಾಖೆಯ ಹೆಮ್ಮೆಯ ಅಧಿಕಾರಿಯಾಗಿದ್ದಾರೆ ಎಂದು ಹೇಳಿದರು. ಔಷಧ ವಿತರಣೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಅವರು ತೋರಿದ ಜವಾಬ್ದಾರಿಯುತ ಕಾರ್ಯವೈಖರಿ ಇಲಾಖೆಗೆ ಉತ್ತಮ ಹೆಸರು ತಂದುಕೊಟ್ಟಿದೆ. ಅವರ ಸೇವಾ ಮನೋಭಾವವು ಕಿರಿಯ ಸಿಬ್ಬಂದಿಗೆ ಸದಾ ಮಾದರಿಯಾಗಿದ್ದು, ನಿವೃತ್ತಿಯ ನಂತರವೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಂಗವಾಗಿ ಜಯಚಂದ್ರಾರೆಡ್ಡಿ ಅವರನ್ನು ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಹೋದ್ಯೋಗಿಗಳು ಅವರೊಂದಿಗೆ ಕಳೆದ ಸೇವಾ ದಿನಗಳ ಅನುಭವಗಳನ್ನು ಹಂಚಿಕೊಂಡು, ನಿವೃತ್ತ ಜೀವನ ಸುಖ, ಶಾಂತಿ, ಉತ್ತಮ ಆರೋಗ್ಯ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು. ಸಮಾರಂಭವು ಆತ್ಮೀಯ ವಾತಾವರಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸತ್ಯನಾರಾಯಣರೆಡ್ಡಿ,ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವಿನಯ್,ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಟಿ ಡಿ ಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಎ.ಶ್ರೀನಿವಾಸ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎ. ನಂಜುಂಡಪ್ಪ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಹನುಮಂತ ರೆಡ್ಡಿ,ವೈದ್ಯರಾದ ಡಾ.ಜಗ್ನಾಥ್,ಡಾ! ಸುಜಿತ್,ಮುಖಂಡರಾದ ಪ್ರಭಾಕರ್ ರೆಡ್ಡಿ, ಸೇರಿದಂತೆ ಅನೇಕ ಗಣ್ಯರು ಶುಭಹಾರೈಯಿಸಿದರು..4
- ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಳಿಸಿದ ನೌಕರರಿಗೆ ಪ್ರೀತಿಪೂರ್ವಕ ಅಭಿನಂದನೆ ಪಾವಗಡ: ಆಗಸ್ಟ್ 8ರಂದು ಮುಕ್ತಾಯಗೊಳ್ಳಲಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳ್ಳಲು ರಾಜಕೀಯ ಮುಖಂಡರು ಹಾಗೂ ಬಿಎಲ್‌ಎಗಳ ಸಹಕಾರ ಅಗತ್ಯ ಎಂದು ಪುರಸಭೆ ಮುಖ್ಯಾಧಿಕಾರಿ ಜಾಫರ್ ಷರೀಫ್ ಹೇಳಿದರು. ಪುರಸಭೆ ವ್ಯಾಪ್ತಿಯ 20 ಮತಗಟ್ಟೆಗಳ 20,278 ಮತದಾರರಲ್ಲಿ ಇದುವರೆಗೆ ಸುಮಾರು 18 ಸಾವಿರ ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಉಳಿದ 2 ಸಾವಿರ ಮತದಾರರ ಮ್ಯಾಪಿಂಗ್ ಪ್ರಗತಿಯಲ್ಲಿದೆ. ಐದು ಮತಗಟ್ಟೆಗಳಲ್ಲಿ ಎಸ್‌ಐಆರ್ ಕಾರ್ಯ ಸಂಪೂರ್ಣ ಮುಗಿದಿದೆ. ನಗರ ಪ್ರದೇಶದಲ್ಲಿ ಬಾಡಿಗೆದಾರರ ಪದೇಪದೇ ಸ್ಥಳಾಂತರದಿಂದ ಮಾಹಿತಿ ಸಂಗ್ರಹ ಸವಾಲಾಗಿರುವುದರಿಂದ ಯಾವುದೇ ಮತದಾರರು ಹೊರಗುಳಿಯದಂತೆ ಬಿಎಲ್‌ಒಗಳಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸುವಂತೆ ಅವರು ಮನವಿ ಮಾಡಿದರು. ಸಭೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ಬಿಎಲ್‌ಒಗಳನ್ನು ಅಭಿನಂದಿಸಲಾಯಿತು.1
- ನಟ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ ಬ್ಯಾಗ್ನೊಂದಿಗೆ ಎಂಟ್ರಿ! ನಟ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ ಬ್ಯಾಗ್ನೊಂದಿಗೆ ಎಂಟ್ರಿ!1
- ಪ್ರತಿಭಟನೆಯಲ್ಲಿ ವಯೋವೃದ್ದೆ, ಅಭಿನಂದಿಸಿದ ಕುಮಾರ್ ಬಂಗಾರಪ್ಪ ಪ್ರತಿಭಟನೆಯಲ್ಲಿ ಬಾಗಿ ಮಂಡ್ಯ-ಕರ್ನಾಟಕ ರಾಜ್ಯ ರೈತಸಂಘ,ದಲಿತಸಂಘರ್ಷ ಸಮಿತಿ,ಹಾಗೂ ಕಬ್ಬುಬೆಳೆಗಾರರ ಒಕ್ಕೂಟದಿಂದ ಕಾವೇರಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಚಲನಚಿತ್ರ ನಟ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ರು ವಯೋವೃದ್ದೆ ಪ್ರತಿಭಟನೆಯಲ್ಲಿ ಬಾಗವಹಿಸಿದ್ದನ್ನಕಂಡು ಸಂತಸಪಟ್ಟು ಅವರನ್ನ ಅಭಿನಂದಿಸಿದ್ರು,ನಂತರ ಅಲ್ಲೇಪ್ರತಿಭನಾಕಾರ ರೊಂದಿಗೆ ಕುಳಿತು ಘೋಷಣೆ ಕೂಗಿದ್ರು.1
- ಕೊಳೆತ ಸ್ಥಿತಿಯಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆ. ದೊಡ್ಡಬಳ್ಳಾಪುರದ ರೈಲ್ವೆ ನಿಲ್ದಾಣದ ಬಳಿ ಪತ್ತೆ ದೊಡ್ಡಬಳ್ಳಾಪುರ ಕೊಳೆತ ಸ್ಥಿತಿಯಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆ. ದೊಡ್ಡಬಳ್ಳಾಪುರದ ರೈಲ್ವೆ ನಿಲ್ದಾಣದ ಬಳಿ ಪತ್ತೆ ಆಂಜನೇಯ ದೇವಾಲಯದ ಪಕ್ಕದಲ್ಲೇ ಶಿಶುವನ್ನು ಮುಚ್ಚಲಾಗಿತ್ತು. ನಾಯಿಗಳು ಮಣ್ಣು ತೋಡಿದ ಕಾರಣ ಮೇಲಕ್ಕೆ ಬಂದ ನವಜಾತ ಶಿಶು ಮೃತದೇಹ ಸ್ಥಳಕ್ಕೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಕ್ಕಳ ಸಹಾಯವಾಣಿ ಅಧಿಕಾರಿಗಳು ಭೇಟಿ. ದೊಡ್ಡಬಳ್ಳಾಪುರ ನಗರ ಠಾಣಾ ಇನ್ಸ್ಪೆಕ್ಟರ್ ಮುತ್ತುರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಪಕ್ಕದಲ್ಲೇ ಪಿಜಿಯಿರುವ ಕಾರಣ ಸಿಸಿಟಿವಿ ಪರಿಶೀಲನೆ ಮಾಡುತ್ತಿರುವ ಇನ್ಸ್ ಪೆಕ್ಟರ್. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ರೈಲ್ವೆ ನಿಲ್ದಾಣದ ಬಳಿ ಘಟನೆ2