*ಬೆಂಗಳೂರು ದಕ್ಷಿಣ ನಗರ ಪಾಲಿಕೆ* *ಬೆಂಗಳೂರು, ಏಪ್ರಿಲ್-20, 2026* *ಬನ್ನೇರುಘಟ್ಟ ರಸ್ತೆ ದುರಸ್ತಿ ಕಾರ್ಯ ಪ್ರಾರಂಭ, ಪ್ರಾಥಮಿಕವಾಗಿ 1.5 ಕಿ.ಮೀ ಡಾಂಬರೀಕರಣ : ಆಯುಕ್ತ ಕೆ. ಎನ್ ರಮೇಶ್* ಬೆಂಗಳೂರು ನಗರದ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಒಂದಾದ ಬನ್ನೇರಘಟ್ಟ ರಸ್ತೆಯು ಬಿಡಬ್ಲ್ಯುಎಸ್‌ಎಸ್‌ಬಿ ವತಿಯಿಂದ ಕೈಗೊಳ್ಳಲಾಗಿದ್ದ ಒಳಚರಂಡಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಳಿಂದಾಗಿ ತೀವ್ರವಾಗಿ ಹದಗೆಟ್ಟಿತ್ತು. ಈ ಕಾಮಗಾರಿಯಿಂದ ರಸ್ತೆಯ ಮೇಲ್ಮೈ ಹಾಳಾಗಿ ದಿನನಿತ್ಯ ಸಂಚರಿಸುವ ಸಾವಿರಾರು ವಾಹನ ಸವಾರರು ಮತ್ತು ಸ್ಥಳೀಯ ನಿವಾಸಿಗಳು ತೀವ್ರ ಧೂಳಿನ ಸಮಸ್ಯೆ ಹಾಗೂ ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿತ್ತು. *ಸಾರ್ವಜನಿಕ ದೂರಿನ ಮೇರೆಗೆ ಆಯುಕ್ತರು ಕೈಗೊಂಡಿದ್ದ ತಪಾಸಣೆ* ಬನ್ನೇರುಘಟ್ಟ ಮುಖ್ಯರಸ್ತೆಯ ಅಸ್ತವ್ಯಸ್ಥತೆ ಕುರಿತಂತೆ ಸಾರ್ವಜನಿಕರ ದೂರುಗಳು ಹಾಗೂ ಮಾಧ್ಯಮಗಳ ವರದಿಗಳನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರಾದ ಶ್ರೀ ಕೆ ಎನ್ ರಮೇಶ್ ರವರು ತಪಾಸಣೆ ನಡೆಸಿದರು. ಸ್ಥಳದಲ್ಲಿದ್ದ ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿದ ಆಯುಕ್ತರು, ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ತಕ್ಷಣವೇ ರಸ್ತೆಯನ್ನು ಡಾಂಬರೀಕರಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. *ಬನ್ನೇರುಘಟ್ಟ ಮುಖ್ಯರಸ್ತೆಯ ಡಾಂಬರೀಕರಣ ಕಾರ್ಯ ಪ್ರಾರಂಭ* ಆಯುಕ್ತರ ಆದೇಶದ ಮೇರೆಗೆ, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು, ಪ್ರಾಥಮಿಕವಾಗಿ ರಸ್ತೆಯ ಒಟ್ಟು 1.5 ಕಿ.ಮೀ ಉದ್ದದ ಅತೀ ಹೆಚ್ಚು ಹಾನಿಗೊಳಗಾದ ಭಾಗದಲ್ಲಿ ದುರಸ್ತಿ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. *ಆಯುಕ್ತರ ಹೇಳಿಕೆ* ಬನ್ನೇರುಘಟ್ಟ ಮುಖ್ಯರಸ್ತೆಯ ಕಲ್ಯಾಣಿ ಚೌಲ್ಟ್ರಿಯಿಂದ ಆರಂಭಗೊಂಡು ಐಐಎಂಬಿ (IIMB) ಮೆಟ್ರೋ ನಿಲ್ದಾಣದವರೆಗಿನ ಸುಮಾರು 1 ಕಿ.ಮೀ ರಸ್ತೆಯ ಡಾಂಬರೀಕರಣದ ಕಾಮಗಾರಿ ನಡೆಸಲಾಗಿದ್ದು, ವಾಹನ ಸವಾರರಿಗೆ ಸಂಚಾರಕ್ಕೆ ಸುಗಮವಾಗಿದೆ. ಬಾಕಿ ಉಳಿದಿರುವ ರಸ್ತೆಯ ಭಾಗದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ನಾಳೆ ರಾತ್ರಿಯೊಳಗೆ ಸಂಪೂರ್ಣವಾಗಿ ಡಾಂಬರೀಕರಣವನ್ನು ಮುಗಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಡಾಂಬರೀಕರಣ ಕಾಮಗಾರಿಯನ್ನು ತುರ್ತಾಗಿ ಕೈಗೊಂಡಿದ್ದು, ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಇದರಿಂದ ಬನ್ನೇರುಘಟ್ಟ ಮುಖ್ಯರಸ್ತೆ ಧೂಳು ಮುಕ್ತ ರಸ್ತೆಯಾಗಿ, ಸುಗಮ ವಾಹನ ಸಂಚಾರಕ್ಕೆ ಅವಕಾಶ ದೊರೆಯಲಿದೆ ಎಂದು ತಿಳಿಸಿದರು.

- *ಶಾಸಕ ಅಶ್ವಥ್ ನಾರಾಯಣ್ ಹೇಳಿಕೆ.* *ಇಡಿ ದಾಳಿ ವಿಚಾರ..* ನನಗೂ ಇದರ ಬಗ್ಗೆ ಮಾಹಿತಿ ಇಲ್ಲ.. ಏನೆಲ್ಲಾ ಆಗಲಿದೆ ಕಾದು ನೊಡೋಣ.. ಇಡಿ ದಾಳಿ ಆದ ಮೇಲೆ ಮಾಹಿತಿ ಸಿಗಲಿದೆ.. ಯಾವ ವಿಷಯಕ್ಕೆ ಆಗಿದೆ ಅನ್ನೋದು ಈಗಲೇ ಹೇಳಲಾಗಲ್ಲ.. ಉಪ್ಪು ತಿಂದವರು ನೀರು ಕುಡಿಯಬೇಕು.. ಅವರ ಮೇಲೆ ಕ್ರಮ ಆಗಬೇಕು.. ಬಿಜೆಪಿ ಮೇಲೆ ಆರೋಪ ಸರಿಯಲ್ಲ.. ಸತ್ಯ ಹೊರಗೆ ಬರಬೇಕು.. ಬಿಟ್ ಕಾಯಿನ್ ವಿಚಾರದಲ್ಲಿ ತನಿಖೆ ಆಗಬೇಕು ಅಂತ ಕಾಂಗ್ರೆಸ್ ನಾಯಕರು ಹೇಳ್ತಾರೆ.. ತನಿಖೆಯಾಗಿ ಸತ್ಯ ಹೊರಗೆ ಬರಲಿ.. ನೂರು ವರ್ಷವಾದ್ರೂ ಅದನ್ನ ಪತ್ತೆ ಹಚ್ಚಬಹುದು.. ಪ್ರಿಯಾಂಕ್ ಖರ್ಗೆ ಹೇಳೋದಲ್ಲ, ಮಾಡಬೇಕು.. ಅಧಿಕಾರಕ್ಕೆ ಬಂದು ಮೂರು ವರ್ಷಗಳಾದ್ರೂ ತನಿಖೆ ಮಾಡಿಲ್ಲ.. ಅಶ್ವಥ್ ನಾರಾಯಣ್. *ಕಾವೇರಿ ನಿರೀನ ಕೊರತೆ ವಿಚಾರ..* ಈಗ ಬೇಸಿಗೆ ಕಾಲ ಆರಂಭವಾಗ್ತಿರೋ ಹಿನ್ನೆಲೆ.. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು.. ಕುಡಿಯುವ ನೀರಿಗೆ ಕೊರತೆ ಇಲ್ಲದಂತೆ ಕ್ರಮ ಆಗಬೇಕು.. ಸರ್ಕಾರ BWSSB ಮೂಲಕ ನೀರನ್ನ ಪೂರೈಸಬೇಕು.. ನಿರೀನ ಕೊರತೆಯಾಗದಂತೆ ಜಲಮಂಡಳಿ ಕೆಲಸ ಮಾಡಲಿ.. ಸರ್ಕಾರ ಜನರ ಪರವಾಗಿ ಕೆಲಸ ಮಾಡಲಿ..1
- *ELDERS BEWARE* Oh, poor old man…! He came to the bank to deposit money, wrote the details on the deposit slip, and then suddenly collapsed from the very chair where he was sitting and died. Lakshminarayana, a retired employee residing in Nacharam, came on Wednesday to the Punjab National Bank in Habsiguda to deposit some cash; he suffered a heart attack, fell down right there, and collapsed. The bank staff rushed him to the hospital, but by the time he reached there the doctors said he had already passed away. During summer, it is better not to let elderly people go out unnecessarily, as far as possible1
- ಕುಂದಲಹಳ್ಳಿಯಲ್ಲಿ ಬೈಕ್ ಅಪಘಾತ, ಇಬ್ಬರಿಗೆ ಗಾಯ ಇಂಡಿಕೇಟರ್ ಇಲ್ಲದೆ ತಿರುವು, ಡಿಕ್ಕಿ ಸಂಭವ1
- ನಗರೇನಹಳ್ಳಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಸೂಲಿಬೆಲೆ ಹೋಬಳಿಯ ನಗರೇನಹಳ್ಳಿ ಗ್ರಾಮದಲ್ಲಿ ಸುಮಾರು 30 ಲಕ್ಷ ರೂ. ಆರ್‌ಡಿಪಿಆರ್ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಿಸುವ ಕಾಮಗಾರಿಯ ಭೂಮಿಪೂಜೆಯನ್ನು ಗಣ್ಯರೊಂದಿಗೆ ನೆರವೇರಿಸಲಾಯಿತು1
- ನಾರಿಶಕ್ತಿ ವಂದನಾ ಮಸೂದೆ ಮಂಡನೆ ವಿರುದ್ಧ ಮತ ಚಲಾಯಿಸಿದ ಕಾಂಗ್ರೇಸ್ ಮಿತ್ರ ಪಕ್ಷಗಳ ನಡೆ ಖಂಡಿಸಿ ಬೃಹತ್ ಪ್ರತಿಭಟನೆ1
- Post by Chand Pasha1
- KOLAR KI.AWAAZ KOUSAR1
- Share your fantasy Avatar on socials with a caption on “Why Dark fantasy is the tastiest cookie?” and tag *@sunfeastdarkfantasy* with the hashtag *#millionfantasies* to stand a chance to *Party with SRK* along with a chance to win 1 million exciting prizes like *SUV, Bike, International Trip etc.*1