logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯ *ಪತ್ರಿಕಾ ಆಮಂತ್ರಣ - 2* ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ಶ್ರೀ.ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ‘ಜಿಲ್ಲಾಮಟ್ಟದ ವ್ಯಸನ ಮುಕ್ತ ದಿನಾಚರಣೆ’ ಕಾರ್ಯಕ್ರಮವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರ ವಿಶ್ವವಿದ್ಯಾನಿಲಯದ ಸೆಮಿನಾರ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ನಾಳೆ ಬೆಳಿಗ್ಗೆ 10.30 ಗಂಟೆಗೆ ವಾರ್ತಾ ಭವನದಿಂದ ವಾಹನ ಹೊರಡಲಿದ್ದು, ಮಾಧ್ಯಮ ಪ್ರತಿನಿಧಿಗಳು ಆಗಮಿಸುವಂತೆ ಕೋರಿದೆ.

10 hrs ago
user_Nagesh BR Durgavara
Nagesh BR Durgavara
Photographer Chitradurga, Karnataka•
10 hrs ago

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯ *ಪತ್ರಿಕಾ ಆಮಂತ್ರಣ - 2* ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಚಾಮರಾಜನಗರ ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ಶ್ರೀ.ಮ.ನಿ.ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ‘ಜಿಲ್ಲಾಮಟ್ಟದ ವ್ಯಸನ ಮುಕ್ತ ದಿನಾಚರಣೆ’ ಕಾರ್ಯಕ್ರಮವನ್ನು ನಾಳೆ ಬೆಳಿಗ್ಗೆ 11 ಗಂಟೆಗೆ ಚಾಮರಾಜನಗರ ವಿಶ್ವವಿದ್ಯಾನಿಲಯದ ಸೆಮಿನಾರ್ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ನಾಳೆ ಬೆಳಿಗ್ಗೆ 10.30 ಗಂಟೆಗೆ ವಾರ್ತಾ ಭವನದಿಂದ ವಾಹನ ಹೊರಡಲಿದ್ದು, ಮಾಧ್ಯಮ ಪ್ರತಿನಿಧಿಗಳು ಆಗಮಿಸುವಂತೆ ಕೋರಿದೆ.

More news from ಕರ್ನಾಟಕ and nearby areas
  • ಸಣ್ಣ ತಿಪ್ಪಯ್ಯ ಕಲ್ಯಾಣ ಮಂಟಪ ಹೆಸರು ಬದಲಾವಣೆ .ರೈತ ಸಮುದಾಯ ಭವನ ಎಂದು ನಾಮಫಲಕ. ಚಳ್ಳಕೆರೆ :ನಗರದ ಎಪಿಎಂಸಿ‌ ಮಾರುಕಟ್ಟೆ ಆವರಣದಲ್ಲಿರುವ ರೈತ ಸಮುದಾಯ ಭವನವನ್ನು ಖಾಸಗಿ ವ್ಯಕ್ತಿಗೆ ನೀಡಲಾಗಿದೆ ಎನ್ನುವ ಆರೋಪ ಹಿನ್ನೆಲೆಯಲ್ಲಿ ಎಪಿಎಂಸಿ ಆಡಳಿತ ಕಚೇರಿಗೆ ಭೇಟಿ ನೀಡಿದ್ದ ಉಪ ವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್ ದಾಖಲೆಗಳನ್ನು ‌ಪರಿಶೀಲನೆ ಮಾಡಿದರು. ಈ ವೇಳೆ ಮಾಹಿತಿ ನೀಡಿದ ಎಪಿಎಂಸಿ ಕಾರ್ಯದರ್ಶಿ ಜೆ. ಪ್ರಭು, ಕೃಷಿ ಮಾರಾಟ ಇಲಾಖೆ ನಿಯಮದಡಿ ಅನುಪಯುಕ್ತವಾಗಿ ಉಳಿದಿದ್ದ ರೈತ ಸಮುದಾಯ ಭವನವನ್ನು ಹರಾಜು ಪ್ರಕ್ರಿಯೆಯಲ್ಲಿ 2026 ರಿಂದ ಅನ್ವಯ ಆಗುವ ರೀತಿಯಲ್ಲಿ ಬಿ. ವೆಂಕಟೇಶ್ ದಳವಾಯಿ ಎಂಬುವರಿಗೆ 55 ತಿಂಗಳ ಅವದಿಗೆ ಲೀಜಿಗೆ ನೀಡಲಾಗಿದೆ. ಇದರ ಬಾಬ್ತು ಮಾನಸಿ 34 ಸಾವಿರ ಕಟ್ಟಬೇಕು. 11 ತಿಂಗಳಿಗೊಮ್ಮೆ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬೇಕು. 33 ತಿಂಗಳಿಗೊಮ್ಮೆ ಮಾಸಿಕ ಬಾಡಿಗೆ ಹಣದಲ್ಲಿ ಶೇ.5 ರಷ್ಟು ಹೆಚ್ಚಳ ಮಾಡುವ ಷರತ್ತುಗಳು ವಿಧಿಸಿ ನೀಡಲಾಗಿದೆ ಎಂದು ತಿಳಿಸಿದರು. ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ರೈತ ಭವನವನ್ನು ಖಾಸಗಿ ವ್ಯಕ್ತಿಗೆ ನೀಡಲಾಗಿದೆ. ಸಮುದಾಯ ಭವನ ಬದಲಿಗೆ, ಸಣ್ಣ ತಿಪ್ಪಯ್ಯ ಕಲ್ಯಾಣ ಮಂಟಪ ಎಂದು ಹೆಸರು ಬೆರಸಿರುವ ಬಗ್ಗೆ ರಾಜ್ಯ ರೈತ ಸಂಘ, ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಗಂಭೀರವಾಗಿ ಆರೋಪ ಮಾಡಲಾಗಿತ್ತು. ಈ ಬೆನ್ನಲ್ಲೇ ಬಾಡಿಗೆ ಪಡೆದಿದ್ದ ಬಿ. ವೆಂಕಟೇಶ್ ದಳವಾಯಿ ಅವರಿಗೆ ನೋಟಿಸ್ ಜಾರಿ ಮಾಡಿ, ತಕ್ಷಣವೇ ಸಣ್ಣ ತಿಪ್ಪಯ್ಯ ಕಲ್ಯಾಣ ಮಂಟಪ ಹೆಸರನ್ನು ಬದಲಾಯಿಸಿ, ಮೊದಲಿನಂತೆ ರೈತ ಸಮುದಾಯ ಭವನ ಎಂದು ಬರೆಸಿರುವುದಾಗಿ ದಾಖಲೆ ಸಹಿತ ಉಪ ವಿಭಾಗಾಧಿಕಾರಗಳಿಗೆ ಮಾಹಿತಿ ನೀಡಿದ್ದಾರೆ.
    1
    ಸಣ್ಣ ತಿಪ್ಪಯ್ಯ ಕಲ್ಯಾಣ ಮಂಟಪ ಹೆಸರು ಬದಲಾವಣೆ .ರೈತ ಸಮುದಾಯ ಭವನ ಎಂದು ನಾಮಫಲಕ.
ಚಳ್ಳಕೆರೆ :ನಗರದ ಎಪಿಎಂಸಿ‌ ಮಾರುಕಟ್ಟೆ ಆವರಣದಲ್ಲಿರುವ ರೈತ ಸಮುದಾಯ ಭವನವನ್ನು ಖಾಸಗಿ ವ್ಯಕ್ತಿಗೆ ನೀಡಲಾಗಿದೆ ಎನ್ನುವ ಆರೋಪ ಹಿನ್ನೆಲೆಯಲ್ಲಿ  ಎಪಿಎಂಸಿ ಆಡಳಿತ ಕಚೇರಿಗೆ ಭೇಟಿ ನೀಡಿದ್ದ ಉಪ ವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್ ದಾಖಲೆಗಳನ್ನು ‌ಪರಿಶೀಲನೆ ಮಾಡಿದರು. ಈ ವೇಳೆ ಮಾಹಿತಿ ನೀಡಿದ ಎಪಿಎಂಸಿ ಕಾರ್ಯದರ್ಶಿ ಜೆ. ಪ್ರಭು, ಕೃಷಿ ಮಾರಾಟ ಇಲಾಖೆ ನಿಯಮದಡಿ ಅನುಪಯುಕ್ತವಾಗಿ ಉಳಿದಿದ್ದ ರೈತ ಸಮುದಾಯ ಭವನವನ್ನು ಹರಾಜು ಪ್ರಕ್ರಿಯೆಯಲ್ಲಿ 2026 ರಿಂದ ಅನ್ವಯ ಆಗುವ ರೀತಿಯಲ್ಲಿ ಬಿ. ವೆಂಕಟೇಶ್ ದಳವಾಯಿ ಎಂಬುವರಿಗೆ 55 ತಿಂಗಳ ಅವದಿಗೆ ಲೀಜಿಗೆ ನೀಡಲಾಗಿದೆ. ಇದರ ಬಾಬ್ತು ಮಾನಸಿ 34 ಸಾವಿರ ಕಟ್ಟಬೇಕು. 11 ತಿಂಗಳಿಗೊಮ್ಮೆ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬೇಕು. 33 ತಿಂಗಳಿಗೊಮ್ಮೆ ಮಾಸಿಕ ಬಾಡಿಗೆ ಹಣದಲ್ಲಿ ಶೇ.5 ರಷ್ಟು ಹೆಚ್ಚಳ ಮಾಡುವ ಷರತ್ತುಗಳು ವಿಧಿಸಿ ನೀಡಲಾಗಿದೆ ಎಂದು ತಿಳಿಸಿದರು.
ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ರೈತ ಭವನವನ್ನು ಖಾಸಗಿ ವ್ಯಕ್ತಿಗೆ ನೀಡಲಾಗಿದೆ. ಸಮುದಾಯ ಭವನ ಬದಲಿಗೆ, ಸಣ್ಣ ತಿಪ್ಪಯ್ಯ ಕಲ್ಯಾಣ ಮಂಟಪ ಎಂದು ಹೆಸರು ಬೆರಸಿರುವ ಬಗ್ಗೆ ರಾಜ್ಯ ರೈತ ಸಂಘ, ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ಗಂಭೀರವಾಗಿ ಆರೋಪ ಮಾಡಲಾಗಿತ್ತು. ಈ ಬೆನ್ನಲ್ಲೇ ಬಾಡಿಗೆ ಪಡೆದಿದ್ದ ಬಿ.  ವೆಂಕಟೇಶ್ ದಳವಾಯಿ ಅವರಿಗೆ ನೋಟಿಸ್ ಜಾರಿ ಮಾಡಿ, ತಕ್ಷಣವೇ ಸಣ್ಣ ತಿಪ್ಪಯ್ಯ ಕಲ್ಯಾಣ ಮಂಟಪ ಹೆಸರನ್ನು ಬದಲಾಯಿಸಿ, ಮೊದಲಿನಂತೆ ರೈತ ಸಮುದಾಯ ಭವನ ಎಂದು ಬರೆಸಿರುವುದಾಗಿ ದಾಖಲೆ ಸಹಿತ ಉಪ ವಿಭಾಗಾಧಿಕಾರಗಳಿಗೆ ಮಾಹಿತಿ ನೀಡಿದ್ದಾರೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    27 min ago
  • ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಆರು ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ದಿನ ಹಾಕಿದ್ದ ಗಿಡಗಳು ಇಂದು ಫಸಲು ಬಿಡುತ್ತಿದ್ದವು. ಆದರೆ ಇದನ್ನು ಕಡಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು FIR ದಾಖಲಿಸಲು ಆಗ್ರಹಿಸಿದರು. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗೋಪ್ಯಾನಾಯ್ಕ ಅವರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿ ಪ್ರಭುಶಂಕರ್ ಮತ್ತು ಸಿಬ್ಬಂದಿ ಗಳು ಆಗಮಿಸಿ ಮಹಜರು ಮಾಡಿದರು. ಇದೇ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷರಾದ ಮಾಲತೇಶ್ ಅರಸ್ , ಜೋಗಿಮಟ್ಟಿ ಗೆಳೆಯರ ಬಳದ ಮಾರ್ಗದರ್ಶಕ ರಾಜಣ್ಣ , ಮಾಜಿ ಅಧ್ಯಕ್ಷರಾದ ರವಿಕುಮಾರ್, ರಾಘವೇಂದ್ರ, ಕಾರ್ಯದರ್ಶಿ ಮಂಜುನಾಥ್ , ರವಿಬಡಗಿ ಇತರರು ಇದ್ದರು. ಬೈಟ್: ರಾಜಣ್ಣ
    2
    ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ

ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ  ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ
ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ
ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ  ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಆರು ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ದಿನ ಹಾಕಿದ್ದ ಗಿಡಗಳು ಇಂದು ಫಸಲು ಬಿಡುತ್ತಿದ್ದವು. ಆದರೆ ಇದನ್ನು ಕಡಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು FIR ದಾಖಲಿಸಲು ಆಗ್ರಹಿಸಿದರು.
ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗೋಪ್ಯಾನಾಯ್ಕ ಅವರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿ ಪ್ರಭುಶಂಕರ್ ಮತ್ತು ಸಿಬ್ಬಂದಿ ಗಳು ಆಗಮಿಸಿ ಮಹಜರು ಮಾಡಿದರು.
ಇದೇ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷರಾದ ಮಾಲತೇಶ್ ಅರಸ್ , ಜೋಗಿಮಟ್ಟಿ ಗೆಳೆಯರ ಬಳದ ಮಾರ್ಗದರ್ಶಕ ರಾಜಣ್ಣ , ಮಾಜಿ ಅಧ್ಯಕ್ಷರಾದ ರವಿಕುಮಾರ್, ರಾಘವೇಂದ್ರ, ಕಾರ್ಯದರ್ಶಿ ಮಂಜುನಾಥ್ , ರವಿಬಡಗಿ ಇತರರು ಇದ್ದರು. 
ಬೈಟ್: ರಾಜಣ್ಣ
    user_Nagesh BR Durgavara
    Nagesh BR Durgavara
    Photographer Chitradurga, Karnataka•
    10 hrs ago
  • ಹಿರಿಯೂರು ನಗರದಲ್ಲಿಂದು ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ನ ವತಿಯಿಂದ ಪ್ರತಿಭಟನೆ ಹಿರಿಯೂರು ನಗರದಲ್ಲಿಂದು ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ನ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇನ್ನೂ ಕರ್ನಾಟಕ ಪ್ರದೇಶ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರ ಆದೇಶದಂತೆ, ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿ ಹಿರಿಯೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಹೋರಾಟದಲ್ಲಿ ಚಿತ್ರದುರ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಮಹಿಳಾ ಪ್ರಧಾನಕಾರ್ಯದರ್ಶಿಗಳು ಹಿರಿಯೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
    1
    ಹಿರಿಯೂರು ನಗರದಲ್ಲಿಂದು ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ನ ವತಿಯಿಂದ ಪ್ರತಿಭಟನೆ
ಹಿರಿಯೂರು ನಗರದಲ್ಲಿಂದು ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ನ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇನ್ನೂ ಕರ್ನಾಟಕ ಪ್ರದೇಶ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರ ಆದೇಶದಂತೆ, ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿ ಹಿರಿಯೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಹೋರಾಟದಲ್ಲಿ ಚಿತ್ರದುರ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಮಹಿಳಾ ಪ್ರಧಾನಕಾರ್ಯದರ್ಶಿಗಳು
ಹಿರಿಯೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    13 hrs ago
  • " ಪಕ್ಷ ನಮ್ಮೆಲ್ಲರ ತಾಯಿ " ನಾವೆಲ್ಲರೂ ಸಹೋದರರು , ಹಿರಿಯ ಸಹೋದರರ ಮಾರ್ಗದರ್ಶನದಂತೆ ನಾವೆಲ್ಲರೂ ಮುನ್ನಡೆಯೋಣ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ -ವಿಜಯನಗರ ಜಿಲ್ಲೆ ಕೂಡ್ಲಿಗಿ *" ಪಕ್ಷ ನಮ್ಮೆಲ್ಲರ ತಾಯಿ " ನಾವೆಲ್ಲರೂ ಸಹೋದರರು , ಹಿರಿಯ ಸಹೋದರರ ಮಾರ್ಗದರ್ಶನದಂತೆ ನಾವೆಲ್ಲರೂ ಮುನ್ನಡೆಯೋಣ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*-ವಿಜಯನಗರ ಜಿಲ್ಲೆ ಕೂಡ್ಲಿಗಿ : " ಕಾಂಗ್ರೆಸ್ ಪಕ್ಷ ನಮ್ಮೆಲ್ಲರ ತಾಯಿ " , ನಾವೆಲ್ಲರೂ ಸಹೋದರರು. ಪಕ್ಷದ ಹಿರಿಯ ಸಹೋದರರ ಮಾರ್ಗದರ್ಶನದಂತೆ , ಸಂಘಟನೆ ಮಾಡಿ ಪಕ್ಷವನ್ನು ಬಲ ಪಡಿಸೋಣ ಎಂದು. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಕಾರ್ಯಕರ್ತರಿಗೆ ಕರೆ ನೀಡಿದರು. ಅವರು ಪಟ್ಟಣದ ಅನುಬಂಧ ಕಲ್ಯಾಣ ಮಂಟಪದಲ್ಲಿ , ಜುಲೈ 30 ರಂದು. ಕಾಂಗ್ರೆಸ್ ಪಕ್ಷದ ವಿವಿದ ವಿಭಾಗಗಳ ನಾಯಕರ ಆಯ್ಕೆ , ಹಾಗೂ ಪಕ್ಷ ಸಂಘಟನೆಗಾಗಿ ಆಯೋಜಿಸಲಾಗಿದ್ದ. ಸಂಘಟನೆ ಸೃಜನ ಅಭಿಯಾನದಲ್ಲಿ , ಕಾರ್ಯಕರ್ತರನ್ನುದ್ಧೇಶಿಸಿ ಮಾತನಾಡಿದರು. ಟಿಪಿಸಿಸಿ ಕಾರ್ಯದರ್ಶಿಗಳು ಹಾಗೂ ಎಐಸಿಸಿ ಸಲಹಾ ಸಮಿತಿಯ ಹಿರಿಯರು. ವೀಕ್ಷಕರಾದ ಪಕ್ಷದ ರಾಷ್ಟ್ರೀಯ ನಾಯಕರಾದ ಹರಕರ್ ವೇಣುಗೋಪಾಲ್ ರಾವ್ ಹಾಗೂ ಕೆಪಿಸಿಸಿ ಅಬ್ಜರ್ವರ್ ಗಳಾದ ಮರಿಯೋಜಿರಾವ್ , ಶ್ರೀಮತಿ ಆರತಿ ಚಂದ್ರಶೇಖರ್ , ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸುಭಾಷ್ ರಾಥೋಡ್‌ , ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ವಿಜಯನಗರ ಜಿಲ್ಲಾಧ್ಯಕ್ಷರಾದ , ಶಿರಾಜ್ ಶೇಖ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಹ‍ಾಗೂ ತಾಲೂಕು ಮುಖಂಡರ ಅಭಿಪ್ರಾಯಗಳನ್ನು , ಸಲಹೆ ಸೂಸನೆಗಳನ್ನು ಆಲಿಸಲಾಯಿತು. ಪಕ್ಷದ ಸಂಘಟೆ ಭಲವರ್ಧೆನೆಗಾಗಿ , ಪ್ರಮುಖರು ಸದೀರ್ಘವ‍ಾಗಿ ಚರ್ಚಿಸಿದರು. ಪಟ್ಟಣ ಪಂಚ‍ಾಯ್ತಿ ಮಾಜಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನ‍‍ಾಯಕ , ಕೂಡ್ಲಿಗಿ ಬ್ಲ‍ಾಕ್ ಕ‍ಾಂಗ್ರೇಸ್ ಅಧ್ಯಕ್ಷ ಎಮ್ ಗುರುಸಿದ್ದನಗೌಡ , ಹೊಸಹಳ್ಳಿ ಬ್ಲ‍ಾಕ್ ಕಾಂಗ್ರೆಸ್ಆಧ್ಯಕ್ಷ ಕೆ.ಜಿ.ಕಮಾರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪಕ್ಷದ ಅನೇಕ ಮುಖಂಡರು , ವಿವಿದ ವಿಭಾಗಗಳ ಪ್ರಮುಖರು , ಕ್ಷೇತ್ರದೆಲ್ಲೆಡೆಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    " ಪಕ್ಷ ನಮ್ಮೆಲ್ಲರ ತಾಯಿ " ನಾವೆಲ್ಲರೂ ಸಹೋದರರು , ಹಿರಿಯ ಸಹೋದರರ ಮಾರ್ಗದರ್ಶನದಂತೆ ನಾವೆಲ್ಲರೂ ಮುನ್ನಡೆಯೋಣ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ -ವಿಜಯನಗರ ಜಿಲ್ಲೆ ಕೂಡ್ಲಿಗಿ
*" ಪಕ್ಷ ನಮ್ಮೆಲ್ಲರ ತಾಯಿ " ನಾವೆಲ್ಲರೂ ಸಹೋದರರು , ಹಿರಿಯ ಸಹೋದರರ ಮಾರ್ಗದರ್ಶನದಂತೆ ನಾವೆಲ್ಲರೂ ಮುನ್ನಡೆಯೋಣ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*-ವಿಜಯನಗರ ಜಿಲ್ಲೆ ಕೂಡ್ಲಿಗಿ : " ಕಾಂಗ್ರೆಸ್ ಪಕ್ಷ ನಮ್ಮೆಲ್ಲರ ತಾಯಿ " ,  ನಾವೆಲ್ಲರೂ ಸಹೋದರರು. ಪಕ್ಷದ ಹಿರಿಯ ಸಹೋದರರ ಮಾರ್ಗದರ್ಶನದಂತೆ , ಸಂಘಟನೆ ಮಾಡಿ ಪಕ್ಷವನ್ನು ಬಲ ಪಡಿಸೋಣ ಎಂದು. ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು , ಕಾರ್ಯಕರ್ತರಿಗೆ ಕರೆ ನೀಡಿದರು. ಅವರು     ಪಟ್ಟಣದ ಅನುಬಂಧ ಕಲ್ಯಾಣ ಮಂಟಪದಲ್ಲಿ , ಜುಲೈ 30 ರಂದು. ಕಾಂಗ್ರೆಸ್ ಪಕ್ಷದ ವಿವಿದ ವಿಭಾಗಗಳ ನಾಯಕರ ಆಯ್ಕೆ , ಹಾಗೂ ಪಕ್ಷ  ಸಂಘಟನೆಗಾಗಿ ಆಯೋಜಿಸಲಾಗಿದ್ದ. ಸಂಘಟನೆ ಸೃಜನ ಅಭಿಯಾನದಲ್ಲಿ , ಕಾರ್ಯಕರ್ತರನ್ನುದ್ಧೇಶಿಸಿ ಮಾತನಾಡಿದರು.   ಟಿಪಿಸಿಸಿ ಕಾರ್ಯದರ್ಶಿಗಳು ಹಾಗೂ ಎಐಸಿಸಿ ಸಲಹಾ ಸಮಿತಿಯ ಹಿರಿಯರು. ವೀಕ್ಷಕರಾದ   ಪಕ್ಷದ ರಾಷ್ಟ್ರೀಯ ನಾಯಕರಾದ ಹರಕರ್ ವೇಣುಗೋಪಾಲ್ ರಾವ್ ಹಾಗೂ ಕೆಪಿಸಿಸಿ ಅಬ್ಜರ್ವರ್ ಗಳಾದ ಮರಿಯೋಜಿರಾವ್ , ಶ್ರೀಮತಿ ಆರತಿ ಚಂದ್ರಶೇಖರ್ , ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸುಭಾಷ್ ರಾಥೋಡ್‌ ,    ಮಾಜಿ ಶಾಸಕರು ಹಾಗೂ ಕಾಂಗ್ರೆಸ್ ವಿಜಯನಗರ ಜಿಲ್ಲಾಧ್ಯಕ್ಷರಾದ ,  ಶಿರಾಜ್ ಶೇಖ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಹ‍ಾಗೂ ತಾಲೂಕು ಮುಖಂಡರ ಅಭಿಪ್ರಾಯಗಳನ್ನು , ಸಲಹೆ ಸೂಸನೆಗಳನ್ನು ಆಲಿಸಲಾಯಿತು. ಪಕ್ಷದ ಸಂಘಟೆ ಭಲವರ್ಧೆನೆಗಾಗಿ , ಪ್ರಮುಖರು ಸದೀರ್ಘವ‍ಾಗಿ ಚರ್ಚಿಸಿದರು. ಪಟ್ಟಣ ಪಂಚ‍ಾಯ್ತಿ ಮಾಜಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನ‍‍ಾಯಕ , ಕೂಡ್ಲಿಗಿ ಬ್ಲ‍ಾಕ್ ಕ‍ಾಂಗ್ರೇಸ್ ಅಧ್ಯಕ್ಷ  ಎಮ್ ಗುರುಸಿದ್ದನಗೌಡ , ಹೊಸಹಳ್ಳಿ ಬ್ಲ‍ಾಕ್ ಕಾಂಗ್ರೆಸ್ಆಧ್ಯಕ್ಷ  ಕೆ.ಜಿ.ಕಮಾರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪಕ್ಷದ  ಅನೇಕ ಮುಖಂಡರು , ವಿವಿದ ವಿಭಾಗಗಳ ಪ್ರಮುಖರು , ಕ್ಷೇತ್ರದೆಲ್ಲೆಡೆಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    57 min ago
  • ರೈತರ ಹಕ್ಕಿಗಾಗಿ ನಡೆಯುತ್ತಿರುವ ಬೃಹತ್ ಪ್ರತಿಭಟನಾ ಬ್ಯಾಲಿಗೆ ಅಭೂತಪೂರ್ವ ಜನಬೆಂಬಲ ಸಾವಿರಾರು ರೈತರು, ವಿವಿಧ ರೈತಪರ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಭಾಗವಹಿಸಿ ರೈತರ ನ್ಯಾಯಸಮ್ಮತ ನೀರಿನ ಹಕ್ಕಿಗಾಗಿ ಧ್ವನಿಯಾಗಿದ್ದಾರೆ.
    1
    ರೈತರ ಹಕ್ಕಿಗಾಗಿ ನಡೆಯುತ್ತಿರುವ ಬೃಹತ್ ಪ್ರತಿಭಟನಾ ಬ್ಯಾಲಿಗೆ ಅಭೂತಪೂರ್ವ ಜನಬೆಂಬಲ
ಸಾವಿರಾರು ರೈತರು, ವಿವಿಧ ರೈತಪರ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಭಾಗವಹಿಸಿ ರೈತರ ನ್ಯಾಯಸಮ್ಮತ ನೀರಿನ ಹಕ್ಕಿಗಾಗಿ ಧ್ವನಿಯಾಗಿದ್ದಾರೆ.
    user_ರಾಜಶೇಖರ್ GT
    ರಾಜಶೇಖರ್ GT
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    17 hrs ago
  • ಗುರು ಕನಕ ವಿದ್ಯಾ ಕೇಂದ್ರದಲ್ಲಿ ಗುರು ಪೂರ್ಣಿಮೆ: ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಕೂಡ್ಲಿಗಿ: ತಾಲೂಕಿನ ತಾಯಕನಹಳ್ಳಿ ಶ್ರೀ ಗುರು ಕನಕ ವಿದ್ಯಾ ಕೇಂದ್ರದಲ್ಲಿ ಬುಧವಾರ ಗುರು ಪೂರ್ಣಿಮೆ ಪ್ರಯುಕ್ತ ಅಕ್ಷರಭ್ಯಾಸೋತ್ಸವ ಕಾರ್ಯಕ್ರಮದ ಅಂಗವಾಗಿ ಎಲ್.ಕೆ ಜಿ ಮಕ್ಕಳಿಗೆ ಸಾಮೂಹಿಕವಾಗಿ ಅಕ್ಷರಭ್ಯಾಸ ಆರಂಭೋತ್ಸವವನ್ನು ಪಾಲಕ ಪೋಷಕರು ಅದ್ದೂರಿಯಾಗಿ ಭಾಗವಹಿಸಿ ತಮ್ಮ ಮಕ್ಕಳಿಗೆ ಗುರುಗಳ ಸಮ್ಮುಖದಲ್ಲಿ ವೇದೋಕ್ತವಾಗಿ ಅಕ್ಷರ ಅಭ್ಯಾಸವನ್ನು ಮಾಡಿಸಿ ಧನ್ಯತಾಭಾವವನ್ನು ತಳಿದರು. 40 ಕ್ಕೂ ಹೆಚ್ಚು ಮಕ್ಕಳು ಪೋಷಕರ ಜೊತೆಗೂಡಿ ಅಕ್ಷರಾಭ್ಯಾಸ ಮಾಡಿದರು. ಪೋಷಕರು ಕೂಡ ಗುರುಕುಲ ಪದ್ಧತಿಯ ಅಕ್ಷರಾಭ್ಯಾಸ ಮಾಡಿಸುವ ಕಾರ್ಯಕ್ರಮದಿಂದ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿಗಳು ಬಿ.ಟಿ. ಮಂಜಣ್ಣ ಮಾತನಾಡಿ, ಶಿಕ್ಷಣ ಮತ್ತು ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಮಕ್ಕಳಿಗೆ ಮನೆಯ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಮಕ್ಕಳಿಗೆ ಮನೆಯಿಂದಲೇ ಉತ್ತಮ ಸಂಸ್ಕಾರ ನೀಡಿ. ಅಮೃತ ಹಸ್ತದಿಂದ ಗುರುಗಳ ಮಾರ್ಗದರ್ಶನದಿಂದ ಗುರುಪೂರ್ಣಿಮೆಯ ದಿನ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವುದು ಸಂಪ್ರದಾಯವಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲೆಂಬ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಲೆಂಬ ಸದುದ್ದೇಶದಿಂದ ಸಂಸ್ಥೆ ವತಿಯಿಂದ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು. ಋಷಿಮುನಿಗಳ ಕಾಲದಲ್ಲಿ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡಿಸಿ ಸಮಾಜದ ಸತ್ಪಜೆಗಳನ್ನಾಗಿ ರೂಪಿಸುತ್ತಿದ್ದರು. ಅದೇ ಮಾದರಿಯಲ್ಲಿ ಮಕ್ಕಳಿಗೆ ಸಂಸ್ಕಾರ, ಮೌಲ್ಯಗಳನ್ನು ಕಲಿಸಿ ಸನ್ಮಾರ್ಗದತ್ತ ನಡೆಯುವಂತೆ ಪ್ರೇರೇಪಿಸುವ ಜೊತೆಗೆ ಗುಣಮಟ್ಟದ ಸಂಸ್ಕಾರ ಪೋಷಕರು ಮಹತ್ತರ ಜವಾಬ್ದಾರಿಯಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆ ಜಾಸ್ತಿಯಾಗಿದ್ದು, ಇದನ್ನು ತಡೆಯಬೇಕು. ಮೊಬೈಲ್ ಸದ್ಬಳಕೆ ಎಷ್ಟು ಉಪಯುಕ್ತವೋ ಅಷ್ಟೇ ದುರ್ಬಳಕೆ ಅವಕಾಶಗಳು ಇದರಲ್ಲಿ ಸಾಕಷ್ಟು ಅಡಗಿದೆ. ಹೀಗಿರುವಾಗ ಮಕ್ಕಳಿಗೆ ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಪೋಷಕರು ಮೊಬೈಲ್ ಕೊಡಿಸುವುದು ತರವಲ್ಲ. ಮೊಬೈಲನ್ನು ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡುವುದು ಸರಿಯಿಲ್ಲ, ಅದರ ಅತಿಯಾದ ಬಳಕೆಯಿಂದ ತಮ್ಮ ವಿದ್ಯಾರ್ಥಿ ಜೀವನ ಹಾಳಾಗುತ್ತದೆ ಎಂಬ ಪರಿಜ್ಞಾನ ಮಕ್ಕಳಲ್ಲಿ ಬೆಳೆಯುವ ವಯಸ್ಸಿನವರೆಗೂ ಅವರಿಗೆ ಮೊಬೈಲ್ ಕೊಡಿಸುವುದು ಸೂಕ್ತವಲ್ಲ. ಇದರಿಂದ ಅವರ ಬುದ್ಧಿಶಕ್ತಿ ಬೆಳವಣಿಗೆ ಕುಂಠಿತಗೊಳ್ಳಲಿದೆ ಎಂದರು‌. ಈ ವೇಳೆ ಸುನಿತಾ ಗುರುರಾಜ್ ಮುಖ್ಯ ಶಿಕ್ಷಕಿ ಪ್ರಾಸ್ತಾವಿಕವಾಗಿ ಮಾತನಾಡಿ ಗು-ಎಂದರೆ ಅಂಧಕಾರ ರ-ಎಂದರೆ ಕಳೆಯುವ ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುವ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಕ್ತಿ ಗುರು ತಂದೆ ತಾಯಿ ಹೊರತುಪಡಿಸಿ ಗುರು ವ್ಯಕ್ತಿಯ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಅವರಿಗೆ ಗೌರವ ಸಮರ್ಪಣೆ ಮಾಡುವ ದಿನ ಇದಾಗಿದೆ. ಗುರುಪೂರ್ಣಿಮೆ ಮಾಹಿತಿ ತಿಳಿಸಿ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಿ ಎಂದು ತಿಳಿಸಿದರು. ಈ ವೇಳೆ ಚಿಕ್ಕೋವನಹಳ್ಳಿ ಶ್ರೀ ವೀರೇಶ ಸ್ವಾಮಿ ಪುರೋಹಿತರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಹಂಪಮ್ಮ ಪೂಜಾರ್, ಮಂಜುಳಾ, ಸುಮಿತ್ರ, ರುದ್ರಮ್ಮ, ನೇತ್ರಾವತಿ, ಮಮತಾ, ಜಿಪಿ ಬಸವರಾಜ್, ಬೋಧಕೇತರ ಸಿಬ್ಬಂದಿ ವರ್ಗದವರಾದ ಮಲ್ಲಿಕಾರ್ಜುನ ಶಾಂತಕುಮಾರ್ ವನಜಾಕ್ಷಮ್ಮ ಹಾಗೂ ಶಾಲಾ ಮಕ್ಕಳು, ಪೋಷಕರು ಭಾಗವಹಿಸಿದ್ದರು.
    1
    ಗುರು ಕನಕ ವಿದ್ಯಾ ಕೇಂದ್ರದಲ್ಲಿ ಗುರು ಪೂರ್ಣಿಮೆ: ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ
ಕೂಡ್ಲಿಗಿ: ತಾಲೂಕಿನ ತಾಯಕನಹಳ್ಳಿ ಶ್ರೀ ಗುರು ಕನಕ ವಿದ್ಯಾ ಕೇಂದ್ರದಲ್ಲಿ ಬುಧವಾರ ಗುರು ಪೂರ್ಣಿಮೆ ಪ್ರಯುಕ್ತ ಅಕ್ಷರಭ್ಯಾಸೋತ್ಸವ ಕಾರ್ಯಕ್ರಮದ ಅಂಗವಾಗಿ ಎಲ್.ಕೆ ಜಿ ಮಕ್ಕಳಿಗೆ ಸಾಮೂಹಿಕವಾಗಿ ಅಕ್ಷರಭ್ಯಾಸ ಆರಂಭೋತ್ಸವವನ್ನು ಪಾಲಕ ಪೋಷಕರು ಅದ್ದೂರಿಯಾಗಿ ಭಾಗವಹಿಸಿ ತಮ್ಮ ಮಕ್ಕಳಿಗೆ ಗುರುಗಳ ಸಮ್ಮುಖದಲ್ಲಿ ವೇದೋಕ್ತವಾಗಿ ಅಕ್ಷರ ಅಭ್ಯಾಸವನ್ನು ಮಾಡಿಸಿ ಧನ್ಯತಾಭಾವವನ್ನು ತಳಿದರು. 40 ಕ್ಕೂ ಹೆಚ್ಚು ಮಕ್ಕಳು ಪೋಷಕರ ಜೊತೆಗೂಡಿ ಅಕ್ಷರಾಭ್ಯಾಸ ಮಾಡಿದರು. ಪೋಷಕರು ಕೂಡ ಗುರುಕುಲ ಪದ್ಧತಿಯ ಅಕ್ಷರಾಭ್ಯಾಸ ಮಾಡಿಸುವ ಕಾರ್ಯಕ್ರಮದಿಂದ ಸಂತಸ ವ್ಯಕ್ತಪಡಿಸಿದರು. 
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿಗಳು ಬಿ.ಟಿ. ಮಂಜಣ್ಣ ಮಾತನಾಡಿ, ಶಿಕ್ಷಣ ಮತ್ತು ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಮಕ್ಕಳಿಗೆ ಮನೆಯ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಮಕ್ಕಳಿಗೆ ಮನೆಯಿಂದಲೇ ಉತ್ತಮ ಸಂಸ್ಕಾರ ನೀಡಿ. ಅಮೃತ ಹಸ್ತದಿಂದ ಗುರುಗಳ ಮಾರ್ಗದರ್ಶನದಿಂದ ಗುರುಪೂರ್ಣಿಮೆಯ ದಿನ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವುದು ಸಂಪ್ರದಾಯವಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲೆಂಬ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಲೆಂಬ ಸದುದ್ದೇಶದಿಂದ ಸಂಸ್ಥೆ ವತಿಯಿಂದ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು. ಋಷಿಮುನಿಗಳ ಕಾಲದಲ್ಲಿ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡಿಸಿ ಸಮಾಜದ ಸತ್ಪಜೆಗಳನ್ನಾಗಿ ರೂಪಿಸುತ್ತಿದ್ದರು. ಅದೇ ಮಾದರಿಯಲ್ಲಿ ಮಕ್ಕಳಿಗೆ ಸಂಸ್ಕಾರ, ಮೌಲ್ಯಗಳನ್ನು ಕಲಿಸಿ ಸನ್ಮಾರ್ಗದತ್ತ ನಡೆಯುವಂತೆ ಪ್ರೇರೇಪಿಸುವ ಜೊತೆಗೆ ಗುಣಮಟ್ಟದ ಸಂಸ್ಕಾರ ಪೋಷಕರು ಮಹತ್ತರ ಜವಾಬ್ದಾರಿಯಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆ ಜಾಸ್ತಿಯಾಗಿದ್ದು, ಇದನ್ನು ತಡೆಯಬೇಕು. ಮೊಬೈಲ್ ಸದ್ಬಳಕೆ ಎಷ್ಟು ಉಪಯುಕ್ತವೋ ಅಷ್ಟೇ ದುರ್ಬಳಕೆ ಅವಕಾಶಗಳು ಇದರಲ್ಲಿ ಸಾಕಷ್ಟು ಅಡಗಿದೆ. ಹೀಗಿರುವಾಗ ಮಕ್ಕಳಿಗೆ ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಪೋಷಕರು ಮೊಬೈಲ್ ಕೊಡಿಸುವುದು ತರವಲ್ಲ. ಮೊಬೈಲನ್ನು ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡುವುದು ಸರಿಯಿಲ್ಲ, ಅದರ ಅತಿಯಾದ ಬಳಕೆಯಿಂದ ತಮ್ಮ ವಿದ್ಯಾರ್ಥಿ ಜೀವನ ಹಾಳಾಗುತ್ತದೆ ಎಂಬ ಪರಿಜ್ಞಾನ ಮಕ್ಕಳಲ್ಲಿ ಬೆಳೆಯುವ ವಯಸ್ಸಿನವರೆಗೂ ಅವರಿಗೆ ಮೊಬೈಲ್ ಕೊಡಿಸುವುದು ಸೂಕ್ತವಲ್ಲ. ಇದರಿಂದ ಅವರ ಬುದ್ಧಿಶಕ್ತಿ ಬೆಳವಣಿಗೆ ಕುಂಠಿತಗೊಳ್ಳಲಿದೆ ಎಂದರು‌.
ಈ ವೇಳೆ ಸುನಿತಾ ಗುರುರಾಜ್ ಮುಖ್ಯ ಶಿಕ್ಷಕಿ ಪ್ರಾಸ್ತಾವಿಕವಾಗಿ ಮಾತನಾಡಿ ಗು-ಎಂದರೆ ಅಂಧಕಾರ ರ-ಎಂದರೆ ಕಳೆಯುವ ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುವ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಕ್ತಿ ಗುರು ತಂದೆ ತಾಯಿ ಹೊರತುಪಡಿಸಿ ಗುರು ವ್ಯಕ್ತಿಯ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಅವರಿಗೆ ಗೌರವ ಸಮರ್ಪಣೆ ಮಾಡುವ ದಿನ ಇದಾಗಿದೆ. ಗುರುಪೂರ್ಣಿಮೆ ಮಾಹಿತಿ ತಿಳಿಸಿ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಿ ಎಂದು ತಿಳಿಸಿದರು. 
ಈ ವೇಳೆ ಚಿಕ್ಕೋವನಹಳ್ಳಿ ಶ್ರೀ ವೀರೇಶ ಸ್ವಾಮಿ ಪುರೋಹಿತರು ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಹಂಪಮ್ಮ ಪೂಜಾರ್, ಮಂಜುಳಾ, ಸುಮಿತ್ರ, ರುದ್ರಮ್ಮ, ನೇತ್ರಾವತಿ, ಮಮತಾ, ಜಿಪಿ ಬಸವರಾಜ್, ಬೋಧಕೇತರ ಸಿಬ್ಬಂದಿ ವರ್ಗದವರಾದ ಮಲ್ಲಿಕಾರ್ಜುನ ಶಾಂತಕುಮಾರ್ ವನಜಾಕ್ಷಮ್ಮ ಹಾಗೂ ಶಾಲಾ ಮಕ್ಕಳು, ಪೋಷಕರು ಭಾಗವಹಿಸಿದ್ದರು.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    21 hrs ago
  • ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ರೈತರು ಅಹೋರಾತ್ರಿ ಧರಣೀಯ ಮುಂದುವರಿಸಿದ್ದಾರೆ
    4
    ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ರೈತರು ಅಹೋರಾತ್ರಿ ಧರಣೀಯ ಮುಂದುವರಿಸಿದ್ದಾರೆ
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    2 hrs ago
  • ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಗೋಪೂಜೆ ಮತ್ತು ರಾಗಿಹುಲ್ಲು ವಿತರಣೆ". "ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಗೋಪೂಜೆ ಮತ್ತು ರಾಗಿಹುಲ್ಲು ವಿತರಣೆ". ಚಳ್ಳಕೆರೆ:-ನಗರದ ಹೊರವಲಯದ ಅಜ್ಜನಗುಡಿ ಸಮೀಪದ ನನ್ನಿವಾಳದ ಕಟ್ಟೆಮನೆಯ ಮುತ್ಯಾಗಾರ ದೇವರ ಎತ್ತುಗಳಿಗೆ ನಗರದ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ವತಿಯಿಂದ ಗೋಪೂಜೆ, ಬಾಳೆಹಣ್ಣು,ರಾಗಿಹುಲ್ಲು ವಿತರಿಸುವ ಮೂಲಕ ಸಾರ್ಥಕ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವರ ಎತ್ತುಗಳ ಸಂರಕ್ಷಕರಾದ ಪೂಜಾರಿ ಓಬಯ್ಯ, ಪಾಲಯ್ಯ, ಸಿದ್ದೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ಅಧ್ಯಕ್ಷೆ ಅಪರ್ಣ ದೇವೇಂದ್ರಪ್ಪ, ಕಾರ್ಯದರ್ಶಿ ಡಾ.ವಿದ್ಯಾ, ಖಜಾಂಚಿ ಕವಿತಾ ನಾಗೇಶ್,ದೇವರ ಎತ್ತುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷೆ ಶುಭಾ ಸೋಮಶೇಖರ್, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಸದಸ್ಯರಾದ ಮೀರಾ ರಮೇಶ್,ಸುಮಾ, ನಾಗಶ್ರೀ,ಹೀನಾ ಸೇರಿದಂತೆ ದೇವರ ಎತ್ತುಗಳ ಕಿಲಾರಿಗಳು ಮತ್ತು ಆರಾಧಕರು ಉಪಸ್ಥಿತರಿದ್ದರು.
    1
    ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಗೋಪೂಜೆ ಮತ್ತು ರಾಗಿಹುಲ್ಲು ವಿತರಣೆ". 
"ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ವತಿಯಿಂದ ಗೋಪೂಜೆ ಮತ್ತು ರಾಗಿಹುಲ್ಲು ವಿತರಣೆ".                    ಚಳ್ಳಕೆರೆ:-ನಗರದ ಹೊರವಲಯದ ಅಜ್ಜನಗುಡಿ ಸಮೀಪದ ನನ್ನಿವಾಳದ ಕಟ್ಟೆಮನೆಯ ಮುತ್ಯಾಗಾರ ದೇವರ ಎತ್ತುಗಳಿಗೆ ನಗರದ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ವತಿಯಿಂದ ಗೋಪೂಜೆ, ಬಾಳೆಹಣ್ಣು,ರಾಗಿಹುಲ್ಲು ವಿತರಿಸುವ ಮೂಲಕ ಸಾರ್ಥಕ ಸೇವೆ ಸಲ್ಲಿಸಿದರು.                    ಈ ಸಂದರ್ಭದಲ್ಲಿ  ದೇವರ ಎತ್ತುಗಳ ಸಂರಕ್ಷಕರಾದ ಪೂಜಾರಿ ಓಬಯ್ಯ, ಪಾಲಯ್ಯ, ಸಿದ್ದೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.                   ಕಾರ್ಯಕ್ರಮದಲ್ಲಿ ಇನ್ನರ್ ವಿಲ್ ಕ್ಲಬ್ ಏಂಜಲ್ಸ್ ನ ಅಧ್ಯಕ್ಷೆ ಅಪರ್ಣ ದೇವೇಂದ್ರಪ್ಪ, ಕಾರ್ಯದರ್ಶಿ ಡಾ.ವಿದ್ಯಾ, ಖಜಾಂಚಿ ಕವಿತಾ ನಾಗೇಶ್,ದೇವರ ಎತ್ತುಗಳ ಸಂರಕ್ಷಣಾ ಸಮಿತಿಯ ಅಧ್ಯಕ್ಷೆ ಶುಭಾ ಸೋಮಶೇಖರ್, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ಸದಸ್ಯರಾದ ಮೀರಾ ರಮೇಶ್,ಸುಮಾ, ನಾಗಶ್ರೀ,ಹೀನಾ ಸೇರಿದಂತೆ ದೇವರ ಎತ್ತುಗಳ ಕಿಲಾರಿಗಳು ಮತ್ತು ಆರಾಧಕರು ಉಪಸ್ಥಿತರಿದ್ದರು.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    46 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.