logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

​ಬುದ್ಧ-ಬಸವಣ್ಣನ ತತ್ವಗಳ ಸಮನ್ವಯವೇ ಅಂಬೇಡ್ಕರ್: ಸಂಸದ ಬಸವರಾಜ ಬೊಮ್ಮಾಯಿ ಬೆಂಗಳೂರು: ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಬುದ್ಧನ ಕಾರುಣ್ಯ ಮತ್ತು ಬಸವಣ್ಣನ ಸಮಾನತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಮಹಾನ್ ಚೇತನ. ಅವರು ಸಂವಿಧಾನ ಸಮಿತಿಯಲ್ಲಿ ಇರದೇ ಹೋಗಿದ್ದರೆ, ಭಾರತದ ಸಂವಿಧಾನ ಇಷ್ಟು ಸರ್ವವ್ಯಾಪಕ ಹಾಗೂ ಸರ್ವಸ್ಪರ್ಶಿ ಆಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ​ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ಇಂದಿನ ಹಾಗೂ ಭವಿಷ್ಯದ ಭಾರತದ ಪ್ರಜೆಗಳಿಗೆ ನ್ಯಾಯ, ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳನ್ನು ಶಾಶ್ವತವಾಗಿ ಒದಗಿಸಿಕೊಟ್ಟಿದ್ದಾರೆ. ವಿಶ್ವದ ಮಹಾನ್ ಚಿಂತಕರಾದ ಪ್ಲೇಟೊ ಮತ್ತು ಕಾರ್ಲ್ ಮಾರ್ಕ್ಸ್ ಅವರ ಸಾಲಿನಲ್ಲಿ ನಿಲ್ಲುವ ಅಂಬೇಡ್ಕರ್ ಅವರು, ಕೇವಲ ಒಂದು ಕಾಲಕ್ಕೆ ಸೀಮಿತವಾಗದೆ ಕಾಲಾತೀತ ವ್ಯಕ್ತಿತ್ವವಾಗಿ ಬೆಳೆದಿದ್ದಾರೆ ಎಂದು ಬಣ್ಣಿಸಿದರು. ​ಸ್ವಾತಂತ್ರ್ಯ ಹೋರಾಟದ ಕಾಲದಲ್ಲೇ 'ಸ್ವಾತಂತ್ರ್ಯ ಯಾರ ಪಾಲಿಗಾಗಿ?' ಎಂಬ ಗಂಭೀರ ಪ್ರಶ್ನೆಯನ್ನು ಎತ್ತಿದ ಅವರು, ತಳ ಸಮುದಾಯಗಳಿಗೆ ಹಕ್ಕುಗಳನ್ನು ದೊರಕಿಸಿಕೊಡಲು ನಿರಂತರ ಹೋರಾಟ ನಡೆಸಿದರು. ಜಗತ್ತಿನ ಅನೇಕ ರಾಷ್ಟ್ರಗಳು ಆರ್ಥಿಕತೆ ಅಥವಾ ಸಮಾಜವಾದದ ಆಧಾರದ ಮೇಲೆ ಸಂವಿಧಾನ ರೂಪಿಸಿವೆ. ಆದರೆ ಭಾರತದ ಸಂವಿಧಾನವು ಸಂಪೂರ್ಣವಾಗಿ ಮಾನವೀಯ ಮೌಲ್ಯಗಳ ಮೇಲೆ ನಿರ್ಮಿತವಾಗಿದೆ. ಇಂತಹ ಪವಿತ್ರ ಸಂವಿಧಾನವನ್ನು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ಬಳಸಿಕೊಂಡಿದೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ, ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿಯೂ ಸೂಕ್ತ ಗೌರವ ನೀಡದ ಕಾಂಗ್ರೆಸ್, ಈಗ ಸಂವಿಧಾನದ ಬಗ್ಗೆ ಮಾತನಾಡುವುದು ದುರಂತ ಎಂದು ಕಿಡಿಕಾರಿದರು. ​ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಬೇಡ್ಕರ್ ಅವರು ಭೇಟಿ ನೀಡಿದ್ದ ಹತ್ತು ಪ್ರಮುಖ ಸ್ಥಳಗಳ ಅಭಿವೃದ್ಧಿಗಾಗಿ 'ಅಂಬೇಡ್ಕರ್ ಹೆಜ್ಜೆಗುರುತು' ಯೋಜನೆಯಡಿ 10 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ರಾಜಕೀಯ ದ್ವೇಷದಿಂದ ಈ ಸ್ಥಳಗಳ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ ಹಣವನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಹಾಗೂ ಗಂಗಾ ಕಲ್ಯಾಣ ಯೋಜನೆಗೂ ಹಣ ನೀಡದೆ ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರ ತಕ್ಷಣವೇ ಅಂಬೇಡ್ಕರ್ ಹೆಜ್ಜೆಗುರುತು ಸ್ಥಳಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ​ಸಮಾಜದ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗೆ ಅಂಬೇಡ್ಕರ್ ಅವರ ತತ್ವಗಳೇ ದಾರಿದೀಪ. ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಲು ಈ ತತ್ವಗಳು ಚಳವಳಿಯಂತೆ ಕಾರ್ಯರೂಪಕ್ಕೆ ಬರಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕ ರವಿಕುಮಾರ್, ಶಾಸಕ ಹಾಗೂ ಎಸ್ಸಿ ಮೋರ್ಚಾ ಅಧ್ಯಕ್ಷ ಸಿಮೆಂಟ್ ಮಂಜು, ಮಾಜಿ ಸದಸ್ಯ ಮಹಾಂತೇಶ ಕವಠಗಿಮಠ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

4 hrs ago
user_Girish Ghatage
Girish Ghatage
Local News Reporter ಧಾರವಾಡ, ಧಾರವಾಡ, ಕರ್ನಾಟಕ•
4 hrs ago
11b6a04e-0527-444a-8528-274cc56d5c47

​ಬುದ್ಧ-ಬಸವಣ್ಣನ ತತ್ವಗಳ ಸಮನ್ವಯವೇ ಅಂಬೇಡ್ಕರ್: ಸಂಸದ ಬಸವರಾಜ ಬೊಮ್ಮಾಯಿ ಬೆಂಗಳೂರು: ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಬುದ್ಧನ ಕಾರುಣ್ಯ ಮತ್ತು ಬಸವಣ್ಣನ ಸಮಾನತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿದ್ದ ಮಹಾನ್ ಚೇತನ. ಅವರು ಸಂವಿಧಾನ ಸಮಿತಿಯಲ್ಲಿ ಇರದೇ ಹೋಗಿದ್ದರೆ, ಭಾರತದ ಸಂವಿಧಾನ ಇಷ್ಟು ಸರ್ವವ್ಯಾಪಕ ಹಾಗೂ ಸರ್ವಸ್ಪರ್ಶಿ ಆಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ​ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ಇಂದಿನ ಹಾಗೂ ಭವಿಷ್ಯದ ಭಾರತದ ಪ್ರಜೆಗಳಿಗೆ ನ್ಯಾಯ, ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳನ್ನು ಶಾಶ್ವತವಾಗಿ ಒದಗಿಸಿಕೊಟ್ಟಿದ್ದಾರೆ. ವಿಶ್ವದ ಮಹಾನ್ ಚಿಂತಕರಾದ ಪ್ಲೇಟೊ ಮತ್ತು ಕಾರ್ಲ್ ಮಾರ್ಕ್ಸ್ ಅವರ ಸಾಲಿನಲ್ಲಿ ನಿಲ್ಲುವ ಅಂಬೇಡ್ಕರ್ ಅವರು, ಕೇವಲ ಒಂದು ಕಾಲಕ್ಕೆ ಸೀಮಿತವಾಗದೆ ಕಾಲಾತೀತ ವ್ಯಕ್ತಿತ್ವವಾಗಿ ಬೆಳೆದಿದ್ದಾರೆ ಎಂದು ಬಣ್ಣಿಸಿದರು. ​ಸ್ವಾತಂತ್ರ್ಯ ಹೋರಾಟದ ಕಾಲದಲ್ಲೇ 'ಸ್ವಾತಂತ್ರ್ಯ ಯಾರ ಪಾಲಿಗಾಗಿ?' ಎಂಬ ಗಂಭೀರ ಪ್ರಶ್ನೆಯನ್ನು ಎತ್ತಿದ ಅವರು, ತಳ ಸಮುದಾಯಗಳಿಗೆ ಹಕ್ಕುಗಳನ್ನು ದೊರಕಿಸಿಕೊಡಲು ನಿರಂತರ ಹೋರಾಟ ನಡೆಸಿದರು. ಜಗತ್ತಿನ ಅನೇಕ ರಾಷ್ಟ್ರಗಳು ಆರ್ಥಿಕತೆ ಅಥವಾ ಸಮಾಜವಾದದ ಆಧಾರದ ಮೇಲೆ ಸಂವಿಧಾನ ರೂಪಿಸಿವೆ. ಆದರೆ ಭಾರತದ ಸಂವಿಧಾನವು ಸಂಪೂರ್ಣವಾಗಿ ಮಾನವೀಯ ಮೌಲ್ಯಗಳ ಮೇಲೆ ನಿರ್ಮಿತವಾಗಿದೆ. ಇಂತಹ ಪವಿತ್ರ

d5d42fce-52d0-4778-ad28-353c144f0597

ಸಂವಿಧಾನವನ್ನು ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ಬಳಸಿಕೊಂಡಿದೆ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದಲ್ಲದೆ, ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿಯೂ ಸೂಕ್ತ ಗೌರವ ನೀಡದ ಕಾಂಗ್ರೆಸ್, ಈಗ ಸಂವಿಧಾನದ ಬಗ್ಗೆ ಮಾತನಾಡುವುದು ದುರಂತ ಎಂದು ಕಿಡಿಕಾರಿದರು. ​ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಬೇಡ್ಕರ್ ಅವರು ಭೇಟಿ ನೀಡಿದ್ದ ಹತ್ತು ಪ್ರಮುಖ ಸ್ಥಳಗಳ ಅಭಿವೃದ್ಧಿಗಾಗಿ 'ಅಂಬೇಡ್ಕರ್ ಹೆಜ್ಜೆಗುರುತು' ಯೋಜನೆಯಡಿ 10 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ರಾಜಕೀಯ ದ್ವೇಷದಿಂದ ಈ ಸ್ಥಳಗಳ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಎಸ್‌ಸಿಪಿ/ಟಿಎಸ್‌ಪಿ ಯೋಜನೆಯ ಹಣವನ್ನು ಸಮರ್ಪಕವಾಗಿ ಬಳಸುತ್ತಿಲ್ಲ ಹಾಗೂ ಗಂಗಾ ಕಲ್ಯಾಣ ಯೋಜನೆಗೂ ಹಣ ನೀಡದೆ ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರ ತಕ್ಷಣವೇ ಅಂಬೇಡ್ಕರ್ ಹೆಜ್ಜೆಗುರುತು ಸ್ಥಳಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ​ಸಮಾಜದ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗೆ ಅಂಬೇಡ್ಕರ್ ಅವರ ತತ್ವಗಳೇ ದಾರಿದೀಪ. ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಲು ಈ ತತ್ವಗಳು ಚಳವಳಿಯಂತೆ ಕಾರ್ಯರೂಪಕ್ಕೆ ಬರಬೇಕು ಎಂದು ಅವರು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕ ರವಿಕುಮಾರ್, ಶಾಸಕ ಹಾಗೂ ಎಸ್ಸಿ ಮೋರ್ಚಾ ಅಧ್ಯಕ್ಷ ಸಿಮೆಂಟ್ ಮಂಜು, ಮಾಜಿ ಸದಸ್ಯ ಮಹಾಂತೇಶ ಕವಠಗಿಮಠ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಕುಂದಗೋಳ: ತಾಲ್ಲೂಕಿನ ಹಿರೇನರ್ತಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ತಲೆದೋರಿದ ಹಳೆಯ ದ್ವೇಷವೊಂದು ವಿಕೋಪಕ್ಕೆ ತಿರುಗಿದ್ದು, ಒಂದೇ ಮನೆತನದವರ ನಡುವಿನ ಜಗಳದಲ್ಲಿ ಮುಂದುವರೆದು ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಈ ಭೀಕರ ಗಲಾಟೆಯಲ್ಲಿ ಕರಿಯಪ್ಪಗೌಡ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆಗೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜಾಗದ ವಿಷಯವಾಗಿ ಮಾತಿಗೆ ಮಾತು ಬೆಳೆದು, ಒಂದೇ ಮನೆತನದ ಅಣ್ಣತಮ್ಮಂದಿರಾದ ಪ್ರಜ್ವಲ್ ಗೌಡ , ಸಿದ್ದನಗೌಡ ಹಾಗೂ ಶಿವನಗೌಡ (ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು) ನಡುವೆ ಸಂಘರ್ಷ ಏರ್ಪಟ್ಟಿದೆ. ಕರಿಯಪ್ಪಗೌಡ ಅವರು ಬಣವೆ ಒಟ್ಟುತ್ತಿದ್ದ ಸಮಯದಲ್ಲಿ ಸ್ಥಳಕ್ಕೆ ಬಂದ ಪ್ರಜ್ವಲ್ ಗೌಡ ಹಾಗೂ ಆತನ ಸಹಚರರು, ಕಲ್ಲು ಮತ್ತು ಬಡಿಗೆಗಳಿಂದ ಏಕಾಏಕಿ ಅಟ್ಟಹಾಸ ಮೆರೆದಿದ್ದಾರೆ ಎಂದು ಸ್ವತಃ ಹಲ್ಲೆಗೊಳಗಾದ ಕರಿಯಪ್ಪಗೌಡರು ತಮ್ಮ ನೋವಿನ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಆರೋಪಿಗಳು ಕರಿಯಪ್ಪಗೌಡರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ, ಅವರ ತಲೆ ಹಾಗೂ ಮೈಮೇಲೆ ರಕ್ತಸಿಕ್ತ ಗಾಯಗಳಾಗಿವೆ. ರಕ್ತದ ಘಾಯದಿಂದ ಬಿದ್ದಿದ್ದ ಅವರನ್ನು ಗ್ರಾಮಸ್ಥರು ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಗಾಯಾಳು ಕರಿಯಪ್ಪಗೌಡರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಸದ್ಯ ಕುಂದಗೋಲ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಯತ್ತಿದ್ದು ಇದು ಎಪ್ ಆಯ್ ಆರ್ ಆಗುತ್ತಾ ರಾಜಿ ಸಂಧಾನದ ಮೂಲಕ ಇಥ್ಯರ್ಥ ಆಗುತ್ತದೆಯಾ ಎಂದುದನ್ನು ಕಾದು ನೋಡಬೇಕು. ಘಟನೆಯಿಂದಾಗಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
    1
    ಕುಂದಗೋಳ: ತಾಲ್ಲೂಕಿನ ಹಿರೇನರ್ತಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ತಲೆದೋರಿದ ಹಳೆಯ ದ್ವೇಷವೊಂದು ವಿಕೋಪಕ್ಕೆ ತಿರುಗಿದ್ದು, ಒಂದೇ ಮನೆತನದವರ ನಡುವಿನ ಜಗಳದಲ್ಲಿ ಮುಂದುವರೆದು ಹಲ್ಲೆಯಲ್ಲಿ ಅಂತ್ಯಗೊಂಡಿದೆ. ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಈ ಭೀಕರ ಗಲಾಟೆಯಲ್ಲಿ ಕರಿಯಪ್ಪಗೌಡ  ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೋಮವಾರ ಮಧ್ಯಾಹ್ನದ ವೇಳೆಗೆ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಜಾಗದ ವಿಷಯವಾಗಿ ಮಾತಿಗೆ ಮಾತು ಬೆಳೆದು, ಒಂದೇ ಮನೆತನದ ಅಣ್ಣತಮ್ಮಂದಿರಾದ ಪ್ರಜ್ವಲ್ ಗೌಡ , ಸಿದ್ದನಗೌಡ  ಹಾಗೂ ಶಿವನಗೌಡ  (ಚಿಕ್ಕಪ್ಪ-ದೊಡ್ಡಪ್ಪನ ಮಕ್ಕಳು) ನಡುವೆ ಸಂಘರ್ಷ ಏರ್ಪಟ್ಟಿದೆ. ಕರಿಯಪ್ಪಗೌಡ ಅವರು ಬಣವೆ ಒಟ್ಟುತ್ತಿದ್ದ ಸಮಯದಲ್ಲಿ ಸ್ಥಳಕ್ಕೆ ಬಂದ ಪ್ರಜ್ವಲ್ ಗೌಡ ಹಾಗೂ ಆತನ ಸಹಚರರು, ಕಲ್ಲು ಮತ್ತು ಬಡಿಗೆಗಳಿಂದ ಏಕಾಏಕಿ ಅಟ್ಟಹಾಸ ಮೆರೆದಿದ್ದಾರೆ ಎಂದು ಸ್ವತಃ ಹಲ್ಲೆಗೊಳಗಾದ ಕರಿಯಪ್ಪಗೌಡರು ತಮ್ಮ ನೋವಿನ ಸಂಗತಿಯನ್ನು ಹೇಳಿಕೊಂಡಿದ್ದಾರೆ.
ಆರೋಪಿಗಳು ಕರಿಯಪ್ಪಗೌಡರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪರಿಣಾಮ, ಅವರ ತಲೆ ಹಾಗೂ ಮೈಮೇಲೆ ರಕ್ತಸಿಕ್ತ ಗಾಯಗಳಾಗಿವೆ. ರಕ್ತದ ಘಾಯದಿಂದ ಬಿದ್ದಿದ್ದ ಅವರನ್ನು ಗ್ರಾಮಸ್ಥರು ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಗಾಯಾಳು ಕರಿಯಪ್ಪಗೌಡರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದ್ದು, ಸದ್ಯ ಕುಂದಗೋಲ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಯತ್ತಿದ್ದು ಇದು ಎಪ್ ಆಯ್ ಆರ್ ಆಗುತ್ತಾ ರಾಜಿ ಸಂಧಾನದ ಮೂಲಕ ಇಥ್ಯರ್ಥ ಆಗುತ್ತದೆಯಾ ಎಂದುದನ್ನು ಕಾದು ನೋಡಬೇಕು.  ಘಟನೆಯಿಂದಾಗಿ ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
    user_Girish Ghatage
    Girish Ghatage
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    7 hrs ago
  • ಧಾರವಾಡ: ಧಾರವಾಡ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಸ್ಥಳಾಂತರಿಸುವುದಾಗಿ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೆರೆ ಆಗ್ರಹಿಸಿದರು. ಧಾರವಾಡ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಪ್ರಾದೇಶಿಕ ಸುದ್ದಿ ವಿಭಾಗಕ್ಕೆ 45 ವರ್ಷಗಳ ಇತಿಹಾಸವಿದೆ. ಈ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಕಾಶವಾಣಿ ಸುದ್ದಿ ವಿಭಾಗವನ್ನು ಧಾರವಾಡದಲ್ಲಿ ಉಳಿಸಿಕೊಳ್ಳಲು ಕೇಂದ್ರ ಸಚಿವರಿಗೆ ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಡ ತರಲಾಗುವುದು. ಈ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘವು ಶೀಘ್ರ ಸಭೆ ಕರೆದು ನಿರ್ಧಾರ ಕೈಗೊಳ್ಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ, ವೀರಣ್ಣ ಒಡ್ಡೀನ ಸೇರಿದಂತೆ ಇತರರಿದ್ದರು.
    1
    ಧಾರವಾಡ: ಧಾರವಾಡ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಸ್ಥಳಾಂತರಿಸುವುದಾಗಿ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೆರೆ ಆಗ್ರಹಿಸಿದರು.
ಧಾರವಾಡ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಪ್ರಾದೇಶಿಕ ಸುದ್ದಿ ವಿಭಾಗಕ್ಕೆ 45 ವರ್ಷಗಳ ಇತಿಹಾಸವಿದೆ. ಈ ಕೇಂದ್ರವನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಿದರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯ ಆಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 
ಆಕಾಶವಾಣಿ ಸುದ್ದಿ ವಿಭಾಗವನ್ನು ಧಾರವಾಡದಲ್ಲಿ ಉಳಿಸಿಕೊಳ್ಳಲು ಕೇಂದ್ರ ಸಚಿವರಿಗೆ ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಡ ತರಲಾಗುವುದು. ಈ ಕುರಿತು ಕರ್ನಾಟಕ ವಿದ್ಯಾವರ್ಧಕ ಸಂಘವು ಶೀಘ್ರ ಸಭೆ ಕರೆದು ನಿರ್ಧಾರ ಕೈಗೊಳ್ಳಲಿದೆ ಎಂದರು. 
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ.ಸಂಜೀವ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ, ವೀರಣ್ಣ ಒಡ್ಡೀನ ಸೇರಿದಂತೆ ಇತರರಿದ್ದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    9 hrs ago
  • Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    1
    Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    user_✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊
    Auto parts store ಹುಬ್ಬಳ್ಳಿ, ಧಾರವಾಡ, ಕರ್ನಾಟಕ•
    11 hrs ago
  • ಶಿಗ್ಗಾಂವ ತಾಲೂಕಿನ ಅಂಬೇಡ್ಕರ್ ಸಂಕೀರ್ಣದಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡಂತ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಶಿಗ್ಗಾವ ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ಈ ಸಂದರ್ಭದಲ್ಲಿ ಸಂಗನಬಸವ ಪೂಜ್ಯಶ್ರೀಗಳು, ಹಾಗೂ ಮಾಜಿ ಸಂಸದರಾದ ಶ್ರೀ ಮಂಜುನಾಥ ಕುನ್ನೂರ್ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ, ತಾಲೂಕ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ರಾಗಿ ವಕೀಲರು, ಶಿಗ್ಗಾಂವ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುಡ್ಡಪ್ಪ ಜಲ್ದಿ, ಗ್ಯಾರೆಂಟಿ ಸಮಿತಿಯ ತಾಲೂಕ ಅಧ್ಯಕ್ಷರಾದ ಎಸ್ ಎಫ್ ಮನಕಟ್ಟಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,
    1
    ಶಿಗ್ಗಾಂವ ತಾಲೂಕಿನ ಅಂಬೇಡ್ಕರ್ ಸಂಕೀರ್ಣದಲ್ಲಿ ತಾಲೂಕ ಆಡಳಿತದಿಂದ ಹಮ್ಮಿಕೊಂಡಂತ ವಿಶ್ವಗುರು ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಶಿಗ್ಗಾವ ಸವಣೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಾಸೀರ್ ಖಾನ್ ಪಠಾಣ ಭಾಗವಹಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು,
ಈ ಸಂದರ್ಭದಲ್ಲಿ ಸಂಗನಬಸವ ಪೂಜ್ಯಶ್ರೀಗಳು,  ಹಾಗೂ ಮಾಜಿ ಸಂಸದರಾದ ಶ್ರೀ ಮಂಜುನಾಥ ಕುನ್ನೂರ್ ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ, ತಾಲೂಕ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ರಾಗಿ ವಕೀಲರು, ಶಿಗ್ಗಾಂವ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುಡ್ಡಪ್ಪ ಜಲ್ದಿ, ಗ್ಯಾರೆಂಟಿ ಸಮಿತಿಯ ತಾಲೂಕ ಅಧ್ಯಕ್ಷರಾದ ಎಸ್ ಎಫ್ ಮನಕಟ್ಟಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು,
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    9 hrs ago
  • ..... ಪೊಲೀಸ್‌ ಅಧಿಕಾರಿ ಮೇಲೆ ..... ಅಧಿಕಾರಿಗಳಿಂದ ಕಿರುಕುಳ ವಿಡಿಯೋ ಮಾಡಿ ನ್ಯಾಯಕ್ಕಾಗಿ ಅಂಗಲಾಚಿದ ಇನ್ಸ್‌ಪೆಕ್ಟರ್ ಶ್ರೀನಿವಾಸ್ . . . #suddipoint #enrisamasse #policeofficer
    1
    ..... ಪೊಲೀಸ್‌ ಅಧಿಕಾರಿ ಮೇಲೆ 
..... ಅಧಿಕಾರಿಗಳಿಂದ ಕಿರುಕುಳ
ವಿಡಿಯೋ ಮಾಡಿ ನ್ಯಾಯಕ್ಕಾಗಿ
ಅಂಗಲಾಚಿದ ಇನ್ಸ್‌ಪೆಕ್ಟರ್ ಶ್ರೀನಿವಾಸ್
.
.
.
#suddipoint #enrisamasse #policeofficer
    user_Suddi Point
    Suddi Point
    Newsstand ಬೆಳಗಾವಿ, ಬೆಳಗಾವಿ, ಕರ್ನಾಟಕ•
    2 hrs ago
  • Post by Uday Chougale
    1
    Post by Uday Chougale
    user_Uday Chougale
    Uday Chougale
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    2 hrs ago
  • ದುರಂತ: ಕಾವೇರಿ ನದಿಯಲ್ಲಿ ಈಜಲು ಹೋದ ಆರು ಮಂದಿ ಜಲಸಮಾಧಿ ​ಮೈಸೂರು: ಜಿಲ್ಲೆಯ ಕೆ.ಆರ್. ನಗರದ ಪ್ರಸಿದ್ಧ ಅರ್ಕೇಶ್ವರ ದೇಗುಲದ ಬಳಿ ಹರಿಯುವ ಕಾವೇರಿ ನದಿಯಲ್ಲಿ ಈಜಲು ಹೋದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಅತ್ಯಂತ ಘೋರ ಘಟನೆ ನಡೆದಿದೆ. ​
    1
    ದುರಂತ: ಕಾವೇರಿ ನದಿಯಲ್ಲಿ ಈಜಲು ಹೋದ ಆರು ಮಂದಿ ಜಲಸಮಾಧಿ
​ಮೈಸೂರು: ಜಿಲ್ಲೆಯ ಕೆ.ಆರ್. ನಗರದ ಪ್ರಸಿದ್ಧ ಅರ್ಕೇಶ್ವರ ದೇಗುಲದ ಬಳಿ ಹರಿಯುವ ಕಾವೇರಿ ನದಿಯಲ್ಲಿ ಈಜಲು ಹೋದ ಆರು ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಅತ್ಯಂತ ಘೋರ ಘಟನೆ ನಡೆದಿದೆ.
​
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Belagavi, Karnataka•
    6 hrs ago
  • ಕಲಘಟಗಿ: ಮಧ್ಯಪಾನ ಸೇವಿಸಿ ವಿದ್ಯುತ್ ಕಂಬ ಏರಿ ಕುಳಿತ ಯುವಕನನ್ನು ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಯುವಕನ ಮನವೊಲಿಸಿ ಸುರಕ್ಷಿತವಾಗಿ ಕೆಳಗೆ ಇಳಿಸಿದ ಘಟನೆ ಶನಿವಾರ ರಾತ್ರಿ ಜರುಗಿದೆ. ತಾಲ್ಲೂಕಿನ ಕಾಡನಕೊಪ್ಪ ಗ್ರಾಮದ ಮಂಜುನಾಥ ಸಿದ್ದಪ್ಪ ಜಮ್ಮಿಹಾಳ (20) ಎಂಬ ಯುವಕನೇ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಹೈ ವೋಲ್ಟೇಜ್ ವಿದ್ಯುತ್ ಕಂಬದ 150 ಅಡಿ ಎತ್ತರದಲ್ಲಿ ಏರಿ ಕುಳಿತ್ತಿದ್ದನು. 2 ಘಂಟೆಗಳ ಕಾಲ ಅಗ್ನಿ ಶಾಮಕ ಅಧಿಕಾರಿಗಳು ಮನವೊಲಿಸಿದ ನಂತರ ಯುವಕನಿಗೆ ತೊಂದರೆಯಾಗದಂತೆ ಸುರಕ್ಷಿತವಾಗಿ ಕೆಳಗೆ ಇಳಿಸಿ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಾಲ್ಲೂಕ ಅಗ್ನಿಶಾಮಕ ಠಾಣಾಧಿಕಾರಿ ಅರುಣ ಮಾಳುದೇ ತಿಳಿಸಿದರು. ಅಗ್ನಿಶಾಮಕ ಠಾಣೆ ಸಿಬ್ಬಂದಿಗಳಾದ ಥಾವರು ರಾಠೋಡ ಮಹೇಶ ವಡ್ಡರ,ಉಮೇಶ ತೆಂಬದ,ಸಂಜು ದೊಡಮನಿ, ಸಂತೋಷ ಉಗ್ನಿಕೇರಿ,ಈರಣ್ಣ ಮಠದ,ಅನಿಲ ಲೋಖಂಡೆ ಇದ್ದರು.
    1
    ಕಲಘಟಗಿ: ಮಧ್ಯಪಾನ ಸೇವಿಸಿ ವಿದ್ಯುತ್ ಕಂಬ ಏರಿ ಕುಳಿತ ಯುವಕನನ್ನು ಅಗ್ನಿಶಾಮಕ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಯುವಕನ ಮನವೊಲಿಸಿ ಸುರಕ್ಷಿತವಾಗಿ ಕೆಳಗೆ ಇಳಿಸಿದ ಘಟನೆ ಶನಿವಾರ ರಾತ್ರಿ ಜರುಗಿದೆ.
ತಾಲ್ಲೂಕಿನ ಕಾಡನಕೊಪ್ಪ ಗ್ರಾಮದ  ಮಂಜುನಾಥ ಸಿದ್ದಪ್ಪ ಜಮ್ಮಿಹಾಳ (20) ಎಂಬ ಯುವಕನೇ ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಹೈ ವೋಲ್ಟೇಜ್ ವಿದ್ಯುತ್ ಕಂಬದ 150 ಅಡಿ ಎತ್ತರದಲ್ಲಿ ಏರಿ ಕುಳಿತ್ತಿದ್ದನು.
2 ಘಂಟೆಗಳ ಕಾಲ ಅಗ್ನಿ ಶಾಮಕ ಅಧಿಕಾರಿಗಳು ಮನವೊಲಿಸಿದ ನಂತರ ಯುವಕನಿಗೆ ತೊಂದರೆಯಾಗದಂತೆ ಸುರಕ್ಷಿತವಾಗಿ ಕೆಳಗೆ ಇಳಿಸಿ ರಕ್ಷಣೆ ಮಾಡಿ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಾಲ್ಲೂಕ ಅಗ್ನಿಶಾಮಕ ಠಾಣಾಧಿಕಾರಿ ಅರುಣ ಮಾಳುದೇ ತಿಳಿಸಿದರು.
ಅಗ್ನಿಶಾಮಕ ಠಾಣೆ ಸಿಬ್ಬಂದಿಗಳಾದ ಥಾವರು ರಾಠೋಡ ಮಹೇಶ ವಡ್ಡರ,ಉಮೇಶ ತೆಂಬದ,ಸಂಜು ದೊಡಮನಿ, ಸಂತೋಷ ಉಗ್ನಿಕೇರಿ,ಈರಣ್ಣ ಮಠದ,ಅನಿಲ ಲೋಖಂಡೆ ಇದ್ದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.