Shuru
Apke Nagar Ki App…
ಬಳ್ಳಾರಿಯ ಸಬ್ ರಿಜಿಸ್ಟ್ರಾರ್ ಕಚೇರಿ ಸಂಪೂರ್ಣವಾಗಿ ಖಾಸಗಿ ವ್ಯಕ್ತಿಗಳ ನಿಯಂತ್ರಣದಲ್ಲಿದ್ದು, ದಲ್ಲಾಳಿಗಳ ದರ್ಬಾರಿಗೆ ಅಧಿಕಾರಿಗಳೇ ಸಾಥ್ ನೀಡುತ್ತಿರುವ ಆಘಾತಕಾರಿ ಸತ್ಯ ವಿಜಯ ಟೈಮ್ಸ್ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಸರ್ಕಾರಿ ಕಚೇರಿಯನ್ನು ಅಕ್ರಮಗಳ ಅಡ್ಡೆಯನ್ನಾಗಿ ಮಾಡಿಕೊಂಡಿರುವ ದಲ್ಲಾಳಿಗಳ ಅಕ್ರಮಕ್ಕೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದು, ಇಲ್ಲಿ ಅಧಿಕಾರಿಗಳು ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ವರ್ತಿಸುತ್ತಿದ್ದಾರೆ. ದಲ್ಲಾಳಿಗಳೇ ಸಂಪೂರ್ಣ ಅಧಿಕಾರವನ್ನು ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕರಾಳ ಮಾಫಿಯಾ ಸರ್ಕಾರಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮಟ್ಟಿಗೆ ಬೆಳೆದುನಿಂತಿದೆ.
ಬಸವರಾಜ ವೀ ಎಚ್
ಬಳ್ಳಾರಿಯ ಸಬ್ ರಿಜಿಸ್ಟ್ರಾರ್ ಕಚೇರಿ ಸಂಪೂರ್ಣವಾಗಿ ಖಾಸಗಿ ವ್ಯಕ್ತಿಗಳ ನಿಯಂತ್ರಣದಲ್ಲಿದ್ದು, ದಲ್ಲಾಳಿಗಳ ದರ್ಬಾರಿಗೆ ಅಧಿಕಾರಿಗಳೇ ಸಾಥ್ ನೀಡುತ್ತಿರುವ ಆಘಾತಕಾರಿ ಸತ್ಯ ವಿಜಯ ಟೈಮ್ಸ್ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಸರ್ಕಾರಿ ಕಚೇರಿಯನ್ನು ಅಕ್ರಮಗಳ ಅಡ್ಡೆಯನ್ನಾಗಿ ಮಾಡಿಕೊಂಡಿರುವ ದಲ್ಲಾಳಿಗಳ ಅಕ್ರಮಕ್ಕೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದು, ಇಲ್ಲಿ ಅಧಿಕಾರಿಗಳು ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ವರ್ತಿಸುತ್ತಿದ್ದಾರೆ. ದಲ್ಲಾಳಿಗಳೇ ಸಂಪೂರ್ಣ ಅಧಿಕಾರವನ್ನು ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕರಾಳ ಮಾಫಿಯಾ ಸರ್ಕಾರಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮಟ್ಟಿಗೆ ಬೆಳೆದುನಿಂತಿದೆ.
More news from ಕರ್ನಾಟಕ and nearby areas
- ವೆನೆಜುವೆಲಾ ದೇಶದಲ್ಲಿ ಭೂಕಂಪ ಸಂಭವಿಸಿದ ಸಮಯದಲ್ಲಿ ಚಿತ್ರೀಕರಿಸಲಾದ ಒಂದು ವಿಡಿಯೋ ಪ್ರಸ್ತುತ ವೈರಲ್ ಆಗಿದೆ. ಈ ವಿಡಿಯೋದಲ್ಲಿನ ದೃಶ್ಯಗಳು ಎಷ್ಟೊಂದು ಭಯಾನಕವಾಗಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ.1
- ಧಾರವಾಡ ಲೋಕಾಯುಕ್ತ ಡಿವೈಎಸ್ಪಿ ನೇತೃತ್ವದ ಅಧಿಕಾರಿಗಳ ತಂಡವು ನವಲಗುಂದ ಪಟ್ಟಣದ ಪುರಸಭೆ ಕಚೇರಿಯ ಮೇಲೆ ದಾಳಿ ನಡೆಸಿ ವಿವಿಧ ಕಡತಗಳ ಪರಿಶೀಲನೆ ನಡೆಸಿದೆ. 4-5 ವಿವಿಧ ನೋಂದಣಿಗಳುಳ್ಳ ವಾಹನಗಳಲ್ಲಿ ಬಂದ ಲೋಕಾಯುಕ್ತ ಅಧಿಕಾರಿಗಳನ್ನು ಕಂಡ ಪುರಸಭೆಗೆ ಆಗಮಿಸಿದ ಸಾರ್ವಜನಿಕರು ಗಾಬರಿಗೊಂಡಿದ್ದು ಕಂಡುಬಂದಿದೆ. ಇದೇ ವೇಳೆ, ಲೋಕಾಯುಕ್ತ ಅಧಿಕಾರಿಗಳು ಪುರಸಭೆಗೆ ಬಂದ ಸಾರ್ವಜನಿಕರಿಂದಲೂ ಮಾಹಿತಿ ಕಲೆ ಹಾಕಿದ್ದಾರೆ. ಯಾವ ಕೆಲಸದ ಮೇಲೆ ಬಂದಿದ್ದೀರಿ ಮತ್ತು ಎಷ್ಟು ದಿನಗಳಿಂದ ಕೆಲಸದ ನಿಮಿತ್ಯ ಅಲೆದಾಡುತ್ತಿದ್ದೀರಿ ಎಂಬ ಬಗ್ಗೆ ವಿವರಗಳನ್ನು ಪಡೆದಿದ್ದಾರೆ.1
- Post by Onlinetv24x71
- ಬೆಳಗಾವಿ ಜಿಲ್ಲೆಯಲ್ಲಿ ಅತಿರೇಕದ ಸಾಲ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಎಚ್ಚರಿಕೆ ನೀಡಿದ್ದಾರೆ.1
- ಕೇರಳದ ಕೊಟ್ಟಿಯೂರು ದೇವಾಲಯದಲ್ಲಿ ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ನೊಂದ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿ ಯಾರೂ ಈ ದೇವಾಲಯಕ್ಕೆ ಭೇಟಿ ನೀಡಬೇಡಿ ಎಂದು ಕರೆ ನೀಡಿದ್ದಾರೆ. ಈ ವಿವಾದದ ಬೆನ್ನಲ್ಲೇ, ಕಣ್ಣೂರು ವಲಯದ ಡಿಐಜಿ ಯತೀಶ್ ಚಂದ್ರ ಅವರು ಕನ್ನಡದಲ್ಲಿಯೇ ಸಂದೇಶ ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ದಾವಣಗೆರೆ ಮೂಲದ ಅಧಿಕಾರಿಯಾಗಿರುವ ಯತೀಶ್ ಚಂದ್ರ, ವೀಡಿಯೋದಲ್ಲಿ ಕೊಟ್ಟಿಯೂರು ದೇವಸ್ಥಾನದವರು ಮತ್ತು ಪಂಚಾಯತ್ ವೈಶಾಖ ಮಹೋತ್ಸವಕ್ಕೆ ಉತ್ತಮ ಸಿದ್ಧತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮೂಲಸೌಕರ್ಯ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ. ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ ದೇವಾಲಯದ ಆವರಣದಲ್ಲಿ ಕನ್ನಡ ನಾಮಫಲಕಗಳು ಮತ್ತು ಕನ್ನಡದಲ್ಲೇ ಧ್ವನಿವರ್ಧಕದ ಮೂಲಕ ಪ್ರಕಟಣೆ ಹೊರಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಪವಿತ್ರವಾದ ಈ ಕಾಡಿನ ಸನ್ನಿಧಿಗೆ ಬರುವಾಗ ಪರಿಸರವನ್ನು ಸ್ವಚ್ಛವಾಗಿಡುವಂತೆ ಮತ್ತು ಪ್ಲಾಸ್ಟಿಕ್ ಹಾಗೂ ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸಹಕರಿಸುವಂತೆ ಕನ್ನಡಿಗರಲ್ಲಿ ಅತ್ಯಂತ ಆಪ್ತವಾಗಿ ವಿನಂತಿಸಿಕೊಂಡಿದ್ದಾರೆ. ಕ್ಯೂನಲ್ಲಿ ಆರಾಮಾಗಿ ಬಂದು ದೇವರ ದರ್ಶನ ಮಾಡುವಂತೆ ಮತ್ತು ಭದ್ರತೆಗೆ ಪೊಲೀಸರು ಎಲ್ಲಾ ತಯಾರಿ ಮಾಡಿರುವುದಾಗಿ ತಿಳಿಸಿದ್ದಾರೆ. ತಾವೆಲ್ಲರೂ ಬಂದು ದರ್ಶನ ಮಾಡಿ 26 ದಿನಗಳ ಈ ಮಹೋತ್ಸವವನ್ನು ಯಶಸ್ವಿಯಾಗಿಸಬೇಕು ಎಂದು ಯತೀಶ್ ಚಂದ್ರ ಮನವಿ ಮಾಡಿದ್ದಾರೆ.2
- ಕರ್ನಾಟಕದ ಜಾನಪದ ಸಂಗೀತ ಲೋಕದಲ್ಲಿ ಧ್ರುವತಾರೆಯಂತೆ ಬೆಳಗುತ್ತಿರುವ, ತಮ್ಮ ಕಂಠದಲ್ಲಿ ಮಣ್ಣಿನ ಕಂಪನ್ನು ಜೀವಂತವಾಗಿರಿಸಿಕೊಂಡಿರುವ ಅಪ್ಪಟ ಕಲಾವಿದ, ಜಾನಪದ ಸರದಾರ ಶ್ರೀ ನಿಜಾಮ್ ಅಲ್ಲಾ ಖಾನ್ ಅವರ ವಿಶೇಷ ಸಂದರ್ಶನವು ರಾಜ್ಯವನ್ನೇ ಬೆರಗುಗೊಳಿಸಿದೆ. ಉತ್ತರ ಕರ್ನಾಟಕದ ಜವಾರಿ ಜಾನಪದ ಸೊಗಡನ್ನು ಅದರ ನೈಜ ರೂಪದಲ್ಲಿ ಆಸ್ವಾದಿಸಲು ಇದೊಂದು ಸುವರ್ಣಾವಕಾಶ ಎಂದು ಬಣ್ಣಿಸಲಾಗಿದೆ. 72ನೇ ವಯಸ್ಸಿನಲ್ಲಿಯೂ ಯುವಕರನ್ನು ನಾಚಿಸುವಂತಹ ಗಾಂಭೀರ್ಯ, ಕಂಠಸಿರಿ ಮತ್ತು ಕಲೆಯ ಮೇಲಿನ ನಿಷ್ಕಲ್ಮಶ ಪ್ರೀತಿ ನಿಜಾಮ್ ಅಲ್ಲಾ ಖಾನ್ ಅವರಲ್ಲಿದೆ. ನಿಜಾಮ್ ಅಲ್ಲಾ ಖಾನ್ ಅವರ ಜೀವನವು ಕೇವಲ ಒಂದು ಕಥೆಯಲ್ಲ, ಬದಲಾಗಿ ಅದು ಸುದೀರ್ಘ ಹೋರಾಟ, ಸಾಧನೆ ಮತ್ತು ಸ್ಫೂರ್ತಿಯ ಯಶೋಗಾಥೆಯಾಗಿದೆ. ಬಡತನ, ಸವಾಲುಗಳು ಹಾಗೂ ಸಾಮಾಜಿಕ ಅಡೆತಡೆಗಳ ನಡುವೆಯೂ ಸಂಗೀತವನ್ನೇ ಉಸಿರಾಗಿಸಿಕೊಂಡು ಬೆಳೆದ ಈ ಕಲಾ ತಪಸ್ವಿಯ ಜೀವನವು ಇಂದಿನ ಪ್ರತಿಯೊಬ್ಬ ಕನ್ನಡಿಗ ಮತ್ತು ಯುವ ಪೀಳಿಗೆಗೆ ತಿಳಿಯಲೇಬೇಕಾದ ಅದ್ಭುತ ಚರಿತ್ರೆಯಾಗಿದೆ. ಈ ಸಂದರ್ಶನದಲ್ಲಿ ಅವರ ಬಾಲ್ಯದ ನೆನಪುಗಳು, ಜಾನಪದ ಲೋಕಕ್ಕೆ ಕಾಲಿಟ್ಟ ರೋಚಕ ಘಟನೆಗಳು, ಹಾಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಅವರ ಹಿಟ್ ಹಾಡುಗಳ ಹಿಂದಿನ ಅಜ್ಞಾತ ಕಥೆಗಳನ್ನು ಸಂಪೂರ್ಣವಾಗಿ ಅನಾವರಣಗೊಳಿಸಲಾಗಿದೆ. ಪಾಶ್ಚಾತ್ಯ ಸಂಗೀತದ ಅಬ್ಬರದಲ್ಲಿ ದೇಶಿ ಕಲೆಗಳು ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ನಿಜಾಮ್ ಅಲ್ಲಾ ಖಾನ್ ಅವರು ನೈಜ ಜಾನಪದವನ್ನು ಉಳಿಸಿ ಬೆಳೆಸುತ್ತಿರುವ ನಿಜವಾದ ನಾಯಕ ಎಂದು ಬಣ್ಣಿಸಲಾಗಿದೆ. ಇಂತಹ ಎಲೆಮರೆಕಾಯಿಯಂತಹ ಅಪ್ಪಟ ಪ್ರತಿಭೆಗಳು ಮತ್ತು ಅವರ ಸಾಧನೆಗಳನ್ನು ಕರ್ನಾಟಕದ ಮೂಲೆ ಮೂಲೆಗಳಿಂದ ನಾಡಿನ ಜನತೆಯ ಮುನ್ನೆಲೆಗೆ ತರುವುದೇ ನಮ್ಮ ವಾಹಿನಿಯ ಪ್ರಮುಖ ಉದ್ದೇಶವಾಗಿದೆ. ನಮ್ಮ ನೆಲ, ಜಲ, ಭಾಷೆ, ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಈ ಜವಾಬ್ದಾರಿಯುತ ಕಾರ್ಯದಲ್ಲಿ ಕೈಜೋಡಿಸಲು ಮನವಿ ಮಾಡಲಾಗಿದೆ.1
- ಉತ್ತರ ಕರ್ನಾಟಕದ ಭಾಗದಲ್ಲಿ ಈ ಬಾರಿ ಮುಂಗಾರು ಮಳೆ ಬಾರದೆ ಇರುವುದರಿಂದ ರೈತ ಸಮೂಹ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಮಳೆ ರಾಯನ ಆಗಮನಕ್ಕಾಗಿ ಕಾತುರತೆಯಿಂದ ಕಾಯುತ್ತಿರುವ ರೈತರು, ವಿಶೇಷ ರೀತಿಯ ಗುರ್ಜಿ ಸೇವೆಗಳನ್ನು ಮಾಡಿ ಮಳೆಯ ಬರುವಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.1
- ತಾವರಕೆರೆ ಶ್ರೀರಾಮ್ ಫೈನಾನ್ಸ್ ಬ್ರಾಂಚ್‌ನಲ್ಲಿ ಲೋನ್ ಕ್ಲಿಯರ್ ಆಗಿ ಎರಡು ತಿಂಗಳು ಕಳೆದರೂ ಎನ್‌ಒಸಿ (NOC) ನೀಡದ ಕಾರಣ ಗಲಾಟೆ ನಡೆದಿದೆ. ಈ ಹಿನ್ನೆಲೆಯಲ್ಲಿ ಬ್ರಾಂಚ್ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.1