ಪಿಎಸ್ಐ ಸಂಗೀತಾ ಸಿಂಧೆ ನೇತೃತ್ವದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ. ಚಾಲಕರು ರಸ್ತೆ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸಿಂಧೆ ಸೂಚನೆ. ಅಫಜಲಪೂರ : ತಾಲೂಕಿನ ದೇವಲ ಗಾಣಗಾಪುರದಲ್ಲಿ ಠಾಣೆಯ ಪಿಎಸ್ಐ ಸಂಗೀತಾ ಸಿಂಧೆ ನೇತೃತ್ವದಲ್ಲಿ ಹಾಗೂ ನೆರವು ನಮ್ಮದು ನ್ಯಾಯ ನಿಮ್ಮದು.ಎಂಬ ಘೋಷ-ವಾಕ್ಯದೊಂದಿಗೆ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಅಫಜಲಪೂರ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ದೆ. ಗಾಣಗಾಪುರ ಇವರ ಸಂಯುಕ್ತಾಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದರು. ವಾಹನ ಚಾಲಕರಿಗೆ ಸುರಕ್ಷಿತ ಚಾಲನೆಯ ಮಹತ್ವದ ಕುರಿತು ವಿವರಿಸಿ, ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಬಳಸುವುದು, ಮೊಬೈಲ್ ಫೋನ್ ಬಳಸದೇ ವಾಹನ ಚಾಲನೆ ಮಾಡುವುದು ಹಾಗೂ ಮದ್ಯಪಾನ ಮಾಡಿ ಚಾಲನೆ ಮಾಡುವುದನ್ನು ತಪ್ಪಿಸುವಂತೆ ಸೂಚಿಸಲಾಯಿತು. ಇದೇ ವೇಳೆ, ಟ್ರಾಫಿಕ್ ನಿಯಮ ಉಲ್ಲಂಘನೆಗಳಿಂದ ಸಂಭವಿಸುವ ಅಪಘಾತಗಳ ಬಗ್ಗೆ ಉದಾಹರಣೆಗಳೊಂದಿಗೆ ತಿಳುವಳಿಕೆ ನೀಡಲಾಯಿತು. ರಸ್ತೆ ದಾಟುವ ವೇಳೆ ಪಾದಚಾರಿಗಳು ಜೀಬ್ರಾ ಕ್ರಾಸಿಂಗ್ ಬಳಸಬೇಕು, ವಾಹನ ಚಾಲಕರು ವೇಗ ನಿಯಂತ್ರಣದಲ್ಲಿರಬೇಕು ಹಾಗೂ ಸಿಗ್ನಲ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಲಾಯಿತು. ವಿದ್ಯಾರ್ಥಿಗಳು ಮತ್ತು ಯುವಕರಿಗೂ ರಸ್ತೆ ಸುರಕ್ಷತೆ ಕುರಿತು ವಿಶೇಷವಾಗಿ ಜಾಗೃತಿ ಮೂಡಿಸಿದರು.ಜೊತೆಗೆ ಕೆಲವು ವಾಹನ ಚಾಲಕರಿಗೆ ಪಾಂಪ್ಲೆಟ್‌ಗಳನ್ನು ವಿತರಿಸಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಮಾಹಿತಿ ಹಂಚಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ, ಎಲ್ಲರೂ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿ, ಸ್ಥಳೀಯರು ಹಾಗೂ ವಾಹನ ಚಾಲಕರು ಉಪಸ್ಥಿತರಿದ್ದರು.

- Post by Nava karnataka News channel1
- ಹೌದು ವೀಕ್ಷಕರೇ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದಕ್ಷಿಣದ ಕಾಶಿ ಎಂದೇ ಪ್ರಸಿದ್ಧವಾದ ತಿಂತಿಣಿ ಮೌನೇಶ್ವರ ದೇವಸ್ಥಾನದ ಸಮೀಪ ಈ ದುರ್ಘಟನೆ ನಡೆದಿದೆ ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಸಂಭವಿಸಿದ ಈ ಅಪಘಾತವು ಮನಕಲಕುವಂತಾಗಿದೆ. ಈ ಘಟನೆಯಲ್ಲಿ 7 ಜನ ಸ್ಥಳದಲ್ಲಿಯೇ ಸಜೀವ ದಹನ ಹೊಂದಿದ್ದಾರೆ ಎಂದು ತಿಳಿದುಬಂದಿದ್ದು, ಮತ್ತೂ ಮೂವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಕೆಲವು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಜೀವ ದಹನ ಹೊಂದಿದವರ ದೇಹಗಳು ಸಂಪೂರ್ಣವಾಗಿ ಕರಕಲಾಗಿ ಹೋಗಿದ್ದು,ತಲೆ ಬುರುಡೆ ಮಾತ್ರ ಪತ್ತೆಯಾಗಿದೆ.ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ವರದಿ :: ಸಿಎಂ ಮಕಾಂದಾರ1
- ಅಫಜಲಪುರ ತಾಲೂಕಿನ ಅತನೂರದಲ್ಲಿ ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ಭಕ್ತಿಭಾವದಿಂದ ನಡೆಯುತ್ತಿದೆ. ಮಹಾಪುರಾಣ, ಲಕ್ಷ ದೀಪೋತ್ಸವ, ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. #Afzalpur #Athanur #Jatre #NandiBasaveshwara #KannadaNews #Suddi9tv #Devotional #Festival #Karnataka1
- ಅಭಿವೃದ್ಧಿ ಕಡೆ ಗಮನಹರಿಸಿ ವೈಯಕ್ತಿಕ ಕಿತ್ತಾಟ ಬಿಡಿ. ತಾಲೂಕಿನ ರಾಜಕೀಯ ಬೆಳವಣಿಗೆ ಕುರಿತು ನಾಟಕ ಬರೆಯುತ್ತೇನೆ: ಕಲಾವಿದ ಚಂದು ಬನ್ನಟ್ಟಿ.1
- Post by Kalyan karanataka news channel1
- ವಿಜಯಪುರ: ಉಪಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಗೆಲುವು ನಿಶ್ಚಿತ ವಿಜಯಪುರದಲ್ಲಿ ಶನಿವಾರದಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಇಬ್ಬರು ಅಭ್ಯರ್ಥಿಗಳು ಗೆಲ್ಲುವುದು ಶತಸಿದ್ದ ಎಂದರು. ಈಗಾಗಲೇ ಕಾಂಗ್ರೆಸ್ ನವರು ಹತಾಶರಾಗಿ ಅವರ ಪಕ್ಷದ ನಾಯಕರ ಮೇಲೆ ಆರೋಪ ಮಾಡಲು ಮುಂದಾಗಿದ್ದಾರೆ. ನಮ್ಮ ಅಭ್ಯರ್ಥಿಗಳು ಗೆಲ್ಲುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಅವರು ಹೇಳಿದರು. ಈ ಗೆಲವು ನಮ್ಮ ಪಕ್ಷದ ಗೆಲುವಾಗಿರುತ್ತದೆ ಎಂದು ಅವರು ತಿಳಿಸಿದರು.1
- ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ ಗ್ರಾಮದಲ್ಲಿ ಯುದ್ಧದ ಭೀತಿಯಲ್ಲಿರುವ ಇರಾನಿ ಮತ್ತು ಇಸ್ರೇಲ್ ಯುದ್ಧದ ಕಾಲದಲ್ಲಿ ನಮ್ಮ ಕರ್ನಾಟಕದಲ್ಲಿ ಕೂಡ ಎಲ್ಪಿಜಿ ಗ್ಯಾಸ್ ಏಜೆನ್ಸಿ ತುಂಬಾ ತೊಂದರೆಯಾಗುತ್ತಿದೆ ಮೂರು ದಿನಗಳ ಕಾಲ ಕ್ಯೂ ಅಲ್ಲಿ ನಿಂತು ಜನರು ತೊಂದರೆ ಅನುಭವಿಸುತ್ತಿದ್ದಾರೆ1
- “ಅಫಜಲಪುರದ Kalam College ಗೆ ಮೊದಲ ಸ್ಥಾನ / 98% ಅಂಕಗಳೊಂದಿಗೆ ವಿದ್ಯಾರ್ಥಿಗಳ ಭರ್ಜರಿ ಸಾಧನೆ ... #PUC2026 #Afzalpur #KalamCollege #Topper #EducationNews #KarnatakaNews #StudentSuccess #ExamResults #neravaani news#KannadaNews1