ಮಲಹೊರುವ ವೃತ್ತಿಯಲ್ಲಿ ನೇಮಕ ನಿಷೇಧ ಹಾಗೂ ಅವರ ಪುನರ್ವಸತಿ ಕಾಯ್ದೆ 2013 ನ್ನು ಸಮಗ್ರ ಅನುಷ್ಠಾನಕ್ಕಾಗಿ ಕೊಪ್ಪಳದಲ್ಲಿ ಇಂದು ಆಗಮಿಸುತ್ತಿರುವ ಜಾಗೃತಿ ಜಾಥಾಕ್ಕೆ ಸ್ವಾಗತ. JUDI NEWS : ಕೊಪ್ಪಳ:ಆ.25. ಮಲಹೊರುವ ವೃತ್ತಿಯಲ್ಲಿ ನೇಮಕ ನಿಷೇಧ ಹಾಗೂ ಅವರ ಪುನರ್ವಸತಿ ಕಾಯ್ದೆ 2013 ನ್ನು ಸಮಗ್ರ ಅನುಷ್ಠಾನಕ್ಕಾಗಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಕರ್ನಾಟಕದ ನೇತೃತ್ವದಲ್ಲಿ ರಾಜ್ಯ ಮಟ್ಟದ ಜನ ಜಾಗೃತಿ ಅಭಿಯಾನ-2026ರ ಜಾಥವನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು. ಕೊಪ್ಪಳ ನಗರದ ಬಸವೇಶ್ವರ(ಗಂಜ್) ವೃತ್ತದಲ್ಲಿ ಜಾಗೃತಿ ಜಾಥಾಕ್ಕೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹಿರಿಯ ಹೋರಾಟಗಾರ ಬಸವರಾಜ್ ಶೀಲವಂತರ್ ಚಾಲನೆ ನೀಡಲಿದ್ದಾರೆ. ಸಫಾಯಿ ಕರ್ಮಚಾರಿ ಕಾವಲು ಸಮಿತಿಯ ರಾಜ್ಯ ಸಂಚಾಲಕ ಡಾ.ಕೆ.ಬಿ. ಓಬಳೇಶ್ ಇವರ ನೇತೃತ್ವದಲ್ಲಿ ಜನಜಾಗೃತಿ ಜಾಥಾದಲ್ಲಿ ಅನೇಕರು ಪಾದಯಾತ್ರೆ ಮಾಡಿ ರಾಷ್ಟ್ರೀಯ ಹೆದ್ದಾರಿ ಮೂಲಕ ಕೇಂದ್ರೀಯ ಬಸ್ ನಿಲ್ದಾಣದ ಎದುರಿನ ಕನಕದಾಸ ವೃತ್ತದಲ್ಲಿ ಸಮಾವೇಶ ಗೊಂಡು ಮುಖಂಡರ ಜಾಗೃತಿ ಭಾಷಣ ನಡೆಯಲಿದೆ.ಬಳಿಕ ತಮಟೆ ತಂಡದಿಂದ ಜನಜಾಗೃತಿ ಬೀದಿ ನಾಟಕ ಪ್ರದರ್ಶನ ನಡೆಯಲಿದೆ. ಸಫಾಯಿ ಕರ್ಮಚಾರಿ ಕರ್ನಾಟಕ ಸಂಘಟಕ ಸುಂಕಪ್ಪ ಮೀಸಿ ಮಾತನಾಡಿ ಮಲಹೊರುವ ವೃತ್ತಿಯಲ್ಲಿ ನೇಮಕ ನಿಷೇಧ ಹಾಗೂ ಆವರ ಪುನರ್ವಸತಿ ಕಾಯ್ದೆ 2013 ರ ಜಾರಿಗೆ ಬಂದಿದೆ. ಈ ಕಾಯ್ದೆಯನ್ನು ರಾಜ್ಯದಾದ್ಯಂತ ಸಮಗ್ರವಾಗಿ, ಕಟ್ಟುನಿಟ್ಟಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅತ್ಯಂತ ಅಗತ್ಯವಾಗಿದೆ. ಈ ಕಾಯ್ದೆಯು ಮಲಹೊರುವ ಪದ್ದತಿ ಅಥವ ಮಲ ವಿಲೇವಾರಿ ಮಾಡುವ ವೃತ್ತಿಯನ್ನು ನಿಷೇಧಿಸಿದೆ, ಅದೆ ರೀತಿ ಅನ್ಯರ್ಮಲ್ಯ ಶೌಚಾಲಯಗಳಾದ ಫಿಟ್ ಗುಂಡಿ, ಒಣ ಶೌಚಾಲಯಗಳು, ಸೆಪ್ಟಿಕ್ ಟ್ಯಾಂಕ್, ತೆರೆದ ಚರೆಂಡಿಗಳಿಗೆ ಮನೆಯ ಶೌಚಾಲಯದ ಪೈಪ್ ಸಂಪರ್ಕ ಕೊಡುವುದು, ಇಂತಹ ಶೌಚಾಲಯಗಳನ್ನು ನಿರ್ಮಿಸುವುದು-ನಿರ್ವಹಣೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ, ಸೆಪ್ಟಿಕ್ ಟ್ಯಾಂಕ್,ಮ್ಯಾನ್‌ಹೋಲ್ ಮತ್ತು ಮಲದ ಗುಂಡಿಗಳಿಗೆ ಕಾರ್ಮಿಕರನ್ನು ಸೂಕ್ತ ಸುರಕ್ಷತಾ ಸಲಕರಣೆಗಳು, ಅಗತ್ಯ ತರಬೇತಿ ಹಾಗೂ ವೈಜ್ಞಾನಿಕ ಸುರಕ್ಷತಾ ಮಾನದಂಡಗಳಿಲ್ಲದೆ ಇಳಿಸುವುದು ಕಾನೂನುಬಾಹೀರ ಮತ್ತು ಶಿಕ್ಷಾರ್ಹ ಅಪರಾದ ಕೃತ್ಯವಾಗಿದೆ.ಇಂತಹ ಕಾನೂನು ಬಾಹೀರ ಘಟನೆಗಳಿಂದ ರಾಜ್ಯದಲ್ಲಿ ಅನೇಕ ಬಡ, ಹಿಂದುಳಿದ ಮತ್ತು ವಂಚಿತ ಸಮುದಾಯಗಳಿಗೆ ಸೇರಿದ ಕಾರ್ಮಿಕರು ವಿಷಕಾರಿ ಅನಿಲ ಹಾಗೂ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಇಂತಹ ಸಾವುಗಳು ಇನ್ನು ಮುಂದೆ ಸಂಪೂರ್ಣವಾಗಿ ನಿಲ್ಲಬೇಕು. ಮಲಸ್ವಚ್ಛತಾ ಕೆಲಸವನ್ನು ಆಧುನಿಕ ಯಂತ್ರೋಪಕರಣಗಳ ಮೂಲಕವೇ ನಿರ್ವಹಿಸುವುದನ್ನು ಕಡ್ಡಾಯಗೊಳಿಸಿ, ಕಾರ್ಮಿಕರ ಜೀವ, ಆರೋಗ್ಯ ಮತ್ತು ಘನತೆಯನ್ನು ರಕ್ಷಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಸೂಕ್ತ ಯಂತ್ರೋಪಕರಣಗಳನ್ನು ತಕ್ಷಣವೇ ಅಳವಡಿಸಬೇಕು ಎಂಬ ಉದ್ದೇಶದೊಂದಿಗೆ ರಾಜ್ಯ ಮಟ್ಟದ ಜಾಗೃತಿ ಜಾಥವನ್ನು ದಿನಾಂಕ 24.08.2026 ರಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಮುಂಬಾಗದಲ್ಲಿ ಶ್ರೀ.ರಘು.ಪಿ, ಮಾನ್ಯ ಅದ್ಯಕ್ಷರು, ಕರ್ನಾಟಕ ರಾಜ್ಯ ಸಫಾಯಿಕರ್ಮಚಾರಿಗಳ ಅಯೋಗ, ಇವರು ಉದ್ಘಾಟಿಸಿದ್ದು.ಅಲ್ಲಿಂದ ಸುಮಾರು 17 ರಿಂದ18 ಜಿಲ್ಲೆಗಳಲ್ಲಿ ಜಾಗೃತಿ ಜಾಥ ಸಂಚಾರಿಸಲಿದೆ.ಸದರಿ ಜಾಗೃತ ಜಾಥದ ಅಂತಿಮ ದಿನ ಬೆಂಗಳೂರಿನಲ್ಲಿ ದಿನಾಂಕ: 03.09.2026 ರಂದು ರಾಜ್ಯ ಮಟ್ಟದ ಸಮಾರೋಪ ಸಮವೇಶವನ್ನು ಅಯೋಜಿಸಲಾಗಿದೆ. ದಿನಾಂಕ 26.08.2026 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೊಪ್ಪಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಾಗೃತಿ ಜಾಥ ಕಾರ್ಯಕ್ರಮದ ಮನವಿಯನ್ನು ಮಾನ್ಯ ಮುಖ್ಯ ಮಂತ್ರಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಸಮುದಾಯದ ಮುಖ್ಯ ಬೇಡಿಕೆಗಳನ್ನು ಸಲ್ಲಿಸಲಾಗುವುದು ಎಂದು ವಿವರಿಸಿದರು. ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್. ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್. ಕೊಳಚೆ ನಿರ್ಮೂಲನಾ ವೇದಿಕೆಯ ಸಂಚಾಲಕ ಮಖಬೂಲ್ ರಾಯಚೂರು ಮತ್ತಿತರರು ಉಪಸ್ಥಿತರಿದ್ದರು.

- ಮುಂಡರಗಿ ತಾಲೂಕಿನ ಸರ್ಕಾರಿ ತಾಲೂಕು ಆಸ್ಪತ್ರೆ ಕುರಿತು ಡಿ ಎಚ್ಚ ಒ ಅವರನ್ನು ಪ್ರಶ್ನೆ ಗದಗ್ ಜಿಲ್ಲಾ ಮುಂಡರಗಿ ತಾಲೂಕಿನ ತರಕಾರಿ ತಾಲೂಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಪ್ಯಾನ ವ್ಯವಸ್ಥೆ ಇಲ್ಲದೆ ಜಳದಿಂದ ರೋಗಿಗಳ ಪರದಾಟ ಬಟ್ಟೆಯಿಂದ ಗಾಳಿ ಪಡೆದುಕೊಳ್ಳುವ ರೋಗಿಗಳ ಕುರಿತು ಸಿಗರೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ1
- ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರಲ್ಲಿ ಸಂಭ್ರಮಾಚರಣೆ ಮನೆ ಮಾಡಿದೆ1
- ಬಳ್ಳಾರಿ ನಗರದಲ್ಲಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಬಳ್ಳಾರಿ ಹಲವು ಪ್ರಕರಣದಲ್ಲಿ ಭಾಗಿಯಾದ ಅಂತರ್ ಜಿಲ್ಲಾ ಕಳ್ಳನ ಬಂಧನ....! ಈ ಕುರಿತು ಬಳ್ಳಾರಿ ಎಸ್ಪಿ ಸುಮನ್ ಡಿ.ಪನ್ನೇಕರ್ ಅವರಿಂದ ಸುದ್ದಿಗೋಷ್ಠಿ ಕೌಲ್ಬಜಾರ್ ಕರಿಮಾರೆಮ್ಮ ದೇವಸ್ಥಾನದ ನಿವಾಸಿ ಹನುಮಂತಪ್ಪ ಎಂಬ (28) ಮನೆಗಳ್ಳನ ಬಂಧನ ಇವನು ಬಳ್ಳಾರಿ, ವಿಜಯನಗರ, ದಾವಣಗೇರಿ,ಕೊಪ್ಪಳ, ದೊಡ್ಡ ಬಳ್ಳಾಪುರ,ಬೆಂಗಳೂರು ಹಾಗೂ ಗದಗನಲ್ಲಿ ಕಳ್ಳತನ ರಾಡ್ ಬಳಸಿ ಮನೆಗಳ್ಳತ ಮಾಡುತ್ತಿದ್ದ ಆರೋಪಿ ಹನುಮಂತ.... ಕಳ್ಳತನ ಮಾಡಿದ ಮಾಲನ್ನು ವಿವಿಧ ಶಾಪ್ಗಳಿಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಆರೋಪಿಯನ್ನು ವಶಕ್ಕೆ ಪಡೆದು ಬಂಗಾರದ ಒಡವೆ ಹಾಗೂ ಹಣ ವಶಪಡಿಸಿಕೊಳ್ಳಲಾಗಿದೆ ಒಟ್ಟು ನಾಲ್ಕು ಕೇಸ್ಗಳಲ್ಲಿ ಆರೋಪಿಯಿಂದ 13,20,000 ಮೌಲ್ಯದ 110 ಗ್ರಾಂ ಬಂಗಾರ ಹಾಗೂ 10 ಲಕ್ಷ ನಗದು ವಶ ಆರೋಪಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನು ಪಡೆದು ಹೊರಗಿದ್ರು, ತನ್ನ ಹಳೆಯ ಚಾಳಿಯನ್ನು ಬಿಟ್ಟಿಲ್ಲ ಇವನ ವಿರುದ್ದ ರಾಜ್ಯದಾದ್ಯಂತ ಒಟ್ಟು 9 ಜಿಲ್ಲೆಗಳಲ್ಲಿ 40 ಪ್ರಕರಣಗಳು ಬೆಳಕಿಗೆ ಬಂದಿದೆ. -----------------1
- ಸರ್ವಸ್ವವನ್ನು ಮೆಟ್ಟಿ ನಿಲ್ಲುವಂತ ಶಕ್ತಿ ಮಹಿಳೆಗೆ ಇದೆ:- ಡಾ ಹೀರಾ ಕುಷ್ಟಗಿ:- ಹೆಣ್ಣನ್ನು ಹೆಣ್ಣಾಗಿ ನೋಡುವದಕ್ಕಿಂತ ಹೆಣ್ಣನ್ನು ಒಬ್ಬ ಸರಿ ಸಮಾನವಾದ ಮನುಷ್ಯರಂತೆ ನೋಡಬೇಕು ಹೆಣ್ಣಿಗೆ ಈ ಜಗತ್ತನ್ನು ಗೆಲ್ಲುವ ಶಕ್ತಿ ಒಬ್ಬ ಮಹಿಳೆಗೆ ಇದ್ದು ಹೆಣ್ಣು ಏನಾನ್ನಾದರು ಸಾಧಿಸಬಲ್ಲಳು ಅದಕ್ಕಾಗಿ ಬಿ.ಎ ಪದವಿಯಲ್ಲಿ ಓದುತ್ತಿರುವ ಮಹಿಳೆಯರು ಹೆಚ್ಚು ಅಂಕ ತೆಗೆಯುವ ಮೂಲಕ ಒಳ್ಳೆಯ ಅಭ್ಯಾಸವನ್ನು ಮಾಡಿ ತಂದೆ ತಾಯಿಗಳ ಕೀರ್ತಿ ಮತ್ತು ಕಾಲೇಜಿನ ಕೀರ್ತಿ ಗಳಿಸಬೇಕು ಎಂದು ಡಾ.ನಾಗರಾಜ ಹೀರಾ ಜಿಲ್ಲಾ ನೋಡಲ್ ಅಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ ಶಾಲಾ ಶಿಕ್ಷಣ ಇಲಾಖೆ ಕೊಪ್ಪಳ ಇವರು ಹೇಳಿದರು. ಇಲ್ಲಿನ ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ ಕುಷ್ಟಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಕಾರ್ಯಕ್ರಮ ಕುರಿತು ಮಾತನಾಡಿದ ಅವರು ಆನರ್ಸ್ ಎಂಬುವದು ಬಡವರು ಕಲಿಯುವ ವಿದ್ಯಯಲ್ಲ ಆನಸ್೯ ಎಂದರೆ ಬದುಕುವ ಕಲೆ ಈ ಒಂದು ಶಿಕ್ಷಣ ಇಡೀ ಜಗತ್ತಿನ ಪ್ರಕ್ರಿಯೆಯಲ್ಲಿ ಬಿ.ಎ ಪದವಿ ಆನರ್ಸ್ ಶಿಕ್ಷಣವಾಗಿದೆ. ಆದರೆ ಇವತ್ತಿನ ಶಿಕ್ಷಣ ತಂತ್ರಜ್ಞಾನದ ಮೂಲಕ ನಾವುಗಳು ಶಿಕ್ಷಣ ಪಡೆಯಬೇಕಾಗಿದೆ. ಅದಕ್ಕಾಗಿ ನಿತ್ಯ ನಿರಂತರ ಶಿಕ್ಷಣ ಪಡೆದಾಗ ಮಾತ್ರ ನಾವುಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಹೆಣ್ಣು ಮಕ್ಕಳು ಎಂದರೆ ಒಂದು ಮಾಹಿತಿ ಕೇಂದ್ರವಿದ್ದಂತೆ ಆದರೆ ಇತಿಹಾಸದ ಪುಟಗಳಲ್ಲಿ ನಾವುಗಳು ನೋಡಿದಾಗ ಎಲ್ಲಾ ಪುಟಗಳಲ್ಲಿ ಹೆಣ್ಣು ಮೊದಲನೆಯ ಸ್ಥಾನದಲ್ಲಿ ಇದ್ದಾಳೆ.ಈ ಜಗತ್ತು ಸೃಷ್ಟಿಯಾಗಿದ್ದು ಹೆಣ್ಣಿನಿಂದ ಹೆಣ್ಣಿನಿಂದ ಮಾಹಾ ಭಾರತ, ಹೆಣ್ಣಿನಿಂದ ರಾಮಾಯಣ ಅದಕ್ಕಾಗಿ ಪ್ರತಿಯೊಬ್ಬರು ಯಾರು ಕೂಡ ಹೆದರದೆ ಉತ್ತಮ ಶಿಕ್ಷಣವಂತರಾಗಿ ಬಡವರಾದರೆ ಸರಿ ಶ್ರೀಮಂತರಾದರೆ ಸರಿ ಯಾರು ಯಾವ ಪದವಿ ಆಯ್ಕೆ ಮಾಡಿಕೊಳ್ಳುತ್ತಾರೆ ಅವರ ಮೇಲೆ ಆಲಂಬನೆ ಆಗಿರುತ್ತದೆ. ಇವತ್ತಿನ ದಿನಮಾನದಲ್ಲಿ ಚಲವದಿದ್ದರೆ ಈ ಜಗತ್ತಿನಲ್ಲಿ ಏನಾದರೂ ಸಾಧಿಸಬಹುದು ಸಾಧನೆ ಸಾಲಿನಲ್ಲಿ ನಿಂತು ಈ ಕಾಲೇಜಿನ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣದ ಮೂಲಕ ಅಂಕವನ್ನು ಪಡೆದು ಕಾಲೇಜಿನ ಕೀರ್ತಿ ತರುವ ಮೂಲಕ ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ ಬಾಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸ.ಪ.ಪೂ.ಕಾಲೇಜು ದೋಟಿಹಾಳ ಉಪನ್ಯಾಸಕಿ ಶ್ರೀಮತಿ ಪ್ರಿಯದರ್ಶಿನಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಪ್ರಥಮ ದರ್ಜೆಯ ಗುತ್ತಿಗೆದಾರ ರಮೇಶ ಕಾಪ್ಸೆ ಕಾರ್ಯಕ್ರಮ ಉದ್ಘಾಟಿಸಿದರು. ಮಾತೋಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯ ಕಾಲೇಜು ಅಧ್ಯಕ್ಷರಾದ ಹನಮಂತಪ್ಪ ಚೌಡ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಸಿದ್ರಾಮಪ್ಪ ವಂದಾಲಿ, ಮಾಜಿ ಪಿ ಕಾಡ್೯ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ದೋಟಿಹಾಳ, ಸೂರ್ಯಕಾಂತ ದೇಸಾಯಿ, ಮಾ.ಹೊ.ಮ.ಪ.ಕಲಾ ಕಾಲೇಜು ಪ್ರಾಂಶುಪಾಲರಾದ ತಿಪ್ಪಣ್ಣ ಬಿಜಕಲ್, ದ್ಯಾಮಣ್ಣ ಕಟ್ಟಿಹೊಲ, ಸತ್ಯಪ್ಪ ರಾಜೂರು, ಎ.ವಾಯ್.ಲೋಕರೆ, ಕ.ಕಾ.ನಿ.ಪತ್ರಕರ್ತರ ಸಂಘದ ಅಧ್ಯಕ್ಷರಾದ ಪವಾಡೆಪ್ಪ ಚೌಡ್ಕಿ, ಮಂಜುನಾಥ ಮಾಹಾಲಿಂಗಪೂರ, ಮುಖೇಶ ನಿಲೋಗಲ್, ಶಶಿಧರ ಕುಂಬಾರ, ಸಂಗಮೇಶ ಬಿಳಿಯಪ್ಪನವರ್, ಸುಂದರಕುಮಾರ ಚೌಡ್ಕಿ ಸೇರಿದಂತೆ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಹಲವರು ಉಪಸ್ಥಿತರಿದ್ದರು.2
- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮನವಿ ಕೂಡ್ಲಿಗಿ: ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಂಗಳವಾರ ತಹಶೀಲ್ದಾರ್ ವಿ.ಕೆ. ನೇತ್ರಾವತಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ತಾಲೂಕು ಸಮಿತಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಹಲವು ವರ್ಷಗಳಿಂದ ಮಕ್ಕಳ ಪೌಷ್ಟಿಕತೆ, ಆರೋಗ್ಯ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣ ಸೇರಿದಂತೆ ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಆದರೆ ಅವರ ಶ್ರಮಕ್ಕೆ ತಕ್ಕಂತೆ ಗೌರವಧನ ದೊರೆಯುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಆದ್ದರಿಂದ ಸರ್ಕಾರ ಕೂಡಲೇ ಗೌರವಧನ ಹೆಚ್ಚಿಸುವ 6ನೇ ಗ್ಯಾರಂಟಿ ಜಾರಿಗೆ ತಂದು, ₹15 ಸಾವಿರ ಹಾಗೂ ಸಹಾಯಕಿಯರಿಗೆ ₹10 ಸಾವಿರ ಗೌರವಧನ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಜೀವನೋಪಾಯಕ್ಕೆ ಸೂಕ್ತ ಭದ್ರತೆ ಒದಗಿಸಬೇಕು. ಬಿ.ಎಲ್.ಓ. ಜವಾಬ್ದಾರಿ ಹೊರಿಸುವುದನ್ನು ಕೂಡಲೇ ನಿಲ್ಲಿಸಬೇಕು. ಅಂಗನವಾಡಿ ಉದ್ಯೋಗಿಗಳಿಗೆ ನಿವೃತ್ತಿ ನಂತರದ ಜೀವನಕ್ಕೆ ಅನುಕೂಲವಾಗುವಂತೆ ಗ್ರಾಚ್ಯುಟಿ ಸೌಲಭ್ಯ ಕಲ್ಪಿಸಬೇಕು. ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿ, ಶೀಘ್ರವೇ ನ್ಯಾಯಯುತವಾಗಿ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು. ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷೆ ಕೆ ಪದ್ಮಾವತಿ, ತಾಲೂಕ್ ಅಧ್ಯಕ್ಷರು ಎನ್ ಸುಮಾ, ಉಪಾಧ್ಯಕ್ಷರಾದ ಕೆಎನ್ ಕವಿತಾ, ಪಾರ್ವತಮ್ಮ, ಪ್ರಧನ ಕಾರ್ಯದರ್ಶಿ ಎಚ್ ಅನ್ನಪೂರ್ಣ, ಸಹ ಕಾರ್ಯದರ್ಶಿ ಬಿ ಪದ್ಮಾವತಿ, ಓ ಕರಿಬಸಮ್ಮ, ಖಜಾಂಚಿ ಜಯಮಾಲ ಜೆ, ಸಂಘಟನಾ ಕಾರ್ಯದರ್ಶಿ ಮೀನಾಕ್ಷಿ, ಸದಸ್ಯರಾದ ಬಿ ಶಿವಲೀಲಾ, ಜಿ ಗಾಯತ್ರಿ, ರೇಣುಕಮ್ಮ, ಎಚ್ಎಸ್ ಚಂದ್ರಮ್ಮ, ಎಬಿ ಬಸಮ್ಮ, ಓ ಸುಜಾತ, ಸುಮಲತಾ, ಬಿ ರೇಖಾ, ದ್ಯಾಮಕ್ಕ, ಸಿ.ಬಿ ಅನುಸೂಯ ಸೇರಿದಂತೆ ತಾಲೂಕಿನ ಅಂಗನವಾಡಿ ಕಾರ್ಯಕರ್ತರು, ಸಹಾಯಕರು ಉಪಸಿದ್ಧರಿದ್ದರು.1
- ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ *ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಆ 25ರಂದು ಪಟ್ಟಣದಲ್ಲಿ , (AITUC) ಕರ್ನಾಟಕ ರಾಜ್ಯವ ಅಂಗನವಾಡಿ ಕಾರ್ತಕರ್ತೆಯರು , ಮತ್ತು ಸಹಾಯಕಿಯರ ಪೆಡರೇಷನ್ ಕಾರ್ಯಕರ್ತೆಯರು. ತಮ್ಮ ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ , ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ , AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು. ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ , ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು. ಮುಖಂಡ ಹೆಚ್. ವೀರಣ್ಣ ನೇತೃತ್ವದಲ್ಲಿ , ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ನೀಡಿದರು. ಹೆಚ್.ವೀರಣ್ಣ ಹಾಗೂ ತಾಲೂಕಾಧ್ಯಕ್ಷರಾದ , ಎನ್ ಸುಮಾ ಮಾತನಾಡಿದರು. ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ , ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರಿಗೆ ಹಾಗೂ ಸಿಡಿಪಿಒ ಮಾಲುಂಬೀರವರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು. ತಾಲೂಕು ಪದಾಧಿಕಾರಿಗಳಾದ ಕೆ. ಪದ್ಮಾವತಿ , ಕೆ.ಹೆಚ್.ಕವಿತಾ , ಬಿ.ಪಾರ್ವತಮ್ಮ , ಹೆಚ್.ಅನ್ನಪೂರ್ಣ , ಜಿ.ಪದ್ಮಾವತಿ , ಓ. ಕರಿವಸಮ್ಮ , ಜೆ.ಜಯಮಾಲ , ಮೀನಾಕ್ಷಿ , ಶಿವಲೀಲಾ , ಗಾಯತ್ರಿ , ರೇಣುಕಮ್ಮ , ಚಂದ್ರಮ್ಮ , ಬಸಮ್ಮ , ಸುಜಾತ , ಸುಮಲತಾ , ರೇಣುಕಾ , ದ್ಯಾಮಕ್ಕ , ಅನಸೂಯ ಸೇರಿದಂತೆ. ಪಟ್ಟಣ ಸೇರಿದಂತೆ , ತಾಲೂಕಿನ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- ಇಳಕಲ್ ನಗರದಲ್ಲಿ ಈದ್ ಮಿಲಾದ್ ಹಬ್ಬದ ಅಂಗವಾಗಿ ಪೊಲೀಸರಿಂದ ಪಥಸಂಚಲನ ಇಳಕಲ್ಲ : ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯ ವತಿಯಿಂದ ಮಂಗಳವಾರ ಸಂಜೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು. ನಗರ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ ಪಾಟೀಲ ಹಾಗೂ ಕ್ರೈಂ ಪಿಎಸ್‌ಐ ಸಿ. ಬಿ. ಕಿರಶ್ಯಾಳ ಅವರ ನೇತೃತ್ವದಲ್ಲಿ ಪಥಸಂಚಲನ ಜರುಗಿತು. ಪೊಲೀಸ್ ಠಾಣೆಯಿಂದ ಆರಂಭಗೊAಡ ಪಥಸಂಚಲನವು ಕಂಠಿ ವೃತ್ತ, ದ್ವಾರಕಾ ಲಾಡ್ಜ್, ಗ್ರಾಮ ಚಾವಡಿ, ಗಾಂಧಿ ಚೌಕ್, ಬಜಾರ್ ಬಸವಣ್ಣನ ಗುಡಿ, ಕೊಪ್ಪರದಪೇಟೆ ಹಾಗೂ ಪಶು ಆಸ್ಪತ್ರೆ ಮಾರ್ಗವಾಗಿ ಸಂಚರಿಸಿ ಪೊಲೀಸ್ ಬಯಲಿನಲ್ಲಿ ಮುಕ್ತಾಯಗೊಂಡಿತು. ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಸಾರ್ವಜನಿಕರಲ್ಲಿ ಸುರಕ್ಷತಾ ಭಾವ ಮೂಡಿಸಲು ಈ ಪಥಸಂಚಲನ ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.2
- ಮೋಡ ಬಿತ್ತನೆ ಬಿಡಿ, ರೈತರ ಖಾತೆಗೆ ನೇರ ₹50 ಸಾವಿರ ಹಾಕಿ!' – ಸರ್ಕಾರಕ್ಕೆ ಮುಂಡರಗಿಯಲ್ಲಿ ಆಗ್ರಹ ಮೋಡ ಬಿತ್ತನೆ ಬಿಡಿ, ರೈತರ ಖಾತೆಗೆ ನೇರ ₹50 ಸಾವಿರ ಹಾಕಿ!' – ಸರ್ಕಾರಕ್ಕೆ ಮುಂಡರಗಿಯಲ್ಲಿ ಆಗ್ರಹ ಮುಂಡರಗಿ: "ಕೃತಕ ಮಳೆಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ಹಣ ಪೋಲು ಮಾಡುವುದನ್ನು ತಕ್ಷಣವೇ ನಿಲ್ಲಿಸಿ, ಬರಗಾಲದಿಂದ ಕಂಗೆಟ್ಟಿರುವ ಪ್ರತಿ ರೈತನ ಬ್ಯಾಂಕ್ ಖಾತೆಗೆ ನೇರವಾಗಿ 50 ಸಾವಿರ ರೂಪಾಯಿ ಪರಿಹಾರ ಧನ ಜಮೆ ಮಾಡಿ!" ಹೀಗಂತ ಸರ್ಕಾರಕ್ಕೆ ಖಡಕ್ ಆಗ್ರಹ ಮುಹೂರ್ತ ಇಟ್ಟಿದ್ದು ಮುಂಡರಗಿಯ ಬಿಜೆಪಿ ಯುವ ಮುಖಂಡ ದೇವಪ್ಪ ಇಟಗಿ. ಇಲ್ಲಿಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಯ ಪ್ರಮುಖ ಅಂಶಗಳು: 'ಮೂಗಿಗೆ ತುಪ್ಪ ಸವರುವ ಕೆಲಸ': ಮೋಡ ಬಿತ್ತನೆ ಯೋಜನೆ ಸಂಪೂರ್ಣ ನಿಷ್ಪ್ರಯೋಜಕ. ಕೋಟಿ ಕೋಟಿ ಹಣ ಸುರಿಯುವ ಈ ಪ್ರಕ್ರಿಯೆ ಕೇವಲ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುವ 'ಮೂಗಿಗೆ ತುಪ್ಪ ಸವರುವ ಕೆಲಸ'. ಇದರಿಂದ ಸಂಕಷ್ಟದಲ್ಲಿರುವ ರೈತರ ಹೊಟ್ಟೆ ತುಂಬುವುದಿಲ್ಲ. ಸಾಲದ ಸುಳಿಯಲ್ಲಿ ರೈತ: ಸರಿಯಾಗಿ ಮಳೆಯಾಗದೆ ಬೆಳೆ ಸಂಪೂರ್ಣ ನಾಶವಾಗಿದೆ. ರೈತರು ಸಾಲ-ಸೋಲ ಮಾಡಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಒಂದೆಡೆ ಭೀಕರ ಅಭಾವ, ಇನ್ನೊಂದೆಡೆ ಸಾಲಗಾರರ ಕಾಟದಿಂದ ರೈತರು ಬದುಕು ಕಳೆದುಕೊಳ್ಳುವಂತಾಗಿದೆ. ನೇರ ಹಣ ರವಾನೆಗೆ ಒತ್ತಾಯ: ತಾಂತ್ರಿಕವಾಗಿ ಯಶಸ್ಸಿನ ಖಾತರಿ ಇಲ್ಲದ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ವ್ಯರ್ಥ ಮಾಡುವ ಬದಲು, ಆ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಿ ಅವರ ರಕ್ಷಣೆಗೆ ಸರ್ಕಾರ ಧಾವಿಸಬೇಕು.1