logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ದೆಹಲಿ ಪೊಲೀಸರು ಅಂತರರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆಯನ್ನು ಬೇರು ಸಮೇತ ಭೇದಿಸಿದ್ದು, ಹಸಿವು ಮತ್ತು ಮಕ್ಕಳಿಲ್ಲದ ದಂಪತಿಗಳ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ನವಜಾತ ಶಿಶುಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದ ‘ಬೇಬಿ ಬಜಾರ್‌’ ಜಾಲದ ‘ಲೇಡಿ ಡಾನ್’ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಸಿನಿಮೀಯ ಕಾರ್ಯಾಚರಣೆಯ ಮೂಲಕ ಕೇವಲ ಒಂದು ತಿಂಗಳೊಳಗಿನ 5 ಹಸುಗೂಸುಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಬಂಧಿತ ಜಾಲವು ಮಕ್ಕಳ ಲಿಂಗದ ಆಧಾರದ ಮೇಲೆ ಬೆಲೆ ನಿಗದಿಪಡಿಸುತ್ತಿತ್ತು: ಬಡ ಕುಟುಂಬಗಳಿಂದ ₹1 ರಿಂದ ₹2 ಲಕ್ಷಕ್ಕೆ ಖರೀದಿಸಿ, ಹೆಣ್ಣು ಮಕ್ಕಳಿಗೆ ₹4 ಲಕ್ಷ ಹಾಗೂ ಗಂಡು ಮಕ್ಕಳಿಗೆ ₹8 ಲಕ್ಷಕ್ಕೆ ಭಾರಿ ಬೇಡಿಕೆಯೊಂದಿಗೆ ಮಾರಾಟ ಮಾಡುತ್ತಿತ್ತು. ದೆಹಲಿಯ ಪಹಾರ್‌ಗಂಜ್‌ನಲ್ಲಿ ಜ್ಯೋತಿ ಎಂಬ ಮಹಿಳೆ ಬೇರೆ ಬೇರೆ ಹಸುಗೂಸುಗಳೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಗ್ಗೆ ಸಾರ್ವಜನಿಕರ ಸುಳಿವು ಆಧರಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಸಿನಿಮೀಯ ಸ್ಕೆಚ್ ರೂಪಿಸಿದ್ದರು. ಒಬ್ಬ ಪೊಲೀಸ್ ಅಧಿಕಾರಿಯೇ ನಕಲಿ ಗ್ರಾಹಕರಾಗಿ ಜ್ಯೋತಿಯನ್ನು ಸಂಪರ್ಕಿಸಿ ₹20,000 ಮುಂಗಡ ನೀಡಿ ಮಗು ಖರೀದಿಸುವ ನಾಟಕವಾಡಿ ಜೂನ್ 5 ರಂದು ಆಕೆಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದರು. ಆಕೆ ನೀಡಿದ ಮಾಹಿತಿ ಆಧರಿಸಿ ಸಹಚರರಾದ ಶಾಲು, ಲಲಿತ್, ಪ್ರತಿಭಾ ಮತ್ತು ವಿಪಿನ್ ಎಂಬುವವರನ್ನು ಬಂಧಿಸಲಾಗಿದ್ದು, ₹3 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ದೆಹಲಿಯ ಡಿಸಿಪಿ ರೋಹಿತ್ ರಾಜ್‌ಬೀರ್ ಸಿಂಗ್ ನೀಡಿರುವ ಮಾಹಿತಿ ಪ್ರಕಾರ, ಈ ಗ್ಯಾಂಗ್ ಗುಜರಾತ್, ರಾಜಸ್ಥಾನ, ಹರಿಯಾಣ ಹಾಗೂ ಮಧ್ಯಪ್ರದೇಶದವರೆಗೂ ವ್ಯಾಪಿಸಿತ್ತು. ಗುಜರಾತ್‌ನಲ್ಲಿ ಬಂಧಿತನಾದ ಸಬಾಭಾಯ್ ಗಮಾರ್ ಅಲಿಯಾಸ್ ಕಾಲಿಯಾ ಬಡ ಕುಟುಂಬಗಳಿಂದ ಮಕ್ಕಳನ್ನು ಪುಸಲಾಯಿಸಿ ದೆಹಲಿಗೆ ಸಪ್ಲೈ ಮಾಡುತ್ತಿದ್ದ. ಕಳೆದ ಕೇವಲ ಒಂದು ವರ್ಷದಲ್ಲೇ ಈ ಜಾಲ 30ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವುದಾಗಿ ತಿಳಿದುಬಂದಿದೆ. ವಿಚಾರಣೆ ವೇಳೆ ರೋಹಿಣಿಯ ಬೇಗಂಪುರದಲ್ಲಿರುವ ಹೀರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೇ ಈ ದಂಧೆಯ ಕೇಂದ್ರ ಕಚೇರಿಯಾಗಿತ್ತು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಆಸ್ಪತ್ರೆಯ ಮಾಲೀಕ ಡಾ. ವಿವೇಕಿ ಈ ಜಾಲದ ಮುಖ್ಯ ಸೂತ್ರಧಾರನಾಗಿದ್ದು, ಅಪಹರಿಸಿದ ಅಥವಾ ಖರೀದಿಸಿದ ಮಕ್ಕಳನ್ನು ಆಸ್ಪತ್ರೆಯ ರಹಸ್ಯ ಕೊಠಡಿಗಳಲ್ಲಿ ಇಟ್ಟು, ನಂತರ ಮಗು ತನ್ನ ಆಸ್ಪತ್ರೆಯಲ್ಲೇ ಜನಿಸಿದೆ ಎಂದು ನಕಲಿ ಜನನ ಪ್ರಮಾಣಪತ್ರ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಇದೇ ವೇಳೆ, ಹರಿಯಾಣದ ಪಾಣಿಪತ್ ಮತ್ತು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಕ್ಕಳನ್ನು ಖರೀದಿಸಿದ್ದ ದಂಪತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಣದ ಆಸೆಗಾಗಿ ಹೆತ್ತ ಕರುಳನ್ನೇ ಮಾರಿದ ಪೋಷಕರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ರಕ್ಷಿಸಲಾದ 5 ಹಸುಗೂಸುಗಳನ್ನು ಮಕ್ಕಳ ಕಲ್ಯಾಣ ಸಮಿತಿಯ (CWC) ಪಾಲನಾ ಕೇಂದ್ರದಲ್ಲಿ ಸುರಕ್ಷಿತವಾಗಿರಿಸಲಾಗಿದೆ.

3 hrs ago
user_ಎಚ್ಚರಿಕೆ ನ್ಯೂಸ್  24×7
ಎಚ್ಚರಿಕೆ ನ್ಯೂಸ್ 24×7
ಬೆಳಗಾವಿ, ಬೆಳಗಾವಿ, ಕರ್ನಾಟಕ•
3 hrs ago
5f332f19-f2b0-45e4-ab8b-29e13ea1e583

ದೆಹಲಿ ಪೊಲೀಸರು ಅಂತರರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆಯನ್ನು ಬೇರು ಸಮೇತ ಭೇದಿಸಿದ್ದು, ಹಸಿವು ಮತ್ತು ಮಕ್ಕಳಿಲ್ಲದ ದಂಪತಿಗಳ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ನವಜಾತ ಶಿಶುಗಳನ್ನು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದ ‘ಬೇಬಿ ಬಜಾರ್‌’ ಜಾಲದ ‘ಲೇಡಿ ಡಾನ್’ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಸಿನಿಮೀಯ ಕಾರ್ಯಾಚರಣೆಯ ಮೂಲಕ ಕೇವಲ ಒಂದು ತಿಂಗಳೊಳಗಿನ 5 ಹಸುಗೂಸುಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಬಂಧಿತ ಜಾಲವು ಮಕ್ಕಳ ಲಿಂಗದ ಆಧಾರದ ಮೇಲೆ ಬೆಲೆ ನಿಗದಿಪಡಿಸುತ್ತಿತ್ತು: ಬಡ ಕುಟುಂಬಗಳಿಂದ ₹1 ರಿಂದ ₹2 ಲಕ್ಷಕ್ಕೆ ಖರೀದಿಸಿ, ಹೆಣ್ಣು ಮಕ್ಕಳಿಗೆ ₹4 ಲಕ್ಷ ಹಾಗೂ ಗಂಡು ಮಕ್ಕಳಿಗೆ ₹8 ಲಕ್ಷಕ್ಕೆ ಭಾರಿ ಬೇಡಿಕೆಯೊಂದಿಗೆ ಮಾರಾಟ ಮಾಡುತ್ತಿತ್ತು. ದೆಹಲಿಯ ಪಹಾರ್‌ಗಂಜ್‌ನಲ್ಲಿ ಜ್ಯೋತಿ ಎಂಬ ಮಹಿಳೆ ಬೇರೆ ಬೇರೆ ಹಸುಗೂಸುಗಳೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಬಗ್ಗೆ ಸಾರ್ವಜನಿಕರ ಸುಳಿವು ಆಧರಿಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಸಿನಿಮೀಯ ಸ್ಕೆಚ್ ರೂಪಿಸಿದ್ದರು. ಒಬ್ಬ ಪೊಲೀಸ್ ಅಧಿಕಾರಿಯೇ ನಕಲಿ ಗ್ರಾಹಕರಾಗಿ ಜ್ಯೋತಿಯನ್ನು ಸಂಪರ್ಕಿಸಿ ₹20,000 ಮುಂಗಡ ನೀಡಿ ಮಗು ಖರೀದಿಸುವ ನಾಟಕವಾಡಿ ಜೂನ್ 5 ರಂದು ಆಕೆಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದರು. ಆಕೆ ನೀಡಿದ ಮಾಹಿತಿ ಆಧರಿಸಿ ಸಹಚರರಾದ ಶಾಲು, ಲಲಿತ್, ಪ್ರತಿಭಾ ಮತ್ತು ವಿಪಿನ್ ಎಂಬುವವರನ್ನು ಬಂಧಿಸಲಾಗಿದ್ದು, ₹3 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ದೆಹಲಿಯ ಡಿಸಿಪಿ ರೋಹಿತ್ ರಾಜ್‌ಬೀರ್ ಸಿಂಗ್ ನೀಡಿರುವ ಮಾಹಿತಿ ಪ್ರಕಾರ, ಈ ಗ್ಯಾಂಗ್ ಗುಜರಾತ್, ರಾಜಸ್ಥಾನ, ಹರಿಯಾಣ ಹಾಗೂ ಮಧ್ಯಪ್ರದೇಶದವರೆಗೂ ವ್ಯಾಪಿಸಿತ್ತು. ಗುಜರಾತ್‌ನಲ್ಲಿ ಬಂಧಿತನಾದ ಸಬಾಭಾಯ್ ಗಮಾರ್ ಅಲಿಯಾಸ್ ಕಾಲಿಯಾ ಬಡ ಕುಟುಂಬಗಳಿಂದ ಮಕ್ಕಳನ್ನು ಪುಸಲಾಯಿಸಿ ದೆಹಲಿಗೆ ಸಪ್ಲೈ ಮಾಡುತ್ತಿದ್ದ. ಕಳೆದ ಕೇವಲ ಒಂದು ವರ್ಷದಲ್ಲೇ ಈ ಜಾಲ 30ಕ್ಕೂ ಹೆಚ್ಚು ಮಕ್ಕಳನ್ನು ಮಾರಾಟ ಮಾಡಿರುವುದಾಗಿ ತಿಳಿದುಬಂದಿದೆ. ವಿಚಾರಣೆ ವೇಳೆ ರೋಹಿಣಿಯ ಬೇಗಂಪುರದಲ್ಲಿರುವ ಹೀರಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೇ ಈ ದಂಧೆಯ ಕೇಂದ್ರ ಕಚೇರಿಯಾಗಿತ್ತು ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಆಸ್ಪತ್ರೆಯ ಮಾಲೀಕ ಡಾ. ವಿವೇಕಿ ಈ ಜಾಲದ ಮುಖ್ಯ ಸೂತ್ರಧಾರನಾಗಿದ್ದು, ಅಪಹರಿಸಿದ ಅಥವಾ ಖರೀದಿಸಿದ ಮಕ್ಕಳನ್ನು ಆಸ್ಪತ್ರೆಯ ರಹಸ್ಯ ಕೊಠಡಿಗಳಲ್ಲಿ ಇಟ್ಟು, ನಂತರ ಮಗು ತನ್ನ ಆಸ್ಪತ್ರೆಯಲ್ಲೇ ಜನಿಸಿದೆ ಎಂದು ನಕಲಿ ಜನನ ಪ್ರಮಾಣಪತ್ರ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಇದೇ ವೇಳೆ, ಹರಿಯಾಣದ ಪಾಣಿಪತ್ ಮತ್ತು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಕ್ಕಳನ್ನು ಖರೀದಿಸಿದ್ದ ದಂಪತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಣದ ಆಸೆಗಾಗಿ ಹೆತ್ತ ಕರುಳನ್ನೇ ಮಾರಿದ ಪೋಷಕರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ರಕ್ಷಿಸಲಾದ 5 ಹಸುಗೂಸುಗಳನ್ನು ಮಕ್ಕಳ ಕಲ್ಯಾಣ ಸಮಿತಿಯ (CWC) ಪಾಲನಾ ಕೇಂದ್ರದಲ್ಲಿ ಸುರಕ್ಷಿತವಾಗಿರಿಸಲಾಗಿದೆ.

More news from ಕರ್ನಾಟಕ and nearby areas
  • ಬೆಳಗಾವಿಯ ಶಾಸಕಿ ಹಾಗೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಷಣ ಮಾಡಿದರು.
    1
    ಬೆಳಗಾವಿಯ ಶಾಸಕಿ ಹಾಗೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಭಾಷಣ ಮಾಡಿದರು.
    user_Ramesh Biradi
    Ramesh Biradi
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    5 hrs ago
  • ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ, ಭೀಮ ಧ್ವನಿ ಸಂಘಟನೆ ವತಿಯಿಂದ ಭ್ರಷ್ಟಾಚಾರದ ವಿರುದ್ಧ ಒಂದು ಪೂರ್ವಭಾವಿ ಸಭೆಯನ್ನು ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ದಿನಾಂಕ 21/06/2026 ರಂದು ನಡೆಸಲಾಯಿತು. ದಲಿತ ಸಂಘರ್ಷ ಸಮಿತಿ ಭೀಮ ಧ್ವನಿ ಸಂಘಟನೆಯು ಈ ಸಭೆಯನ್ನು ಆಯೋಜಿಸಿತ್ತು. ಸಭೆಯಲ್ಲಿ ಪ್ರಮುಖವಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಅವುಗಳಲ್ಲಿ ಪ್ರತಿ ಗ್ರಾಮದಲ್ಲಿ ಗ್ರಾಮ ಘಟಕಗಳನ್ನು ಸ್ಥಾಪಿಸುವುದು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಮಾರ್ಗದರ್ಶನ ನೀಡುವುದು ಸೇರಿವೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಎಸ್ಸಿ/ಎಸ್ಟಿ ಜನಾಂಗದ ಅನುದಾನದ ದುರ್ಬಳಕೆಯ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತುವುದು, ಹಾಗೂ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳಿಗೆ ನ್ಯಾಯ ಸಿಗುವವರೆಗೆ ಅವರ ಜೊತೆ ನಿಲ್ಲುವುದು ನಿರ್ಣಯಿಸಲಾಯಿತು. ಜೊತೆಗೆ, ಲೋಕೋಪಯೋಗಿ ಇಲಾಖೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ಅನೇಕ ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದು, ಮತ್ತು ಎಸ್ಸಿ/ಎಸ್ಟಿ ನೌಕರರ ಮೇಲೆ ನಡೆಯುವ ಅನ್ಯಾಯ ಹಾಗೂ ದಬ್ಬಾಳಿಕೆಯನ್ನು ಖಂಡಿಸುವುದು ಮುಂತಾದ ಹಲವು ಮುಖ್ಯ ವಿಷಯಗಳನ್ನು ವಿವರವಾಗಿ ಚರ್ಚಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಬಸವರಾಜ್ ಕಟ್ಟಿಮನಿ ಅವರು ಸಂಘಟನೆಯ ಕುರಿತು ವಿವರಿಸಿದರು. ಸಂಘಟನೆಯ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ ಶ್ರೀ ಮಿಲಿಂದ್ ಐಹೋಳೆ ಅವರು, ಸಭೆ ಮತ್ತು ಸಂಘಟನೆ ಕಟ್ಟುವ ಕುರಿತು, ಪ್ರತಿಯೊಬ್ಬ ಪದಾಧಿಕಾರಿಗಳು ತಾಲೂಕು ಮಟ್ಟದ ಸಂಘಟನೆಯ ಎಲ್ಲ ಪದಾಧಿಕಾರಿಗಳ ನೇಮಕಾತಿಯನ್ನು ಪೂರ್ಣಗೊಳಿಸಿ, ಅಖಂಡ ಬೆಳಗಾವಿ ಮತ್ತು ಚಿಕ್ಕೋಡಿ ಈ ಎರಡು ಕ್ಷೇತ್ರಗಳಲ್ಲಿ ಗಟ್ಟಿಯಾದ ಸಂಘಟನೆಯನ್ನು ನಿರ್ಮಿಸಬೇಕು ಎಂದು ಮಾರ್ಗದರ್ಶನ ನೀಡಿದರು. ಇದೇ ಸಂದರ್ಭದಲ್ಲಿ, ರಾಜ್ಯ ಸಮಿತಿ ಗೌರವಾಧ್ಯಕ್ಷರಾದ ಮಹಾಲಿಂಗ ಎಚ್. ಗಗ್ಗರಿ ಅವರು ಸಂಘಟನೆಯ ಕುರಿತು ಮತ್ತು ಎಲ್ಲ ಪದಾಧಿಕಾರಿಗಳಿಗೆ ತಾಲೂಕು ಹಾಗೂ ಜಿಲ್ಲಾ ಸಮಿತಿಗಳನ್ನು ಪೂರ್ಣಗೊಳಿಸಿ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕರೆ ನೀಡಿದರು. ಈ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಮಿಲಿಂದ್ ಐಹೋಳೆ, ರಾಜ್ಯ ಗೌರವಾಧ್ಯಕ್ಷರಾದ ಮಹಾಲಿಂಗ ಎಚ್. ಗಗ್ಗರಿ, ರಾಜ್ಯ ಉಪಾಧ್ಯಕ್ಷರಾದ ಬಸವರಾಜ್ ಕಟ್ಟಿಮನಿ, ಸುನಿತಾ ಮೊದಗಿ, ವೀಣಾ ಹುಚ್ಚನಟ್ಟಿ, ಬೆಳಗಾವಿ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಹೊಸಮನಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಧ್ಯಕ್ಷರಾದ ಮುಕೇಶ್ ಲಂಬುಗೋಳ, ಎಲ್ಲ ಮಹಿಳಾ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಮತ್ತು ಪುರುಷ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಸೇರಿದಂತೆ ಕಮಿಟಿಯ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
    4
    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ, ಭೀಮ ಧ್ವನಿ ಸಂಘಟನೆ ವತಿಯಿಂದ ಭ್ರಷ್ಟಾಚಾರದ ವಿರುದ್ಧ ಒಂದು ಪೂರ್ವಭಾವಿ ಸಭೆಯನ್ನು ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ದಿನಾಂಕ 21/06/2026 ರಂದು ನಡೆಸಲಾಯಿತು. ದಲಿತ ಸಂಘರ್ಷ ಸಮಿತಿ ಭೀಮ ಧ್ವನಿ ಸಂಘಟನೆಯು ಈ ಸಭೆಯನ್ನು ಆಯೋಜಿಸಿತ್ತು. 

ಸಭೆಯಲ್ಲಿ ಪ್ರಮುಖವಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಅವುಗಳಲ್ಲಿ ಪ್ರತಿ ಗ್ರಾಮದಲ್ಲಿ ಗ್ರಾಮ ಘಟಕಗಳನ್ನು ಸ್ಥಾಪಿಸುವುದು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳ ಆಧಾರದ ಮೇಲೆ ಮಾರ್ಗದರ್ಶನ ನೀಡುವುದು ಸೇರಿವೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಎಸ್ಸಿ/ಎಸ್ಟಿ ಜನಾಂಗದ ಅನುದಾನದ ದುರ್ಬಳಕೆಯ ವಿರುದ್ಧ ಒಗ್ಗಟ್ಟಾಗಿ ಧ್ವನಿ ಎತ್ತುವುದು, ಹಾಗೂ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳಿಗೆ ನ್ಯಾಯ ಸಿಗುವವರೆಗೆ ಅವರ ಜೊತೆ ನಿಲ್ಲುವುದು ನಿರ್ಣಯಿಸಲಾಯಿತು. ಜೊತೆಗೆ, ಲೋಕೋಪಯೋಗಿ ಇಲಾಖೆ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸೇರಿದಂತೆ ಅನೇಕ ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದು, ಮತ್ತು ಎಸ್ಸಿ/ಎಸ್ಟಿ ನೌಕರರ ಮೇಲೆ ನಡೆಯುವ ಅನ್ಯಾಯ ಹಾಗೂ ದಬ್ಬಾಳಿಕೆಯನ್ನು ಖಂಡಿಸುವುದು ಮುಂತಾದ ಹಲವು ಮುಖ್ಯ ವಿಷಯಗಳನ್ನು ವಿವರವಾಗಿ ಚರ್ಚಿಸಲಾಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಬಸವರಾಜ್ ಕಟ್ಟಿಮನಿ ಅವರು ಸಂಘಟನೆಯ ಕುರಿತು ವಿವರಿಸಿದರು. ಸಂಘಟನೆಯ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ ಶ್ರೀ ಮಿಲಿಂದ್ ಐಹೋಳೆ ಅವರು, ಸಭೆ ಮತ್ತು ಸಂಘಟನೆ ಕಟ್ಟುವ ಕುರಿತು, ಪ್ರತಿಯೊಬ್ಬ ಪದಾಧಿಕಾರಿಗಳು ತಾಲೂಕು ಮಟ್ಟದ ಸಂಘಟನೆಯ ಎಲ್ಲ ಪದಾಧಿಕಾರಿಗಳ ನೇಮಕಾತಿಯನ್ನು ಪೂರ್ಣಗೊಳಿಸಿ, ಅಖಂಡ ಬೆಳಗಾವಿ ಮತ್ತು ಚಿಕ್ಕೋಡಿ ಈ ಎರಡು ಕ್ಷೇತ್ರಗಳಲ್ಲಿ ಗಟ್ಟಿಯಾದ ಸಂಘಟನೆಯನ್ನು ನಿರ್ಮಿಸಬೇಕು ಎಂದು ಮಾರ್ಗದರ್ಶನ ನೀಡಿದರು. ಇದೇ ಸಂದರ್ಭದಲ್ಲಿ, ರಾಜ್ಯ ಸಮಿತಿ ಗೌರವಾಧ್ಯಕ್ಷರಾದ ಮಹಾಲಿಂಗ ಎಚ್. ಗಗ್ಗರಿ ಅವರು ಸಂಘಟನೆಯ ಕುರಿತು ಮತ್ತು ಎಲ್ಲ ಪದಾಧಿಕಾರಿಗಳಿಗೆ ತಾಲೂಕು ಹಾಗೂ ಜಿಲ್ಲಾ ಸಮಿತಿಗಳನ್ನು ಪೂರ್ಣಗೊಳಿಸಿ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕರೆ ನೀಡಿದರು.

ಈ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಮಿಲಿಂದ್ ಐಹೋಳೆ, ರಾಜ್ಯ ಗೌರವಾಧ್ಯಕ್ಷರಾದ ಮಹಾಲಿಂಗ ಎಚ್. ಗಗ್ಗರಿ, ರಾಜ್ಯ ಉಪಾಧ್ಯಕ್ಷರಾದ ಬಸವರಾಜ್ ಕಟ್ಟಿಮನಿ, ಸುನಿತಾ ಮೊದಗಿ, ವೀಣಾ ಹುಚ್ಚನಟ್ಟಿ, ಬೆಳಗಾವಿ ಜಿಲ್ಲಾಧ್ಯಕ್ಷರಾದ ಪ್ರಕಾಶ್ ಹೊಸಮನಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಧ್ಯಕ್ಷರಾದ ಮುಕೇಶ್ ಲಂಬುಗೋಳ, ಎಲ್ಲ ಮಹಿಳಾ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಮತ್ತು ಪುರುಷ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಸೇರಿದಂತೆ ಕಮಿಟಿಯ ಎಲ್ಲ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
    user_ಎಚ್ಚರಿಕೆ ನ್ಯೂಸ್  24×7
    ಎಚ್ಚರಿಕೆ ನ್ಯೂಸ್ 24×7
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    17 hrs ago
  • ಅಮರ ವಾಹಿನಿ ಕನ್ನಡ ನ್ಯೂಸ್ ವರದಿಯ ಪ್ರಕಾರ, ಕತ್ತಿ ಸಾಹುಕಾರ್ ಮತ್ತು ಜಾರಕಿಹೊಳಿ ಸಾಹುಕಾರ್‌ಗಳ ಸಮಾಗಮ ನಡೆದಿದೆ.
    1
    ಅಮರ ವಾಹಿನಿ ಕನ್ನಡ ನ್ಯೂಸ್ ವರದಿಯ ಪ್ರಕಾರ, ಕತ್ತಿ ಸಾಹುಕಾರ್ ಮತ್ತು ಜಾರಕಿಹೊಳಿ ಸಾಹುಕಾರ್‌ಗಳ ಸಮಾಗಮ ನಡೆದಿದೆ.
    user_ಅಮರ ವಾಹಿನಿ ಕನ್ನಡ news
    ಅಮರ ವಾಹಿನಿ ಕನ್ನಡ news
    ರಾಯಬಾಗ, ಬೆಳಗಾವಿ, ಕರ್ನಾಟಕ•
    18 hrs ago
  • ಮುಧೋಳ ತಾಲೂಕಿನ ಮುದ್ದಾಪೂರ ಪ್ರದೇಶದಲ್ಲಿರುವ ಜೆ.ಕೆ. ಸಿಮೆಂಟ್ಸ್‌ನ ಅಕ್ರಮ ಗಣಿಗಾರಿಕೆ ವಿರುದ್ಧ ಉತ್ತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಸೋಮವಾರಕ್ಕೆ ಈ ಪ್ರತಿಭಟನೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಈ ಸಮರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ರೈತರ ಆರೋಪದ ಪ್ರಕಾರ, ನಿಯಮಗಳ ಅನುಸಾರ ಈ ಭಾಗದಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪನೆಗೆ ಅವಕಾಶವಿಲ್ಲ. ಆದರೂ, ಅಧಿಕಾರಿಗಳ ಕಣ್ಮುಂದೆಯೇ ನಿಯಮಗಳನ್ನು ಗಾಳಿಗೆ ತೂರಿ ಕೈಗಾರಿಕೆ ಸ್ಥಾಪನೆಗೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    1
    ಮುಧೋಳ ತಾಲೂಕಿನ ಮುದ್ದಾಪೂರ ಪ್ರದೇಶದಲ್ಲಿರುವ ಜೆ.ಕೆ. ಸಿಮೆಂಟ್ಸ್‌ನ ಅಕ್ರಮ ಗಣಿಗಾರಿಕೆ ವಿರುದ್ಧ ಉತ್ತರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಸೋಮವಾರಕ್ಕೆ ಈ ಪ್ರತಿಭಟನೆ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಈ ಸಮರ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ.

ರೈತರ ಆರೋಪದ ಪ್ರಕಾರ, ನಿಯಮಗಳ ಅನುಸಾರ ಈ ಭಾಗದಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪನೆಗೆ ಅವಕಾಶವಿಲ್ಲ. ಆದರೂ, ಅಧಿಕಾರಿಗಳ ಕಣ್ಮುಂದೆಯೇ ನಿಯಮಗಳನ್ನು ಗಾಳಿಗೆ ತೂರಿ ಕೈಗಾರಿಕೆ ಸ್ಥಾಪನೆಗೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    user_GV NEWS
    GV NEWS
    ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
    8 hrs ago
  • ಜಮಖಂಡಿಯಲ್ಲಿ ರೈತ ಕುಟುಂಬವೊಂದು ಗಂಭೀರ ಆರೋಪ ಮಾಡಿದೆ. ಪಶುವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಆಕಳು ಸಾವನ್ನಪ್ಪಿದೆ ಎಂದು ಕುಟುಂಬ ಹೇಳಿದೆ.
    1
    ಜಮಖಂಡಿಯಲ್ಲಿ ರೈತ ಕುಟುಂಬವೊಂದು ಗಂಭೀರ ಆರೋಪ ಮಾಡಿದೆ. ಪಶುವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಆಕಳು ಸಾವನ್ನಪ್ಪಿದೆ ಎಂದು ಕುಟುಂಬ ಹೇಳಿದೆ.
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    23 hrs ago
  • ಪೊಲೀಸರ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಖಾಕಿ ಪಡೆ ನೀಟ್ ವಿದ್ಯಾರ್ಥಿಗಳನ್ನು ಅವರ ಸರಿಯಾದ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಮೂಲಕ ಅವರ ಭವಿಷ್ಯವನ್ನು ಉಳಿಸಿದೆ. ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ನೀಡಿ, ಅವರಿಗೆ ಪರೀಕ್ಷೆಗೆ ಹಾಜರಾಗಲು ಅನುಕೂಲ ಮಾಡಿಕೊಟ್ಟಿದ್ದಾರೆ. ಪೊಲೀಸರ ಈ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದು.
    1
    ಪೊಲೀಸರ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಖಾಕಿ ಪಡೆ ನೀಟ್ ವಿದ್ಯಾರ್ಥಿಗಳನ್ನು ಅವರ ಸರಿಯಾದ ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವ ಮೂಲಕ ಅವರ ಭವಿಷ್ಯವನ್ನು ಉಳಿಸಿದೆ. ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ನೀಡಿ, ಅವರಿಗೆ ಪರೀಕ್ಷೆಗೆ ಹಾಜರಾಗಲು ಅನುಕೂಲ ಮಾಡಿಕೊಟ್ಟಿದ್ದಾರೆ. ಪೊಲೀಸರ ಈ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    1 hr ago
  • ವೀಕ್ಷಕರೇ, ಜಂಗ್ಲಿ ಮನೆತನದ ಆಲದ ಮರ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಜೀವ ತಂಗ್ಯವ್ವ ಮಾರುತಿ ಜಂಗ್ಲಿ ಅವರು ಈಗ ಇಹಲೋಕ ತ್ಯಜಿಸಿದ್ದಾರೆ. ತುಂಬಿದ ಕುಟುಂಬದ ಹಿರಿಯ ಜೀವಿಯಾಗಿ ಬದುಕು ಸವೆಸಿದ ತಾಯಿ ತಂಗ್ಯವ್ವ ಅವರು ತಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿ ದಿನಾಂಕ 20 ಜೂನ್ 2026 ರಂದು ತಮ್ಮ ಜೀವನಕ್ಕೆ ಅಂತಿಮ ವಿದಾಯ ಹೇಳಿದ್ದಾರೆ. ದಿನಾಂಕ 25 ಮೇ 1945 ರಂದು ಖಣದಾಳೆಂಬ ಗ್ರಾಮದಲ್ಲಿ ಜನಿಸಿದ ತಾಯಿ ತಂಗ್ಯವ್ವ ಅವರ ವಿವಾಹ ಬೆಂಡವಾಡ ಗ್ರಾಮದಲ್ಲಿ ನೆರವೇರಿತು. ಅಲ್ಲಿ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ಸುಮಾರು 15 ವರ್ಷಗಳ ಕಾಲ ಬದುಕು ನಡೆಸಿದ ಅವರು, ನಂತರ ಉಗಾರ ಗ್ರಾಮಕ್ಕೆ ಬಂದು ಹಲವು ವರ್ಷಗಳ ಕಾಲ ಗ್ರಾಮ ಸೇವೆ ಸಲ್ಲಿಸಿದರು. ತಮ್ಮ ಪತಿಯನ್ನು 18 ಅಕ್ಟೋಬರ 2006 ರಂದು ಕಳೆದುಕೊಂಡರೂ, ಅವರು ತಮ್ಮ ಮಕ್ಕಳಿಗಾಗಿ ಉಗಾರ ಖುರ್ದ್ ಗ್ರಾಮ ಪಂಚಾಯತಿಯಲ್ಲಿ 25 ವರ್ಷಗಳ ಕಾಲ ಗ್ರಾಮವನ್ನು ಸ್ವಚ್ಛಗೊಳಿಸುವ ಸೇವೆಯಲ್ಲಿ ನಿರತರಾಗಿದ್ದರು. 2017 ರಲ್ಲಿ ಗ್ರಾಮ ಪಂಚಾಯತಿ ಸೇವೆಯನ್ನು ಪೂರ್ಣಗೊಳಿಸಿದ ತಾಯಿ ತಂಗ್ಯವ್ವ, ತಮ್ಮ ಜೀವನದಲ್ಲಿ ಹಲವಾರು ಏರುಪೇರುಗಳನ್ನು ಮತ್ತು ಸಾಕಷ್ಟು ಕಷ್ಟಗಳನ್ನು ಅನುಭವಿಸಿ, 9 ಜನ ಮಕ್ಕಳನ್ನು ಸಾಕಿ ಸಲುಹಿದ್ದರು ಹಾಗೂ ಸುಮಾರು 5 ತಲೆಮಾರುಗಳನ್ನು ಕಂಡಿದ್ದರು. ಇವರ ಅಗಲಿಕೆಯಿಂದ ಕುಟುಂಬಸ್ಥರ ಮತ್ತು ಗ್ರಾಮಸ್ಥರ ರೋಧನ ಮುಗಿಲುಮುಟ್ಟಿತ್ತು, 'ಮರಳಿ ಬಾ ತಾಯಿ' ಎಂಬ ಕೂಗು ಎಲ್ಲೆಡೆ ಕೇಳಿಬಂತು.
    2
    ವೀಕ್ಷಕರೇ, ಜಂಗ್ಲಿ ಮನೆತನದ ಆಲದ ಮರ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ಜೀವ ತಂಗ್ಯವ್ವ ಮಾರುತಿ ಜಂಗ್ಲಿ ಅವರು ಈಗ ಇಹಲೋಕ ತ್ಯಜಿಸಿದ್ದಾರೆ. ತುಂಬಿದ ಕುಟುಂಬದ ಹಿರಿಯ ಜೀವಿಯಾಗಿ ಬದುಕು ಸವೆಸಿದ ತಾಯಿ ತಂಗ್ಯವ್ವ ಅವರು ತಮ್ಮ ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿ ದಿನಾಂಕ 20 ಜೂನ್ 2026 ರಂದು ತಮ್ಮ ಜೀವನಕ್ಕೆ ಅಂತಿಮ ವಿದಾಯ ಹೇಳಿದ್ದಾರೆ.

ದಿನಾಂಕ 25 ಮೇ 1945 ರಂದು ಖಣದಾಳೆಂಬ ಗ್ರಾಮದಲ್ಲಿ ಜನಿಸಿದ ತಾಯಿ ತಂಗ್ಯವ್ವ ಅವರ ವಿವಾಹ ಬೆಂಡವಾಡ ಗ್ರಾಮದಲ್ಲಿ ನೆರವೇರಿತು. ಅಲ್ಲಿ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ಸುಮಾರು 15 ವರ್ಷಗಳ ಕಾಲ ಬದುಕು ನಡೆಸಿದ ಅವರು, ನಂತರ ಉಗಾರ ಗ್ರಾಮಕ್ಕೆ ಬಂದು ಹಲವು ವರ್ಷಗಳ ಕಾಲ ಗ್ರಾಮ ಸೇವೆ ಸಲ್ಲಿಸಿದರು. ತಮ್ಮ ಪತಿಯನ್ನು 18 ಅಕ್ಟೋಬರ 2006 ರಂದು ಕಳೆದುಕೊಂಡರೂ, ಅವರು ತಮ್ಮ ಮಕ್ಕಳಿಗಾಗಿ ಉಗಾರ ಖುರ್ದ್ ಗ್ರಾಮ ಪಂಚಾಯತಿಯಲ್ಲಿ 25 ವರ್ಷಗಳ ಕಾಲ ಗ್ರಾಮವನ್ನು ಸ್ವಚ್ಛಗೊಳಿಸುವ ಸೇವೆಯಲ್ಲಿ ನಿರತರಾಗಿದ್ದರು. 2017 ರಲ್ಲಿ ಗ್ರಾಮ ಪಂಚಾಯತಿ ಸೇವೆಯನ್ನು ಪೂರ್ಣಗೊಳಿಸಿದ ತಾಯಿ ತಂಗ್ಯವ್ವ, ತಮ್ಮ ಜೀವನದಲ್ಲಿ ಹಲವಾರು ಏರುಪೇರುಗಳನ್ನು ಮತ್ತು ಸಾಕಷ್ಟು ಕಷ್ಟಗಳನ್ನು ಅನುಭವಿಸಿ, 9 ಜನ ಮಕ್ಕಳನ್ನು ಸಾಕಿ ಸಲುಹಿದ್ದರು ಹಾಗೂ ಸುಮಾರು 5 ತಲೆಮಾರುಗಳನ್ನು ಕಂಡಿದ್ದರು.

ಇವರ ಅಗಲಿಕೆಯಿಂದ ಕುಟುಂಬಸ್ಥರ ಮತ್ತು ಗ್ರಾಮಸ್ಥರ ರೋಧನ ಮುಗಿಲುಮುಟ್ಟಿತ್ತು, 'ಮರಳಿ ಬಾ ತಾಯಿ' ಎಂಬ ಕೂಗು ಎಲ್ಲೆಡೆ ಕೇಳಿಬಂತು.
    user_SAMATA NEWS KANNADA 1
    SAMATA NEWS KANNADA 1
    Advertising agency ಬೆಳಗಾವಿ, ಬೆಳಗಾವಿ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.