logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಅನುಷ್ಠಾನಕ್ಕೆ ಬಾರದ ಆಚರಣೆಗಳು ವ್ಯರ್ಥ- ಪ.ಪೂ.ಶರಣಬಸವ ಶಾಸ್ತ್ರಿಗಳು ಮುಧೋಳ – ಸಮಾನತೆಯ ಪರಿಕಲ್ಪನೆ ಮೂಡಿಸಿದ ವಿಶ್ವಮಾನ್ಯ ಪುರುಷ. ಲಿಂಗವಂತ ಧರ್ಮ ಸಂಸ್ಥಾಪಕ. ಸಮಾಜವಾದಿ ಚಿಂತಕ. ಬಸವಣ್ಣನ ನಾಡಿನಲ್ಲಿ ಇಂದು ಜಾತಿಯತೆ ತಾಂಡವಾಡುತ್ತಿದೆ. ರಾಗ ದ್ವೇಷಗಳಿಂದ ತುಂಬಿದ ಇಂದಿನ ಸಮಾಜವು ಅಧಃಪತನದತ್ತ ಸಾಗುತ್ತಿದೆ ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದರು. ಅವರು ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಜರುಗಿದ ಭಕ್ತಿ ಭಂಡಾರಿ ಬಸವಣ್ಣವರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯವನ್ನು ವಹಿಸಿ ಮಾತನಾಡುತ್ತಾ. ಬಸವಣ್ಣವರ ತತ್ವಗಳು ಅನುಷ್ಠಾನಕ್ಕೆ ಬಾರದೆ ಕೇವಲ ಆಚರಣೆಗಳ ಆದರೆ ಅವುಗಳೆಲ್ಲವು ವ್ಯರ್ಥ ಎಂದ ಅವರು ಸರ್ವರನ್ನು ಸಮಾನತೆಯಿಂದ ಕಂಡು ಸರ್ವರನ್ನು ಪ್ರೀತಿಸುವ ಗುಣ ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ಸಮಾಜ ಸುಧಾರಣೆಯಾಗದು ಎಂದರು. ಬಸವ ತತ್ವದ ಅನುಯಾಯಿ ಮಲ್ಲು ಮುಚ್ಚಂಡಿ ಮಾತನಾಡಿ ನಾವುಗಳೆಲ್ಲ ಬದುಕಿರುವಷ್ಟು ದಿನ ಬಸವ ತತ್ವವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸುಂದರವಾಗುತ್ತದೆ ಎಂದರು. ಹಿರಿಯ ಜನಪದ ಕಲಾವಿದೆ ಶ್ರೀಮತಿ ಶಿವಲಿಂಗವ್ವ ಪೋಲಿಸ್ ಹಾಗೂ ಶ್ರೀಮತಿ ನಿಂಗವ್ವ ಕನ್ನೊಳ್ಳಿ ಸಂಗಡಿಗರಿಂದ ತತ್ವಪದಗಳ ಕಾರ್ಯಕ್ರಮ ನಡೆಯಿತು. ಶರಣಶ್ರೀ ಶ್ರೀಶೈಲ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ.ಭೌರಮ್ಮ ಹಿರೇಮಠ ಉಪ‌ಸ್ಥಿತರಿದ್ಧರು. ಸೇರಿದ ಬಸವ ಬಳಗದಿಂದ ಬಸವ ಭಾವಚಿತ್ರಕ್ಕೆ ಪುಷ್ಪಾರ್ಚನೆ ಜರುಗಿತು.‌ ನಾವಲಗಿಯ ಕೃಷ್ಣಾ ಭಜಂತ್ರಿ ಸಂಗಡಿಗರು ತಾಸೆವಾದನ ನುಡಿಸಿದರು. ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡ ಎಲ್ ಶ್ರೀನಿವಾಸ್ ಪ್ರಸಾದ್ ಸ್ವಾಗತಿಸಿದರು.‌ಎಲ್ ಲಕ್ಷ್ಮೀಪ್ರಸಾದ್ ವಂದಿಸಿದರು

1 hr ago
user_GV NEWS
GV NEWS
ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
1 hr ago
f016fb70-93d6-43cf-b48c-0588bb5f3014

ಅನುಷ್ಠಾನಕ್ಕೆ ಬಾರದ ಆಚರಣೆಗಳು ವ್ಯರ್ಥ- ಪ.ಪೂ.ಶರಣಬಸವ ಶಾಸ್ತ್ರಿಗಳು ಮುಧೋಳ – ಸಮಾನತೆಯ ಪರಿಕಲ್ಪನೆ ಮೂಡಿಸಿದ ವಿಶ್ವಮಾನ್ಯ ಪುರುಷ. ಲಿಂಗವಂತ ಧರ್ಮ ಸಂಸ್ಥಾಪಕ. ಸಮಾಜವಾದಿ ಚಿಂತಕ. ಬಸವಣ್ಣನ ನಾಡಿನಲ್ಲಿ ಇಂದು ಜಾತಿಯತೆ ತಾಂಡವಾಡುತ್ತಿದೆ. ರಾಗ ದ್ವೇಷಗಳಿಂದ ತುಂಬಿದ ಇಂದಿನ ಸಮಾಜವು ಅಧಃಪತನದತ್ತ ಸಾಗುತ್ತಿದೆ ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದರು. ಅವರು ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಜರುಗಿದ ಭಕ್ತಿ ಭಂಡಾರಿ ಬಸವಣ್ಣವರ ಜಯಂತ್ಯುತ್ಸವ ಸಮಾರಂಭದ ಸಾನ್ನಿಧ್ಯವನ್ನು ವಹಿಸಿ ಮಾತನಾಡುತ್ತಾ. ಬಸವಣ್ಣವರ ತತ್ವಗಳು ಅನುಷ್ಠಾನಕ್ಕೆ ಬಾರದೆ ಕೇವಲ ಆಚರಣೆಗಳ ಆದರೆ ಅವುಗಳೆಲ್ಲವು ವ್ಯರ್ಥ ಎಂದ ಅವರು ಸರ್ವರನ್ನು ಸಮಾನತೆಯಿಂದ ಕಂಡು ಸರ್ವರನ್ನು ಪ್ರೀತಿಸುವ ಗುಣ ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ಸಮಾಜ ಸುಧಾರಣೆಯಾಗದು ಎಂದರು. ಬಸವ ತತ್ವದ ಅನುಯಾಯಿ ಮಲ್ಲು ಮುಚ್ಚಂಡಿ ಮಾತನಾಡಿ ನಾವುಗಳೆಲ್ಲ ಬದುಕಿರುವಷ್ಟು ದಿನ ಬಸವ ತತ್ವವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಸುಂದರವಾಗುತ್ತದೆ ಎಂದರು. ಹಿರಿಯ ಜನಪದ ಕಲಾವಿದೆ ಶ್ರೀಮತಿ ಶಿವಲಿಂಗವ್ವ ಪೋಲಿಸ್ ಹಾಗೂ ಶ್ರೀಮತಿ ನಿಂಗವ್ವ ಕನ್ನೊಳ್ಳಿ ಸಂಗಡಿಗರಿಂದ ತತ್ವಪದಗಳ ಕಾರ್ಯಕ್ರಮ ನಡೆಯಿತು. ಶರಣಶ್ರೀ ಶ್ರೀಶೈಲ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ.ಭೌರಮ್ಮ ಹಿರೇಮಠ ಉಪ‌ಸ್ಥಿತರಿದ್ಧರು. ಸೇರಿದ ಬಸವ ಬಳಗದಿಂದ ಬಸವ ಭಾವಚಿತ್ರಕ್ಕೆ ಪುಷ್ಪಾರ್ಚನೆ ಜರುಗಿತು.‌ ನಾವಲಗಿಯ ಕೃಷ್ಣಾ ಭಜಂತ್ರಿ ಸಂಗಡಿಗರು ತಾಸೆವಾದನ ನುಡಿಸಿದರು. ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡ ಎಲ್ ಶ್ರೀನಿವಾಸ್ ಪ್ರಸಾದ್ ಸ್ವಾಗತಿಸಿದರು.‌ಎಲ್ ಲಕ್ಷ್ಮೀಪ್ರಸಾದ್ ವಂದಿಸಿದರು

More news from ಕರ್ನಾಟಕ and nearby areas
  • ಗುಳೇದಗುಡ್ಡ: ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಪಟ್ಟಣದ ಜನರಿಗೆ ಸೋಮವಾರ ಸಂಜೆ ಸುರಿದ ಆನೆಕಲ್ಲು ಮಳೆ ತಂಪೆರೆಯಿತು. ಚಿಕ್ಕ ಚಿಕ್ಕ ಮಕ್ಕಳು ಆನೆಕಲ್ಲು ಹಿಡಿದು ಸವಿದರು.
    1
    ಗುಳೇದಗುಡ್ಡ: ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಪಟ್ಟಣದ  ಜನರಿಗೆ ಸೋಮವಾರ ಸಂಜೆ  ಸುರಿದ ಆನೆಕಲ್ಲು ಮಳೆ ತಂಪೆರೆಯಿತು. ಚಿಕ್ಕ ಚಿಕ್ಕ ಮಕ್ಕಳು ಆನೆಕಲ್ಲು ಹಿಡಿದು ಸವಿದರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    21 hrs ago
  • ವಿಜಯಪುರ: ಸಿಎಂ ಗಾದಿಗೆ ಹೈಕಮಾಂಡ್‌ನಲ್ಲಿ ಟೆಂಡರ್‌ ನಡೆದಿದೆ: ಶಾಸಕ ಯತ್ನಾಳ್ ಸ್ಫೋಟಕ ಹೇಳಿಕೆ! ವಿಜಯಪುರದಲ್ಲಿ ಸೋಮವಾರ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ರಾಜ್ಯ ಸರ್ಕಾರದ ನಾಯಕತ್ವದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ 'ಟೆಂಡರ್‌ ಬಿಡ್‌' ನಡೆಯುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. "ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂಬ ಸಚಿವ ರಾಜಣ್ಣ ಅವರ ಮಾತು ನೂರಕ್ಕೆ ನೂರು ಸತ್ಯ" ಎಂದ ಅವರು, ಸಿಎಂ ಈಗ ಮೊದಲಿನಂತಿಲ್ಲ ಎಂದು ಟೀಕಿಸಿದರು. ಇದೇ ವೇಳೆ ರಾಜ್ಯ ಬಿಜೆಪಿ ನಾಯಕತ್ವ ವಿಫಲವಾಗಿದೆ ಎಂದು ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ ಯತ್ನಾಳ್‌, ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರು ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
    1
    ವಿಜಯಪುರ: ಸಿಎಂ ಗಾದಿಗೆ ಹೈಕಮಾಂಡ್‌ನಲ್ಲಿ ಟೆಂಡರ್‌ ನಡೆದಿದೆ: ಶಾಸಕ ಯತ್ನಾಳ್ ಸ್ಫೋಟಕ ಹೇಳಿಕೆ!
ವಿಜಯಪುರದಲ್ಲಿ ಸೋಮವಾರ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ರಾಜ್ಯ ಸರ್ಕಾರದ ನಾಯಕತ್ವದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ 'ಟೆಂಡರ್‌ ಬಿಡ್‌' ನಡೆಯುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. "ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ ಎಂಬ ಸಚಿವ ರಾಜಣ್ಣ ಅವರ ಮಾತು ನೂರಕ್ಕೆ ನೂರು ಸತ್ಯ" ಎಂದ ಅವರು, ಸಿಎಂ ಈಗ ಮೊದಲಿನಂತಿಲ್ಲ ಎಂದು ಟೀಕಿಸಿದರು. ಇದೇ ವೇಳೆ ರಾಜ್ಯ ಬಿಜೆಪಿ ನಾಯಕತ್ವ ವಿಫಲವಾಗಿದೆ ಎಂದು ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ ಯತ್ನಾಳ್‌, ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರು ಕಾಂಗ್ರೆಸ್‌ಗೆ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    21 hrs ago
  • ಆರೋಗ್ಯ ಸಚಿವರೇ ನಿಮ್ಮ ಹಾಸ್ಪಿಟಲ್ ಗತಿ ನೋಡಿ ಬಡವರ ಪರವಾಗಿ ಹಾಸ್ಪಿಟಲಲ್ಲಿ ಎಲ್ಲಾ ಮೆಡಿಸಿನ್ ಕಳಿಸ್ತೀನಿ ಅಂತ ಹೇಳುತ್ತಿದ್ದೀರಲ್ಲ ನೋಡಿ ಆ ನರ್ಸಿಬ್ಬಂದಿ ಹೇಳುತ್ತಾಳೆ ಏಳು ದಿವಸ ಟೈಮ್ ಇದೆ ಬಿಟ್ಟು ಬಂದು ಮಾಡಿಸಿಕೊಳ್ಳಿ ಅದರ ಮೆಡಿಸನ್ ಕಾಲಿಯಾಗಿವೆ. ಸರಿ ಏಳು ದಿನದಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಜವಾಬ್ದಾರು ಯಾರು ಸಿಬ್ಬಂದಿಯ ಹೊಣೆಗಾರು.
    1
    ಆರೋಗ್ಯ ಸಚಿವರೇ  ನಿಮ್ಮ ಹಾಸ್ಪಿಟಲ್ ಗತಿ ನೋಡಿ  ಬಡವರ ಪರವಾಗಿ ಹಾಸ್ಪಿಟಲಲ್ಲಿ ಎಲ್ಲಾ ಮೆಡಿಸಿನ್ ಕಳಿಸ್ತೀನಿ ಅಂತ ಹೇಳುತ್ತಿದ್ದೀರಲ್ಲ ನೋಡಿ ಆ   ನರ್ಸಿಬ್ಬಂದಿ ಹೇಳುತ್ತಾಳೆ ಏಳು ದಿವಸ ಟೈಮ್ ಇದೆ   ಬಿಟ್ಟು ಬಂದು ಮಾಡಿಸಿಕೊಳ್ಳಿ ಅದರ ಮೆಡಿಸನ್ ಕಾಲಿಯಾಗಿವೆ. ಸರಿ ಏಳು ದಿನದಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಜವಾಬ್ದಾರು ಯಾರು  ಸಿಬ್ಬಂದಿಯ ಹೊಣೆಗಾರು.
    user_Sharanugouda Patil
    Sharanugouda Patil
    Muddebihal, Vijayapura•
    5 hrs ago
  • ..... ಪೊಲೀಸ್‌ ಅಧಿಕಾರಿ ಮೇಲೆ ..... ಅಧಿಕಾರಿಗಳಿಂದ ಕಿರುಕುಳ ವಿಡಿಯೋ ಮಾಡಿ ನ್ಯಾಯಕ್ಕಾಗಿ ಅಂಗಲಾಚಿದ ಇನ್ಸ್‌ಪೆಕ್ಟರ್ ಶ್ರೀನಿವಾಸ್ . . . #suddipoint #enrisamasse #policeofficer
    1
    ..... ಪೊಲೀಸ್‌ ಅಧಿಕಾರಿ ಮೇಲೆ 
..... ಅಧಿಕಾರಿಗಳಿಂದ ಕಿರುಕುಳ
ವಿಡಿಯೋ ಮಾಡಿ ನ್ಯಾಯಕ್ಕಾಗಿ
ಅಂಗಲಾಚಿದ ಇನ್ಸ್‌ಪೆಕ್ಟರ್ ಶ್ರೀನಿವಾಸ್
.
.
.
#suddipoint #enrisamasse #policeofficer
    user_Suddi Point
    Suddi Point
    Newsstand ಬೆಳಗಾವಿ, ಬೆಳಗಾವಿ, ಕರ್ನಾಟಕ•
    19 hrs ago
  • Post by Uday Chougale
    1
    Post by Uday Chougale
    user_Uday Chougale
    Uday Chougale
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    19 hrs ago
  • ಇಳಕಲ್: ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಅಂಗವಾಗಿ ಕಂದಗಲ್ಲ ಗ್ರಾಮಸ್ಥರು ಎತ್ತುಗಳ ಮೆರವಣಿಗೆ ಮಾಡುವ ಮೂಲಕ ಬಸವ ಜಯಂತಿಯನ್ನು ಸೋಮವಾರದಂದು ಆಚರಿಸಿದರು. ಬಸವ ಜಯಂತಿ ಪ್ರಯುಕ್ತ ಎತ್ತುಗಳ ಮೈ ತೊಳೆದು, ಕೋಡುಗಳಿಗೆ ಕೊಂಡೆಗಳನ್ನು ಕಟ್ಟಿ, ಕೊರಳಿಗೆ ಗೆಜ್ಜೆಯನ್ನು ಕಟ್ಟಿ, ಹೆಗಲ ಮೇಲೆ ಶೃಂಗರಿಸಿರುವ ಶಾಲನ್ನು ಹಾಕಿ ಪೂಜೆಯನ್ನು ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ೫೦ ಕ್ಕೂ ಜೋಡಿ ಎತ್ತುಗಳ ಮೆರವಣಿಗೆಯೊಂದಿಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆಯನ್ನು ಮಾಡುತ್ತಾ ಕುಣಿದು ಕುಪ್ಪಳ್ಳಿಸುವ ಮೂಲಕ ಸಂಭ್ರಮಿಸಿದರು. ನಂತರ ಬಸವೇಶ್ವರ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಜಯಂತಿಯ ನೇತೃತ್ವವವನ್ನು ತಿಪ್ಪಣ್ಣ ಧರ್ಮಂತಿ, ಕಳಕಪ್ಪ ಕಡಿವಾಲ, ಶರಣಪ್ಪ ಧರ್ಮಂತಿ, ಅಮರಪ್ಪ ಗೆಜ್ಜಲಗಟ್ಟಿ, ಮದರಸಾಬ ಕಂಬಾರ,ಮAಜುನಾಥ ಗೊಂದಿ, ರಾಜಮಹಮ್ಮದ ನಧಾಫ್ ಸೇರಿದಂತೆ ಗ್ರಾಮಸ್ಥರು ಇದ್ದರು .
    1
    ಇಳಕಲ್: ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಅಂಗವಾಗಿ ಕಂದಗಲ್ಲ ಗ್ರಾಮಸ್ಥರು ಎತ್ತುಗಳ ಮೆರವಣಿಗೆ ಮಾಡುವ ಮೂಲಕ ಬಸವ ಜಯಂತಿಯನ್ನು ಸೋಮವಾರದಂದು ಆಚರಿಸಿದರು.
ಬಸವ ಜಯಂತಿ ಪ್ರಯುಕ್ತ ಎತ್ತುಗಳ ಮೈ ತೊಳೆದು, ಕೋಡುಗಳಿಗೆ ಕೊಂಡೆಗಳನ್ನು ಕಟ್ಟಿ, ಕೊರಳಿಗೆ ಗೆಜ್ಜೆಯನ್ನು ಕಟ್ಟಿ, ಹೆಗಲ ಮೇಲೆ ಶೃಂಗರಿಸಿರುವ ಶಾಲನ್ನು ಹಾಕಿ ಪೂಜೆಯನ್ನು ಸಲ್ಲಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ೫೦ ಕ್ಕೂ ಜೋಡಿ ಎತ್ತುಗಳ ಮೆರವಣಿಗೆಯೊಂದಿಗೆ ಬಸವೇಶ್ವರ ಭಾವಚಿತ್ರದ ಮೆರವಣಿಗೆಯನ್ನು ಮಾಡುತ್ತಾ ಕುಣಿದು ಕುಪ್ಪಳ್ಳಿಸುವ ಮೂಲಕ ಸಂಭ್ರಮಿಸಿದರು. ನಂತರ ಬಸವೇಶ್ವರ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಜಯಂತಿಯ ನೇತೃತ್ವವವನ್ನು ತಿಪ್ಪಣ್ಣ ಧರ್ಮಂತಿ, ಕಳಕಪ್ಪ ಕಡಿವಾಲ, ಶರಣಪ್ಪ ಧರ್ಮಂತಿ, ಅಮರಪ್ಪ ಗೆಜ್ಜಲಗಟ್ಟಿ, ಮದರಸಾಬ ಕಂಬಾರ,ಮAಜುನಾಥ ಗೊಂದಿ, ರಾಜಮಹಮ್ಮದ ನಧಾಫ್ ಸೇರಿದಂತೆ ಗ್ರಾಮಸ್ಥರು ಇದ್ದರು .
    user_Aaryan Ganiger
    Aaryan Ganiger
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    21 hrs ago
  • ಶೈಲಿಯಲ್ಲಿ): "ಕ್ಷಣ ಕ್ಷಣದ ನಿಖರ ಮಾಹಿತಿ ಮತ್ತು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ವಿಶೇಷ ವರದಿಗಳಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಶೇರ್ ಮಾಡಿ." ಆಯ್ಕೆ 3 (ಜನಹಿತ ವರದಿಗಾಗಿ): "ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗುವ ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ, ನಾಡಿನ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಲು ನಮ್ಮೊಂದಿಗೆ ಇರಿ."
    2
    ಶೈಲಿಯಲ್ಲಿ):
"ಕ್ಷಣ ಕ್ಷಣದ ನಿಖರ ಮಾಹಿತಿ ಮತ್ತು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ವಿಶೇಷ ವರದಿಗಳಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ಶೇರ್ ಮಾಡಿ."
ಆಯ್ಕೆ 3 (ಜನಹಿತ ವರದಿಗಾಗಿ):
"ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗುವ ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ, ನಾಡಿನ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಲು ನಮ್ಮೊಂದಿಗೆ ಇರಿ."
    user_Vv Vv
    Vv Vv
    ಬಾದಾಮಿ, ಬಾಗಲಕೋಟೆ, ಕರ್ನಾಟಕ•
    4 hrs ago
  • ಗುಳೇದಗುಡ್ಡ: ಸ್ಥಳೀಯ ಬಸವ ಕೇಂದ್ರದ ವತಿಯಿಂದ ಬಸವ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಸೋಮವಾರ ಪಟ್ಟಣದ ಶ್ರೀಮತಿ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 7ಗಂಟೆಗೆ ಮುರುಗೇಶ ಶೇಖಾ ಅವರು ಸಾಮೂಹಿಕ ಸಹಜ ಶಿವಯೋಗ ನಡೆಸಿಕೊಟ್ಟರು.
    2
    ಗುಳೇದಗುಡ್ಡ: ಸ್ಥಳೀಯ ಬಸವ ಕೇಂದ್ರದ ವತಿಯಿಂದ ಬಸವ ಸ್ಮರಣೋತ್ಸವ ಕಾರ್ಯಕ್ರಮದ  ಅಂಗವಾಗಿ ಸೋಮವಾರ ಪಟ್ಟಣದ ಶ್ರೀಮತಿ ಬಸಮ್ಮ ಮಂಗಳಗುಡ್ಡ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ  7ಗಂಟೆಗೆ ಮುರುಗೇಶ ಶೇಖಾ ಅವರು ಸಾಮೂಹಿಕ ಸಹಜ ಶಿವಯೋಗ ನಡೆಸಿಕೊಟ್ಟರು.
    user_ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಹುಚ್ಚೇಶ ಮಲ್ಲಪ್ಪ ಯಂಡಿಗೇರಿ
    ಗೂಳೇದಗುಡ್ಡ, ಬಾಗಲಕೋಟೆ, ಕರ್ನಾಟಕ•
    22 hrs ago
  • ಬೇಸಿಗೆ ಕಾಲದಲ್ಲಿ ಒಬ್ಬ ಮನುಷ್ಯನಿಗೆ ನೀರು ಎಷ್ಟು ಮುಖ್ಯವು ಪ್ರಾಣಿ ಪಕ್ಷಿಗಳಿಗೆ ಅಷ್ಠೆ ಮುಖ್ಯ ಇಂಥ ಕೆಲಸ ಬಾಲಕರು ಮಾಡುತಿರುವದು ಹೆಮ್ಮಯ ವಿಷಯ ಮಕ್ಕಳಗೆ ಒಳ್ಳೆ ಸಂಸ್ಕೃತಿ ಕಲಿಸಿ
    1
    ಬೇಸಿಗೆ  ಕಾಲದಲ್ಲಿ ಒಬ್ಬ ಮನುಷ್ಯನಿಗೆ ನೀರು ಎಷ್ಟು ಮುಖ್ಯವು ಪ್ರಾಣಿ ಪಕ್ಷಿಗಳಿಗೆ ಅಷ್ಠೆ ಮುಖ್ಯ ಇಂಥ ಕೆಲಸ ಬಾಲಕರು ಮಾಡುತಿರುವದು ಹೆಮ್ಮಯ ವಿಷಯ ಮಕ್ಕಳಗೆ ಒಳ್ಳೆ ಸಂಸ್ಕೃತಿ  ಕಲಿಸಿ
    user_Sharanugouda Patil
    Sharanugouda Patil
    Muddebihal, Vijayapura•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.