ಜೈ ಲಲಿತಾ ಸೀರಿಯಲ್ ವೀಕ್ಷಕರಿಗೆ ಎಷ್ಟೇ ಹೊಸ ಧಾರಾವಾಹಿಗಳು ಬಂದರೂ ನೋಡುತ್ತಾರೆ. ಹೊಸಹೊಸ ಕಥೆಗಳಿಗಾಗಿ ಕಾಯುತ್ತಾರೆ. ಸೀರಿಯಲ್ ಪ್ರಿಯರಿಗೆ ಖುಷಿ ಕೊಡುವ ಸುದ್ದಿ ಇಲ್ಲೊಂದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲಿ ಹೊಚ್ಚಹೊಸ ಧಾರಾವಾಹಿ ಆರಂಭವಾಗಲಿದೆ. ವಿಭಿನ್ನ ಕಥಾ ಹಂದರ ಇರುವ ಧಾರಾವಾಹಿ ಜೈ ಲಲಿತಾ ಇದೇ ಸೋಮವಾರದಿಂದ (ಡಿಸೆಂಬರ್ 8) ರಾತ್ರಿ 9.30ಕ್ಕೆ ಟೆಲಿಕಾಸ್ಟ್ ಆಗಲಿದೆ. ಜೈ ಲಲಿತಾ ಧಾರಾವಾಹಿ ಡಿ.8ರಿಂದ ಆರಂಭ ಕಥೆ ಏನು? ಭೈರವಪುರ ಎಂಬ ಸುಂದರ ಹಳ್ಳಿಯಲ್ಲಿ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಹುಡುಗಿ ಕಥಾ ನಾಯಕಿ ಲಲಿತಾ. ಬಿ.ಎ ಪಾಸ್ ಆಗ್ಬೇಕು ಅನ್ನೋದು ಇವಳ ದೊಡ್ಡ ಕನಸು. ಎಲ್ಲರೂ ಕೆಲಸ ಪಡೆಯಲು ಡಿಗ್ರಿ ಓದಬೇಕು ಎಂದುಕೊಂಡರೆ, ನಮ್ಮ ಕಥಾ ನಾಯಕಿ ಮದುವೆ ಆಗೋದಕ್ಕೋಸ್ಕರವೇ ಬಿಎ ಪಾಸ್ ಆಗ್ಲೇಬೇಕು ಎಂದುಕೊಂಡಿದ್ದಾಳೆ. ನಟ ರಾಕಿಂಗ್ ಸ್ಟಾರ್ ಯಶ್ ನ ಅಪ್ಪಟ ಅಭಿಮಾನಿಯಾಗಿರೋ ಲಲಿತಾಗೆ ಸಿನಿಮಾ ಅಂದ್ರೆ ಪಂಚ ಪ್ರಾಣ. ಥಿಯೇಟರ್ ಗೆ ಒಳ್ಳೇ ಸಿನಿಮಾ ಬಂದ್ರೆ ಸಾಕು ಹೋಗ್ದೇ ಇರೋ ಮಾತೇ ಇಲ್ಲ. ಡ್ರಾಮಾ ಕ್ವೀನು, ಶುದ್ಧ ತರ್ಲೆಯಾಗಿರೋ ಈಕೆ ಊರಿನವರ ಮನೆಮಗಳು, ಜೊತೆಗೆ ತಂದೆಯ ಮುದ್ದಿನ ಮಗಳು. ಇನ್ನು ಅದೇ ಊರಿನ ರಾಜಕಾರಣಿ ದೇವರಾಜ್ ಚಕ್ರವರ್ತಿಯ ಎರಡನೇ ಮಗ ಕಥಾ ನಾಯಕ ಜೈರಾಜ್. ದೇವರಾಜ್ ಗೆ ತಾನು ಹೇಳಿದ್ದೆ ಮಗ ಕೇಳ್ಬೇಕು ಅನ್ನೋ ಹಠ. ಆದರೆ ತದ್ವಿರುದ್ದ ಮನಸ್ಥಿತಿಯನ್ನು ಹೊಂದಿರುವ ಜೈರಾಜ್ ಮಾತ್ರ ತನಗನಿಸಿದನ್ನೇ ಮಾಡುತ್ತಾನೆ. ಅಚಾನಕ್ ಆಗಿ ಪಾಲಿಟಿಕ್ಸ್ ಗೆ ಎಂಟ್ರಿ ಕೊಟ್ಟ ಲಲಿತಾ, ಪಂಚಾಯತ್ ಚುನಾವಣೆಯಲ್ಲಿ ಊರವರ ಮತಗೆದ್ದು ಅಧ್ಯಕ್ಷೆಯಾಗ್ತಾಳೆ. ಮುಂದೆ ದೇವರಾಜ್ ಚಕ್ರವರ್ತಿ ರಚಿಸುವ ಮೋಸದ ಹುನ್ನಾರದಿಂದ ಲಲಿತಾಳನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡ್ಕೊಳ್ತಾನೆ. ಆದರೆ ಈ ಮದುವೆ ಜೈರಾಜ್ ಗೆ ಇಷ್ಟವಿಲ್ಲ ಎಂಬ ವಿಷಯ ತಿಳಿಯದೆ ಮದುವೆಯಾಗಿರೋ ಲಲಿತಾಳ ಮುಂದಿನ ನಡೆಯೇನಾಗಬಹುದು? ಮದುವೆಯೇ ಕನಸಾಗಿದ್ದವಳಿಗೆ ಮದುವೆಯ ಜೀವನ ಮುಳ್ಳಿನಂತಾಗುತ್ತಾ? ಊರನ್ನೇ ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆ ಎಂಬ ಸ್ಥಾನವನ್ನು ಪಡೆದುಕೊಳ್ತಾಳಾ? ಮುಂದೆ ಲಲಿತಾಳ ಮುಗ್ದತೆಗೆ ಕರಗಿ ಮನಸೋಲ್ತಾನ ಜೈರಾಜ್? ಎಂಬುದೇ ಧಾರಾವಾಹಿ ಕಥೆ.. ನಾಯಕ-ನಾಯಕಿ ಯಾರು? ನಿರ್ಮಾಪಕ ಶ್ರೀನಿಧಿ ಡಿ.ಎಸ್ ಅವರ 'ಶ್ರೀ ಭ್ರಾಮರೀ ಕ್ರಿಯೇಶನ್ಸ್' ಎಂಬ ನಿರ್ಮಾಣ ಸಂಸ್ಥೆಯಿಂದ ಹಾಗೂ ಐಶ್ವರ್ಯ ಎಸ್ ಪಿ ಪ್ರೊಡಕ್ಷನ್ಸ್ ವತಿಯಿಂದ 'ಜೈ ಲಲಿತಾ' ಧಾರಾವಾಹಿ ರೂಪುಗೊಳ್ಳುತ್ತಿದ್ದು ದರ್ಶಿತ್ ಮತ್ತು ಸುರೇಂದ್ರ ಶಿವಮೊಗ್ಗ ಅವರ ನಿರ್ದೇಶನದಲ್ಲಿ ಮೂಡಿ ಬರಲಿದೆ. ನಾಯಕ ಜೈರಾಜ್ ಪಾತ್ರದಲ್ಲಿ ನಟ ಶಿವಾಂಕ್ ಹಾಗು ನಾಯಕಿ ಲಲಿತಾ ಪಾತ್ರದಲ್ಲಿ ನಟಿ ಮನಸ್ವಿ ನಟಿಸುತ್ತಿದ್ದಾರೆ. ಜೊತೆಗೆ ಸುನಿಲ್ ಪುರಾಣಿಕ್, ಸ್ಪಂದನ, ರೋಹಿತ್, ನಿರಂಜನ್, ರಶ್ಮಿತಾ , ಲಿಟ್ಲ್ ಕ್ವೀನ್ ಐಶ್ವರ್ಯ ಎಸ್ ಪಿ ಹಾಗು ಶ್ವೇತಾ ರಾವ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಈ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾರೆ ✍️ವರದಿ: ಸುರೇಂದ್ರ ಶಿವಮೊಗ್ಗ.....
ಜೈ ಲಲಿತಾ ಸೀರಿಯಲ್ ವೀಕ್ಷಕರಿಗೆ ಎಷ್ಟೇ ಹೊಸ ಧಾರಾವಾಹಿಗಳು ಬಂದರೂ ನೋಡುತ್ತಾರೆ. ಹೊಸಹೊಸ ಕಥೆಗಳಿಗಾಗಿ ಕಾಯುತ್ತಾರೆ. ಸೀರಿಯಲ್ ಪ್ರಿಯರಿಗೆ ಖುಷಿ ಕೊಡುವ ಸುದ್ದಿ ಇಲ್ಲೊಂದಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲಿ ಹೊಚ್ಚಹೊಸ ಧಾರಾವಾಹಿ ಆರಂಭವಾಗಲಿದೆ. ವಿಭಿನ್ನ ಕಥಾ ಹಂದರ ಇರುವ ಧಾರಾವಾಹಿ ಜೈ ಲಲಿತಾ ಇದೇ ಸೋಮವಾರದಿಂದ (ಡಿಸೆಂಬರ್ 8) ರಾತ್ರಿ 9.30ಕ್ಕೆ ಟೆಲಿಕಾಸ್ಟ್ ಆಗಲಿದೆ. ಜೈ ಲಲಿತಾ ಧಾರಾವಾಹಿ ಡಿ.8ರಿಂದ ಆರಂಭ ಕಥೆ ಏನು? ಭೈರವಪುರ ಎಂಬ ಸುಂದರ ಹಳ್ಳಿಯಲ್ಲಿ ಸಂಪ್ರದಾಯಸ್ಥ ಮನೆತನದಲ್ಲಿ ಬೆಳೆದಿರೋ ಹುಡುಗಿ ಕಥಾ ನಾಯಕಿ ಲಲಿತಾ. ಬಿ.ಎ ಪಾಸ್ ಆಗ್ಬೇಕು ಅನ್ನೋದು ಇವಳ ದೊಡ್ಡ ಕನಸು. ಎಲ್ಲರೂ ಕೆಲಸ ಪಡೆಯಲು ಡಿಗ್ರಿ ಓದಬೇಕು ಎಂದುಕೊಂಡರೆ, ನಮ್ಮ ಕಥಾ ನಾಯಕಿ ಮದುವೆ ಆಗೋದಕ್ಕೋಸ್ಕರವೇ ಬಿಎ ಪಾಸ್ ಆಗ್ಲೇಬೇಕು ಎಂದುಕೊಂಡಿದ್ದಾಳೆ. ನಟ ರಾಕಿಂಗ್ ಸ್ಟಾರ್ ಯಶ್ ನ ಅಪ್ಪಟ ಅಭಿಮಾನಿಯಾಗಿರೋ ಲಲಿತಾಗೆ ಸಿನಿಮಾ ಅಂದ್ರೆ ಪಂಚ ಪ್ರಾಣ.
ಥಿಯೇಟರ್ ಗೆ ಒಳ್ಳೇ ಸಿನಿಮಾ ಬಂದ್ರೆ ಸಾಕು ಹೋಗ್ದೇ ಇರೋ ಮಾತೇ ಇಲ್ಲ. ಡ್ರಾಮಾ ಕ್ವೀನು, ಶುದ್ಧ ತರ್ಲೆಯಾಗಿರೋ ಈಕೆ ಊರಿನವರ ಮನೆಮಗಳು, ಜೊತೆಗೆ ತಂದೆಯ ಮುದ್ದಿನ ಮಗಳು. ಇನ್ನು ಅದೇ ಊರಿನ ರಾಜಕಾರಣಿ ದೇವರಾಜ್ ಚಕ್ರವರ್ತಿಯ ಎರಡನೇ ಮಗ ಕಥಾ ನಾಯಕ ಜೈರಾಜ್. ದೇವರಾಜ್ ಗೆ ತಾನು ಹೇಳಿದ್ದೆ ಮಗ ಕೇಳ್ಬೇಕು ಅನ್ನೋ ಹಠ. ಆದರೆ ತದ್ವಿರುದ್ದ ಮನಸ್ಥಿತಿಯನ್ನು ಹೊಂದಿರುವ ಜೈರಾಜ್ ಮಾತ್ರ ತನಗನಿಸಿದನ್ನೇ ಮಾಡುತ್ತಾನೆ. ಅಚಾನಕ್ ಆಗಿ ಪಾಲಿಟಿಕ್ಸ್ ಗೆ ಎಂಟ್ರಿ ಕೊಟ್ಟ ಲಲಿತಾ, ಪಂಚಾಯತ್ ಚುನಾವಣೆಯಲ್ಲಿ ಊರವರ ಮತಗೆದ್ದು ಅಧ್ಯಕ್ಷೆಯಾಗ್ತಾಳೆ. ಮುಂದೆ ದೇವರಾಜ್ ಚಕ್ರವರ್ತಿ ರಚಿಸುವ ಮೋಸದ ಹುನ್ನಾರದಿಂದ ಲಲಿತಾಳನ್ನು ತನ್ನ ಮನೆಯ ಸೊಸೆಯನ್ನಾಗಿ ಮಾಡ್ಕೊಳ್ತಾನೆ. ಆದರೆ ಈ ಮದುವೆ ಜೈರಾಜ್ ಗೆ ಇಷ್ಟವಿಲ್ಲ ಎಂಬ ವಿಷಯ ತಿಳಿಯದೆ ಮದುವೆಯಾಗಿರೋ ಲಲಿತಾಳ ಮುಂದಿನ ನಡೆಯೇನಾಗಬಹುದು? ಮದುವೆಯೇ ಕನಸಾಗಿದ್ದವಳಿಗೆ ಮದುವೆಯ ಜೀವನ ಮುಳ್ಳಿನಂತಾಗುತ್ತಾ? ಊರನ್ನೇ
ಗೆದ್ದವಳು ಅತ್ತೆಯ ಮನಸ್ಸನ್ನು ಗೆದ್ದು ಚಕ್ರವರ್ತಿ ಮನೆತನದ ಸೊಸೆ ಎಂಬ ಸ್ಥಾನವನ್ನು ಪಡೆದುಕೊಳ್ತಾಳಾ? ಮುಂದೆ ಲಲಿತಾಳ ಮುಗ್ದತೆಗೆ ಕರಗಿ ಮನಸೋಲ್ತಾನ ಜೈರಾಜ್? ಎಂಬುದೇ ಧಾರಾವಾಹಿ ಕಥೆ.. ನಾಯಕ-ನಾಯಕಿ ಯಾರು? ನಿರ್ಮಾಪಕ ಶ್ರೀನಿಧಿ ಡಿ.ಎಸ್ ಅವರ 'ಶ್ರೀ ಭ್ರಾಮರೀ ಕ್ರಿಯೇಶನ್ಸ್' ಎಂಬ ನಿರ್ಮಾಣ ಸಂಸ್ಥೆಯಿಂದ ಹಾಗೂ ಐಶ್ವರ್ಯ ಎಸ್ ಪಿ ಪ್ರೊಡಕ್ಷನ್ಸ್ ವತಿಯಿಂದ 'ಜೈ ಲಲಿತಾ' ಧಾರಾವಾಹಿ ರೂಪುಗೊಳ್ಳುತ್ತಿದ್ದು ದರ್ಶಿತ್ ಮತ್ತು ಸುರೇಂದ್ರ ಶಿವಮೊಗ್ಗ ಅವರ ನಿರ್ದೇಶನದಲ್ಲಿ ಮೂಡಿ ಬರಲಿದೆ. ನಾಯಕ ಜೈರಾಜ್ ಪಾತ್ರದಲ್ಲಿ ನಟ ಶಿವಾಂಕ್ ಹಾಗು ನಾಯಕಿ ಲಲಿತಾ ಪಾತ್ರದಲ್ಲಿ ನಟಿ ಮನಸ್ವಿ ನಟಿಸುತ್ತಿದ್ದಾರೆ. ಜೊತೆಗೆ ಸುನಿಲ್ ಪುರಾಣಿಕ್, ಸ್ಪಂದನ, ರೋಹಿತ್, ನಿರಂಜನ್, ರಶ್ಮಿತಾ , ಲಿಟ್ಲ್ ಕ್ವೀನ್ ಐಶ್ವರ್ಯ ಎಸ್ ಪಿ ಹಾಗು ಶ್ವೇತಾ ರಾವ್ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಈ ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾರೆ ✍️ವರದಿ: ಸುರೇಂದ್ರ ಶಿವಮೊಗ್ಗ.....
- ಸೋಷಿಯಲ್ ಮೀಡಿಯಾ ಅಪ್ ಡೇಟ್ ವಿಡಿಯೋ...1
- ಮಳವಳ್ಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಡಿಸೆಂಬರ್ 6 ರಂದು ಸುತ್ತೂರು ಜಯಂತಿ ಮಹೋತ್ಸವದ ಪ್ರಚಾರ ರಥ ಸಂಚಾರ1
- *ಭಾರತ ನಲ್ಲಿ ವೈರಲ್*1
- STOP CONSUMING DRUGS AND SAVE OUR YOUNG GENERATION ITS NECESSARY1
- Post by Shiva Prasad1
- ಪಾಕಿಸ್ತಾನದ ಪಾರ್ಲಿಮೆಂಟ್ ನಲ್ಲಿ ಕತ್ತೆಯ ಹಾಜರಾತಿ!1
- Every morning classes will starts with Greetings 👆in RT School Kindergarten1
- ಮನವಳ್ಳಿಯಲ್ಲಿ ಡಿಸೆಂಬರ್ 16 ರಿಂದ ಸುತ್ತೂರು ಜಯಂತಿ ಮಹೋತ್ಸವ: ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಸರ್ವ ಸಮುದಾಯದ ಮುಖಂಡರ ಸಭೆ1