ಮಳವಳ್ಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ-ಕುಂದು ಕೊರತೆ ಸಭೆ -ವಿವಿಧ ಇಲಾಖೆಗಳ ೨೯ ದೂರು ಸ್ವೀಕಾರ –ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸನೀಲ್‌ಕುಮಾರ್ ಹೇಳಿಕೆ • ಅಧಿಕಾರಿಗಳ ನಿರ್ಲಕ್ಷತೆ-೪-೨-೧ವರ್ಷವಾದರೂ ಕೆಲಸ ಅಗುತ್ತಿಲ್ಲ-ಅಲೆದಾಟ ತಪ್ಪಿಲ್ಲ-ಅಲೆದು ಅಲೆದು ತಂದೆ ಮೃತಪಟ್ಟರು-ತಾಲೂಕು ಕಛೇರಿಯ ಸಿಬ್ಬಂದಿಗಳ ಕಾರ್ಯವೈಖರಿಗೆ -ಸಾರ್ವಜನಿಕರ ಅರೋಪ-ಅಕ್ರೋಶ ಮಳವಳ್ಳಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ-ಕುಂದು ಕೊರತೆ ಸಭೆ -ವಿವಿಧ ಇಲಾಖೆಗಳ ೨೯ ದೂರು ಸ್ವೀಕಾರ –ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸನೀಲ್‌ಕುಮಾರ್ ಹೇಳಿಕೆ • ಅಧಿಕಾರಿಗಳ ನಿರ್ಲಕ್ಷತೆ-೪-೨-೧ವರ್ಷವಾದರೂ ಕೆಲಸ ಅಗುತ್ತಿಲ್ಲ-ಅಲೆದಾಟ ತಪ್ಪಿಲ್ಲ-ಅಲೆದು ಅಲೆದು ತಂದೆ ಮೃತಪಟ್ಟರು-ತಾಲೂಕು ಕಛೇರಿಯ ಸಿಬ್ಬಂದಿಗಳ ಕಾರ್ಯವೈಖರಿಗೆ -ಸಾರ್ವಜನಿಕರ ಅರೋಪ-ಅಕ್ರೋಶ ಮಳವಳ್ಳಿ:ಪಟ್ಟಣದ ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್ ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಬಗ್ಗೆ ಸಾರ್ವಜನಿಕರಿಂದ ದೂರು ಸ್ವೀಕಾರ ಮತ್ತು ಕುಂದು-ಕೊರತೆ ಸಭೆ ಬುದವಾರ ಜರುಗಿತು. ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ದೂರು ಸ್ವೀಕಾರ ಸಭೆಯ ನಂತರ ಲೋಕಾಯುಕ್ತ ಡಿವೈಎಸ್ಪಿ ಹೆಚ್.ಟಿ.ಸುನೀಲ್ ಕುಮಾರ್ ಮಾತನಾಡಿ ಈ ದಿನ ತಹಶೀಲ್ದಾರ್ ಕಛೇರಿಯ ೧೬,ಸರ್ವೆ ಇಲಾಖೆಯ ೬, ಅರಣ್ಯ ಇಲಾಖೆ ೨,ಗ್ರಾ.ಪಂ ಪಿಡಿಓ ೨, ಬಿ.ಎಸ್.ಎನ್.ಎಲ್ ಕಛೇರಿಯ ೧, ಉಪವಿಭಾಗಾದಿಕಾರಿಗಳ ಕಚೇರಿಯ ೧,ಜಿ.ಪಂ.ಸಿಇಓ ಕಚೇರಿಯ ೧ ದೂರು ಸೇರಿದಂತೆ ಒಟ್ಟು ೨೯ ದೂರುಗಳನ್ನು ಸ್ವೀಕರಿಸಲಾಗಿದ್ದು ಈ ಬಗ್ಗೆ ಕ್ರಮವಹಿಸಲಾಗಿದೆ ಎಂದ ಅವರು ತಳಗವಾದಿ ಗ್ರಾಮದಲ್ಲಿ ಕುಡಿಯುವ ನೀರು ಶುದ್ದವಿಲ್ಲದ ನೀರು ಸರಬರಾಜು ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಕ್ರಮಕೈಗೊಂಡು ನೀರು ಸರಬರಾಜು ಸ್ಥಗಿತಗೊಳಿಸಿ,ಗ್ರಾಮದ ಜನರ ಅರೋಗ್ಯಕ್ಕೆ ಅನೂಕೂಲವಾದ ನೀರು ನೀಡುವಂತೆ ಸೂಚನೆ ನೀಡಲಾಗಿದೆ ಎಂದರು. ಅಧಿಕಾರಿಗಳಿಗೆ ಸಾಮಾಜಿಕ ಬದ್ದತೆ ಮತ್ತು ಜವಬ್ದಾರಿಯಿಲ್ಲ ಸಾಮಾಜಿಕ ಕಾರ್ಯಕರ್ತರ ಎಂ.ವಿಜಯ್ ಅಕ್ರೋಶ ಈ ಸಂದರ್ಭದಲ್ಲಿ ದೂರು ಕೊಡಲು ಬಂದ ಸಾಮಾಜಿಕ ಕಾರ್ಯಕರ್ತ ಎಂ.ವಿಜಯ್ ಮಾಮರ ನ್ಯೂಸ್ ನೊಂದಿಗೆ ಮಾತನಾಡಿ ನಾನು ಆರ ಟಿ ಸಿಯಲ್ಲಿನ ಹೆಸರು ತಿದ್ದುಪಡಿಗೆ ಅರ್ಜಿ ನೀಡಿ ಕಳೆದ ವರ್ಷ ೨೦೨೪ ರಲ್ಲಿ ನೀಡಿದ್ದೆನೆ.ಇಲ್ಲಿಯವರೆಗೆ ಏನು ಕ್ರಮವಹಿಸಲ್ಲ,ಈಗ ಹಿಂಬರಹ ನೀಡಿ ಮೇಲ್ಮನವಿ ಹಾಕಿಕೊಳ್ಳಿ ಎಂದು ಹೇಳಿದ್ದಾರೆ.ಇದನ್ನು ಮನವಿ ನೀಡಿದಾಗಲೇ ತಿಳಿಸಬಹುದಿತ್ತು.ತಿಳಿಸಿಲ್ಲ. ೧ ವರ್ಷ ಅಲೆಸಿ ಈಗ ಅದು ನಾವು ಕೇಳಿದಾಗ ಮಾತ್ರ ಹಿಂಬರಹ ನೀಡಿದ್ದಾರೆ ಇದು ತಾಲೂಕು ಕಛೇರಿಯ ಆಢಳಿತ ವ್ಯವಸ್ಥೆಯ ಭ್ರಷ್ಠಾಚಾರ ಮತ್ತು ನಿರ್ಲಕ್ಷತೆಗೆ ಸಾಕ್ಷಿಯಾಗಿದೆ ಎಂದು ಕಿಡಿಕಾರಿದರು. ಹಕ್ಕು ಖುಲಾಸೆಗೆ ೧ ವರ್ಷ ಬೇಕು ಯುವ ಮುಖಂಡ ಟಿ.ರಾಜೇಶ್ ಅರೋಪ ಈ ಸಂಭAದ ಲೋಕಾಯುಕ್ತರ ಬಂದಿದ್ದಾರೆAದು ದೂರು ನೀಡಲು ಬಂದ ಟಿ.ರಾಜೇಶ್ ಎಂಬುವರನ್ನು ಮಾಮರ ನ್ಯೂಸ್ ಪ್ರತಿನಿಧಿ ಪ್ರಶ್ನಿಸಿದಾಗ ವ್ಯವಸ್ಥೆಯ ವಿರುದ್ದ ಅಕ್ರೋಶ ವ್ಯಕ್ತವಾಯಿತು. ಕಛೇರಿಯ ಸಿಬಬಂದಿಗಳಿಗೆ ದಪ್ಪ ಚರ್ಮ,ಇವರಿಗೆ ಬಡವರ ಕಷ್ಟ ಗೊತ್ತಾಗುವುದಿಲ್ಲ.ನನ್ನ ಪತ್ನಿಯ ಹೆಸರಿನಲ್ಲಿರುವ ಆರ್‌ಟಿಸಿಯಲ್ಲಿ ಸಹಕಾರ ಸಂಘದ ನಮೂದಾಗಿದ್ದು,ಸಾಲದ ಹಕ್ಕು ಖುಲಾಸೆ ಮಾಡುವಂತೆ ಅರ್ಜಿ ಅದಕ್ಕೆ ಸಂಭAದಿಸಿದAತೆ ಸಬ್ ರಿಜಿಸ್ಟರ್ ಕಛೇರಿಯ ಸಾಲ ಖುಲಾಸೆ ದೃಢೀಕರಣ ನೀಡಿ ವರ್ಷವಾಗಿದೆ,ಅದು ಇನ್ನು ಅಗಿಲ್ಲ.ಬಂದು ಕೇಳಿದರೆ ಆಢಳಿತ ತಹಸೀಲ್ದಾರ್ ಗುರುಪ್ರಸಾದ್ ಹೇಳುತ್ತಾರೆ ,ಆರ್ ಅರ್ ಟಿ ವಿಭಾಗದಲ್ಲಿ ಅನೇಕರು ಬದಲಾವಣೆಯಾಗಿದ್ದಾರೆ.ದಾಖಲಾತಿ ಸಿಗುತ್ತಿಲ್ಲ.ದಯವಿಟ್ಟು ಅದರ ಇನ್ನೊಂದು ಪ್ರತಿ ತಂದು ಕೊಡಿ ಮಾಡುತ್ತವೆ ಎಂದು ಪ್ರತಿಕ್ರಿಯಿಸುತ್ತಾರೆ. ಜನರ ಮನವಿಗಳಿಗೆ,ದೂರುಗಳಿಗೆ ಇಲ್ಲಿ ಬೆಲೆ ಇಲ್ಲದಾಗಿದೆ.ಈಗ ಪುನ: ಸಬ್ ರಿಜಿಸ್ಟರ್ ಕಛೇರಿಯಲ್ಲಿ ನಕಲಿ ಪ್ರತಿ ತಗೆದುಕೊಂಡು ಸಲ್ಲಿಸಿದ್ದೆನೆ. ಇನ್ನು ಎಷ್ಟು ತಿಂಗಳು ಅಗುತ್ತದೋ ಗೊತ್ತಿಲ್ಲ.ಕಾನೂನು ಬದ್ದ ಒಂದು ಸಣ್ಣ ಕೆಲಸಕ್ಕೆ ೧ ವರ್ಷವಾದರೂ ಅಗಿಲ್ಲ,ಇದು ಆಢಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಅರ್ಜಿ ನೀಡಿ ೨ ತಿಂಗಳಾದರೂ ಜಮೀನಿನ ದಾಖಲಾತಿ ನೀಡಿಲ್ಲ: ಈ ಸಂದರ್ಬದಲ್ಲಿ ಮುಖಂಡ ಕಾಂತರಾಜು ಮಾತನಾಡಿ ನನ್ನ ಸಂಬAಧಿಕರ ಜಮೀನಿನ ದಾಖಲಾತಿಗಾಗಿ ಅರ್ಜಿ ನೀಡಿ ೨ ತಿಂಗಳು ಕಳೆದಿದೆ,ಇನ್ನು ರೇಕಾರ್ಡು ರೂಮಿನ ಸಿಬ್ಬಂದಿಗಳು ದಾಖಲಾತಿ ನೀಡಿಲ್ಲ,ಇದಕ್ಕೆ ಸಂಭAದಿಸಿದAತೆ ತಹಶೀಲ್ದಾರ್ ಮತ್ತು ಆಢಳಿತ ಶಿರಸ್ತದಾರ್ ಗಮನಕ್ಕೆ ತಂದರೂ ಅವರು ಸೂಚನೆ ನೀಡಿದರೂ ಅವರ ಮಾತಿಗೂ ಕಿಮ್ಮತ್ತಿಲ್ಲ.ಸಿಬ್ಬಂದಿಗಳ ನಿರ್ಲಕ್ಷತೆಯಿಂದ ಜನರು ದಿನನಿತ್ಯ ಅಲೆಯುವಂತಾಗಿದೆ ಎಂದು ತಾಲೂಕು ಕಛೇರಿಯ ಅವ್ಯವಸ್ಥೆಯ ಬಗ್ಗೆ ವಿಷಾಧ ವ್ಯಕ್ತಪಡಿಸಿದರು. ದರಕಾಸ್ತು ಜಮೀನು ಖಾತೆ ಮಾಡಿಕೊಡಲು ೪—೫ ವರ್ಷ ಅಲೆದಾಟ-ಅಲೆದು ಮೃತಪಟ್ಟ ತಂದೆ: ಕಾನೂನು ಬದ್ದವಾಗಿ ಸರ್ಕಾರ ನೀಡಿರುವ ಜಮೀನನ್ನು ಖಾತೆ ಮಾಡಿಕೊಡುವಂತೆ ಎಲ್ಲ ಅಗತ್ಯ ಪೂರಕ ದಾಖಲಾತಿಗಳು ನೀಡಿ ಮನವಿ ಮಾಡಿದರೂ ಕಳೆದ ೪-೫ ವರ್ಷದಿಂದ ಖಾತೆ ಮಾಡಿಕೊಟ್ಟಿಲ್ಲ ಇದಕ್ಕಾಗಿ ಅಲೆದು ಅಲೆದು ನಮ್ಮ ತಂದೆ ಸಾವನ್ನಪ್ಪಿದರೆಂದು ದೂರುದಾರ ಬಸವೇಶ್ ಬೇಸರ ವ್ಯಕ್ತಪಡಿಸಿದರು. ಕಳೆದ ೧ ವರ್ಷದಿಂದ ಖಾತೆ ಮಾಡಿಕೊಡುವಂತೆ ಎಲ್ಲ ಕಾನೂನುಬದ್ದವಾಗಿ ದಾಖಲಾತಿಗಳು ಸಲ್ಲಿಸಿದ್ದೆನೆ.ಅದರೂ ಖಾತೆ ಮಾಡಿಕೊಡುವಲ್ಲಿ ಕುಂಟು ನೆಪ ಹೇಳುತ್ತಾ ಕಾಲಹರಣ ಮಾಡುತ್ತಿದ್ದಾರೆ.ಇದೇ ರೀತಿಯ ೯೦ಕ್ಕೂ ಹೆಚ್ಚು ಪ್ರಕರಣಗಳು ವರ್ಷಾನುಗಟ್ಟಲೆಗಳಿಂದ ನೆನೆಗುದಿಗೆ ಬಿದ್ದಿವೆ,.ಕೇಳಿದರೆ ಅನ್‌ಲೈನ್ ಸಮಸ್ಯೆ ಎಂದು ಹೇಳುತ್ತಾರೆ.ಈ ಬಗ್ಗೆ ಅಪರ ಜಿಲ್ಲಾದಿಕಾರಿಗಳ ಗಮನಕ್ಕೆ ತಂದು ದೂರು ನೀಡಿದೆವು, ಅವರು ಸಹ ಕಡಿತ ಪರಿಶೀಲಿಸಿ ಕೂಡಲೇ ಖಾತೆ ಮಾಡಿಕೊಡುವಂತೆ ಸೂಚಿಸಿದರು ಅವರ ಸೂಚನೆಗೂ ಬೆಲೆ-ಕಿಮ್ಮತ್ತಿಲವಾಗಿದೆ.ನಮ್ಮ ಕಡಿತ ಹಾಗೆಯ ಕೊಳೆಯುತ್ತಿದೆ. ಸರ್ಕಾರಗಳು ಜನರಿಗೆ ಅನೂಕೂಲವಾಗಲೆಂದು ಏನೇ ಯೋಜನೆ ಕಾನೂನು ತಂದರೂ ಅನುಷ್ಟಾನ ಮಾಡುವ ಅಧಿಕಾರಿಗಳ ನಿರ್ಲಕ್ಷತೆ ಮತ್ತು ಬೇಜವಬ್ದಾರಿತನದಿಂದ ಅಲೆಯಬೇಕಿದೆ ಎಂದು ತಮ್ಮ ಅಳನ್ನು ಈ ಸಂದರ್ಭದಲ್ಲಿ ತೊಡಿಕೊಂಡರು. ದೂರು ಸ್ವೀಕಾರ ಸಭೆಯಲ್ಲಿ ಲೋಕಾಯುಕ್ತ ಇನ್ಸೆಪೆಕ್ಟರ್ ರವಿಕುಮಾರ್,ತಹಶೀಲ್ದಾರ್ ಡಾ.ಎಸ್.ವಿ.ಲೋಕೆಶ್ ಸೇರಿದಮತೆ ತಾಲೂಕು ಮಟ್ಟದ ಅಧಿಕಾರಿಗಳು,ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಚಿತ್ರ-೧೧-೩ ಮಳವಳ್ಳಿ ಪಟ್ಟಣದ ತಾಲೂಕು ಕಛೇರಿಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್ ತಂಡ ಸಾರ್ವಜನಿಕರಿಂದ ದೂರು ಸ್ವೀಕರಿಸಿ ಸಲಹೆ ಸೂಚನೆ ನೀಡಿದರು. \

- Ramesh RameshMalavalli, Mandya👏on 18 March
- ಕೊಳ್ಳೇಗಾಲ. ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಇಂದು ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮದಿನದಂದು ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂಕರ ಮಾಡದೇ ಅಪಮಾನ ಎಸಗಿರುವುದನ್ನು ಖಂಡಿಸಿ ಮನವಿ ಸಲ್ಲಿಸಿದರು. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರೀ ಹಾಗೂ ಪದಾಧಿಕಾರಿಗಳು ಜಮಾಯಿಸಿ ಶಿರೆಸ್ತದಾರ್ ಕೃಪಕಾರ್ ರವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರೀ ಮಾತನಾಡಿ ಪ್ರಜಾಪ್ರಭುತ್ವದ ಪಿತಾಮಹ, ರಾಷ್ಟ್ರನಾಯಕ ಡಾ. ಅಂಬೇಡ್ಕರ್‌ರವರ 135ನೇ ಜಯಂತಿಯನ್ನು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳ ಗೌರವ ಪೂರ್ವಕವಾಗಿ ಆಚರಣೆ ಮಾಡುತ್ತೀರುವುದು ನಮ್ಮೇಲ್ಲರಿಗೂ ತಿಳಿದಿರುವು ನಿಮಗೂ ಸಹ ತಿಳಿದಿಲಿದೆ. ಆದರೆ ಕೊಳ್ಳೇಗಾಲ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯು ಕೂಡ ಆಚರಣೆ ಮಾಡಿದೆ ಆದರೆ ಕೆಲವು ತಾಲ್ಲೂಕಿನ ವಿವಿಧ ಇಲಾಖೆಗಳು ನಿಯಮ ವಾಗಿ ದೀಪಾಲಂಕರ ಮಾಡದೆ, ಕಾಟಚಾರಕ್ಕೆ ಜಯಂತಿಯನ್ನು ಮಾಡಿರುತ್ತಾರೆ, ಹಾಗಾಗಿ ಇಂತವರ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ಜಗದೀಶ್ ಶಾಸ್ತ್ರೀ, ಉಪಾಧ್ಯಕ್ಷರು ಮೊಹಮ್ಮದ್ ಅಬ್ಜಲ್, ಯೂನುಸ್ ಪಾಷ, ಪ್ರಧಾನ ಕಾರ್ಯದರ್ಶಿ ನಾಗರಾಜು, ಚೇತನ್, ಚಂದನ್ ಇದ್ದರು.1
- 135 TH BIRTH ANNIVERSARY OF DR. BR AMBEDKAR SAHEB BY KARNATAKA RASHTRA SAMITI PAKSHA1
- ಹನೂರು ತಾಲೂಕಿನ ಪಿಜಿಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎರಡನೇ ವಾರ್ಡ್‌ನಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿ, ಗ್ರಾಮಸ್ಥರು ಸಂಕಷ್ಟಕ್ಕೊಳಗಾಗಿದ್ದಾರೆ. ಸಮಸ್ಯೆಯಿಂದ ಬೇಸತ್ತ ಮಹಿಳೆಯರು ಬುಧವಾರ ಖಾಲಿ ಬಿಂದಿಗೆಗಳನ್ನು ಹಿಡಿದು ತಮ್ಮ ಆಕ್ರೋಶ ಮತ್ತು ನೋವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು, “ಎರಡನೇ ವಾರ್ಡ್‌ನಲ್ಲಿ ವಾಸಿಸುವ ಕ್ರಿಶ್ಚಿಯನ್ ಸಮುದಾಯದ ಜನರು ನೀರಿನ ಕೊರತೆಯಿಂದ ದಿನನಿತ್ಯದ ಜೀವನ ನಡೆಸುವುದು ದುಸ್ತರವಾಗಿದೆ. ಕುಡಿಯಲು ನೀರಿಲ್ಲದೆ, ಶೌಚಾಲಯಗಳಿಗೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾವು ತೀವ್ರ ಸಂಕಷ್ಟ ಅನುಭವಿಸುತ್ತಿದ್ದೇವೆ,” ಎಂದು ಹೇಳಿದರು. “ನಾವು ಅಲ್ಪಸಂಖ್ಯಾತರು. ನಮ್ಮ ಸಮಸ್ಯೆಯನ್ನು ಕೇಳುವವರೇ ಇಲ್ಲ. ನಮಗೆ ಬೇರೆ ಏನೂ ಬೇಡ, ಕುಡಿಯಲು ನೀರು ಕೊಟ್ಟರೆ ಸಾಕು,” ಎಂದು ಮಹಿಳೆಯರು ಕಳವಳ ವ್ಯಕ್ತಪಡಿಸಿದರು.1
- *ಭಾರತ ನಲ್ಲಿ ವೈರಲ್*1
- ಹನೂರಿನಲ್ಲಿ ಇಂದು ರೈತರ ಬೃಹತ್ ಪ್ರತಿಭಟನೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ಹನೂರು: ತಾಲ್ಲೂಕಿನ ರೈತರು ಎದುರಿಸುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹನೂರು ಶಾಖೆ) ವತಿಯಿಂದ ಇಂದು (ದಿನಾಂಕ: 15-04-2026) ಬೆಳಿಗ್ಗೆ 10 ಗಂಟೆಗೆ ಹನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವ ಸರ್ಕಾರ ಹಾಗೂ ಮೌನವಾಗಿರುವ ಅಧಿಕಾರಿಗಳನ್ನು ಎಚ್ಚರಿಸಲು ಈ 'ಬೃಹತ್ ಚಳುವಳಿ'ಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಮುಖವಾಗಿ ಈ ಕೆಳಗಿನ ಬೇಡಿಕೆಗಳನ್ನು ಮುಂದಿಡಲಾಗಿದೆ: ಜಲಮೂಲಗಳ ಸಂರಕ್ಷಣೆ: ಗುಂಡಾಲ್ ಜಲಾಶಯದಿಂದ ಹನೂರು ತಾಲ್ಲೂಕಿನ ಎಲ್ಲಾ ಕೆರೆ-ಕಟ್ಟೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯ: ತಹಶೀಲ್ದಾರ್ ಕಚೇರಿಯಲ್ಲಿನ ಅವ್ಯವಹಾರಗಳನ್ನು ತಡೆಗಟ್ಟಬೇಕು ಹಾಗೂ ಸಾಗುವಳಿ ಚೀಟಿ ವಿತರಣೆ, ಪೋಡಿ ವಿಳಂಬ ಮತ್ತು ರಸ್ತೆ ಸೌಕರ್ಯಗಳ ಬಗ್ಗೆ ಅಧಿಕಾರಿಗಳು ತೋರುತ್ತಿರುವ ಬೇಜವಾಬ್ದಾರಿಯನ್ನು ಖಂಡಿಸಲಾಗಿದೆ. ಮೂಲಸೌಕರ್ಯ: ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಗ್ರಾಮಗಳಿಗೆ ಕನಿಷ್ಠ ಮೂಲಭೂತ ಸೌಕರ್ಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪಶುಸಂಗೋಪನೆ: ಸಾಂಕ್ರಾಮಿಕ ರೋಗಗಳಿಂದ ಸಾಯುತ್ತಿರುವ ಕುರಿ, ಮೇಕೆ ಹಾಗೂ ಜಾನುವಾರುಗಳಿಗೆ ಸೂಕ್ತ ಔಷಧ ಮತ್ತು ಚಿಕಿತ್ಸಾ ಸೌಲಭ್ಯ ಒದಗಿಸಬೇಕು. ವನ್ಯಜೀವಿ ಸಂಘರ್ಷ: ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ರೈತರ ಮೇಲೆ ನಡೆಯುತ್ತಿರುವ ಕಾಡುಪ್ರಾಣಿಗಳ ದಾಳಿ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ಯೋಜನೆಗಳ ಅನುಷ್ಠಾನ: ಉಡುತೊರೆಹಳ್ಳದ ನೀರಾವರಿ ಯೋಜನೆಯ ವಿಳಂಬ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. "ರೈತರು ಇಂದು ಸಂಕಷ್ಟದಲ್ಲಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಈ ಹೋರಾಟ ಅನಿವಾರ್ಯವಾಗಿದೆ," ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ತಾಲ್ಲೂಕಿನ ಸಾವಿರಾರು ರೈತರು, ಯುವಜನರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದಾರೆ.. ಈ ಸಂದರ್ಭದಲ್ಲಿ ಅವತಾರ್ ಶಿವ ರೈತ ಸಂಘದ ಯುವ ಸದಸ್ಯರು ಮಾತನಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮೂರು ತಿಂಗಳಿಗೆ ಒಮ್ಮೆ ಸಭೆ ಮಾಡಿ ರೈತರು ಹಾಗೂ ಸಾರ್ವಜನಿಕರಿಗೆ ಕಾಡಿನ ಪ್ರಾಮುಖ್ಯತೆ ಹಾಗೂ ರೈತರಿಗೆ ಇದರ ಮಹತ್ವ ತಿಳಿಸಿ ಹಾಗೂ ಕಾಡ್ಗಿಚ್ಚು ಇದರ ಬಗ್ಗೆ ಸಭೆಗಳು ಮಾಡಿಸಿ ರೈತರು ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದರು.4
- ಮೈಸೂರಿನಲ್ಲಿ ಅದ್ಧೂರಿಯಾಗಿ ಡಾ ಅಂಬೇಡ್ಕರ್ ಜಯಂತಿ ಆಚರಣೆ1
- ಬನ್ನೂರು: ತಾಲೂಕಿನ ಬನ್ನೂರು ಹೋಬಳಿಯ ಬಿ.ಸಿ ಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆಯಾದ ಹುಚ್ಚಮ್ಮ ದೇವಿಯ ದೊಡ್ಡ ಹಬ್ಬ ಭಕ್ತಿಭಾವ, ಸಂಪ್ರದಾಯ ಮತ್ತು ಗ್ರಾಮೀಣ ಸಂಸ್ಕೃತಿಯ ಸೊಬಗಿನೊಂದಿಗೆ ಅದ್ಧೂರಿಯಾಗಿ ಜರುಗಿತು. ಬೆಳಗ್ಗೆಯಿಂದಲೇ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಹಬ್ಬದ ಪ್ರಮುಖ ಅಂಗವಾಗಿ ಗ್ರಾಮದ ಮಹಿಳೆಯರು 70 ಕ್ಕೂ ಹೆಚ್ಚು ಮಡಿಕೆಗಳಲ್ಲಿ ಪವಿತ್ರ ನೀರನ್ನು ತಂದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಹುಚ್ಚಮ್ಮ ದೇವಿಯ ಉತ್ಸವ ಮೂರ್ತಿಗೆ ಗ್ರಾಮ ಸುತ್ತ ಭವ್ಯ ಮೆರವಣಿಗೆ ನಡೆಸಲಾಯಿತು. ಡೊಳ್ಳು, ನಾದಸ್ವರ, ಪೂಜಾ ಘೋಷಣೆಗಳು ಮತ್ತು ಭಕ್ತರ ಜಯಘೋಷಗಳಿಂದ ಗ್ರಾಮದೆಲ್ಲೆಡೆ ಭಕ್ತಿಮಯ ವಾತಾವರಣ ನಿರ್ಮಾಣವಾಯಿತು. ದೇವಿಗೆ ಹರಕೆ ತೀರಿಸುವ ಸಲುವಾಗಿ ಭಕ್ತರು ಸ್ವಯಂಪ್ರೇರಿತವಾಗಿ ಸುಮಾರು 500 ಕುರಿಗಳನ್ನು ಸಮರ್ಪಿಸಿದರು. ಪ್ರತಿಯೊಂದು ಕುರಿಯ ಅಂದಾಜು ಬೆಲೆ ₹12,000 ಆಗಿದ್ದು, ಒಟ್ಟು ಮೌಲ್ಯ ಸುಮಾರು ₹60 ಲಕ್ಷ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಭಕ್ತರು ನೀಡಿದ ಈ ಕುರಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಪೂಜೆ ನೆರವೇರಿಸಲಾಯಿತು. ಹಬ್ಬದ ವಿಶೇಷ ಆಕರ್ಷಣೆಯಾಗಿ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಯಿತು. ಭಕ್ತರಿಗಾಗಿ ಸುಮಾರು 12 ಟನ್ ಮಟನ್ ಸಾಂಬಾರ್ ಹಾಗೂ ರಾಗಿ ಮುದ್ದೆ ತಯಾರಿಸಿ 1000 ಕ್ಕೂ ಹೆಚ್ಚು ಜನರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಗ್ರಾಮಸ್ಥರು, ಹಾಗೂ ಮಹಿಳಾ ಯಾರು ಸಹ ಅಡುಗೆ ತಯಾರಿ ಭಾಗವಹಿಸಿ ದ್ದರು. ಅಡುಗೆ ವ್ಯವಸ್ಥೆ ಸುಸೂತ್ರವಾಗಿ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಏಕತೆ, ಸಹಕಾರ ಮತ್ತು ಭಕ್ತಿಯ ಪ್ರತಿರೂಪ ಕಾಣಿಸಿಕೊಂಡಿತು. ದೂರದ ಊರುಗಳಿಂದ ಆಗಮಿಸಿದ ಭಕ್ತರು ದೇವಿಯ ಆಶೀರ್ವಾದ ಪಡೆದು ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಪರಂಪರೆ ಮತ್ತು ಜನಪದ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿರುವ ಹುಚ್ಚಮ್ಮ ದೇವಿ ಹಬ್ಬ ಗ್ರಾಮೀಣ ಬದುಕಿನ ಸಾಂಸ್ಕೃತಿಕ ವೈಭವವನ್ನು ಮತ್ತೊಮ್ಮೆ ಸಾರಿತು. ಗ್ರಾಮಸ್ಥರ ಒಗ್ಗಟ್ಟು ಹಾಗೂ ಭಕ್ತರ ಅಪಾರ ಭಕ್ತಿ ಈ ವರ್ಷದ ಹುಚ್ಚಮ್ಮ ದೇವಿ ದೊಡ್ಡ ಹಬ್ಬವನ್ನು ವಿಶೇಷವಾಗಿ ಮೆರಗುಗೊಳಿಸಿತು.1
- ಕೌದಳ್ಳಿ ಗ್ರಾಮದ ಮನೆಗಳಲ್ಲಿ ಕಳ್ಳರು ಬೀಗದ ಹಣ ಚಿನ್ನಭರಣವನ್ನು ಕಳವು ಮಾಡಿರುವ ಘಟನೆ ಜರುಗಿದೆ ಗ್ರಾಮದ ಮೊದಲಿಯರು ಬೀದಿಗಯಲ್ಲಿ ಮೂರು ಮನೆಗಳನ್ನು ಯಾರೋ ಕಳ್ಳರು ಬೀಗ ಹೊಡೆದಿದ್ದು ಅದರಲ್ಲಿ ಪಳನಿ ಅಮ್ಮ ಬಿನ್ ಕೃಷ್ಣ ಮೊದಲಿಯ ರ್ ಎಂಬುವರ ಮನೆಯಲ್ಲಿ ka 10 v3245 Honda Activa ಕಳ್ಳತನ ಆಗಿರುತ್ತದೆ ಹಾಗೂ ಮನೆಯ ಒಳಗಡೆ ಎರಡು ಬೀರುಗಳ ನು ಹೊಡೆದಿರುತ್ತಾರೆ ಹಾಗೂ ಮಾದೇಶ ಬಿನ್ ನಾಗ ಮೊದಲಿಯರು ರವರ ಮನೆಯ ಬೀಗವನ್ನು ಸಹ ಒಡೆದಿರುತ್ತಾರೆ ಅಲ್ಲಿ ಯಾವುದೇ ವಸ್ತುಗಳು ಹೋಗಿರುವುದಿಲ್ಲ ಎಂಬುದಾಗಿ ಅವರೇ ತಿಳಿಸಿರುತ್ತಾರೆ ನಂತರ ಮಾದಪ್ಪ ಮೊದಲಿಯರ್ ಎಂಬುವರ ಮನೆಯ ಬೀಗವನ್ನು ಸಹ ಒಡೆದಿರುತ್ತಾರೆ, ಅವರುಗಳು ಮನೆಯಲ್ಲಿ ಇರುವುದಿಲ್ಲ ಈ ಸಂಬಂಧ ಸ್ಥಳಕ್ಕೆಬಪೊಲೀಸರು ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮಕ್ಯೆಗೊಂಡಿದ್ದಾರೆ1