ವಿದ್ಯುತ್ ಅವಗಡ ರೈತನ ಜಮೀನಿಗೆ ಶಾಸಕ ಭೇಟಿ ಸರ್ಕಾರದ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ.... ವಿದ್ಯುತ್ ಅವಗಡ ರೈತನ ಜಮೀನಿಗೆ ಶಾಸಕ ಭೇಟಿ..! ಜಾನುವಾರು ಕಳೆದುಕೊಂಡ ರೈತನಿಗೆ ಸೂಕ್ತ ಪರಿಹಾರ ಕಲ್ಪಿಸಲು ಶಾಸಕ ಆರ್. ಬಸನಗೌಡ ತುರವಿಹಾಳ ಅಧಿಕಾರಿಗಳಿಗೆ ಸೂಚನೆ. ತುರ್ವಿಹಾಳ: ವಿದ್ಯುತ್ ಅವಘಡದಲ್ಲಿ ರೈತ ಶರಣಪ್ಪ ಮ್ಯಾಗಳಡೊಕ್ಕಿ ಅವರ ಐದು ಜಾನುವಾರುಗಳು ಮೃತಪಟ್ಟಿರುವ ಹಾಗೂ ಇನ್ನೂ ಎರಡು ಜಾನುವಾರುಗಳು ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಸಂಬಂಧಿಸಿದಂತೆ ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆಯ ಗಂಭೀರತೆ ಅರಿತು ಸ್ಥಳಕ್ಕೆ ಆಗಮಿಸಿದ ಶಾಸಕರು, ರೈತ ಶರಣಪ್ಪ ಅವರಿಂದ ಅವಘಡದ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಂಡರು. ಜಾನುವಾರುಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ರೈತನ ನೋವಿಗೆ ಸ್ಪಂದಿಸಿದ ಅವರು, ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರವನ್ನು ತ್ವರಿತವಾಗಿ ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಇನ್ನೂ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಎರಡು ಜಾನುವಾರುಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಹಾಗೂ ಸೂಕ್ತ ಆರೈಕೆ ಕಲ್ಪಿಸುವಂತೆಯೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿದೆ : ವಿದ್ಯುತ್ ಅವಘಡದಿಂದ ರೈತನಿಗೆ ಉಂಟಾಗಿರುವ ನಷ್ಟವನ್ನು ಪರಿಗಣಿಸಿ, ಸರ್ಕಾರದಿಂದ ದೊರೆಯ ಬೇಕಾದ ಪರಿಹಾರವನ್ನು ವಿಳಂಬವಿಲ್ಲದೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂಕಷ್ಟದಲ್ಲಿರುವ ರೈತನ ನೆರವಿಗೆ ನಿಲ್ಲುವುದು ನಮ್ಮ ಜವಾಬ್ದಾರಿ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು. ಶಾಸಕರ ಸ್ಥಳ ಭೇಟಿ ಹಾಗೂ ಅಧಿಕಾರಿಗಳಿಗೆ ನೀಡಿದ ಸೂಚನೆಯಿಂದ ಪರಿಹಾರದ ನಿರೀಕ್ಷೆಯಲ್ಲಿ ಇರುವ ರೈತ ಕುಟುಂಬಕ್ಕೆ ತುಸು ನೆಮ್ಮದಿ ದೊರೆತಂತಾಗಿದೆ.

- ಮಾನ್ವಿಯಲ್ಲಿ ಸಂಭ್ರಮದ ಈದ್ ಮಿಲಾದುನ್ನಬಿ ಮೆರವಣಿಗೆ -ಸಹೋದರತೆಯ ಸಂದೇಶ ಸಾರಿದ ಶಾಸಕ ಹಂಪಯ್ಯ ನಾಯಕ ಮಾನ್ವಿಯಲ್ಲಿ ಸಂಭ್ರಮದ ಈದ್ ಮಿಲಾದುನ್ನಬಿ ಮೆರವಣಿಗೆ -ಸಹೋದರತೆಯ ಸಂದೇಶ ಸಾರಿದ ಶಾಸಕ ಹಂಪಯ್ಯ ನಾಯಕ2
- ಈದ್ ಮಿಲಾದ್: ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಾಲು, ಹಣ್ಣು ವಿತರಣೆ ಮುದಗಲ್: ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಹಜರತ್ ಮಹಮ್ಮದ್ ಮುಸ್ತಫಾ ಪೈಗಂಬರರ ಜನ್ಮದಿನದ ಸ್ಮರಣಾರ್ಥ ಪವಿತ್ರ ಈದ್ ಮಿಲಾದ್ ಹಬ್ಬವನ್ನು ಮುದಗಲ್ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಬುಧವಾರ ಸಂಭ್ರಮ ಹಾಗೂ ಸೌಹಾರ್ದತೆಯಿಂದ ಆಚರಿಸಿದರು. ಈದ್ ಮಿಲಾದ್ ಅಂಗವಾಗಿ ಜುನೈದಿ ವೆಲ್ಫೇರ್ ಟ್ರಸ್ಟ್ ನೇತೃತ್ವದಲ್ಲಿ ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ರೋಗಿಗಳಿಗೆ ಹಾಲು ಮತ್ತು ಹಣ್ಣುಗಳನ್ನು ವಿತರಿಸಲಾಯಿತು. ರೋಗಿಗಳ ಆರೋಗ್ಯ ವಿಚಾರಿಸಿದ ಮುಖಂಡರು, ಹಬ್ಬದ ಸಂದರ್ಭದಲ್ಲಿ ಮಾನವೀಯ ಸೇವೆಯ ಮೂಲಕ ಸೌಹಾರ್ದತೆಯ ಸಂದೇಶ ಸಾರಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವಿಶೇಷ ಕಾರ್ಯದರ್ಶಿ ಚಂದ್ರಶೇಖರ ಎಂ. ಗಂಗಣ್ಣ, ಮುದಗಲ್ ಪಟ್ಟಣ ಭಾವೈಕ್ಯತೆಗೆ ಸಾಕ್ಷಿಯಾಗಿದೆ ಎಂದರು. ಹಿಂದೂ-ಮುಸ್ಲಿಂ ಸಮುದಾಯದವರು ಮೊಹರಂ ಸೇರಿದಂತೆ ವಿವಿಧ ಹಬ್ಬಗಳನ್ನು ಪರಸ್ಪರ ಸಹಕಾರ ಹಾಗೂ ಸೌಹಾರ್ದತೆಯಿಂದ ಆಚರಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ. ಪ್ರವಾದಿಯವರ ಜನ್ಮದಿನದ ಪ್ರಯುಕ್ತ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಮುಸ್ಲಿಂ ಸಮುದಾಯದವರು ಸಹೋದರತ್ವ ಮತ್ತು ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಿದರು. ಮುಖಂಡ ಗುರುಬಸಪ್ಪ ಸಜ್ಜನ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎ. ನಯಿಂ ಮಾತನಾಡಿ, ಧರ್ಮ ಯಾವುದೇ ಆಗಿರಲಿ, ಪ್ರತಿಯೊಬ್ಬರೂ ಮಾನವೀಯತೆಯಿಂದ ಬದುಕಬೇಕು. ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವುದು ಹಾಗೂ ಪರಸ್ಪರ ಸಹಕಾರ ನೀಡುವುದು ಅಗತ್ಯ. ಪ್ರವಾದಿಯವರು ತೋರಿದ ಸನ್ಮಾರ್ಗದಲ್ಲಿ ಎಲ್ಲರೂ ನಡೆದು ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಬೆಳೆಸಬೇಕು ಎಂದರು. ಮುದಗಲ್‌ನಲ್ಲಿ ಹಬ್ಬ-ಹರಿದಿನಗಳನ್ನು ಸೌಹಾರ್ದತೆಯಿಂದ ಆಚರಿಸುತ್ತಿರುವುದು ಭಾವೈಕ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ದೇವಿಂದ್ರ ವಕೀಲ್, ಎಸ್ವೆನ್ ಖಾದ್ರಿ, ಮೈಬೂಬು ಕಡ್ಡಿಪುಡಿ, ಹುಸೇನ್ ಪಾಶಾ, ಮಂಜುನಾಥ ಬನ್ನಿಗೋಹುಸೇನ್,ಅಹ್ಮಿದ್ ಜಮಿನ್ದಾರ್,ಬಸವರಾಜ ಹಿರೆಮನಿ, ಮಾಬು ಹುಸೇನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.4
- ಕಾಲುವೆ ನೀರಿಗಾಗಿ ರೈತರಿಂದ ಸಿರವಾರ ಬಂದ್ ಗೆ ನೀರಸ ಪ್ರತಿಕ್ರಿಯೆ. ನೀರಿಗಾಗಿ ರೈತರಿಂದ ಸಿರವಾರ ಬಂದ್ ನೀರಸ ಪ್ರತಿಕ್ರಿಯೆ. ಸಿರವಾರ: ತುಂಗಭದ್ರಾ ಎಡದಂಡೆ ಕಾಲುವೆಯ ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಬಾರದ ಹಿನ್ನೆಲೆಯಲ್ಲಿ ಇಂದು ರೈತರಿಂದ ಸಿರವಾರ ಪಟ್ಟಣ ಬಂದ್ ಗೆ ಕರೆಕೊಡಲಾಗಿತ್ತು. ಬಂದ್ ಕರೆಗೆ ಪಟ್ಟಣದಲ್ಲಿ ಕೆಲ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಇನ್ನು ಕೆಲ ಅಂಗಡಿಗಳು ಎಂದಿನಂತೆ ವ್ಯಾಪಾರ ವಹಿವಾಟು ಪ್ರಕ್ರಿಯೆಗಳು ನಡೆಸಿದ್ದರು.1
- ಬಸವನಗುಡಿ ಬಳಿ ಈದ್ ಮಿಲಾದ್ ಮೆರವಣಿಗೆ ವೇಳೆ ಮುಸ್ಲಿಂ ಗೂಂಡಾಗಳಿಂದ ಪುನೀತ್ ಕೆರೆಹಳ್ಳಿ ಕಾರ್ಯಾಲಯ ಬಳಿ ಗೂಂಡಾ ವರ್ತನೆ ಕಾರ್ಯಕರ್ತ ಮುರುಳಿಯ ಮೇಲೆ ಹಲ್ಲೆ…1
- ಬನಶಂಕರಿದೇವಿಗೆ ಹರಕೆ ; ಇಳಕಲ್ ದಿಂದ ಪಾದಯಾತ್ರೆ ಹೊರಟ ಕಾಶಪ್ಪನವರ ಅಭಿಮಾನಿಗಳು ಬನಶಂಕರಿದೇವಿಗೆ ಹರಕೆ ; ಇಳಕಲ್ ದಿಂದ ಪಾದಯಾತ್ರೆ ಹೊರಟ ಕಾಶಪ್ಪನವರ ಅಭಿಮಾನಿಗಳು ಇಳಕಲ್: ವಿಜಯಾನಂದ ಕಾಶಪ್ಪನವರ ಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆತ ಹಿನ್ನೆಲೆಯಲ್ಲಿ, ಈ ಹಿಂದೆ ಹೊತ್ತಿದ್ದ ಹರಕೆ ತೀರಿಸಲು ಅವರ ಅಭಿಮಾನಿಗಳು ಇಳಕಲ್ ದಿಂದ ಬನಶಂಕರಿ ದೇವಿಗೆ ಪಾದಯಾತ್ರೆ ಹೊರಟರು.4
- ಕರೆಮ್ಮ ಜಿ ನಾಯಕ್ ಶಾಸಕರ ಹುಟ್ಟು ಹಬ್ಬದ ವಿಶೇಷ ಸಂಚಿಕೆ ನಿಮ್ಮ ಮುಗಿಲಿಗೆ1
- ಈದ್ ಮಿಲಾದ್ ಸಂಭ್ರಮದ ಆಚರಣೆ ದೇವದುರ್ಗದ ಮುಖ್ಯ ರಸ್ತೆ ಮೂಲಕ ಮೆಕ್ಕಾ ಮದೀನಾ ಸ್ಥಬ್ದ ಚಿತ್ರಗಳ ಮೆರವಣಿಗೆ1
- ಅಕ್ರಮ ಜೆಲ್ಲಿ ಸಾಗಣೆ: ಸುಚಿತ್ ಮಿಲೇನಿಯಂ ಕಂಪನಿಯಿಂದ ₹1.06 ಕೋಟಿ ದಂಡ ವಸೂಲಿ ಅಕ್ರಮ ಜೆಲ್ಲಿ ಸಾಗಣೆ: ಸುಚಿತ್ ಮಿಲೇನಿಯಂ ಕಂಪನಿಯಿಂದ ₹1.06 ಕೋಟಿ ದಂಡ ವಸೂಲಿ2