Shuru
Apke Nagar Ki App…
ಮನೆ ಬೀಗ ಮುರಿದು ಚಿನ್ನಾಭರಣ ದೋಚಿದ ಕಳ್ಳರು, ಪೊಲೀಸರಿಂದ ತನಿಖೆ ಜಾಲಹಳ್ಳಿ ಸಮೀಪದ ವಂದಲಿ ಗ್ರಾಮದಲ್ಲಿ ಕಳ್ಳರು ಮನೆಯೊಂದರ ಬೀಗ ಮುರಿದು 10 ಗ್ರಾಂ ಚಿನ್ನ, ₹50 ಮಸಾವಿರ ನಗದು ಕಳವು ಮಾಡಿದ್ದಾರೆ. ಅಲಾಮ್ ಖಾನ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಅಲಾಮ್ ಖಾನ್ ಅವರು ರಾಯಚೂರಿನ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಕರ ಆರೋಗ್ಯ ವಿಚಾರಿ ಸಿಕೊಂಡು ಬರಲು ಹೋಗಿದ್ದರು. ಯಾರೂ ಇಲ್ಲದ್ದನ್ನು ಗಮನಿಸಿ, ಕಳ್ಳರು ಮನೆ ಬೀಗ ಮುರಿದು ಕಳವು ಮಾಡಿದ್ದಾರೆ. ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪಿಎಸ್‌ಐ ವೈಶಾಲಿ ಝಳಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಸವರಾಜ ಭೋಗಾವತಿ
ಮನೆ ಬೀಗ ಮುರಿದು ಚಿನ್ನಾಭರಣ ದೋಚಿದ ಕಳ್ಳರು, ಪೊಲೀಸರಿಂದ ತನಿಖೆ ಜಾಲಹಳ್ಳಿ ಸಮೀಪದ ವಂದಲಿ ಗ್ರಾಮದಲ್ಲಿ ಕಳ್ಳರು ಮನೆಯೊಂದರ ಬೀಗ ಮುರಿದು 10 ಗ್ರಾಂ ಚಿನ್ನ, ₹50 ಮಸಾವಿರ ನಗದು ಕಳವು ಮಾಡಿದ್ದಾರೆ. ಅಲಾಮ್ ಖಾನ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಅಲಾಮ್ ಖಾನ್ ಅವರು ರಾಯಚೂರಿನ ಅಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಕರ ಆರೋಗ್ಯ ವಿಚಾರಿ ಸಿಕೊಂಡು ಬರಲು ಹೋಗಿದ್ದರು. ಯಾರೂ ಇಲ್ಲದ್ದನ್ನು ಗಮನಿಸಿ, ಕಳ್ಳರು ಮನೆ ಬೀಗ ಮುರಿದು ಕಳವು ಮಾಡಿದ್ದಾರೆ. ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪಿಎಸ್‌ಐ ವೈಶಾಲಿ ಝಳಕಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
More news from ಕರ್ನಾಟಕ and nearby areas
- ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ *ಕೂಡ್ಲಿಗಿ : ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನ ಆಚರಣೆ*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಮೇ 10 ರಂದು ತಾಯಿ ದಿನ ಪ್ರಯುಕ್ತ , ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ತಾಯಿ ದಿನಾಚರಣೆ ಆಚರಿಸಲಾಯಿತು. ಪಟ್ಟಣದಲ್ಲಿನ ಹಿರಿಯ ಸಾಹಿತಿಗಳು , ಹಿರಿಯ ಪತ್ರಕರ್ತರು , ನಿವೃತ್ತ ಉಪನ್ಯಾಸಕರಾದ ಸಿದ್ಧರಾಮ ಹಿರೇಮಠ ರವರು. ತಾಯಿಯನ್ನು ಸ್ಮರಿಸಿದರು ಹಾಗೂ ಅವರೊಂದಿಗಿನ ವಾತ್ಸಲ್ಯಯುತ ಅಮೂಲ್ಯ ಕ್ಷಣಗಳನ್ನು ನೆನೆದರು. ತಾಯಿಯವರ ಆದರ್ಶ ಗುಣಗಳನ್ನು ಕೊಂಡಾಡುತ್ತ , ಅವರಿಗೆ ಶ್ರದ್ಧಾಪೂರ್ವಕ ಭಾವುಕತೆಯಿಂದ ನುಡಿನಮನ ಸಲ್ಲಿಸಿ ವಂದಿಸಿದರು. ಅವರು ಮಾತನಾಡಿ , ತಾಯಿಗೆ ತಾಯಿನೇ ಸಾಟಿ ಅವರ ಹೊರತು ಯಾರೂ ಇಲ್ಲ ಬೇರೆನು ಸಮನಲ್ಲ ಎಂದರು. ಪ್ರತ್ಯಕ್ಷ ಆರಾಧ್ಯ ದೇವ ವೆಂದರೆ , ಹೆತ್ತ ತಾಯಿ ತಂದೆಯರು. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಪ್ರೀತಿಸಬೇಕು , ಅವರನ್ನು ಗೌರವಿಸುವುದರೊಂದಿಗೆ ನಮ್ಮ ಮಕ್ಕಳಂತೆ ಪೋಷಿಸಬೇಕು. ಅವರ ಮನದಾಳದ ಆಸೆ ಆಕಾಂಕ್ಷೆ ಒತ್ತಾಸೆಗಳನ್ನು , ಪ್ರೀತಿ ಪೂರ್ವಕವಾಗಿ ಈಡೇರಿಸಬೇಕಿದೆ ಎಂದರು. ತಂದೆ ತಾಯಿಯರನ್ನು ಪ್ರೀತಿಸದವರು ಮನುಷ್ಯರಾಗಿರಲು ಸಾಧ್ಯವೇ ಇಲ್ಲ. ತಂದೆ ತಾಯಿಯರನ್ನು ಸಂತೋಷ ನೆಮ್ಮದಿಯಿಂದ ನೋಡಿಕೊಳ್ಳದವರು , ಕೋಟಿ ತೀರ್ಥಗಳನ್ನು ದೇಗುಲಗಳನ್ನು ಸಂದರ್ಶಿಸಿದರೇನು ಫಲ.. ದಾನ ಧರ್ಮಾದಿ ಯಜ್ಞ ಯಾಗಾದಿಗಳನ್ನು ಮಾಡಿಸರೇನು ಫಲ ಎಂದು ಪ್ರೆಶ್ನಿಸಿದ್ದಾರೆ. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಹಾಗೂ ಅವರ ಸಹೋದರರಾದ ಎನ್ ಟಿ ತಮ್ಮಣ್ಣ ನವರು. ತಮ್ಮ ತಾಯಿಗೆ ಸಿಹಿ ತಿನಿಸಿ ಸಂಭ್ರಮಿಸಿದ್ದಾರೆ , ಹಾಗೂ ತಾಯಿಯ ಪಾದಕ್ಕೆ ಸಾಷ್ಟಾಂಗ ನಮಸ್ಕಾರಗಳನ್ನು ಅರ್ಪಿಸಿದ್ದಾರೆ. ಕಾರ್ಮಿಕ ಮುಖಂಡರಾದ ಗುನ್ನಳ್ಳಿ ರಾಘವೇಂದ್ರ ರವರು , ಮನೆಯಲ್ಲಿರುವ ತಮ್ಮ ಮಾತೆಯ ಭಾವಚಿತ್ರಕ್ಕೆ ಭಕ್ತಿಯಿಂದ ನಮಿಸಿ ಅವರಿಗೆ ನುಡಿನಮನ ಸಲ್ಲಿಸಿದರು. ಅಂತೆಯೇ ಪತ್ರಕರ್ತರು ಹಾಗೂ ವಂದೇ ಮಾತರಂ ಜಾಗೃತಿ ವೇದಿಕೆ ಮುಖಂಡರಾದ , ವಿ.ಜಿ.ವೃಷಭೇಂದ್ರರವರು ತಮ್ಮ ತಾಯಿಯ ಪಾದಕ್ಕೆರಗಿ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ , ಅವರಿಗೆ ಉಡುಗೊರೆಯನ್ನಿತ್ತು ಸಿಹಿ ತಿಸಿದರು. ಈ ಸಂದರ್ಭದಲ್ಲಿ ಸಹೋದರಿ ಅಕ್ಕಮಹಾದೇವಿ , ಹಾಗೂ ಸಹೋದರಿಯ ಪುತ್ರ ಇದ್ದರು. ಮತ್ತು ಅವರೂ ಕೂಡ ಸಿಹಿ ಹಂಚಿ ತಾಯಿ ದಿನಾಚರಣೆ ಆಚರಿಸಿದರು. ಅದೇ ರೀತಿ ಪಟ್ಟಣ ಸೇರಿದಂತೆ , ತಾಲೂಕಿನ ವಿವಿದೆಡೆಗಳಲ್ಲಿ. ಗಣ್ಯರು ವಿವಿದ ಮುಖಂಡರು. ಹೋರಾಟಗಾರರು , ಅನೇಕ ಸಾರ್ವಜನಿಕರು ತಾಯಿಗೆ ಸಿಹಿ ಹಂಚಿ ಉಡುಗೊರೆ ನೀಡಿದ್ದಾರೆ ಹಲವರು ತಾಯಿ ಪಾದಪೂಜೆ ಮಾಡಿ ತಾಯಿಗೆ ನಮಿಸಿದ್ದಾರೆ. ಬಹುತೇಕರು ದೇವರಲ್ಲಿ ವಿಶೇಷ ಅರ್ಚನೆ ಪೂಜೆಗಳನ್ನು ಮಾಡಿಸುವ ಮೂಲಕ ಪ್ರಾರ್ಥಿಸಿ ಶುಭ ಕೋರಿದ್ದಾರೆ. ಬಹು ಸಂಭ್ರಮದಿಂದ ಸಡಗರದಿಂದ , ತಾಯಿ ದಿನಾಚರಣೆ ಆಚರಿಸಿದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಆರು ವರ್ಷ ಬಿಜೆಪಿಯಲ್ಲಿ ಇದ್ದು ಮತ್ತೆ ಕಾಂಗ್ರೆಸ್ ಹೋಗ್ತೀರಿ ಯಾಕೆ.?1
- ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉದಯ್ ಕುಮಾರ್ ಎಲಿವಾಳ1
- ಗದಗದಲ್ಲಿ ಪೊಲೀಸರು ₹14 ಲಕ್ಷ ಮೌಲ್ಯದ ಅನ್ನಭಾಗ್ಯ ಅಕ್ಕಿ ಮತ್ತು ₹29 ಲಕ್ಷ ಮೌಲ್ಯದ ಲಾರಿಯನ್ನು ಜಪ್ತಿ ಮಾಡಿದ್ದಾರೆ. ಕರ್ನಾಟಕದ ಹರಪನಹಳ್ಳಿಯಿಂದ ಹೊರಟಿದ್ದ ಈ ಅಕ್ಕಿ ಅಕ್ರಮವಾಗಿ ಗುಜರಾತ್‌ಗೆ ಸಾಗಾಟವಾಗುತ್ತಿತ್ತು. ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ಬೆಟಗೇರಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- ನಾಗೇಶ್ ಎಸ್ ಅವರು ಶ್ರೀ ಬಂಜಾರ ಲಂಬಾಣಿ ಸಮುದಾಯ ದಿಗ್ವಿಜಯ ಭಾರತ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಂಬಾಣಿ ಸಮುದಾಯಗಳ ಹಿತಾಸಕ್ತಿ ಮತ್ತು ಅಭಿವೃದ್ಧಿಗಾಗಿ ಪಕ್ಷದ ಮೂಲಕ ಶ್ರಮಿಸಲು ಅವರು ಮುಂದಾಗಿದ್ದಾರೆ.2
- ತಮಿಳುನಾಡಿನಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿಜಯ್‌ಗೆ ರಾಹುಲ್ ಗಾಂಧಿ ತಮ್ಮ ಬೆಂಬಲ ನೀಡಿದ್ದಾರೆ. ಈ ರಾಜಕೀಯ ಬೆಳವಣಿಗೆ ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದು, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.1
- ಮಧ್ಯಪ್ರದೇಶದ ಶಿವಪುರಿಯಲ್ಲಿ ಸುಮಾರು 10 ದುಷ್ಕರ್ಮಿಗಳು ಮನೆಗೆ ನುಗ್ಗಿ, ಬಾಗಿಲು ಒಡೆದು ತಾಯಿ ಮತ್ತು ಮಗಳನ್ನು ಬಲವಂತವಾಗಿ ಅಪಹರಿಸಿದ್ದಾರೆ. ಮಹಿಳೆಗೆ ಕಿರುಕುಳ ನೀಡುತ್ತಿದ್ದ ಹಳೆಯ ಪರಿಚಿತನೇ ಈ ಕೃತ್ಯದ ಹಿಂದಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.1
- ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಾದ್ಯಂತ ಮೇ 10ರಂದು ತಾಯಿ ದಿನವನ್ನು ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಶಾಸಕರು, ಗಣ್ಯರು ಹಾಗೂ ಸಾರ್ವಜನಿಕರು ತಮ್ಮ ತಾಯಂದಿರನ್ನು ಸ್ಮರಿಸಿ, ಪಾದಪೂಜೆ, ಸಿಹಿ ವಿತರಣೆ ಮತ್ತು ಉಡುಗೊರೆಗಳ ಮೂಲಕ ಗೌರವ ಸಲ್ಲಿಸಿದರು. ತಂದೆ-ತಾಯಿಯರ ಪ್ರೀತಿ ಮತ್ತು ಗೌರವದ ಮಹತ್ವವನ್ನು ಈ ಸಂದರ್ಭದಲ್ಲಿ ಒತ್ತಿಹೇಳಲಾಯಿತು.4
- ವಿಜಯಪುರದಲ್ಲಿ ನಡೆದ ಶ್ರೀ ಕೃಷ್ಣ ಪಾರಿಜಾತ ಕಾರ್ಯಕ್ರಮದಲ್ಲಿ ರುಕ್ಮಿಣಿ ಸನ್ನಿವೇಶದ ಹಾಡು ಪ್ರೇಕ್ಷಕರ ಮನಸೂರೆಗೊಂಡಿತು. ಈ ಭಕ್ತಿಪೂರ್ವಕ ಪ್ರಸ್ತುತಿಯು ನೆರೆದಿದ್ದ ಭಕ್ತರನ್ನು ಭಕ್ತಿಯ ಸಾಗರದಲ್ಲಿ ತೇಲಿಸಿತು.1