logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಎಚ್‌ಎನ್‌ ವ್ಯಾಲಿ ನೀರು ಅಕ್ರಮ ಬಳಕೆ ಆರೋಪ: ಕ್ರಮಕ್ಕೆ ರೈತರ ಒತ್ತಾಯ. ಶಿಡ್ಲಘಟ್ಟ: ತಾಲೂಕಿನ ವಿವಿಧ ಭಾಗಗಳಲ್ಲಿ ಎಚ್‌ಎನ್‌ ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಹರಿದುಬರುವ ನೀರನ್ನು ಕೆಲವರು ಮೋಟಾರ್‌ಗಳ ಮೂಲಕ ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ಮೋಟಾರ್‌ಗಳ ಕಾರ್ಯಾಚರಣೆಗೆ ಅಕ್ರಮ ವಿದ್ಯುತ್ ಸಂಪರ್ಕವನ್ನೂ ಪಡೆಯಲಾಗುತ್ತಿದೆ ಎಂದು ರೈತರು ಆರೋಪಿಸಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಶಿಡ್ಲಘಟ್ಟ ನಗರದ ಬೆಸ್ಕಾಂ ಕಚೇರಿ ಸಭಾಂಗಣದಲ್ಲಿ  ನಡೆದ ನಗರ ಮತ್ತು ಗ್ರಾಮೀಣ ಉಪ ವಿಭಾಗಗಳ ಗ್ರಾಹಕರ ಸಂವಾದ ಹಾಗೂ ವಿದ್ಯುತ್ ಸುರಕ್ಷತಾ ಸಭೆಯಲ್ಲಿ ರೈತರು ಈ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರು. ಸಭೆಯಲ್ಲಿ ಮಾತನಾಡಿದ ರೈತರಾದ ಶೆಟ್ಟಹಳ್ಳಿ ರವಿಪ್ರಕಾಶ್ ಹಾಗೂ ಜಯಂತಿ ಗ್ರಾಮದ ನಾರಾಯಣಸ್ವಾಮಿ, ಎಚ್‌ಎನ್‌ ವ್ಯಾಲಿ ಯೋಜನೆಯ ನೀರನ್ನು ಕೆರೆಗಳಿಗೆ ತಲುಪಿಸುವ ಪೈಪ್‌ಲೈನ್‌ಗಳಿಗೆ ಕೆಲವೆಡೆ ಅಕ್ರಮವಾಗಿ ಮೋಟಾರ್‌ಗಳನ್ನು ಅಳವಡಿಸಲಾಗಿದೆ ಎಂದು ಆರೋಪಿಸಿದರು. ಪೈಪ್‌ಲೈನ್‌ನಿಂದಲೇ ನೇರವಾಗಿ ನೀರನ್ನು ಪಡೆದು ಖಾಸಗಿ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಕೆಳಭಾಗದಲ್ಲಿರುವ ಕೆರೆಗಳಿಗೆ ಸಮರ್ಪಕ ಪ್ರಮಾಣದಲ್ಲಿ ನೀರು ತಲುಪುತ್ತಿಲ್ಲ ಎಂದು ದೂರಿದರು. ಒಂದು ಕಡೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ನೀರನ್ನು ಅಕ್ರಮವಾಗಿ ಬಳಸಿಕೊಳ್ಳಲಾಗುತ್ತಿದ್ದರೆ, ಮತ್ತೊಂದೆಡೆ ಮೋಟಾರ್‌ಗಳನ್ನು ಚಾಲನೆ ಮಾಡಲು ಅಕ್ರಮ ವಿದ್ಯುತ್ ಸಂಪರ್ಕವನ್ನೂ ಪಡೆಯಲಾಗುತ್ತಿದೆ. ಇದರಿಂದ ಸರ್ಕಾರದ ಆಸ್ತಿ ಹಾಗೂ ಸಾರ್ವಜನಿಕ ಸಂಪನ್ಮೂಲಗಳಿಗೆ ನಷ್ಟ ಉಂಟಾಗುವುದರ ಜತೆಗೆ, ಕೆರೆಗಳಿಗೆ ನೀರು ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಅಮ್ಮನಕೆರೆ, ಗುಡಿಹಳ್ಳಿ ಕೆರೆ, ಶೆಟ್ಟಹಳ್ಳಿ ಕೆರೆ ಸೇರಿದಂತೆ ತಾಲೂಕಿನ ವಿವಿಧೆಡೆ ಎಚ್‌ಎನ್‌ ವ್ಯಾಲಿ ನೀರಿನ ಪೈಪ್‌ಲೈನ್‌ಗಳನ್ನು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದರು. ಪೈಪ್‌ಲೈನ್‌ಗಳಿಗೆ ಅಕ್ರಮವಾಗಿ ಮೋಟಾರ್‌ಗಳನ್ನು ಅಳವಡಿಸಿರುವ ಪ್ರಕರಣಗಳಿದ್ದರೆ ಕೂಡಲೇ ಅವುಗಳನ್ನು ತೆರವುಗೊಳಿಸಿ, ಅಕ್ರಮ ನೀರಿನ ಬಳಕೆ ಹಾಗೂ ವಿದ್ಯುತ್ ಸಂಪರ್ಕ ಪಡೆದಿರುವವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರೈತರ ದೂರಿಗೆ ಪ್ರತಿಕ್ರಿಯಿಸಿದ ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಸೂರ್ಯಪ್ರಕಾಶ್, ಎಚ್‌ಎನ್‌ ವ್ಯಾಲಿ ನೀರನ್ನು ಮೋಟಾರ್‌ಗಳ ಮೂಲಕ ಅಕ್ರಮವಾಗಿ ಬಳಸುತ್ತಿರುವ ಕುರಿತು ಬಂದಿರುವ ದೂರುಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಪರಿಶೀಲನೆ ವೇಳೆ ಅಕ್ರಮ ವಿದ್ಯುತ್ ಸಂಪರ್ಕಗಳು ಕಂಡುಬಂದರೆ ಇಲಾಖೆಯ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಸಭೆಯಲ್ಲಿ ಶೆಟ್ಟಹಳ್ಳಿ ಹಾಗೂ ಇದ್ಲೂಡು ಗ್ರಾಮಗಳ ವಿದ್ಯುತ್ ಲೈನ್ ಸಮಸ್ಯೆ, ಚೌಡಸಂದ್ರ ಭಾಗದ ವಿದ್ಯುತ್ ಪೂರೈಕೆ ಸಮಸ್ಯೆ ಸೇರಿದಂತೆ ವಿವಿಧ ಅಹವಾಲುಗಳನ್ನು ಗ್ರಾಹಕರು ಮತ್ತು ರೈತರು ಅಧಿಕಾರಿಗಳ ಮುಂದಿಟ್ಟರು. ಪ್ರತಿಯೊಂದು ಸಮಸ್ಯೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು. ಗ್ರಾಹಕರ ಸಂವಾದ ಸಭೆಗಳ ಕುರಿತು ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡಲಾಗುತ್ತಿಲ್ಲ ಎಂಬ ಅಸಮಾಧಾನವೂ ಸಭೆಯಲ್ಲಿ ವ್ಯಕ್ತವಾಯಿತು. ಇಂತಹ ಸಭೆಗಳು ಕೆಲವೇ ಜನರಿಗೆ ಸೀಮಿತವಾಗದೆ, ನಗರ ಹಾಗೂ ಗ್ರಾಮೀಣ ಪ್ರದೇಶಗಳ ಹೆಚ್ಚಿನ ಸಂಖ್ಯೆಯ ಗ್ರಾಹಕರು ಭಾಗವಹಿಸುವಂತಾಗಬೇಕು ಎಂದು ರೈತರು ಒತ್ತಾಯಿಸಿದರು. ಸಭೆಗಳ ದಿನಾಂಕ ಮತ್ತು ಸಮಯದ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ಮುಂಚಿತವಾಗಿ ವ್ಯಾಪಕ ಪ್ರಚಾರ ನಡೆಸಬೇಕು. ಇದರಿಂದ ಜನರು ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಲು ಅನುಕೂಲವಾಗಲಿದೆ ಎಂದು ಗ್ರಾಹಕರು ಅಭಿಪ್ರಾಯಪಟ್ಟರು. ಸಭೆಯಲ್ಲಿ ಬೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಗೌರಮ್ಮ, ಆನಂತಗೌಡ, ವೇದಕಿರಣ್, ಶಿವಕುಮಾರ್, ಜಯಂತಿ ಗ್ರಾಮದ ನಾರಾಯಣಸ್ವಾಮಿ, ರೈತ ಮುಖಂಡ ರವಿಪ್ರಕಾಶ್, ನಾಗರಾಜ್, ವೆಂಕಟೇಶ್, ಶ್ರೀರಾಮ್ ಸೇರಿದಂತೆ ರೈತರು ಹಾಗೂ ವಿವಿಧ ಭಾಗಗಳ ಗ್ರಾಹಕರು ಉಪಸ್ಥಿತರಿದ್ದರು.

1 hr ago
user_Nandi Rajesh Press reporter
Nandi Rajesh Press reporter
ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
1 hr ago
ecf62bdc-a2af-461c-b318-7f6da092a757

More news from ಕರ್ನಾಟಕ and nearby areas
  • ಶಿಡ್ಲಘಟ್ಟದ ಹಂಡಿಗನಾಳ ಬಳಿ ಭೀಕರ ಅಪಘಾತ ; ಓರ್ವ ವ್ಯಕ್ತಿ ಸಾವು
    1
    ಶಿಡ್ಲಘಟ್ಟದ ಹಂಡಿಗನಾಳ ಬಳಿ ಭೀಕರ ಅಪಘಾತ ; ಓರ್ವ ವ್ಯಕ್ತಿ ಸಾವು
    user_NAYANNEWS
    NAYANNEWS
    ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    58 min ago
  • ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಬಳಿ ಭೀಕರ ಅಪಘಾತ : ಓರ್ವ ವ್ಯಕ್ತಿ ಸಾವು! ಹಂಡಿಗನಾಳ ಸೇತುವೆ ಬಳಿ ಅಪಘಾತ; ಓರ್ವ ಸಾವು...!ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ಸೇತುವೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ.
    1
    ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಬಳಿ ಭೀಕರ ಅಪಘಾತ : ಓರ್ವ ವ್ಯಕ್ತಿ ಸಾವು!
ಹಂಡಿಗನಾಳ ಸೇತುವೆ ಬಳಿ ಅಪಘಾತ; ಓರ್ವ ಸಾವು...!ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ಸೇತುವೆ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳ ಪೈಕಿ ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ.
    user_NAYAN NEWS
    NAYAN NEWS
    ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    1 hr ago
  • **ಶಿಡ್ಲಘಟ್ಟ: ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ | ಐಜಿಪಿ ಅರುಣ್ ಚಕ್ರವರ್ತಿ ಅವರಿಂದ ಸ್ಪೂರ್ತಿದಾಯಕ ನುಡಿ **ಶಿಡ್ಲಘಟ್ಟ: ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ | ಐಜಿಪಿ ಅರುಣ್ ಚಕ್ರವರ್ತಿ ಅವರಿಂದ ಸ್ಪೂರ್ತಿದಾಯಕ ನುಡಿ |* "*'ದಿ ಕ್ರೆಸೆಂಟ್ ಶಾಲೆಯ'** ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಈ ಸಮಾರಂಭದಲ್ಲಿ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು, ಪ್ರಗತಿಪರ ಚಿಂತಕರು ಹಾಗೂ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಉದ್ಯಮಿಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಿಕ ಸಂದೇಶ ನೀಡಿದರು.* --- "ಶಿಡ್ಲಘಟ್ಟದ ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ **ಬೆಂಗಳೂರಿನ ಜಯನಗರ ಕಾನೂನು ಮಹಾವಿದ್ಯಾಲಯದ ಪ್ರಗತಿಪರ ಚಿಂತಕರಾದ ರಾಜಣ್ಣ** ಹಾಗೂ ಅವರ ಶಿಷ್ಯರಾದ **ಪೊಲೀಸ್ ಮಹಾ ನಿರ್ದೇಶಕರು (DGP/IGP) ಅರುಣ್ ಚಕ್ರವರ್ತಿ** ಅವರು ಆಗಮಿಸಿ ನೂತನ ಕಟ್ಟಡವನ್ನು ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಮಹಾ ನಿರ್ದೇಶಕರಾದ ಅರುಣ್ ಚಕ್ರವರ್ತಿ ಅವರು, *'ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಅವಧಿಯಲ್ಲಿ ಕಠಿಣ ಪರಿಶ್ರಮ ವಹಿಸಿ, ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಾವು ಕಲಿತ ಶಾಲೆಗೆ ಹಾಗೂ ಹೆತ್ತ ತಂದೆ-ತಾಯಿಗೆ ಕೀರ್ತಿ ತರಬೇಕು'* ಎಂದು ಸ್ಪೂರ್ತಿದಾಯಕ ಕರೆ ನೀಡಿದರು. ಇದೇ ವೇಳೆ ಮಾತನಾಡಿದ **ದಿ ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಮಹಮ್ಮದ್ ತಮೀಮ್ ಅನ್ಸಾರಿ** ಅವರು, *'ನಮ್ಮ ಶಾಲೆಯ ಉದ್ಘಾಟನೆಗೆ ಆಗಮಿಸಿರುವ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅರುಣ್ ಚಕ್ರವರ್ತಿಯವರಂತೆಯೇ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಶ್ರೇಷ್ಠ ಹುದ್ದೆಗೇರಬೇಕು'* ಎಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು."* --- "ಈ ಕಾರ್ಯಕ್ರಮದಲ್ಲಿ ತಂತ್ರಜ್ಞಾನ ಹಾಗೂ ಸಾಮಾಜಿಕ ಕ್ಷೇತ್ರದ ಹಲವಾರು ಗಣ್ಯರು ಭಾಗವಹಿಸಿದ್ದರು: ಡಿಸಿ ಆರ್ ಎ ನಲ್ಲಿ ಡಿಸಿಪಿಯಾಗಿ ಕರ್ನಾಟಕ ರಾಜ್ಯದಲ್ಲಿ ದಲಿತರಿಗೆ ಏನು ತೊಂದರೆ ಆಗ್ತಾ ಇದೆ ಅವಳೆ ಎಲ್ಲವನ್ನೂ ಸರಿ ಮಾಡಿ ಉತ್ತಮವಾದ ಸೇವೆಯನ್ನು ಸಲ್ಲಿಸಿದ್ದಾರೆ ನಾಗರಿಕ ಹಕ್ಕು ಜಾರಿ ನಿರ್ದೇಶನಲಯದಲ್ಲಿ ಇದುವರೆಗೂ ಯಾರು ಸಹ ಮಾಡದೇ ಇರತಕ್ಕಂತಹ ಕೆಲಸವನ್ನು ಅರುಣ್ ಚಕ್ರವರ್ತಿ ಅವರು ಮಾಡಿದ್ದಾರೆಂದು ಸುರೇಶ್ ಅವರು ತಿಳಿಸಿದರು ನಂತರ ಅರುಣ್ ಚಕ್ರವರ್ತಿ ಅವರು ಆಶಾಕಿರಣ ಅಂಧ ಮಕ್ಕಳು ಶಾಲೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಕೆ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚಿದರು * **ರವಿಶಂಕರ್** - ಸ್ಥಾಪಕ ನಿರ್ದೇಶಕರು, ಆಪ್ಟಿ ಸಾಫ್ಟ್‌ವೇರ್ * **ಅಭಿರಾಮ್ ಸುರೇಶ್** - ಸಿಇಒ, ಎಗ್ನೋಮಿಷಿಯನ್ ರೋಬೋಟಿಕ್ಸ್ ಕಂಪನಿ ಲಿಯೋ ಕ್ಲಬ್ ನ ಅದ್ಯಕ್ಷರಾದ * **ಶ್ರೀಕಾಂತ್ ಲಿಯೋ ಲೋಕೇಶ್** - ಸೇರಿದಂತೆ ಹಲವು ಗಣ್ಯರು, ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು." --- "ಶಿಕ್ಷಣದ ಜೊತೆಗೆ ಉನ್ನತ ಗುರಿ ಮತ್ತು ಸಾಧನೆಯ ಹಾದಿ ತೋರಿಸಿದ ಈ ಉದ್ಘಾಟನಾ ಸಮಾರಂಭವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿದೆ. ವರದಿ:- ಅರಿಕೆರೆ ಮುನಿರಾಜು, ಪ್ರಧಾನ ವರದಿಗಾರರು, ಸಮತಾ ನ್ಯೂಸ್, ಶಿಡ್ಲಘಟ್ಟ.** *(ನಿರೂಪಕಿ)* ಇನ್ನಷ್ಟು ತಾಜಾ ಹಾಗೂ ವರದಿಗಳಿಗಾಗಿ 'ಸಮತಾ ನ್ಯೂಸ್' ಯೂಟ್ಯೂಬ್ ಚಾನೆಲ್ ಅನ್ನು ಲೈಕ್ ಮಾಡಿ, ಶೇರ್ ಮಾಡಿ ಮತ್ತು ಸಬ್‌ಸ್ಕ್ರೈಬ್ ಮಾಡಿ. ಧನ್ಯವಾದಗಳು!" --- *(Video Description / Description Box ಗಾಗಿ):** > #Sidlaghatta #ShidlaghattaNews #ArunChakravarthy #CrescentSchool #SantanaNews #KarnatakaNews #SidlaghattaEducation
    1
    **ಶಿಡ್ಲಘಟ್ಟ: ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ | ಐಜಿಪಿ ಅರುಣ್ ಚಕ್ರವರ್ತಿ ಅವರಿಂದ ಸ್ಪೂರ್ತಿದಾಯಕ ನುಡಿ 
**ಶಿಡ್ಲಘಟ್ಟ: ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ | ಐಜಿಪಿ ಅರುಣ್ ಚಕ್ರವರ್ತಿ ಅವರಿಂದ ಸ್ಪೂರ್ತಿದಾಯಕ ನುಡಿ |*
"*'ದಿ ಕ್ರೆಸೆಂಟ್ ಶಾಲೆಯ'** ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಈ ಸಮಾರಂಭದಲ್ಲಿ ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳು, ಪ್ರಗತಿಪರ ಚಿಂತಕರು ಹಾಗೂ ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಉದ್ಯಮಿಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಿಕ ಸಂದೇಶ ನೀಡಿದರು.*
---
"ಶಿಡ್ಲಘಟ್ಟದ ದಿ ಕ್ರೆಸೆಂಟ್ ಶಾಲೆಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ **ಬೆಂಗಳೂರಿನ ಜಯನಗರ ಕಾನೂನು ಮಹಾವಿದ್ಯಾಲಯದ ಪ್ರಗತಿಪರ ಚಿಂತಕರಾದ ರಾಜಣ್ಣ** ಹಾಗೂ ಅವರ ಶಿಷ್ಯರಾದ **ಪೊಲೀಸ್ ಮಹಾ ನಿರ್ದೇಶಕರು (DGP/IGP) ಅರುಣ್ ಚಕ್ರವರ್ತಿ** ಅವರು ಆಗಮಿಸಿ ನೂತನ ಕಟ್ಟಡವನ್ನು ಉದ್ಘಾಟಿಸಿದರು.
ಬಳಿಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಮಹಾ ನಿರ್ದೇಶಕರಾದ ಅರುಣ್ ಚಕ್ರವರ್ತಿ ಅವರು, *'ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಅವಧಿಯಲ್ಲಿ ಕಠಿಣ ಪರಿಶ್ರಮ ವಹಿಸಿ, ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಾವು ಕಲಿತ ಶಾಲೆಗೆ ಹಾಗೂ ಹೆತ್ತ ತಂದೆ-ತಾಯಿಗೆ ಕೀರ್ತಿ ತರಬೇಕು'* ಎಂದು ಸ್ಪೂರ್ತಿದಾಯಕ ಕರೆ ನೀಡಿದರು.
ಇದೇ ವೇಳೆ ಮಾತನಾಡಿದ **ದಿ ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಮಹಮ್ಮದ್ ತಮೀಮ್ ಅನ್ಸಾರಿ** ಅವರು, *'ನಮ್ಮ ಶಾಲೆಯ ಉದ್ಘಾಟನೆಗೆ ಆಗಮಿಸಿರುವ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅರುಣ್ ಚಕ್ರವರ್ತಿಯವರಂತೆಯೇ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡು ಶ್ರೇಷ್ಠ ಹುದ್ದೆಗೇರಬೇಕು'* ಎಂದು ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು."*
---
"ಈ ಕಾರ್ಯಕ್ರಮದಲ್ಲಿ ತಂತ್ರಜ್ಞಾನ ಹಾಗೂ ಸಾಮಾಜಿಕ ಕ್ಷೇತ್ರದ ಹಲವಾರು ಗಣ್ಯರು ಭಾಗವಹಿಸಿದ್ದರು:
ಡಿಸಿ ಆರ್ ಎ ನಲ್ಲಿ ಡಿಸಿಪಿಯಾಗಿ ಕರ್ನಾಟಕ ರಾಜ್ಯದಲ್ಲಿ ದಲಿತರಿಗೆ ಏನು ತೊಂದರೆ ಆಗ್ತಾ ಇದೆ ಅವಳೆ ಎಲ್ಲವನ್ನೂ ಸರಿ ಮಾಡಿ ಉತ್ತಮವಾದ ಸೇವೆಯನ್ನು ಸಲ್ಲಿಸಿದ್ದಾರೆ ನಾಗರಿಕ ಹಕ್ಕು ಜಾರಿ ನಿರ್ದೇಶನಲಯದಲ್ಲಿ ಇದುವರೆಗೂ ಯಾರು ಸಹ ಮಾಡದೇ ಇರತಕ್ಕಂತಹ ಕೆಲಸವನ್ನು ಅರುಣ್ ಚಕ್ರವರ್ತಿ ಅವರು ಮಾಡಿದ್ದಾರೆಂದು ಸುರೇಶ್ ಅವರು ತಿಳಿಸಿದರು
ನಂತರ ಅರುಣ್ ಚಕ್ರವರ್ತಿ ಅವರು ಆಶಾಕಿರಣ ಅಂಧ ಮಕ್ಕಳು ಶಾಲೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಕೆ ಕತ್ತರಿಸಿ ಮಕ್ಕಳಿಗೆ ಸಿಹಿ ಹಂಚಿದರು
* **ರವಿಶಂಕರ್** - ಸ್ಥಾಪಕ ನಿರ್ದೇಶಕರು, ಆಪ್ಟಿ ಸಾಫ್ಟ್‌ವೇರ್ 
* **ಅಭಿರಾಮ್ ಸುರೇಶ್** - ಸಿಇಒ, ಎಗ್ನೋಮಿಷಿಯನ್ ರೋಬೋಟಿಕ್ಸ್ ಕಂಪನಿ ಲಿಯೋ ಕ್ಲಬ್ ನ ಅದ್ಯಕ್ಷರಾದ 
* **ಶ್ರೀಕಾಂತ್ ಲಿಯೋ ಲೋಕೇಶ್** -
ಸೇರಿದಂತೆ ಹಲವು ಗಣ್ಯರು, ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು."
---
"ಶಿಕ್ಷಣದ ಜೊತೆಗೆ ಉನ್ನತ ಗುರಿ ಮತ್ತು ಸಾಧನೆಯ ಹಾದಿ ತೋರಿಸಿದ ಈ ಉದ್ಘಾಟನಾ ಸಮಾರಂಭವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿದೆ.
ವರದಿ:- ಅರಿಕೆರೆ ಮುನಿರಾಜು, ಪ್ರಧಾನ ವರದಿಗಾರರು, ಸಮತಾ ನ್ಯೂಸ್, ಶಿಡ್ಲಘಟ್ಟ.**
*(ನಿರೂಪಕಿ)* ಇನ್ನಷ್ಟು ತಾಜಾ  ಹಾಗೂ ವರದಿಗಳಿಗಾಗಿ 'ಸಮತಾ ನ್ಯೂಸ್' ಯೂಟ್ಯೂಬ್ ಚಾನೆಲ್ ಅನ್ನು ಲೈಕ್ ಮಾಡಿ, ಶೇರ್ ಮಾಡಿ ಮತ್ತು ಸಬ್‌ಸ್ಕ್ರೈಬ್ ಮಾಡಿ. ಧನ್ಯವಾದಗಳು!"
---
*(Video Description / Description Box ಗಾಗಿ):**
> #Sidlaghatta #ShidlaghattaNews #ArunChakravarthy #CrescentSchool #SantanaNews #KarnatakaNews #SidlaghattaEducation
    user_ಅರಿಕೆರೆ ಮುನಿರಾಜು ಡಿ
    ಅರಿಕೆರೆ ಮುನಿರಾಜು ಡಿ
    ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    18 hrs ago
  • ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ ಟರ್ಮಿನಲ್-1ರಲ್ಲಿ ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಯಿಂದ ಕಟ್ಟೆಚ್ಚರ ದೇವನಹಳ್ಳಿ :ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ ಟರ್ಮಿನಲ್-1ರಲ್ಲಿ ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಯಿಂದ ಕಟ್ಟೆಚ್ಚರ ಲಖನೌದಿಂದ ಬೆಂಗಳೂರಿಗೆ ಆಗಮಿಸಿದ 6E-231 ವಿಮಾನಕ್ಕೆ ಬಾಂಬ್ ಹುಸಿ ಬೆದರಿಕೆ ಕರೆ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ. ಬಾಂಬ್ ಬೆದರಿಕೆ ಮಾಹಿತಿ ಹಿನ್ನೆಲೆಯಲ್ಲಿ ಟರ್ಮಿನಲ್-1ರ ಟರ್ಮಿನಲ್ ಮ್ಯಾನೇಜರ್ ಕಚೇರಿಯಲ್ಲಿ BTAC ಸಭೆ ಬೆದರಿಕೆ ಆಧರಿಸಿ ಅಗತ್ಯ ಭದ್ರತಾ ಕ್ರಮವಹಿಸಿ ತಪಾಸಣೆ ವಿಮಾನ ಹಾಗೂ ಟರ್ಮಿನಲ್ ಪ್ರದೇಶದಲ್ಲಿ ಸಿಐಎಸ್ಎಫ್ ಸಿಬ್ಬಂದಿಯಿಂದ ತೀವ್ರ ಭದ್ರತೆ ಪರಿಶೀಲನೆ ಪ್ರಯಾಣಿಕರ ಸುರಕ್ಷತೆಗಾಗಿ ಏರ್‌ಪೋರ್ಟ್‌ನಲ್ಲಿ ಕಟ್ಟೆಚ್ಚರವಹಿಸಿ ನಿಗಾ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
    3
    ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ
ಟರ್ಮಿನಲ್-1ರಲ್ಲಿ ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಯಿಂದ ಕಟ್ಟೆಚ್ಚರ
ದೇವನಹಳ್ಳಿ :ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ
ಟರ್ಮಿನಲ್-1ರಲ್ಲಿ ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿಯಿಂದ ಕಟ್ಟೆಚ್ಚರ
ಲಖನೌದಿಂದ ಬೆಂಗಳೂರಿಗೆ ಆಗಮಿಸಿದ 6E-231 ವಿಮಾನಕ್ಕೆ ಬಾಂಬ್ ಹುಸಿ ಬೆದರಿಕೆ ಕರೆ
ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ.
ಬಾಂಬ್ ಬೆದರಿಕೆ ಮಾಹಿತಿ ಹಿನ್ನೆಲೆಯಲ್ಲಿ ಟರ್ಮಿನಲ್-1ರ ಟರ್ಮಿನಲ್ ಮ್ಯಾನೇಜರ್ ಕಚೇರಿಯಲ್ಲಿ BTAC ಸಭೆ
ಬೆದರಿಕೆ ಆಧರಿಸಿ ಅಗತ್ಯ ಭದ್ರತಾ ಕ್ರಮವಹಿಸಿ ತಪಾಸಣೆ
ವಿಮಾನ ಹಾಗೂ ಟರ್ಮಿನಲ್ ಪ್ರದೇಶದಲ್ಲಿ ಸಿಐಎಸ್ಎಫ್ ಸಿಬ್ಬಂದಿಯಿಂದ ತೀವ್ರ ಭದ್ರತೆ ಪರಿಶೀಲನೆ
ಪ್ರಯಾಣಿಕರ ಸುರಕ್ಷತೆಗಾಗಿ ಏರ್‌ಪೋರ್ಟ್‌ನಲ್ಲಿ ಕಟ್ಟೆಚ್ಚರವಹಿಸಿ ನಿಗಾ
ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    47 min ago
  • ಬಾಗೇಪಲ್ಲಿ ಶಾಸಕ ಎಸ್ಎನ್ ಸುಬ್ಬಾರೆಡ್ಡಿ ಮಾತನಾಡುತ್ತಾ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಾಗೇಪಲ್ಲಿ ಗುಡಿಬಂಡೆ ಚೇಳೂರು ತಾಲೂಕುಗಳ ಎಲ್ಲರಿಗೂ ನಮಸ್ಕಾರಗಳನ್ನು ತಿಳಿಸುತ್ತಾ ಪ್ರತಿ ವರ್ಷದಂತೆ ಈ ವರ್ಷವೂ ನನ್ನ ಎಸ್ ಎನ್ ಸುಬ್ಬಾರೆಡ್ಡಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿನಾಂಕ 26.08.2026 ರ ಬುಧವಾರ ಗಡಿದಿಂ ಶ್ರೀ ಕ್ಷೇತ್ರದಲ್ಲಿ 23 ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಂಡಿದ್ದು ತಾವೆಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ವಧು ವರರನ್ನು ಆಶೀರ್ವದಿಸಿ ಕಾರ್ಯಕ್ರಮ ಯಶಸ್ವಿ ಮಾಡಲು ಕೋರುತ್ತೇನೆ ಎಂದು ತಿಳಿಸಿದರು
    1
    ಬಾಗೇಪಲ್ಲಿ ಶಾಸಕ ಎಸ್ಎನ್ ಸುಬ್ಬಾರೆಡ್ಡಿ ಮಾತನಾಡುತ್ತಾ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಾಗೇಪಲ್ಲಿ ಗುಡಿಬಂಡೆ ಚೇಳೂರು ತಾಲೂಕುಗಳ ಎಲ್ಲರಿಗೂ ನಮಸ್ಕಾರಗಳನ್ನು ತಿಳಿಸುತ್ತಾ 
ಪ್ರತಿ ವರ್ಷದಂತೆ ಈ ವರ್ಷವೂ ನನ್ನ ಎಸ್ ಎನ್ ಸುಬ್ಬಾರೆಡ್ಡಿ ಚಾರಿಟೇಬಲ್ ಟ್ರಸ್ಟ್  ವತಿಯಿಂದ ದಿನಾಂಕ 26.08.2026 ರ ಬುಧವಾರ ಗಡಿದಿಂ ಶ್ರೀ ಕ್ಷೇತ್ರದಲ್ಲಿ 23 ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಂಡಿದ್ದು ತಾವೆಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿ ವಧು ವರರನ್ನು ಆಶೀರ್ವದಿಸಿ ಕಾರ್ಯಕ್ರಮ ಯಶಸ್ವಿ ಮಾಡಲು ಕೋರುತ್ತೇನೆ ಎಂದು ತಿಳಿಸಿದರು
    user_Shashi Kumar
    Shashi Kumar
    ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    19 hrs ago
  • KPSC ನೇಮಕಾತಿ ಹಗರಣ ಆರೋಪ: ABVPಯಿಂದ ವಿಧಾನಸೌಧ ಚಲೋ! OMR ತಿದ್ದುಪಡಿ, ಲಂಚದ ಆರೋಪಕ್ಕೆ ವಿದ್ಯಾರ್ಥಿಗಳ ಆಕ್ರೋಶ! KPSC ನೇಮಕಾತಿ ಹಗರಣ ಆರೋಪ: ABVPಯಿಂದ ವಿಧಾನಸೌಧ ಚಲೋ! OMR ತಿದ್ದುಪಡಿ, ಲಂಚದ ಆರೋಪಕ್ಕೆ ವಿದ್ಯಾರ್ಥಿಗಳ ಆಕ್ರೋಶ!
    1
    KPSC ನೇಮಕಾತಿ ಹಗರಣ ಆರೋಪ: ABVPಯಿಂದ ವಿಧಾನಸೌಧ ಚಲೋ!
OMR ತಿದ್ದುಪಡಿ, ಲಂಚದ ಆರೋಪಕ್ಕೆ ವಿದ್ಯಾರ್ಥಿಗಳ ಆಕ್ರೋಶ!
KPSC ನೇಮಕಾತಿ ಹಗರಣ ಆರೋಪ: ABVPಯಿಂದ ವಿಧಾನಸೌಧ ಚಲೋ!
OMR ತಿದ್ದುಪಡಿ, ಲಂಚದ ಆರೋಪಕ್ಕೆ ವಿದ್ಯಾರ್ಥಿಗಳ ಆಕ್ರೋಶ!
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಸಾರ್ವಜನಿಕ ಸ್ಥಳದಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದ ಹೆಲ್ತ್ ಕೇರ್ ಸೆಂಟರ್‌ಗೆ 40 ಸಾವಿರ ರೂ. ದಂಡ ಬೆಂಗಳೂರು:ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗುರಪ್ಪನಪಾಳ್ಯ ಪ್ರದೇಶದಲ್ಲಿ ನಿಯಮಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ವೈದ್ಯಕೀಯ ತ್ಯಾಜ್ಯವನ್ನು ಸುರಿದ ಕ್ಲಿನಿಕ್‌ಗೆ ದಂಡ ವಿಧಿಸಲಾಗಿದೆ. ಇಂದು ಬೆಳಿಗ್ಗೆ ಬಿಟಿಎಂ ಲೇಔಟ್ 1ನೇ ಹಂತದ ಗುರಪ್ಪನಪಾಳ್ಯದ 9ನೇ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ವೈದ್ಯಕೀಯ ತ್ಯಾಜ್ಯಗಳಾದ ಸೂಜಿಗಳು, ಸಿರಿಂಜ್, ಪ್ಲಾಸ್ಟರ್ ಗಳು, ಮಾತ್ರೆ ಡಬ್ಬಗಳು ಹಾಗೂ ಇನ್ನಿತರ ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ಸುರಿದಿರುವುದನ್ನ ಗಮನಿಸಿದ ಪೌರಕಾರ್ಮಿಕರು ಮಾರ್ಷಲ್ ಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಮಾರ್ಷಲ್ ಗಳು ತ್ಯಾಜ್ಯಗಳನ್ನು ಪರಿಶೀಲಿಸಿದಾಗ ವೈದ್ಯಕೀಯ ತ್ಯಾಜ್ಯಗಳೊಡನೆ ಹೆಲ್ತ್ ಕೇರ್ ಸೆಂಟರ್ ಪ್ರಿಸ್ಕ್ರಿಪ್ಷನ್ ಪತ್ರಗಳು ಕಂಡುಬಂದಿದ್ದ ಮೇರೆಗೆ ವೈದ್ಯಕೀಯ ತ್ಯಾಜ್ಯ ಸುರಿದಿರುವವರ ಮಾಹಿತಿ ಪತ್ತೆಯಾಗಿರುತ್ತದೆ. ವೈದ್ಯಕೀಯ ತ್ಯಾಜ್ಯವನ್ನು ಬಿಸಾಡಿರುವುದು ಪಾಲಿಕೆಯ ಮಾರ್ಷಲ್‌ಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳಕ್ಕೆ ಧಾವಿಸಿದ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳು, ಸಾರ್ವಜನಿಕರ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವ ರೀತಿಯಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಸುರಿದಿರುವ ಹೆಲ್ತ್ ಕೇರ್ ಸೆಂಟರ್‌ಗೆ ಸ್ಥಳದಲ್ಲೇ 40,000 ದಂಡ ವಿಧಿಸಿ, ಡಿಜಿಟಲ್ ಪಾವತಿ ಮೂಲಕ ವಸೂಲಿ ಮಾಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್ ಭಾಗವಹಿಸಿದ್ದರು.
    1
    ಸಾರ್ವಜನಿಕ ಸ್ಥಳದಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದ ಹೆಲ್ತ್ ಕೇರ್ ಸೆಂಟರ್‌ಗೆ 40 ಸಾವಿರ ರೂ. ದಂಡ
ಬೆಂಗಳೂರು:ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗುರಪ್ಪನಪಾಳ್ಯ ಪ್ರದೇಶದಲ್ಲಿ ನಿಯಮಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ವೈದ್ಯಕೀಯ ತ್ಯಾಜ್ಯವನ್ನು ಸುರಿದ ಕ್ಲಿನಿಕ್‌ಗೆ ದಂಡ ವಿಧಿಸಲಾಗಿದೆ.
ಇಂದು ಬೆಳಿಗ್ಗೆ ಬಿಟಿಎಂ ಲೇಔಟ್ 1ನೇ ಹಂತದ ಗುರಪ್ಪನಪಾಳ್ಯದ 9ನೇ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ವೈದ್ಯಕೀಯ ತ್ಯಾಜ್ಯಗಳಾದ ಸೂಜಿಗಳು, ಸಿರಿಂಜ್, ಪ್ಲಾಸ್ಟರ್ ಗಳು, ಮಾತ್ರೆ ಡಬ್ಬಗಳು ಹಾಗೂ ಇನ್ನಿತರ ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ಸುರಿದಿರುವುದನ್ನ ಗಮನಿಸಿದ ಪೌರಕಾರ್ಮಿಕರು ಮಾರ್ಷಲ್ ಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಮಾರ್ಷಲ್ ಗಳು ತ್ಯಾಜ್ಯಗಳನ್ನು ಪರಿಶೀಲಿಸಿದಾಗ ವೈದ್ಯಕೀಯ ತ್ಯಾಜ್ಯಗಳೊಡನೆ ಹೆಲ್ತ್ ಕೇರ್ ಸೆಂಟರ್ ಪ್ರಿಸ್ಕ್ರಿಪ್ಷನ್ ಪತ್ರಗಳು ಕಂಡುಬಂದಿದ್ದ ಮೇರೆಗೆ ವೈದ್ಯಕೀಯ ತ್ಯಾಜ್ಯ ಸುರಿದಿರುವವರ ಮಾಹಿತಿ ಪತ್ತೆಯಾಗಿರುತ್ತದೆ. ವೈದ್ಯಕೀಯ ತ್ಯಾಜ್ಯವನ್ನು ಬಿಸಾಡಿರುವುದು ಪಾಲಿಕೆಯ ಮಾರ್ಷಲ್‌ಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳಕ್ಕೆ ಧಾವಿಸಿದ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳು, ಸಾರ್ವಜನಿಕರ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವ ರೀತಿಯಲ್ಲಿ ವೈದ್ಯಕೀಯ ತ್ಯಾಜ್ಯವನ್ನು  ಅವೈಜ್ಞಾನಿಕವಾಗಿ ಸುರಿದಿರುವ ಹೆಲ್ತ್ ಕೇರ್ ಸೆಂಟರ್‌ಗೆ ಸ್ಥಳದಲ್ಲೇ 40,000 ದಂಡ ವಿಧಿಸಿ, ಡಿಜಿಟಲ್ ಪಾವತಿ ಮೂಲಕ ವಸೂಲಿ ಮಾಡಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್ ಭಾಗವಹಿಸಿದ್ದರು.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    4 hrs ago
  • ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ ಪುಟ್ ಪಾತ್ ರಸ್ತೆಯನ್ನ ಒತ್ತುವರಿ ಮಾಡಿಕೊಂಡಿದ್ದ ಕೆಲ ಅಂಗಡಿಗಳ ಮಾಲೀಕರು ಸೀಮೆಂಟ್ ಮೂಲಕ ನಿರ್ಮಿಸಿ ಕೊಂಡಿದ್ದ ಮೆಟ್ಟಿಲುಗಳನ್ನು ಜೆಸಿಬಿಯಿಂದ ತೆರವು ಕಳೆದ ನಾಲ್ಕು ದಿನಗಳ ಹಿಂದೆಯೇ ಒತ್ತುವರಿ ತೆರವು ಮಾಡುವುದಾಗಿ ಸೂಚಿಸಿದ್ದ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣ
    2
    ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ
ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ
ಪುಟ್ ಪಾತ್ ರಸ್ತೆಯನ್ನ ಒತ್ತುವರಿ ಮಾಡಿಕೊಂಡಿದ್ದ ಕೆಲ ಅಂಗಡಿಗಳ ಮಾಲೀಕರು
ಸೀಮೆಂಟ್ ಮೂಲಕ ನಿರ್ಮಿಸಿ ಕೊಂಡಿದ್ದ ಮೆಟ್ಟಿಲುಗಳನ್ನು ಜೆಸಿಬಿಯಿಂದ ತೆರವು
ಕಳೆದ ನಾಲ್ಕು ದಿನಗಳ ಹಿಂದೆಯೇ ಒತ್ತುವರಿ ತೆರವು ಮಾಡುವುದಾಗಿ ಸೂಚಿಸಿದ್ದ ಅಧಿಕಾರಿಗಳು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    18 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.