Shuru
Apke Nagar Ki App…
ನಾಳೆ (ಆಗಸ್ಟ್ 28) ಜಿಲ್ಲೆಗೆ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಭೇಟಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗಾರೆಡ್ಡಿ ಅವರು ಆಗಸ್ಟ್, 28 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನ್ಯ ಸಚಿವರು ಆಗಸ್ಟ್, 28 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷಗಳಿಗೆ ಸಂಬಂಧಿಸಿದಂತೆ ಜನ ಪ್ರತಿನಿಧಿಗಳು, ಸಂಘಟನೆಗಳು ಹಾಗೂ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಕೆ.ಎಸ್.ಜಗದೀಶ ರೆಡ್ಡಿ ಅವರು ತಿಳಿಸಿದ್ದಾರೆ.
Kodagu Updates
ನಾಳೆ (ಆಗಸ್ಟ್ 28) ಜಿಲ್ಲೆಗೆ ಅರಣ್ಯ ಸಚಿವ ರಾಮಲಿಂಗ ರೆಡ್ಡಿ ಭೇಟಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ರಾಮಲಿಂಗಾರೆಡ್ಡಿ ಅವರು ಆಗಸ್ಟ್, 28 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನ್ಯ ಸಚಿವರು ಆಗಸ್ಟ್, 28 ರಂದು ಮಧ್ಯಾಹ್ನ 2 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷಗಳಿಗೆ ಸಂಬಂಧಿಸಿದಂತೆ ಜನ ಪ್ರತಿನಿಧಿಗಳು, ಸಂಘಟನೆಗಳು ಹಾಗೂ ಅರಣ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಕೆ.ಎಸ್.ಜಗದೀಶ ರೆಡ್ಡಿ ಅವರು ತಿಳಿಸಿದ್ದಾರೆ.
More news from ಕರ್ನಾಟಕ and nearby areas
- ಕೊಡಗಿನಲ್ಲಿ ಮೋಡ ಬಿತ್ತನೆ ಅವಶ್ಯಕತೆ ಇಲ್ಲ, ಶಾಸಕ ಮಂತರ್ ಗೌಡ ಸ್ಪಷ್ಟನೆ ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಹಾಗಾಗಿ ಮೋಡ ಬಿತ್ತನೆ ಮಾಡುವ ಅವಶ್ಯಕತೆ ಇಲ್ಲ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸ್ಪಷ್ಟಪಡಿಸಿದ್ದಾರೆ.1
- All About,Could you please Sir ji, Clear about your statement for "Concrete Road Aane ke Inkamath Hai" *ಭಾರತ ನಲ್ಲಿ ವೈರಲ್*1
- ಮೈಸೂರು ಅರಣ್ಯ ಭವನದಲ್ಲಿ ಆನೆಗಳ ವೀಕ್ಷಣೆಗೆ ನಿರ್ಬಂಧಗಳ ಬಿಗಿ – ದೂರದಿಂದಲೇ ದರ್ಶನ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ನಗರದಲ್ಲಿ ಗಜಪಡೆಯ ಸಂಚಾರ ಆರಂಭವಾಗಿದ್ದು, ಅರಣ್ಯ ಭವನದಲ್ಲಿ ತಂಗಿರುವ ಆನೆಗಳನ್ನು ನೋಡಲು ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಆನೆಗಳ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ವೀಕ್ಷಣೆಗೆ ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಿದೆ. ಅರಣ್ಯ ಭವನದ ಆವರಣದಲ್ಲಿ ಇರುವ ಆನೆಗಳ ಬಳಿ ತೆರಳಿ ಸೆಲ್ಫಿ, ಫೋಟೋ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಆನೆಗಳೊಂದಿಗೆ ಅತೀ ಸಮೀಪದಲ್ಲಿ ನಿಂತು ಚಿತ್ರ ತೆಗೆಯುವುದು ಅಪಾಯಕಾರಿಯಾಗಿರುವುದರಿಂದ ಸಾರ್ವಜನಿಕರು ನಿಗದಿತ ಅಂತರದಿಂದಲೇ ಆನೆಗಳನ್ನು ವೀಕ್ಷಿಸುವಂತೆ ಸೂಚಿಸಲಾಗಿದೆ. ಇದರಿಂದ ಆನೆಗಳಿಗೆ ಯಾವುದೇ ರೀತಿಯ ತೊಂದರೆ, ಆತಂಕ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆನೆಗಳನ್ನು ಹತ್ತಿರದಿಂದ ನೋಡಲು ಸಾಧ್ಯವಾಗದಿದ್ದರೂ, ಅರಣ್ಯ ಭವನದ ಸುತ್ತಮುತ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ದೂರದಿಂದಲೇ ಗಜಪಡೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಅರಣ್ಯ ಭವನದ ಮುಖ್ಯ ಗೇಟ್ ಬಳಿಯಲ್ಲಿ ಜನರು ನಿಂತು ಆನೆಗಳ ಚಲನವಲನವನ್ನು ವೀಕ್ಷಿಸುತ್ತಿರುವ ದೃಶ್ಯ ಕಂಡುಬರುತ್ತಿದೆ. ದಸರಾ ಗಜಪಡೆ ಮೈಸೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಆನೆಗಳನ್ನು ನೋಡಲು ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ಉತ್ಸಾಹ ಹೆಚ್ಚಾಗಿದೆ. ಆನೆಗಳೊಂದಿಗೆ ಫೋಟೋ ಅಥವಾ ಸೆಲ್ಫಿ ಪಡೆಯುವ ಆಸೆ ಸಹಜವಾದರೂ, ಅವು ಕಾಡುಪ್ರಾಣಿಗಳಾಗಿರುವುದರಿಂದ ಕ್ಷಣಮಾತ್ರದ ಅಜಾಗರೂಕತೆಯೂ ಅಪಾಯಕ್ಕೆ ಕಾರಣವಾಗಬಹುದು. ಹೀಗಾಗಿ ಸಾರ್ವಜನಿಕರು ಅರಣ್ಯ ಇಲಾಖೆ ವಿಧಿಸಿರುವ ನಿಯಮಗಳನ್ನು ಪಾಲಿಸಿ, ಆನೆಗಳಿಂದ ಸುರಕ್ಷಿತ ಅಂತರ ಕಾಯ್ದುಕೊಂಡು ವೀಕ್ಷಣೆ ಮಾಡಬೇಕಾಗಿದೆ. ಆನೆಗಳಿಗೂ ಯಾವುದೇ ತೊಂದರೆಯಾಗದಂತೆ ಸಹಕರಿಸುವುದು ದಸರಾ ಸಂಭ್ರಮವನ್ನು ಸುರಕ್ಷಿತವಾಗಿ ಕಣ್ತುಂಬಿಕೊಳ್ಳಲು ಅಗತ್ಯವಾಗಿದೆ. ಅರಣ್ಯ ಭವನದ ಗೇಟ್ ಸುತ್ತಲೂ ಜನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಯೂ ಜನರ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ.3
- ಆಗಸ್ಟ್ 29 ಕ್ಕೆ ಮಂಗಳೂರು ಸುತ್ತಮುತ್ತ ಪವರ್ ಕಟ್: ಬಿಜೈನಲ್ಲಿ ಮೆಸ್ಕಾಂ ಇಲಾಖೆಯ ಪ್ರಕಟಣೆ ದಿನಾಂಕ 29.08.2026 ರಂದು ಬೆಳಿಗ್ಗೆ 10.00 ರಿಂದ ಸಂಜೆ 5:00 ಗಂಟೆಯವರೆಗೆ 110/33/11 ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಮರೋಳಿ ಫೀಡರ್‌ನಲ್ಲಿ ವ್ಯವಸ್ಥೆ ಸುಧಾರಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ, ಮರೋಳಿ, ಜಯನಗರ, ವಸಂತನಗರ, ಏಂಜಲೋರ್ ಚರ್ಚ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.1
- ವೈರಲ್ ಆಗುತ್ತಿದೆ ಪುಟ್ಟ ಮಗುವಿನ ನಂದಿ ವೇಷ | ಇತ್ತೀಚೆಗೆ ಮೂಡುಬಿದಿರೆಯಲ್ಲಿ ನಡೆದಿದ್ದ ಯಕ್ಷಗಾನ1
- ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟ್ ಅಲೆಗಳ ಹೊಡೆತಕ್ಕೆ ಸಿಲುಕಿ ಬಿರುಕು ಬೋಟ್‌ನಲ್ಲಿದ್ದ 30 ಮಂದಿ ಮೀನುಗಾರರ ರಕ್ಷಣೆ ಉಡುಪಿ:ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟ್ ಅಲೆಗಳ ಹೊಡೆತಕ್ಕೆ ಸಿಲುಕಿ ಬಿರುಕು ಕಾಣಿಸಿಕೊಂಡ ಘಟನೆ ಗಂಗೊಳ್ಳಿ ಸಮೀಪ ನಡೆದಿದೆ.ಗಂಗೊಳ್ಳಿಯಿಂದ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ಘಟನೆ ನಡೆದಿದ್ದು, ಬೋಟ್‌ನಲ್ಲಿ 30 ಮಂದಿ ಮೀನುಗಾರರು ಇದ್ದರು. ಬೋಟ್‌ನಲ್ಲಿ ಬಿರುಕು ಕಾಣಿಸಿಕೊಂಡ ಬೆನ್ನಲ್ಲೇ ನೀರು ಒಳನುಗ್ಗಿ ಮುಳುಗಲು ಆರಂಭಿಸಿತ್ತು.ವಿಷಯ ತಿಳಿಯುತ್ತಿದ್ದಂತೆ ಕರಾವಳಿ ಕಾವಲು ಪಡೆ ತಕ್ಷಣ ಕಾರ್ಯಾಚರಣೆ ನಡೆಸಿತು. ಕರಾವಳಿ ಮೀಸಲು ಪಡೆಯ ಇನ್ಸ್‌ಪೆಕ್ಟರ್ ರಮೇಶ್ ಕೆ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಸ್ಥಳೀಯರ ನೆರವಿನೊಂದಿಗೆ ಗಂಗೊಳ್ಳಿ ಕರಾವಳಿ ಕಾವಲು ಪಡೆ 30 ಮೀನುಗಾರರನ್ನು ರಕ್ಷಿಸಿದೆ.1
- ತೆರಕಣಾಂಬಿ:ದಾಸ ಬಣಜಿಗ ಟ್ರಸ್ಟ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ. ಗುಂಡ್ಲುಪೇಟೆ : ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಮಸ್ಯೆ ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಅರವಿಂದ ಕಣ್ಣಾಸ್ಪತ್ರೆಯ ಸಂಪರ್ಕಾಧಿಕಾರಿ ಬಿ. ವಿಜಯಕಾಂತ್ ಸಲಹೆ ನೀಡಿದರು. ತೆರಕಣಾಂಬಿ ಗ್ರಾಮದಲ್ಲಿ ಶ್ರೀ ದಾಸಬಣಜಿಗ ಟ್ರಸ್ಟ್ ಹಾಗೂ ಯುವಕ ಸಂಘದ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಹಾಗೂ ಯುವಕರಲ್ಲಿಯೂ ಕಣ್ಣಿನ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸಕ್ಕರೆ ಕಾಯಿಲೆಯಿಂದ ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು. ಶಿಬಿರದಲ್ಲಿ 200 ಮಂದಿಯನ್ನು ತಜ್ಞ ವೈದ್ಯರಾದ ಡಾ. ಕೃತಿನ್ ಷಾ ಹಾಗೂ ಡಾ. ಹರಿಕುಮಾರ್ ಮತ್ತು ಸಿಬ್ಬಂದಿ ತಪಾಸಣೆ ನಡೆಸಿದರು. ಪೊರೆ, ಗ್ಲಾಕೋಮಾ, ನೀರು ಸೋರುವಿಕೆ, ಹತ್ತಿರ-ದೂರದೃಷ್ಟಿ ದೋಷ ಸೇರಿದಂತೆ ವಿವಿಧ ಕಣ್ಣಿನ ಸಮಸ್ಯೆಗಳನ್ನು ಪರಿಶೀಲಿಸಲಾಯಿತು. ಶಸ್ತ್ರಚಿಕಿತ್ಸೆ ಅಗತ್ಯವಿದ್ದ 45 ಮಂದಿಯನ್ನು ಕೊಯಮತ್ತೂರಿಗೆ ಕರೆದೊಯ್ಯಲಾಯಿತು. ಶ್ರೀ ದಾಸಬಣಜಿಗ ಟ್ರಸ್ಟ್ ಅಧ್ಯಕ್ಷ ಟಿ. ನಾಗೇಂದ್ರ, ಉಪಾಧ್ಯಕ್ಷ ಎ. ಗಣೇಶ್, ಕಾರ್ಯದರ್ಶಿ ಟಿ.ಎಸ್. ವಿನೋದ್ ಕುಮಾರ್, ಯುವಕರ ಸಂಘದ ಅಧ್ಯಕ್ಷ ಜೆ. ಶಿವಕುಮಾರ್, ಉಪಾಧ್ಯಕ್ಷ ಟಿ. ಪ್ರಕಾಶ್, ಕಾರ್ಯದರ್ಶಿ ಶ್ರೀನಿವಾಸ್ ಸೇರಿದಂತೆ ಟ್ರಸ್ಟ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಈರೋಡ್ ಲಯನ್ಸ್ ಕ್ಲಬ್‌ನ ಪ್ರತಿನಿಧಿಗಳು ಉಪಸ್ಥಿತರಿದ್ದರು.4
- All About,Who shud be held responsible/Accountable for all Kinds of Irregularities in #KSBA #Bengaluru *ಭಾರತ ನಲ್ಲಿ ವೈರಲ್*1