logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಎಸ್ ಐಆರ್ : ಯಾದಗಿರಿ ಜಿಲ್ಲೆಯವಕರಡು ಮತದಾರರ ಪಟ್ಟಿ ಪ್ರಕಟಿಸಿದ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಎಲ್ಲ ತಹಶೀಲ್ದಾರ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಪಟ್ಟಿ ಪ್ರಕಟ *ಯಾದಗಿರಿ:* ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರಡು ಮತದಾರರ ಪಟ್ಟಿಯನ್ನು ಸೋಮವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಾದ ಶ್ರೀ ರಾಹುಲ್ ತುಕಾರಾಮ ಪಾಂಡ್ವೆ ಅವರು ತಿಳಿಸಿದರು.ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಣದಲ್ಲಿ‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಕಚೇರಿಗಳು, ಹಾಗೂ ಎಲ್ಲಾ ಮತಗಟ್ಟೆಗಳಲ್ಲಿ ಈ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.ಅಕ್ಟೋಬರ್ 22 ರಂದು ಆಕ್ಷೇಪಣೆಗೆ ಕೊನೆ ದಿನ: ಮತದಾರರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕರಡು ಪಟ್ಟಿಯನ್ನು ಪರಿಶೀಲಿಸಿ, ಯಾವುದೇ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್ 24 ರಿಂದ ಸೆಪ್ಟೆಂಬರ್ 23ರವರೆಗೆ ಹಾಗೂ ಆಗಸ್ಟ್ 24ರಿಂದ ಅಕ್ಟೋಬರ್ 22 ರವರೆಗೆ ಆಕ್ಷೇಪಣೆ ವಿಲೇವಾರಿ ಮಾಡಲಾಗುವುದು. ಹೊಸ ಮತದಾರರ ನೋಂದಣಿ:ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ಹಾಗೂ 01/10/2026 ಕ್ಕೆ 18 ವರ್ಷ ವಯಸ್ಸು ಪೂರ್ಣಗೊಳ್ಳುವ ಯುವಕ/ ಯುವತಿಯರು ನಮೂನೆ-6 ನ್ನು ಘೋಷಣೆ ಪತ್ರದೊಂದಿಗೆ ಬಿಎಲ್‌ಒ ನೀಡುವುದು ಅಥವಾ ವೋಟರ್ ಸರ್ವಿಸ್ ಪೋರ್ಟಲ್ ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. 10,53,236ಮತದಾರರು:ಮತದಾರರ ಪಟ್ಟಿ ಪರಿಷ್ಕರಣೆಯ ನಂತರ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 10,53,236 ಮತದಾರರಿದ್ದಾರೆ. 8.64 ಲಕ್ಷ ಮತದಾರರ ಡಿಜಿಟೈಜೇಶನ್ ಆಗಿರುತ್ತಾರೆ. ಈ ಪೈಕಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನೋ- ಮ್ಯಾಪಿಂಗ್ 12264 ಹಾಗೂ 42798 ಅನಾಮಲೀಸ್ ಮತದಾರರು ಇದ್ದು, ಸುಮಾರು 55 ಸಾವಿರಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ನೀಡಿ ಅವಶ್ಯಕ ದಾಖಲೆಗಳನ್ನು ಪಡೆದು ಅಹವಾಲು ಮಾಡಲಾಗುವುದು.ನಂತರ ಮೆಲ್ಮಾನವಿಗೂ ಕೂಡ ಅವಕಾಶವಿದೆ ಎಂದು ಹೇಳಿದರು.ಪ್ರಥಮ ಮೇಲ್ಮನವಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಹಾಗೂ ದ್ವಿತೀಯ ಮೇಲ್ಮನವಿಯನ್ನು ಮಾನ್ಯ ಮುಖ್ಯ ಚುನಾವಣಾ ಅಧಿಕಾರಿಗಳು ಕರ್ನಾಟಕ ಬೆಂಗಳೂರು ರವರಿಗೆ ಸಲ್ಲಿಸಲು ಅವಕಾಶವಿರುತ್ತದೆ. ಮನೆ ಮನೆ ಸಮೀಕ್ಷೆ ಕಾರ್ಯದ ನಂತರ ಜಿಲ್ಲೆಯಲ್ಲಿ 28 ಹೊಸ ಮತಗಟ್ಟೆಗಳನ್ನು ರೂಪಿಸಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 1162ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಜಿಲ್ಲೆಯಲ್ಲಿ ಬಿ ಎಲ್ ಓ ಗಳು ಅವಿರತವಾಗಿ ಶ್ರಮಿಸಿದ್ದಾರೆ. ವಿವಿಧ ದೂರುಗಳಿಗೆ ತಕ್ಷಣ ಸ್ಪಂದಿಸಲಗುತ್ತಿದೆ. ಹೊಸದಾಗಿ ಹೆಸರು ಸೇರ್ಪಡೆ ಗೆ ಅರ್ಜಿ ನಮೂನೆ 6 ಹಾಗೂ ವರ್ಗಾವಣೆಗೆ ಫಾರ್ಮ್ 8 ಸಲ್ಲಿಸಬೇಕು. ಸಾರ್ವಜನಿಕರು, ರಾಜಕೀಯ ಪಕ್ಷಗಳ ಬಿಎಲ್‌ಎಗಳು ಸೂಕ್ತ ಸಹಕಾರ ನೀಡಿ ಮತದಾರರ ಸೇರ್ಪಡೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಬೇಕು.ಕರಡು ಮತದಾರರ ಪಟ್ಟಿ ಪರಿಶೀಲಿಸಿ ನಿಗದಿತ ಅವಧಿಯೊಳಗೆ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸುವಂತೆ ಅವರು ತಿಳಿಸಿದರು. ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದಂತೆ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಮನೆ-ಮನೆ ಸಮೀಕ್ಷೆ ಹಾಗೂ ಪರಿಶೀಲನೆ ಕಾರ್ಯದಲ್ಲಿ ಗೈರು ಹಾಜರಿರುವವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತಪಟ್ಟವರು, ಈಗಾಗಲೇ ನೋಂದಾಯಿಸಿಕೊಂಡಿರುವ (ಡುಪ್ಲಿಕೇಟ್) ಹಾಗೂ ಇತರೆ ವರ್ಗಗಳಿಗೆ ಸೇರಿದ ಒಟ್ಟು 189233 (UEF) ಮತದಾರರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅಪರ್ ಜಿಲ್ಲಾಧಿಕಾರಿ ರಮೇಶ ಕೋಲಾರ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್ ಉಪಸ್ಥಿತರಿದ್ದರು.

5 hrs ago
user_ರಾಜಶೇಖರ.ಎನ್.ಮಾಲಿಪಾಟೀಲ
ರಾಜಶೇಖರ.ಎನ್.ಮಾಲಿಪಾಟೀಲ
Local News Reporter ಯಾದಗಿರಿ, ಯಾದಗಿರಿ, ಕರ್ನಾಟಕ•
5 hrs ago
30775a68-acf1-4717-ad19-35213f51c6cf

ಎಸ್ ಐಆರ್ : ಯಾದಗಿರಿ ಜಿಲ್ಲೆಯವಕರಡು ಮತದಾರರ ಪಟ್ಟಿ ಪ್ರಕಟಿಸಿದ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಎಲ್ಲ ತಹಶೀಲ್ದಾರ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಪಟ್ಟಿ ಪ್ರಕಟ *ಯಾದಗಿರಿ:* ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರಡು ಮತದಾರರ ಪಟ್ಟಿಯನ್ನು ಸೋಮವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿಗಳಾದ ಶ್ರೀ ರಾಹುಲ್ ತುಕಾರಾಮ ಪಾಂಡ್ವೆ ಅವರು ತಿಳಿಸಿದರು.ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಣದಲ್ಲಿ‌ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಹಶೀಲ್ದಾರ್ ಕಚೇರಿಗಳು, ಹಾಗೂ ಎಲ್ಲಾ ಮತಗಟ್ಟೆಗಳಲ್ಲಿ ಈ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.ಅಕ್ಟೋಬರ್ 22 ರಂದು ಆಕ್ಷೇಪಣೆಗೆ ಕೊನೆ ದಿನ: ಮತದಾರರು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಕರಡು ಪಟ್ಟಿಯನ್ನು ಪರಿಶೀಲಿಸಿ, ಯಾವುದೇ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಆಗಸ್ಟ್ 24 ರಿಂದ ಸೆಪ್ಟೆಂಬರ್ 23ರವರೆಗೆ ಹಾಗೂ ಆಗಸ್ಟ್ 24ರಿಂದ ಅಕ್ಟೋಬರ್ 22 ರವರೆಗೆ ಆಕ್ಷೇಪಣೆ ವಿಲೇವಾರಿ ಮಾಡಲಾಗುವುದು. ಹೊಸ ಮತದಾರರ ನೋಂದಣಿ:ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ಹಾಗೂ 01/10/2026 ಕ್ಕೆ 18 ವರ್ಷ ವಯಸ್ಸು ಪೂರ್ಣಗೊಳ್ಳುವ ಯುವಕ/ ಯುವತಿಯರು ನಮೂನೆ-6 ನ್ನು ಘೋಷಣೆ ಪತ್ರದೊಂದಿಗೆ ಬಿಎಲ್‌ಒ ನೀಡುವುದು ಅಥವಾ ವೋಟರ್ ಸರ್ವಿಸ್ ಪೋರ್ಟಲ್ ಮೂಲಕ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. 10,53,236ಮತದಾರರು:ಮತದಾರರ ಪಟ್ಟಿ ಪರಿಷ್ಕರಣೆಯ ನಂತರ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 10,53,236 ಮತದಾರರಿದ್ದಾರೆ. 8.64 ಲಕ್ಷ ಮತದಾರರ ಡಿಜಿಟೈಜೇಶನ್ ಆಗಿರುತ್ತಾರೆ. ಈ ಪೈಕಿ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ನೋ- ಮ್ಯಾಪಿಂಗ್ 12264 ಹಾಗೂ 42798 ಅನಾಮಲೀಸ್ ಮತದಾರರು ಇದ್ದು, ಸುಮಾರು 55 ಸಾವಿರಕ್ಕೂ ಹೆಚ್ಚು ಮತದಾರರಿಗೆ ನೋಟಿಸ್ ನೀಡಿ ಅವಶ್ಯಕ ದಾಖಲೆಗಳನ್ನು ಪಡೆದು ಅಹವಾಲು ಮಾಡಲಾಗುವುದು.ನಂತರ ಮೆಲ್ಮಾನವಿಗೂ ಕೂಡ ಅವಕಾಶವಿದೆ ಎಂದು ಹೇಳಿದರು.ಪ್ರಥಮ ಮೇಲ್ಮನವಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಹಾಗೂ ದ್ವಿತೀಯ ಮೇಲ್ಮನವಿಯನ್ನು ಮಾನ್ಯ ಮುಖ್ಯ ಚುನಾವಣಾ ಅಧಿಕಾರಿಗಳು ಕರ್ನಾಟಕ ಬೆಂಗಳೂರು ರವರಿಗೆ ಸಲ್ಲಿಸಲು ಅವಕಾಶವಿರುತ್ತದೆ. ಮನೆ ಮನೆ ಸಮೀಕ್ಷೆ ಕಾರ್ಯದ ನಂತರ ಜಿಲ್ಲೆಯಲ್ಲಿ 28 ಹೊಸ ಮತಗಟ್ಟೆಗಳನ್ನು ರೂಪಿಸಲಾಗಿದ್ದು, ಒಟ್ಟು ಮತಗಟ್ಟೆಗಳ ಸಂಖ್ಯೆ 1162ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಜಿಲ್ಲೆಯಲ್ಲಿ ಬಿ ಎಲ್ ಓ ಗಳು ಅವಿರತವಾಗಿ ಶ್ರಮಿಸಿದ್ದಾರೆ. ವಿವಿಧ ದೂರುಗಳಿಗೆ ತಕ್ಷಣ ಸ್ಪಂದಿಸಲಗುತ್ತಿದೆ. ಹೊಸದಾಗಿ ಹೆಸರು ಸೇರ್ಪಡೆ ಗೆ ಅರ್ಜಿ ನಮೂನೆ 6 ಹಾಗೂ ವರ್ಗಾವಣೆಗೆ ಫಾರ್ಮ್ 8 ಸಲ್ಲಿಸಬೇಕು. ಸಾರ್ವಜನಿಕರು, ರಾಜಕೀಯ ಪಕ್ಷಗಳ ಬಿಎಲ್‌ಎಗಳು ಸೂಕ್ತ ಸಹಕಾರ ನೀಡಿ ಮತದಾರರ ಸೇರ್ಪಡೆ ಹಾಗೂ ಇತರೆ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಬೇಕು.ಕರಡು ಮತದಾರರ ಪಟ್ಟಿ ಪರಿಶೀಲಿಸಿ ನಿಗದಿತ ಅವಧಿಯೊಳಗೆ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸುವಂತೆ ಅವರು ತಿಳಿಸಿದರು. ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದಂತೆ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ಮನೆ-ಮನೆ ಸಮೀಕ್ಷೆ ಹಾಗೂ ಪರಿಶೀಲನೆ ಕಾರ್ಯದಲ್ಲಿ ಗೈರು ಹಾಜರಿರುವವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಮೃತಪಟ್ಟವರು, ಈಗಾಗಲೇ ನೋಂದಾಯಿಸಿಕೊಂಡಿರುವ (ಡುಪ್ಲಿಕೇಟ್) ಹಾಗೂ ಇತರೆ ವರ್ಗಗಳಿಗೆ ಸೇರಿದ ಒಟ್ಟು 189233 (UEF) ಮತದಾರರನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅಪರ್ ಜಿಲ್ಲಾಧಿಕಾರಿ ರಮೇಶ ಕೋಲಾರ್, ಸಹಾಯಕ ಆಯುಕ್ತ ಶ್ರೀಧರ್ ಗೋಟುರ್ ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಯಾದಗಿರಿ ನಗರದ ಗಾಂಧಿ ಚೌಕಿನಲ್ಲಿ ರಾಖಿಯ ಅಂಗಡಿಗಳು ಎಲ್ಲಿ ಮಕ್ಕಳು ಮತ್ತು ಮಹಿಳೆಯರು ರಾಖಿಯನ್ನು ಕರಿಸಲು ದೃಶ್ಯ
    1
    ಯಾದಗಿರಿ ನಗರದ ಗಾಂಧಿ ಚೌಕಿನಲ್ಲಿ ರಾಖಿಯ ಅಂಗಡಿಗಳು ಎಲ್ಲಿ ಮಕ್ಕಳು ಮತ್ತು ಮಹಿಳೆಯರು ರಾಖಿಯನ್ನು ಕರಿಸಲು ದೃಶ್ಯ
    user_Ramesh Vishwakarma
    Ramesh Vishwakarma
    ಯಾದಗಿರಿ, ಯಾದಗಿರಿ, ಕರ್ನಾಟಕ•
    4 hrs ago
  • *ಅಕ್ರಮ, ಗ್ಯಾಸ್ ಕಳ್ಳತನ ಹಾಗೂ ಗ್ರಾಹಕರಿಗೆ ವಂಚನೆ ಕುರಿತು ತನಿಖೆಗೆ ಜಿಲ್ಲಾಧಿಕಾರಿಗೆ ಮನವಿ* ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿರುವ ಇಂಡಿಯನ್ ಗ್ಯಾಸ್ ಸಿಲೆಂಡರ್ ವಿತರಣಾ ಕೇಂದ್ರದಲ್ಲಿ ನಡೆಯುತ್ತಿರುವ ಅಕ್ರಮ, ಗ್ಯಾಸ್ ಕಳ್ಳತನ ಹಾಗೂ ಗ್ರಾಹಕರಿಗೆ ವಂಚನೆ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು. ಮಾನ್ಯರೇ, ಈ ಮೇಲ್ಕಂಡ ವಿಷಯಕ್ಕೆ ಸಂಬAಧಿಸಿದAತೆ, ಜಯ ಕರ್ನಾಟಕ ಜನಪರ ವೇದಿಕೆ ತಮ್ಮಲ್ಲಿ ಈ ಮನವಿ ಮೂಲಕ ವಿನಂತಿಸಿಕೊಳ್ಳುವುದೇನೆAದರೆ, ಶಹಾಪುರ ತಾಲೂಕಿನ ಸಗರ.ಬಿ ಗ್ರಾಮದಲ್ಲಿರುವ ಇಂಡಿಯನ್ ಗ್ಯಾಸ್ ಸಿಲೆಂಡರ್ ವಿತರಣಾ ಕೇಂದ್ರದಲ್ಲಿ ಗ್ರಾಹಕರಿಗೆ ಗ್ಯಾಸ್ ಸಿಲೆಂಡರ್ ವಿತರಿಸುವ ಸಂದರ್ಭದಲ್ಲಿ ಹಲವು ಅಕ್ರಮಗಳು ನಡೆಯುತ್ತಿವೆ. ಕಂಪನಿಯಿAದ ಬಂದ ಗ್ಯಾಸ್ ಸಿಲೆಂಡರ್‌ನಲ್ಲಿರುವ ಸುಮಾರು ೧೫ ಕೆ.ಜಿ. ಗ್ಯಾಸ್‌ನಲ್ಲಿ ಸ್ವಲ್ಪ ಪ್ರಮಾಣವನ್ನು ಖಾಲಿ ಇರುವ ಗ್ಯಾಸ್‌ಗಳಿಗೆ ಡಂಪ್ ಮಾಡಿ ಅಕ್ರಮವಾಗಿ ತೆಗೆದು, ಗ್ರಾಹಕರಿಗೆ ಕಡಿಮೆ ಪ್ರಮಾಣದ ಗ್ಯಾಸ್ ಇರುವ ಸಿಲೆಂಡರ್‌ಗಳನ್ನು ವಿತರಿಸಲಾಗುತ್ತಿದೆ ಇದರಿಂದ ಗ್ರಾಹಕರು ಆರ್ಥಿಕವಾಗಿ ವಂಚನೆಗೊಳಗಾಗುತ್ತಿದ್ದಾರೆ. ಇದಲ್ಲದೇ, ಗ್ರಾಹಕರಿಂದ ಮುಂಗಡವಾಗಿ OPT ಪಡೆದುಕೊಂಡು, ಗ್ಯಾಸ್ ಸಿಲೆಂಡರ್ ವಿತರಣೆ ಮಾಡದೇ, ಅದೇ ಸಿಲೆಂಡರ್‌ಗಳನ್ನು ಇತರರಿಗೆ ಅಕ್ರಮವಾಗಿ ಹೆಚ್ಚಿನ ಮೊತ್ತಕ್ಕೆ ಬೇರೆಯವರಿಗೆ ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ಕ್ರಮದಿಂದ ನೈಜ ಗ್ರಾಹಕರಿಗೆ ಗ್ಯಾಸ್ ಸಿಗದೆ ತೀವ್ರ ತೊಂದರೆ ಉಂಟಾಗುತ್ತಿದೆ. ಅಲ್ಲದೆ, ಸರ್ಕಾರಿ ರಜೆ ದಿನಗಳಲ್ಲಿಯೂ ಗ್ಯಾಸ್ ಏಜೆನ್ಸಿಯನ್ನು ತೆರೆದು ನಿಯಮಬಾಹಿರವಾಗಿ ವ್ಯವಹಾರ ನಡೆಸಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದು ಅಗತ್ಯವಾಗಿದೆ. ಆದ್ದರಿಂದ, ಸಗರ ಗ್ರಾಮದ ಇಂಡಿಯನ್ ಗ್ಯಾಸ್ ವಿತರಣಾ ಕೇಂದ್ರದ ವಿರುದ್ಧ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳ ಮೂಲಕ ಪರಿಶೀಲನೆ ಮತ್ತು ತನಿಖೆ ನಡೆಸಿ, ಗ್ಯಾಸ್‌ನ ತೂಕ, ವಿತರಣೆ ದಾಖಲೆಗಳು, OTP ದಾಖಲೆಗಳು, ಮಾರಾಟದ ವಿವರಗಳು ಹಾಗೂ ಗ್ರಾಹಕರಿಗೆ ನೀಡಿರುವ ಸಿಲೆಂಡರ್‌ಗಳ ಕುರಿತು ಪರಿಶೀಲನೆ ನಡೆಸಬೇಕು. ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಂಡು, ಗ್ರಾಹಕರಿಗೆ ನ್ಯಾಯ ಒದಗಿಸಬೇಕೆಂದು ವಿನಂತಿಸುತ್ತೇನೆ. ಈ ಸಂದರ್ಭದಲ್ಲಿ ಸೊಪಣ್ಣ ತಾಲೂಕ ಅಧ್ಯಕ್ಷರು, ಜಗದೇವಿ ಹಳಿಸಗರ, ಜಯ ಶಹಾಪುರ, ಜ್ಯೋತಿ ಶಹಾಪುರ, ಪ್ರದೀಪ್ ಅಣಬಿ, ಶರಣು ಖಾನಾಪುರ, ರೆಡ್ಡಿ ಖಾನಾಪುರ, ಅರುಣಾ ಸಾಹುಕಾರ ಖಾನಾಪುರ, ಭೀಮರಾಯ ಬೀದರಾಣಿ, ರಾಮು, ವೆಂಕಟೇಶ ನಾಯಕ ಆಲ್ದಾಳ,
    4
    *ಅಕ್ರಮ, ಗ್ಯಾಸ್ ಕಳ್ಳತನ ಹಾಗೂ ಗ್ರಾಹಕರಿಗೆ ವಂಚನೆ ಕುರಿತು ತನಿಖೆಗೆ ಜಿಲ್ಲಾಧಿಕಾರಿಗೆ ಮನವಿ*  
ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿರುವ ಇಂಡಿಯನ್ ಗ್ಯಾಸ್ ಸಿಲೆಂಡರ್ ವಿತರಣಾ ಕೇಂದ್ರದಲ್ಲಿ ನಡೆಯುತ್ತಿರುವ ಅಕ್ರಮ, ಗ್ಯಾಸ್ ಕಳ್ಳತನ ಹಾಗೂ ಗ್ರಾಹಕರಿಗೆ ವಂಚನೆ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು.
ಮಾನ್ಯರೇ,
ಈ ಮೇಲ್ಕಂಡ ವಿಷಯಕ್ಕೆ ಸಂಬAಧಿಸಿದAತೆ, ಜಯ ಕರ್ನಾಟಕ ಜನಪರ ವೇದಿಕೆ ತಮ್ಮಲ್ಲಿ ಈ ಮನವಿ ಮೂಲಕ ವಿನಂತಿಸಿಕೊಳ್ಳುವುದೇನೆAದರೆ, ಶಹಾಪುರ ತಾಲೂಕಿನ ಸಗರ.ಬಿ ಗ್ರಾಮದಲ್ಲಿರುವ ಇಂಡಿಯನ್ ಗ್ಯಾಸ್ ಸಿಲೆಂಡರ್ ವಿತರಣಾ ಕೇಂದ್ರದಲ್ಲಿ ಗ್ರಾಹಕರಿಗೆ ಗ್ಯಾಸ್ ಸಿಲೆಂಡರ್ ವಿತರಿಸುವ ಸಂದರ್ಭದಲ್ಲಿ ಹಲವು ಅಕ್ರಮಗಳು ನಡೆಯುತ್ತಿವೆ. ಕಂಪನಿಯಿAದ ಬಂದ ಗ್ಯಾಸ್ ಸಿಲೆಂಡರ್‌ನಲ್ಲಿರುವ ಸುಮಾರು ೧೫ ಕೆ.ಜಿ. ಗ್ಯಾಸ್‌ನಲ್ಲಿ ಸ್ವಲ್ಪ ಪ್ರಮಾಣವನ್ನು ಖಾಲಿ ಇರುವ ಗ್ಯಾಸ್‌ಗಳಿಗೆ ಡಂಪ್ ಮಾಡಿ ಅಕ್ರಮವಾಗಿ ತೆಗೆದು, ಗ್ರಾಹಕರಿಗೆ ಕಡಿಮೆ ಪ್ರಮಾಣದ ಗ್ಯಾಸ್ ಇರುವ ಸಿಲೆಂಡರ್‌ಗಳನ್ನು ವಿತರಿಸಲಾಗುತ್ತಿದೆ ಇದರಿಂದ ಗ್ರಾಹಕರು ಆರ್ಥಿಕವಾಗಿ ವಂಚನೆಗೊಳಗಾಗುತ್ತಿದ್ದಾರೆ.
ಇದಲ್ಲದೇ, ಗ್ರಾಹಕರಿಂದ ಮುಂಗಡವಾಗಿ OPT ಪಡೆದುಕೊಂಡು, ಗ್ಯಾಸ್ ಸಿಲೆಂಡರ್ ವಿತರಣೆ ಮಾಡದೇ, ಅದೇ ಸಿಲೆಂಡರ್‌ಗಳನ್ನು ಇತರರಿಗೆ ಅಕ್ರಮವಾಗಿ ಹೆಚ್ಚಿನ ಮೊತ್ತಕ್ಕೆ ಬೇರೆಯವರಿಗೆ ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ಕ್ರಮದಿಂದ ನೈಜ ಗ್ರಾಹಕರಿಗೆ ಗ್ಯಾಸ್ ಸಿಗದೆ ತೀವ್ರ ತೊಂದರೆ ಉಂಟಾಗುತ್ತಿದೆ. ಅಲ್ಲದೆ, ಸರ್ಕಾರಿ ರಜೆ ದಿನಗಳಲ್ಲಿಯೂ ಗ್ಯಾಸ್ ಏಜೆನ್ಸಿಯನ್ನು ತೆರೆದು ನಿಯಮಬಾಹಿರವಾಗಿ ವ್ಯವಹಾರ ನಡೆಸಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದು ಅಗತ್ಯವಾಗಿದೆ.
ಆದ್ದರಿಂದ, ಸಗರ ಗ್ರಾಮದ ಇಂಡಿಯನ್ ಗ್ಯಾಸ್ ವಿತರಣಾ ಕೇಂದ್ರದ ವಿರುದ್ಧ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳ ಮೂಲಕ ಪರಿಶೀಲನೆ ಮತ್ತು ತನಿಖೆ ನಡೆಸಿ, ಗ್ಯಾಸ್‌ನ ತೂಕ, ವಿತರಣೆ ದಾಖಲೆಗಳು, OTP ದಾಖಲೆಗಳು, ಮಾರಾಟದ ವಿವರಗಳು ಹಾಗೂ ಗ್ರಾಹಕರಿಗೆ ನೀಡಿರುವ ಸಿಲೆಂಡರ್‌ಗಳ ಕುರಿತು ಪರಿಶೀಲನೆ ನಡೆಸಬೇಕು. ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಂಡು, ಗ್ರಾಹಕರಿಗೆ ನ್ಯಾಯ ಒದಗಿಸಬೇಕೆಂದು ವಿನಂತಿಸುತ್ತೇನೆ.
ಈ ಸಂದರ್ಭದಲ್ಲಿ ಸೊಪಣ್ಣ ತಾಲೂಕ ಅಧ್ಯಕ್ಷರು, ಜಗದೇವಿ ಹಳಿಸಗರ, ಜಯ ಶಹಾಪುರ, ಜ್ಯೋತಿ ಶಹಾಪುರ, ಪ್ರದೀಪ್ ಅಣಬಿ, ಶರಣು ಖಾನಾಪುರ, ರೆಡ್ಡಿ ಖಾನಾಪುರ, ಅರುಣಾ ಸಾಹುಕಾರ ಖಾನಾಪುರ, ಭೀಮರಾಯ ಬೀದರಾಣಿ, ರಾಮು, ವೆಂಕಟೇಶ ನಾಯಕ ಆಲ್ದಾಳ,
    user_ಎಚ್ ಎಮ್ ಹವಾಲ್ದಾರ
    ಎಚ್ ಎಮ್ ಹವಾಲ್ದಾರ
    Farmer ಶೋರಾಪುರ, ಯಾದಗಿರಿ, ಕರ್ನಾಟಕ•
    7 hrs ago
  • ಲೋಕಕಲ್ಯಾಣಕ್ಕಾಗಿ ಸುರಪುರ ತಾಲೂಕಿನ ದೇವಪುರದಿಂದ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನದವರೆಗೆ ಸರ್ವಧರ್ಮ ಪಾದಯಾತ್ರೆ ಸುರಪುರ : ಹೌದು ಸುರಪುರ ತಾಲೂಕಿನ ದೇವಪುರ ಗ್ರಾಮದಿಂದ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಸರ್ವ ಧರ್ಮದ ವತಿಯಿಂದ ಭಕ್ತಿ ಪೂರ್ವಕ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತು. ಶ್ರೀ ರವಿ ಮುತ್ಯಾ ದೇವಪುರ ಹಾಗೂ ಶ್ರೀ ನಾಗರಾಜ ಮುತ್ಯಾ ದೇವಪುರ ಅವರ ದಿವ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಈ ಪಾದಯಾತ್ರೆಯಲ್ಲಿ ವಿವಿಧ ಧರ್ಮಗಳ ಭಕ್ತರು ಪಾಲ್ಗೊಂಡು ಶ್ರೀ ಮೌನೇಶ್ವರ ದೇವರ ಕೃಪೆಗೆ ಪಾತ್ರರಾದರು
    1
    ಲೋಕಕಲ್ಯಾಣಕ್ಕಾಗಿ ಸುರಪುರ ತಾಲೂಕಿನ ದೇವಪುರದಿಂದ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನದವರೆಗೆ ಸರ್ವಧರ್ಮ ಪಾದಯಾತ್ರೆ
ಸುರಪುರ : ಹೌದು ಸುರಪುರ ತಾಲೂಕಿನ ದೇವಪುರ ಗ್ರಾಮದಿಂದ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಸರ್ವ ಧರ್ಮದ ವತಿಯಿಂದ ಭಕ್ತಿ ಪೂರ್ವಕ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತು. ಶ್ರೀ ರವಿ ಮುತ್ಯಾ ದೇವಪುರ ಹಾಗೂ ಶ್ರೀ ನಾಗರಾಜ ಮುತ್ಯಾ ದೇವಪುರ ಅವರ ದಿವ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು.  ಈ ಪಾದಯಾತ್ರೆಯಲ್ಲಿ ವಿವಿಧ ಧರ್ಮಗಳ ಭಕ್ತರು ಪಾಲ್ಗೊಂಡು ಶ್ರೀ ಮೌನೇಶ್ವರ ದೇವರ ಕೃಪೆಗೆ ಪಾತ್ರರಾದರು
    user_Bhimu
    Bhimu
    ಶೋರಾಪುರ, ಯಾದಗಿರಿ, ಕರ್ನಾಟಕ•
    9 hrs ago
  • ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಗೋನಾಳ ಗ್ರಾಮೀಣವಾಗದ ಮಕ್ಕಳ ಪ್ರತಿಭೆ ಸಾರ್ವಜನಿಕರು ವಿಕಿಸಿ
    1
    ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಗೋನಾಳ ಗ್ರಾಮೀಣವಾಗದ ಮಕ್ಕಳ ಪ್ರತಿಭೆ ಸಾರ್ವಜನಿಕರು ವಿಕಿಸಿ
    user_Hasan Anjal
    Hasan Anjal
    ದೇವದುರ್ಗ, ರಾಯಚೂರು, ಕರ್ನಾಟಕ•
    14 hrs ago
  • ಈದ್-ಎ-ಮಿಲಾದ್-ಉನ್-ನಬಿ ಅಂಗವಾಗಿ ರಾಯಚೂರಿನಲ್ಲಿ ಮಕ್ಕಳ ವೈಭವದ ಪಾದಯಾತ್ರೆ ರಾಯಚೂರು: ಆಗಸ್ಟ್ 26 ಈದ್-ಎ-ಮಿಲಾದ್-ಉನ್-ನಬಿ ಅವರ ಪವಿತ್ರ ಸಂದರ್ಭದಲ್ಲಿ, ರಾಯಚೂರಿನ ಎಲ್‌ಬಿಎಸ್ ನಗರದ ಮಸೀದಿ-ಎ-ನೂರ್ ಕಮಿಟಿ ವತಿಯಿಂದ ಚಿಕ್ಕ ಮಕ್ಕಳ ವೈಭವದ ಹಾಗೂ ಶಿಸ್ತುಬದ್ಧ ಪಾದಯಾತ್ರೆ ಮೆರವಣಿಗೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಮೆರವಣಿಗೆಯಲ್ಲಿ ಮಕ್ಕಳು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಗೌರವದಿಂದ ನಾತ್-ಎ-ಪಾಕ್ ಹಾಗೂ ಸಲಾಮ್ಗಳನ್ನು ಪಠಿಸುವ ಮೂಲಕ ಪ್ರವಾದಿ ಹಜರತ್ ಮುಹಮ್ಮದ್ ಮುಸ್ತಫಾ ಅವರ ಮೇಲಿನ ತಮ್ಮ ಪ್ರೀತಿ ಮತ್ತು ಗೌರವದ ಪವಿತ್ರ ಸಂದೇಶವನ್ನು ಸಾರಿದರು. ಮೆರವಣಿಗೆಯು ಶಾಂತಿಯುತವಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಯಲು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿ, ಉತ್ತಮ ಸಹಕಾರ ನೀಡಿದರು. ಪೊಲೀಸ್ ಇಲಾಖೆಯ ಈ ಅಮೂಲ್ಯ ಸಹಕಾರಕ್ಕಾಗಿ ಮಸೀದಿ-ಎ-ನೂರ್ ಕಮಿಟಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಗುತ್ತದೆ. ಈ ಶುಭ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಪೋಷಕರು, ಯುವಕರು, ಮಕ್ಕಳು ಹಾಗೂ ಎಲ್‌ಬಿಎಸ್ ನಗರದ ನಿವಾಸಿಗಳಿಗೆ ಮಸೀದಿ-ಎ-ನೂರ್ ಕಮಿಟಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಈದ್-ಎ-ಮಿಲಾದ್-ಉನ್-ನಬಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಲಾಗುತ್ತದೆ. ಮಸೀದಿ-ಎ-ನೂರ್ ಕಮಿಟಿ ಎಲ್‌ಬಿಎಸ್ ನಗರ, ರಾಯಚೂರು
    2
    ಈದ್-ಎ-ಮಿಲಾದ್-ಉನ್-ನಬಿ ಅಂಗವಾಗಿ ರಾಯಚೂರಿನಲ್ಲಿ ಮಕ್ಕಳ ವೈಭವದ ಪಾದಯಾತ್ರೆ
ರಾಯಚೂರು: ಆಗಸ್ಟ್ 26
ಈದ್-ಎ-ಮಿಲಾದ್-ಉನ್-ನಬಿ ಅವರ ಪವಿತ್ರ ಸಂದರ್ಭದಲ್ಲಿ, ರಾಯಚೂರಿನ ಎಲ್‌ಬಿಎಸ್ ನಗರದ ಮಸೀದಿ-ಎ-ನೂರ್ ಕಮಿಟಿ ವತಿಯಿಂದ ಚಿಕ್ಕ ಮಕ್ಕಳ ವೈಭವದ ಹಾಗೂ ಶಿಸ್ತುಬದ್ಧ ಪಾದಯಾತ್ರೆ ಮೆರವಣಿಗೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಮೆರವಣಿಗೆಯಲ್ಲಿ ಮಕ್ಕಳು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಗೌರವದಿಂದ ನಾತ್-ಎ-ಪಾಕ್ ಹಾಗೂ ಸಲಾಮ್ಗಳನ್ನು ಪಠಿಸುವ ಮೂಲಕ ಪ್ರವಾದಿ ಹಜರತ್ ಮುಹಮ್ಮದ್ ಮುಸ್ತಫಾ ಅವರ ಮೇಲಿನ ತಮ್ಮ ಪ್ರೀತಿ ಮತ್ತು ಗೌರವದ ಪವಿತ್ರ ಸಂದೇಶವನ್ನು ಸಾರಿದರು.
ಮೆರವಣಿಗೆಯು ಶಾಂತಿಯುತವಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಯಲು ಮಾರ್ಕೆಟ್ ಯಾರ್ಡ್     ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿ, ಉತ್ತಮ ಸಹಕಾರ ನೀಡಿದರು. ಪೊಲೀಸ್ ಇಲಾಖೆಯ ಈ ಅಮೂಲ್ಯ ಸಹಕಾರಕ್ಕಾಗಿ ಮಸೀದಿ-ಎ-ನೂರ್ ಕಮಿಟಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಗುತ್ತದೆ.
ಈ ಶುಭ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಪೋಷಕರು, ಯುವಕರು, ಮಕ್ಕಳು ಹಾಗೂ ಎಲ್‌ಬಿಎಸ್ ನಗರದ ನಿವಾಸಿಗಳಿಗೆ ಮಸೀದಿ-ಎ-ನೂರ್ ಕಮಿಟಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಈದ್-ಎ-ಮಿಲಾದ್-ಉನ್-ನಬಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಲಾಗುತ್ತದೆ.
ಮಸೀದಿ-ಎ-ನೂರ್ ಕಮಿಟಿ
ಎಲ್‌ಬಿಎಸ್ ನಗರ, ರಾಯಚೂರು
    user_MD Gouse Mulla
    MD Gouse Mulla
    ರಾಯಚೂರು, ರಾಯಚೂರು, ಕರ್ನಾಟಕ•
    7 hrs ago
  • ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ರಾಯಚೂರು: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲಾ ಕುರುಬರ ಸಂಘ ಹಾಗೂ ಜಿಲ್ಲಾ ಕನಕ ನೌಕರರ ಸಂಘದ ಸಹಯೋಗದಲ್ಲಿ ಆ.30ರಂದು ಬೆಳಿಗ್ಗೆ 10.30ಕ್ಕೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರು ಮತ್ತು ವಿಶೇಷ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಹನುಮಂತಪ್ಪ ಜಾಲಿಬೆಂಚಿ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ನೀಡುವುದರಿಂದ ಅವರಲ್ಲಿ ಇನ್ನಷ್ಟು ಸಾಧನೆ ಮಾಡುವ ಉತ್ಸಾಹ ಮೂಡಲಿದ್ದು, ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರು ಹಾಗೂ ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ಸಮಾಜದ ಶೈಕ್ಷಣಿಕ ಪ್ರಗತಿ, ಯುವಜನರ ಸಾಧನೆ ಹಾಗೂ ಸೇವಾ ಮನೋಭಾವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪೂಜ್ಯರು, ಸಚಿವರು, ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ರಾಜ್ಯಸಭಾ ಸದಸ್ಯರು, ಮಾಜಿ ಸಂಸದರು ಹಾಗೂ ಮಾಜಿ ಶಾಸಕರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಕುರುಬರ ಸಮಾಜದ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿವಿಧ ತಾಲೂಕುಗಳ ಕುರುಬರ ಸಂಘ ಹಾಗೂ ಕನಕ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಮಹಿಳಾ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು. ಜಿಲ್ಲೆಯ ಕುರುಬ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕೆ. ಬಸವಂತಪ್ಪ, ರಾಮಣ್ಣ ರಘುನಾಥ್ ಹಳ್ಳಿ ಸೇರಿದಂತೆ ಇತರರು ಇದ್ದರು.
    1
    ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ರಾಯಚೂರು: ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲಾ ಕುರುಬರ ಸಂಘ ಹಾಗೂ ಜಿಲ್ಲಾ ಕನಕ ನೌಕರರ ಸಂಘದ ಸಹಯೋಗದಲ್ಲಿ ಆ.30ರಂದು ಬೆಳಿಗ್ಗೆ 10.30ಕ್ಕೆ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರು ಮತ್ತು ವಿಶೇಷ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರಾಯಚೂರು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಹನುಮಂತಪ್ಪ ಜಾಲಿಬೆಂಚಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ನೀಡುವುದರಿಂದ ಅವರಲ್ಲಿ ಇನ್ನಷ್ಟು ಸಾಧನೆ ಮಾಡುವ ಉತ್ಸಾಹ ಮೂಡಲಿದ್ದು, ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದರ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರು ಹಾಗೂ ವಿಶೇಷ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು. ಸಮಾಜದ ಶೈಕ್ಷಣಿಕ ಪ್ರಗತಿ, ಯುವಜನರ ಸಾಧನೆ ಹಾಗೂ ಸೇವಾ ಮನೋಭಾವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪೂಜ್ಯರು, ಸಚಿವರು, ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ರಾಜ್ಯಸಭಾ ಸದಸ್ಯರು, ಮಾಜಿ ಸಂಸದರು ಹಾಗೂ ಮಾಜಿ ಶಾಸಕರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಕುರುಬರ ಸಮಾಜದ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಜಿಲ್ಲಾ ಕನಕ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ವಿವಿಧ ತಾಲೂಕುಗಳ ಕುರುಬರ ಸಂಘ ಹಾಗೂ ಕನಕ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಮಹಿಳಾ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು.
ಜಿಲ್ಲೆಯ ಕುರುಬ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕೆ. ಬಸವಂತಪ್ಪ, ರಾಮಣ್ಣ ರಘುನಾಥ್ ಹಳ್ಳಿ ಸೇರಿದಂತೆ ಇತರರು ಇದ್ದರು.
    user_K2 kannada News
    K2 kannada News
    ಪತ್ರಕರ್ತ ರಾಯಚೂರು, ರಾಯಚೂರು, ಕರ್ನಾಟಕ•
    11 hrs ago
  • ನೇಪಾಳ ಪ್ರವಾಹದಲ್ಲಿ ಬದುಕುಳಿದ ಕಾಳಗಿ ತಾಲೂಕಿನ ಮಲ್ಲಿನಾಥ ಕೊಲಕುಂದಿ ಜೊತೆ ಸಿಎಮ್ ವಿಡಿಯೋ ಕಾಲ್ ಮಾತನಾಡಿ ಧೈರ್ಯ ತುಂಬಿದರು ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಮಲ್ಲಿನಾಥ ಕೊಲಕುಂದಿ ಅವರು ನೇಪಾಳ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಉಂಟಾದ ಭೀಕರ ಪ್ರವಾಹದಿಂದ ಪಾರಾಗಿ ಅದೃಷ್ಟವಶಾತ್ ಬದುಕುಳಿದ ಕನ್ನಡಿಗ ಮಲ್ಲಿನಾಥ ಕೊಲಕುಂದಿ ಅವರೊಂದಿಗೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ.
    1
    ನೇಪಾಳ ಪ್ರವಾಹದಲ್ಲಿ ಬದುಕುಳಿದ ಕಾಳಗಿ ತಾಲೂಕಿನ ಮಲ್ಲಿನಾಥ ಕೊಲಕುಂದಿ ಜೊತೆ ಸಿಎಮ್ ವಿಡಿಯೋ ಕಾಲ್ ಮಾತನಾಡಿ ಧೈರ್ಯ ತುಂಬಿದರು
ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಮಲ್ಲಿನಾಥ ಕೊಲಕುಂದಿ ಅವರು ನೇಪಾಳ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಉಂಟಾದ ಭೀಕರ ಪ್ರವಾಹದಿಂದ
ಪಾರಾಗಿ ಅದೃಷ್ಟವಶಾತ್ ಬದುಕುಳಿದ ಕನ್ನಡಿಗ ಮಲ್ಲಿನಾಥ ಕೊಲಕುಂದಿ ಅವರೊಂದಿಗೆ
ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಡಿಯೋ ಕಾಲ್ ಮೂಲಕ ಮಾತನಾಡಿ ಧೈರ್ಯ ತುಂಬಿದ್ದಾರೆ.
    user_Bheemaraya kuddalli
    Bheemaraya kuddalli
    ಕಳಗಿ, ಕಲಬುರಗಿ, ಕರ್ನಾಟಕ•
    12 hrs ago
  • ಯಾದಗಿರಿಯ ಗುತ್ತಿಗೆದಾರರ ಗೆ ಹಣ ಪಾವತಿಸಬೇಕಾದ ಒಂದು ಕೋಟಿ ತೊಂಬತ್ತು ಲಕ್ಷ ಹಣವನ್ನು ಗುತ್ತಿಗೆದಾರರಿಗೆ ಕೊಡಬೇಕಾದ ಅವರ ನ್ಯಾಯಾಲಯ ಮರೆ ಹೋಗಿ ಅವರ ನ್ಯಾಯಾಲಯವು ಆದೇಶದ ಮೇರೆಗೆ ಪಿಡಬ್ಲ್ಯೂಡಿ ಆಫೀಸ್ ಜತ್ತಿ ಮಾಡಲಾಯಿತು ಟೇಬಲ್ ತೋರಿಸಿ ಮತ್ತು ಕಂಪ್ಯೂಟರ್ ಹಲವಾರು ನ್ಯಾಯಾಲಯ ಕಡೆಯಿಂದ ವಿಜಯ್ ಅವರ ಸಿಬ್ಬ ಜಪ್ತಿ ಮಾಡಿ ನ್ಯಾಯಕ್ಕೆ ಒಪ್ಪಿಸಲಾಯಿತು ಎಂದು ವಿಜಯ ಸರ್ ತಿಳಿಸಿದರು
    1
    ಯಾದಗಿರಿಯ ಗುತ್ತಿಗೆದಾರರ ಗೆ ಹಣ ಪಾವತಿಸಬೇಕಾದ ಒಂದು ಕೋಟಿ ತೊಂಬತ್ತು ಲಕ್ಷ ಹಣವನ್ನು ಗುತ್ತಿಗೆದಾರರಿಗೆ ಕೊಡಬೇಕಾದ ಅವರ ನ್ಯಾಯಾಲಯ ಮರೆ ಹೋಗಿ ಅವರ ನ್ಯಾಯಾಲಯವು ಆದೇಶದ ಮೇರೆಗೆ ಪಿಡಬ್ಲ್ಯೂಡಿ ಆಫೀಸ್ ಜತ್ತಿ ಮಾಡಲಾಯಿತು ಟೇಬಲ್ ತೋರಿಸಿ ಮತ್ತು ಕಂಪ್ಯೂಟರ್ ಹಲವಾರು ನ್ಯಾಯಾಲಯ ಕಡೆಯಿಂದ ವಿಜಯ್ ಅವರ ಸಿಬ್ಬ ಜಪ್ತಿ ಮಾಡಿ ನ್ಯಾಯಕ್ಕೆ ಒಪ್ಪಿಸಲಾಯಿತು ಎಂದು ವಿಜಯ ಸರ್ ತಿಳಿಸಿದರು
    user_Ramesh Vishwakarma
    Ramesh Vishwakarma
    ಯಾದಗಿರಿ, ಯಾದಗಿರಿ, ಕರ್ನಾಟಕ•
    5 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.