logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ನೈಸ್ ಹಗರಣ ; ರಾಜ್ಯಪಾಲರಿಗೆ ದೂರು ಸಲ್ಲಿಸಿದ ಜೆಡಿಎಸ್ ನಿಯೋಗ... *|| ನೈಸ್ ಹಗರಣ ; ರಾಜ್ಯಪಾಲರಿಗೆ ದೂರು ಸಲ್ಲಿಸಿದ ಜೆಡಿಎಸ್ ನಿಯೋಗ ||* *|| ಎರಡು ವಾರದಲ್ಲಿ ಕ್ರಮ ಇಲ್ಲದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ನಿಖಿಲ್ ||* *|| ರೈತರ ಭೂಮಿ ನುಂಗಿದ ನೈಸ್ - ಸರ್ಕಾರ ಮೌನ ಏಕೆ? ನಿಖಿಲ್ ಕುಮಾರಸ್ವಾಮಿ ಪ್ರಶ್ನೆ ||* ಬೆಂಗಳೂರು-ಮೈಸೂರು ಕಾರಿಡಾರ್ (BMICP) ಯೋಜನೆಯಲ್ಲಿ NICE ಸಂಸ್ಥೆ ನಡೆಸಿರುವ ಅಕ್ರಮ ಮತ್ತು ವಂಚನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೆಡಿಎಸ್ ನಿಯೋಗ ಇಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ *ಸುರೇಶ್ ಬಾಬು* ಅವರ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ *ನಿಖಿಲ್ ಕುಮಾರಸ್ವಾಮಿ* ಅವರು ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ, ಹೈಕೋರ್ಟ್ ತೀರ್ಪಿನ ಪ್ರತಿ ಸಮೇತ 5 ಪುಟಗಳ ಮನವಿ ಪತ್ರ ಸಲ್ಲಿಸಿದರು. *ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡಿದ ನಿಖಿಲ್* ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೈಸ್ ಯೋಜನೆ ಅಕ್ರಮದ ಬಗ್ಗೆ ಸರ್ಕಾರಕ್ಕೆ ನಾವು ಎರಡು ವಾರ ಗಡುವು ಕೊಡ್ತೀವಿ. ಸರ್ಕಾರ ನೈಸ್ ಯೋಜನೆಯನ್ನು ವಶಪಡಿಸಿಕೊಳ್ಳದೇ ಹೋದ್ರೆ ಜೆಡಿಎಸ್ ಉಗ್ರ ಹೋರಾಟ ಮಾಡಲಿದೆ. ನೈಸ್ ಅಕ್ರಮದ ಬಗ್ಗೆ ಜಾಗೃತಿ ಮೂಡಿಸೋ ಕೆಲಸ ಮಾಡ್ತೀವಿ. ಗುರುವಾರ, ಶುಕ್ರವಾರ ವೆಬ್ ಸೈಟ್ ರಿಲೀಸ್ ಮಾಡ್ತೀವಿ. ಅದರಲ್ಲಿ ಎಲ್ಲಾ ದಾಖಲಾತಿ ಜನರಿಗೆ ಸಿಗೋ ಹಾಗೆ ಮಾಡ್ತೀವಿ ಎಂದು ಹೇಳಿದರು. ಹೈಕೋರ್ಟ್ ನೈಸ್ ಬಗ್ಗೆ ಐತಿಹಾಸಿಕ ತೀರ್ಪು ಕೊಟ್ಟಿದೆ. ನೈಸ್ ಯೋಜನೆ ದೊಡ್ಡ ಹಗರಣ ಅಂತ ಕೋರ್ಟ್ ಹೇಳಿದೆ. NICE is not a NICE ಎಂಬುದು ಸಾಬೀತಾಗಿದೆ. ನೈಸ್ ಯೋಜನೆ ಅಗ್ರಿಮೆಂಟ್ ಪ್ರಕಾರ ಪ್ರಾಜೆಕ್ಟ್ ಆಗಿಲ್ಲ. ರೈತರ ಜಮೀನು ಸ್ವಾಧೀನ ಮಾಡಿಕೊಂಡು ರೈತರಿಗೆ ಪರಿಹಾರ ಕೊಟ್ಟಿಲ್ಲ. ಭೂಸ್ವಾಧೀನ ಅಂತಿಮ ಅಧಿಸೂಚನೆ ಕೋರ್ಟ್ ರದ್ದು ಮಾಡಿದೆ. ನೈಸ್ ನಲ್ಲಿ ಫ್ರೇಮ್ ವರ್ಕ್ ಅಗ್ರಿಮೆಂಟ್ ಉಲ್ಲಂಘನೆ ಆಗಿದೆ. ದೇವೇಗೌಡರು MOU ಮಾಡಿದ್ದು ವಿಷನ್ ಇಟ್ಟುಕೊಂಡು. ಆದರೆ MOU ಉಲ್ಲಂಘನೆ ಆಗಿದೆ, ಗಾಳಿಗೆ ತೂರಿದ್ದಾರೆ" ಎಂದು ಆರೋಪಿಸಿದರು. ಸರ್ಕಾರ ಯಾಕೆ ಮೌನವಾಗಿದೆ? ಸರ್ಕಾರ ಜನರ ಪರ, ರೈತರ ಪರ ಇದೆಯಾ? ಕೊಟ್ಯಾಂತರ ರೂಪಾಯಿ ಟೋಲ್ ಸಂಗ್ರಹ ಮಾಡ್ತಾ ಇದ್ದಾರೆ. ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಬೇಕು. ನೈಸ್ ಯೋಜನೆ ಸರ್ಕಾರ ಟೇಕ್ ಓವರ್ ಮಾಡಬೇಕು ಅಂತ ಕೋರ್ಟ್ ಹೇಳಿದೆ. ಆದ್ರೂ ಸರ್ಕಾರ ಮೌನಕ್ಕೆ ಶರಣಾಗಿದೆ. ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ. ಸರ್ಕಾರಕ್ಕೆ ಚಾಟಿ ಬೀಸಬೇಕು ಅಂತ ಮನವಿ ಮಾಡಿದ್ದೇವೆ" ಎಂದು ಹೇಳಿದರು. *ಬಿಡದಿ ಕೇಸ್: ಹೈಕೋರ್ಟ್ ನಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ* ಬಿಡದಿ ಕೇಸ್ ವಿಚಾರದಲ್ಲಿ 81 ಜನ ರೈತರು ಅರ್ಜಿ ಹಾಕಿದ್ರು. ಒಂದು ಇಟ್ಟಿಗೆ ಕೂಡ ಅಲುಗಾಡಬಾರದು ಅಂತ ಕೋರ್ಟ್ ಹೇಳಿದೆ. ಸರ್ಕಾರ ಅಬ್ಜೆಕ್ಷನ್ ಸಲ್ಲಿಕೆ ಮಾಡಿಲ್ಲ. ಸರ್ಕಾರ ಮಾಡಿರೋ ಭೂಸ್ವಾಧೀನದಲ್ಲಿ ಯಾವುದೇ ನ್ಯಾಯ ಇಲ್ಲ. ಹೈಕೋರ್ಟ್ ನಲ್ಲಿ ನ್ಯಾಯ ಸಿಗುವ ವಿಶ್ವಾಸ ಇದೆ. ಇದು ಇನ್ನು ಸಮಯ ಆಗುತ್ತದೆ. ವಾದ ಮಂಡನೆ ಆಗಬೇಕು. ಕಾದು ನೋಡೋಣ ಎಂದು ಹೇಳಿದರು. *ಬಿಜೆಪಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ - ನಿಖಿಲ್* ಸದನದ ಒಳಗೆ ಒಟ್ಟಾಗಿ ಹೋರಾಟ ಮಾಡಿದ್ವಿ. ಈಗ ಸದನ ಹೊರಗೆ ನಾವು ಬಿಜೆಪಿ ಜೊತೆ ಇರ್ತೀವಿ. ನಾಡಿನ ಯಾವುದೇ ವಿಷಯ ಬಂದಾಗ ಬಿಜೆಪಿ ಜೊತೆ ನಾವು ಒಟ್ಟಾಗಿ ಹೋಗ್ತೀವಿ. ಸಿದ್ದರಾಮಯ್ಯ ಅವರೇ ಅಕ್ರಮ ಆಗಿರೋದು ಒಪ್ಪಿಕೊಂಡಿದ್ದಾರೆ. ಇಷ್ಟಾದ್ರೂ ಆರೋಪ ಇರೋ ವ್ಯಕ್ತಿಯನ್ನ ಯಾಕೆ ಸಚಿವನಾಗಿ ತಗೊಂಡ್ರು? ಬಿಜೆಪಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದರು. *ಚೆಲುವರಾಯಸ್ವಾಮಿ ಆರೋಪಕ್ಕೆ ನಿಖಿಲ್ ತಿರುಗೇಟು* "ಕುಮಾರಸ್ವಾಮಿ ಅವರು ಯಾವತ್ತು ದಾಖಲಾತಿ ಇಲ್ಲದೆ ಮಾತಾಡಲ್ಲ. ಹಿಟ್ ಅಂಡ್ ರನ್ ಬಗ್ಗೆ ಹೊಸದಾಗಿ ಆಗಿರೋ ಸಚಿವರು ಮಾತಾಡ್ತಾರೆ. ಹಿಟ್ ಅಂಡ್ ರನ್ ಮಾಡಿದ್ದು ಬಿಡದಿ ಪ್ರಾಜೆಕ್ಟ್ ನಲ್ಲಿ ಯಾರು? ಕುಮಾರಸ್ವಾಮಿ ಅವರು ಸಿಎಂ ಅವರನ್ನ ಬಿಡದಿ ವಿಚಾರದಲ್ಲಿ ಚರ್ಚೆಗೆ ಕರೆದಾಗ ಯಾಕೆ ಸಿಎಂ ಬರಲಿಲ್ಲ. ಕುಮಾರಸ್ವಾಮಿ ಹೋಗಿದ್ರು. ಸಿಎಂ ಯಾಕೆ ಭೈರಮಂಗಲಕ್ಕೆ ಬರಲಿಲ್ಲ. ಹಾಗಾದ್ರೆ ಹಿಟ್ ಅಂಡ್ ರನ್ ಮಾಡಿದ್ದು ಯಾರು?" ಎಂದು ಪ್ರಶ್ನಿಸಿದರು. *||ಮನವಿ ಪತ್ರದ ಪ್ರಮುಖ ಅಂಶಗಳು||* 1. _ಪರಿಹಾರವಿಲ್ಲದೆ ಭೂಸ್ವಾಧೀನ ಅಸಿಂಧು:_ 20 ವರ್ಷದಿಂದ ಅವಾರ್ಡ್ ಪಾಸ್ ಮಾಡದೆ ಪರಿಹಾರ ನೀಡದಿರುವುದು Article 300A ಉಲ್ಲಂಘನೆ. 2. _ಶಾಸನದ ಮೇಲಿನ ವಂಚನೆ:_ NICE ಭೂಮಿಯನ್ನು ಖಾಸಗಿ ಡೆವಲಪರ್ ಗಳಿಗೆ JDA ಮೂಲಕ ಮಾರಾಟ ಮಾಡಿದೆ. "Fraud on Statute and Constitution" ಎಂದು ಕೋರ್ಟ್ ಹೇಳಿದೆ. 3. _ಪರಿಸರ ನಾಶ:_ ಕೆರೆ, ಕಟ್ಟೆಗಳ ಭೂಮಿಯನ್ನು NICE ಗೆ ನೀಡಿರುವುದು ಸುಪ್ರೀಂ ಕೋರ್ಟ್ ನ Hinchlal Tiwari ತೀರ್ಪಿಗೆ ವಿರುದ್ಧ. 4. ಯೋಜನೆಯೇ ವೈಫಲ್ಯ:_ 111 ಕಿ.ಮೀ ನಲ್ಲಿ 25 ವರ್ಷದಲ್ಲಿ ಕೇವಲ 5 ಕಿ.ಮೀ ನಿರ್ಮಾಣ, 20,193 ಎಕರೆ ಭೂ ಬ್ಯಾಂಕ್ ಇಟ್ಟುಕೊಂಡು ರಿಯಲ್ ಎಸ್ಟೇಟ್ ದಂಧೆ. "ರಾಜ್ಯದ ಅತಿದೊಡ್ಡ ಹಗರಣಗಳಲ್ಲಿ ಇದು ಒಂದು" ಎಂದು ಕೋರ್ಟ್ ಹೇಳಿದೆ. *ಜೆಡಿಎಸ್ ನ 7 ಬೇಡಿಕೆಗಳು* 1. ಅನಧಿಕೃತ ಟೋಲ್ ಸಂಗ್ರಹ ತಕ್ಷಣ ನಿಲ್ಲಿಸಬೇಕು. 2. ಹೆಚ್ಚುವರಿ 554 ಎಕರೆ ಭೂಮಿಯನ್ನು ಕೂಡಲೇ NICE ನಿಂದ ವಾಪಸ್ ಪಡೆಯಬೇಕು. 3. SIT ಮತ್ತು Forensic Audit ನಡೆಸಬೇಕು. 4. ಯೋಜನೆಯನ್ನು ಸರ್ಕಾರವೇ ವಶಕ್ಕೆ ಪಡೆಯಲು ವಿಶೇಷ ಕಾನೂನು ಜಾರಿ ಮಾಡಬೇಕು. 5. ರೈತರಿಗೆ ಪರಿಹಾರ ಮತ್ತು ಭೂಮಿ ವಾಪಸ್. 6. ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ. 7. ಕೆರೆ-ಕಟ್ಟೆಗಳ ಭೂಮಿಯನ್ನು ಮರಳಿ ಸಾರ್ವಜನಿಕ ಸ್ವಾಮ್ಯಕ್ಕೆ ಪಡೆಯಬೇಕು.

1 hr ago
user_Vinod
Vinod
Teacher ಆನೇಕಲ್, ಬೆಂಗಳೂರು ನಗರ, ಕರ್ನಾಟಕ•
1 hr ago
8e1c8f32-da89-4ca6-b848-2df4e6717944

More news from ಕರ್ನಾಟಕ and nearby areas
  • Hazrat Syed Tajuddin Qadri sahab ka DJ Ban ke mamle mein bada byan Hazrat Syed Tajuddin Qadri sahab ka DJ Ban ke mamle mein bada byan
    1
    Hazrat Syed Tajuddin  Qadri sahab ka 
DJ Ban ke mamle mein bada byan
Hazrat Syed Tajuddin  Qadri sahab ka 
DJ Ban ke mamle mein bada byan
    user_Yusuf Bepari
    Yusuf Bepari
    Local News Reporter ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    42 min ago
  • ಪ್ರಿಯಕರನ ಕಾರಿಗೆ 3,400 ಲಿಪ್‌ಸ್ಟಿಕ್ ಕಿಸ್‌! ವೈರಲ್ ಟ್ರೆಂಡ್‌ಗೆ ₹5,500 ದಂಡ, ಗುರುತು ತೆರವು! ಪ್ರಿಯಕರನ ಕಾರಿಗೆ 3,400 ಲಿಪ್‌ಸ್ಟಿಕ್ ಕಿಸ್‌! ವೈರಲ್ ಟ್ರೆಂಡ್‌ಗೆ ₹5,500 ದಂಡ, ಗುರುತು ತೆರವು!
    1
    ಪ್ರಿಯಕರನ ಕಾರಿಗೆ 3,400 ಲಿಪ್‌ಸ್ಟಿಕ್ ಕಿಸ್‌!
ವೈರಲ್ ಟ್ರೆಂಡ್‌ಗೆ ₹5,500 ದಂಡ, ಗುರುತು ತೆರವು!
ಪ್ರಿಯಕರನ ಕಾರಿಗೆ 3,400 ಲಿಪ್‌ಸ್ಟಿಕ್ ಕಿಸ್‌!
ವೈರಲ್ ಟ್ರೆಂಡ್‌ಗೆ ₹5,500 ದಂಡ, ಗುರುತು ತೆರವು!
    user_Veega News Kannada
    Veega News Kannada
    Technical service ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    39 min ago
  • ಸಾರ್ವಜನಿಕ ಸ್ಥಳದಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದ ಹೆಲ್ತ್ ಕೇರ್ ಸೆಂಟರ್‌ಗೆ 40 ಸಾವಿರ ರೂ. ದಂಡ ಬೆಂಗಳೂರು:ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗುರಪ್ಪನಪಾಳ್ಯ ಪ್ರದೇಶದಲ್ಲಿ ನಿಯಮಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ವೈದ್ಯಕೀಯ ತ್ಯಾಜ್ಯವನ್ನು ಸುರಿದ ಕ್ಲಿನಿಕ್‌ಗೆ ದಂಡ ವಿಧಿಸಲಾಗಿದೆ. ಇಂದು ಬೆಳಿಗ್ಗೆ ಬಿಟಿಎಂ ಲೇಔಟ್ 1ನೇ ಹಂತದ ಗುರಪ್ಪನಪಾಳ್ಯದ 9ನೇ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ವೈದ್ಯಕೀಯ ತ್ಯಾಜ್ಯಗಳಾದ ಸೂಜಿಗಳು, ಸಿರಿಂಜ್, ಪ್ಲಾಸ್ಟರ್ ಗಳು, ಮಾತ್ರೆ ಡಬ್ಬಗಳು ಹಾಗೂ ಇನ್ನಿತರ ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ಸುರಿದಿರುವುದನ್ನ ಗಮನಿಸಿದ ಪೌರಕಾರ್ಮಿಕರು ಮಾರ್ಷಲ್ ಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಮಾರ್ಷಲ್ ಗಳು ತ್ಯಾಜ್ಯಗಳನ್ನು ಪರಿಶೀಲಿಸಿದಾಗ ವೈದ್ಯಕೀಯ ತ್ಯಾಜ್ಯಗಳೊಡನೆ ಹೆಲ್ತ್ ಕೇರ್ ಸೆಂಟರ್ ಪ್ರಿಸ್ಕ್ರಿಪ್ಷನ್ ಪತ್ರಗಳು ಕಂಡುಬಂದಿದ್ದ ಮೇರೆಗೆ ವೈದ್ಯಕೀಯ ತ್ಯಾಜ್ಯ ಸುರಿದಿರುವವರ ಮಾಹಿತಿ ಪತ್ತೆಯಾಗಿರುತ್ತದೆ. ವೈದ್ಯಕೀಯ ತ್ಯಾಜ್ಯವನ್ನು ಬಿಸಾಡಿರುವುದು ಪಾಲಿಕೆಯ ಮಾರ್ಷಲ್‌ಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳಕ್ಕೆ ಧಾವಿಸಿದ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳು, ಸಾರ್ವಜನಿಕರ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವ ರೀತಿಯಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ಸುರಿದಿರುವ ಹೆಲ್ತ್ ಕೇರ್ ಸೆಂಟರ್‌ಗೆ ಸ್ಥಳದಲ್ಲೇ 40,000 ದಂಡ ವಿಧಿಸಿ, ಡಿಜಿಟಲ್ ಪಾವತಿ ಮೂಲಕ ವಸೂಲಿ ಮಾಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್ ಭಾಗವಹಿಸಿದ್ದರು.
    1
    ಸಾರ್ವಜನಿಕ ಸ್ಥಳದಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದ ಹೆಲ್ತ್ ಕೇರ್ ಸೆಂಟರ್‌ಗೆ 40 ಸಾವಿರ ರೂ. ದಂಡ
ಬೆಂಗಳೂರು:ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗುರಪ್ಪನಪಾಳ್ಯ ಪ್ರದೇಶದಲ್ಲಿ ನಿಯಮಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ವೈದ್ಯಕೀಯ ತ್ಯಾಜ್ಯವನ್ನು ಸುರಿದ ಕ್ಲಿನಿಕ್‌ಗೆ ದಂಡ ವಿಧಿಸಲಾಗಿದೆ.
ಇಂದು ಬೆಳಿಗ್ಗೆ ಬಿಟಿಎಂ ಲೇಔಟ್ 1ನೇ ಹಂತದ ಗುರಪ್ಪನಪಾಳ್ಯದ 9ನೇ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ವೈದ್ಯಕೀಯ ತ್ಯಾಜ್ಯಗಳಾದ ಸೂಜಿಗಳು, ಸಿರಿಂಜ್, ಪ್ಲಾಸ್ಟರ್ ಗಳು, ಮಾತ್ರೆ ಡಬ್ಬಗಳು ಹಾಗೂ ಇನ್ನಿತರ ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ಸುರಿದಿರುವುದನ್ನ ಗಮನಿಸಿದ ಪೌರಕಾರ್ಮಿಕರು ಮಾರ್ಷಲ್ ಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಮಾರ್ಷಲ್ ಗಳು ತ್ಯಾಜ್ಯಗಳನ್ನು ಪರಿಶೀಲಿಸಿದಾಗ ವೈದ್ಯಕೀಯ ತ್ಯಾಜ್ಯಗಳೊಡನೆ ಹೆಲ್ತ್ ಕೇರ್ ಸೆಂಟರ್ ಪ್ರಿಸ್ಕ್ರಿಪ್ಷನ್ ಪತ್ರಗಳು ಕಂಡುಬಂದಿದ್ದ ಮೇರೆಗೆ ವೈದ್ಯಕೀಯ ತ್ಯಾಜ್ಯ ಸುರಿದಿರುವವರ ಮಾಹಿತಿ ಪತ್ತೆಯಾಗಿರುತ್ತದೆ. ವೈದ್ಯಕೀಯ ತ್ಯಾಜ್ಯವನ್ನು ಬಿಸಾಡಿರುವುದು ಪಾಲಿಕೆಯ ಮಾರ್ಷಲ್‌ಗಳ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ.
ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಸ್ಥಳಕ್ಕೆ ಧಾವಿಸಿದ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್‌ಗಳು, ಸಾರ್ವಜನಿಕರ ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವ ರೀತಿಯಲ್ಲಿ ವೈದ್ಯಕೀಯ ತ್ಯಾಜ್ಯವನ್ನು  ಅವೈಜ್ಞಾನಿಕವಾಗಿ ಸುರಿದಿರುವ ಹೆಲ್ತ್ ಕೇರ್ ಸೆಂಟರ್‌ಗೆ ಸ್ಥಳದಲ್ಲೇ 40,000 ದಂಡ ವಿಧಿಸಿ, ಡಿಜಿಟಲ್ ಪಾವತಿ ಮೂಲಕ ವಸೂಲಿ ಮಾಡಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್ ಭಾಗವಹಿಸಿದ್ದರು.
    user_ಶಿವನಿ
    ಶಿವನಿ
    Fruit & Vegetable Exporter ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 hr ago
  • ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಸರಬರಾಜಾಗಿಲ್ಲ: ಯು.ಟಿ. ಖಾದರ್ ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗಳಿಗೆ ನಕಲಿ ಅಥವಾ ಕಳಪೆ ಮಟ್ಟದ ಔಷಧಿಗಳನ್ನು ಸರಬರಾಜು ಮಾಡಲಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸ್ಪಷ್ಟನೆ ನೀಡಿದ್ದಾರೆ. ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಸರ್ಕಾರ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಒಂದು ವೇಳೆ ಎಲ್ಲಾದರೂ ಸರ್ಕಾರಿ ಆಸ್ಪತ್ರೆಗಳಿಗೆ ನಕಲಿ ಮಾತ್ರೆ ಅಥವಾ ಔಷಧಿ ಪೂರೈಕೆಯಾಗಿರುವುದು ಕಣ್ಣಿಗೆ ಬಿದ್ದರೆ, ಅಂತಹ ಏಜೆನ್ಸಿಗಳು ಹಾಗೂ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ. ಕೃತಕ ಪನ್ನೀರ್‌ ಬಳಕೆ ನಿಷೇಧ ಇದೇ ವೇಳೆ ಆಹಾರ ಭದ್ರತೆ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ರಾಜ್ಯದಲ್ಲಿ ಕೃತಕವಾಗಿ ತಯಾರಿಸುವ ಪನ್ನೀರ್ ಮಾರಾಟ ಮತ್ತು ಬಳಕೆಯನ್ನು ಸತತ ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ನಿಷೇಧದ ಬಿಸಿ ಕೇವಲ ಕೃತಕ ಪನ್ನೀರ್‌ಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಸಾರ್ವಜನಿಕ ಆರೋಗ್ಯಕ್ಕೆ ಹಾನಿಯುಂಟುಮಾಡುವ ಎಲ್ಲಾ ರೀತಿಯ ನಕಲಿ ಹಾಗೂ ಕೃತಕ ಆಹಾರ ಉತ್ಪನ್ನಗಳಿಗೂ ಈ ನಿಯಮ ಅನ್ವಯಿಸಲಿದೆ ಎಂದು ಅವರು ಕಟ್ಟುನಿಟ್ಟಾಗಿ ಪುನರುಚ್ಚರಿಸಿದ್ದಾರೆ. ಆಹಾರ ಸುರಕ್ಷತಾ ಕಾಯ್ದೆಯಡಿ ಸದ್ಯಕ್ಕೆ ನಿಷೇಧ ಹೇರಲು ಆಯುಕ್ತರಿಗೆ ಒಂದು ವರ್ಷದ ಮಟ್ಟಿಗೆ ಮಾತ್ರ ಕಾನೂನಾತ್ಮಕ ಅಧಿಕಾರವಿರುತ್ತದೆ. ಈ ನಿಷೇಧದ ಅವಧಿ ಮುಗಿದ ನಂತರ ಪರಿಸ್ಥಿತಿಗೆ ಅನುಗುಣವಾಗಿ ನಿಯಮಗಳನ್ನು ನವೀಕರಿಸಲಾಗುವುದು ಅಥವಾ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಸೂಕ್ತ ಕಾಯ್ದೆ ರೂಪಿಸಲಾಗುವುದು ಎಂದು ತಿಳಿಸಿದರು. ಇನ್ನೊಂದೆಡೆ, ರಾಜ್ಯದಲ್ಲಿ ಸಕ್ರಿಯವಾಗಿರುವ ನಕಲಿ ಔಷಧಿ ಜಾಲದ ಬೆನ್ನೆಲುಬು ಮುರಿಯಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಈಗಾಗಲೇ ಅಖಾಡಕ್ಕಿಳಿದಿದ್ದು, ಸೂಕ್ತ ಮಾಹಿತಿ ಸಂಗ್ರಹಿಸಿ ತನಿಖೆಯನ್ನು ತೀವ್ರಗೊಳಿಸಿದೆ. ಅನೈತಿಕ ಹಾಗೂ ಅಕ್ರಮ ಚಟುವಟಿಕೆಗಳಿಗೆ ತಿಲಾಂಜಲಿ ಹಾಡಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಸತತ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಸಚಿವರು ವಿವರಿಸಿದ್ದಾರೆ. ನಕಲಿ ಔಷಧಗಳನ್ನು ಗುರುತಿಸುವುದೇ ದೊಡ್ಡ ಸವಾಲು - ಹಾಲೋಗ್ರಾಂ, ಕ್ಯೂಆರ್ ಕೋಡ್ ಅಳವಡಿಕೆಗೆ ಐಎಂಎ ಆಗ್ರಹ ಇತ್ತೀಚೆಗೆ ರಾಜ್ಯದಲ್ಲಿ (Karnataka) ನಕಲಿ ಔಷಧ (Fake Medicine) ಜಾಲ ಬಯಲಾದ ಬೆನ್ನಲ್ಲೇ, ಅಸಲಿ ಮತ್ತು ನಕಲಿ ಔಷಧಗಳನ್ನು ಗುರುತಿಸುವುದು ವೈದ್ಯರು (Doctors), ಫಾರ್ಮಸಿಸ್ಟ್‌ಗಳು ಹಾಗೂ ಔಷಧ ನಿಯಂತ್ರಣ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಕಲಿ ಔಷಧ ತಯಾರಕರು ಅಸಲಿ ಉತ್ಪನ್ನಗಳನ್ನೇ ಹೋಲುವಂತೆ ಪ್ಯಾಕಿಂಗ್, ಲೇಬಲಿಂಗ್ ಹಾಗೂ ಬ್ಯಾಚ್ ವಿವರಗಳನ್ನು ನಿಖರವಾಗಿ ನಕಲು ಮಾಡುತ್ತಿದ್ದಾರೆ. ಇದರಿಂದಾಗಿ ಮೇಲ್ನೋಟಕ್ಕೆ ಅಥವಾ ಸಾಮಾನ್ಯ ಪರಿಶೀಲನೆಯಿಂದ ಇವುಗಳನ್ನು ಪತ್ತೆಹಚ್ಚುವುದು ಅಸಾಧ್ಯವಾಗಿದೆ. ಈ ನಕಲಿ ಉತ್ಪನ್ನಗಳನ್ನು ಖಚಿತವಾಗಿ ಗುರುತಿಸಲು ಪ್ರಯೋಗಾಲಯ ಪರೀಕ್ಷೆಯ ಅಗತ್ಯ ಎದುರಾಗುತ್ತಿದ್ದು, ನಕಲಿ ಔಷಧಗಳು ರೋಗಿಗಳ ಕೈಗೆ ತಲುಪುವ ಭೀತಿ ವ್ಯಕ್ತವಾಗಿದೆ. ವೈದ್ಯರ ಸೂಕ್ತ ಸಲಹೆಯ ಹೊರತಾಗಿಯೂ ಇಂತಹ ಔಷಧ ಸೇವನೆಯಿಂದ ರೋಗಿಗಳ ಚಿಕಿತ್ಸೆಯ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರೋಗಿಗಳ ಸುರಕ್ಷತೆಗಾಗಿ ತಂತ್ರಜ್ಞಾನ ಆಧಾರಿತ ಭದ್ರತಾ ವ್ಯವಸ್ಥೆ ರೂಪಿಸಲು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಮುಂದಾಗಿದೆ. ರಾಜ್ಯದಲ್ಲಿ ಮಾರಾಟವಾಗುವ ಪ್ರತಿಯೊಂದು ಔಷಧಕ್ಕೂ ವಿಶಿಷ್ಟ ಹಾಲೋಗ್ರಾಂ ಅಥವಾ ಕ್ಯೂಆರ್ (QR) ಕೋಡ್‌ನಂತಹ ಡಿಜಿಟಲ್ ಗುರುತುಗಳನ್ನು ಅಳವಡಿಸಬೇಕೆಂದು ಐಎಂಎ ಸರ್ಕಾರಕ್ಕೆ ಮನವಿ ಮಾಡಿದೆ. ಈ ವ್ಯವಸ್ಥೆಯಿಂದ ಗ್ರಾಹಕರು ಹಾಗೂ ಔಷಧ ಮಾರಾಟಗಾರರು ಸುಲಭವಾಗಿ ಔಷಧದ ಅಸಲಿತನವನ್ನು ಪರಿಶೀಲಿಸಲು ಸಾಧ್ಯವಾಗಲಿದ್ದು, ಔಷಧ ತಯಾರಿಕೆಯಿಂದ ಹಿಡಿದು ರೋಗಿಗೆ ತಲುಪುವವರೆಗಿನ ಇಡೀ ಪೂರೈಕೆ ವ್ಯವಸ್ಥೆಯ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲು ನೆರವಾಗಲಿದೆ.
    1
    ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಸರಬರಾಜಾಗಿಲ್ಲ: ಯು.ಟಿ. ಖಾದರ್
ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗಳಿಗೆ  ನಕಲಿ ಅಥವಾ ಕಳಪೆ ಮಟ್ಟದ ಔಷಧಿಗಳನ್ನು  ಸರಬರಾಜು ಮಾಡಲಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸ್ಪಷ್ಟನೆ ನೀಡಿದ್ದಾರೆ.
ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಸರ್ಕಾರ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಒಂದು ವೇಳೆ ಎಲ್ಲಾದರೂ ಸರ್ಕಾರಿ ಆಸ್ಪತ್ರೆಗಳಿಗೆ ನಕಲಿ ಮಾತ್ರೆ ಅಥವಾ ಔಷಧಿ ಪೂರೈಕೆಯಾಗಿರುವುದು ಕಣ್ಣಿಗೆ ಬಿದ್ದರೆ, ಅಂತಹ ಏಜೆನ್ಸಿಗಳು ಹಾಗೂ ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದಾರೆ.
ಕೃತಕ ಪನ್ನೀರ್‌ ಬಳಕೆ ನಿಷೇಧ
ಇದೇ ವೇಳೆ ಆಹಾರ ಭದ್ರತೆ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ರಾಜ್ಯದಲ್ಲಿ ಕೃತಕವಾಗಿ ತಯಾರಿಸುವ ಪನ್ನೀರ್ ಮಾರಾಟ ಮತ್ತು ಬಳಕೆಯನ್ನು ಸತತ ಒಂದು ವರ್ಷದ ಅವಧಿಗೆ ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ನಿಷೇಧದ ಬಿಸಿ ಕೇವಲ ಕೃತಕ ಪನ್ನೀರ್‌ಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಸಾರ್ವಜನಿಕ ಆರೋಗ್ಯಕ್ಕೆ ಹಾನಿಯುಂಟುಮಾಡುವ ಎಲ್ಲಾ ರೀತಿಯ ನಕಲಿ ಹಾಗೂ ಕೃತಕ ಆಹಾರ ಉತ್ಪನ್ನಗಳಿಗೂ ಈ ನಿಯಮ ಅನ್ವಯಿಸಲಿದೆ ಎಂದು ಅವರು ಕಟ್ಟುನಿಟ್ಟಾಗಿ ಪುನರುಚ್ಚರಿಸಿದ್ದಾರೆ.
ಆಹಾರ ಸುರಕ್ಷತಾ ಕಾಯ್ದೆಯಡಿ ಸದ್ಯಕ್ಕೆ ನಿಷೇಧ ಹೇರಲು ಆಯುಕ್ತರಿಗೆ ಒಂದು ವರ್ಷದ ಮಟ್ಟಿಗೆ ಮಾತ್ರ ಕಾನೂನಾತ್ಮಕ ಅಧಿಕಾರವಿರುತ್ತದೆ. ಈ ನಿಷೇಧದ ಅವಧಿ ಮುಗಿದ ನಂತರ ಪರಿಸ್ಥಿತಿಗೆ ಅನುಗುಣವಾಗಿ ನಿಯಮಗಳನ್ನು ನವೀಕರಿಸಲಾಗುವುದು ಅಥವಾ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಸೂಕ್ತ ಕಾಯ್ದೆ ರೂಪಿಸಲಾಗುವುದು ಎಂದು ತಿಳಿಸಿದರು.
ಇನ್ನೊಂದೆಡೆ, ರಾಜ್ಯದಲ್ಲಿ ಸಕ್ರಿಯವಾಗಿರುವ ನಕಲಿ ಔಷಧಿ ಜಾಲದ ಬೆನ್ನೆಲುಬು ಮುರಿಯಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಈಗಾಗಲೇ ಅಖಾಡಕ್ಕಿಳಿದಿದ್ದು, ಸೂಕ್ತ ಮಾಹಿತಿ ಸಂಗ್ರಹಿಸಿ ತನಿಖೆಯನ್ನು ತೀವ್ರಗೊಳಿಸಿದೆ. ಅನೈತಿಕ ಹಾಗೂ ಅಕ್ರಮ ಚಟುವಟಿಕೆಗಳಿಗೆ ತಿಲಾಂಜಲಿ ಹಾಡಲು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಸತತ ದಾಳಿಗಳನ್ನು ನಡೆಸುತ್ತಿದ್ದಾರೆ ಎಂದು ಸಚಿವರು ವಿವರಿಸಿದ್ದಾರೆ.
ನಕಲಿ ಔಷಧಗಳನ್ನು ಗುರುತಿಸುವುದೇ ದೊಡ್ಡ ಸವಾಲು - ಹಾಲೋಗ್ರಾಂ, ಕ್ಯೂಆರ್ ಕೋಡ್ ಅಳವಡಿಕೆಗೆ ಐಎಂಎ ಆಗ್ರಹ
ಇತ್ತೀಚೆಗೆ ರಾಜ್ಯದಲ್ಲಿ (Karnataka) ನಕಲಿ ಔಷಧ (Fake Medicine) ಜಾಲ ಬಯಲಾದ ಬೆನ್ನಲ್ಲೇ, ಅಸಲಿ ಮತ್ತು ನಕಲಿ ಔಷಧಗಳನ್ನು ಗುರುತಿಸುವುದು ವೈದ್ಯರು (Doctors), ಫಾರ್ಮಸಿಸ್ಟ್‌ಗಳು ಹಾಗೂ ಔಷಧ ನಿಯಂತ್ರಣ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ನಕಲಿ ಔಷಧ ತಯಾರಕರು ಅಸಲಿ ಉತ್ಪನ್ನಗಳನ್ನೇ ಹೋಲುವಂತೆ ಪ್ಯಾಕಿಂಗ್, ಲೇಬಲಿಂಗ್ ಹಾಗೂ ಬ್ಯಾಚ್ ವಿವರಗಳನ್ನು ನಿಖರವಾಗಿ ನಕಲು ಮಾಡುತ್ತಿದ್ದಾರೆ. ಇದರಿಂದಾಗಿ ಮೇಲ್ನೋಟಕ್ಕೆ ಅಥವಾ ಸಾಮಾನ್ಯ ಪರಿಶೀಲನೆಯಿಂದ ಇವುಗಳನ್ನು ಪತ್ತೆಹಚ್ಚುವುದು ಅಸಾಧ್ಯವಾಗಿದೆ. ಈ ನಕಲಿ ಉತ್ಪನ್ನಗಳನ್ನು ಖಚಿತವಾಗಿ ಗುರುತಿಸಲು ಪ್ರಯೋಗಾಲಯ ಪರೀಕ್ಷೆಯ ಅಗತ್ಯ ಎದುರಾಗುತ್ತಿದ್ದು, ನಕಲಿ ಔಷಧಗಳು ರೋಗಿಗಳ ಕೈಗೆ ತಲುಪುವ ಭೀತಿ ವ್ಯಕ್ತವಾಗಿದೆ. ವೈದ್ಯರ ಸೂಕ್ತ ಸಲಹೆಯ ಹೊರತಾಗಿಯೂ ಇಂತಹ ಔಷಧ ಸೇವನೆಯಿಂದ ರೋಗಿಗಳ ಚಿಕಿತ್ಸೆಯ ಮೇಲೆ ತೀವ್ರ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ರೋಗಿಗಳ ಸುರಕ್ಷತೆಗಾಗಿ ತಂತ್ರಜ್ಞಾನ ಆಧಾರಿತ ಭದ್ರತಾ ವ್ಯವಸ್ಥೆ ರೂಪಿಸಲು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಮುಂದಾಗಿದೆ. ರಾಜ್ಯದಲ್ಲಿ ಮಾರಾಟವಾಗುವ ಪ್ರತಿಯೊಂದು ಔಷಧಕ್ಕೂ ವಿಶಿಷ್ಟ ಹಾಲೋಗ್ರಾಂ ಅಥವಾ ಕ್ಯೂಆರ್ (QR) ಕೋಡ್‌ನಂತಹ ಡಿಜಿಟಲ್ ಗುರುತುಗಳನ್ನು ಅಳವಡಿಸಬೇಕೆಂದು ಐಎಂಎ ಸರ್ಕಾರಕ್ಕೆ ಮನವಿ ಮಾಡಿದೆ. ಈ ವ್ಯವಸ್ಥೆಯಿಂದ ಗ್ರಾಹಕರು ಹಾಗೂ ಔಷಧ ಮಾರಾಟಗಾರರು ಸುಲಭವಾಗಿ ಔಷಧದ ಅಸಲಿತನವನ್ನು ಪರಿಶೀಲಿಸಲು ಸಾಧ್ಯವಾಗಲಿದ್ದು, ಔಷಧ ತಯಾರಿಕೆಯಿಂದ ಹಿಡಿದು ರೋಗಿಗೆ ತಲುಪುವವರೆಗಿನ ಇಡೀ ಪೂರೈಕೆ ವ್ಯವಸ್ಥೆಯ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲು ನೆರವಾಗಲಿದೆ.
    user_Mohan
    Mohan
    ಬೆಂಗಳೂರು ಪೂರ್ವ, ಬೆಂಗಳೂರು ನಗರ, ಕರ್ನಾಟಕ•
    1 day ago
  • ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ ಪುಟ್ ಪಾತ್ ರಸ್ತೆಯನ್ನ ಒತ್ತುವರಿ ಮಾಡಿಕೊಂಡಿದ್ದ ಕೆಲ ಅಂಗಡಿಗಳ ಮಾಲೀಕರು ಸೀಮೆಂಟ್ ಮೂಲಕ ನಿರ್ಮಿಸಿ ಕೊಂಡಿದ್ದ ಮೆಟ್ಟಿಲುಗಳನ್ನು ಜೆಸಿಬಿಯಿಂದ ತೆರವು ಕಳೆದ ನಾಲ್ಕು ದಿನಗಳ ಹಿಂದೆಯೇ ಒತ್ತುವರಿ ತೆರವು ಮಾಡುವುದಾಗಿ ಸೂಚಿಸಿದ್ದ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣ
    2
    ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ
ಭರದಿಂದ ಸಾಗಿದ ಪುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ
ಹೊಸಕೋಟೆ ಪಟ್ಟಣದ ಮಾರುಕಟ್ಟೆ ಪ್ರದೇಶ ಪ್ರಮುಖ ಬೀದಿಗಳಲ್ಲಿ ತೆರವು ಕಾರ್ಯಾಚರಣೆ
ಪುಟ್ ಪಾತ್ ರಸ್ತೆಯನ್ನ ಒತ್ತುವರಿ ಮಾಡಿಕೊಂಡಿದ್ದ ಕೆಲ ಅಂಗಡಿಗಳ ಮಾಲೀಕರು
ಸೀಮೆಂಟ್ ಮೂಲಕ ನಿರ್ಮಿಸಿ ಕೊಂಡಿದ್ದ ಮೆಟ್ಟಿಲುಗಳನ್ನು ಜೆಸಿಬಿಯಿಂದ ತೆರವು
ಕಳೆದ ನಾಲ್ಕು ದಿನಗಳ ಹಿಂದೆಯೇ ಒತ್ತುವರಿ ತೆರವು ಮಾಡುವುದಾಗಿ ಸೂಚಿಸಿದ್ದ ಅಧಿಕಾರಿಗಳು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    15 hrs ago
  • *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ* *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ* *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ* *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ* *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ*
    2
    *ಕೋಲಾರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಬಿಗಿ ಪೊಲೀಸ್ ಬಂದೋಬಸ್ತ್ : ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಲ ಪ್ರದರ್ಶನ*

    user_ಎಸ್.ಎನ್.ಪ್ರಕಾಶ್
    ಎಸ್.ಎನ್.ಪ್ರಕಾಶ್
    Grain Trader ಕೋಲಾರ, ಕೋಲಾರ, ಕರ್ನಾಟಕ•
    5 hrs ago
  • ಬಂಗಾರಪೇಟೆ ಗೃಹಜ್ಯೋತಿ ಪರಿಶೀಲನೆಗೆ ನಿರ್ಲಕ್ಷ್ಯ: ಆಸಿಡ್ ಬಾಟಲಿ ಹಿಡಿದು ಹೈಡ್ರಾಮಾ!ಬೆಸ್ಕಾಂ ಕಚೇರಿ ಮುಂದೆ ಮೂವರು ಜಿವಿಪಿಗಳ ಆತ್ಮಹತ್ಯೆ ಬೆದರಿಕೆ; ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಮನೆ ಪರಿಶೀಲನೆಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ಇಲಾಖೆಯ ಮೂವರು ಜಿವಿಪಿಗಳು ಆಸಿಡ್ ಬಾಟಲಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಹೈಡ್ರಾಮಾ ನಡೆದ ಘಟನೆ ಬೆಸ್ಕಾಂ ಕಚೇರಿ ಮುಂದೆ ನಡೆದಿದೆ. ಜಿವಿಪಿಗಳಾದ ಅಶ್ವಥ್ ನಾರಾಯಣ, ಮಹೇಶ್ ಕುಮಾರ್ ಹಾಗೂ ನಿರಂಜನ್ ಅವರು ಬೆಳಗ್ಗೆ ಸುಮಾರು 9.30ರ ವೇಳೆಗೆ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಆಸಿಡ್ ಬಾಟಲಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಮೂವರನ್ನು ಸಮಾಧಾನಪಡಿಸಿ, ಆಸಿಡ್ ಬಾಟಲಿಯನ್ನು ವಶಕ್ಕೆ ಪಡೆದರು. ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ನೈಜ ಸ್ಥಿತಿಗತಿ ಪರಿಶೀಲಿಸುವಂತೆ ಸರ್ಕಾರ ಬೆಸ್ಕಾಂಗೆ ಸೂಚಿಸಿದೆ. ಫಲಾನುಭವಿಗಳ ಪಟ್ಟಿಯೊಂದಿಗೆ ಮನೆಮನೆಗೆ ತೆರಳಿ ಪರಿಶೀಲನೆ ನಡೆಸಿ, ಅರ್ಹತೆ ಇಲ್ಲದಿರುವ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯ ದುರುಪಯೋಗವಾಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಪರಿಶೀಲನೆಗೆ ಒತ್ತು ನೀಡಲಾಗಿದ್ದು, ಆಗಸ್ಟ್ 31ರೊಳಗೆ ಪರಿಶೀಲನೆ ಪೂರ್ಣಗೊಳಿಸುವ ಗುರಿ ನೀಡಲಾಗಿದೆ. ಘಟನೆ ಕುರಿತು ಬೆಸ್ಕಾಂ ಎಇಇ ಸುಕುಮಾರ್ ರಾಜು ಸ್ಪಷ್ಟನೆ ನೀಡಿ, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನೆ ಕಾರ್ಯದಲ್ಲಿ ಈ ಮೂವರು ಜಿವಿಪಿಗಳು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂದು ಆರೋಪಿಸಿದರು. ಅಶ್ವಥ್ ನಾರಾಯಣ, ಮಹೇಶ್ ಕುಮಾರ್ ಹಾಗೂ ನಿರಂಜನ್ ಅವರಿಗೆ ತಲಾ 400ಕ್ಕೂ ಹೆಚ್ಚು ಗೃಹಜ್ಯೋತಿ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಈ ಪಟ್ಟಿಯಲ್ಲಿನ ಫಲಾನುಭವಿಗಳ ಪರಿಶೀಲನೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಗಣನೀಯ ಸಂಖ್ಯೆಯ ಫಲಾನುಭವಿಗಳ ಪರಿಶೀಲನೆ ಬಾಕಿ ಉಳಿದಿದೆ ಎಂದು ತಿಳಿಸಿದರು. ಸರ್ಕಾರ ನಿಗದಿಪಡಿಸಿರುವ ಗಡುವಿನೊಳಗೆ ಪರಿಶೀಲನೆ ಪೂರ್ಣಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಕಾರ್ಯದ ಪ್ರಗತಿ ಸಾಧಿಸುವಂತೆ ಜಿವಿಪಿಗಳಿಗೆ ಸೂಚಿಸಲಾಗಿತ್ತು. ಕರ್ತವ್ಯ ನಿರ್ವಹಣೆ ಕುರಿತು ಪ್ರಶ್ನಿಸಿದಾಗ ಈ ರೀತಿಯಾಗಿ ಆಸಿಡ್ ಬಾಟಲಿ ಹಿಡಿದು ಆತ್ಮಹತ್ಯೆ ಬೆದರಿಕೆ ಹಾಕಿರುವುದು ಸರಿಯಲ್ಲ ಎಂದು ಎಇಇ ಹೇಳಿದರು. ಇತ್ತ ಜಿವಿಪಿಗಳಾದ ಅಶ್ವಥ್ ನಾರಾಯಣ, ಮಹೇಶ್ ಕುಮಾರ್ ಹಾಗೂ ನಿರಂಜನ್ ಅವರು ಅಧಿಕಾರಿಗಳ ಆರೋಪವನ್ನು ತಳ್ಳಿಹಾಕಿದ್ದಾರೆ. ತಮಗೆ ನೀಡಲಾಗಿದ್ದ ಫಲಾನುಭವಿಗಳ ಪಟ್ಟಿಯಲ್ಲಿ ಸುಮಾರು ಶೇ.80ರಷ್ಟು ಮನೆಗಳ ಪರಿಶೀಲನೆ ಪೂರ್ಣಗೊಳಿಸಲಾಗಿದೆ. ಉಳಿದ ಫಲಾನುಭವಿಗಳ ಪೈಕಿ ಹಲವರು ಸ್ಥಳದಲ್ಲಿ ಸಿಗದಿರುವುದು, ಮನೆ ಬದಲಿಸಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಪರಿಶೀಲನೆ ಸಾಧ್ಯವಾಗುತ್ತಿಲ್ಲ. ಈ ಕುರಿತು ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ. ಐದು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣದ ವೆಚ್ಚ ಭರಿಸಲು ತೊಂದರೆಯಾಗಿದೆ. ಇಲಾಖೆಯಲ್ಲಿನ ಆಂತರಿಕ ಸಮಸ್ಯೆಯಿಂದ ತಮ್ಮ ಮೇಲೆ ಹೆಚ್ಚಿನ ಕೆಲಸದ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜಿವಿಪಿಗಳು ಆಸಿಡ್ ಬಾಟಲಿ ಹಿಡಿದಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿದರು. ಬಳಿಕ ಎಇಇ ಸುಕುಮಾರ್ ರಾಜು ಹಾಗೂ ಮೂವರು ಜಿವಿಪಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಕರ್ತವ್ಯ ನಿರ್ವಹಿಸದೆ ವೇತನ ಪಡೆಯುವುದು ಹೇಗೆ? ಅಗತ್ಯ ದಾಖಲೆಗಳನ್ನು ನೀಡದೆ ವೇತನ ಪಾವತಿಸಲು ಸಾಧ್ಯವೇ? ಎಂದು ಬೆಸ್ಕಾಂ ಎಇಇ ಸುಕುಮಾರ್ ರಾಜು ಪ್ರಶ್ನಿಸಿದರೆ, ಕೆಲಸ ಮಾಡಿದ್ದರೂ ಐದು ತಿಂಗಳಿಂದ ವೇತನ ನೀಡಿಲ್ಲ ಎಂದು ಜಿವಿಪಿಗಳು ಪ್ರತಿಯಾಗಿ ವಾದಿಸಿದರು. ಈ ಘಟನೆ ಇದೀಗ ಬೆಸ್ಕಾಂ ಇಲಾಖೆಯಲ್ಲಿನ ಕೆಲಸದ ಪ್ರಗತಿ ಹಾಗೂ ವೇತನ ಪಾವತಿ ವಿಚಾರವನ್ನು ಮುನ್ನೆಲೆಗೆ ತಂದಿದೆ. ಜಿವಿಪಿಗಳು ಕರ್ತವ್ಯ ನಿರ್ವಹಿಸಿಲ್ಲ ಎಂಬ ಅಧಿಕಾರಿಗಳ ಆರೋಪ ಹಾಗೂ ತಾವು ಕೆಲಸ ಮಾಡಿದ್ದರೂ ವೇತನ ನೀಡಿಲ್ಲ ಎಂಬ ಜಿವಿಪಿಗಳ ಆರೋಪವಾಗಿದೆ.
    1
    ಬಂಗಾರಪೇಟೆ ಗೃಹಜ್ಯೋತಿ ಪರಿಶೀಲನೆಗೆ ನಿರ್ಲಕ್ಷ್ಯ: ಆಸಿಡ್ ಬಾಟಲಿ ಹಿಡಿದು ಹೈಡ್ರಾಮಾ!ಬೆಸ್ಕಾಂ ಕಚೇರಿ ಮುಂದೆ ಮೂವರು ಜಿವಿಪಿಗಳ ಆತ್ಮಹತ್ಯೆ ಬೆದರಿಕೆ; 

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಮನೆ ಪರಿಶೀಲನೆಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಸ್ಕಾಂ ಇಲಾಖೆಯ ಮೂವರು ಜಿವಿಪಿಗಳು ಆಸಿಡ್ ಬಾಟಲಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಹೈಡ್ರಾಮಾ ನಡೆದ ಘಟನೆ ಬೆಸ್ಕಾಂ ಕಚೇರಿ ಮುಂದೆ ನಡೆದಿದೆ.
ಜಿವಿಪಿಗಳಾದ ಅಶ್ವಥ್ ನಾರಾಯಣ, ಮಹೇಶ್ ಕುಮಾರ್ ಹಾಗೂ ನಿರಂಜನ್ ಅವರು ಬೆಳಗ್ಗೆ ಸುಮಾರು 9.30ರ ವೇಳೆಗೆ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಆಸಿಡ್ ಬಾಟಲಿ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಮೂವರನ್ನು ಸಮಾಧಾನಪಡಿಸಿ, ಆಸಿಡ್ ಬಾಟಲಿಯನ್ನು ವಶಕ್ಕೆ ಪಡೆದರು.
ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ನೈಜ ಸ್ಥಿತಿಗತಿ ಪರಿಶೀಲಿಸುವಂತೆ ಸರ್ಕಾರ ಬೆಸ್ಕಾಂಗೆ ಸೂಚಿಸಿದೆ. ಫಲಾನುಭವಿಗಳ ಪಟ್ಟಿಯೊಂದಿಗೆ ಮನೆಮನೆಗೆ ತೆರಳಿ ಪರಿಶೀಲನೆ ನಡೆಸಿ, ಅರ್ಹತೆ ಇಲ್ಲದಿರುವ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.
ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯ ದುರುಪಯೋಗವಾಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಪರಿಶೀಲನೆಗೆ ಒತ್ತು ನೀಡಲಾಗಿದ್ದು, ಆಗಸ್ಟ್ 31ರೊಳಗೆ ಪರಿಶೀಲನೆ ಪೂರ್ಣಗೊಳಿಸುವ ಗುರಿ ನೀಡಲಾಗಿದೆ.
ಘಟನೆ ಕುರಿತು ಬೆಸ್ಕಾಂ ಎಇಇ ಸುಕುಮಾರ್ ರಾಜು ಸ್ಪಷ್ಟನೆ ನೀಡಿ, ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಶೀಲನೆ ಕಾರ್ಯದಲ್ಲಿ ಈ ಮೂವರು ಜಿವಿಪಿಗಳು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ ಎಂದು ಆರೋಪಿಸಿದರು.
ಅಶ್ವಥ್ ನಾರಾಯಣ, ಮಹೇಶ್ ಕುಮಾರ್ ಹಾಗೂ ನಿರಂಜನ್ ಅವರಿಗೆ ತಲಾ 400ಕ್ಕೂ ಹೆಚ್ಚು ಗೃಹಜ್ಯೋತಿ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಈ ಪಟ್ಟಿಯಲ್ಲಿನ ಫಲಾನುಭವಿಗಳ ಪರಿಶೀಲನೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಗಣನೀಯ ಸಂಖ್ಯೆಯ ಫಲಾನುಭವಿಗಳ ಪರಿಶೀಲನೆ ಬಾಕಿ ಉಳಿದಿದೆ ಎಂದು ತಿಳಿಸಿದರು.
ಸರ್ಕಾರ ನಿಗದಿಪಡಿಸಿರುವ ಗಡುವಿನೊಳಗೆ ಪರಿಶೀಲನೆ ಪೂರ್ಣಗೊಳಿಸಬೇಕಿರುವ ಹಿನ್ನೆಲೆಯಲ್ಲಿ ಕಾರ್ಯದ ಪ್ರಗತಿ ಸಾಧಿಸುವಂತೆ ಜಿವಿಪಿಗಳಿಗೆ ಸೂಚಿಸಲಾಗಿತ್ತು. ಕರ್ತವ್ಯ ನಿರ್ವಹಣೆ ಕುರಿತು ಪ್ರಶ್ನಿಸಿದಾಗ ಈ ರೀತಿಯಾಗಿ ಆಸಿಡ್ ಬಾಟಲಿ ಹಿಡಿದು ಆತ್ಮಹತ್ಯೆ ಬೆದರಿಕೆ ಹಾಕಿರುವುದು ಸರಿಯಲ್ಲ ಎಂದು ಎಇಇ ಹೇಳಿದರು.
ಇತ್ತ ಜಿವಿಪಿಗಳಾದ ಅಶ್ವಥ್ ನಾರಾಯಣ, ಮಹೇಶ್ ಕುಮಾರ್ ಹಾಗೂ ನಿರಂಜನ್ ಅವರು ಅಧಿಕಾರಿಗಳ ಆರೋಪವನ್ನು ತಳ್ಳಿಹಾಕಿದ್ದಾರೆ.
ತಮಗೆ ನೀಡಲಾಗಿದ್ದ ಫಲಾನುಭವಿಗಳ ಪಟ್ಟಿಯಲ್ಲಿ ಸುಮಾರು ಶೇ.80ರಷ್ಟು ಮನೆಗಳ ಪರಿಶೀಲನೆ ಪೂರ್ಣಗೊಳಿಸಲಾಗಿದೆ. ಉಳಿದ ಫಲಾನುಭವಿಗಳ ಪೈಕಿ ಹಲವರು ಸ್ಥಳದಲ್ಲಿ ಸಿಗದಿರುವುದು, ಮನೆ ಬದಲಿಸಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಪರಿಶೀಲನೆ ಸಾಧ್ಯವಾಗುತ್ತಿಲ್ಲ. ಈ ಕುರಿತು ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದ್ದಾರೆ.
ಐದು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣದ ವೆಚ್ಚ ಭರಿಸಲು ತೊಂದರೆಯಾಗಿದೆ. ಇಲಾಖೆಯಲ್ಲಿನ ಆಂತರಿಕ ಸಮಸ್ಯೆಯಿಂದ ತಮ್ಮ ಮೇಲೆ ಹೆಚ್ಚಿನ ಕೆಲಸದ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜಿವಿಪಿಗಳು ಆಸಿಡ್ ಬಾಟಲಿ ಹಿಡಿದಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು ಅವರನ್ನು ಸಮಾಧಾನಪಡಿಸಿದರು. ಬಳಿಕ ಎಇಇ ಸುಕುಮಾರ್ ರಾಜು ಹಾಗೂ ಮೂವರು ಜಿವಿಪಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಕರ್ತವ್ಯ ನಿರ್ವಹಿಸದೆ ವೇತನ ಪಡೆಯುವುದು ಹೇಗೆ? ಅಗತ್ಯ ದಾಖಲೆಗಳನ್ನು ನೀಡದೆ ವೇತನ ಪಾವತಿಸಲು ಸಾಧ್ಯವೇ? ಎಂದು ಬೆಸ್ಕಾಂ ಎಇಇ ಸುಕುಮಾರ್ ರಾಜು ಪ್ರಶ್ನಿಸಿದರೆ, ಕೆಲಸ ಮಾಡಿದ್ದರೂ ಐದು ತಿಂಗಳಿಂದ ವೇತನ ನೀಡಿಲ್ಲ ಎಂದು ಜಿವಿಪಿಗಳು ಪ್ರತಿಯಾಗಿ ವಾದಿಸಿದರು.
ಈ ಘಟನೆ ಇದೀಗ ಬೆಸ್ಕಾಂ ಇಲಾಖೆಯಲ್ಲಿನ ಕೆಲಸದ ಪ್ರಗತಿ ಹಾಗೂ ವೇತನ ಪಾವತಿ ವಿಚಾರವನ್ನು ಮುನ್ನೆಲೆಗೆ ತಂದಿದೆ. ಜಿವಿಪಿಗಳು ಕರ್ತವ್ಯ ನಿರ್ವಹಿಸಿಲ್ಲ ಎಂಬ ಅಧಿಕಾರಿಗಳ ಆರೋಪ ಹಾಗೂ ತಾವು ಕೆಲಸ ಮಾಡಿದ್ದರೂ ವೇತನ ನೀಡಿಲ್ಲ ಎಂಬ ಜಿವಿಪಿಗಳ ಆರೋಪವಾಗಿದೆ.
    user_Vishnu Press
    Vishnu Press
    Local News Reporter ಬಂಗಾರಪೇಟೆ, ಕೋಲಾರ, ಕರ್ನಾಟಕ•
    5 hrs ago
  • Keywords (ಕೀವರ್ಡ್‌ಗಳು) Kannada: ಸಕ್ಕರೆ ಬೆಲೆ ಏರಿಕೆ, ಕರ್ನಾಟಕ ಸರ್ಕಾರ ಆದೇಶ, ಸಕ್ಕರೆ ದರ ಹೆಚ್ಚಳ, ಸಕ್ಕರೆ ಸಚಿವಾಲಯ, ಕರ್ನಾಟಕ ಸುದ್ದಿಗಳು, ಬೆಲೆ ಏರಿಕೆ English: Sugar Price Hike Karnataka, Karnataka Govt Sugar Order, Sugar Rate Hike News, Karnataka News, Price Rise Karnataka Hashtags (ಹ್ಯಾಷ್‌ಟ್ಯಾಗ್‌ಗಳು) #SugarPriceHike #KarnatakaGovt #SugarRateHike #KarnatakaNews #PriceRise #KannadaNews #KarnatakaUpdates Keywords (ಕೀವರ್ಡ್‌ಗಳು) Kannada: ಸಕ್ಕರೆ ಬೆಲೆ ಏರಿಕೆ, ಕರ್ನಾಟಕ ಸರ್ಕಾರ ಆದೇಶ, ಸಕ್ಕರೆ ದರ ಹೆಚ್ಚಳ, ಸಕ್ಕರೆ ಸಚಿವಾಲಯ, ಕರ್ನಾಟಕ ಸುದ್ದಿಗಳು, ಬೆಲೆ ಏರಿಕೆ English: Sugar Price Hike Karnataka, Karnataka Govt Sugar Order, Sugar Rate Hike News, Karnataka News, Price Rise Karnataka Hashtags (ಹ್ಯಾಷ್‌ಟ್ಯಾಗ್‌ಗಳು) #SugarPriceHike #KarnatakaGovt #SugarRateHike #KarnatakaNews #PriceRise #KannadaNews #KarnatakaUpdates
    1
    Keywords (ಕೀವರ್ಡ್‌ಗಳು)
Kannada: ಸಕ್ಕರೆ ಬೆಲೆ ಏರಿಕೆ, ಕರ್ನಾಟಕ ಸರ್ಕಾರ ಆದೇಶ, ಸಕ್ಕರೆ ದರ ಹೆಚ್ಚಳ, ಸಕ್ಕರೆ ಸಚಿವಾಲಯ, ಕರ್ನಾಟಕ ಸುದ್ದಿಗಳು, ಬೆಲೆ ಏರಿಕೆ
English: Sugar Price Hike Karnataka, Karnataka Govt Sugar Order, Sugar Rate Hike News, Karnataka News, Price Rise Karnataka
Hashtags (ಹ್ಯಾಷ್‌ಟ್ಯಾಗ್‌ಗಳು)
#SugarPriceHike #KarnatakaGovt #SugarRateHike #KarnatakaNews #PriceRise #KannadaNews #KarnatakaUpdates
Keywords (ಕೀವರ್ಡ್‌ಗಳು)
Kannada: ಸಕ್ಕರೆ ಬೆಲೆ ಏರಿಕೆ, ಕರ್ನಾಟಕ ಸರ್ಕಾರ ಆದೇಶ, ಸಕ್ಕರೆ ದರ ಹೆಚ್ಚಳ, ಸಕ್ಕರೆ ಸಚಿವಾಲಯ, ಕರ್ನಾಟಕ ಸುದ್ದಿಗಳು, ಬೆಲೆ ಏರಿಕೆ
English: Sugar Price Hike Karnataka, Karnataka Govt Sugar Order, Sugar Rate Hike News, Karnataka News, Price Rise Karnataka
Hashtags (ಹ್ಯಾಷ್‌ಟ್ಯಾಗ್‌ಗಳು)
#SugarPriceHike #KarnatakaGovt #SugarRateHike #KarnatakaNews #PriceRise #KannadaNews #KarnatakaUpdates
    user_Yusuf Bepari
    Yusuf Bepari
    Local News Reporter ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಕರ್ನಾಟಕ•
    21 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.