logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹಕ್ಕಿಪಿಕ್ಕಿ ಕಾಲೋನಿ ಬಾಳೇಗೌಡನಹಳ್ಳಿಯಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಾಸಕರಿಂದ ಶಂಕುಸ್ಥಾಪನೆ! ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧತೆ : ಶಾಸಕ ಬಿ.ಎನ್. ರವಿಕುಮಾರ್! ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಾಳೆಗೌಡನಳ್ಳಿ ಹಾಗೂ ಹಕ್ಕಿಪಿಕ್ಕಿ ಕಾಲೋನಿಗಳಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯ ಭವನಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಶಾಸಕ ಬಿ.ಎನ್. ರವಿಕುಮಾರ್, ಈ ಎರಡು ಗ್ರಾಮಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳು ಜೀವನ ನಿರ್ವಹಣೆಗೆ ವರ್ಷಕ್ಕೆ 10 ರಿಂದ 11 ತಿಂಗಳು ಬೇರೆ ಜಿಲ್ಲೆ, ರಾಜ್ಯಗಳಿಗೆ ತೆರಳಿ ವ್ಯಾಪಾರ ಮಾಡುತ್ತಿದ್ದು, ವರ್ಷಕ್ಕೊಮ್ಮೆ ಮಾತ್ರ ತಮ್ಮ ಗ್ರಾಮಗಳಿಗೆ ಮರಳುವ ಸ್ಥಿತಿಯಿದೆ ಎಂದು ಹೇಳಿದರು. ಗ್ರಾಮಸ್ಥರು ತಮ್ಮ ಶುಭಕಾರ್ಯಗಳನ್ನು ನಗರಗಳ ಚೌಟ್ರಿಗಳಲ್ಲಿ ಅಲ್ಲದೆ, ಸ್ವಗ್ರಾಮದಲ್ಲೇ ಪೆಂಡಾಲ್ ಹಾಕಿ ನಡೆಸಬೇಕಾಗಿರುವ ಹಿನ್ನೆಲೆಯಲ್ಲಿ, ಸಮುದಾಯ ಭವನಗಳ ಅಗತ್ಯವನ್ನು ಸ್ಥಳೀಯ ಮುಖಂಡರು ಗಮನಕ್ಕೆ ತಂದಿದ್ದರು. ಅದರಂತೆ 2025–26ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಿಂದ ಬಾಳೆಗೌಡನಳ್ಳಿಗೆ 50 ಲಕ್ಷ ರೂ. ಹಾಗೂ ಹಕ್ಕಿಪಿಕ್ಕಿ ಕಾಲೋನಿಗೆ 50 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ. ಶಂಕುಸ್ಥಾಪನೆ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಪೂರ್ವ ಪಶ್ಚಿಮ 45 ಅಡಿ ಹಾಗೂ ಉತ್ತರ ದಕ್ಷಿಣ 32 ಅಡಿ ಗಾತ್ರದ ಭವನಗಳ ಅಂದಾಜು ವೆಚ್ಚ ತಯಾರಿಸಿ, ಸಮಾಜ ಕಲ್ಯಾಣ ಇಲಾಖೆಯಿಂದ ಹೆಚ್ಚುವರಿ ಅನುದಾನ ತರಲು ಸೂಚನೆ ನೀಡಲಾಗಿದೆ. ಒಟ್ಟಾರೆ ಎರಡು ಗ್ರಾಮಗಳಲ್ಲೂ ತಲಾ ಒಂದು ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಿಸಿ, ಪ್ರತಿಯೊಂದು ಕುಟುಂಬಕ್ಕೂ ಉಪಯೋಗವಾಗುವಂತೆ ಮಾಡುವ ಗುರಿಯಿದೆ ಎಂದು ಶಾಸಕ ರವಿಕುಮಾರ್ ಹೇಳಿದರು. ಶಾಸಕನಾಗುವ ಮೊದಲು ಗಂಜಗುಂಟೆಯಿಂದ ಚಿಲಕಲನೆರ್ಪು ಗ್ರಾಮಕ್ಕೆ ಹೋಗುವ ಸುಮಾರು ಏಳು ಕಿಲೋಮೀಟರ್ ರಸ್ತೆ ದುಸ್ಥಿತಿಯಲ್ಲಿತ್ತು. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಗಮನಕ್ಕೆ ತಂದು, ಈ ಕಾಮಗಾರಿ ಮೊದಲ ಆದ್ಯತೆಯಾಗಿ ಪೂರ್ಣಗೊಳಿಸಲಾಗಿದೆ ಎಂದು ವಿವರಿಸಿದರು. ಕ್ಷೇತ್ರದ ಸ್ವಾಭಿಮಾನಿ ಮತದಾರರು ಒಬ್ಬ ಸಾಮಾನ್ಯ ರೈತನಿಗೆ ಅಧಿಕಾರ ನೀಡಿದ್ದಾರೆ. ನನ್ನ ಶಾಸಕನ ಅವಧಿಯಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಸಮಾನವಾಗಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂಬುದೇ ತಮ್ಮ ಆಶಯ. ಶಿಡ್ಲಘಟ್ಟ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸುಮಾರು 2000 ಕೋಟಿ ರೂ. ಅನುದಾನ ಅಗತ್ಯವಿದ್ದು, ಆ ಅನುದಾನ ಸಿಕ್ಕಲ್ಲಿ ಎಲ್ಲಾ ಪಂಚಾಯಿತಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತದೆ. ರಾಮಸಮುದ್ರ ಕೆರೆಯಿಂದ ಶಿಡ್ಲಘಟ್ಟ ನಗರಕ್ಕೆ 12,800 ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಕಾಮಗಾರಿ ನಡೆಯುತ್ತಿದ್ದು, ಮುಂದಿನ ಹಂತದಲ್ಲಿ ತಿಮ್ಮಸಂದ್ರ ಪಂಚಾಯಿತಿ ಗಡಿ ಭಾಗದ ಜೋಡಿಕೆರೆಗಳನ್ನು ಅಭಿವೃದ್ಧಿಪಡಿಸಿ, ಆಂಧ್ರ ಪ್ರದೇಶಕ್ಕೆ ಹರಿಯುತ್ತಿರುವ ನೀರನ್ನು ಬಳಸಿ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆಗಳನ್ನೂ ಅವರು ವಿವರಿಸಿದರು. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಇರುವುದರಿಂದ, ರಾಜ್ಯದ ನೀರಾವರಿ ಬೇಡಿಕೆಗಳಿಗೆ ಸ್ಪಂದನೆ ಸಿಗುವ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಮತದಾರರ ಆಶೀರ್ವಾದ ದೊರೆತರೆ, ಶಿಡ್ಲಘಟ್ಟ ಕ್ಷೇತ್ರವನ್ನು ನೂರಕ್ಕೆ ನೂರಷ್ಟು ಅಭಿವೃದ್ಧಿಪಥದಲ್ಲಿ ಮುನ್ನಡೆಸುವುದಾಗಿ ಭರವಸೆ ನೀಡಿದರು. ಈ ವೇಳೆ ಬಾಳೆಗೌಡನಹಳ್ಳಿ ಗ್ರಾಮಸ್ಥ ಮಹಿಳೆಯರು ಹಾಗೂ ಹಿರಿಯರು ಕುಡಿಯುವ ನೀರು ಮತ್ತು ರಸ್ತೆಗಳ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟಿದ್ದು, ಶೀಘ್ರದಲ್ಲೇ ಕುಡಿಯುವ ನೀರಿನ ಘಟಕ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ್ , ನಿರ್ಮಿತಿ ಕೇಂದ್ರದ ಜೆಇ ತ್ಯಾಗರಾಜ್,ಗ್ರಾಮ ಪಂಚಾಯಿತಿ ಸದಸ್ಯ ವೆಂಟರಮರೆಡ್ಡಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ರಾಮಬಾಬು ಜೆಡಿಎಸ್ ಮುಖಂಡರಾದ ತಾದೂರು ರಘು, ಚಂದ್ರಣ್ಣ, ಮೂರ್ತಿ, ನಾರಾಯಣಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು .

5 hrs ago
user_NAYAN NEWS
NAYAN NEWS
Sidlaghatta, Chikkaballapura•
5 hrs ago
60cc4564-a5a1-4e69-97b5-36f5a58621d6

More news from ಕರ್ನಾಟಕ and nearby areas
  • ಬೆಂಗಳೂರು ಗ್ರಾಮಾಂತರ.ಏಕಾಏಕಿ ಮನೆಗೆ ನುಗ್ಗಿದ ಅನಾಮಿಕ ವ್ಯಕ್ತಿ. ಮನೆಗೆ ನುಗ್ಗುತ್ತಿದ್ದಂತೆ ಬಾಗಿಲು ಹಾಕಿ ಕೂಡಿ ಹಾಕಿದ ಮನೆ ಮಾಲೀಕರು. ದೇವನಹಳ್ಳಿಯ ಚಿಕ್ಕನಹಳ್ಳಿ‌ ಗ್ರಾಮದಲ್ಲಿ ಘಟನೆ. ನವೀ‌ನ್ (30) ಮನೆಗೆ ನುಗ್ಗಿರುವ ವ್ಯಕ್ತಿ. ಯಲಹಂಕ ಮೂಲದ ವ್ಯಕ್ತಿ. ಕಳ್ಳತನ ಮಾಡಲು ಬಂದಿದ್ದಾನೆ ಎಂದು ಮನೆಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು ಪೋಲೀಸರನ್ನು ಕರೆಸಿ ವಶಕ್ಕೆ ನೀಡಿದ ಗ್ರಾಮಸ್ಥರು. ಕುಡಿದು ಬಂದಿದ್ದಾನಾ ಅಥವಾ ಕಳ್ಳತನಕ್ಕೆ ಬಂದಿದ್ದನಾ ಎಂದು ತನಿಖೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಚಿಕ್ಕನಹಳ್ಳಿಯ ಬೈರೇಗೌಡ ಎಂಬುವವರ ಮನೆ. ಮನೆಯವರು ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಬೀಗ ಹೊಡೆದು‌ ಮನೆಗೆ ನುಗ್ಗಿರುವ ಕಳ್ಳ ಒಳಗೆ ಹೋಗುವುದನ್ನ ಗಮನಿಸಿದ ಪಕ್ಕದ ಮನೆಯವರು ನಂತರ ಮನೆ ಮಾಲೀಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ ಕೂಡಲೇ ಮನೆಯ ಹತ್ತಿರ ಬಂದು ಬಾಗಿಲು ಹಾಕಿ ಕೂಡಿ ಹಾಕಿದ್ದಾರೆ. ನಂತರ ಪೋಲೀಸರಿಗೆ ಮಾಹಿತಿ ನೀಡಿ ಕಳ್ಳನನ್ನ ಹಿಡಿದು ಕೊಟ್ಟಿದ್ದಾರೆ.
    1
    ಬೆಂಗಳೂರು ಗ್ರಾಮಾಂತರ.ಏಕಾಏಕಿ ಮನೆಗೆ ನುಗ್ಗಿದ ಅನಾಮಿಕ ವ್ಯಕ್ತಿ.
ಮನೆಗೆ ನುಗ್ಗುತ್ತಿದ್ದಂತೆ ಬಾಗಿಲು ಹಾಕಿ ಕೂಡಿ ಹಾಕಿದ ಮನೆ ಮಾಲೀಕರು.
ದೇವನಹಳ್ಳಿಯ ಚಿಕ್ಕನಹಳ್ಳಿ‌ ಗ್ರಾಮದಲ್ಲಿ ಘಟನೆ.
ನವೀ‌ನ್ (30)  ಮನೆಗೆ ನುಗ್ಗಿರುವ ವ್ಯಕ್ತಿ.
ಯಲಹಂಕ ಮೂಲದ ವ್ಯಕ್ತಿ.
ಕಳ್ಳತನ ಮಾಡಲು ಬಂದಿದ್ದಾನೆ ಎಂದು ಮನೆಯಲ್ಲಿ ಕೂಡಿ ಹಾಕಿದ ಗ್ರಾಮಸ್ಥರು
ಪೋಲೀಸರನ್ನು ಕರೆಸಿ ವಶಕ್ಕೆ ನೀಡಿದ ಗ್ರಾಮಸ್ಥರು.
ಕುಡಿದು ಬಂದಿದ್ದಾನಾ ಅಥವಾ ಕಳ್ಳತನಕ್ಕೆ ಬಂದಿದ್ದನಾ ಎಂದು ತನಿಖೆ.
ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ
ಚಿಕ್ಕನಹಳ್ಳಿಯ ಬೈರೇಗೌಡ ಎಂಬುವವರ ಮನೆ.
ಮನೆಯವರು ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದರು.
ಈ ವೇಳೆ ಬೀಗ ಹೊಡೆದು‌ ಮನೆಗೆ ನುಗ್ಗಿರುವ ಕಳ್ಳ
ಒಳಗೆ ಹೋಗುವುದನ್ನ ಗಮನಿಸಿದ ಪಕ್ಕದ ಮನೆಯವರು
ನಂತರ ಮನೆ ಮಾಲೀಕರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ
ಕೂಡಲೇ ಮನೆಯ ಹತ್ತಿರ ಬಂದು ಬಾಗಿಲು ಹಾಕಿ ಕೂಡಿ ಹಾಕಿದ್ದಾರೆ.
ನಂತರ ಪೋಲೀಸರಿಗೆ ಮಾಹಿತಿ ನೀಡಿ ಕಳ್ಳನನ್ನ ಹಿಡಿದು ಕೊಟ್ಟಿದ್ದಾರೆ.
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    4 hrs ago
  • KOLAR KI.AWAAZ
    1
    KOLAR KI.AWAAZ
    user_KOLAR KI.AWAAZ KOUSAR NEWS
    KOLAR KI.AWAAZ KOUSAR NEWS
    Rock shop ದೊಡ್ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    17 hrs ago
  • ತುಮಕೂರು : ತುಮಕೂರು ಜಿಲ್ಲೆಯ ದಿನಾಂಕ 15/02/2026 ರಂದು ಕ್ಯಾತ್ಸಂದ್ರ ದ ಜ್ಞಾನ ಗಂಗಾ ಶಾಲೆ ಬಳಿ ಬೈಕಿನಲ್ಲಿ ಬಂದ ವ್ಯಕ್ತಿ ಅಂಗಡಿ ಯಲ್ಲಿ ಇದ್ದ ಮಹಿಳೆ ಚಿನ್ನದ ಸರ ಕದ್ದು ಪರಾರಿ ಯಾದ ಕಳ್ಳ ಸಿಗರೇಟು ಕೇಳುವ ನೆಪದಲ್ಲಿ ಮಾಂಗಲ್ಯ ಸರ ಕದ್ದ ಕಳ್ಳ ಕ್ಯಾತ್ಸಂದ್ರ ಜ್ಞಾನ ಗಂಗಾ ಶಾಲೆ ರಸ್ತೆ ಯಲ್ಲಿ ಘಟನೆ
    1
    ತುಮಕೂರು :  ತುಮಕೂರು ಜಿಲ್ಲೆಯ ದಿನಾಂಕ  15/02/2026 ರಂದು ಕ್ಯಾತ್ಸಂದ್ರ ದ ಜ್ಞಾನ ಗಂಗಾ ಶಾಲೆ ಬಳಿ   ಬೈಕಿನಲ್ಲಿ  ಬಂದ ವ್ಯಕ್ತಿ ಅಂಗಡಿ  ಯಲ್ಲಿ ಇದ್ದ   ಮಹಿಳೆ ಚಿನ್ನದ ಸರ     ಕದ್ದು  ಪರಾರಿ  ಯಾದ ಕಳ್ಳ                                          
ಸಿಗರೇಟು ಕೇಳುವ ನೆಪದಲ್ಲಿ  ಮಾಂಗಲ್ಯ ಸರ ಕದ್ದ ಕಳ್ಳ 
ಕ್ಯಾತ್ಸಂದ್ರ ಜ್ಞಾನ ಗಂಗಾ ಶಾಲೆ  ರಸ್ತೆ ಯಲ್ಲಿ ಘಟನೆ
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    16 hrs ago
  • ಶಿರಾ ನಗರದಲ್ಲಿರುವ ವಾರ್ಡ್ ಸಂಖ್ಯೆ 23ರಲ್ಲಿ ಅವ್ಯವಸ್ಥೆ ವಾರ್ಡ ಸದಸ್ಯರಿಗೆ ಸಮಸ್ಯೆಗಳ ಬಗ್ಗೆ ಕೇಳಿದರೆ ಬೇಜವಬ್ದಾರಿತನ ತಕ್ಷಣಕ್ಕೆ ಒಂದೇ ಒಂದು ಫೋನ್ ಕರೆಗೆ ಸ್ಪಂದಿಸಿದ ನಗರಸಭೆ ಅಧ್ಯಕ್ಷ ಜಿಶಾನ್ ಮಹಮ್ಮುದ್ ಅಷ್ಟಕ್ಕೂ ಆ ವಾರ್ಡ್ ಸಂಖ್ಯೆ 20 ರಿಂದ 23.ರ ಮದ್ಯೆ ಇರುವಂತಹ ವಾರ್ಡ್ ಸಮಸ್ಯೆ ನಗರಸಭೆ ಸದಸ್ಯರು ಯಾರನ್ನುವುದು ಜನರಲ್ಲಿ ಕುತೂಹಲ ಉಂಟಾಗಿದೆ
    1
    ಶಿರಾ ನಗರದಲ್ಲಿರುವ ವಾರ್ಡ್ ಸಂಖ್ಯೆ 23ರಲ್ಲಿ ಅವ್ಯವಸ್ಥೆ  ವಾರ್ಡ ಸದಸ್ಯರಿಗೆ  ಸಮಸ್ಯೆಗಳ ಬಗ್ಗೆ ಕೇಳಿದರೆ  ಬೇಜವಬ್ದಾರಿತನ  ತಕ್ಷಣಕ್ಕೆ ಒಂದೇ ಒಂದು ಫೋನ್ ಕರೆಗೆ ಸ್ಪಂದಿಸಿದ ನಗರಸಭೆ ಅಧ್ಯಕ್ಷ ಜಿಶಾನ್ ಮಹಮ್ಮುದ್ 
ಅಷ್ಟಕ್ಕೂ ಆ ವಾರ್ಡ್ ಸಂಖ್ಯೆ 20 ರಿಂದ 23.ರ ಮದ್ಯೆ ಇರುವಂತಹ ವಾರ್ಡ್ ಸಮಸ್ಯೆ  ನಗರಸಭೆ ಸದಸ್ಯರು ಯಾರನ್ನುವುದು ಜನರಲ್ಲಿ ಕುತೂಹಲ ಉಂಟಾಗಿದೆ
    user_Prabha News digital
    Prabha News digital
    Photographer ಸಿರಾ, ತುಮಕೂರು, ಕರ್ನಾಟಕ•
    13 hrs ago
  • 18/02/2026 ​ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಭಾರಿ ಜಾಲವೊಂದನ್ನು ಸಾರ್ವಜನಿಕರು ಭೇದಿಸಿದ್ದಾರೆ. ಸಿನಿಮೀಯ ಮಾದರಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಂಬತ್ತು ಮಂದಿ ಕಳ್ಳರ ಪೈಕಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದ್ದು, ಉಳಿದ ಎಂಟು ಮಂದಿ ಪರಾರಿಯಾಗಿದ್ದಾರೆ. ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ವೇಳೆ ಜಾಗೃತರಾದ ಸಾರ್ವಜನಿಕರಿಂದ ಕಳ್ಳರ ಮೇಲೆ ದಾಳಿ.ಕಳ್ಳತನ ಮಾಡುವ ಉದ್ದೇಶಕ್ಕಾಗಿಯೇ ಈ ತಂಡವು ಸ್ವಂತ ಲಾರಿಯನ್ನು ಖರೀದಿಸಿ ಬಳಸಿರುವುದು ಬೆಳಕಿಗೆ ಬಂದಿದೆ. ಈ ಲಾರಿಯನ್ನು ಅವರು ಖರೀದಿಸಿದ್ದೇ ಅಥವಾ ಕಳ್ಳತನ ಮಾಡಿದ್ದೇ ಎಂಬುದು ತನಿಖೆಯಿಂದ ಹೊರಬರಬೇಕಿದೆ. ​ವಶಕ್ಕೆ ಪಡೆದ ಲಾರಿಯಲ್ಲಿ ಕದ್ದ ಮಾಲು: ಪೊಲೀಸರು ವಶಪಡಿಸಿಕೊಂಡ ಲಾರಿಯಲ್ಲಿ ಈ ಹಿಂದೆ ಕದ್ದಿದ್ದ ಡೀಸೆಲ್ ಮತ್ತು ಇತರ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ. ಸ್ಥಳದಿಂದ ಓಡಿ ಹೋದ ಉಳಿದ 8 ಮಂದಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ​ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಕಳ್ಳತನದ ಜಾಲ ಪತ್ತೆಯಾಗಿರುವುದು ವಾಹನ ಸವಾರರಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಸದ್ಯ ಹಿರಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
    1
    18/02/2026
​ಹಿರಿಯೂರು: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ಭಾರಿ ಜಾಲವೊಂದನ್ನು ಸಾರ್ವಜನಿಕರು ಭೇದಿಸಿದ್ದಾರೆ. ಸಿನಿಮೀಯ ಮಾದರಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಂಬತ್ತು ಮಂದಿ ಕಳ್ಳರ ಪೈಕಿ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದ್ದು, ಉಳಿದ ಎಂಟು ಮಂದಿ ಪರಾರಿಯಾಗಿದ್ದಾರೆ.
ಲಾರಿಗಳಿಂದ ಡೀಸೆಲ್ ಕಳ್ಳತನ ಮಾಡುತ್ತಿದ್ದ ವೇಳೆ ಜಾಗೃತರಾದ ಸಾರ್ವಜನಿಕರಿಂದ ಕಳ್ಳರ ಮೇಲೆ ದಾಳಿ.ಕಳ್ಳತನ ಮಾಡುವ ಉದ್ದೇಶಕ್ಕಾಗಿಯೇ ಈ ತಂಡವು ಸ್ವಂತ ಲಾರಿಯನ್ನು ಖರೀದಿಸಿ ಬಳಸಿರುವುದು ಬೆಳಕಿಗೆ ಬಂದಿದೆ. ಈ ಲಾರಿಯನ್ನು ಅವರು ಖರೀದಿಸಿದ್ದೇ ಅಥವಾ ಕಳ್ಳತನ ಮಾಡಿದ್ದೇ ಎಂಬುದು ತನಿಖೆಯಿಂದ ಹೊರಬರಬೇಕಿದೆ.
​ವಶಕ್ಕೆ ಪಡೆದ ಲಾರಿಯಲ್ಲಿ ಕದ್ದ ಮಾಲು: ಪೊಲೀಸರು ವಶಪಡಿಸಿಕೊಂಡ ಲಾರಿಯಲ್ಲಿ ಈ ಹಿಂದೆ ಕದ್ದಿದ್ದ ಡೀಸೆಲ್ ಮತ್ತು ಇತರ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ.
ಸ್ಥಳದಿಂದ ಓಡಿ ಹೋದ ಉಳಿದ 8 ಮಂದಿ ಆರೋಪಿಗಳಿಗಾಗಿ ಪೊಲೀಸರು  ಶೋಧ ನಡೆಸುತ್ತಿದ್ದಾರೆ.
​ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದ್ದ ಈ ಕಳ್ಳತನದ ಜಾಲ ಪತ್ತೆಯಾಗಿರುವುದು ವಾಹನ ಸವಾರರಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಸದ್ಯ ಹಿರಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
    user_Power focus
    Power focus
    ಹಿರಿಯೂರು, ಚಿತ್ರದುರ್ಗ, ಕರ್ನಾಟಕ•
    18 hrs ago
  • ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮಹಾರಥೋತ್ಸವದೊಂದಿಗೆ ಭಕ್ತರು ಹಾಗೂ ಸರ್ಕಾರ, ಜಿಲ್ಲಾಡಳಿತದ ಸಹಕಾರದೊಂದಿಗೆ ಅದ್ದೂರಿಯಾಗಿ ಯಶಸ್ವಿಗೊಂಡಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ತಿಳಿಸಿದರು. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ ಯಶಸ್ವಿಯಾಗಿ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆದ ಮಹಾಶಿವರಾತ್ರಿ ಜಾತ ಮಹೋತ್ಸವದಲ್ಲಿ ಸುಮಾರು 8 ರಿಂದ 9 ಲಕ್ಷಕ್ಕೆ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸಿದ್ದಾರೆ. ಎಂದರು
    1
    ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು
ದಿನಗಳ ಕಾಲ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಮಹಾರಥೋತ್ಸವದೊಂದಿಗೆ ಭಕ್ತರು ಹಾಗೂ ಸರ್ಕಾರ, ಜಿಲ್ಲಾಡಳಿತದ ಸಹಕಾರದೊಂದಿಗೆ ಅದ್ದೂರಿಯಾಗಿ ಯಶಸ್ವಿಗೊಂಡಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ತಿಳಿಸಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ ಯಶಸ್ವಿಯಾಗಿ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ ನಡೆದ ಮಹಾಶಿವರಾತ್ರಿ ಜಾತ ಮಹೋತ್ಸವದಲ್ಲಿ ಸುಮಾರು 8 ರಿಂದ 9 ಲಕ್ಷಕ್ಕೆ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡು ಪ್ರಸಾದ ಸ್ವೀಕರಿಸಿದ್ದಾರೆ. ಎಂದರು
    user_ಹನೂರು ನ್ಯೂಸ್ ಅಡ್ಡ
    ಹನೂರು ನ್ಯೂಸ್ ಅಡ್ಡ
    Farmer ಹನೂರು, ಚಾಮರಾಜನಗರ, ಕರ್ನಾಟಕ•
    4 hrs ago
  • ಬಂಡಳ್ಳಿ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ರವರು ಭಾಗವಹಿಸಿ ಉದ್ಘಾಟನೆ ನೆರವೇರಿಸಿ ನಂತರ ಕಾರ್ಯಕ್ರಮವನ್ನು ಉದ್ದೇಶೀಸಿ ಮಾತನಾಡಿದ ಅವರು ಬಂಡಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಖಾಸಗಿ ಶಾಲೆಗಳನ್ನು ಮೀರಿಸುವಷ್ಟು ಒಳ್ಳೆಯ ಕಾರ್ಯಕ್ರಮವನ್ನು ನೀಡಿದ್ದೀರಿ ಮಕ್ಕಳು ತುಂಬಾ ಕ್ರಿಯಾಶೀಲವರಾಗಿದ್ದಾರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಗಮನವನ್ನು ನೀಡಿ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲದೆ ಹೆಚ್ಚು ಹೆಚ್ಚು ಓದಿ ಅಂಕಗಳನ್ನು ಪಡೆದು ಖಾಸಗಿ ಶಾಲೆಯಷ್ಟೇ ಸರ್ಕಾರಿ ಶಾಲೆಯ ಮಕ್ಕಳು ಹೆಸರು ಮಾಡಬೇಕೆಂದರು. ಇದೆ ಸಮಯದಲ್ಲಿ ಮುಡಿಗುಂದ ಮಠದ ಶ್ರೀಗಳಾದ ಶ್ರೀಕಂಠ ಸ್ವಾಮಿ, ಮಾಜಿ ಶಾಸಕರುಗಳಾದ ಪರಿಮಳ ನಾಗಪ್ಪ, ನರೇಂದ್ರ,ಚಾಮುಲ್ ಅಧ್ಯಕ್ಷರಾದ ನಂಜುಂಡಸ್ವಾಮಿ,ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಚಲನ ಚಿತ್ರ ನಿರ್ದೇಶಕರಾದ ಚೇತನ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪುಟ್ಟಮದೇವಮ್ಮ,ಚಾಮುಲ್ ನಿರ್ದೇಶಕರಾದ ಸಾಹುಲ್, ಮಾಜಿ ಗ್ರಾಮ ಪಂ ಅಧ್ಯಕ್ಷ ಯಶೋದಮ್ಮಾ,ಮಾಜಿ ತಾಲೂಕು ಪಂ ಸದಸ್ಯರಾದ ವೆಂಕಟಾಚಲ, ಬಂಡಳ್ಳಿ ಮಾಜಿ ಗ್ರಾಮ ಪಂ ಸದಸ್ಯರಾದ ತಮ್ಮಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ,ಜೇಸಿಮ್ ಪಾಷ, ಬಸರತ್,ಚಿನ್ನವೆಂಕಟ್, ವಿಜಯ್ ಕುಮಾರ್,ಸೌಕಯ್ಯ,ಹಾಗೂ ಇನ್ನಿತರರು ಇದ್ದರು...
    4
    ಬಂಡಳ್ಳಿ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ರವರು ಭಾಗವಹಿಸಿ ಉದ್ಘಾಟನೆ ನೆರವೇರಿಸಿ ನಂತರ ಕಾರ್ಯಕ್ರಮವನ್ನು ಉದ್ದೇಶೀಸಿ ಮಾತನಾಡಿದ ಅವರು ಬಂಡಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ  ಖಾಸಗಿ ಶಾಲೆಗಳನ್ನು ಮೀರಿಸುವಷ್ಟು ಒಳ್ಳೆಯ ಕಾರ್ಯಕ್ರಮವನ್ನು ನೀಡಿದ್ದೀರಿ ಮಕ್ಕಳು ತುಂಬಾ ಕ್ರಿಯಾಶೀಲವರಾಗಿದ್ದಾರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಗಮನವನ್ನು ನೀಡಿ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲದೆ ಹೆಚ್ಚು ಹೆಚ್ಚು ಓದಿ ಅಂಕಗಳನ್ನು ಪಡೆದು ಖಾಸಗಿ ಶಾಲೆಯಷ್ಟೇ ಸರ್ಕಾರಿ ಶಾಲೆಯ ಮಕ್ಕಳು ಹೆಸರು ಮಾಡಬೇಕೆಂದರು.
ಇದೆ ಸಮಯದಲ್ಲಿ ಮುಡಿಗುಂದ ಮಠದ ಶ್ರೀಗಳಾದ ಶ್ರೀಕಂಠ ಸ್ವಾಮಿ, ಮಾಜಿ ಶಾಸಕರುಗಳಾದ ಪರಿಮಳ ನಾಗಪ್ಪ, ನರೇಂದ್ರ,ಚಾಮುಲ್ ಅಧ್ಯಕ್ಷರಾದ ನಂಜುಂಡಸ್ವಾಮಿ,ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಚಲನ ಚಿತ್ರ ನಿರ್ದೇಶಕರಾದ ಚೇತನ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಪುಟ್ಟಮದೇವಮ್ಮ,ಚಾಮುಲ್ ನಿರ್ದೇಶಕರಾದ ಸಾಹುಲ್, ಮಾಜಿ ಗ್ರಾಮ ಪಂ ಅಧ್ಯಕ್ಷ ಯಶೋದಮ್ಮಾ,ಮಾಜಿ ತಾಲೂಕು ಪಂ ಸದಸ್ಯರಾದ ವೆಂಕಟಾಚಲ, ಬಂಡಳ್ಳಿ ಮಾಜಿ ಗ್ರಾಮ ಪಂ ಸದಸ್ಯರಾದ ತಮ್ಮಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ,ಜೇಸಿಮ್ ಪಾಷ, ಬಸರತ್,ಚಿನ್ನವೆಂಕಟ್, ವಿಜಯ್ ಕುಮಾರ್,ಸೌಕಯ್ಯ,ಹಾಗೂ ಇನ್ನಿತರರು ಇದ್ದರು...
    user_ಉಸ್ಮಾನ್ ಖಾನ್
    ಉಸ್ಮಾನ್ ಖಾನ್
    Local News Reporter ಹನೂರು, ಚಾಮರಾಜನಗರ, ಕರ್ನಾಟಕ•
    10 hrs ago
  • ಬೆಂಗಳೂರು ಗ್ರಾಮಾಂತರ ರಸ್ತೆ ಡಿವೈಡರ್ ಗೆ ಗುದ್ದಿದ ಕಾರು. ಓರ್ವನ ಸ್ಥಿತಿ ಗಂಭೀರ , ಇಬ್ಬರಿಗೆ ಗಾಯ. ಯಲಹಂಕ ತಾಲೂಕಿ‌ನ ಇಟಗಲ್ ಪುರ ಗೇಟ್ ಬಳಿ ಘಟನೆ. ಕಾಕೋಳ್ ರಸ್ತೆಯಿಂದ ರಾಜಾನುಕುಂಟೆಗೆ ಬರುವ ವೇಳೆ ಘಟನೆ. ವೇಗವಾಗಿ ಬಂದು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹಿಡೆದ ಪರಿಣಾಮ‌ ಕಾರು ಪಲ್ಟಿಯಾಗಿದೆ‌ ಗಾಯಾಳನ್ನ ಯಲಹಂಕದ‌ ಖಾಸಗಿ ಆಸ್ಪತ್ರೆಗೆ ರವಾನೆ‌ ಓರ್ವನ‌ ತಲೆಗೆ ಗಂಭೀರ ಗಾಯ ಹಿನ್ನಲೆ‌ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ. ಗಾಯಾಳುಗಳ‌ ಮಾಹಿತಿ ಕಲೆ ಹಾಕುತ್ತಿರುವ ಪೋಲೀಸರು ರಾಜಾನುಕುಂಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಯಲಹಂಕ ತಾಲೂಕಿನ ರಾಜಾನುಗುಂಟೆ
    1
    ಬೆಂಗಳೂರು ಗ್ರಾಮಾಂತರ
ರಸ್ತೆ ಡಿವೈಡರ್ ಗೆ ಗುದ್ದಿದ ಕಾರು.
ಓರ್ವನ ಸ್ಥಿತಿ ಗಂಭೀರ , ಇಬ್ಬರಿಗೆ ಗಾಯ.
ಯಲಹಂಕ ತಾಲೂಕಿ‌ನ ಇಟಗಲ್ ಪುರ ಗೇಟ್ ಬಳಿ ಘಟನೆ.
ಕಾಕೋಳ್ ರಸ್ತೆಯಿಂದ ರಾಜಾನುಕುಂಟೆಗೆ ಬರುವ ವೇಳೆ ಘಟನೆ.
ವೇಗವಾಗಿ ಬಂದು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹಿಡೆದ ಪರಿಣಾಮ‌ ಕಾರು ಪಲ್ಟಿಯಾಗಿದೆ‌
ಗಾಯಾಳನ್ನ ಯಲಹಂಕದ‌ ಖಾಸಗಿ ಆಸ್ಪತ್ರೆಗೆ ರವಾನೆ‌
ಓರ್ವನ‌ ತಲೆಗೆ ಗಂಭೀರ ಗಾಯ ಹಿನ್ನಲೆ‌ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ.
ಗಾಯಾಳುಗಳ‌ ಮಾಹಿತಿ ಕಲೆ ಹಾಕುತ್ತಿರುವ ಪೋಲೀಸರು
ರಾಜಾನುಕುಂಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ಯಲಹಂಕ ತಾಲೂಕಿನ ರಾಜಾನುಗುಂಟೆ
    user_Bengaluru Rural News
    Bengaluru Rural News
    ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ, ಕರ್ನಾಟಕ•
    9 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.