Shuru
Apke Nagar Ki App…
ದೇಶದ ನಂಬರ್ ಒನ್ ವಿಐ Vi ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ದೇಶದ ನಂಬರ್ ಒನ್ ಬಿ ಐ ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ರೂ 325 ರಿಚಾರ್ಜ್ ಮಾಡಿಸಿದರೆ ಅನ್ಲಿಮಿಟೆಡ್ ಡಾಟಾ ಅನ್ಲಿಮಿಟೆಡ್ ಕರೆ 100 ಎಸ್ ಎಮ್ ಎಸ್ ಇಂದೇ ವಿಐ ಗ್ರಹಕರಾಗಿ ಕೊಡುಗೆ ತಮ್ಮದಾಗಿಸಿಕೊಳ್ಳಿ ವಿತರಕರ ವಿಶೇಷ ಪ್ರಕಟಣೆ
ಮಾಗನೂರು ಎಂ ಶಿವಕುಮಾರ್
ದೇಶದ ನಂಬರ್ ಒನ್ ವಿಐ Vi ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ದೇಶದ ನಂಬರ್ ಒನ್ ಬಿ ಐ ಕಂಪನಿಯಿಂದ ಗ್ರಾಹಕರಿಗೆ ಧಮಾಕ ಕೊಡುಗೆ ರೂ 325 ರಿಚಾರ್ಜ್ ಮಾಡಿಸಿದರೆ ಅನ್ಲಿಮಿಟೆಡ್ ಡಾಟಾ ಅನ್ಲಿಮಿಟೆಡ್ ಕರೆ 100 ಎಸ್ ಎಮ್ ಎಸ್ ಇಂದೇ ವಿಐ ಗ್ರಹಕರಾಗಿ ಕೊಡುಗೆ ತಮ್ಮದಾಗಿಸಿಕೊಳ್ಳಿ ವಿತರಕರ ವಿಶೇಷ ಪ್ರಕಟಣೆ
More news from ಕರ್ನಾಟಕ and nearby areas
- ಅಲುಗಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಸಾರ್ವಜನಿಕರಲ್ಲಿ ಆತಂಕ ಕೋಟಿಗಟ್ಟಲೆ ಯೋಜನೆ ಕಳಪೆ ಸಂಶಯ ಅಲಗಾಡುತ್ತಿದೆ ರಾಷ್ಟ್ರೀಯ ಹೆದ್ದಾರಿ 948 ಸತ್ತಿಗಾಲ ಹೊಸ ಸೇತುವೆ ಜನರಲ್ಲಿ ಆತಂಕ ಮಳವಳ್ಳಿಯಿಂದ ಕೊಳ್ಳೇಗಾಲಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ 948 ರಸ್ತೆಗೆ ಸತ್ತಿಗಾಲ ಬಳಿ ನಿರ್ಮಿಸಿರುವ ಹೊಸ ಮೇಲ್ ಸೇತುವೆ ಅಲುಗಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ವ್ಯಕ್ತಪಡಿಸಿದೆ. ಈ ಬಗ್ಗೆ ಕಳೆದ ವಾರ ಸತಿಗಾಲ ಸೇತುವೆ ಬಳಿ ನಿಂತುಕೊಂಡು ಕಾವೇರಿ ನದಿಯ ನೀರು ಹರಿಯುವಿಕೆ ಹಾಗೂ ಸುತ್ತಮುತ್ತಲ ಸುಂದರ ವಾತಾವರಣವನ್ನು ನೋಡುತ್ತಿದ್ದ ಹಲವಾರು ಜನರು ಸತ್ತಿಗಾಲ ಹೊಸ ಸೇತುವೆಯ ಮೇಲೆ ನಿಂತಿದ್ದಾಗ ವಾಹನಗಳು ಹೋಗುವಾಗ ಬರುವಾಗ ಅದರಲ್ಲೂ ಅತಿ ಭಾರವಾದ ವಾಹನಗಳು ಸಂಚರಿಸುವಾಗ ಈ ಸೇತುವೆ ಅಲಗಾಡುತ್ತಿರುವ ರೋಮಾಂಚನ ಹಾಗೂ ಭಯದ ವಾತಾವರಣ ಸೃಷ್ಟಿಯಾಯಿತು ಇದು ಇತ್ತೀಚಿಗೆ ನಿರ್ಮಿಸಿರುವ ಸೇತುವೆಯಾಗಿದೆ ಹಳೆಯ ಸೇತುವೆ ಇದಕ್ಕಿಂತ ತುಂಬಾ ಉತ್ತಮ ವಿನ್ನಬಹುದಾಗಿದೆ. ಈ ಕಾಮಗಾರಿಗು ಮುನ್ನ ಹಳೆಯ ಸೇತುವೆಯ ಪುನರ್ ನಿರ್ಮಾಣ ಆಗಿತ್ತು ಅದಕ್ಕೆ ಮೂರು ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗಿತ್ತು 948 ನಂತರ ರಾಷ್ಟ್ರೀಯ ಹೆದ್ದಾರಿ ರಸ್ತೆ ಹೊಸದಾಗಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಇದಕ್ಕೆ ಹೊಸ ಮೇಲ್ ಸೇತುವೆ ನಿರ್ಮಾಣ ಮಾಡಲಾಗಿದೆ ಆದರೆ ಈ ಸೇತುವೆಯ ಕಾಮಗಾರಿ ಕಳಪೆ ಎನ್ನುವ ಆತಂಕ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ ಏಕೆಂದರೆ ವಾಹನಗಳು ಸಂಚರಿಸುವಾಗ ಸೇತುವೆ ಭೂಕಂಪವಾದಾಗ ಯಾವ ರೀತಿ ಅಲುಗಾಡುತ್ತದೆ, ಶಬ್ದ ಅನುಭವ ಆಗುತ್ತದೋ ಆ ರೀತಿಯಲ್ಲಿ ಇಲ್ಲಿ ಶಬ್ದ ಬರುತ್ತದೆ ಇದು ಇದು ಕಳಪೆ ಕಾಮಗಾರಿಯೂ ಅಥವಾ ಆಧುನಿಕ ತಂತ್ರಜ್ಞಾನವು ಎಂಬ ಅನುಮಾನ ಮೂಡಿಸಿದೆ ಇನ್ನಾದರೂ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಇದರ ಗುಣಮಟ್ಟ ಪರಿಶೀಲನೆ ನಡೆಸಿ ಕ್ರಮ ವಹಿಸುವ ಮೂಲಕ ಸಾರ್ವಜನಿಕ ಸಂಚಾರಕ್ಕೆ ಯಾವುದೇ ಆತಂಕ ಅಡ್ಡಿ ಅನಾಹುತ ಸಂಭವಿಸಿದಂತೆ ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ1
- *ವಿಬಿ-ಜಿ ರಾಮ್ ಜಿ ಯೋಜನೆಯಡಿ ದುಡಿಯುವ ಕಾರ್ಮಿಕರಿಗೆಸಮಯಕ್ಕೆ ಸರಿಯಾಗಿ ಕೂಲಿ ಪಾವತಿಸಿ- ಜಿಲ್ಲಾಪಂಚಾಯಿತಿ ನಿಗದಿತ ಅವಧಿಯೊಳಗೆ ಕೂಲಿ ಪಾವತಿಯಾಗುವುದು ಅತ್ಯಂತ ಮುಖ್ಯ. ಹಾಜರಾತಿ, ದಾಖಲೆ ನಿರ್ವಹಣೆ ಹಾಗೂ ವೇತನ ಪಾವತಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಯಾವುದೇ ವಿಳಂಬವಿಲ್ಲದೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜಿಪಂ ಸಿಈಓ ಸೂಚಿಸಿದರು. ಕಾರ್ಮಿಕರು ನಿರಂತರವಾಗಿ ಉದ್ಯೋಗ ಕಲ್ಪಿಸುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ, ಪ್ರಸ್ತುತ ನಡೆಯುತ್ತಿರುವ ಮಸ್ಟರ್ ರೋಲ್ ಹಾಗೂ ಎನ್‌ಎಂಆರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮುಂದಿನ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಉದ್ಯೋಗದ ನಿರಂತರತೆಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. *ಉತ್ತಮ ಗುಣಮಟ್ಟದ ಕಾಮಗಾರಿಗೆ ಆದ್ಯತೆ* : ಯೋಜನೆಯಡಿ ನಿರ್ಮಾಣವಾಗುವ ಪ್ರತಿಯೊಂದು ಆಸ್ತಿಯೂ ಗ್ರಾಮದ ಜನರಿಗೆ ದೀರ್ಘಕಾಲದವರೆಗೆ ಪ್ರಯೋಜನ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಯೋಜನೆಯ ಕಾಮಗಾರಿ ಅನುಷ್ಠಾನದಲ್ಲಿ ಉತ್ತಮ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. “ಗುಣಮಟ್ಟದ ಕಾಮಗಾರಿ – ಶಾಶ್ವತ ಆಸ್ತಿ – ಸಮಗ್ರ ಗ್ರಾಮೀಣ ಅಭಿವೃದ್ಧಿ” ಎಂಬ ಪ್ರಮುಖ ಆಶಯದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಳ್ಳುವ ಪ್ರತಿಯೊಂದು ಕಾಮಗಾರಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. *NMMS ಹಾಜರಾತಿ ದಾಖಲಾತಿ ಕಡ್ಡಾಯ* : ವಿ-ಬಿ-ಜಿ ರಾಮ್ ಜಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಕಾರ್ಮಿಕರ ಹಾಜರಾತಿಯನ್ನು NMMS ಆ್ಯಪ್ ಮೂಲಕ ನಿಯಮಾನುಸಾರ ದಾಖಲಿಸುವುದು ಅತ್ಯಂತ ಮಹತ್ವದ್ದಾಗಿದ್ದು, ಕಾರ್ಮಿಕರು ಕೆಲಸಕ್ಕೆ ಹಾಜರಾದ ಸಮಯದಲ್ಲಿಯೇ ನೈಜ ಸಮಯದ ಹಾಜರಾತಿಯನ್ನು ಅಪ್‌ಲೋಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಜರಾತಿಯಲ್ಲಿ ಸಮಯದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದಲ್ಲಿ ಸಂಬಂಧಪಟ್ಟ ಸಿಬ್ಬಂದಿಗಳು ತಾಲ್ಲೂಕು ಪಂಚಾಯತ ಮುಖೇನಾ ಜಿಲ್ಲಾ ಪಂಚಾಯತ್ ತಂಡಕ್ಕೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಆ ದಿನವೇ ಕಡ್ಡಾಯವಾಗಿ ಕ್ರಮವಹಿಸಬೇಕು. ಯಾವುದೇ ಸಂದರ್ಭದಲ್ಲಿಯೂ ಸಹ ತಾಂತ್ರಿಕ ಸಮಸ್ಯೆಯಿಂದಾಗಿ ಹಾಜರಾತಿ ತೆಗೆದುಕೊಳ್ಳದೇ ಹೋದಲ್ಲಿ ಸಂಬಂಧಪಟ್ಟ ಅಧಿಕಾರಿ /ಸಿಬ್ಬಂದಿಗಳ ಮೇಲೆ ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದರು. *ಕಾಮಗಾರಿಗಳ ನಿರಂತರ ಮೇಲ್ವಿಚಾರಣೆಗೆ ಸೂಚನೆ* ಯೋಜನೆಯಡಿ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಕಾಮಗಾರಿಗಳು ನಿರ್ವಹಣೆಯ ಕೊರತೆ ಅಥವಾ ಆಡಳಿತಾತ್ಮಕ ವಿಳಂಬದಿಂದ ಕುಂಠಿತಗೊಳ್ಳಬಾರದು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಅನುಷ್ಠಾನಾಧಿಕಾರಿಗಳು ತಳಮಟ್ಟದಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಕೇವಲ ಕಾಮಗಾರಿಗಳಿಗೆ ಅನುಮೋದನೆ ನೀಡುವುದಕ್ಕೆ ಸೀಮಿತವಾಗದೆ, ಕಾಮಗಾರಿ ಆರಂಭವಾದ ದಿನದಿಂದ ಪೂರ್ಣಗೊಳ್ಳುವವರೆಗೂ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಗುಣಮಟ್ಟ, ಸಮಯಪಾಲನೆ ಹಾಗೂ ಸಾರ್ವಜನಿಕರಿಗೆ ಆಗುವ ಪ್ರಯೋಜನ—ಈ ಮೂರು ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಜಲಸಂರಕ್ಷಣೆ, ಕೃಷಿ ಭೂಮಿಗೆ ನೀರು ಹರಿಸುವ ವ್ಯವಸ್ಥೆ, ಕೆರೆ-ಕಾಲುವೆಗಳ ಪುನಶ್ಚೇತನ ಸೇರಿದಂತೆ ಸಾರ್ವಜನಿಕರಿಗೆ ದೀರ್ಘಕಾಲಿಕ ಪ್ರಯೋಜನ ನೀಡುವ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಇಂತಹ ಕಾಮಗಾರಿಗಳ ಮೂಲಕ ಕೂಲಿಕಾರರಿಗೆ ಉದ್ಯೋಗ ದೊರೆಯುವುದರ ಜೊತೆಗೆ ಗ್ರಾಮದಲ್ಲಿ ಶಾಶ್ವತ ಸಾರ್ವಜನಿಕ ಆಸ್ತಿಗಳ ನಿರ್ಮಾಣವಾಗಬೇಕು ಎಂದು ಸಿಇಒ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಮಂಜುನಾಥ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಐಇಸಿ ಸಂಯೋಜಕರು, ಜಿಎಫ್‌ಟಿ, ಕಾಯಕ ಬಂಧುಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿ ಹಾಜರಿದ್ದರು.1
- All About,Who shud be held responsible/Accountable for all Kinds of Irregularities in #KSBA #Bengaluru *ಭಾರತ ನಲ್ಲಿ ವೈರಲ್*1
- ಮೈಸೂರು ಅರಣ್ಯ ಭವನದಲ್ಲಿ ಆನೆಗಳ ವೀಕ್ಷಣೆಗೆ ನಿರ್ಬಂಧಗಳ ಬಿಗಿ – ದೂರದಿಂದಲೇ ದರ್ಶನ ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆ ನಗರದಲ್ಲಿ ಗಜಪಡೆಯ ಸಂಚಾರ ಆರಂಭವಾಗಿದ್ದು, ಅರಣ್ಯ ಭವನದಲ್ಲಿ ತಂಗಿರುವ ಆನೆಗಳನ್ನು ನೋಡಲು ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಆನೆಗಳ ಸುರಕ್ಷತೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ವೀಕ್ಷಣೆಗೆ ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಿದೆ. ಅರಣ್ಯ ಭವನದ ಆವರಣದಲ್ಲಿ ಇರುವ ಆನೆಗಳ ಬಳಿ ತೆರಳಿ ಸೆಲ್ಫಿ, ಫೋಟೋ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಆನೆಗಳೊಂದಿಗೆ ಅತೀ ಸಮೀಪದಲ್ಲಿ ನಿಂತು ಚಿತ್ರ ತೆಗೆಯುವುದು ಅಪಾಯಕಾರಿಯಾಗಿರುವುದರಿಂದ ಸಾರ್ವಜನಿಕರು ನಿಗದಿತ ಅಂತರದಿಂದಲೇ ಆನೆಗಳನ್ನು ವೀಕ್ಷಿಸುವಂತೆ ಸೂಚಿಸಲಾಗಿದೆ. ಇದರಿಂದ ಆನೆಗಳಿಗೆ ಯಾವುದೇ ರೀತಿಯ ತೊಂದರೆ, ಆತಂಕ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಆನೆಗಳನ್ನು ಹತ್ತಿರದಿಂದ ನೋಡಲು ಸಾಧ್ಯವಾಗದಿದ್ದರೂ, ಅರಣ್ಯ ಭವನದ ಸುತ್ತಮುತ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ದೂರದಿಂದಲೇ ಗಜಪಡೆಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಅರಣ್ಯ ಭವನದ ಮುಖ್ಯ ಗೇಟ್ ಬಳಿಯಲ್ಲಿ ಜನರು ನಿಂತು ಆನೆಗಳ ಚಲನವಲನವನ್ನು ವೀಕ್ಷಿಸುತ್ತಿರುವ ದೃಶ್ಯ ಕಂಡುಬರುತ್ತಿದೆ. ದಸರಾ ಗಜಪಡೆ ಮೈಸೂರಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಆನೆಗಳನ್ನು ನೋಡಲು ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ಉತ್ಸಾಹ ಹೆಚ್ಚಾಗಿದೆ. ಆನೆಗಳೊಂದಿಗೆ ಫೋಟೋ ಅಥವಾ ಸೆಲ್ಫಿ ಪಡೆಯುವ ಆಸೆ ಸಹಜವಾದರೂ, ಅವು ಕಾಡುಪ್ರಾಣಿಗಳಾಗಿರುವುದರಿಂದ ಕ್ಷಣಮಾತ್ರದ ಅಜಾಗರೂಕತೆಯೂ ಅಪಾಯಕ್ಕೆ ಕಾರಣವಾಗಬಹುದು. ಹೀಗಾಗಿ ಸಾರ್ವಜನಿಕರು ಅರಣ್ಯ ಇಲಾಖೆ ವಿಧಿಸಿರುವ ನಿಯಮಗಳನ್ನು ಪಾಲಿಸಿ, ಆನೆಗಳಿಂದ ಸುರಕ್ಷಿತ ಅಂತರ ಕಾಯ್ದುಕೊಂಡು ವೀಕ್ಷಣೆ ಮಾಡಬೇಕಾಗಿದೆ. ಆನೆಗಳಿಗೂ ಯಾವುದೇ ತೊಂದರೆಯಾಗದಂತೆ ಸಹಕರಿಸುವುದು ದಸರಾ ಸಂಭ್ರಮವನ್ನು ಸುರಕ್ಷಿತವಾಗಿ ಕಣ್ತುಂಬಿಕೊಳ್ಳಲು ಅಗತ್ಯವಾಗಿದೆ. ಅರಣ್ಯ ಭವನದ ಗೇಟ್ ಸುತ್ತಲೂ ಜನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಯೂ ಜನರ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ.3
- ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಪ್ರತಿಭಟನೆ ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಪ್ರತಿಭಟನೆ ವರದಿ: ಹೊಮ್ಮನಂಜುಂಡನಾಯಕ ಚಾಮರಾಜನಗರ: ತಾಲೂಕಿನ ಮೂಡಲಹೊಸಹಳ್ಳಿ ಗ್ರಾಮದಲ್ಲಿ ಮತ್ತೊಂದು ಬಾರ್ ಅಂಗಡಿಯನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್‌ಶೆಟ್ಟಿ ಬಣದ ತಾಲೂಕು ಘಟಕದ ನೇತೃತ್ವದಲ್ಲಿ ಗ್ರಾಮಸ್ಥರು ನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿ, ಅಬ್ಕಾರಿ ಇಲಾಖೆಯ ಉಪ ಆಯುಕ್ತ ಚಂದ್ರ ಅವರಿಗೆ ಮನವಿ ಸಲ್ಲಿಸಿದರು. ಬೇಡ ಬೇಡ ಅನಧಿಕೃತ ಬಾರ್ ಅಂಗಡಿ ಬೇಡ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ ಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್‌ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಕ್ವಾಲಿಟಿ ನವೀನ್ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಒಂದು ಮದ್ಯಂಗಡಿವಿದ್ದು, ಅಬ್ಕಾರಿ ಇಲಾಖೆ ಮತ್ತೊಂದು ಮದ್ಯಂಗಡಿ ತೆರೆಯಲು ಹೊರಟಿದ್ದಾರೆ. ಈಗಾಗಲೇ ಸುತ್ತ ಮುತ್ತಲಿನ ಗ್ರಾಮಸ್ಥರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ಈಗಾಗಲೇ ಇರುವ ಬಾರ್ ಅಂಗಡಿ ಸಾಕಾಗಿದೆ. ಮತ್ತೊಂದು ಮದ್ಯಂಗಡಿ ಏಕೆ ಬೇಕಿದೆ ? ಇದು ಒಂದು ದುರಂತವೇ ಸರಿ. ಅಧಿಕಾರಿಗಳು ಶಕ್ತಿ ಇದ್ದರೆ ಇನ್ನೊಂದು ಮದ್ಯಂಗಡಿ ತೆರೆಯಲಿ. ಜನರಿಗೆ ಆಸ್ಪತ್ರೆ, ಶಿಕ್ಷಣ ವ್ಯವಸ್ಥೆ, ಮೆಡಿಕಲ್ ವ್ಯವಸ್ಥೆ ಮಾಡಲಿ ಅದನ್ನು ಬಿಟ್ಟು ಒಂದೇ ಗ್ರಾಮದಲ್ಲಿ ಎರಡು ಬಾರ್‌ಗಳನ್ನು ತೆರೆಯಲು ಮುಂದಾಗಿರುವುದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಮತ್ತೊಂದು ಮತ್ತೊಂದು ಬಾರ್ ಅಂಗಡಿ ತೆರೆದರೆ ಜನರ ಗತಿಯೇನು ಆಗಬೇಕು. ನೂತನವಾಗಿ ಆರಂಭಿಸಲು ಹೊರಟಿರುವ ಬಾರ್ ಅಂಗಡಿ ದಾಖಲೆಗಳು ವ್ಯಾತ್ಯಾಸವಾಗಿರುತ್ತವೆ. ಅದನ್ನು ಪರಿಶೀಲಿಸಿ ನೂತನ ಬಾರ್ ಅಂಗಡಿಯನ್ನು ರದ್ದುಪಡಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಉಪಾಧ್ಯಕ್ಷ ರಾಮಸಮುದ್ರ ಬಾಬು, ಉಮೇಶ, ಪ್ರಧಾನ ಕಾರ್ಯದರ್ಶಿ ಅರ್ಜುನ, ಕಾರ್ಮಿಕ ಅಧ್ಯಕ್ಷ ಹರೀಶ್ ನಾಯಕ, ಟೌನ್ ಅಧ್ಯಕ್ಷ ಅಫ್ನನ್, ಮಹೇಂದ್ರ, ರಿಜ್ವಾನ್, ಚಾಂದು, ಸಿದ್ದರಾಜು, ಅಬ್ದುಲ್‌ಮನಸಿಫ್, ಮೋಸಿನ್, ಸುಹೇಲ್ ಪಾಷ, ಕೇಶವಮೂರ್ತಿ, ಮೂಡಹೊಸಳ್ಳಿ ಗ್ರಾಮಸ್ಥರು, ಸ್ತ್ರೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.4
- ತೆರಕಣಾಂಬಿ:ದಾಸ ಬಣಜಿಗ ಟ್ರಸ್ಟ್ ವತಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ. ಗುಂಡ್ಲುಪೇಟೆ : ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಹಾಗೂ ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸಮಸ್ಯೆ ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದು ಅರವಿಂದ ಕಣ್ಣಾಸ್ಪತ್ರೆಯ ಸಂಪರ್ಕಾಧಿಕಾರಿ ಬಿ. ವಿಜಯಕಾಂತ್ ಸಲಹೆ ನೀಡಿದರು. ತೆರಕಣಾಂಬಿ ಗ್ರಾಮದಲ್ಲಿ ಶ್ರೀ ದಾಸಬಣಜಿಗ ಟ್ರಸ್ಟ್ ಹಾಗೂ ಯುವಕ ಸಂಘದ ಸಹಯೋಗದಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ಹಾಗೂ ಯುವಕರಲ್ಲಿಯೂ ಕಣ್ಣಿನ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಸಕ್ಕರೆ ಕಾಯಿಲೆಯಿಂದ ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು. ಶಿಬಿರದಲ್ಲಿ 200 ಮಂದಿಯನ್ನು ತಜ್ಞ ವೈದ್ಯರಾದ ಡಾ. ಕೃತಿನ್ ಷಾ ಹಾಗೂ ಡಾ. ಹರಿಕುಮಾರ್ ಮತ್ತು ಸಿಬ್ಬಂದಿ ತಪಾಸಣೆ ನಡೆಸಿದರು. ಪೊರೆ, ಗ್ಲಾಕೋಮಾ, ನೀರು ಸೋರುವಿಕೆ, ಹತ್ತಿರ-ದೂರದೃಷ್ಟಿ ದೋಷ ಸೇರಿದಂತೆ ವಿವಿಧ ಕಣ್ಣಿನ ಸಮಸ್ಯೆಗಳನ್ನು ಪರಿಶೀಲಿಸಲಾಯಿತು. ಶಸ್ತ್ರಚಿಕಿತ್ಸೆ ಅಗತ್ಯವಿದ್ದ 45 ಮಂದಿಯನ್ನು ಕೊಯಮತ್ತೂರಿಗೆ ಕರೆದೊಯ್ಯಲಾಯಿತು. ಶ್ರೀ ದಾಸಬಣಜಿಗ ಟ್ರಸ್ಟ್ ಅಧ್ಯಕ್ಷ ಟಿ. ನಾಗೇಂದ್ರ, ಉಪಾಧ್ಯಕ್ಷ ಎ. ಗಣೇಶ್, ಕಾರ್ಯದರ್ಶಿ ಟಿ.ಎಸ್. ವಿನೋದ್ ಕುಮಾರ್, ಯುವಕರ ಸಂಘದ ಅಧ್ಯಕ್ಷ ಜೆ. ಶಿವಕುಮಾರ್, ಉಪಾಧ್ಯಕ್ಷ ಟಿ. ಪ್ರಕಾಶ್, ಕಾರ್ಯದರ್ಶಿ ಶ್ರೀನಿವಾಸ್ ಸೇರಿದಂತೆ ಟ್ರಸ್ಟ್ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಈರೋಡ್ ಲಯನ್ಸ್ ಕ್ಲಬ್‌ನ ಪ್ರತಿನಿಧಿಗಳು ಉಪಸ್ಥಿತರಿದ್ದರು.4
- ಬಾಳೆಹೊನ್ನಿಗ ಗ್ರಾಮದಲ್ಲಿ ಬಾಳೆ ತೋಟಕ್ಕೆ ಕಾಡಾನೆಗಳ ಲಗ್ಗೆ ಮೂರು ಲಕ್ಷ ರೂ ನಷ್ಟ. ಮಳವಳ್ಳಿ: ಕಬ್ಬಾಳು ಅರಣ್ಯ ಪ್ರದೇಶದಿಂದ ಬಂದ ಏಳು ಕಾಡಾನೆಗಳು ಬಾಳೆಹೊನ್ನಿಗ ಗ್ರಾಮದ ಬಿ.ಕೆ.ಇಂದ್ರ ಮತ್ತು ಬಿ.ವಿ.ಕೃಷ್ಣಪ್ಪ ಎಂಬುವರಿಗೆ ಸೇರಿದ ಬಾಳೆ ತೋಟಕ್ಕೆ ಲಗ್ಗೆ ಇಟ್ಟು ಸುಮಾರು 400 ಪಸಲು ಭರಿತವಾದ ಬಾಳೆ ಗಿಡಗಳನ್ನು ಮುರಿದು ಅದರ ತಿರುಳನ್ನು ತಿಂದು ಸುಮಾರು ಮೂರು ಲಕ್ಷ ರೂ ನಷ್ಟ ಸಂಭವಿಸಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಬಾಳೆಹೊನ್ನಿಗ ಗ್ರಾಮದ ಬಳಿ ನಡೆದಿದೆ ಮೂಲತಃ ಬಾಳೆಹೊನ್ನಿಗ ಗ್ರಾಮದ ವಾಸಿ ರಾಜು ಮಾತನಾಡಿ, ನಮ್ಮಮಾವನವರಾದ ಬಿ.ವಿ.ಕೃಷ್ಣಪ್ಪ ಮತ್ತು ನನ್ನ ಪತ್ನಿಯಾದ ಬಿ.ಕೆ.ಇಂದ್ರರಾಜ್ ರವರು ಮೂರು ಎಕರೆ ಜಮೀನಿನಲ್ಲಿ ಸುಮಾರು 2,784 ಯಾಲಕ್ಕಿಬಾಳೆ ಗಿಡಗಳನ್ನು ಹಾಕಿ ರಾತ್ರಿ ಹಗಲು ಎನ್ನದೆ ವಿದ್ಯುತ್ ಕಣ್ಣಮುಚ್ಚಾಲೆ ಆಟದಲ್ಲಿ ಜಮೀನಿಗೆ ನೀರು ಹಾಯಿಸಿ ಪಸಲು ಬೆಳೆದಿದ್ದು, ಇನ್ನು ಎರಡು ತಿಂಗಳೊಳಗೆ ಬಾಳೆ ಗೊನೆಗಳನ್ನು ಕಟಾವ್ ಮಾಡಿ ಮಾರಾಟ ಮಾಡಬೇಕಾಗಿತ್ತು. ಆದರೆ ಸೋಮವಾರ ತಡರಾತ್ರಿ ಕಬ್ಬಾಳು ಅರಣ್ಯ ಪ್ರದೇಶದಿಂದ ಬಂದ ಏಳು ಕಾಡಾನೆಗಳ ಗುಂಪು ನಮ್ಮ ಬಾಳೆ ತೋಟಕ್ಕೆ ನುಗ್ಗಿ ಫಲ ಬಿಟ್ಟಿದ್ದ ಸುಮಾರು 400 ಬಾಳೆ ಗಿಡಗಳನ್ನು ಮುರಿದು ಅದರ ತಿರುಳನ್ನು ತಿಂದು ಬೆಳೆಯನ್ನು ನಾಶಪಡಿಸಿರುತ್ತವೆ. ಸಮಯಕ್ಕೆ ಸರಿಯಾಗಿ ರಾಮನಗರ ವ್ಯಾಪ್ತಿಯ 30ಕ್ಕೂ ಹೆಚ್ಚು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಟಾಕಿ ಸಿಡಿಸಿ ಮತ್ತೆ ಕಾಡಾನೆಗಳನ್ನು ಅರಣ್ಯ ಪ್ರದೇಶಕ್ಕೆ ಓಡಿಸುವಲ್ಲಿ ಯಶಸ್ವಿಯಾದರು. ಇವರು ರಾತ್ರಿ ಬರದಿದ್ದರೆ ನಮ್ಮ ಬಾಳೆ ತೋಟ ಪೂರ್ತಿ ಕಾಡಾನೆ ಗಳುತುಳಿದು ನಾಶವಾಗುತ್ತಿತ್ತು. ಹಲಗೂರು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಸಮಯಕ್ಕೆ ಸ್ಥಳಕ್ಕೆ ಬರದಿರುವುದಕ್ಕೆರಾಜು ಬೇಸರ ವ್ಯಕ್ತಪಡಿಸಿದರು. ನಾವು ಬೆಳೆದ ಪಸಲುಗಳು ಕೈ ಸೇರುವ ಮುನ್ನವೇ ಕಾಡಾನೆಗಳ ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ನಾಶವಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆಯವರು ಕಾಡಂಚಿನಲ್ಲಿ ಆನೆ ಕಂದಕಗಳನ್ನು ತೆಗೆಯುವುದರ ಮುಖಾಂತರ ಹಾಗೂ ರೈಲ್ವೆ ಕಂಬಿ ಬ್ಯಾರಿಕೇಟ್ ಹಾಗೂ ತೂಗುವ ಸೋಲಾರ್ ಬೇಲಿ ಅಳವಡಿಸಿ ಕಾಡು ಪ್ರಾಣಿಗಳು ಬರದಂತೆ ತಡೆಯುವ ನಿಟ್ಟಿನಲ್ಲಿ ರೈತರ ಬೆಳೆ ಉಳಿಸುವಂತೆ ಆಗ್ರಹಿಸಿ, ಸರ್ಕಾರದಿಂದ ನಮಗೆ ಕೊಡುವಪರಿಹಾರದ ಹಣ ಸಾಲುವುದಿಲ್ಲ ಸೂಕ್ತವಾಗಿ ಸ್ಥಳ ಪರಿಶೀಲಿಸಿ ಸೂಕ್ತ ಪರಿಹಾರ ನೀಡುವಂತೆ ಅರಣ್ಯ ಇಲಾಖೆ ಸಿಬ್ಬಂದಿಯವರೆಗೆ ಮನವಿ ಪತ್ರ ಸಲ್ಲಿಸಿದ್ದಾರೆ.1
- ಮಾಮರ ಸೌಹಾರ್ದ ಸಹಕಾರ ಸಂಘದ ಪ್ರಗತಿ ಹಾಗೂ ಲೆಕ್ಕ ನಿರ್ವಹಣೆ ಕುರಿತು ಲೆಕ್ಕ ಪರಿಶೋಧಕ ರಾಜೇಶ್ ಮೆಚ್ಚುಗೆ ಮಳವಳ್ಳಿಯ ಪ್ರತಿಷ್ಠಿತ ಮಾಮರ ಸೌಹಾರ್ದ ಸಹಕಾರ ಸಂಘದ ಪ್ರಗತಿ ಹಾಗೂ ಲೆಕ್ಕ ನಿರ್ವಹಣೆಯ ಬಗ್ಗೆ ಲೆಕ್ಕ ನಿರ್ವಹಣೆ ಸಾಧನೆ ಕುರಿತು ಲೆಕ್ಕ ಪರಿಶೋಧಕ ರಾಜೇಶ್ ಪಿ ಮೆಚ್ಚುಗೆ1
- ಹಿರಿಯ ಕಾರ್ಮಿಕರಿಗೆ ಶೇ.50 ಕೆಲಸದ ವಿನಾಯಿತಿ ಕುರಿತು ಜಿಪಂನಿಂದ ಜಾಗೃತಿ ಮಂಡ್ಯ-ಯೋಜನೆಯಡಿ ನಿಯಮಿತವಾಗಿ ಕೆಲಸ ದೊರೆಯುತ್ತಿದೆಯೇ, ಕೂಲಿ ಪಾವತಿಯಲ್ಲಿ ವಿಳಂಬವಾಗುತ್ತಿದೆಯೇ ಹಾಗೂ ಇತರೆ ಸಮಸ್ಯೆಗಳಿವೆಯೇ ಎಂಬುದರ ಬಗ್ಗೆ ಕೂಲಿ ಕಾರ್ಮಿಕರಿಂದ ಮಾಹಿತಿ ಪಡೆದ ಅವರು, ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಅಗತ್ಯ ಕಾಮಗಾರಿಗಳನ್ನು ಪೂರ್ವಭಾವಿಯಾಗಿ ಗುರುತಿಸಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಾಲುವೆ ಹಾಗೂ ಕೆರೆ ಹೂಳೆತ್ತುವ ಕಾಮಗಾರಿಗಳಲ್ಲಿ ಕೆಲವು ಕಡೆ ಮಣ್ಣು ಗಟ್ಟಿಯಾಗಿರುವುದರಿಂದ ಹೆಚ್ಚಿನ ಶ್ರಮ ವಹಿಸಬೇಕಾಗುತ್ತಿದೆ ಎಂದು ಕಾರ್ಮಿಕರು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಮಣ್ಣಿನ ಸ್ವರೂಪ ಹಾಗೂ ಕಾಮಗಾರಿಯ ಕಠಿಣತೆಯನ್ನು ಪರಿಗಣಿಸಿ ಕೆಲಸವನ್ನು ಸಮರ್ಪಕವಾಗಿ ಹಂಚಿಕೆ ಮಾಡಬೇಕು. ಕಠಿಣ ಕೆಲಸವನ್ನು ಕೆಲವೇ ಕಾರ್ಮಿಕರಿಗೆ ನಿರಂತರವಾಗಿ ನೀಡದೆ, ಎಲ್ಲರಿಗೂ ಸರದಿಯಂತೆ ಹಂಚಿಕೆ ಮಾಡುವ ಜವಾಬ್ದಾರಿಯನ್ನು ಮೇಟ್‌ಗಳು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು. ಹಿರಿಯ ಕಾರ್ಮಿಕರಿಗೆ ಶೇ.50 ಕೆಲಸದ ವಿನಾಯಿತಿ ಕುರಿತು ಜಾಗೃತಿ 60 ವರ್ಷ ಮೇಲ್ಪಟ್ಟ ಹಿರಿಯ ಕೂಲಿ ಕಾರ್ಮಿಕರಿಗೆ ನಿಯಮಾನುಸಾರ ಲಭ್ಯವಿರುವ ಶೇ.50ರಷ್ಟು ಕೆಲಸದ ವಿನಾಯಿತಿ ಕುರಿತು ಅರಿವು ಮೂಡಿಸಬೇಕು ಎಂದು ಸಿಇಒ ತಿಳಿಸಿದರು. ಹಿರಿಯರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರ ದೈಹಿಕ ಸಾಮರ್ಥ್ಯವನ್ನು ಪರಿಗಣಿಸಿ ಮಾನವೀಯ ದೃಷ್ಟಿಕೋನದಿಂದ ಕೆಲಸ ಹಂಚಿಕೆ ಮಾಡಬೇಕು ಎಂದು ನಿರ್ದೇಶನ ನೀಡಿದರು.1