ಇಬ್ರಾಹಿಂಪುರ ಗ್ರಾಮದಲ್ಲಿ ಜಾಬ್ ಕಾಡ್೯ ಮೇಳ ಅಭಿಯಾನ ಗ್ಯಾರಂಟಿ ರೋಜಗಾರ್ ಕಾಡ್೯ ಪಡೆದುಕೊಳ್ಳಿ. ಪಿಡಿಒ: ಶ್ರೀ ಹಣಮಂತ ದೇವರಮನಿ ಶಹಾಪುರ: ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಗಳಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕ್ ಮಿಷನ್ ಗ್ರಾಮೀಣ ಯೋಜನೆಯಡಿ ಗ್ರಾಮ ಪಂಚಾಯಿತಿಯಿಂದ ಉಚಿತವಾಗಿ ನೀಡುವ ಗ್ಯಾರಂಟಿ ರೋಜಗಾರ್ ಕಾಡ್೯ ಪಡೆದುಕೊಳ್ಳಿ ಎಂದು ಇಬ್ರಾಹಿಂಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ಹಣಮಂತ ದೇವರಮನಿ ಅವರು ಹೇಳಿದರು. ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಆ.24 ರಂದು ವಿಬಿ-ಜಿರಾಮಜಿ ಯೋಜನೆಯಡಿ ಪ್ರಗತಿಯಲ್ಲಿದ್ದ ಗೋಕಟ್ಟೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡ ವಿಬಿ-ಜಿರಾಮಜಿ ಯೋಜನೆಯ ಜಾಗೃತಿ ಹಾಗೂ ಜಾಬ್ ಕಾಡ್೯ ಮೇಳ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಬಿ-ಜಿರಾಮಜಿ ಯೋಜನೆಯಡಿ ಗ್ಯಾರಂಟಿ ರೋಜಗಾರ ಕಾಡ್೯ ಪಡೆದ ಗ್ರಾಮೀಣ ಪ್ರದೇಶದ ರೈತರು ಹಾಗೂ ಕೂಲಿ ಕಾರ್ಮಿಕರಿಗೆ 5ಲಕ್ಷ ರೂ.ಗಳ ಮಿತಿಯಲ್ಲಿ ನೀಡುವ ಆರ್ಥಿಕ ಸಹಾಯಧನದಲ್ಲಿ ಅಗತ್ಯವಾದ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಲು ಇರುವ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು. ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ಒಂದು ತಿಂಗಳವರೆಗೆ ಗ್ರಾಮ ಪಂಚಾಯತಿಯಲ್ಲಿ ಜಾಬ್ ಕಾಡ್೯ ಮೇಳ ಅಭಿಯಾನ ಆರಂಭವಾಗಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಇಲ್ಲಿಯವರೆಗೆ ಜಾಬ್ ಕಾಡ್೯ ಪಡೆಯದೆ ಇರುವ ಕುಟುಂಬಗಳಿಗೆ ಉಚಿತವಾಗಿ ಜಾಬ್ ಕಾಡ್೯ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಗ್ಯಾರಂಟಿ ರೋಜಗಾರ್ ಕಾಡ್೯ ಪಡೆದ ಕುಟುಂಬಗಳು ದನದ ಶೆಡ್, ಕೋಳಿ ಶೆಡ್, ಮೇಕೆ ಶೆಡ್, ಹಂದಿ ಶೆಡ್, ಎರೆ ಹುಳು ಘಟಕ, ಇಂಗು ಗುಂಡಿ, ಕೃಷಿ ಹೊಂಡ, ತೋಟಗಾರಿಕೆ ಬೆಳೆ, ರೇಷ್ಮೆ ಬೆಳೆ, ವೈಯಕ್ತಿಕ ಕೊಳವೆ ಬಾವಿ ಮಳೆ ನೀರು ಮರುಪೂರ್ಣ ಘಟಕ, ವಸತಿ ಯೋಜನೆ ಫಲಾನುಭವಿಗಳ ಮನೆ ನಿರ್ಮಾಣಕ್ಕೆ 90 ಮಾನವ ದಿನ ಪೂರೈಕೆ ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿಗಳ ಸವಲತ್ತು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಈ ವೇಳೆ ಶಹಾಪುರ ತಾಲೂಕ ಪಂಚಾಯಿತಿ ವಿಬಿ-ಜಿರಾಮಜಿ ಯೋಜನೆಯ ಐಇಸಿ ಸಂಯೋಜಕ ಬಸಪ್ಪ, ತಾಂತ್ರಿಕ ಸಹಾಯಕ ಸಂಪತ್ತ ಕುಮಾರ, ಕಾಯಕ ಬಂದುಗಳಾದ ನಾಗಪ್ಪ, ಸಾಯಬಣ್ಣ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಕೂಲಿಕಾರರು ಇದ್ದರು.
ಇಬ್ರಾಹಿಂಪುರ ಗ್ರಾಮದಲ್ಲಿ ಜಾಬ್ ಕಾಡ್೯ ಮೇಳ ಅಭಿಯಾನ ಗ್ಯಾರಂಟಿ ರೋಜಗಾರ್ ಕಾಡ್೯ ಪಡೆದುಕೊಳ್ಳಿ. ಪಿಡಿಒ: ಶ್ರೀ ಹಣಮಂತ ದೇವರಮನಿ ಶಹಾಪುರ: ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಗಳಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕ್ ಮಿಷನ್ ಗ್ರಾಮೀಣ ಯೋಜನೆಯಡಿ ಗ್ರಾಮ ಪಂಚಾಯಿತಿಯಿಂದ ಉಚಿತವಾಗಿ ನೀಡುವ ಗ್ಯಾರಂಟಿ ರೋಜಗಾರ್ ಕಾಡ್೯ ಪಡೆದುಕೊಳ್ಳಿ ಎಂದು ಇಬ್ರಾಹಿಂಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ಹಣಮಂತ ದೇವರಮನಿ ಅವರು ಹೇಳಿದರು. ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿ ಆ.24 ರಂದು ವಿಬಿ-ಜಿರಾಮಜಿ ಯೋಜನೆಯಡಿ ಪ್ರಗತಿಯಲ್ಲಿದ್ದ ಗೋಕಟ್ಟೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಹಮ್ಮಿಕೊಂಡ ವಿಬಿ-ಜಿರಾಮಜಿ ಯೋಜನೆಯ ಜಾಗೃತಿ ಹಾಗೂ ಜಾಬ್ ಕಾಡ್೯ ಮೇಳ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಬಿ-ಜಿರಾಮಜಿ ಯೋಜನೆಯಡಿ ಗ್ಯಾರಂಟಿ ರೋಜಗಾರ ಕಾಡ್೯ ಪಡೆದ ಗ್ರಾಮೀಣ ಪ್ರದೇಶದ ರೈತರು ಹಾಗೂ ಕೂಲಿ ಕಾರ್ಮಿಕರಿಗೆ 5ಲಕ್ಷ ರೂ.ಗಳ ಮಿತಿಯಲ್ಲಿ ನೀಡುವ ಆರ್ಥಿಕ ಸಹಾಯಧನದಲ್ಲಿ ಅಗತ್ಯವಾದ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಲು ಇರುವ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಮಾಹಿತಿ ನೀಡಿದರು. ಆಗಸ್ಟ್ 15ರಿಂದ ಸೆಪ್ಟೆಂಬರ್ 15ರವರೆಗೆ ಒಂದು ತಿಂಗಳವರೆಗೆ ಗ್ರಾಮ ಪಂಚಾಯತಿಯಲ್ಲಿ ಜಾಬ್ ಕಾಡ್೯ ಮೇಳ ಅಭಿಯಾನ ಆರಂಭವಾಗಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಇಲ್ಲಿಯವರೆಗೆ ಜಾಬ್ ಕಾಡ್೯ ಪಡೆಯದೆ ಇರುವ ಕುಟುಂಬಗಳಿಗೆ ಉಚಿತವಾಗಿ ಜಾಬ್ ಕಾಡ್೯ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಗ್ಯಾರಂಟಿ ರೋಜಗಾರ್ ಕಾಡ್೯ ಪಡೆದ ಕುಟುಂಬಗಳು ದನದ ಶೆಡ್, ಕೋಳಿ ಶೆಡ್, ಮೇಕೆ ಶೆಡ್, ಹಂದಿ ಶೆಡ್, ಎರೆ ಹುಳು ಘಟಕ, ಇಂಗು ಗುಂಡಿ, ಕೃಷಿ ಹೊಂಡ, ತೋಟಗಾರಿಕೆ ಬೆಳೆ, ರೇಷ್ಮೆ ಬೆಳೆ, ವೈಯಕ್ತಿಕ ಕೊಳವೆ ಬಾವಿ ಮಳೆ ನೀರು ಮರುಪೂರ್ಣ ಘಟಕ, ವಸತಿ ಯೋಜನೆ ಫಲಾನುಭವಿಗಳ ಮನೆ ನಿರ್ಮಾಣಕ್ಕೆ 90 ಮಾನವ ದಿನ ಪೂರೈಕೆ ಸೇರಿದಂತೆ ಇತರೆ ವೈಯಕ್ತಿಕ ಕಾಮಗಾರಿಗಳ ಸವಲತ್ತು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಈ ವೇಳೆ ಶಹಾಪುರ ತಾಲೂಕ ಪಂಚಾಯಿತಿ ವಿಬಿ-ಜಿರಾಮಜಿ ಯೋಜನೆಯ ಐಇಸಿ ಸಂಯೋಜಕ ಬಸಪ್ಪ, ತಾಂತ್ರಿಕ ಸಹಾಯಕ ಸಂಪತ್ತ ಕುಮಾರ, ಕಾಯಕ ಬಂದುಗಳಾದ ನಾಗಪ್ಪ, ಸಾಯಬಣ್ಣ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಕೂಲಿಕಾರರು ಇದ್ದರು.
- ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಭೀಮ್ ಆರ್ಮಿ ಬೃಹತ್ ಹೋರಾಟ ಮುಧೋಳ : ನಗರದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ಜರುಗಿತು. ಡಾ.ಅಂಬೇಡ್ಕರ್ ವೃತ್ತದಿಂದ ಸರ್ಕಾರಿ ಆಸ್ಪತ್ರೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಮಾರ್ಗದುದ್ದಕ್ಕೂ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು, ಗುಣಮಟ್ಟದ ಚಿಕಿತ್ಸೆಗೆ ನೀಡಬೇಕು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆಸ್ಪತ್ರೆ ಆವರಣದಲ್ಲಿನ ಸಭೆಯಲ್ಲಿ ಮಾತನಾಡಿದ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುನೀಲ ಕಂಬೋಗಿ, ವಿವಿಧ ರೋಗಗಳಿಗೆ ಸಂಬಂಧಿಸಿದ ತಜ್ಞ ವೈದ್ಯರ ಕೊರತೆ, ವೈದ್ಯಕೀಯ ಸಿಬ್ಬಂದಿಯ ಅಸಮರ್ಪಕ ಲಭ್ಯತೆ, ಅಗತ್ಯ ಚಿಕಿತ್ಸೆಯಲ್ಲಿ ವಿಳಂಬ ಹಾಗೂ ಆಸ್ಪತ್ರೆಯ ಕೆಲ ವೈದ್ಯರನ್ನು ನಿಯೋಜನೆಯ ಮೇಲೆ ಬೇರೆ ಸರ್ಕಾರಿ ಆಸ್ಪತ್ರೆಗಳಿಗೆ ನಿಯೋಜಿಸಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಬೇರೆ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರಿಗೆ ಸೂಕ್ತ ಆರೋಗ್ಯ ಸೇವೆಗಳು ಸಿಗದೆ ಪರದಾಡುವಂತಾಗಿದೆ ಎಂದು ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಯು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರಿಗೆ ಪ್ರಮುಖ ಸರ್ಕಾರಿ ಆರೋಗ್ಯ ಸೇವಾ ಕೇಂದ್ರವಾಗಿದೆ. ಆದರೆ ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಲಭ್ಯವಿಲ್ಲದಿರುವುದರಿಂದ ಸಾರ್ವಜನಿಕರು ಸೂಕ್ತ ಚಿಕಿತ್ಸೆ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಅಸಮಾಧಾನ ಹೊರಹಾಕಿದರು. ರಾಜ್ಯ ಸಂಚಾಲಕ ಅನಿಲ ಬರಗಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ. ಮುಧೋಳ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಬೇರೆ ಆಸ್ಪತ್ರೆಗೆ ನಿಯೋಜನೆ ಮಾಡಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಖಾಲಿ ಇರುವ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಭರ್ತಿ ಮಾಡಿ ಆಸ್ಪತ್ರೆಯ ಅವಶ್ಯಕತೆಯನ್ನು ಶೀಘ್ರದಲ್ಲಿಯೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಿಗೆ ಗುಣಮಟ್ಟದ ಮತ್ತು ಸಮಯೋಚಿತ ಚಿಕಿತ್ಸೆ ದೊರೆಯುವಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಹಾಗೂ ಮುಧೋಳ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಎಂದು ಆಗ್ರಹಿಸಿದರು. ರಾಜ್ಯ ಘಟಕದ ಅಧ್ಯಕ್ಷ ಲವಿತ ಮೇತ್ರಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವ ಬಡವರಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ. ಕೂಡಲೇ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಮಾನದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಡಿಎಚ್‍ಒ ಡಾ.ರಾಜಕುಮಾರ ಯರಗಲ್ ಮಾತನಾಡಿ, ಇಲ್ಲಿಂದ ನಿಯೋಜನೆಗೊಂಡ ನಾಲ್ಕು ವೈದ್ಯರ ನಿಯೋಜನೆ ಆದೇಶವನ್ನು ರದ್ದು ಮಾಡಲಾಗಿದೆ ಎಂದು ಪತ್ರಗಳನ್ನು ಪ್ರತಿಭಟನಾ ಕಾರರಿಗೆ ತೋರಿಸಿದರು. ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಿಕ ಮನವಿ ಸ್ವೀಕರಿಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ, ಡಾ, ಅಶೋಕ ಸೂರ್ಯವಂಶಿ, ಮುಖಂಡರಾದ ಸದಾಶಿವ ಬಾಡಗಂಡಿ, ಸುಂದರ ದೊಡಮನಿ, ಪುಟ್ಟು ಮೇತ್ರಿ, ಮಹಾದೇವಿ ಅಮಲಝರಿ, ಗೀತಾ, ರವಿ ಬೆಳಗಲಿ, ಮಹಾದೇವ ಮೀಸಿ, ಭೀಮಸಿ ಭಜಂತ್ರಿ, ಶೇಖರ ಬಾಗಿ ಮುಂತಾದವರು ಇದ್ದರು.1
- ಮಾಂಜರಿಯಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟ ಆರೋಪ! ಕಡಿಮೆ ಬೆಲೆಗೆ ಮಾರಾಟದ ಆರೋಪ – ಆಹಾರ ಇಲಾಖೆಯಿಂದ ದಿಢೀರ್ ಪರಿಶೀಲನೆ, ಅಂಗಡಿಗೆ ನೋಟಿಸ್! ಮಾಂಜರಿಯಲ್ಲಿ ಅವಧಿ ಮೀರಿದ ಬಿಸ್ಕೆಟ್ ಮಾರಾಟ ಆರೋಪ! ಕಡಿಮೆ ಬೆಲೆಗೆ ಮಾರಾಟದ ಆರೋಪ – ಆಹಾರ ಇಲಾಖೆಯಿಂದ ದಿಢೀರ್ ಪರಿಶೀಲನೆ, ಅಂಗಡಿಗೆ ನೋಟಿಸ್! ಮಾಂಜರಿ: ಮಾಂಜರಿ ಗ್ರಾಮದ ಶ್ರೀ ರಾಜಾರಾಮ್ ಕಿರಾಣಾ ಸ್ಟೋರ್‌ನಲ್ಲಿ ಅವಧಿ ಮುಗಿದ ಬಿಸ್ಕೆಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಇದೀಗ ಗ್ರಾಮದಲ್ಲಿ ಆತಂಕ ಹಾಗೂ ಚರ್ಚೆಗೆ ಕಾರಣವಾಗಿದೆ. ಮಾಂಜರಿ ಗ್ರಾಮದ ವಕೀಲರಾದ ಪ್ರಭಾಕರ್ ಕುರಣೆ ಅವರು ಈ ಅಂಗಡಿಯಿಂದ ಬಿಸ್ಕೆಟ್‌ಗಳನ್ನು ಖರೀದಿಸಿ, ನಂತರ ಅವುಗಳ ಪ್ಯಾಕೆಟ್‌ಗಳನ್ನು ಪರಿಶೀಲಿಸಿದಾಗ Expiry Date ಮುಗಿದಿರುವುದು ಕಂಡುಬಂದಿದೆ ಎಂದು ಆರೋಪಿಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ವಕೀಲರಾದ ಪ್ರಭಾಕರ್ ಕುರಣೆ ಅವರು ಸಂಬಂಧಪಟ್ಟ ಆಹಾರ ಪರಿಶೀಲನಾ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಾಹಿತಿ ಹಿನ್ನೆಲೆಯಲ್ಲಿ ಆಹಾರ ಪರಿಶೀಲನಾ ಇಲಾಖೆಯ ಅಧಿಕಾರಿಗಳು ದಿಢೀರ್ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಗಡಿ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದೂರು ದಾಖಲಿಸಲು ವಕೀಲರಾದ ಪ್ರಭಾಕರ್ ಕುರಣೆ ಅವರು ಮುಂದಾಗಿದ್ದಾರೆ ಎನ್ನಲಾಗಿದೆ. ಗ್ರಾಹಕರೇ ಎಚ್ಚರ! ಆಹಾರ ಪದಾರ್ಥಗಳನ್ನು ಖರೀದಿಸುವಾಗ ಕೇವಲ ಬೆಲೆಯನ್ನು ផ, Manufacturing Date, Expiry/Best Before Date, MRP ಹಾಗೂ ಪ್ಯಾಕೆಟ್‌ನ ಸೀಲ್ ಅನ್ನು ಕಡ್ಡಾಯವಾಗಿ ಪರಿಶೀಲಿಸಿ. “ಕಡಿಮೆ ಬೆಲೆ” ಎಂಬ ಕಾರಣಕ್ಕೆ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಖರೀದಿಸಬೇಡಿ. ಅವಧಿ ಮೀರಿದ ಆಹಾರ ಪದಾರ್ಥಗಳು ಕಂಡುಬಂದರೆ ಅವುಗಳನ್ನು ಸೇವಿಸದೆ, ಬಿಲ್ ಮತ್ತು ಪ್ಯಾಕೆಟ್‌ಗಳನ್ನು ಸಂರಕ್ಷಸಿ, ಸಂಬಂಧಪಟ್ಟ ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೆ ತನ್ನಿ. ನಿಮ್ಮ ಒಂದು ಕ್ಷಣದ ಪರಿಶೀಲನೆ - ನಿಮ್ಮ ಕುಟುಂಬದ ಆರೋಗ್ಯದ ರಕ್ಷಣೆ! ಜಾಗೃತ ಗ್ರಾಹಕರಾಗಿ... ಸುರಕ್ಷತ ಆಹಾರವನ್ನೇ ಸೇವಿಸಿ4
- ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ಯರಗಲ್ಲ ಭೇಟಿನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ಯರಗಲ್ಲ ಭೇಟಿ ಮುಧೋಳ : ನಗರದಲ್ಲಿನ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ ಹಾಗೂ ಅವ್ಯವಸ್ಥೆ ವಿರುದ್ಧ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಸ್ಥಳಕ್ಕೆ ಡಿಎಚ್ಒ ರಾಜಕುಮಾರ ಯರಗಲ್ಲ ಅವರು ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕಥೆ ನಡೆಸಿದರು.1
- ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ನೇರ ಸಂವಾದ. 🔹 ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ 🔹 ಜನರ ಪ್ರಮುಖ ಸಮಸ್ಯೆಗಳು 🔹 ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು 🔹 ಭವಿಷ್ಯದ ಯೋಜನೆಗಳು 🔹 ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳು 🔹 ರೈತರು, ಮಹಿಳೆಯರು ಹಾಗೂ ಬಡವರ ಸಮಸ್ಯೆಗಳು 🔹 ಜನರಿಂದ ನೇರ ಪ್ರಶ್ನೆಗಳು – ನಾಯಕರಿಂದ ನೇರ ಉತ್ತರಗಳು “ನಾಯಕರು ಏನು ಹೇಳುತ್ತಾರೆ ಎನ್ನುವುದಷ್ಟೇ ಅಲ್ಲ… ಜನರು ಏನು ಕೇಳಬೇಕು ಎಂಬುದಕ್ಕೂ ವೇದಿಕೆ!” 📺 ನಿಮ್ಮ ಸಿಂಪಲ್ ಸಿದ್ದು ವಾಹಿನಿ 🎤 ನಿಮ್ಮ ನಾಯಕ – ನಿಮ್ಮ ಮುಂದೆ 📍 ನೇರ ಮಾತು • ನೇರ ಪ್ರಶ್ನೆ • ನೇರ ಉತ್ತರ 🎙️ ನಿಮ್ಮ ಸಿಂಪಲ್ ಸಿದ್ದು ವಾಹಿನಿ “ನಿಮ್ಮ ನಾಯಕ – ನಿಮ್ಮ ಮುಂದೆ” ವಿಶೇಷ ಸಂದರ್ಶನ ಕಾರ್ಯಕ್ರಮ ಜನಪ್ರತಿನಿಧಿಗಳು, ರಾಜಕೀಯ ನಾಯಕರು ಹಾಗೂ ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ನೇರ ಸಂವಾದ. 🔹 ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ 🔹 ಜನರ ಪ್ರಮುಖ ಸಮಸ್ಯೆಗಳು 🔹 ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು 🔹 ಭವಿಷ್ಯದ ಯೋಜನೆಗಳು 🔹 ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳು 🔹 ರೈತರು, ಮಹಿಳೆಯರು ಹಾಗೂ ಬಡವರ ಸಮಸ್ಯೆಗಳು 🔹 ಜನರಿಂದ ನೇರ ಪ್ರಶ್ನೆಗಳು – ನಾಯಕರಿಂದ ನೇರ ಉತ್ತರಗಳು “ನಾಯಕರು ಏನು ಹೇಳುತ್ತಾರೆ ಎನ್ನುವುದಷ್ಟೇ ಅಲ್ಲ… ಜನರು ಏನು ಕೇಳಬೇಕು ಎಂಬುದಕ್ಕೂ ವೇದಿಕೆ!” 📺 ನಿಮ್ಮ ಸಿಂಪಲ್ ಸಿದ್ದು ವಾಹಿನಿ 🎤 ನಿಮ್ಮ ನಾಯಕ – ನಿಮ್ಮ ಮುಂದೆ 📍 ನೇರ ಮಾತು • ನೇರ ಪ್ರಶ್ನೆ • ನೇರ ಉತ್ತರ 9743340230 shuru news ನಿಮ್ಮ ಸಿಂಪಲ್ ಸಿದ್ದು 97433402301
- *ವಿಜಯಪುರ ವಿಮಾನ ನಿಲ್ದಾಣಕ್ಕೆ ಮುಹೂರ್ತ; 2027ರ ಆರಂಭದಲ್ಲೇ ವಿಮಾನ ಹಾರಾಟಕ್ಕೆ ಸಿದ್ಧತೆ* *ವಿಜಯಪುರ ವಿಮಾನ ನಿಲ್ದಾಣಕ್ಕೆ ಮುಹೂರ್ತ; 2027ರ ಆರಂಭದಲ್ಲೇ ವಿಮಾನ ಹಾರಾಟಕ್ಕೆ ಸಿದ್ಧತೆ* ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, 2027ರ ಆರಂಭದಲ್ಲೇ ವಿಮಾನ ಹಾರಾಟ ಆರಂಭಿಸುವ ಪ್ರಯತ್ನ ನಡೆದಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು. ವಿಜಯಪುರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣದ ಕಾರ್ಯಾರಂಭಕ್ಕೆ ಅಗತ್ಯವಿರುವ ಕೇಂದ್ರ ಪರಿಸರ ಇಲಾಖೆಯ ಅನುಮತಿಗಾಗಿ ಕೋರಲಾಗಿದೆ. ಸದ್ಯ ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಅನುಮತಿ ಪಡೆಯಲು ಕೊಂಚ ವಿಳಂಬವಾಗಬಹುದು. ಆದರೆ ಶೀಘ್ರದಲ್ಲೇ ಅನುಮತಿ ದೊರೆಯುವ ವಿಶ್ವಾಸವಿದೆ ಎಂದರು. ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನೊಂದು ವಾರದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಭೂಸ್ವಾಧೀನ ಕಾರ್ಯವೂ ಪ್ರಗತಿಯಲ್ಲಿದೆ ಎಂದು ಹೇಳಿದರು. ವಿಜಯಪುರ ವಿಮಾನ ನಿಲ್ದಾಣವನ್ನು ಏರ್‌ಬಸ್-320 ವಿಮಾನಗಳ ಹಾರಾಟಕ್ಕೆ ಅನುಕೂಲವಾಗುವಂತೆ ₹618.75 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ರಾಜ್ಯ ಸರ್ಕಾರದ ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯಿಂದ ಕಾಮಗಾರಿಗೆ ಅನುದಾನ ಒದಗಿಸಲಾಗುತ್ತಿದೆ. ಕಾಮಗಾರಿಯ ಮೇಲ್ವಿಚಾರಣೆಗೆ ಕೆಎಸ್‌ಐಐಡಿಸಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ ಎಂದು ವಿವರಿಸಿದರು. ಲೋಕೋಪ ಯೋಗಿ ಇಲಾಖೆಯಿಂದಲೇ ಕಾಮಗಾರಿ ಅನುಷ್ಠಾನಗೊಳ್ಳುತ್ತಿದ್ದು, ಬೆಂಗಳೂರಿನ ಐಡೆಕ್ ಸಂಸ್ಥೆಯನ್ನು ಕಾಮಗಾರಿ ನಿರ್ವಹಣೆ ಮತ್ತು ಸಲಹೆಗಾರರನ್ನಾಗಿ (PMC) ನೇಮಕ ಮಾಡಲಾಗಿದೆ ಎಂದರು. ಪರಿಸರ ಇಲಾಖೆಯ ಅನುಮತಿ ಇಲ್ಲದಿರುವುದು ಹಾಗೂ ಸುಪ್ರೀಂಕೋರ್ಟ್ ತಡೆಯಾಜ್ಞೆಯಿಂದಾಗಿ ವಿಮಾನ ನಿಲ್ದಾಣ ಕಾಮಗಾರಿ ವಿಳಂಬವಾಗಿತ್ತು. ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಮೂರು ವಾರಗಳ ಹಿಂದೆಯಷ್ಟೇ ತಡೆಯಾಜ್ಞೆ ತೆರವಾಗಿದೆ ಎಂದು ನಂಜಯ್ಯನಮಠ ತಿಳಿಸಿದರು.1
- ದಲಿತರು ಬೇಕಾ?ನಾಗೇಂದ್ರ ಬೇಕಾ? ವಿಪಕ್ಷಗಳ ಪ್ರಶ್ನೆಗೆ ಉತ್ತರವೇ ಸಿಗ್ಲಿಲ್ಲ1
- ಈದ್ ಮಿಲಾದ್ ಹಿನ್ನೆಲೆ ಜಮಖಂಡಿಯಲ್ಲಿ ಪೊಲೀಸ್ ಪರೇಡ್ ! ಅಹಿತಕರ ಘಟನೆ ತಡೆಗೆ ಪೊಲೀಸರ ಕಟ್ಟೆಚ್ಚರ ! ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಪಡೆ ಬಲ ಪ್ರದರ್ಶನ ! ಡಿವೈಎಸ್‌ಪಿ ಸಯ್ಯದ ರೋಷನ್ ಜಮೀರ ಮಾರ್ಗದರ್ಶನದಲ್ಲಿ ಪರೇಡ್1
- ಜೂನಿಯರ್ ರಾಜಕುಮಾರ್ ಪಾತ್ರ ಮಾಡುತ್ತಿರುವ ಸಕಲಕಲಾವಲ್ಲಭ ಪ್ರಶಸ್ತಿ ಪುರಸ್ಕೃತರಾದ ಬಸವರಾಜ್ ಪಟ್ಟಣಶೆಟ್ಟಿ ಅವರ ಕಲೆ ತುಂಬಾ ಅದ್ಭುತವಾದದ್ದು ಜೂನಿಯರ್ ರಾಜಕುಮಾರ್ ಪಾತ್ರ ಮಾಡುತ್ತಿರುವ ಸಕಲಕಲಾವಲ್ಲಭ ಪ್ರಶಸ್ತಿ ಪುರಸ್ಕೃತರಾದ ಬಸವರಾಜ್ ಪಟ್ಟಣಶೆಟ್ಟಿ ಅವರ ಕಲೆ ತುಂಬಾ ಅದ್ಭುತವಾದದ್ದು1
- ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ಬ್ಯಾರಿಕೇಡ್ ಮುರಿದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು.. ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ಬ್ಯಾರಿಕೇಡ್ ಮುರಿದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು..1