logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ತುಮಕೂರು- ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿಗಳ ವಿವಿಧ ನ್ಯಾಯ ಸಮ್ಮತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸೆ. ೨೧ ರಿಂದ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಮತ್ತು ಹೋರಾಟವನ್ನು ಹಮ್ಮಿಕೊಂಡಿದೆ. ತುಮಕೂರು- ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿಗಳ ವಿವಿಧ ನ್ಯಾಯ ಸಮ್ಮತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸೆ. ೨೧ ರಿಂದ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಮತ್ತು ಹೋರಾಟವನ್ನು ಹಮ್ಮಿಕೊಂಡಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸೇವಾ ವಿಷಯಗಳು ಹಾಗೂ ಗ್ರಾಮ ಪಂಚಾಯಿತಿಗಳ ಆಡಳಿತ ಮತ್ತು ಆರ್ಥಿಕ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿ, ಪರಿಹಾರಕ್ಕಾಗಿ ಕೋರಲಾಗಿದೆ ಆದರೂ ಸಂಘವು ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು ಇದುವರೆಗೂ ಸಮರ್ಪಕವಾಗಿ ಈಡೇರದಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲ ಜಿಲ್ಲಾ ಘಟಕಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ವಿಸ್ತöÈತವಾಗಿ ಚರ್ಚಿಸಲಾಗಿದೆ. ಸದರಿ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಯದಂತೆ, ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸೆ. ೨೧ ರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಅಸಹಕಾರ ಚಳವಳಿ ಮತ್ತು ಹೋರಾಟವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜು ಆರ್. ತಿಳಿಸಿದ್ದಾರೆ. ಈ ಸಂಬAಧ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಮುಖ ಬೇಡಿಕೆಗಳು ರಾಜ್ಯದ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಏಕಕಾಲದಲ್ಲಿ ಗ್ರೂಪ್?ಬಿ ಹುದ್ದೆಗಳಾಗಿ ಉನ್ನತೀಕರಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿಯಲ್ಲಿರುವ ಎಲ್ಲ ಗೊಂದಲಗಳನ್ನು ನಿವಾರಿಸಿ, ಅರ್ಹ ಅಧಿಕಾರಿಗಳಿಗೆ ವಿಳಂಬವಿಲ್ಲದೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಬಾಕಿಯಿರುವ ೧೫ನೇ ಹಣಕಾಸು ಆಯೋಗದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಗ್ರಾಮ ಪಂಚಾಯಿತಿಗಳ ಸುಗಮ ಆಡಳಿತ ಮತ್ತು ಮೂಲ ಸೌಕರ್ಯ ನಿರ್ವಹಣೆಗೆ ಅಗತ್ಯ ಆರ್ಥಿಕ ನೆರವು ಒದಗಿಸಬೇಕು. ಗ್ರಾಮ ಪಂಚಾಯಿತಿಗಳ ಕುಡಿಯುವ ನೀರು ಮತ್ತು ನೈರ್ಮಲ್ಯ ಸೇವೆಗಳಿಗೆ ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು. ಜನಸಂಖ್ಯೆ ಮತ್ತು ವ್ಯಾಪ್ತಿಯ ಆಧಾರದ ಮೇಲೆ ಪ್ರತಿ ಗ್ರಾಮ ಪಂಚಾಯಿತಿಗೆ ನೈರ್ಮಲ್ಯ ಕಾರ್ಯಗಳಿಗಾಗಿ ವಾರ್ಷಿಕ ೧೦ ಲಕ್ಷದಿಂದ ೧೫ ಲಕ್ಷದವರೆಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನಿರ್ವಹಣೆಗಾಗಿ ೨೫ ಲಕ್ಷದಿಂದ ೩೫ ಲಕ್ಷದವರೆಗೆ ಪ್ರತ್ಯೇಕ ಅನುದಾನ ಒದಗಿಸಬೇಕು. ಈ ಕುರಿತು ವಿಸ್ತöÈತ ವರದಿ ಸಿದ್ಧಪಡಿಸಿ, ಪೂರಕ ಬಜೆಟ್ ಮೂಲಕ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಗ್ರಾಮ ಪಂಚಾಯ್ತಿಗಳಲ್ಲಿ ಪದೋನ್ನತಿ, ನಿವೃತ್ತಿ, ಮರಣ ಹಾಗೂ ಇತರ ಕಾರಣಗಳಿಂದ ಖಾಲಿಯಾಗಿರುವ ಎಲ್ಲ ಸಿಬ್ಬಂದಿ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು. ಪ್ರಸ್ತುತ ಇರುವ ಕ್ಲಿಷ್ಟಕರ ನೇಮಕಾತಿ ವಿಧಾನವನ್ನು ಸರಳೀಕರಿಸಿ, ನೇಮಕಾತಿಯ ಪ್ರತಿಯೊಂದು ಹಂತಕ್ಕೂ ಸ್ಪಷ್ಟ ಕಾಲಮಿತಿ ನಿಗದಿಪಡಿಸಬೇಕು. ಹುದ್ದೆ ಖಾಲಿಯಾದ ತಕ್ಷಣ ನಿಯಮಾನುಸಾರ ನೇಮಕಾತಿ ನಡೆಸುವಂತಹ ಶಾಶ್ವತ ವ್ಯವಸ್ಥೆಯನ್ನು ರೂಪಿಸಬೇಕು ಎಂದಿದ್ದಾರೆ. ವಿ.ಬಿ.ಜಿ.?ರಾಮ್‌ಜಿ ಯೋಜನೆಯನ್ನು ನಿಯಮ ಬಾಹಿರವಾಗಿ ಹಾಗೂ ಒತ್ತಾಯಪೂರ್ವಕವಾಗಿ ಅನುಷ್ಠಾನಗೊಳಿಸುವುದನ್ನು ನಿಲ್ಲಿಸಬೇಕು. ಯೋಜನೆಯ ಅನುಷ್ಠಾನಕ್ಕೆ ಸ್ಪಷ್ಟ ಮಾರ್ಗಸೂಚಿ, ಕಾರ್ಯವಿಧಾನ, ಮಾದರಿ ಅಂದಾಜುಪಟ್ಟಿ ಮತ್ತು ಅಧಿಕಾರಿಗಳ ಜವಾಬ್ದಾರಿಗಳನ್ನು ನಿಗದಿಪಡಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಅನ್ಯ ಇಲಾಖೆಗಳ ಕೆಲಸಗಳು ಹಾಗೂ ಹೆಚ್ಚುವರಿ ಜವಾಬ್ದಾರಿಗಳನ್ನು ನಿರಂತರವಾಗಿ ಹೇರುವುದನ್ನು ನಿಲ್ಲಿಸಿ, ಅನಗತ್ಯ ಕೆಲಸದ ಒತ್ತಡದಿಂದ ಮುಕ್ತಗೊಳಿಸಬೇಕು. ಇ?ಸ್ವತ್ತು ತಂತ್ರಾAಶದಲ್ಲಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಿ, ತಂತ್ರಾAಶವನ್ನು ಸರಳೀಕರಿಸುವ ಮೂಲಕ ಸಾರ್ವಜನಿಕರಿಗೆ ನಿಗದಿತ ಕಾಲಮಿತಿಯೊಳಗೆ ಸೇವೆ ಒದಗಿಸಲು ಅನುಕೂಲ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸೆ. ೨೧ ರಿಂದ ರಾಜ್ಯದ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿಯನ್ನು ಪ್ರಾರಂಭಿಸಲಿದ್ದು, ಹೋರಾಟದ ಮೊದಲ ಮೂರು ದಿನಗಳಾದ ಸೋಮವಾರ, ಮಂಗಳವಾರ ಮತ್ತು ಬುಧವಾರ ಆಯಾ ಜಿಲ್ಲಾ ಪಂಚಾಯಿತಿ ಕಚೇರಿಗಳ ಮುಂಭಾಗದಲ್ಲಿ ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಸಲಾಗುವುದು. ನಂತರ ರಾಜ್ಯ ಸಂಘದ ನಿರ್ದೇಶನದಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಅನಿರ್ಧಿಷ್ಟಾವಧಿ ಹೋರಾಟವನ್ನು ಮುಂದುವರೆಸಲಾಗುವುದು ಎಂದಿದ್ದಾರೆ. ಹೋರಾಟದ ಅವಧಿಯಲ್ಲಿ ಗ್ರಾಮ ಪಂಚಾಯಿತಿಗಳ ಅತ್ಯಗತ್ಯ ಸೇವೆಗಳಾದ ಕುಡಿಯುವ ನೀರು ಪೂರೈಕೆ, ಬೀದಿದೀಪ ನಿರ್ವಹಣೆ ಮತ್ತು ನೈರ್ಮಲ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದ ಯೋಜನೆಗಳು, ತಂತ್ರಾAಶಗಳು, ಆಡಳಿತಾತ್ಮಕ ಕಾರ್ಯಗಳು ಹಾಗೂ ಹೆಚ್ಚುವರಿ ಜವಾಬ್ದಾರಿಗಳ ನಿರ್ವಹಣೆಯನ್ನು ಸ್ಥಗಿತಗೊಳಿಸಿ ಅಸಹಕಾರ ವ್ಯಕ್ತಪಡಿಸಲಾಗುವುದು. ಆದ್ದರಿಂದ, ರಾಜ್ಯದ ಎಲ್ಲ ಜಿಲ್ಲಾ ಘಟಕಗಳ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಮತ್ತು ಹೋರಾಟದ ಕುರಿತು ಇಲಾಖೆಯ ಸಚಿವರಿಗೆ ಮಾಹಿತಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ನಮ್ಮಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ತಮ್ಮ ಅಧ್ಯಕ್ಷತೆಯಲ್ಲಿ ಸಂಬAಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಂಘದ ರಾಜ್ಯ ಪದಾಧಿಕಾರಿಗಳ ಸಭೆಯನ್ನು ನಿಗದಿಪಡಿಸಿ, ಬೇಡಿಕೆಗಳ ಕುರಿತು ಸಮಗ್ರವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಅವರು ಮನವಿ ಮಾಡಿದ್ದಾರೆ.

1 hr ago
user_Kiran Kumar T S
Kiran Kumar T S
Video Creator ತುಮಕೂರು, ತುಮಕೂರು, ಕರ್ನಾಟಕ•
1 hr ago
7dfc683a-cfab-4913-81a8-e788fbe621c5

ತುಮಕೂರು- ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿಗಳ ವಿವಿಧ ನ್ಯಾಯ ಸಮ್ಮತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸೆ. ೨೧ ರಿಂದ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಮತ್ತು ಹೋರಾಟವನ್ನು ಹಮ್ಮಿಕೊಂಡಿದೆ. ತುಮಕೂರು- ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿಗಳ ವಿವಿಧ ನ್ಯಾಯ ಸಮ್ಮತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಸೆ. ೨೧ ರಿಂದ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಮತ್ತು ಹೋರಾಟವನ್ನು ಹಮ್ಮಿಕೊಂಡಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸೇವಾ ವಿಷಯಗಳು ಹಾಗೂ ಗ್ರಾಮ ಪಂಚಾಯಿತಿಗಳ ಆಡಳಿತ ಮತ್ತು ಆರ್ಥಿಕ ಸಮಸ್ಯೆಗಳ ಕುರಿತು ಸರ್ಕಾರಕ್ಕೆ ಹಲವಾರು ಬಾರಿ ಮನವಿಗಳನ್ನು ಸಲ್ಲಿಸಿ, ಪರಿಹಾರಕ್ಕಾಗಿ ಕೋರಲಾಗಿದೆ ಆದರೂ ಸಂಘವು ಮುಂದಿಟ್ಟಿರುವ ಪ್ರಮುಖ ಬೇಡಿಕೆಗಳು ಇದುವರೆಗೂ ಸಮರ್ಪಕವಾಗಿ ಈಡೇರದಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲ ಜಿಲ್ಲಾ ಘಟಕಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ವಿಸ್ತöÈತವಾಗಿ ಚರ್ಚಿಸಲಾಗಿದೆ. ಸದರಿ ಸಭೆಯಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಯದಂತೆ, ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಸೆ. ೨೧ ರಿಂದ ರಾಜ್ಯವ್ಯಾಪಿ ಅನಿರ್ದಿಷ್ಟಾವಧಿ ಅಸಹಕಾರ ಚಳವಳಿ ಮತ್ತು ಹೋರಾಟವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜು ಆರ್. ತಿಳಿಸಿದ್ದಾರೆ. ಈ ಸಂಬAಧ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಲಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಮುಖ ಬೇಡಿಕೆಗಳು ರಾಜ್ಯದ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ಏಕಕಾಲದಲ್ಲಿ ಗ್ರೂಪ್?ಬಿ ಹುದ್ದೆಗಳಾಗಿ ಉನ್ನತೀಕರಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೇಷ್ಠತಾ ಪಟ್ಟಿಯಲ್ಲಿರುವ ಎಲ್ಲ ಗೊಂದಲಗಳನ್ನು ನಿವಾರಿಸಿ, ಅರ್ಹ ಅಧಿಕಾರಿಗಳಿಗೆ ವಿಳಂಬವಿಲ್ಲದೆ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಗ್ರಾಮ ಪಂಚಾಯಿತಿಗಳಿಗೆ ಬಾಕಿಯಿರುವ ೧೫ನೇ ಹಣಕಾಸು ಆಯೋಗದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಗ್ರಾಮ ಪಂಚಾಯಿತಿಗಳ ಸುಗಮ ಆಡಳಿತ ಮತ್ತು ಮೂಲ ಸೌಕರ್ಯ ನಿರ್ವಹಣೆಗೆ ಅಗತ್ಯ ಆರ್ಥಿಕ ನೆರವು ಒದಗಿಸಬೇಕು. ಗ್ರಾಮ ಪಂಚಾಯಿತಿಗಳ ಕುಡಿಯುವ ನೀರು ಮತ್ತು ನೈರ್ಮಲ್ಯ ಸೇವೆಗಳಿಗೆ ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು. ಜನಸಂಖ್ಯೆ ಮತ್ತು ವ್ಯಾಪ್ತಿಯ ಆಧಾರದ ಮೇಲೆ ಪ್ರತಿ ಗ್ರಾಮ ಪಂಚಾಯಿತಿಗೆ ನೈರ್ಮಲ್ಯ ಕಾರ್ಯಗಳಿಗಾಗಿ ವಾರ್ಷಿಕ ೧೦ ಲಕ್ಷದಿಂದ ೧೫ ಲಕ್ಷದವರೆಗೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನಿರ್ವಹಣೆಗಾಗಿ ೨೫ ಲಕ್ಷದಿಂದ ೩೫ ಲಕ್ಷದವರೆಗೆ

ca719e4f-445d-445d-b379-32fa695cdb0e

ಪ್ರತ್ಯೇಕ ಅನುದಾನ ಒದಗಿಸಬೇಕು. ಈ ಕುರಿತು ವಿಸ್ತöÈತ ವರದಿ ಸಿದ್ಧಪಡಿಸಿ, ಪೂರಕ ಬಜೆಟ್ ಮೂಲಕ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಗ್ರಾಮ ಪಂಚಾಯ್ತಿಗಳಲ್ಲಿ ಪದೋನ್ನತಿ, ನಿವೃತ್ತಿ, ಮರಣ ಹಾಗೂ ಇತರ ಕಾರಣಗಳಿಂದ ಖಾಲಿಯಾಗಿರುವ ಎಲ್ಲ ಸಿಬ್ಬಂದಿ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕು. ಪ್ರಸ್ತುತ ಇರುವ ಕ್ಲಿಷ್ಟಕರ ನೇಮಕಾತಿ ವಿಧಾನವನ್ನು ಸರಳೀಕರಿಸಿ, ನೇಮಕಾತಿಯ ಪ್ರತಿಯೊಂದು ಹಂತಕ್ಕೂ ಸ್ಪಷ್ಟ ಕಾಲಮಿತಿ ನಿಗದಿಪಡಿಸಬೇಕು. ಹುದ್ದೆ ಖಾಲಿಯಾದ ತಕ್ಷಣ ನಿಯಮಾನುಸಾರ ನೇಮಕಾತಿ ನಡೆಸುವಂತಹ ಶಾಶ್ವತ ವ್ಯವಸ್ಥೆಯನ್ನು ರೂಪಿಸಬೇಕು ಎಂದಿದ್ದಾರೆ. ವಿ.ಬಿ.ಜಿ.?ರಾಮ್‌ಜಿ ಯೋಜನೆಯನ್ನು ನಿಯಮ ಬಾಹಿರವಾಗಿ ಹಾಗೂ ಒತ್ತಾಯಪೂರ್ವಕವಾಗಿ ಅನುಷ್ಠಾನಗೊಳಿಸುವುದನ್ನು ನಿಲ್ಲಿಸಬೇಕು. ಯೋಜನೆಯ ಅನುಷ್ಠಾನಕ್ಕೆ ಸ್ಪಷ್ಟ ಮಾರ್ಗಸೂಚಿ, ಕಾರ್ಯವಿಧಾನ, ಮಾದರಿ ಅಂದಾಜುಪಟ್ಟಿ ಮತ್ತು ಅಧಿಕಾರಿಗಳ ಜವಾಬ್ದಾರಿಗಳನ್ನು ನಿಗದಿಪಡಿಸಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲೆ ಅನ್ಯ ಇಲಾಖೆಗಳ ಕೆಲಸಗಳು ಹಾಗೂ ಹೆಚ್ಚುವರಿ ಜವಾಬ್ದಾರಿಗಳನ್ನು ನಿರಂತರವಾಗಿ ಹೇರುವುದನ್ನು ನಿಲ್ಲಿಸಿ, ಅನಗತ್ಯ ಕೆಲಸದ ಒತ್ತಡದಿಂದ ಮುಕ್ತಗೊಳಿಸಬೇಕು. ಇ?ಸ್ವತ್ತು ತಂತ್ರಾAಶದಲ್ಲಿರುವ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಿ, ತಂತ್ರಾAಶವನ್ನು ಸರಳೀಕರಿಸುವ ಮೂಲಕ ಸಾರ್ವಜನಿಕರಿಗೆ ನಿಗದಿತ ಕಾಲಮಿತಿಯೊಳಗೆ ಸೇವೆ ಒದಗಿಸಲು ಅನುಕೂಲ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸೆ. ೨೧ ರಿಂದ ರಾಜ್ಯದ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿಯನ್ನು ಪ್ರಾರಂಭಿಸಲಿದ್ದು, ಹೋರಾಟದ ಮೊದಲ ಮೂರು ದಿನಗಳಾದ ಸೋಮವಾರ, ಮಂಗಳವಾರ ಮತ್ತು ಬುಧವಾರ ಆಯಾ ಜಿಲ್ಲಾ ಪಂಚಾಯಿತಿ ಕಚೇರಿಗಳ ಮುಂಭಾಗದಲ್ಲಿ ಜಿಲ್ಲಾ ಮಟ್ಟದ ಪ್ರತಿಭಟನೆ ನಡೆಸಲಾಗುವುದು. ನಂತರ ರಾಜ್ಯ ಸಂಘದ ನಿರ್ದೇಶನದಂತೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಅನಿರ್ಧಿಷ್ಟಾವಧಿ ಹೋರಾಟವನ್ನು ಮುಂದುವರೆಸಲಾಗುವುದು ಎಂದಿದ್ದಾರೆ. ಹೋರಾಟದ ಅವಧಿಯಲ್ಲಿ ಗ್ರಾಮ ಪಂಚಾಯಿತಿಗಳ ಅತ್ಯಗತ್ಯ ಸೇವೆಗಳಾದ ಕುಡಿಯುವ ನೀರು ಪೂರೈಕೆ, ಬೀದಿದೀಪ ನಿರ್ವಹಣೆ ಮತ್ತು ನೈರ್ಮಲ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದ ಯೋಜನೆಗಳು, ತಂತ್ರಾAಶಗಳು, ಆಡಳಿತಾತ್ಮಕ ಕಾರ್ಯಗಳು ಹಾಗೂ ಹೆಚ್ಚುವರಿ ಜವಾಬ್ದಾರಿಗಳ ನಿರ್ವಹಣೆಯನ್ನು ಸ್ಥಗಿತಗೊಳಿಸಿ ಅಸಹಕಾರ ವ್ಯಕ್ತಪಡಿಸಲಾಗುವುದು. ಆದ್ದರಿಂದ, ರಾಜ್ಯದ ಎಲ್ಲ ಜಿಲ್ಲಾ ಘಟಕಗಳ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಅಸಹಕಾರ ಚಳವಳಿ ಮತ್ತು ಹೋರಾಟದ ಕುರಿತು ಇಲಾಖೆಯ ಸಚಿವರಿಗೆ ಮಾಹಿತಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ನಮ್ಮಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ತಮ್ಮ ಅಧ್ಯಕ್ಷತೆಯಲ್ಲಿ ಸಂಬAಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಸಂಘದ ರಾಜ್ಯ ಪದಾಧಿಕಾರಿಗಳ ಸಭೆಯನ್ನು ನಿಗದಿಪಡಿಸಿ, ಬೇಡಿಕೆಗಳ ಕುರಿತು ಸಮಗ್ರವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಅವರು ಮನವಿ ಮಾಡಿದ್ದಾರೆ.

More news from ಕರ್ನಾಟಕ and nearby areas
  • ಹಲಸೂರು ಕೆರೆ ಕಲ್ಯಾಣಿಯಲ್ಲಿ ದೊಡ್ಡ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಕಾರ್ಯಕ್ಕೆ ಚಾಲನೆ ಬೆಂಗಳೂರು:ಕೇಂದ್ರ ನಗರ ಪಾಲಿಕೆಯ ಹಲಸೂರು ಕೆರೆ ಕಲ್ಯಾಣಿಯಲ್ಲಿ ಆಹಾರ ಖಾತೆ ಸಚಿವರು ಹಾಗು ಶಿವಾಜಿನಗರ ಶಾಸಕರಾದ ರಿಜ್ವಾನ್ ಹರ್ಷದ್ ರವರು ಹಲಸೂರು ಕೆರೆ ಕಲ್ಯಾಣಿಯಲ್ಲಿ ದೊಡ್ಡ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡುವ ಕಾರ್ಯಕ್ಕೆ ಚಾಲನೆ ಇಂದು ಸಂಜೆ ನೀಡಿದರು. ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಜಗದೀಶ್ ಜಿ ರವರು ಹಾಗು ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ವೆಂಕಟಾಚಲಪತಿ ಆರ್ ರವರು ಉಪಸ್ಥಿತರಿದ್ದಾರೆ. ಆಯುಕ್ತರು ಅಪರ ಆಯುಕ್ತರೊಂದಿಗೆ, ಜಂಟಿ ಆಯುಕ್ತರೊಂದಿಗೆ ಹಾಗು ಮುಖ್ಯ ಇಂಜಿನಿಯರ್ ಕಾರ್ಯಪಾಲಕ ಇಂಜಿನಿಯರ್ ಪೊಲೀಸ್ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳೊಂದಿಗೆ ನಿರಂತರವಾಗಿ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯದ ಸಿದ್ಧತೆ ಬಗ್ಗೆ ಅಧಿಕಾರಿಗಳೊಂದಿಗೆ ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
    1
    ಹಲಸೂರು ಕೆರೆ ಕಲ್ಯಾಣಿಯಲ್ಲಿ  ದೊಡ್ಡ ಗಣೇಶ ಮೂರ್ತಿಗಳನ್ನು  ವಿಸರ್ಜನೆ ಮಾಡುವ ಕಾರ್ಯಕ್ಕೆ ಚಾಲನೆ

ಬೆಂಗಳೂರು:ಕೇಂದ್ರ ನಗರ ಪಾಲಿಕೆಯ ಹಲಸೂರು ಕೆರೆ ಕಲ್ಯಾಣಿಯಲ್ಲಿ  ಆಹಾರ ಖಾತೆ ಸಚಿವರು ಹಾಗು ಶಿವಾಜಿನಗರ ಶಾಸಕರಾದ  ರಿಜ್ವಾನ್ ಹರ್ಷದ್ ರವರು ಹಲಸೂರು ಕೆರೆ ಕಲ್ಯಾಣಿಯಲ್ಲಿ  ದೊಡ್ಡ ಗಣೇಶ ಮೂರ್ತಿಗಳನ್ನು  ವಿಸರ್ಜನೆ ಮಾಡುವ ಕಾರ್ಯಕ್ಕೆ ಚಾಲನೆ ಇಂದು ಸಂಜೆ ನೀಡಿದರು. 
ಕೇಂದ್ರ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಜಗದೀಶ್ ಜಿ ರವರು ಹಾಗು ಅಭಿವೃದ್ಧಿ ಅಪರ ಆಯುಕ್ತರಾದ ಶ್ರೀ ವೆಂಕಟಾಚಲಪತಿ ಆರ್ ರವರು ಉಪಸ್ಥಿತರಿದ್ದಾರೆ.  
ಆಯುಕ್ತರು ಅಪರ ಆಯುಕ್ತರೊಂದಿಗೆ, ಜಂಟಿ ಆಯುಕ್ತರೊಂದಿಗೆ ಹಾಗು  ಮುಖ್ಯ ಇಂಜಿನಿಯರ್ ಕಾರ್ಯಪಾಲಕ ಇಂಜಿನಿಯರ್ ಪೊಲೀಸ್ ಅಧಿಕಾರಿಗಳು,  ಬೆಸ್ಕಾಂ ಅಧಿಕಾರಿಗಳೊಂದಿಗೆ ನಿರಂತರವಾಗಿ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯದ ಸಿದ್ಧತೆ ಬಗ್ಗೆ ಅಧಿಕಾರಿಗಳೊಂದಿಗೆ  ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    9 hrs ago
  • ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ ಎತ್ತಿನ ಗಾಡಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಿ ವಿಸರ್ಜಿಸಿದ ಗ್ರಾಮಸ್ಥರು ದೇವನಹಳ್ಳಿ ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ ಎತ್ತಿನ ಗಾಡಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಿ ವಿಸರ್ಜಿಸಿದ ಗ್ರಾಮಸ್ಥರು ದೇವನಹಳ್ಳಿಯ ಪ್ರಸನ್ನಹಳ್ಳಿಯ ಜಟಾಯು ಯುವಸೇನೆವತಿಯಿಂದ ಗಣೇಶೋತ್ಸವ ಆಯೋಜನೆ ಯಾವುದೆ ಡಿಜೆ ಬಳಕೆ ಮಾಡದೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಸಾಂಪ್ರದಾಯಿಕವಾಗಿ ಮೆರವಣಿಗೆ ಎತ್ತಿನಗಾಡಿ ಮತ್ತು ಮಹಿಳೆಯರಿಂದ ತಟ್ಟೆಗಳಲ್ಲಿ ಗಣಪತಿ ಮೂರ್ತಿಗಳ ಹೊತ್ತು ಮೆರವಣಿಗೆ ಪ್ರಸನ್ನಹಳ್ಳಿ ಇಂದ ಚಿಕ್ಕಕೆರೆವರೆಗೆ ಮೆರವಣಿಗೆ ಮಾಡಿ ಪರಿಸರ ಸ್ನೇಹಿ ಮೂರ್ತಿಗಳ ವಿಸರ್ಜನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಪ್ರಸನ್ನ ಹಳ್ಳಿ
    3
    ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ 
ಎತ್ತಿನ ಗಾಡಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಿ ವಿಸರ್ಜಿಸಿದ  ಗ್ರಾಮಸ್ಥರು
ದೇವನಹಳ್ಳಿ
ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ 
ಎತ್ತಿನ ಗಾಡಿಯಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಿ ವಿಸರ್ಜಿಸಿದ  ಗ್ರಾಮಸ್ಥರು
ದೇವನಹಳ್ಳಿಯ ಪ್ರಸನ್ನಹಳ್ಳಿಯ ಜಟಾಯು ಯುವಸೇನೆವತಿಯಿಂದ ಗಣೇಶೋತ್ಸವ ಆಯೋಜನೆ
ಯಾವುದೆ ಡಿಜೆ ಬಳಕೆ ಮಾಡದೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಸಾಂಪ್ರದಾಯಿಕವಾಗಿ ಮೆರವಣಿಗೆ 
ಎತ್ತಿನಗಾಡಿ ಮತ್ತು ಮಹಿಳೆಯರಿಂದ ತಟ್ಟೆಗಳಲ್ಲಿ ಗಣಪತಿ ಮೂರ್ತಿಗಳ ಹೊತ್ತು ಮೆರವಣಿಗೆ
ಪ್ರಸನ್ನಹಳ್ಳಿ ಇಂದ ಚಿಕ್ಕಕೆರೆವರೆಗೆ ಮೆರವಣಿಗೆ ಮಾಡಿ ಪರಿಸರ ಸ್ನೇಹಿ ಮೂರ್ತಿಗಳ ವಿಸರ್ಜನೆ 
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಪ್ರಸನ್ನ ಹಳ್ಳಿ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    19 hrs ago
  • ಹೆಚ್ಡಿಕೆ ಕೇಂದ್ರ ಮಂತ್ರಿಯಂತೆ ವರ್ತಿಸಲಿ- ಹೆಚ್.ಸಿ.ಬಾಲಕೃಷ್ಣ ವ್ಯಂಗ್ಯ :ಹೆಚ್ಡಿಕೆ ಕೇಂದ್ರ ಮಂತ್ರಿಯಂತೆ ವರ್ತಿಸಲಿ, ಗ್ರಾಮ ಪಂಚಾಯತಿ ಸದಸ್ಯರಂತೆ ಅಲ್ಲ - ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ: ನೈಸ್, ಕೆಪಿಎಸ್ಸಿ ಹಗರಣ ಹಾಗೂ ಬಿಡದಿ ಟೌನ್ ಶಿಪ್ ವಿಚಾರವಾಗಿ ನಾವು ಧ್ವನಿ ಎತ್ತಿದ್ದಕ್ಕೆ ಪ್ರಜ್ವಲ್ ವಿಚಾರ ಮುನ್ನೆಲೆಗೆ ತಂದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಕ್ಕೆ ರಾಮನಗರದಲ್ಲಿ ಪ್ರತಿಕ್ರಿಯೆ ನೀಡಿದ ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ .ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಆ ಪ್ರಕರಣಗಳಿಗೂ ಏನು ಸಂಬಂಧ.? ಹೀಗೆ ಮಾತನಾಡಿಯೇ ಪ್ರಜ್ವಲ್ ರನ್ನ ಜೈಲಿಗೆ ಕಳುಹಿಸಿದ್ರು. ಪ್ರಜ್ವಲ್ ರೇವಣ್ಣ ಜೈಲಲ್ಲೇ ಇರಬೇಕು ಅನ್ನೋದು ಕುಮಾರಸ್ವಾಮಿ ಅಭಿಲಾಷೆ. ಜವಾಬ್ದಾರಿಯುತ ಮಂತ್ರಿ ಸ್ವಲ್ಪ ಗೌರವಯುತವಾಗಿ ಮಾತನಾಡಿ. ಕೇಂದ್ರ ಮಂತ್ರಿ ಅನ್ನೋದನ್ನ ಮರೆತು ಪಂಚಾಯ್ತಿ ಮೆಂಬರ್ ರೀತಿ ಆಡ್ತಿದ್ದಾರೆ. ಪ್ರಜ್ವಲ್ ಮುಗಿಸುವ ತನಕ ಕುಮಾರಸ್ವಾಮಿ ಸುಮ್ಮನಿರಲ್ಲ. ಎಂದು ಸಚಿವ ಹೆಚ್.ಸಿ.ಬಾಲಕೃಷ್ಣ, ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು
    1
    ಹೆಚ್ಡಿಕೆ ಕೇಂದ್ರ ಮಂತ್ರಿಯಂತೆ ವರ್ತಿಸಲಿ- ಹೆಚ್.ಸಿ.ಬಾಲಕೃಷ್ಣ ವ್ಯಂಗ್ಯ
:ಹೆಚ್ಡಿಕೆ ಕೇಂದ್ರ ಮಂತ್ರಿಯಂತೆ ವರ್ತಿಸಲಿ, ಗ್ರಾಮ ಪಂಚಾಯತಿ ಸದಸ್ಯರಂತೆ ಅಲ್ಲ - ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ:
ನೈಸ್, ಕೆಪಿಎಸ್ಸಿ ಹಗರಣ ಹಾಗೂ ಬಿಡದಿ ಟೌನ್ ಶಿಪ್ ವಿಚಾರವಾಗಿ ನಾವು ಧ್ವನಿ ಎತ್ತಿದ್ದಕ್ಕೆ ಪ್ರಜ್ವಲ್ ವಿಚಾರ ಮುನ್ನೆಲೆಗೆ ತಂದಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆರೋಪ ಕ್ಕೆ ರಾಮನಗರದಲ್ಲಿ  ಪ್ರತಿಕ್ರಿಯೆ ನೀಡಿದ  ಪೌರಾಢಳಿತ ಸಚಿವ ಹೆಚ್.ಸಿ.ಬಾಲಕೃಷ್ಣ
.ಪ್ರಜ್ವಲ್ ರೇವಣ್ಣ ಪ್ರಕರಣಕ್ಕೂ ಆ ಪ್ರಕರಣಗಳಿಗೂ ಏನು ಸಂಬಂಧ.? ಹೀಗೆ ಮಾತನಾಡಿಯೇ ಪ್ರಜ್ವಲ್ ರನ್ನ ಜೈಲಿಗೆ ಕಳುಹಿಸಿದ್ರು. ಪ್ರಜ್ವಲ್ ರೇವಣ್ಣ ಜೈಲಲ್ಲೇ ಇರಬೇಕು ಅನ್ನೋದು ಕುಮಾರಸ್ವಾಮಿ ಅಭಿಲಾಷೆ. ಜವಾಬ್ದಾರಿಯುತ ಮಂತ್ರಿ ಸ್ವಲ್ಪ ಗೌರವಯುತವಾಗಿ ಮಾತನಾಡಿ. ಕೇಂದ್ರ ಮಂತ್ರಿ ಅನ್ನೋದನ್ನ ಮರೆತು ಪಂಚಾಯ್ತಿ ಮೆಂಬರ್ ರೀತಿ ಆಡ್ತಿದ್ದಾರೆ. ಪ್ರಜ್ವಲ್ ಮುಗಿಸುವ ತನಕ ಕುಮಾರಸ್ವಾಮಿ ಸುಮ್ಮನಿರಲ್ಲ. ಎಂದು ಸಚಿವ ಹೆಚ್.ಸಿ.ಬಾಲಕೃಷ್ಣ, ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು
    user_ರಮೇಶ್.ಆರ್
    ರಮೇಶ್.ಆರ್
    ಚನ್ನಪಟ್ಟಣ, ರಾಮನಗರ, ಕರ್ನಾಟಕ•
    2 hrs ago
  • ಪಾವಗಡ: ತಾಲೂಕಿನಾದ್ಯಂತ ಸಂಭ್ರಮದ ಗಣೇಶೋತ್ಸವ – ಶ್ರದ್ಧಾ-ಭಕ್ತಿಯಿಂದ ಪೂಜೆ, ಪ್ರಸಾದ ವಿನಿಯೋಗ ಪಾವಗಡ: ತಾಲೂಕಿನಾದ್ಯಂತ ಸಂಭ್ರಮದ ಗಣೇಶೋತ್ಸವ – ಶ್ರದ್ಧಾ-ಭಕ್ತಿಯಿಂದ ಪೂಜೆ, ಪ್ರಸಾದ ವಿನಿಯೋಗ ​ಪಾವಗಡ: ತಾಲೂಕಿನಾದ್ಯಂತ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ವಿವಿಧ ಗ್ರಾಮಗಳು ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ನೂರಾರು ಗಣಪತಿ ಮೂರ್ತಿಗಳನ್ನು ಅತ್ಯಂತ ವಿಜೃಂಭಣೆಯಿಂದ ಪ್ರತಿಷ್ಠಾಪಿಸಲಾಯಿತು. ಭಕ್ತಾದಿಗಳು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಗಣೇಶನಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಿದರು. ​ವಿಶೇಷ ಪೂಜೆ ಹಾಗೂ ದರ್ಶನ: ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸುಂದರವಾಗಿ ಅಲಂಕೃತಗೊಂಡ ಪಂಡಾಲ್‌ಗಳಲ್ಲಿ ಗಣೇಶ ಮೂರ್ತಿಗಳನ್ನು ಕೂಡಿಸಿ, ಬೆಳಗಿನಿಂದಲೇ ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ಭಕ್ತರ ಸಮ್ಮುಖದಲ್ಲಿ ಗಣಪತಿಗೆ ಸಹಸ್ರನಾಮಾರ್ಚನೆ, ಹೋಮ-ಹವನ ಹಾಗೂ ವಿಶೇಷ ಪುಷ್ಪಾಲಂಕಾರ ಸೇವೆಗಳು ಜರುಗಿದವು. ​ಬೃಹತ್ ಪ್ರಸಾದ ವಿನಿಯೋಗ: ಪೂಜಾ ಕಾರ್ಯಕ್ರಮದ ನಂತರ ಪ್ರತಿಷ್ಠಾಪನಾ ಸಮಿತಿಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ಮಹಾಪ್ರಸಾದ ವಿನಿಯೋಗ ಮಾಡಲಾಯಿತು. ಹಬ್ಬದ ವಾತಾವರಣದಿಂದ ತಾಲೂಕಿನಾದ್ಯಂತ ಭಕ್ತಿರಸ ಪ್ರವಾಹ ಹರಿದಂತಾಗಿತ್ತು. ಪಾವಗಡ ವರದಿ
    4
    ಪಾವಗಡ: ತಾಲೂಕಿನಾದ್ಯಂತ ಸಂಭ್ರಮದ ಗಣೇಶೋತ್ಸವ – ಶ್ರದ್ಧಾ-ಭಕ್ತಿಯಿಂದ ಪೂಜೆ, ಪ್ರಸಾದ ವಿನಿಯೋಗ

ಪಾವಗಡ: ತಾಲೂಕಿನಾದ್ಯಂತ ಸಂಭ್ರಮದ ಗಣೇಶೋತ್ಸವ – ಶ್ರದ್ಧಾ-ಭಕ್ತಿಯಿಂದ ಪೂಜೆ, ಪ್ರಸಾದ ವಿನಿಯೋಗ
​ಪಾವಗಡ: ತಾಲೂಕಿನಾದ್ಯಂತ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ವಿವಿಧ ಗ್ರಾಮಗಳು ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ನೂರಾರು ಗಣಪತಿ ಮೂರ್ತಿಗಳನ್ನು ಅತ್ಯಂತ ವಿಜೃಂಭಣೆಯಿಂದ ಪ್ರತಿಷ್ಠಾಪಿಸಲಾಯಿತು. ಭಕ್ತಾದಿಗಳು ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಗಣೇಶನಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಿದರು.
​ವಿಶೇಷ ಪೂಜೆ ಹಾಗೂ ದರ್ಶನ:
ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಸುಂದರವಾಗಿ ಅಲಂಕೃತಗೊಂಡ ಪಂಡಾಲ್‌ಗಳಲ್ಲಿ ಗಣೇಶ ಮೂರ್ತಿಗಳನ್ನು ಕೂಡಿಸಿ, ಬೆಳಗಿನಿಂದಲೇ ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ದೇವರ ದರ್ಶನ ಪಡೆದರು. ಭಕ್ತರ ಸಮ್ಮುಖದಲ್ಲಿ ಗಣಪತಿಗೆ ಸಹಸ್ರನಾಮಾರ್ಚನೆ, ಹೋಮ-ಹವನ ಹಾಗೂ ವಿಶೇಷ ಪುಷ್ಪಾಲಂಕಾರ ಸೇವೆಗಳು ಜರುಗಿದವು.
​ಬೃಹತ್ ಪ್ರಸಾದ ವಿನಿಯೋಗ:
ಪೂಜಾ ಕಾರ್ಯಕ್ರಮದ ನಂತರ ಪ್ರತಿಷ್ಠಾಪನಾ ಸಮಿತಿಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಆಗಮಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ಮಹಾಪ್ರಸಾದ ವಿನಿಯೋಗ ಮಾಡಲಾಯಿತು. ಹಬ್ಬದ ವಾತಾವರಣದಿಂದ ತಾಲೂಕಿನಾದ್ಯಂತ ಭಕ್ತಿರಸ ಪ್ರವಾಹ ಹರಿದಂತಾಗಿತ್ತು.  ಪಾವಗಡ ವರದಿ
    user_Ctv news
    Ctv news
    Voice of people ಪಾವಗಡ, ತುಮಕೂರು, ಕರ್ನಾಟಕ•
    21 hrs ago
  • ಗೌರಿ-ಗಣೇಶ ಹಬ್ಬ: ಸಮಾಜ ಸೇವಕ ಕೊತ್ತನೂರು ಪಂಚಾಕ್ಷರಿ ರೆಡ್ಡಿ ತೋಟದ ಮನೆಯಲ್ಲಿ ವಿಶೇಷ ಪೂಜೆ ಹಾಗೂ ಶುಭಾಶಯ ಸಲ್ಲಿಕೆ
    1
    ಗೌರಿ-ಗಣೇಶ ಹಬ್ಬ: ಸಮಾಜ ಸೇವಕ ಕೊತ್ತನೂರು ಪಂಚಾಕ್ಷರಿ ರೆಡ್ಡಿ ತೋಟದ ಮನೆಯಲ್ಲಿ ವಿಶೇಷ ಪೂಜೆ ಹಾಗೂ ಶುಭಾಶಯ ಸಲ್ಲಿಕೆ
    user_Lokesh bvINCHARATV
    Lokesh bvINCHARATV
    ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕರ್ನಾಟಕ•
    21 hrs ago
  • ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಟ್ರಸ್ಟ್ ವತಿಯಿಂದ ಭರತ ನಾಟ್ಯ ಕಾರ್ಯಕ್ರಮ... ಹಿರಿಯೂರಿನ ಶ್ರೀ ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಸೇವಾ ಟ್ರಸ್ಟ್ (ರಿ ) ವತಿಯಿಂದ ಸಾದ್ವಿ ನೃತ್ಯ ಶಾಲೆಯವರು ಭರತ ನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.. ಸುಮಾರು 10 ಕ್ಕೂ ಹೆಚ್ಚು ನೃತ್ಯಗಳನ್ನು ವಿದ್ಯಾರ್ಥಿ ಗಳು ನಡೆಸಿಕೊಟ್ಟರು.. ಕಾರ್ಯಕ್ರಮವನ್ನು ರೂಪ ಶಿಕ್ಷಕಿಯವರು ನಡೆಸಿಕೊಟ್ಟರು
    2
    ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಟ್ರಸ್ಟ್ ವತಿಯಿಂದ ಭರತ ನಾಟ್ಯ ಕಾರ್ಯಕ್ರಮ...
ಹಿರಿಯೂರಿನ ಶ್ರೀ ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಸೇವಾ ಟ್ರಸ್ಟ್ (ರಿ ) ವತಿಯಿಂದ ಸಾದ್ವಿ ನೃತ್ಯ ಶಾಲೆಯವರು ಭರತ ನಾಟ್ಯ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.. ಸುಮಾರು 10 ಕ್ಕೂ ಹೆಚ್ಚು ನೃತ್ಯಗಳನ್ನು ವಿದ್ಯಾರ್ಥಿ ಗಳು ನಡೆಸಿಕೊಟ್ಟರು..
ಕಾರ್ಯಕ್ರಮವನ್ನು ರೂಪ ಶಿಕ್ಷಕಿಯವರು ನಡೆಸಿಕೊಟ್ಟರು
    user_ಅಪ್ಪಾಜಿ ಬಂಡೆ
    ಅಪ್ಪಾಜಿ ಬಂಡೆ
    Yoga instructor ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    21 hrs ago
  • ಪೊಲೀಸ್ ಅಂತದೇನು ತಪ್ಪು ಮಾತಾಡಿದ್ರು? ಇರೋದನ್ನ ಹೇಳಿ ಎಚ್ಚರಿಸಿದ್ದಾರೆ ಅಷ್ಟೇ... ಪೊಲೀಸ್ ಅಂತದೇನು ತಪ್ಪು ಮಾತಾಡಿದ್ರು? ಇರೋದನ್ನ ಹೇಳಿ ಎಚ್ಚರಿಸಿದ್ದಾರೆ ಅಷ್ಟೇ...
    1
    ಪೊಲೀಸ್ ಅಂತದೇನು ತಪ್ಪು ಮಾತಾಡಿದ್ರು?
ಇರೋದನ್ನ ಹೇಳಿ ಎಚ್ಚರಿಸಿದ್ದಾರೆ ಅಷ್ಟೇ...
ಪೊಲೀಸ್ ಅಂತದೇನು ತಪ್ಪು ಮಾತಾಡಿದ್ರು?
ಇರೋದನ್ನ ಹೇಳಿ ಎಚ್ಚರಿಸಿದ್ದಾರೆ ಅಷ್ಟೇ...
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    4 hrs ago
  • ದೇವನಹಳ್ಳಿಯಲ್ಲಿ ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ ಬೆಂಗಳೂರು:ಎತ್ತಿನ ಗಾಡಿಯಲ್ಲಿ ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಿ ಗ್ರಾಮಸ್ಥರು ವಿಸರ್ಜನೆ ಮಾಡಿದ್ದಾರೆ.ದೇವನಹಳ್ಳಿಯ ಪ್ರಸನ್ನಹಳ್ಳಿಯ ಜಟಾಯು ಯುವಸೇನೆವತಿಯಿಂದ ಗಣೇಶೋತ್ಸವ ಆಯೋಜನೆ ಮಾಡಲಾಗಿದ್ದು,ಯಾವುದೆ ಡಿಜೆ ಬಳಕೆ ಮಾಡದೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಸಾಂಪ್ರದಾಯಿಕವಾಗಿ ಮೆರವಣಿಗೆ ಮಾಡಲಾಗಿದೆ.ಎತ್ತಿನಗಾಡಿ ಮತ್ತು ಮಹಿಳೆಯರಿಂದ ತಟ್ಟೆಗಳಲ್ಲಿ ಗಣಪತಿ ಮೂರ್ತಿಗಳ ಹೊತ್ತು ಪ್ರಸನ್ನಹಳ್ಳಿ ಇಂದ ಚಿಕ್ಕಕೆರೆವರೆಗೆ ಮೆರವಣಿಗೆ ಮಾಡಿ ಪರಿಸರ ಸ್ನೇಹಿ ಮೂರ್ತಿಗಳ ವಿಸರ್ಜನೆ ಮಾಡಿದ್ದಾರೆ.
    1
    ದೇವನಹಳ್ಳಿಯಲ್ಲಿ ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆ 
ಬೆಂಗಳೂರು:ಎತ್ತಿನ ಗಾಡಿಯಲ್ಲಿ ನೂರ ಒಂದು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಿ ಗ್ರಾಮಸ್ಥರು ವಿಸರ್ಜನೆ ಮಾಡಿದ್ದಾರೆ.ದೇವನಹಳ್ಳಿಯ ಪ್ರಸನ್ನಹಳ್ಳಿಯ ಜಟಾಯು ಯುವಸೇನೆವತಿಯಿಂದ ಗಣೇಶೋತ್ಸವ ಆಯೋಜನೆ ಮಾಡಲಾಗಿದ್ದು,ಯಾವುದೆ ಡಿಜೆ ಬಳಕೆ ಮಾಡದೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳ ವಾದ್ಯಗಳೊಂದಿಗೆ ಸಾಂಪ್ರದಾಯಿಕವಾಗಿ ಮೆರವಣಿಗೆ  ಮಾಡಲಾಗಿದೆ.ಎತ್ತಿನಗಾಡಿ ಮತ್ತು ಮಹಿಳೆಯರಿಂದ ತಟ್ಟೆಗಳಲ್ಲಿ ಗಣಪತಿ ಮೂರ್ತಿಗಳ ಹೊತ್ತು  ಪ್ರಸನ್ನಹಳ್ಳಿ ಇಂದ ಚಿಕ್ಕಕೆರೆವರೆಗೆ ಮೆರವಣಿಗೆ ಮಾಡಿ ಪರಿಸರ ಸ್ನೇಹಿ ಮೂರ್ತಿಗಳ ವಿಸರ್ಜನೆ  ಮಾಡಿದ್ದಾರೆ.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    9 hrs ago
  • ಹಿರಿಯೂರಿನ ಲಕ್ಷ್ಮಮ್ಮ ಬಡಾವಣೆಯಲ್ಲಿ ಗಣಪತಿ ಹಬ್ಬ ಕಾರ್ಯಕ್ರಮದಲ್ಲಿ ಇಂದು ಭರತ ನಾಟ್ಯ ಪ್ರದರ್ಶನ ಹಿರಿಯೂರಿನ ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಸೇವಾ ಟ್ರಸ್ಟ್ (ರಿ )ವತಿಯಿಂದ ಇಂದು ಸಾದ್ವಿ ನಾಟ್ಯ ಶಾಲೆವತಿಯಿಂದ ಭರತ ನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ಸುಮಾರು 10 ಕ್ಕೂ ಹೆಚ್ಚು ನೃತ್ಯಗಳನ್ನು ನಡೆಸಿಕೊಡಲಾಯಿತು... ಕಾರ್ಯಕ್ರಮದಲ್ಲಿ ಪೋಷಕರು ಸಾಹಿತ್ಯಸಕ್ತರು ಭಾಗವಹಿಸಿದ್ದರು... ಶಿಕ್ಷಕಿ ರೂಪಾ ಮೇಡಂರವರು ನಿರೂಪಣೆ ನಡೆಸಿಕೊಟ್ಟರು... ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿತು....
    1
    ಹಿರಿಯೂರಿನ ಲಕ್ಷ್ಮಮ್ಮ ಬಡಾವಣೆಯಲ್ಲಿ ಗಣಪತಿ ಹಬ್ಬ ಕಾರ್ಯಕ್ರಮದಲ್ಲಿ ಇಂದು ಭರತ ನಾಟ್ಯ ಪ್ರದರ್ಶನ 
ಹಿರಿಯೂರಿನ ಲಕ್ಷ್ಮಮ್ಮ ಬಡಾವಣೆಯಲ್ಲಿ ಶ್ರೀ ವಿದ್ಯಾ ಗಣಪತಿ ಯೂತ್ ಸೇವಾ ಟ್ರಸ್ಟ್ (ರಿ )ವತಿಯಿಂದ ಇಂದು ಸಾದ್ವಿ ನಾಟ್ಯ ಶಾಲೆವತಿಯಿಂದ ಭರತ ನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ಸುಮಾರು 10 ಕ್ಕೂ ಹೆಚ್ಚು ನೃತ್ಯಗಳನ್ನು ನಡೆಸಿಕೊಡಲಾಯಿತು... ಕಾರ್ಯಕ್ರಮದಲ್ಲಿ ಪೋಷಕರು ಸಾಹಿತ್ಯಸಕ್ತರು ಭಾಗವಹಿಸಿದ್ದರು... ಶಿಕ್ಷಕಿ ರೂಪಾ ಮೇಡಂರವರು ನಿರೂಪಣೆ ನಡೆಸಿಕೊಟ್ಟರು... ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿತು....
    user_ಅಪ್ಪಾಜಿ ಬಂಡೆ
    ಅಪ್ಪಾಜಿ ಬಂಡೆ
    Yoga instructor ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.