ಹೊಸ ಕರಡು ಮತದಾರರ ಪಟ್ಟಿ ಪ್ರಕಟಣೆ: ಮಲ್ಲಾಪುರದಲ್ಲಿ ಮತದಾರರ ಜಾಗೃತಿ* ಅರಕೇರಾ:* ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಪಿ.ಎಸ್ ನಂ. 220 ಮತ್ತು 221 ರ ಹೊಸ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಯಿತು. ಗ್ರಾಮಸ್ಥರ ಸಮ್ಮುಖದಲ್ಲಿ ಪಟ್ಟಿ ಪ್ರಕಟಿಸಿ, ಮತದಾರರ ಪಟ್ಟಿಯಲ್ಲಿರುವ ತಮ್ಮ ಹೆಸರು, ವಿಳಾಸ ಸೇರಿದಂತೆ ಇನ್ನಿತರ ವಿವರಗಳನ್ನು ಖುದ್ದಾಗಿ ಪರಿಶೀಲಿಸಿಕೊಳ್ಳುವಂತೆ ತಿಳಿಸಲಾಯಿತು. ಹೆಸರು ಅಥವಾ ವಿಳಾಸದಲ್ಲಿ ಲೋಪದೋಷಗಳಿದ್ದರೆ ಕೂಡಲೇ ತಿದ್ದುಪಡಿ ಮಾಡಿಸಿಕೊಳ್ಳಲು ಹಾಗೂ 18 ವರ್ಷ ಪೂರ್ಣಗೊಂಡ ಅರ್ಹ ಯುವಕ-ಯುವತಿಯರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲು ಸೂಚಿಸಲಾಯಿತು. ಮತದಾನವು ಪ್ರತಿಯೊಬ್ಬರ ಹಕ್ಕು ಹಾಗೂ ಜವಾಬ್ದಾರಿಯಾಗಿದ್ದು, ಎಲ್ಲರೂ ಮತದಾರರ ಪಟ್ಟಿ ಪರಿಶೀಲಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಆಂಜನೇಯ ತಿಳಿಸಿದ್ದರು ಈ ಕಾರ್ಯಕ್ರಮದಲ್ಲಿ ಬಿಎಲ್ಒ,ಕಲ್ಲೂರ ಲಲಿತಾ, ಗ್ರಾಮದ ಮುಖಂಡರಾದ ಜಗನಾಥ ಜೆಡಿಎಸ್ ಸದಸ್ಯರು,ನರಸಪ್ಪ ಕಾಂಗ್ರೆಸ್ ಸದಸ್ಯರು, ವೆಂಕಟೇಶ ಬಿಜೆಪಿ ಸದಸ್ಯರು, ಬಸವರಾಜ ಸರಗಿನ ಬಿಜೆಪಿ ಸದಸ್ಯರು, ವಿಷ್ಟುಬಾ ಗಾಲಿ ಬಿಜೆಪಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಹೊಸ ಕರಡು ಮತದಾರರ ಪಟ್ಟಿ ಪ್ರಕಟಣೆ: ಮಲ್ಲಾಪುರದಲ್ಲಿ ಮತದಾರರ ಜಾಗೃತಿ* ಅರಕೇರಾ:* ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಪಿ.ಎಸ್ ನಂ. 220 ಮತ್ತು 221 ರ ಹೊಸ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಯಿತು. ಗ್ರಾಮಸ್ಥರ ಸಮ್ಮುಖದಲ್ಲಿ ಪಟ್ಟಿ ಪ್ರಕಟಿಸಿ, ಮತದಾರರ ಪಟ್ಟಿಯಲ್ಲಿರುವ ತಮ್ಮ ಹೆಸರು, ವಿಳಾಸ ಸೇರಿದಂತೆ ಇನ್ನಿತರ ವಿವರಗಳನ್ನು ಖುದ್ದಾಗಿ ಪರಿಶೀಲಿಸಿಕೊಳ್ಳುವಂತೆ ತಿಳಿಸಲಾಯಿತು. ಹೆಸರು ಅಥವಾ ವಿಳಾಸದಲ್ಲಿ ಲೋಪದೋಷಗಳಿದ್ದರೆ ಕೂಡಲೇ ತಿದ್ದುಪಡಿ ಮಾಡಿಸಿಕೊಳ್ಳಲು ಹಾಗೂ 18 ವರ್ಷ ಪೂರ್ಣಗೊಂಡ ಅರ್ಹ ಯುವಕ-ಯುವತಿಯರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಿಕೊಳ್ಳಲು ಸೂಚಿಸಲಾಯಿತು. ಮತದಾನವು ಪ್ರತಿಯೊಬ್ಬರ ಹಕ್ಕು ಹಾಗೂ ಜವಾಬ್ದಾರಿಯಾಗಿದ್ದು, ಎಲ್ಲರೂ ಮತದಾರರ ಪಟ್ಟಿ ಪರಿಶೀಲಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಆಂಜನೇಯ ತಿಳಿಸಿದ್ದರು ಈ ಕಾರ್ಯಕ್ರಮದಲ್ಲಿ ಬಿಎಲ್ಒ,ಕಲ್ಲೂರ ಲಲಿತಾ, ಗ್ರಾಮದ ಮುಖಂಡರಾದ ಜಗನಾಥ ಜೆಡಿಎಸ್ ಸದಸ್ಯರು,ನರಸಪ್ಪ ಕಾಂಗ್ರೆಸ್ ಸದಸ್ಯರು, ವೆಂಕಟೇಶ ಬಿಜೆಪಿ ಸದಸ್ಯರು, ಬಸವರಾಜ ಸರಗಿನ ಬಿಜೆಪಿ ಸದಸ್ಯರು, ವಿಷ್ಟುಬಾ ಗಾಲಿ ಬಿಜೆಪಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
- ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಗೋನಾಳ ಗ್ರಾಮೀಣವಾಗದ ಮಕ್ಕಳ ಪ್ರತಿಭೆ ಸಾರ್ವಜನಿಕರು ವಿಕಿಸಿ1
- *ಅಕ್ರಮ, ಗ್ಯಾಸ್ ಕಳ್ಳತನ ಹಾಗೂ ಗ್ರಾಹಕರಿಗೆ ವಂಚನೆ ಕುರಿತು ತನಿಖೆಗೆ ಜಿಲ್ಲಾಧಿಕಾರಿಗೆ ಮನವಿ* ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿರುವ ಇಂಡಿಯನ್ ಗ್ಯಾಸ್ ಸಿಲೆಂಡರ್ ವಿತರಣಾ ಕೇಂದ್ರದಲ್ಲಿ ನಡೆಯುತ್ತಿರುವ ಅಕ್ರಮ, ಗ್ಯಾಸ್ ಕಳ್ಳತನ ಹಾಗೂ ಗ್ರಾಹಕರಿಗೆ ವಂಚನೆ ಕುರಿತು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು. ಮಾನ್ಯರೇ, ಈ ಮೇಲ್ಕಂಡ ವಿಷಯಕ್ಕೆ ಸಂಬAಧಿಸಿದAತೆ, ಜಯ ಕರ್ನಾಟಕ ಜನಪರ ವೇದಿಕೆ ತಮ್ಮಲ್ಲಿ ಈ ಮನವಿ ಮೂಲಕ ವಿನಂತಿಸಿಕೊಳ್ಳುವುದೇನೆAದರೆ, ಶಹಾಪುರ ತಾಲೂಕಿನ ಸಗರ.ಬಿ ಗ್ರಾಮದಲ್ಲಿರುವ ಇಂಡಿಯನ್ ಗ್ಯಾಸ್ ಸಿಲೆಂಡರ್ ವಿತರಣಾ ಕೇಂದ್ರದಲ್ಲಿ ಗ್ರಾಹಕರಿಗೆ ಗ್ಯಾಸ್ ಸಿಲೆಂಡರ್ ವಿತರಿಸುವ ಸಂದರ್ಭದಲ್ಲಿ ಹಲವು ಅಕ್ರಮಗಳು ನಡೆಯುತ್ತಿವೆ. ಕಂಪನಿಯಿAದ ಬಂದ ಗ್ಯಾಸ್ ಸಿಲೆಂಡರ್‌ನಲ್ಲಿರುವ ಸುಮಾರು ೧೫ ಕೆ.ಜಿ. ಗ್ಯಾಸ್‌ನಲ್ಲಿ ಸ್ವಲ್ಪ ಪ್ರಮಾಣವನ್ನು ಖಾಲಿ ಇರುವ ಗ್ಯಾಸ್‌ಗಳಿಗೆ ಡಂಪ್ ಮಾಡಿ ಅಕ್ರಮವಾಗಿ ತೆಗೆದು, ಗ್ರಾಹಕರಿಗೆ ಕಡಿಮೆ ಪ್ರಮಾಣದ ಗ್ಯಾಸ್ ಇರುವ ಸಿಲೆಂಡರ್‌ಗಳನ್ನು ವಿತರಿಸಲಾಗುತ್ತಿದೆ ಇದರಿಂದ ಗ್ರಾಹಕರು ಆರ್ಥಿಕವಾಗಿ ವಂಚನೆಗೊಳಗಾಗುತ್ತಿದ್ದಾರೆ. ಇದಲ್ಲದೇ, ಗ್ರಾಹಕರಿಂದ ಮುಂಗಡವಾಗಿ OPT ಪಡೆದುಕೊಂಡು, ಗ್ಯಾಸ್ ಸಿಲೆಂಡರ್ ವಿತರಣೆ ಮಾಡದೇ, ಅದೇ ಸಿಲೆಂಡರ್‌ಗಳನ್ನು ಇತರರಿಗೆ ಅಕ್ರಮವಾಗಿ ಹೆಚ್ಚಿನ ಮೊತ್ತಕ್ಕೆ ಬೇರೆಯವರಿಗೆ ಮಾರಾಟ ಮಾಡಲಾಗುತ್ತಿದೆ. ಈ ರೀತಿಯ ಕ್ರಮದಿಂದ ನೈಜ ಗ್ರಾಹಕರಿಗೆ ಗ್ಯಾಸ್ ಸಿಗದೆ ತೀವ್ರ ತೊಂದರೆ ಉಂಟಾಗುತ್ತಿದೆ. ಅಲ್ಲದೆ, ಸರ್ಕಾರಿ ರಜೆ ದಿನಗಳಲ್ಲಿಯೂ ಗ್ಯಾಸ್ ಏಜೆನ್ಸಿಯನ್ನು ತೆರೆದು ನಿಯಮಬಾಹಿರವಾಗಿ ವ್ಯವಹಾರ ನಡೆಸಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದು ಅಗತ್ಯವಾಗಿದೆ. ಆದ್ದರಿಂದ, ಸಗರ ಗ್ರಾಮದ ಇಂಡಿಯನ್ ಗ್ಯಾಸ್ ವಿತರಣಾ ಕೇಂದ್ರದ ವಿರುದ್ಧ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳ ಮೂಲಕ ಪರಿಶೀಲನೆ ಮತ್ತು ತನಿಖೆ ನಡೆಸಿ, ಗ್ಯಾಸ್‌ನ ತೂಕ, ವಿತರಣೆ ದಾಖಲೆಗಳು, OTP ದಾಖಲೆಗಳು, ಮಾರಾಟದ ವಿವರಗಳು ಹಾಗೂ ಗ್ರಾಹಕರಿಗೆ ನೀಡಿರುವ ಸಿಲೆಂಡರ್‌ಗಳ ಕುರಿತು ಪರಿಶೀಲನೆ ನಡೆಸಬೇಕು. ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಂಡು, ಗ್ರಾಹಕರಿಗೆ ನ್ಯಾಯ ಒದಗಿಸಬೇಕೆಂದು ವಿನಂತಿಸುತ್ತೇನೆ. ಈ ಸಂದರ್ಭದಲ್ಲಿ ಸೊಪಣ್ಣ ತಾಲೂಕ ಅಧ್ಯಕ್ಷರು, ಜಗದೇವಿ ಹಳಿಸಗರ, ಜಯ ಶಹಾಪುರ, ಜ್ಯೋತಿ ಶಹಾಪುರ, ಪ್ರದೀಪ್ ಅಣಬಿ, ಶರಣು ಖಾನಾಪುರ, ರೆಡ್ಡಿ ಖಾನಾಪುರ, ಅರುಣಾ ಸಾಹುಕಾರ ಖಾನಾಪುರ, ಭೀಮರಾಯ ಬೀದರಾಣಿ, ರಾಮು, ವೆಂಕಟೇಶ ನಾಯಕ ಆಲ್ದಾಳ,4
- ಲೋಕಕಲ್ಯಾಣಕ್ಕಾಗಿ ಸುರಪುರ ತಾಲೂಕಿನ ದೇವಪುರದಿಂದ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನದವರೆಗೆ ಸರ್ವಧರ್ಮ ಪಾದಯಾತ್ರೆ ಸುರಪುರ : ಹೌದು ಸುರಪುರ ತಾಲೂಕಿನ ದೇವಪುರ ಗ್ರಾಮದಿಂದ ಶ್ರೀ ತಿಂಥಣಿ ಮೌನೇಶ್ವರ ದೇವಸ್ಥಾನಕ್ಕೆ ಸರ್ವ ಧರ್ಮದ ವತಿಯಿಂದ ಭಕ್ತಿ ಪೂರ್ವಕ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತು. ಶ್ರೀ ರವಿ ಮುತ್ಯಾ ದೇವಪುರ ಹಾಗೂ ಶ್ರೀ ನಾಗರಾಜ ಮುತ್ಯಾ ದೇವಪುರ ಅವರ ದಿವ್ಯ ನೇತೃತ್ವದಲ್ಲಿ ಈ ಪಾದಯಾತ್ರೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಈ ಪಾದಯಾತ್ರೆಯಲ್ಲಿ ವಿವಿಧ ಧರ್ಮಗಳ ಭಕ್ತರು ಪಾಲ್ಗೊಂಡು ಶ್ರೀ ಮೌನೇಶ್ವರ ದೇವರ ಕೃಪೆಗೆ ಪಾತ್ರರಾದರು1
- ಈದ್ ಮಿಲಾದ್ ಹಬ್ಬವು ಇಸ್ಲಾಂ ಧರ್ಮದ ಕೊನೆಯ ದೂತರಾದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನವನ್ನು ಸ್ಮರಿಸಲು ಆಚರಿಸುವ ಪವಿತ್ರ ದಿನವಾಗಿದೆ ಗೋಗಿ ಎಲ್ಲಿ ಪಥಸಂಚಲನ ನಡೆಯಿತು ಸ್ಥಳೀಯ ಪೊಲೀಸರು, ಮಹಿಳಾ ಸಿಬ್ಬಂದಿ, ಕೆಎಸ್‌ಆರ್‌ಪಿ (KSRP) ತುಕಡಿಗಳು ಮತ್ತು ಗೃಹ ರಕ್ಷಕ ದಳದವರು.ಮಾರ್ಗ: ಊರಿನ ಪ್ರಮುಖ ವೃತ್ತಗಳು, ಮಾರುಕಟ್ಟೆಗಳು ಮತ್ತು ಸಂವೇದನಾಶೀಲ ಪ್ರದೇಶಗಳ ಮೂಲಕ ಸಾಗುತ್ತದೆ1
- ಮಾನ್ವಿಯಲ್ಲಿ ಸಂಭ್ರಮದ ಈದ್ ಮಿಲಾದುನ್ನಬಿ ಮೆರವಣಿಗೆ -ಸಹೋದರತೆಯ ಸಂದೇಶ ಸಾರಿದ ಶಾಸಕ ಹಂಪಯ್ಯ ನಾಯಕ ಮಾನ್ವಿಯಲ್ಲಿ ಸಂಭ್ರಮದ ಈದ್ ಮಿಲಾದುನ್ನಬಿ ಮೆರವಣಿಗೆ -ಸಹೋದರತೆಯ ಸಂದೇಶ ಸಾರಿದ ಶಾಸಕ ಹಂಪಯ್ಯ ನಾಯಕ2
- ಲಿಂಗನಬಂಡಿ ಮೌನೇಶ್ವರ ಪೂಜೆಗೆ ಬಾಕುತಿರುವ ವಿಶ್ವಕರ್ಮ ಸಮಾಜದ ಎಲ್ಲರೂ ಒಂದಾಗೋಣ ಬನ್ನಿ ಸನ್ಮಾನ್ಯ ಶ್ರೀ ಕೆಪಿ ನಂಜುಂಡಿ ಇವರ ಕೈ ಕೊಡ್ಸೋಣ ಎಲ್ಲಾ ಮಠ ಅಧ್ಯಕ್ಷರು ಹಾಗೂ ವಿಶ್ವಕರ್ಮ ಸಮಾಜದ ಬಂಧುಗಳು ವಿನಂತಿ1
- ಈದ್-ಎ-ಮಿಲಾದ್-ಉನ್-ನಬಿ ಅಂಗವಾಗಿ ರಾಯಚೂರಿನಲ್ಲಿ ಮಕ್ಕಳ ವೈಭವದ ಪಾದಯಾತ್ರೆ ರಾಯಚೂರು: ಆಗಸ್ಟ್ 26 ಈದ್-ಎ-ಮಿಲಾದ್-ಉನ್-ನಬಿ ಅವರ ಪವಿತ್ರ ಸಂದರ್ಭದಲ್ಲಿ, ರಾಯಚೂರಿನ ಎಲ್‌ಬಿಎಸ್ ನಗರದ ಮಸೀದಿ-ಎ-ನೂರ್ ಕಮಿಟಿ ವತಿಯಿಂದ ಚಿಕ್ಕ ಮಕ್ಕಳ ವೈಭವದ ಹಾಗೂ ಶಿಸ್ತುಬದ್ಧ ಪಾದಯಾತ್ರೆ ಮೆರವಣಿಗೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಮೆರವಣಿಗೆಯಲ್ಲಿ ಮಕ್ಕಳು ಅತ್ಯಂತ ಶ್ರದ್ಧೆ, ಭಕ್ತಿ ಮತ್ತು ಗೌರವದಿಂದ ನಾತ್-ಎ-ಪಾಕ್ ಹಾಗೂ ಸಲಾಮ್ಗಳನ್ನು ಪಠಿಸುವ ಮೂಲಕ ಪ್ರವಾದಿ ಹಜರತ್ ಮುಹಮ್ಮದ್ ಮುಸ್ತಫಾ ಅವರ ಮೇಲಿನ ತಮ್ಮ ಪ್ರೀತಿ ಮತ್ತು ಗೌರವದ ಪವಿತ್ರ ಸಂದೇಶವನ್ನು ಸಾರಿದರು. ಮೆರವಣಿಗೆಯು ಶಾಂತಿಯುತವಾಗಿ ಹಾಗೂ ಶಿಸ್ತುಬದ್ಧವಾಗಿ ನಡೆಯಲು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿ, ಉತ್ತಮ ಸಹಕಾರ ನೀಡಿದರು. ಪೊಲೀಸ್ ಇಲಾಖೆಯ ಈ ಅಮೂಲ್ಯ ಸಹಕಾರಕ್ಕಾಗಿ ಮಸೀದಿ-ಎ-ನೂರ್ ಕಮಿಟಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಗುತ್ತದೆ. ಈ ಶುಭ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲಾ ಪೋಷಕರು, ಯುವಕರು, ಮಕ್ಕಳು ಹಾಗೂ ಎಲ್‌ಬಿಎಸ್ ನಗರದ ನಿವಾಸಿಗಳಿಗೆ ಮಸೀದಿ-ಎ-ನೂರ್ ಕಮಿಟಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಈದ್-ಎ-ಮಿಲಾದ್-ಉನ್-ನಬಿ ಹಬ್ಬದ ಶುಭಾಶಯಗಳನ್ನು ಸಲ್ಲಿಸಲಾಗುತ್ತದೆ. ಮಸೀದಿ-ಎ-ನೂರ್ ಕಮಿಟಿ ಎಲ್‌ಬಿಎಸ್ ನಗರ, ರಾಯಚೂರು2
- ಬಿಹಾರ್ ರಾಜ್ಯದಲ್ಲಿ ಪ್ರತಿ ಭಟನೆ ಮಾಡಿದ 6-ವರ್ಷದ ಬಾಲಕನಿಗೆ ಪೊಲೀಸ್ ಅರೆಸ್ಟ್ ಮಾಡಿದ್ದಾರೆ1