logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹುಳಿಯಾರು ಪಟ್ಟಣ ಪಂಚಾಯ್ತಿ ಗಮನಕ್ಕೆ ಹುಳಿಯಾರು ಬಸ್‌ ನಿಲ್ದಾಣದ ಶೌಚಾಲಯಕ್ಕೆ ಬೀಗ, ಸಾರ್ವಜನಿಕರ ಪರದಾಟ! ಹುಳಿಯಾರು ಪಟ್ಟಣ ಪಂಚಾಯ್ತಿ ಗಮನಕ್ಕೆ ಹುಳಿಯಾರು ಬಸ್‌ ನಿಲ್ದಾಣದ ಶೌಚಾಲಯಕ್ಕೆ ಬೀಗ, ಸಾರ್ವಜನಿಕರ ಪರದಾಟ! ------------------------------ ಹುಳಿಯಾರು: ಪಟ್ಟಣದ ಹೃದಯಭಾಗದಲ್ಲಿರುವ ಬಸ್‌ ನಿಲ್ದಾಣದ ನೂತನ ಸಾರ್ವಜನಿಕ ಶೌಚಾಲಯಕ್ಕೆ ಕಳೆದ 1 ವಾರದಿಂದ ಬೀಗ ಜಡಿಯಲಾಗಿದ್ದು, ಪ್ರಯಾಣಿಕರು ಮತ್ತು ವ್ಯಾಪಾರಿಗಳು ಶೌಚಕ್ಕಾಗಿ ಅಲೆದಾಡುವಂತಾಗಿದೆ. ಆದರೂ ಪಟ್ಟಣ ಪಂಚಾಯಿತಿ ಗಮನ ಹರಿಸದೆ  ನಿರ್ಲಕ್ಷ್ಯಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಬಯಲು ಶೌಚಾಲಯವಾದ ಬಸ್‌ ನಿಲ್ದಾಣ! ಶೌಚಾಲಯಕ್ಕೆ ಬೀಗ ಬಿದ್ದಿರುವ ಪರಿಣಾಮವಾಗಿ ಬಸ್‌ ನಿಲ್ದಾಣದ ಆವರಣದಲ್ಲಿ ಮತ್ತೆ ಬಯಲು ಶೌಚದ ಪಿಡುಗು ಆರಂಭವಾಗಿದೆ. ಹೊರ ಊರುಗಳಿಂದ ಬರುವ ಪ್ರಯಾಣಿಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಶೌಚಾಲಯವಿಲ್ಲದೆ ತೀವ್ರ ಮುಜುಗರ ಮತ್ತು ತೊಂದರೆ ಅನುಭವಿಸುತ್ತಿದ್ದಾರೆ. ಬಸ್‌ ನಿಲ್ದಾಣದ ಸುತ್ತಮುತ್ತಲಿರುವ ನೂರಾರು ಫುಟ್ಬಾತ್‌ ಅಂಗಡಿಯವರು ಹಾಗೂ ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಶೌಚಕ್ಕಾಗಿ ಪರ್ಯಾಯ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದಾರೆ. ಮಹಿಳೆಯರ ಪಾಡು ಹೇಳತೀರದು ಬಸ್‌ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಿರುವುದು ಮಹಿಳಾ ಪ್ರಯಾಣಿಕರಿಗೆ, ಮಹಿಳಾ ಕಂಡಕ್ಟರ್‌ಗಳಿಗೆ ಶಾಪವಾಗಿ ಪರಿಣಮಿಸಿದೆ. ತುರ್ತು ಸಂದರ್ಭಗಳಲ್ಲಿ ಶೌಚಾಲಯ ಸಿಗದೆ ಮಹಿಳೆಯರು ಪಡುತ್ತಿರುವ ಸಂಕಷ್ಟನೋಡುವವರೂ ಇಲ್ಲದಂತಾಗಿದೆ. ಕೆರೆ ಅಂಗಳದಲ್ಲಿ ಒಬ್ಬರು ಕಾವಲಿಗೆ ನಿಂತು ಮತ್ತೊಬ್ಬರು ಶೌಚಕ್ಕೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ. ಹುಳಿಯಾರು ಶೌಚಾಲಯದ ನಿರ್ವಹಣೆಗೆ ಗುತ್ತಿಗೆ ನೀಡಲಾಗಿದ್ದು ಇವರು ಶೌಚಾಲಯ ಲೋಕಾರ್ಪಣೆಗೊಂಡ ದಿನದಿಂದಲೂ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ. ಹತ್ತದಿನೈದು ದಿನ ಬಾಗಿಲು ತೆರೆದರೆ ವಾರಗಟ್ಟಲೆ ಬಾಗಿಲು ಹಾಕಿರುತ್ತಾರೆ. ಅಲ್ಲದೆ ಬಾಗಿಲು ತೆರೆಯುವ ಸಮಯವೂ ನಿಗದಿಯಿಲ್ಲದೆ ಎಂಟೊಭತ್ತು ಗಂಟೆಗೆ ತೆರೆಯುತ್ತಾರೆ. ಹಾಗಾಗಿ ಪಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಶೌಚಾಲಯದ ಬೀಗ ತೆಗೆಸುವ ಮೂಲಕ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.

5 hrs ago
user_Huliyarkiran
Huliyarkiran
ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
5 hrs ago
54368daa-b44e-4165-9dea-86d594c8372c

ಹುಳಿಯಾರು ಪಟ್ಟಣ ಪಂಚಾಯ್ತಿ ಗಮನಕ್ಕೆ ಹುಳಿಯಾರು ಬಸ್‌ ನಿಲ್ದಾಣದ ಶೌಚಾಲಯಕ್ಕೆ ಬೀಗ, ಸಾರ್ವಜನಿಕರ ಪರದಾಟ! ಹುಳಿಯಾರು ಪಟ್ಟಣ ಪಂಚಾಯ್ತಿ ಗಮನಕ್ಕೆ ಹುಳಿಯಾರು ಬಸ್‌ ನಿಲ್ದಾಣದ ಶೌಚಾಲಯಕ್ಕೆ ಬೀಗ, ಸಾರ್ವಜನಿಕರ ಪರದಾಟ! ------------------------------ ಹುಳಿಯಾರು: ಪಟ್ಟಣದ ಹೃದಯಭಾಗದಲ್ಲಿರುವ ಬಸ್‌ ನಿಲ್ದಾಣದ ನೂತನ ಸಾರ್ವಜನಿಕ ಶೌಚಾಲಯಕ್ಕೆ ಕಳೆದ 1 ವಾರದಿಂದ ಬೀಗ ಜಡಿಯಲಾಗಿದ್ದು, ಪ್ರಯಾಣಿಕರು ಮತ್ತು ವ್ಯಾಪಾರಿಗಳು ಶೌಚಕ್ಕಾಗಿ ಅಲೆದಾಡುವಂತಾಗಿದೆ. ಆದರೂ ಪಟ್ಟಣ ಪಂಚಾಯಿತಿ ಗಮನ ಹರಿಸದೆ  ನಿರ್ಲಕ್ಷ್ಯಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಬಯಲು ಶೌಚಾಲಯವಾದ ಬಸ್‌ ನಿಲ್ದಾಣ! ಶೌಚಾಲಯಕ್ಕೆ ಬೀಗ ಬಿದ್ದಿರುವ ಪರಿಣಾಮವಾಗಿ ಬಸ್‌ ನಿಲ್ದಾಣದ ಆವರಣದಲ್ಲಿ ಮತ್ತೆ ಬಯಲು ಶೌಚದ ಪಿಡುಗು ಆರಂಭವಾಗಿದೆ. ಹೊರ ಊರುಗಳಿಂದ ಬರುವ ಪ್ರಯಾಣಿಕರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಶೌಚಾಲಯವಿಲ್ಲದೆ ತೀವ್ರ ಮುಜುಗರ ಮತ್ತು ತೊಂದರೆ ಅನುಭವಿಸುತ್ತಿದ್ದಾರೆ. ಬಸ್‌ ನಿಲ್ದಾಣದ ಸುತ್ತಮುತ್ತಲಿರುವ ನೂರಾರು ಫುಟ್ಬಾತ್‌ ಅಂಗಡಿಯವರು ಹಾಗೂ ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಶೌಚಕ್ಕಾಗಿ ಪರ್ಯಾಯ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದಾರೆ. ಮಹಿಳೆಯರ ಪಾಡು ಹೇಳತೀರದು ಬಸ್‌ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ಬೀಗ ಹಾಕಿರುವುದು ಮಹಿಳಾ ಪ್ರಯಾಣಿಕರಿಗೆ, ಮಹಿಳಾ ಕಂಡಕ್ಟರ್‌ಗಳಿಗೆ ಶಾಪವಾಗಿ ಪರಿಣಮಿಸಿದೆ. ತುರ್ತು ಸಂದರ್ಭಗಳಲ್ಲಿ ಶೌಚಾಲಯ ಸಿಗದೆ ಮಹಿಳೆಯರು ಪಡುತ್ತಿರುವ ಸಂಕಷ್ಟನೋಡುವವರೂ ಇಲ್ಲದಂತಾಗಿದೆ. ಕೆರೆ ಅಂಗಳದಲ್ಲಿ ಒಬ್ಬರು ಕಾವಲಿಗೆ ನಿಂತು ಮತ್ತೊಬ್ಬರು ಶೌಚಕ್ಕೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ. ಹುಳಿಯಾರು ಶೌಚಾಲಯದ ನಿರ್ವಹಣೆಗೆ ಗುತ್ತಿಗೆ ನೀಡಲಾಗಿದ್ದು ಇವರು ಶೌಚಾಲಯ ಲೋಕಾರ್ಪಣೆಗೊಂಡ ದಿನದಿಂದಲೂ ನಿರ್ವಹಣೆಯಲ್ಲಿ ವಿಫಲವಾಗಿದ್ದಾರೆ. ಹತ್ತದಿನೈದು ದಿನ ಬಾಗಿಲು ತೆರೆದರೆ ವಾರಗಟ್ಟಲೆ ಬಾಗಿಲು ಹಾಕಿರುತ್ತಾರೆ. ಅಲ್ಲದೆ ಬಾಗಿಲು ತೆರೆಯುವ ಸಮಯವೂ ನಿಗದಿಯಿಲ್ಲದೆ ಎಂಟೊಭತ್ತು ಗಂಟೆಗೆ ತೆರೆಯುತ್ತಾರೆ. ಹಾಗಾಗಿ ಪಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಶೌಚಾಲಯದ ಬೀಗ ತೆಗೆಸುವ ಮೂಲಕ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.

More news from ಕರ್ನಾಟಕ and nearby areas
  • ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ರೈತರು ಅಹೋರಾತ್ರಿ ಧರಣೀಯ ಮುಂದುವರಿಸಿದ್ದಾರೆ
    4
    ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ರೈತರು ಅಹೋರಾತ್ರಿ ಧರಣೀಯ ಮುಂದುವರಿಸಿದ್ದಾರೆ
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    6 hrs ago
  • ಕುಣಿಗಲ್ ತಾಲೂಕು ಯಡಿಯೂರು ಹೋಬಳಿ ಗ್ರಾಮಗಳಿಗೆ ಸುಮಾರು 6.50 ಕೋಟಿ ರೂ ಅಧಿಕ ಅಭಿವೃದ್ಧಿ ಕಾಮಗಾರಿ ನಾಗಸಂದ್ರ ಹುಲಿವಾನ ಅಕ್ಕಿ ಮರಿಪಾಳ್ಯ ಹೆಡ್ಡಿಗೆರೆ ಜೆಡ್ಡಿಗೆರೆ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಘಟಕ ಮತ್ತು ರಸ್ತೆ ಚರಂಡಿ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ ನೆರವೇರಿಸಿದರು
    1
    ಕುಣಿಗಲ್ ತಾಲೂಕು ಯಡಿಯೂರು ಹೋಬಳಿ ಗ್ರಾಮಗಳಿಗೆ ಸುಮಾರು 6.50 ಕೋಟಿ ರೂ ಅಧಿಕ ಅಭಿವೃದ್ಧಿ ಕಾಮಗಾರಿ ನಾಗಸಂದ್ರ ಹುಲಿವಾನ ಅಕ್ಕಿ ಮರಿಪಾಳ್ಯ ಹೆಡ್ಡಿಗೆರೆ ಜೆಡ್ಡಿಗೆರೆ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಘಟಕ ಮತ್ತು ರಸ್ತೆ ಚರಂಡಿ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ ನೆರವೇರಿಸಿದರು
    user_Gopala N
    Gopala N
    Local News Reporter ಕುಣಿಗಲ್, ತುಮಕೂರು, ಕರ್ನಾಟಕ•
    34 min ago
  • ಹೊಳಲ್ಕೆರೆಯನ್ನ ಬರಪೀಡಿತ ತಾಲ್ಲೂಕಾಗಿ ಘೋಷಿಸುವಂತೆ ರೈತ ಸಂಘದಿಂದ ತಹಶಿಲ್ದಾರ್ ಗೆ ಮನವಿ ಹೊಳಲ್ಕೆರೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಒತ್ತಾಯಿಸಿ ತಹಶಿಲ್ದಾರ್ ಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು. ಹೊಸ ತಾಲೂಕ್ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಿದ್ದಾರೆ. ಹೊಳಲ್ಕೆರೆ ತಾಲೂಕಿನಾಧ್ಯಂತ ಭೀಕರ ಬರಗಾಲ ತಾಂಡವವಾಡುತ್ತಿದ್ದು ಮುಂಗಾರುಮಳೆ ಮುಗಿಯುತ್ತಾ ಬಂದಿದ್ದು ತಾಲೂಕಿನಾಧ್ಯಂತ ಶೇಕಡ 25ರಷ್ಟು ಮಾತ್ರ ಬಿತ್ತನೆ ಮಾಡಿದ್ದು ಉಳಿದ 75ರಷ್ಟು ಭೂಮಿ ಬಿತ್ತನೆ ಮಾಡದೆ ರೈತರು ಮುಗಿಲು ನೋಡುತ್ತ ಕುಳಿತಿದ್ದಾರೆ, ಕೊಳವೆ ಬಾವಿಗಳೆಲ್ಲ ಬತ್ತಿದ್ದು ಕುಡಿಯುವ ನೀರಿಗಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು, ಜಾನುವಾರುಗಳು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ, ರೈತರು ಸಾಲ ಮಾಡಿ ಬೀಜ ಗೊಬ್ಬರ ತಂದು ಭೂಮಿಗೆ ಹಾಕಿ ಕೈಚೆಲ್ಲಿದ್ದಾರೆ. ಈ ಹಿನ್ನೆಲೆ ಸರ್ಕಾರವು ಶೀಘ್ರವೇ ಹೊಳಲ್ಕೆರೆ ತಾಲೂಕನ್ನು ಬರಪೀಡಿತ ಪ್ರದೇಶವನ್ನು ಘೋಷಣೆ ಮಾಡಬೇಕು ಎಂದು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದ್ದಾರೆ.
    1
    ಹೊಳಲ್ಕೆರೆಯನ್ನ ಬರಪೀಡಿತ ತಾಲ್ಲೂಕಾಗಿ ಘೋಷಿಸುವಂತೆ ರೈತ ಸಂಘದಿಂದ ತಹಶಿಲ್ದಾರ್ ಗೆ ಮನವಿ
ಹೊಳಲ್ಕೆರೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಒತ್ತಾಯಿಸಿ ತಹಶಿಲ್ದಾರ್ ಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು.  ಹೊಸ ತಾಲೂಕ್ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಿದ್ದಾರೆ.  ಹೊಳಲ್ಕೆರೆ ತಾಲೂಕಿನಾಧ್ಯಂತ ಭೀಕರ ಬರಗಾಲ ತಾಂಡವವಾಡುತ್ತಿದ್ದು ಮುಂಗಾರುಮಳೆ ಮುಗಿಯುತ್ತಾ ಬಂದಿದ್ದು ತಾಲೂಕಿನಾಧ್ಯಂತ ಶೇಕಡ 25ರಷ್ಟು ಮಾತ್ರ ಬಿತ್ತನೆ ಮಾಡಿದ್ದು ಉಳಿದ 75ರಷ್ಟು ಭೂಮಿ ಬಿತ್ತನೆ ಮಾಡದೆ ರೈತರು ಮುಗಿಲು ನೋಡುತ್ತ ಕುಳಿತಿದ್ದಾರೆ, ಕೊಳವೆ ಬಾವಿಗಳೆಲ್ಲ ಬತ್ತಿದ್ದು ಕುಡಿಯುವ ನೀರಿಗಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು, ಜಾನುವಾರುಗಳು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ, ರೈತರು ಸಾಲ ಮಾಡಿ ಬೀಜ ಗೊಬ್ಬರ ತಂದು ಭೂಮಿಗೆ ಹಾಕಿ ಕೈಚೆಲ್ಲಿದ್ದಾರೆ. ಈ ಹಿನ್ನೆಲೆ ಸರ್ಕಾರವು ಶೀಘ್ರವೇ ಹೊಳಲ್ಕೆರೆ ತಾಲೂಕನ್ನು ಬರಪೀಡಿತ ಪ್ರದೇಶವನ್ನು ಘೋಷಣೆ ಮಾಡಬೇಕು ಎಂದು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • *ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆ *ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ದಿನಾಂಕ:28-07- 2026 ರಂದು ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರ್ಜಾರಿ ಪ್ರೌಢಶಾಲೆಯ ಅವನದ ಬಯಲು ರಂಗ ಮಂದಿರದ ಮುಂಭಾಗದಲ್ಲಿ ನಡೆದ ನಾಯಕನಹಟ್ಟಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಥಮ:ನಿತೀಶ್ ಮತ್ತು ತಂಡ ಕಬಡ್ಡಿ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆ ಕ್ರೀಡಾಪಟುಗಳಾಗಿದ್ದಾರೆ ವಿನಯ್ ಕುಮಾರ್ ಮತ್ತು ತಂಡ ವಾಲಿಬಾಲ್ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ *ಖೋ ಖೋ* ದ್ವಿತೀಯ: ತ್ರಿಶಾ ಮತ್ತು ತಂಡ *ಎತ್ತರ ಜಿಗಿತ* ತೃತೀಯ : ಮೇಘನಾ *400 ಮೀಟರ್ ಓಟ* ತೃತೀಯ: ತಿಪ್ಪೇಸ್ವಾಮಿ ಎಲ್ಲಾ ಕ್ರೀಡಾಪಟುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ಕೆ.ಎಸ್. ಕೆ.ಎಸ್,ಮುಖ್ಯ ಶಿಕ್ಷಕಕರಾದ ನಿರ್ಮಲ B, ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಾಟಯ್ಯ , ಶಿಕ್ಷಕರಾದ ನಾಗಭೂಷಣ್, B.P ಹಾಗೂ ಊರಿನ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
    1
    *ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆ
*ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ಚಳ್ಳಕೆರೆ ತಾಲ್ಲೂಕಿನ
ನಾಯಕನಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ದಿನಾಂಕ:28-07- 2026 ರಂದು ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರ್ಜಾರಿ ಪ್ರೌಢಶಾಲೆಯ ಅವನದ ಬಯಲು ರಂಗ ಮಂದಿರದ ಮುಂಭಾಗದಲ್ಲಿ ನಡೆದ  ನಾಯಕನಹಟ್ಟಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
ಪ್ರಥಮ:ನಿತೀಶ್ ಮತ್ತು ತಂಡ   ಕಬಡ್ಡಿ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆ ಕ್ರೀಡಾಪಟುಗಳಾಗಿದ್ದಾರೆ
ವಿನಯ್ ಕುಮಾರ್ ಮತ್ತು ತಂಡ ವಾಲಿಬಾಲ್ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
*ಖೋ ಖೋ* ದ್ವಿತೀಯ: ತ್ರಿಶಾ ಮತ್ತು ತಂಡ 
*ಎತ್ತರ ಜಿಗಿತ* ತೃತೀಯ : ಮೇಘನಾ 
*400 ಮೀಟರ್ ಓಟ* ತೃತೀಯ: ತಿಪ್ಪೇಸ್ವಾಮಿ ಎಲ್ಲಾ ಕ್ರೀಡಾಪಟುಗಳಿಗೆ
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ಕೆ.ಎಸ್. ಕೆ.ಎಸ್,ಮುಖ್ಯ ಶಿಕ್ಷಕಕರಾದ  ನಿರ್ಮಲ B, ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಾಟಯ್ಯ , ಶಿಕ್ಷಕರಾದ  ನಾಗಭೂಷಣ್,  B.P
ಹಾಗೂ ಊರಿನ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    2 hrs ago
  • ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಆರು ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ದಿನ ಹಾಕಿದ್ದ ಗಿಡಗಳು ಇಂದು ಫಸಲು ಬಿಡುತ್ತಿದ್ದವು. ಆದರೆ ಇದನ್ನು ಕಡಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು FIR ದಾಖಲಿಸಲು ಆಗ್ರಹಿಸಿದರು. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗೋಪ್ಯಾನಾಯ್ಕ ಅವರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿ ಪ್ರಭುಶಂಕರ್ ಮತ್ತು ಸಿಬ್ಬಂದಿ ಗಳು ಆಗಮಿಸಿ ಮಹಜರು ಮಾಡಿದರು. ಇದೇ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷರಾದ ಮಾಲತೇಶ್ ಅರಸ್ , ಜೋಗಿಮಟ್ಟಿ ಗೆಳೆಯರ ಬಳದ ಮಾರ್ಗದರ್ಶಕ ರಾಜಣ್ಣ , ಮಾಜಿ ಅಧ್ಯಕ್ಷರಾದ ರವಿಕುಮಾರ್, ರಾಘವೇಂದ್ರ, ಕಾರ್ಯದರ್ಶಿ ಮಂಜುನಾಥ್ , ರವಿಬಡಗಿ ಇತರರು ಇದ್ದರು. ಬೈಟ್: ರಾಜಣ್ಣ
    2
    ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ

ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ  ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ
ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ
ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ  ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಆರು ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ದಿನ ಹಾಕಿದ್ದ ಗಿಡಗಳು ಇಂದು ಫಸಲು ಬಿಡುತ್ತಿದ್ದವು. ಆದರೆ ಇದನ್ನು ಕಡಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು FIR ದಾಖಲಿಸಲು ಆಗ್ರಹಿಸಿದರು.
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗೋಪ್ಯಾನಾಯ್ಕ ಅವರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿ ಪ್ರಭುಶಂಕರ್ ಮತ್ತು ಸಿಬ್ಬಂದಿ ಗಳು ಆಗಮಿಸಿ ಮಹಜರು ಮಾಡಿದರು.
ಇದೇ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷರಾದ ಮಾಲತೇಶ್ ಅರಸ್ , ಜೋಗಿಮಟ್ಟಿ ಗೆಳೆಯರ ಬಳದ ಮಾರ್ಗದರ್ಶಕ ರಾಜಣ್ಣ , ಮಾಜಿ ಅಧ್ಯಕ್ಷರಾದ ರವಿಕುಮಾರ್, ರಾಘವೇಂದ್ರ, ಕಾರ್ಯದರ್ಶಿ ಮಂಜುನಾಥ್ , ರವಿಬಡಗಿ ಇತರರು ಇದ್ದರು. 
ಬೈಟ್: ರಾಜಣ್ಣ
    user_Nagesh BR Durgavara
    Nagesh BR Durgavara
    Photographer Chitradurga, Karnataka•
    15 hrs ago
  • ಕನ್ನಡ ಚಿತ್ರರಂಗ ಕೆಟ್ಟು ಕೆರ ಹಿಡಿದಿದೆ, ನಟಿ ರಾಗಿಣಿ ವರ್ತನೆಗೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಆಕ್ರೋಶ ಮಂಡ್ಯ-ಮಂಡ್ಯದಲ್ಲಿ ಕಾವೇರಿ ವಿಚಾರವಾಗಿ ನಟಿ ರಾಗಿಣಿ ವರ್ತನೆಗೆ ವಿರೋಧವ್ಯಕ್ತ ಪಡಿಸಿದ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಹೇಳಿದ್ದಿಷ್ಟು
    1
    ಕನ್ನಡ ಚಿತ್ರರಂಗ ಕೆಟ್ಟು ಕೆರ ಹಿಡಿದಿದೆ, ನಟಿ ರಾಗಿಣಿ ವರ್ತನೆಗೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಆಕ್ರೋಶ
ಮಂಡ್ಯ-ಮಂಡ್ಯದಲ್ಲಿ ಕಾವೇರಿ ವಿಚಾರವಾಗಿ ನಟಿ ರಾಗಿಣಿ ವರ್ತನೆಗೆ ವಿರೋಧವ್ಯಕ್ತ ಪಡಿಸಿದ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಯೋಗಣ್ಣ ಹೇಳಿದ್ದಿಷ್ಟು
    user_Arunprasad G B
    Arunprasad G B
    Local News Reporter ಮಂಡ್ಯ, ಮಂಡ್ಯ, ಕರ್ನಾಟಕ•
    13 hrs ago
  • ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಅಹೋರಾತ್ರಿ ಧರಣೀಯ ಎರಡನೇ ದಿನದ ರಾತ್ರಿಲ್ಲೂ ಕೂಡ ಅರಿತರು ಜಗ್ಗದೆ ಧರಣಿ ಮುಂದುವರಿಸುತ್ತಿರುವುದು
    1
    ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ನಡೆಯುತ್ತಿರುವ ಅಹೋರಾತ್ರಿ ಧರಣೀಯ ಎರಡನೇ ದಿನದ ರಾತ್ರಿಲ್ಲೂ ಕೂಡ ಅರಿತರು ಜಗ್ಗದೆ ಧರಣಿ ಮುಂದುವರಿಸುತ್ತಿರುವುದು
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    14 hrs ago
  • ಅಪಘಾತವಾದಾಗ ರಸ್ತೆಯಲ್ಲಿ ಟಮೋಟೊ ಬ್ಯಾಗುಗಳಿಗೆ ಟೊಮೊಟೊ ತುಂಬಿದ ಪಿ ಎಸ್ ಐ ಶಿರಾ ಅಪಘಾತದ ಆಘಾತದಲ್ಲಿ ಕಣ್ಣೀರಿಡುತ್ತಿದ್ದ ಆ ರೈತನಿಗೆ, ನೋವಿನ ಕಡಲಲ್ಲಿ ಮುಳುಗಿದ್ದ ಆ ಬದುಕಿಗೆ... ಇಂದು ಆಸರೆಯಾಗಿದ್ದು ಖಾಕಿ ಧರಿಸಿದ ಕರುಣೆಯ ಮನಸ್ಸು > ಹೌದು, ಶಿರಾ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವಕುಮಾರ್ ಮತ್ತು ಅವರ ತಂಡ, ಕೇವಲ ಕರ್ತವ್ಯಕ್ಕೆ ಮಾತ್ರ ಸೀಮಿತವಾಗಲಿಲ್ಲ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆ ಹಸಿರು-ಕೆಂಪು ಬಣ್ಣದ ಟೊಮೆಟೊಗಳನ್ನು ನೋಡಿ ಅಳುತ್ತಿದ್ದ ರೈತನ ಕಣ್ಣೀರು ಒರೆಸಲು ಸ್ವತಃ ತಾವೇ ಮುಂದಾದರು! > ಸಿಬ್ಬಂದಿಯನ್ನು, ಸಾರ್ವಜನಿಕರನ್ನು ಒಟ್ಟುಗೂಡಿಸಿ, ತಮ್ಮ ಕೈಯಿಂದಲೇ ಕ್ರೇಟ್‌ಗಳಲ್ಲಿ ಹಣ್ಣುಗಳನ್ನು ತುಂಬಿಸಿ, ಮತ್ತೊಂದು ಲಾರಿಗೆ ಸುರಕ್ಷಿತವಾಗಿ ಲೋಡ್ ಮಾಡಿಸಿ ಕಳುಹಿಸಿದ ಆ ಕ್ಷಣ... ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಅತಿ ದೊಡ್ಡ ಸಾಕ್ಷಿ. > ಕಷ್ಟದಲ್ಲಿದ್ದ ಅನ್ನದಾತನಿಗೆ ಕೈಹಿಡಿದು ನಿಂತ ನಮ್ಮ ಹೆಮ್ಮೆಯ ಪೊಲೀಸರಿಗೆ ಹ್ಯಾಟ್ಸಾಫ್ ಹೇಳಲೇಬೇಕು!" >
    1
    ಅಪಘಾತವಾದಾಗ ರಸ್ತೆಯಲ್ಲಿ ಟಮೋಟೊ ಬ್ಯಾಗುಗಳಿಗೆ ಟೊಮೊಟೊ  ತುಂಬಿದ ಪಿ ಎಸ್ ಐ 
ಶಿರಾ ಅಪಘಾತದ ಆಘಾತದಲ್ಲಿ ಕಣ್ಣೀರಿಡುತ್ತಿದ್ದ ಆ ರೈತನಿಗೆ, ನೋವಿನ ಕಡಲಲ್ಲಿ ಮುಳುಗಿದ್ದ ಆ ಬದುಕಿಗೆ... ಇಂದು ಆಸರೆಯಾಗಿದ್ದು ಖಾಕಿ ಧರಿಸಿದ ಕರುಣೆಯ ಮನಸ್ಸು 
> ಹೌದು, ಶಿರಾ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವಕುಮಾರ್ ಮತ್ತು ಅವರ ತಂಡ, ಕೇವಲ ಕರ್ತವ್ಯಕ್ಕೆ ಮಾತ್ರ ಸೀಮಿತವಾಗಲಿಲ್ಲ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆ ಹಸಿರು-ಕೆಂಪು ಬಣ್ಣದ ಟೊಮೆಟೊಗಳನ್ನು ನೋಡಿ ಅಳುತ್ತಿದ್ದ ರೈತನ ಕಣ್ಣೀರು ಒರೆಸಲು ಸ್ವತಃ ತಾವೇ ಮುಂದಾದರು!
> ಸಿಬ್ಬಂದಿಯನ್ನು, ಸಾರ್ವಜನಿಕರನ್ನು ಒಟ್ಟುಗೂಡಿಸಿ, ತಮ್ಮ ಕೈಯಿಂದಲೇ ಕ್ರೇಟ್‌ಗಳಲ್ಲಿ ಹಣ್ಣುಗಳನ್ನು ತುಂಬಿಸಿ, ಮತ್ತೊಂದು ಲಾರಿಗೆ ಸುರಕ್ಷಿತವಾಗಿ ಲೋಡ್ ಮಾಡಿಸಿ ಕಳುಹಿಸಿದ ಆ ಕ್ಷಣ... ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಅತಿ ದೊಡ್ಡ ಸಾಕ್ಷಿ.
> ಕಷ್ಟದಲ್ಲಿದ್ದ ಅನ್ನದಾತನಿಗೆ ಕೈಹಿಡಿದು ನಿಂತ ನಮ್ಮ ಹೆಮ್ಮೆಯ ಪೊಲೀಸರಿಗೆ ಹ್ಯಾಟ್ಸಾಫ್ ಹೇಳಲೇಬೇಕು!"
>
    user_ಪ್ರಸನ್ನ ದೊಡ್ಡಗುಣಿ
    ಪ್ರಸನ್ನ ದೊಡ್ಡಗುಣಿ
    ಗುಬ್ಬಿ, ತುಮಕೂರು, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.