logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಶಿಕಾರಿಪುರ.ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೋಷಕರು ಕೈಜೋಡಿಸಿ ಪ್ರಾಂಶುಪಾಲರಾದ ಸಿ.ಬಿ. ವೆಂಕಟೇಶ ಶಿಕಾರಿಪುರ ಕಾಲೇಜಿನ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಯೊಂದಿಗೆ ಶಿಸ್ತು ಮೂಡಿಸುವುದು ಉಪನ್ಯಾಸಕರ ಕರ್ತವ್ಯವಾಗಿದೆ. ಮನೆಯಲ್ಲಿ ಪೋಷಕರು ಪ್ರೀತಿ, ಮಾರ್ಗದರ್ಶನ,ಶಿಸ್ತು ಮತ್ತು ಸಂಸ್ಕಾರದೊಂದಿಗೆ ಮಕ್ಕಳನ್ನು ಬೆಳೆಸುವುದು ಮುಖ್ಯ ಎಂದು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2026-27 ನೇ ಸಾಲಿನ ವಿದ್ಯಾರ್ಥಿ ಪೋಷಕರ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಕಾಲೇಜಿನ ಪ್ರಾಚಾರ್ಯ ಸಿ.ಬಿ. ವೆಂಕಟೇಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಹವ್ಯಾಸ ಬದಿಗಿಟ್ಟು ಉತ್ತಮ ಅಭಿರುಚಿಗಳನ್ನು ಮೈಗೂಡಿಸಿಕೊಂಡು ಕಾಲೇಜಿನಲ್ಲಿ ಉಪನ್ಯಾಸಕರ ಬೋಧನೆ ಮತ್ತು ಮನೆಯಲ್ಲಿ ಪೋಷಕರ ಮಾರ್ಗದರ್ಶನದೊಂದಿಗೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದರು. ಉಪನ್ಯಾಸಕರಾದ ಕೆ.ಎಚ್. ಪುಟ್ಟಪ್ಪ ಬಿಳವಾಣಿ ಮಾತನಾಡಿ, ಪಿ.ಯು.ಸಿ ಹಂತದ ಕೆಲವು ಮಕ್ಕಳು ಹೊರಗಿನ ಕ್ಷಣಿಕ ಆಕರ್ಷಣೆಗಳೊಗಾಗಿ ಸುಂದರ ಭವಿಷ್ಯ ನಿರ್ಮಿಸಿಕೊಳ್ಳುವ ಅವಕಾಶದಿಂದ ವಂಚಿತವಾಗುತ್ತಿದ್ದಾರೆ. ಯುವ ಜನತೆ ಉತ್ತಮ ಉದ್ದೇಶ, ಗುರಿಗಳೊಂದಿಗೆ ತಂದೆ-ತಾಯಿ-ಪೋಷಕರ ಮಾತು ಆಲಿಸಿ ಹೆಚ್ಚಿನ ಸಾಧನೆ ಮಾಡಿ ಯಶಸ್ಸನ್ನು ಕಂಡುಕೊಳ್ಳಬೇಕೆಂಬ ಅಭಿಮತವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಾಂತಲಾ, ರವಿಕುಮಾರ್, ಮಹೇಶ್ ಚಂದ್ರ, ರೇವಣಪ್ಪ, ಮಂಜುನಾಥ್, ಪ್ರಕಾಶ್, ಸತೀಶ್ ಸಿಂದೆ, ಡಾ. ಹರೀಶ್ ಕುಮಾರ್, ಮಧು, ಮಲ್ಲಿಕಾರ್ಜುನಪ್ಪ ಹಾಗೂ ಅತಿಥಿ ಉಪನ್ಯಾಸಕರು ಹಾಜರಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಪೋಷಕರಿಗೆ ವಿವರಿಸಿದರು.

14 hrs ago
user_Press Narashimha swamy SN
Press Narashimha swamy SN
Newspaper publisher ಶಿಕಾರಿಪುರ, ಶಿವಮೊಗ್ಗ, ಕರ್ನಾಟಕ•
14 hrs ago
104bccfc-ea9f-4de1-ad18-e52caa835c79

ಶಿಕಾರಿಪುರ.ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೋಷಕರು ಕೈಜೋಡಿಸಿ ಪ್ರಾಂಶುಪಾಲರಾದ ಸಿ.ಬಿ. ವೆಂಕಟೇಶ ಶಿಕಾರಿಪುರ ಕಾಲೇಜಿನ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಯೊಂದಿಗೆ ಶಿಸ್ತು ಮೂಡಿಸುವುದು ಉಪನ್ಯಾಸಕರ ಕರ್ತವ್ಯವಾಗಿದೆ. ಮನೆಯಲ್ಲಿ ಪೋಷಕರು ಪ್ರೀತಿ, ಮಾರ್ಗದರ್ಶನ,ಶಿಸ್ತು ಮತ್ತು ಸಂಸ್ಕಾರದೊಂದಿಗೆ ಮಕ್ಕಳನ್ನು ಬೆಳೆಸುವುದು ಮುಖ್ಯ ಎಂದು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ

fa321c5d-0ab7-4ecc-9990-3a728c36ae71

ಕಾಲೇಜಿನಲ್ಲಿ 2026-27 ನೇ ಸಾಲಿನ ವಿದ್ಯಾರ್ಥಿ ಪೋಷಕರ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಕಾಲೇಜಿನ ಪ್ರಾಚಾರ್ಯ ಸಿ.ಬಿ. ವೆಂಕಟೇಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ರೀತಿಯ ಹವ್ಯಾಸ ಬದಿಗಿಟ್ಟು ಉತ್ತಮ ಅಭಿರುಚಿಗಳನ್ನು ಮೈಗೂಡಿಸಿಕೊಂಡು ಕಾಲೇಜಿನಲ್ಲಿ

fcf02ce7-53ab-48df-9606-bc9e484ad880

ಉಪನ್ಯಾಸಕರ ಬೋಧನೆ ಮತ್ತು ಮನೆಯಲ್ಲಿ ಪೋಷಕರ ಮಾರ್ಗದರ್ಶನದೊಂದಿಗೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕೆಂದರು. ಉಪನ್ಯಾಸಕರಾದ ಕೆ.ಎಚ್. ಪುಟ್ಟಪ್ಪ ಬಿಳವಾಣಿ ಮಾತನಾಡಿ, ಪಿ.ಯು.ಸಿ ಹಂತದ ಕೆಲವು ಮಕ್ಕಳು ಹೊರಗಿನ ಕ್ಷಣಿಕ ಆಕರ್ಷಣೆಗಳೊಗಾಗಿ ಸುಂದರ ಭವಿಷ್ಯ ನಿರ್ಮಿಸಿಕೊಳ್ಳುವ ಅವಕಾಶದಿಂದ ವಂಚಿತವಾಗುತ್ತಿದ್ದಾರೆ. ಯುವ ಜನತೆ ಉತ್ತಮ ಉದ್ದೇಶ, ಗುರಿಗಳೊಂದಿಗೆ ತಂದೆ-ತಾಯಿ-ಪೋಷಕರ ಮಾತು ಆಲಿಸಿ ಹೆಚ್ಚಿನ

fd42468d-1e07-4b00-939b-5266507b9d34

ಸಾಧನೆ ಮಾಡಿ ಯಶಸ್ಸನ್ನು ಕಂಡುಕೊಳ್ಳಬೇಕೆಂಬ ಅಭಿಮತವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಾಂತಲಾ, ರವಿಕುಮಾರ್, ಮಹೇಶ್ ಚಂದ್ರ, ರೇವಣಪ್ಪ, ಮಂಜುನಾಥ್, ಪ್ರಕಾಶ್, ಸತೀಶ್ ಸಿಂದೆ, ಡಾ. ಹರೀಶ್ ಕುಮಾರ್, ಮಧು, ಮಲ್ಲಿಕಾರ್ಜುನಪ್ಪ ಹಾಗೂ ಅತಿಥಿ ಉಪನ್ಯಾಸಕರು ಹಾಜರಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಪೋಷಕರಿಗೆ ವಿವರಿಸಿದರು.

More news from ಕರ್ನಾಟಕ and nearby areas
  • ಶಿವಮೊಗ್ಗ-ವಂದೇ ಮಾತರಂ ಗೀತೆ ಎರಡೇ ಚರಣ: ಕಾರ್ಯಕ್ರಮ ದಿಂದ ಹೊರನಡೆದ ಶಾಸಕ ಶಿವಮೊಗ್ಗ: ವಂದೇ ಮಾತರಂ ಗೀತೆಯಲ್ಲಿ ಕೇವಲ ಎರಡು ಚರಣವನ್ನು ಹಾಡಿದ್ದಕ್ಕೆ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯ ಕ್ರಮದಿಂದ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹೊರ ನಡೆದಿರುವ ಘಟನೆ ನಡೆದಿದೆ. ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳ ವಾರ ಅಂತಾರಾಷ್ಟ್ರೀಯ ಪ್ರಜಾ‌ಪ್ರಭುತ್ವ ದಿನದ ಕಾರ್ಯಕ್ರಮವನ್ನು‌ ಜಿಲ್ಲಾಡಳಿತ ಆಯೋಜಿಸಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಚನ್ನಬಸಪ್ಪ ಕಾರ್ಯಕ್ರಮ ದಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣ ಮಾತ್ರ ಹಾಡಿದ್ದಕ್ಕೆ ವೇದಿಕೆಯಲ್ಲಿಯೇ ಅಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಅವರು ಇದ್ದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣ ಹಾಡಿ ಅಪಮಾನ ಮಾಡಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ‌ ಕಾರ್ಯಕ್ರಮದಲ್ಲಿ ಎರಡು ಚರಣ ಹಾಡಬೇಕೆಂದು ಎಲ್ಲಿ ಇದೆ, ಆದೇಶ ತೋರಿಸಿ ಎಂದು ಆಗ್ರಹಿಸಿದರು. ಜಿಲ್ಲಾ‌ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ‌ ಮಲ್ಲೇಶಪ್ಪ ರಾಜ್ಯ ಸರ್ಕಾರದ ಆದೇಶವನ್ನು ತೋರಿಸಿದರು. ಇದಕ್ಕೆ ಗರಂ ಆದ ಶಾಸಕರು ಹಾಗಾದ್ರೆ ಕೇಂದ್ರ ಸರ್ಕಾರದ ಆದೇಶವನ್ನು‌ ಮೊಟಕುಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ವೇದಿಕೆಯಲ್ಲಿ ನಾನು ಇರಲ್ಲ ಎಂದು ಭವನದಿಂದ ಹೊರ ನಡೆದರು. ನಂತರ ತಮ್ಮ ಕಚೇರಿಯಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಸೇರಿ ಒಂದು ಕಾನೂನು ಮಾಡುತ್ತದೆ. ಆದರೆ ರಾಜ್ಯ ಸರ್ಕಾರವು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು ಇರುವ ಕಾರ್ಯಕ್ರಮ ದಲ್ಲಿ ಮಾತ್ರ ಪೂರ್ಣ ಗೀತೆ ಹಾಡಬೇಕು, ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಕೇವಲ ಎರಡು ಚರಣ ಹಾಡಬೇಕೆಂದು ಆದೇಶ ಮಾಡಿದೆ.‌ ಇದು ಸರಿ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯ ವನ್ನು ತೆಗೆದುಕೊಂಡು ವಂದೇ ಮಾತರಂ ಗೀತೆಗೆ 150 ವರ್ಷವಾದ ಕಾರಣ ಗೀತೆಯನ್ನು ಗಾಯನ ಮಾಡಬೇಕೆಂದು ಸಂಸತ್ತಿನಲ್ಲಿ ತಿದ್ದುಪಡಿ ಮಾಡಲಾಗಿದೆ‌. ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ‌. ಆದರೆ ಇದನ್ನು ರಾಜ್ಯ ಸರ್ಕಾರ ತನ್ನ ಕ್ಯಾಬಿನೆಟ್​ನಲ್ಲಿ ತೀರ್ಮಾನ ಮಾಡಲಾಗಿದೆ ಎಂದು ವಂದೇ ಮಾತರಂನ ಎರಡು ಚರಣ ಮಾತ್ರ ಹಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇಂದು ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆಯಂದು ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣವನ್ನು ಹಾಡಲಾಯಿತು. ಇದನ್ನು ಪ್ರಶ್ನಿಸಿದರೆ, ರಾಜ್ಯ ಸರ್ಕಾರ‌ದ ಆದೇಶ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದ್ದಾರೆ‌. ಇದರಿಂದ ನಾನು ಕಾರ್ಯಕ್ರಮದಿಂದ ಹೊರಗೆ ಬಂದಿದ್ದೇನೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದರು. ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳು, ಕೇಂದ್ರ ಸಚಿವರು ಇರುವ ಕಾರ್ಯಕ್ರಮ ಹೊರತುಪಡಿಸಿ ಉಳಿದ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಿನ ಎರಡು ಚರಣ ಮಾತ್ರ ಹಾಡಬೇಕೆಂದು ರಾಜ್ಯ ಸರ್ಕಾರ ಇತ್ತೀಚಿಗೆ ಆದೇಶ ಮಾಡಿದೆ. ಹಾಗಾದ್ರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪಿಎಂ ಅವರಿಗೆ ಒಂದು ಕಾನೂನು, ಸಾಮಾನ್ಯ ಜನರಿಗೆ ಒಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು‌. ಕಾನೂನು ಅನ್ನು ಗಾಳಿಗೆ ತೂರುವ ಕೆಲಸ ಮಾಡುತ್ತಿದ್ದಿರಾ, ನೀವು ಈ ದೇಶದ ಪ್ರಜೆಗಳು ಅಲ್ವಾ ಎಂದು ಅವರು ಪ್ರಶ್ನಿಸಿದರು‌. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬೇರೆ ಬೇರೆ ಕಾನೂನು ಇದೆಯೇ ಎಂದರು. ಜನಗಣಮನ ಗೀತೆಯಲ್ಲಿ ಎಲ್ಲ ರಾಜ್ಯಗಳ ಹೆಸರು ಇದೆಯೇ ಎಂದು ಪ್ರಶ್ನಿಸಿದರು‌‌‌. ಇದು ಅಕ್ಷಮ್ಯ ಅಪರಾಧವಾಗಿದೆ‌. ನ್ಯಾಯಾಧೀಶರ ಮುಂದೆ ಇಟ್ಟುಕೊಂಡು ನ್ಯಾಯಾಂಗಕ್ಕೆ ಕೊಡಲಿ ಪೆಟ್ಟು ಕೊಡುವ ಕೆಲಸ‌ ಮಾಡಲಾ ಗುತ್ತಿದೆ. ಸಂವಿಧಾನಕ್ಕೆ ಅಪಪ್ರಚಾರ ಮಾಡಲು ಶಾಸಕ ಚನ್ನಿ ಬಿಡಲ್ಲ ಎಂದು ಹೇಳಿದರು. ಸರ್ಕಾರಿ ಕಾರ್ಯಕ್ರಮದಲ್ಲೂ ಗೀತೆಯನ್ನು ಪೂರ್ಣ ಹಾಡಬೇಕಿತ್ತು. ನೀವು ನಿರ್ಣಯ ಮಾಡಿದಂತೆ ನಡೆಯಲ್ಲ.‌ ಕಾಂಗ್ರೆಸ್ ಪಕ್ಷ ವನ್ನು ಅಲ್ಪಸಂಖ್ಯಾಂತರಿಗೆ ಅಡ ಇಡಲಾಗಿದೆ ಎಂದು ಶಾಸಕ ಚನ್ನಬಸಪ್ಪ ಕಿಡಿಕಾರಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ಹೋಗಬೇಕಿದೆ.‌ ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. 136 ಜನ ಇದ್ದೇವೆಂದು ಕಾಂಗ್ರೆಸ್ ಏನು ಮಾಡಿದ್ರು ನಡೆಯುತ್ತದೆ ಎಂದು ತಿಳಿದು‌ಕೊಂಡರೆ ತಪ್ಪು‌.‌ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ‌.‌ ಬಂಕಿಮಚಂದ್ರ ಚಟರ್ಜಿ ಆರಾಧ್ಯ ದೈವ ಎಂದರು‌. ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ ಬೇಕಿತ್ತು‌. ಆದರೆ ಈಗ ಬೇಡವೇ‌ ಎಂದು ಪ್ರಶ್ನಿಸಿದರು. ಸಂವಿಧಾನಕ್ಕೆ ಬಿಕ್ಕಟ್ಟಿನ ಸಂದರ್ಭ ಬಂದಿದೆ. ಇದನ್ನು ರಾಜ್ಯ ಸರ್ಕಾರ ಹುಟ್ಟುಹಾಕಿದೆ. ನಮ್ಮಲ್ಲಿ ಭಾರತೀಯ ನೀತಿ ಸಂಹಿತೆ ಇದೆಯೇ ಹೊರತು ಕರ್ನಾಟಕ ನೀತಿ ಸಂಹಿತೆ ಅಂತ ಇಲ್ಲ‌‌. ಮುಂದಿನ ವಾರ ನಡೆಯುವ ಅಧಿವೇಶನದಲ್ಲಿ ಇದನ್ನು ಪ್ರಶ್ನೆ ಮಾಡಲಾಗುವುದು ಎಂದರು.
    1
    ಶಿವಮೊಗ್ಗ-ವಂದೇ ಮಾತರಂ ಗೀತೆ ಎರಡೇ ಚರಣ: ಕಾರ್ಯಕ್ರಮ ದಿಂದ ಹೊರನಡೆದ ಶಾಸಕ 
ಶಿವಮೊಗ್ಗ: ವಂದೇ ಮಾತರಂ ಗೀತೆಯಲ್ಲಿ ಕೇವಲ ಎರಡು ಚರಣವನ್ನು ಹಾಡಿದ್ದಕ್ಕೆ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯ ಕ್ರಮದಿಂದ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹೊರ ನಡೆದಿರುವ ಘಟನೆ ನಡೆದಿದೆ.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳ ವಾರ ಅಂತಾರಾಷ್ಟ್ರೀಯ ಪ್ರಜಾ‌ಪ್ರಭುತ್ವ ದಿನದ ಕಾರ್ಯಕ್ರಮವನ್ನು‌ ಜಿಲ್ಲಾಡಳಿತ ಆಯೋಜಿಸಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಚನ್ನಬಸಪ್ಪ ಕಾರ್ಯಕ್ರಮ ದಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣ ಮಾತ್ರ ಹಾಡಿದ್ದಕ್ಕೆ ವೇದಿಕೆಯಲ್ಲಿಯೇ ಅಕ್ಷೇಪ ವ್ಯಕ್ತಪಡಿಸಿದರು.
ಅಲ್ಲದೆ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಅವರು ಇದ್ದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣ ಹಾಡಿ ಅಪಮಾನ ಮಾಡಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ‌
ಕಾರ್ಯಕ್ರಮದಲ್ಲಿ ಎರಡು ಚರಣ ಹಾಡಬೇಕೆಂದು ಎಲ್ಲಿ ಇದೆ, ಆದೇಶ ತೋರಿಸಿ ಎಂದು ಆಗ್ರಹಿಸಿದರು. ಜಿಲ್ಲಾ‌ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ‌ ಮಲ್ಲೇಶಪ್ಪ ರಾಜ್ಯ ಸರ್ಕಾರದ ಆದೇಶವನ್ನು ತೋರಿಸಿದರು. ಇದಕ್ಕೆ ಗರಂ ಆದ ಶಾಸಕರು ಹಾಗಾದ್ರೆ ಕೇಂದ್ರ ಸರ್ಕಾರದ ಆದೇಶವನ್ನು‌ ಮೊಟಕುಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ ವೇದಿಕೆಯಲ್ಲಿ ನಾನು ಇರಲ್ಲ ಎಂದು ಭವನದಿಂದ ಹೊರ ನಡೆದರು.
ನಂತರ ತಮ್ಮ ಕಚೇರಿಯಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಸೇರಿ ಒಂದು ಕಾನೂನು ಮಾಡುತ್ತದೆ. ಆದರೆ ರಾಜ್ಯ ಸರ್ಕಾರವು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿಗಳು ಇರುವ ಕಾರ್ಯಕ್ರಮ ದಲ್ಲಿ ಮಾತ್ರ ಪೂರ್ಣ ಗೀತೆ ಹಾಡಬೇಕು, ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಕೇವಲ ಎರಡು ಚರಣ ಹಾಡಬೇಕೆಂದು ಆದೇಶ ಮಾಡಿದೆ.‌ ಇದು ಸರಿ ಅಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯ ವನ್ನು ತೆಗೆದುಕೊಂಡು ವಂದೇ ಮಾತರಂ ಗೀತೆಗೆ 150 ವರ್ಷವಾದ ಕಾರಣ ಗೀತೆಯನ್ನು ಗಾಯನ ಮಾಡಬೇಕೆಂದು ಸಂಸತ್ತಿನಲ್ಲಿ ತಿದ್ದುಪಡಿ ಮಾಡಲಾಗಿದೆ‌. ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ‌. ಆದರೆ ಇದನ್ನು ರಾಜ್ಯ ಸರ್ಕಾರ ತನ್ನ ಕ್ಯಾಬಿನೆಟ್​ನಲ್ಲಿ ತೀರ್ಮಾನ ಮಾಡಲಾಗಿದೆ ಎಂದು ವಂದೇ ಮಾತರಂನ ಎರಡು ಚರಣ ಮಾತ್ರ ಹಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇಂದು ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಜಾಪ್ರಭುತ್ವ ದಿನಾಚರಣೆಯಂದು ವಂದೇ ಮಾತರಂ ಗೀತೆಯನ್ನು ಕೇವಲ ಎರಡು ಚರಣವನ್ನು ಹಾಡಲಾಯಿತು. ಇದನ್ನು ಪ್ರಶ್ನಿಸಿದರೆ, ರಾಜ್ಯ ಸರ್ಕಾರ‌ದ ಆದೇಶ ಎಂದು ಜಿಲ್ಲಾಧಿಕಾರಿ ಗಳು ತಿಳಿಸಿದ್ದಾರೆ‌. ಇದರಿಂದ ನಾನು ಕಾರ್ಯಕ್ರಮದಿಂದ ಹೊರಗೆ ಬಂದಿದ್ದೇನೆ ಎಂದು ಶಾಸಕ ಚನ್ನಬಸಪ್ಪ ತಿಳಿಸಿದರು.
ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳು, ಕೇಂದ್ರ ಸಚಿವರು ಇರುವ ಕಾರ್ಯಕ್ರಮ ಹೊರತುಪಡಿಸಿ ಉಳಿದ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಹಾಡಿನ ಎರಡು ಚರಣ ಮಾತ್ರ ಹಾಡಬೇಕೆಂದು ರಾಜ್ಯ ಸರ್ಕಾರ ಇತ್ತೀಚಿಗೆ ಆದೇಶ ಮಾಡಿದೆ. ಹಾಗಾದ್ರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪಿಎಂ ಅವರಿಗೆ ಒಂದು ಕಾನೂನು, ಸಾಮಾನ್ಯ ಜನರಿಗೆ ಒಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು‌. ಕಾನೂನು ಅನ್ನು ಗಾಳಿಗೆ ತೂರುವ ಕೆಲಸ ಮಾಡುತ್ತಿದ್ದಿರಾ, ನೀವು ಈ ದೇಶದ ಪ್ರಜೆಗಳು ಅಲ್ವಾ ಎಂದು ಅವರು ಪ್ರಶ್ನಿಸಿದರು‌. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬೇರೆ ಬೇರೆ ಕಾನೂನು ಇದೆಯೇ ಎಂದರು.
ಜನಗಣಮನ ಗೀತೆಯಲ್ಲಿ ಎಲ್ಲ ರಾಜ್ಯಗಳ ಹೆಸರು ಇದೆಯೇ ಎಂದು ಪ್ರಶ್ನಿಸಿದರು‌‌‌. ಇದು ಅಕ್ಷಮ್ಯ ಅಪರಾಧವಾಗಿದೆ‌. ನ್ಯಾಯಾಧೀಶರ ಮುಂದೆ ಇಟ್ಟುಕೊಂಡು ನ್ಯಾಯಾಂಗಕ್ಕೆ ಕೊಡಲಿ ಪೆಟ್ಟು ಕೊಡುವ ಕೆಲಸ‌ ಮಾಡಲಾ ಗುತ್ತಿದೆ. ಸಂವಿಧಾನಕ್ಕೆ ಅಪಪ್ರಚಾರ ಮಾಡಲು ಶಾಸಕ ಚನ್ನಿ ಬಿಡಲ್ಲ ಎಂದು ಹೇಳಿದರು.
ಸರ್ಕಾರಿ ಕಾರ್ಯಕ್ರಮದಲ್ಲೂ ಗೀತೆಯನ್ನು ಪೂರ್ಣ ಹಾಡಬೇಕಿತ್ತು. ನೀವು ನಿರ್ಣಯ ಮಾಡಿದಂತೆ ನಡೆಯಲ್ಲ.‌ ಕಾಂಗ್ರೆಸ್ ಪಕ್ಷ ವನ್ನು ಅಲ್ಪಸಂಖ್ಯಾಂತರಿಗೆ ಅಡ ಇಡಲಾಗಿದೆ ಎಂದು ಶಾಸಕ ಚನ್ನಬಸಪ್ಪ ಕಿಡಿಕಾರಿದ್ದಾರೆ.
ಇದನ್ನು ಗಂಭೀರವಾಗಿ ತೆಗೆದುಕೊಂಡು ಹೋಗಬೇಕಿದೆ.‌ ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. 136 ಜನ ಇದ್ದೇವೆಂದು ಕಾಂಗ್ರೆಸ್ ಏನು ಮಾಡಿದ್ರು ನಡೆಯುತ್ತದೆ ಎಂದು ತಿಳಿದು‌ಕೊಂಡರೆ ತಪ್ಪು‌.‌ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ‌.‌ ಬಂಕಿಮಚಂದ್ರ ಚಟರ್ಜಿ ಆರಾಧ್ಯ ದೈವ ಎಂದರು‌.
ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ ಬೇಕಿತ್ತು‌. ಆದರೆ ಈಗ ಬೇಡವೇ‌ ಎಂದು ಪ್ರಶ್ನಿಸಿದರು. ಸಂವಿಧಾನಕ್ಕೆ ಬಿಕ್ಕಟ್ಟಿನ ಸಂದರ್ಭ ಬಂದಿದೆ. ಇದನ್ನು ರಾಜ್ಯ ಸರ್ಕಾರ ಹುಟ್ಟುಹಾಕಿದೆ. ನಮ್ಮಲ್ಲಿ ಭಾರತೀಯ ನೀತಿ ಸಂಹಿತೆ ಇದೆಯೇ ಹೊರತು ಕರ್ನಾಟಕ ನೀತಿ ಸಂಹಿತೆ ಅಂತ ಇಲ್ಲ‌‌. ಮುಂದಿನ ವಾರ ನಡೆಯುವ ಅಧಿವೇಶನದಲ್ಲಿ ಇದನ್ನು ಪ್ರಶ್ನೆ ಮಾಡಲಾಗುವುದು ಎಂದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    11 hrs ago
  • ಶಿಗ್ಗಾಂವಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಬೃಹತ್ ಪ್ರತಿಭಟನೆ. ಶಿಗ್ಗಾಂವಿ. ರೈತಪರ ಒಕ್ಕೂಟ ಹಾಗೂ ಕನ್ನಡ ಪರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಪ್ರಮುಖ ಮೂರು ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆಯನ್ನು ದಿನಾಂಕ್ 16. 9. 2026. ಬುಧವಾರ ರಂದು, ಪೋಸ್ಟ್ ಆಫೀಸ್ ನಿಂದ ಕಿತ್ತೂರು ರಾಣಿ ಚೆನ್ನಮ್ಮರ ಸರ್ಕಲ್ ವರೆಗೂ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಆದ ಕಾರಣ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ನಮ್ಮ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ತಾಲೂಕ ರೈತ ಸಂಘದ ಅಧ್ಯಕ್ಷರಾದ ಶ್ರೀ ಬಸಲಿಂಗಪ್ಪ ನರಗುಂದ ಮನವಿ ಮಾಡಿದರು.
    2
    ಶಿಗ್ಗಾಂವಿ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಬೃಹತ್ ಪ್ರತಿಭಟನೆ.
ಶಿಗ್ಗಾಂವಿ. ರೈತಪರ ಒಕ್ಕೂಟ ಹಾಗೂ ಕನ್ನಡ ಪರ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಪ್ರಮುಖ ಮೂರು ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆಯನ್ನು ದಿನಾಂಕ್ 16. 9. 2026. ಬುಧವಾರ ರಂದು, ಪೋಸ್ಟ್ ಆಫೀಸ್ ನಿಂದ ಕಿತ್ತೂರು ರಾಣಿ ಚೆನ್ನಮ್ಮರ ಸರ್ಕಲ್ ವರೆಗೂ ಬೃಹತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಆದ ಕಾರಣ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ನಮ್ಮ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ತಾಲೂಕ ರೈತ ಸಂಘದ ಅಧ್ಯಕ್ಷರಾದ ಶ್ರೀ ಬಸಲಿಂಗಪ್ಪ ನರಗುಂದ ಮನವಿ ಮಾಡಿದರು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    12 hrs ago
  • ಗೌರಿ-ಗಣೇಶ ಹಬ್ಬದ ಆಚರಣೆ ಸಮಯದಲ್ಲಿ ಎಲ್ಲಾ ತರಹದ ಕಲರ್ ಪೇಪರ್ ಬ್ಲಾಸ್ಟಿಂಗ್ ಗಳನ್ನ ನಿಷೇಧಿಸಿ ಪೊಲೀಸ್ ಇಲಾಖೆ ಪ್ರಕಟಣೆ ಗೌರಿ-ಗಣೇಶ ಹಬ್ಬದ ಆಚರಣೆ ಸಮಯದಲ್ಲಿ ಎಲ್ಲಾ ತರಹದ ಕಲರ್ ಪೇಪರ್ ಬ್ಲಾಸ್ಟಿಂಗ್ ಗಳನ್ನ ನಿಷೇಧಿಸಿ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿವಿಧ ದಿನಾಂಕಗಳಂದು ವಿಸರ್ಜನೆ ಮಾಡಲಿದ್ದು, ಮೆರವಣಿಗೆ ಸಂದರ್ಭದಲ್ಲಿ ಕಲರ್ ಪೇಪರ್ ಬ್ಲಾಸ್ಟಿಂಗ್, ಪಟಾಕಿ /ಸಿಡಿಮದ್ದುಗಳನ್ನು ಸಿಡಿಸುವುದರಿಂದ, ಮೆರವಣಿಗೆ ಮಾರ್ಗದಲ್ಲಿರುವ ಪ್ರಾರ್ಥನಾ ಸ್ಥಳಗಳಿಗೆ ಹಾನಿಯಾಗುವ ಸಾಧ್ಯತೆ ಇದ್ದು, ಇದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯೋವೃದ್ಧರಿಗೆ. ಮಕ್ಕಳಿಗೆ ತೊಂದರೆಯಾಗುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು, ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ 2023ರ ಕಲಂ 163 ಹಾಗೂ ಕರ್ನಾಟಕ ಪೊಲೀಸ್ ಅಧಿನಿಯಮ ಕಲಂ 35. 36ರಡಿಯಲ್ಲಿ ಸಾರ್ವಜನಿಕ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತಾ ಕ್ರಮದ ಸಲುವಾಗಿ ಅಕ್ಟೋಬರ್ 5 ರವರೆಗೆ ಚಿತ್ರದುರ್ಗ ಜಿಲ್ಲೆಯಾದ್ಯಾಂತ ಎಲ್ಲಾ ರೀತಿಯ ಕಲರ್ ಪೇಪರ್ బ్లాస్టింగా. ಪಟಾಕಿ ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿರುತ್ತಾರೆ.
    1
    ಗೌರಿ-ಗಣೇಶ ಹಬ್ಬದ ಆಚರಣೆ ಸಮಯದಲ್ಲಿ ಎಲ್ಲಾ ತರಹದ ಕಲರ್ ಪೇಪರ್ ಬ್ಲಾಸ್ಟಿಂಗ್ ಗಳನ್ನ ನಿಷೇಧಿಸಿ ಪೊಲೀಸ್ ಇಲಾಖೆ ಪ್ರಕಟಣೆ
ಗೌರಿ-ಗಣೇಶ ಹಬ್ಬದ ಆಚರಣೆ ಸಮಯದಲ್ಲಿ ಎಲ್ಲಾ ತರಹದ ಕಲರ್ ಪೇಪರ್ ಬ್ಲಾಸ್ಟಿಂಗ್ ಗಳನ್ನ ನಿಷೇಧಿಸಿ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. 
ಚಿತ್ರದುರ್ಗ ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿವಿಧ ದಿನಾಂಕಗಳಂದು ವಿಸರ್ಜನೆ ಮಾಡಲಿದ್ದು, ಮೆರವಣಿಗೆ ಸಂದರ್ಭದಲ್ಲಿ ಕಲರ್ ಪೇಪರ್ ಬ್ಲಾಸ್ಟಿಂಗ್, ಪಟಾಕಿ /ಸಿಡಿಮದ್ದುಗಳನ್ನು ಸಿಡಿಸುವುದರಿಂದ, ಮೆರವಣಿಗೆ ಮಾರ್ಗದಲ್ಲಿರುವ ಪ್ರಾರ್ಥನಾ ಸ್ಥಳಗಳಿಗೆ ಹಾನಿಯಾಗುವ ಸಾಧ್ಯತೆ ಇದ್ದು, ಇದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ವಯೋವೃದ್ಧರಿಗೆ. ಮಕ್ಕಳಿಗೆ ತೊಂದರೆಯಾಗುವ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ, ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು, ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ 2023ರ ಕಲಂ 163 ಹಾಗೂ ಕರ್ನಾಟಕ ಪೊಲೀಸ್ ಅಧಿನಿಯಮ ಕಲಂ 35. 36ರಡಿಯಲ್ಲಿ ಸಾರ್ವಜನಿಕ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತಾ ಕ್ರಮದ ಸಲುವಾಗಿ ಅಕ್ಟೋಬರ್ 5 ರವರೆಗೆ ಚಿತ್ರದುರ್ಗ ಜಿಲ್ಲೆಯಾದ್ಯಾಂತ ಎಲ್ಲಾ ರೀತಿಯ ಕಲರ್ ಪೇಪರ್ బ్లాస్టింగా. ಪಟಾಕಿ ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿರುತ್ತಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    5 hrs ago
  • ಲಕ್ಷಾಂತರ ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿದ ಎರಡು ರಾಜ್ಯಗಳನ್ನು ಬೆಸುವ ಗೌರಸಮುದ್ರ ಮಾರಮ್ಮ ಜಾತ್ರೆ
    1
    ಲಕ್ಷಾಂತರ ಭಕ್ತರ ನಡುವೆ ಸಡಗರ ಸಂಭ್ರಮದಿಂದ ಜರುಗಿದ ಎರಡು ರಾಜ್ಯಗಳನ್ನು ಬೆಸುವ ಗೌರಸಮುದ್ರ ಮಾರಮ್ಮ ಜಾತ್ರೆ
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    9 hrs ago
  • ಗೋನೂರಿನಲ್ಲಿ ಗಂಗಾಪೂಜೆ: ಭದ್ರೆಯನ್ನು ಸ್ವಾಗತಿಸಿದ ಹೋರಾಟಗಾರರು" 🚩 #ಭದ್ರಾನೀರು #ಚಿತ್ರದುರ್ಗ #ನೀರಾವರಿಹೋರಾಟ #ಗೋನೂರು #ಗಂಗಾಪೂಜೆ #ಭದ್ರಾಮೇಲ್ದಂಡೆ #ಸಮಗ್ರನೀರಾವರಿ #ಬರಡುನೆಲಹಸಿರು #ಕೋದಂಡರಾಮಯ್ಯ #ಎಂಜಯಣ್ಣ #ಮುರುಘರಾಜೇಂದ್ರಒಡೆಯರ್ #ಚಿತ್ರದುರ್ಗಜಿಲ್ಲೆ #ಮೊಳಕಾಲ್ಮೂರು #ಚಳ್ಳಕೆರೆ #ಈಚಘಟ್ಟ #ಬೇಡರರೆಡ್ಡಿಹಳ್ಳಿ #ಕಬೀರಾನಂದಮಠ #ಗೋನೂರುಭದ್ರಾ #ನೀರಾವರಿ #ರೈತಹೋರಾಟ #ಕೆರೆಕಟ್ಟೆ #ಅಣೆಕಟ್ಟು #ನೀರುಸ್ವಾಗತ #ಎರಡನೇಹಂತದಹೋರಾಟ #ಅರ್ಧಗೆಲುವು #ದಶಕಗಳಕನಸು #ರೋಮಾಂಚನದಕ್ಷ #ಪಿಕೋದಂಡರಾಮಯ್ಯ #ಬೇಡರರೆಡ್ಡಿಹಳ್ಳಿಬಸವರೆಡ್ಡಿ #ಕೆಎಸ್ನವೀನ್ #ಚಳ್ಳಕೆರೆಬಸವರಾಜ್ #ನರೇನಹಳ್ಳಿಅರುಣಕುಮಾರ್ #ಜೋಗಿಮಟ್ಟಿಮಹೇಶ್ಬಾಬು #ಗೌನಹಳ್ಳಿಗೋವಿಂದಪ್ಪ #ಶಿವಾಲಿಂಗಾನಂದಸ್ವಾಮೀಜಿ #ಹೋರಾಟಗಾರರಿಗೆನಮನ #ನೀರಿಗಾಗಿಬದುಕು #ಬರಡುನೆಲಕ್ಕೆಜೀವ #ಹಸಿರುಕ್ರಾಂತಿ #ನ್ಯಾಯಕ್ಕಾಗಿಹೋರಾಟ #ಸಂಕಲ್ಪ #BhadraWater #Chitradurga #IrrigationStruggle #Karnataka #BhadraUpperBank #WaterForAll #FarmersFight #GangaPooja #Gonuru #Molakalmuru #SaveFarmers #WaterRevolution #ಭದ್ರಾನೀರು #ಚಿತ್ರದುರ್ಗ #ನೀರಾವರಿಹೋರಾಟ #ಗೋನೂರು #ಗಂಗಾಪೂಜೆ #ಬರಡುನೆಲಹಸಿರು #ಕೋದಂಡರಾಮಯ್ಯ #ಎರಡನೇಹಂತದಹೋರಾಟ #BhadraWater #Chitradurga #Karnataka #IrrigationStruggle
    1
    ಗೋನೂರಿನಲ್ಲಿ ಗಂಗಾಪೂಜೆ: ಭದ್ರೆಯನ್ನು ಸ್ವಾಗತಿಸಿದ ಹೋರಾಟಗಾರರು" 🚩
#ಭದ್ರಾನೀರು #ಚಿತ್ರದುರ್ಗ #ನೀರಾವರಿಹೋರಾಟ #ಗೋನೂರು #ಗಂಗಾಪೂಜೆ #ಭದ್ರಾಮೇಲ್ದಂಡೆ #ಸಮಗ್ರನೀರಾವರಿ #ಬರಡುನೆಲಹಸಿರು #ಕೋದಂಡರಾಮಯ್ಯ #ಎಂಜಯಣ್ಣ #ಮುರುಘರಾಜೇಂದ್ರಒಡೆಯರ್
#ಚಿತ್ರದುರ್ಗಜಿಲ್ಲೆ #ಮೊಳಕಾಲ್ಮೂರು #ಚಳ್ಳಕೆರೆ #ಈಚಘಟ್ಟ #ಬೇಡರರೆಡ್ಡಿಹಳ್ಳಿ #ಕಬೀರಾನಂದಮಠ #ಗೋನೂರುಭದ್ರಾ
#ನೀರಾವರಿ #ರೈತಹೋರಾಟ #ಕೆರೆಕಟ್ಟೆ #ಅಣೆಕಟ್ಟು #ನೀರುಸ್ವಾಗತ #ಎರಡನೇಹಂತದಹೋರಾಟ #ಅರ್ಧಗೆಲುವು #ದಶಕಗಳಕನಸು #ರೋಮಾಂಚನದಕ್ಷ
#ಪಿಕೋದಂಡರಾಮಯ್ಯ #ಬೇಡರರೆಡ್ಡಿಹಳ್ಳಿಬಸವರೆಡ್ಡಿ #ಕೆಎಸ್ನವೀನ್ #ಚಳ್ಳಕೆರೆಬಸವರಾಜ್ #ನರೇನಹಳ್ಳಿಅರುಣಕುಮಾರ್ #ಜೋಗಿಮಟ್ಟಿಮಹೇಶ್ಬಾಬು #ಗೌನಹಳ್ಳಿಗೋವಿಂದಪ್ಪ #ಶಿವಾಲಿಂಗಾನಂದಸ್ವಾಮೀಜಿ
#ಹೋರಾಟಗಾರರಿಗೆನಮನ #ನೀರಿಗಾಗಿಬದುಕು #ಬರಡುನೆಲಕ್ಕೆಜೀವ #ಹಸಿರುಕ್ರಾಂತಿ #ನ್ಯಾಯಕ್ಕಾಗಿಹೋರಾಟ #ಸಂಕಲ್ಪ
#BhadraWater #Chitradurga #IrrigationStruggle #Karnataka #BhadraUpperBank #WaterForAll #FarmersFight #GangaPooja #Gonuru #Molakalmuru #SaveFarmers #WaterRevolution
#ಭದ್ರಾನೀರು #ಚಿತ್ರದುರ್ಗ #ನೀರಾವರಿಹೋರಾಟ #ಗೋನೂರು #ಗಂಗಾಪೂಜೆ #ಬರಡುನೆಲಹಸಿರು #ಕೋದಂಡರಾಮಯ್ಯ #ಎರಡನೇಹಂತದಹೋರಾಟ #BhadraWater #Chitradurga #Karnataka #IrrigationStruggle
    user_Ctownnews16
    Ctownnews16
    Local News Reporter ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    19 hrs ago
  • ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’! ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು! ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’! ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು! ನಮಸ್ಕಾರ ಬಂಧುಗಳೇ... ​ನಾಡಿನಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದೆ. ಬೀದಿ ಬೀದಿಗಳಲ್ಲಿ ವಿಘ್ನನಿವಾರಕನ ಜಯಘೋಷ ಮೊಳಗುತ್ತಿದೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ 'ಹುಡಿಯದ ಓಣಿ'ಯಲ್ಲಿ ಕಂಡುಬಂದ ಈ ದೃಶ್ಯ ಮಾತ್ರ ಇಡೀ ನಾಡಿನ ಗಮನ ಸೆಳೆಯುವಂತಿದೆ, ಪ್ರತಿಯೊಬ್ಬರ ಮನ ಮುಟ್ಟುವಂತಿದೆ! ​ಹೌದು, ಇಲ್ಲಿ ಒಂದೆಡೆ ಅಲ್ಲಾಹನ ಪ್ರಾರ್ಥನೆ ನಡೆಯುವ ಮಸೀದಿ ಇದ್ದರೆ... ಅದೇ ಮಸೀದಿಯ ಅಂಗಳದ ಪಕ್ಕದಲ್ಲೇ ಸಿದ್ದಿವಿನಾಯಕ ವಿರಾಜಮಾನನಾಗಿದ್ದಾನೆ! ವಿಶೇಷ ಎಂದರೆ, ಯಾವುದೇ ಜಾತಿ-ಧರ್ಮದ ಹಂಗಿಲ್ಲದೆ, ಇಲ್ಲಿನ ಮುಸ್ಲಿಂ ಸಮುದಾಯದ ಪುಟ್ಟ ಮಕ್ಕಳು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ತಮ್ಮ ಕೈಯಾರೆ ಕಾಯಿ ಒಡೆದು, ಪೂಜೆ ಸಲ್ಲಿಸಿ, ಪ್ರಸಾದ ಹಂಚಿ ಹಬ್ಬದ ಸಂಭ್ರಮದಲ್ಲಿದ್ದಾರೆ. ​ಇನ್ನು ಅತ್ಯಂತ ಖುಷಿಯ ವಿಷಯ ಎಂದರೆ... ಇಲ್ಲಿನ ಮಕ್ಕಳು ಕೇವಲ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿಲ್ಲ, ಬದಲಾಗಿ ಅತ್ಯಂತ ಪ್ರೀತಿಯಿಂದ ಈ ಮೂರ್ತಿಗೆ 'ಹುಡಿಯದ ಓಣಿಯ ಸಾಮ್ರಾಟ್' ಎಂದೇ ನಾಮಕರಣ ಮಾಡಿದ್ದಾರೆ! ​ಸಾಮ್ರಾಟ್ ಎಂಬ ಹೆಸರಿನಲ್ಲಿ ಗಣಪತಿಯನ್ನು ನೆನೆಯುತ್ತಿರುವ ಈ ಮಕ್ಕಳ ಮನಸ್ಸಿನಲ್ಲಿ 'ನಾವೆಲ್ಲರೂ ಒಂದೇ' ಎನ್ನುವ ಭ್ರಾತೃತ್ವದ ಸದ್ಭಾವನೆ ಆಳವಾಗಿ ಬೇರೂರಿದೆ. ಧರ್ಮಗಳ ಹೆಸರಿನಲ್ಲಿ ಕಹಿ ವಾತಾವರಣ ಸೃಷ್ಟಿಯಾಗುವ ಈ ದಿನಗಳಲ್ಲಿ, ಮುಂಡರಗಿಯ ಈ ಪುಟ್ಟ ಮಕ್ಕಳು ಇಡೀ ಸಮಾಜಕ್ಕೇ ಪ್ರೀತಿ ಮತ್ತು ಸೌಹಾರ್ದತೆಯ ದೊಡ್ಡ ಪಾಠ ಹೇಳಿಕೊಡುತ್ತಿದ್ದಾರೆ. ​ಶರೀಫ-ಶಿವಯೋಗಿಗಳು ನಡೆದ ಸೌಹಾರ್ದತೆಯ ನೆಲದಲ್ಲಿ, ಮುಂಡರಗಿಯ ಹುಡಿಯದ ಓಣಿಯ ಈ ಪುಟ್ಟ ಮಕ್ಕಳ ನಡೆ ಇಡೀ ನಾಡಿಗೆ ಭಾವೈಕ್ಯತೆಯ ಹೊಸ ಬೆಳಕನ್ನು ತೋರುತ್ತಿದೆ. ನಾವೆಲ್ಲರೂ ಒಂದೇ ಎನ್ನುವ ಈ ಮಕ್ಕಳ ಪ್ರೀತಿಗೆ ಕನ್ನಡಿಗರ ಪರವಾಗಿ ಹೃದಯಪೂರ್ವಕ ಸಾಷ್ಟಾಂಗ ನಮನಗಳು
    1
    ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’!  ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು!
ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’!  ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು!
ನಮಸ್ಕಾರ ಬಂಧುಗಳೇ...
​ನಾಡಿನಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದೆ. ಬೀದಿ ಬೀದಿಗಳಲ್ಲಿ ವಿಘ್ನನಿವಾರಕನ ಜಯಘೋಷ ಮೊಳಗುತ್ತಿದೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ 'ಹುಡಿಯದ ಓಣಿ'ಯಲ್ಲಿ ಕಂಡುಬಂದ ಈ ದೃಶ್ಯ ಮಾತ್ರ ಇಡೀ ನಾಡಿನ ಗಮನ ಸೆಳೆಯುವಂತಿದೆ, ಪ್ರತಿಯೊಬ್ಬರ ಮನ ಮುಟ್ಟುವಂತಿದೆ!
​ಹೌದು, ಇಲ್ಲಿ ಒಂದೆಡೆ ಅಲ್ಲಾಹನ ಪ್ರಾರ್ಥನೆ ನಡೆಯುವ ಮಸೀದಿ ಇದ್ದರೆ... ಅದೇ ಮಸೀದಿಯ ಅಂಗಳದ ಪಕ್ಕದಲ್ಲೇ ಸಿದ್ದಿವಿನಾಯಕ ವಿರಾಜಮಾನನಾಗಿದ್ದಾನೆ! ವಿಶೇಷ ಎಂದರೆ, ಯಾವುದೇ ಜಾತಿ-ಧರ್ಮದ ಹಂಗಿಲ್ಲದೆ, ಇಲ್ಲಿನ ಮುಸ್ಲಿಂ ಸಮುದಾಯದ ಪುಟ್ಟ ಮಕ್ಕಳು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ತಮ್ಮ ಕೈಯಾರೆ ಕಾಯಿ ಒಡೆದು, ಪೂಜೆ ಸಲ್ಲಿಸಿ, ಪ್ರಸಾದ ಹಂಚಿ ಹಬ್ಬದ ಸಂಭ್ರಮದಲ್ಲಿದ್ದಾರೆ.
​ಇನ್ನು ಅತ್ಯಂತ ಖುಷಿಯ ವಿಷಯ ಎಂದರೆ... ಇಲ್ಲಿನ ಮಕ್ಕಳು ಕೇವಲ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿಲ್ಲ, ಬದಲಾಗಿ ಅತ್ಯಂತ ಪ್ರೀತಿಯಿಂದ ಈ ಮೂರ್ತಿಗೆ 'ಹುಡಿಯದ ಓಣಿಯ ಸಾಮ್ರಾಟ್' ಎಂದೇ ನಾಮಕರಣ ಮಾಡಿದ್ದಾರೆ!
​ಸಾಮ್ರಾಟ್ ಎಂಬ ಹೆಸರಿನಲ್ಲಿ ಗಣಪತಿಯನ್ನು ನೆನೆಯುತ್ತಿರುವ ಈ ಮಕ್ಕಳ ಮನಸ್ಸಿನಲ್ಲಿ 'ನಾವೆಲ್ಲರೂ ಒಂದೇ' ಎನ್ನುವ ಭ್ರಾತೃತ್ವದ ಸದ್ಭಾವನೆ ಆಳವಾಗಿ ಬೇರೂರಿದೆ. ಧರ್ಮಗಳ ಹೆಸರಿನಲ್ಲಿ ಕಹಿ ವಾತಾವರಣ ಸೃಷ್ಟಿಯಾಗುವ ಈ ದಿನಗಳಲ್ಲಿ, ಮುಂಡರಗಿಯ ಈ ಪುಟ್ಟ ಮಕ್ಕಳು ಇಡೀ ಸಮಾಜಕ್ಕೇ ಪ್ರೀತಿ ಮತ್ತು ಸೌಹಾರ್ದತೆಯ ದೊಡ್ಡ ಪಾಠ ಹೇಳಿಕೊಡುತ್ತಿದ್ದಾರೆ.
​ಶರೀಫ-ಶಿವಯೋಗಿಗಳು ನಡೆದ ಸೌಹಾರ್ದತೆಯ ನೆಲದಲ್ಲಿ, ಮುಂಡರಗಿಯ ಹುಡಿಯದ ಓಣಿಯ ಈ ಪುಟ್ಟ ಮಕ್ಕಳ ನಡೆ ಇಡೀ ನಾಡಿಗೆ ಭಾವೈಕ್ಯತೆಯ ಹೊಸ ಬೆಳಕನ್ನು ತೋರುತ್ತಿದೆ. ನಾವೆಲ್ಲರೂ ಒಂದೇ ಎನ್ನುವ ಈ ಮಕ್ಕಳ ಪ್ರೀತಿಗೆ ಕನ್ನಡಿಗರ ಪರವಾಗಿ ಹೃದಯಪೂರ್ವಕ ಸಾಷ್ಟಾಂಗ ನಮನಗಳು
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    21 hrs ago
  • 🚨 ಶಿವಮೊಗ್ಗದಲ್ಲಿ ಆಹಾರ ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ; ಕೊಳೆತ ಹಣ್ಣು ಪತ್ತೆ, ಜ್ಯೂಸ್ ಸೆಂಟರ್ ಸೀಜ್! ಕೊಳೆತ ಹಣ್ಣು ಮಾರಾಟಕ್ಕೆ ಸಿದ್ಧತೆ? ಶಿವಮೊಗ್ಗದಲ್ಲಿ ತನು ಜ್ಯೂಸ್ ಸೆಂಟರ್ ಸೀಜ್
    1
    🚨 ಶಿವಮೊಗ್ಗದಲ್ಲಿ ಆಹಾರ ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ; ಕೊಳೆತ ಹಣ್ಣು ಪತ್ತೆ, ಜ್ಯೂಸ್ ಸೆಂಟರ್ ಸೀಜ್!
ಕೊಳೆತ ಹಣ್ಣು ಮಾರಾಟಕ್ಕೆ ಸಿದ್ಧತೆ? ಶಿವಮೊಗ್ಗದಲ್ಲಿ ತನು ಜ್ಯೂಸ್ ಸೆಂಟರ್ ಸೀಜ್
    user_ಸಿಹಿಮೋಗ್ಗೆ ಸುದ್ಧಿ ಕನ್ನಡ
    ಸಿಹಿಮೋಗ್ಗೆ ಸುದ್ಧಿ ಕನ್ನಡ
    Video Creator ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    2 hrs ago
  • ಶಿವಮೊಗ್ಗ-ಕೊಳೆತ ಹಣ್ಣು ಗಳಿಂದ ಜ್ಯೂಸ್ ತಯಾರಿ ಆರೋಪ:ಎಸಿ ಡಾ. ಮೈತ್ರಿ ನೇತೃತ್ವದಲ್ಲಿ ದಾಳಿ ಶಿವಮೊಗ್ಗ: ಬಿಸಿಲಿನ ತಾಪಕ್ಕೆ ತಂಪು ನೀಡುವ ಹೆಸರಿನಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದರೆಂಬಆರೋಪ ಕೇಳಿಬಂದಿರುವ ತಿಲಕನಗರದ ತನು ಜ್ಯೂಸ್ ಸೆಂಟರ್ ಮೇಲೆ  ಉಪವಿಭಾಗಾಧಿಕಾರಿ ಡಾ.ಮೈತ್ರಿ ನೇತೃತ್ವ ದಲ್ಲಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಖಡಕ್ ಕ್ರಮ ಕೈಗೊಂಡಿದೆ. ಸಾರ್ವಜನಿಕರಿಂದ ಬಂದ ದೂರು ಗಳ ಹಿನ್ನೆಲೆಯಲ್ಲಿ ಎಸಿ ಡಾ.ಮೈತ್ರಿ,  ತಹಶೀಲ್ದಾರ್ ರಾಜೀವ್ ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ತನು ಜ್ಯೂಸ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ವಿವಿಧ ಬಗೆಯ ಹಣ್ಣುಗಳು ಕೊಳೆತ ಹಾಗೂ ಹಾಳಾದ ಸ್ಥಿತಿಯಲ್ಲಿ ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಗ್ರೇಪ್ಸ್, ಚಿಕ್ಕು, ಡ್ರ್ಯಾಗನ್ ಫ್ರೂಟ್, ಸೇಬು, ದಾಳಿಂಬೆ ಸೇರಿದಂತೆ ಹಲವು ಹಣ್ಣುಗಳ ಮೇಲೆ ಫಂಗಸ್ ಮತ್ತು ಬೂಷ್ಟಿನಂತಹ ಬೆಳವಣಿಗೆ ಕಂಡುಬಂದಿದ್ದು, ಅವುಗಳನ್ನು ಜ್ಯೂಸ್ ತಯಾರಿಕೆಗೆ ಬಳಸ ಲಾಗುತ್ತಿತ್ತೆಂಬುದು ಪರಿಶೀಲನೆಯ ವೇಳೆ ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಗ್ರಾಹಕರ ಕಣ್ಣಿಗೆ ತಂಪು.ಒಳಗೆ ಮಾತ್ರ ಕೊಳೆತ ಹಣ್ಣುಗಳ ದಾಸ್ತಾನು? ತನು ಜ್ಯೂಸ್ ಸೆಂಟರ್‌ನಲ್ಲಿ ಬಗೆಬಗೆಯ ಜ್ಯೂಸ್‌ಗಳು ಕಡಿಮೆ ದರದಲ್ಲಿ ದೊರೆಯು ತ್ತವೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಹಲವರು ಇಲ್ಲಿಗೆ ಬರುತ್ತಿದ್ದರು. ಹೊರಗಿನಿಂದ ನೋಡಿದಾಗ ಎಲ್ಲವೂ ಸ್ವಚ್ಛವಾಗಿಯೇ ಕಾಣುತ್ತಿದ್ದರೂ, ಅಧಿಕಾರಿಗಳ ಪರಿಶೀಲನೆಯ ವೇಳೆ ಒಳಭಾಗ ದಲ್ಲಿ ಕಂಡುಬಂದ ಪರಿಸ್ಥಿತಿ ಮಾತ್ರ ಆಘಾತಕಾರಿಯಾಗಿತ್ತು ಎಂದು ಎಸಿ ತಿಳಿಸಿದ್ದಾರೆ. ಜ್ಯೂಸ್‌ಗೆ ಬಳಸುವ ಹಣ್ಣುಗಳನ್ನು ತಾಜಾ ಸ್ಥಿತಿಯಲ್ಲಿ ಇಡುವ ಬದಲು, ದೀರ್ಘಕಾಲ ಸಂಗ್ರಹಿಸಿಟ್ಟಿರುವಂತೆ ಕಂಡುಬಂದಿದ್ದು, ಕೆಲವು ಹಣ್ಣು ಗಳು ಕೊಳೆತು ಹೋಗಿದ್ದವು. ಫ್ರೀಜರ್‌ನಲ್ಲಿಯೂ ಕಳಪೆ ಸ್ಥಿತಿಯ ಹಣ್ಣು ಗಳು ಕಂಡುಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಅಧಿಕಾರಿಗಳ ಪರಿಶೀಲನೆ ವೇಳೆ ಗ್ರೇಪ್ಸ್, ಚಿಕ್ಕು, ಡ್ರ್ಯಾಗನ್ ಫ್ರೂಟ್, ಸೇಬು, ದಾಳಿಂಬೆ ಸೇರಿದಂತೆ ವಿವಿಧ ಹಣ್ಣುಗಳು ಕೊಳೆತ ಸ್ಥಿತಿ ಯಲ್ಲಿ ಕಂಡುಬಂದಿವೆ ಎಂದು ತಿಳಿದುಬಂದಿದೆ. ಕೆಲವು ಹಣ್ಣುಗಳ ಮೇಲೆ ಫಂಗಸ್, ಬೂಷ್ಟಿನಂತಹ ಬೆಳವಣಿಗೆ ಕಂಡುಬಂದಿದ್ದು, ಇವುಗಳನ್ನು ಸಾರ್ವಜನಿಕರು ಸೇವಿಸುವುದು ಸೂಕ್ತವಲ್ಲ ಎಂಬ ಪ್ರಾಥಮಿಕ ಅಭಿಪ್ರಾಯ ವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಹಣ್ಣುಗಳು ಎಷ್ಟು ದಿನಗಳಿಂದ ಸಂಗ್ರಹಿಸ ಲಾಗಿತ್ತು ಎಂಬುದನ್ನು ಕೇವಲ ಮೇಲ್ನೋಟದ ಪರಿಶೀಲ ನೆಯ ಆಧಾರದ ಮೇಲೆ ನಿಖರ ವಾಗಿ ಹೇಳಲು ಸಾಧ್ಯವಿಲ್ಲ. ಮಾದರಿಗಳನ್ನು ವಿಶ್ಲೇಷಣೆಗೆ ಕಳುಹಿಸಿದ ನಂತರವೇ ಅದರ ಗುಣಮಟ್ಟ ಹಾಗೂ ಸ್ಥಿತಿಯ ಬಗ್ಗೆ ಹೆಚ್ಚಿನ ಸ್ಪಷ್ಟತೆ ದೊರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
    1
    ಶಿವಮೊಗ್ಗ-ಕೊಳೆತ ಹಣ್ಣು ಗಳಿಂದ ಜ್ಯೂಸ್ ತಯಾರಿ ಆರೋಪ:ಎಸಿ ಡಾ. ಮೈತ್ರಿ ನೇತೃತ್ವದಲ್ಲಿ ದಾಳಿ 
ಶಿವಮೊಗ್ಗ: ಬಿಸಿಲಿನ ತಾಪಕ್ಕೆ ತಂಪು ನೀಡುವ ಹೆಸರಿನಲ್ಲಿ ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದರೆಂಬಆರೋಪ ಕೇಳಿಬಂದಿರುವ ತಿಲಕನಗರದ ತನು ಜ್ಯೂಸ್ ಸೆಂಟರ್ ಮೇಲೆ  ಉಪವಿಭಾಗಾಧಿಕಾರಿ ಡಾ.ಮೈತ್ರಿ ನೇತೃತ್ವ ದಲ್ಲಿ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಖಡಕ್ ಕ್ರಮ ಕೈಗೊಂಡಿದೆ.
ಸಾರ್ವಜನಿಕರಿಂದ ಬಂದ ದೂರು ಗಳ ಹಿನ್ನೆಲೆಯಲ್ಲಿ ಎಸಿ ಡಾ.ಮೈತ್ರಿ,  ತಹಶೀಲ್ದಾರ್ ರಾಜೀವ್ ಹಾಗೂ ಆಹಾರ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ತನು ಜ್ಯೂಸ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ವಿವಿಧ ಬಗೆಯ ಹಣ್ಣುಗಳು ಕೊಳೆತ ಹಾಗೂ ಹಾಳಾದ ಸ್ಥಿತಿಯಲ್ಲಿ ಕಂಡು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಗ್ರೇಪ್ಸ್, ಚಿಕ್ಕು, ಡ್ರ್ಯಾಗನ್ ಫ್ರೂಟ್, ಸೇಬು, ದಾಳಿಂಬೆ ಸೇರಿದಂತೆ ಹಲವು ಹಣ್ಣುಗಳ ಮೇಲೆ ಫಂಗಸ್ ಮತ್ತು ಬೂಷ್ಟಿನಂತಹ ಬೆಳವಣಿಗೆ ಕಂಡುಬಂದಿದ್ದು, ಅವುಗಳನ್ನು ಜ್ಯೂಸ್ ತಯಾರಿಕೆಗೆ ಬಳಸ ಲಾಗುತ್ತಿತ್ತೆಂಬುದು ಪರಿಶೀಲನೆಯ ವೇಳೆ ಗಮನಕ್ಕೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗ್ರಾಹಕರ ಕಣ್ಣಿಗೆ ತಂಪು.ಒಳಗೆ ಮಾತ್ರ ಕೊಳೆತ ಹಣ್ಣುಗಳ ದಾಸ್ತಾನು?
ತನು ಜ್ಯೂಸ್ ಸೆಂಟರ್‌ನಲ್ಲಿ ಬಗೆಬಗೆಯ ಜ್ಯೂಸ್‌ಗಳು ಕಡಿಮೆ ದರದಲ್ಲಿ ದೊರೆಯು ತ್ತವೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಹಲವರು ಇಲ್ಲಿಗೆ ಬರುತ್ತಿದ್ದರು. ಹೊರಗಿನಿಂದ ನೋಡಿದಾಗ ಎಲ್ಲವೂ ಸ್ವಚ್ಛವಾಗಿಯೇ ಕಾಣುತ್ತಿದ್ದರೂ, ಅಧಿಕಾರಿಗಳ ಪರಿಶೀಲನೆಯ ವೇಳೆ ಒಳಭಾಗ ದಲ್ಲಿ ಕಂಡುಬಂದ ಪರಿಸ್ಥಿತಿ ಮಾತ್ರ ಆಘಾತಕಾರಿಯಾಗಿತ್ತು ಎಂದು ಎಸಿ ತಿಳಿಸಿದ್ದಾರೆ.
ಜ್ಯೂಸ್‌ಗೆ ಬಳಸುವ ಹಣ್ಣುಗಳನ್ನು ತಾಜಾ ಸ್ಥಿತಿಯಲ್ಲಿ ಇಡುವ ಬದಲು, ದೀರ್ಘಕಾಲ ಸಂಗ್ರಹಿಸಿಟ್ಟಿರುವಂತೆ ಕಂಡುಬಂದಿದ್ದು, ಕೆಲವು ಹಣ್ಣು ಗಳು ಕೊಳೆತು ಹೋಗಿದ್ದವು. ಫ್ರೀಜರ್‌ನಲ್ಲಿಯೂ ಕಳಪೆ ಸ್ಥಿತಿಯ ಹಣ್ಣು ಗಳು ಕಂಡುಬಂದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಅಧಿಕಾರಿಗಳ ಪರಿಶೀಲನೆ ವೇಳೆ ಗ್ರೇಪ್ಸ್, ಚಿಕ್ಕು, ಡ್ರ್ಯಾಗನ್ ಫ್ರೂಟ್, ಸೇಬು, ದಾಳಿಂಬೆ ಸೇರಿದಂತೆ ವಿವಿಧ ಹಣ್ಣುಗಳು ಕೊಳೆತ ಸ್ಥಿತಿ ಯಲ್ಲಿ ಕಂಡುಬಂದಿವೆ ಎಂದು ತಿಳಿದುಬಂದಿದೆ.
ಕೆಲವು ಹಣ್ಣುಗಳ ಮೇಲೆ ಫಂಗಸ್, ಬೂಷ್ಟಿನಂತಹ ಬೆಳವಣಿಗೆ ಕಂಡುಬಂದಿದ್ದು, ಇವುಗಳನ್ನು ಸಾರ್ವಜನಿಕರು ಸೇವಿಸುವುದು ಸೂಕ್ತವಲ್ಲ ಎಂಬ ಪ್ರಾಥಮಿಕ ಅಭಿಪ್ರಾಯ ವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಹಣ್ಣುಗಳು ಎಷ್ಟು ದಿನಗಳಿಂದ ಸಂಗ್ರಹಿಸ ಲಾಗಿತ್ತು ಎಂಬುದನ್ನು ಕೇವಲ ಮೇಲ್ನೋಟದ ಪರಿಶೀಲ ನೆಯ ಆಧಾರದ ಮೇಲೆ ನಿಖರ ವಾಗಿ ಹೇಳಲು ಸಾಧ್ಯವಿಲ್ಲ. ಮಾದರಿಗಳನ್ನು ವಿಶ್ಲೇಷಣೆಗೆ ಕಳುಹಿಸಿದ ನಂತರವೇ ಅದರ ಗುಣಮಟ್ಟ ಹಾಗೂ ಸ್ಥಿತಿಯ ಬಗ್ಗೆ ಹೆಚ್ಚಿನ ಸ್ಪಷ್ಟತೆ ದೊರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    12 hrs ago
  • ಕಿತ್ತೂರು ಉತ್ಸವಕ್ಕೆ ರಾಷ್ಟ್ರಮಟ್ಟದ ಮೆರುಗು ನೀಡುವ ಸಂಕಲ್ಪ! ಸಚಿವ ಸತೀಶ ಜಾರಕಿಹೊಳಿ. ಮೈಸೂರು ದಸರಾ ಉತ್ಸವದ ಮಾದರಿಯಲ್ಲಿ ಕಿತ್ತೂರು ಉತ್ಸವವನ್ನು ಮತ್ತಷ್ಟು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಿ, ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಅವರ ಶೌರ್ಯ, ಸಾಹಸ ಮತ್ತು ದೇಶಪ್ರೇಮದ ಇತಿಹಾಸವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಈ ಬಾರಿಯ ಉತ್ಸವದ ರೂಪುರೇಷೆಗಳು, ಕಾರ್ಯಕ್ರಮಗಳ ಆಯೋಜನೆ ಹಾಗೂ ಅಗತ್ಯ ಸಿದ್ಧತೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಉತ್ಸವದ ಉದ್ಘಾಟನೆಗೆ ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಆಹ್ವಾನಿಸುವ ಕುರಿತು ಚಿಂತನೆ ನಡೆಸಲಾಯಿತು. ಬೆಳಗಿನ ಗೋಷ್ಠಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸುವುದು, ಮಕ್ಕಳಿಗೆ ಹೆಚ್ಚಿನ ಸಮಯ ಮೀಸಲಿಟ್ಟು ಅವರ ಜ್ಞಾನ, ಪ್ರತಿಭೆ ಹಾಗೂ ಸೃಜನಶೀಲತೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದು ಹಾಗೂ ಕಿತ್ತೂರು ಮತ್ತು ಕಾಕತಿ ಪ್ರದೇಶಗಳಿಗೆ ಸೀಮಿತವಾಗಿ ಕೃಷಿ ಸಂಬಂಧಿತ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಚರ್ಚಿಸಲಾಯಿತು. ಈ ಬಾರಿ ಕಿತ್ತೂರು ಉತ್ಸವಕ್ಕೆ ಸರ್ಕಾರದಿಂದ ₹5 ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹5 ಕೋಟಿ ಸೇರಿದಂತೆ ಒಟ್ಟು ₹10 ಕೋಟಿ ಅನುದಾನ ಒದಗಿಸುವ ಕುರಿತು ಮಾಹಿತಿ ನೀಡಲಾಯಿತು. ಉತ್ಸವದ ಅಂಗವಾಗಿ ಜಾನುವಾರು ಜಾತ್ರೆ ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ಕೃಷಿ ಮೇಳ ಆಯೋಜಿಸುವುದು ಹಾಗೂ ಅನುಮತಿ ದೊರೆತಲ್ಲಿ ಏರ್ ಶೋ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಯಿತು. ಸಭೆಯಲ್ಲಿ ಕಿತ್ತೂರು ಶಾಸಕ ಶ್ರೀ ಬಾಬಾಸಾಹೇಬ ಪಾಟೀಲ, ಬೆಳಗಾವಿ ಉತ್ತರ ಶಾಸಕ ಶ್ರೀ ಆಸೀಫ್ ಸೇಠ್, ಬೆಳಗಾವಿ ಜಿಲ್ಲಾಧಿಕಾರಿ ಶ್ರೀ ಮುಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಶ್ರೀ ಪ್ರಕಾಶ್ ನಿಕಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಹುಲ್ ಶಿಂಧೆ, ಎನ್‌ಡಬ್ಲ್ಯುಕೆಆರ್‌ಟಿಸಿ ಉಪಾಧ್ಯಕ್ಷ ಶ್ರೀ ಸುನೀಲ ಹನ್ನಮಣ್ಣವರ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
    1
    ಕಿತ್ತೂರು ಉತ್ಸವಕ್ಕೆ ರಾಷ್ಟ್ರಮಟ್ಟದ ಮೆರುಗು ನೀಡುವ ಸಂಕಲ್ಪ! ಸಚಿವ ಸತೀಶ ಜಾರಕಿಹೊಳಿ.
ಮೈಸೂರು ದಸರಾ ಉತ್ಸವದ ಮಾದರಿಯಲ್ಲಿ ಕಿತ್ತೂರು ಉತ್ಸವವನ್ನು ಮತ್ತಷ್ಟು ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಿ, ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಅವರ ಶೌರ್ಯ, ಸಾಹಸ ಮತ್ತು ದೇಶಪ್ರೇಮದ ಇತಿಹಾಸವನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಈ ಬಾರಿಯ ಉತ್ಸವದ ರೂಪುರೇಷೆಗಳು, ಕಾರ್ಯಕ್ರಮಗಳ ಆಯೋಜನೆ ಹಾಗೂ ಅಗತ್ಯ ಸಿದ್ಧತೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಉತ್ಸವದ ಉದ್ಘಾಟನೆಗೆ ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಆಹ್ವಾನಿಸುವ ಕುರಿತು ಚಿಂತನೆ ನಡೆಸಲಾಯಿತು. ಬೆಳಗಿನ ಗೋಷ್ಠಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಕಾರ್ಯಕ್ರಮ ರೂಪಿಸುವುದು, ಮಕ್ಕಳಿಗೆ ಹೆಚ್ಚಿನ ಸಮಯ ಮೀಸಲಿಟ್ಟು ಅವರ ಜ್ಞಾನ, ಪ್ರತಿಭೆ ಹಾಗೂ ಸೃಜನಶೀಲತೆಗೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದು ಹಾಗೂ ಕಿತ್ತೂರು ಮತ್ತು ಕಾಕತಿ ಪ್ರದೇಶಗಳಿಗೆ ಸೀಮಿತವಾಗಿ ಕೃಷಿ ಸಂಬಂಧಿತ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುವ ಕುರಿತು ಚರ್ಚಿಸಲಾಯಿತು.
ಈ ಬಾರಿ ಕಿತ್ತೂರು ಉತ್ಸವಕ್ಕೆ ಸರ್ಕಾರದಿಂದ ₹5 ಕೋಟಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹5 ಕೋಟಿ ಸೇರಿದಂತೆ ಒಟ್ಟು ₹10 ಕೋಟಿ ಅನುದಾನ ಒದಗಿಸುವ ಕುರಿತು ಮಾಹಿತಿ ನೀಡಲಾಯಿತು. ಉತ್ಸವದ ಅಂಗವಾಗಿ ಜಾನುವಾರು ಜಾತ್ರೆ ಮತ್ತು ತೋಟಗಾರಿಕೆ ಇಲಾಖೆಯ ವತಿಯಿಂದ ಕೃಷಿ ಮೇಳ ಆಯೋಜಿಸುವುದು ಹಾಗೂ ಅನುಮತಿ ದೊರೆತಲ್ಲಿ ಏರ್ ಶೋ ನಡೆಸುವ ಬಗ್ಗೆಯೂ ಚಿಂತನೆ ನಡೆಸಲಾಯಿತು.
ಸಭೆಯಲ್ಲಿ ಕಿತ್ತೂರು ಶಾಸಕ ಶ್ರೀ ಬಾಬಾಸಾಹೇಬ ಪಾಟೀಲ, ಬೆಳಗಾವಿ ಉತ್ತರ ಶಾಸಕ  ಶ್ರೀ ಆಸೀಫ್ ಸೇಠ್, ಬೆಳಗಾವಿ ಜಿಲ್ಲಾಧಿಕಾರಿ ಶ್ರೀ ಮುಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಶ್ರೀ ಪ್ರಕಾಶ್ ನಿಕಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ರಾಹುಲ್ ಶಿಂಧೆ, ಎನ್‌ಡಬ್ಲ್ಯುಕೆಆರ್‌ಟಿಸಿ ಉಪಾಧ್ಯಕ್ಷ ಶ್ರೀ ಸುನೀಲ ಹನ್ನಮಣ್ಣವರ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    12 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.