ಮೈತ್ರಿ'ಯಲ್ಲಿ ಮಾತುಗಳ ಕಂಪನ! ಕ್ಕಬಳ್ಳಾಪುರ: ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್. ರವಿಕುಮಾರ್ ಅವರ ಮಾತುಗಳು ಜಿಲ್ಲೆಯ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ತೀವ್ರವಾದ ಕಂಪನ ಎಬ್ಬಿಸಿವೆ. ಜೆಡಿಎಸ್ ಮುಖಂಡರೇ ಇರುಸು ಮುರುಸಿಗೆ ಒಳಗಾಗಿದ್ದಾರೆ. ಈ ಕಾರಣದಿಂದಲೇ ಜೆಡಿಎಸ್ ಜಿಲ್ಲಾ ಘಟಕವು ಸಹ ಮೌನಕ್ಕೆ ಜಾರಿದೆ. ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಗಾಢವಾದ ಕಾರಣದಿಂದಲೇ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲುವು ಸಾಧಿಸಿದರು. ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರ ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಲೆಕ್ಕಾಚಾರಗಳು ಈಗಲೇ ಗರಿಗೆದರಿವೆ. ಮೈತ್ರಿಕೂಟ ಮುಂದಿನ ವಿಧಾನಸಭಾ ಚುನಾವಣೆಗೂ ಮುಂದುವರಿಯುತ್ತದೆ ಎಂದು ಆಯಾ ಪಕ್ಷಗಳ ರಾಜ್ಯ ವರಿಷ್ಠರೇ ಬಹಿರಂಗವಾಗಿ ನುಡಿದಿದ್ದಾರೆ. ಈ ಬೆಳವಣಿಗೆಗಳ ನಡುವೆ ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಅವರು, 'ಡಾ.ಕೆ.ಸುಧಾಕರ್ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆಯಲಿ' ಎಂದಿರುವ ಮಾತುಗಳು ಮೈತ್ರಿಯನ್ನು ಕದಡಿದೆ. ಶಾಸಕ ಬಿ.ಎನ್.ರವಿಕುಮಾರ್ ಅವರ ಮಾತುಗಳು ಜಿಲ್ಲಾ ಜೆಡಿಎಸ್‌ನಲ್ಲಿಯೇ ನಾನಾ ರೀತಿ ವಿಶ್ಲೇಷಣೆಗೆ ಒಳಗಾಗುತ್ತಿವೆ. ಅಷ್ಟಕ್ಕೂ ಆಗಿದ್ದೇನು: ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರು ಕೆಐಎಡಿಬಿಗೆ ಭೂ ಸ್ವಾಧೀನ ವಿರೋಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿದ್ದಾರೆ. ಈ ಧರಣಿಯಲ್ಲಿ ಪಾಲ್ಗೊಂಡ ಸಂಸದ ಡಾ.ಕೆ.ಸುಧಾಕರ್ ಅವರು, ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನಡುವಿನ ಆಪ್ತತೆಯ ಬಗ್ಗೆ ಮಾತನಾಡಿದ್ದರು. 'ಕಳ್ಳರು ಕಳ್ಳರು ಸಂತೆಯಲ್ಲಿ ಸೇರಿದ್ದಾರೆ' ಎಂದು ಟೀಕಿಸಿದ್ದರು. ಸಂಸದರ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸಿ ಶಾಸಕ ರವಿಕುಮಾರ್, ಡಾ.ಕೆ.ಸುಧಾಕರ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. 'ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಪಡಯಲಿ ನೋಡೋಣ' ಎಂದು ಸವಾಲು ಹಾಕಿದ್ದರು. ಶಾಸಕರ ಈ ಸವಾಲು ಬಿಜೆಪಿಯನ್ನು ಕೆರಳಿಸಿದೆ. ಬಿಜೆಪಿ ಜಿಲ್ಲಾ ಘಟಕವು ಶಾಸಕರಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ, 'ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎನ್‌ಡಿಎ ಮೈತ್ರಿ ಅಗತ್ಯವಿಲ್ಲದಿದ್ದರೆ ಪ್ರತ್ಯೇಕವಾಗಿ ಚುನಾವಣೆ ಎದುರಿಸೋಣ' ಎಂದಿದ್ದಾರೆ. ಹೀಗೆ ಶಾಸಕರ ಮಾತುಗಳು ತಣ್ಣಗಿದ್ದ ಮೈತ್ರಿಕೂಟವನ್ನು ತೀವ್ರವಾಗಿ ಕಡದಿವೆ. ಸಚಿವರಿಗೆ ಹತ್ತಿರ: ಶಾಸಕ ಬಿ.ಎನ್.ರವಿಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಆಪ್ತ ವಲಯದಲ್ಲಿ ಇದ್ದಾರೆ. ಖುದ್ದು ಜೆಡಿಎಸ್ ಕಾರ್ಯಕರ್ತರಿಗೂ ಇದು ತಿಳಿದಿದೆ. ಸಚಿವ ಸುಧಾಕರ್ ಮತ್ತು ರವಿಕುಮಾರ್ ನಡುವೆ ಉತ್ತಮ ಸಂಬಂಧವಿದೆ ಎನ್ನುತ್ತಾರೆ ಶಿಡ್ಲಘಟ್ಟ ರಾಜಕೀಯ ಆಳ ಅಗಲ ಬಲ್ಲವರು. 2025ರ ನವೆಂಬರ್ 24ರಂದು ಶಿಡ್ಲಘಟ್ಟ ಹೊರವಲಯದ ಹನುಮಂತಪುರದ ಬಳಿ ನಡೆದ ₹1,328.67 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮತ್ತು ₹672.07 ಕೋಟಿ ಮೊತ್ತ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ'ರವಿಕುಮಾರ್ ಅವರಿಂದ ನಮಗೆ ಸಹಕಾರವಿದೆ' ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಿದ್ದರು. 'ಶಿಡ್ಲಘಟ್ಟದಲ್ಲಿ ಜೆಡಿಎಸ್ ಶಾಸಕರಿದ್ದರೂ ಅವರು ನಮಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ. ಜೆಡಿಎಸ್ ಶಾಸಕರ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಮಟ್ಟದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ' ಎಂದು ಮುಖ್ಯಮಂತ್ರಿ ತಿಳಿಸಿದ್ದರು. ಚಿಂತಾಮಣಿ ಮಾಜಿ ಶಾಸಕರೂ ಆದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ರಾಜಕೀಯ ಎದುರಾಳಿಯಾಗಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ ಮತ್ತು ಚಿಕ್ಕಬಳ್ಳಾಪುರ ರಾಜಕೀಯದ ಕುರಿತು ಕೆಲವು ತಿಂಗಳ ಹಿಂದೆ ಕೃಷ್ಣಾರೆಡ್ಡಿ ಮತ್ತು ಸಂಸದ ಡಾ.ಕೆ.ಸುಧಾಕರ್ ಭೇಟಿಯಾಗಿ ಚರ್ಚೆ ಸಹ ನಡೆಸಿದ್ದರು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟದಡಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮುನ್ನಡೆಯುತ್ತಿದ್ದಾರೆ.ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಾಯಕರು ಎನ್‌ಡಿಎ ಮೈತ್ರಿಕೂಟ ಮತ್ತು ಸುಧಾಕರ್ ನಾಯಕತ್ವದ ಅಡಿಯಲ್ಲಿಯೇ ಸಾಗುತ್ತಿದ್ದಾರೆ. ಚಿಮುಲ್, ಪಿಎಲ್‌ಡಿ ಬ್ಯಾಂಕ್, ಟಿಎಪಿಸಿಎಂಎಸ್ ಚುನಾವಣೆಗಳಲ್ಲಿ ಒಮ್ಮತದಿಂದ ಮುನ್ನಡೆದಿದ್ದಾರೆ. ಆ ಫಲವಾಗಿ ಅಧಿಕಾರವೂ ದಕ್ಕಿದೆ. ಆದರೆ ಈಗ ಶಿಡ್ಲಘಟ್ಟ ಶಾಸಕರ ಮಾತುಗಳು ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 'ರಾಜಕೀಯ ಏನೇ ಇರಲಿ. ವೈಯಕ್ತಿಕ ಟೀಕೆಗಳು ಸಲ್ಲದು. ನಮ್ಮದು ಮೈತ್ರಿಕೂಟ. ಸಮಸ್ಯೆಗಳಿದ್ದರೆ ಪರಸ್ಪರ ರಾಜ್ಯ ನಾಯಕರ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು' ಎಂದು ಖುದ್ದು ಜೆಡಿಎಸ್ ಜಿಲ್ಲಾ ಪದಾಧಿಕಾರಿಗಳೇ ತಿಳಿಸುತ್ತಿದ್ದಾರೆ. ಸಂಸದ ಡಾ.ಕೆ.ಸುಧಾಕರ್ ಅವರ ವಿರುದ್ಧ ಶಾಸಕ ಬಿ.ಎನ್.ರವಿಕುಮಾರ್ ನೀಡಿರುವ ಬಿಡು ಬೀಸಿನ ಹೇಳಿಕೆಗಳಿಂದ ಜಿಲ್ಲಾ ಜೆಡಿಎಸ್ ಘಟಕವೂ ಅಂತರ ಕಾಯ್ದುಕೊಂಡಿದೆ.
ಮೈತ್ರಿ'ಯಲ್ಲಿ ಮಾತುಗಳ ಕಂಪನ! ಕ್ಕಬಳ್ಳಾಪುರ: ಶಿಡ್ಲಘಟ್ಟ ಜೆಡಿಎಸ್ ಶಾಸಕ ಬಿ.ಎನ್. ರವಿಕುಮಾರ್ ಅವರ ಮಾತುಗಳು ಜಿಲ್ಲೆಯ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ತೀವ್ರವಾದ ಕಂಪನ ಎಬ್ಬಿಸಿವೆ. ಜೆಡಿಎಸ್ ಮುಖಂಡರೇ ಇರುಸು ಮುರುಸಿಗೆ ಒಳಗಾಗಿದ್ದಾರೆ. ಈ ಕಾರಣದಿಂದಲೇ ಜೆಡಿಎಸ್ ಜಿಲ್ಲಾ ಘಟಕವು ಸಹ ಮೌನಕ್ಕೆ ಜಾರಿದೆ. ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಗಾಢವಾದ ಕಾರಣದಿಂದಲೇ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲುವು ಸಾಧಿಸಿದರು. ಜಿಲ್ಲೆಯ ಶಿಡ್ಲಘಟ್ಟ ಕ್ಷೇತ್ರ ಕೋಲಾರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಲೆಕ್ಕಾಚಾರಗಳು ಈಗಲೇ ಗರಿಗೆದರಿವೆ. ಮೈತ್ರಿಕೂಟ ಮುಂದಿನ ವಿಧಾನಸಭಾ ಚುನಾವಣೆಗೂ ಮುಂದುವರಿಯುತ್ತದೆ ಎಂದು ಆಯಾ ಪಕ್ಷಗಳ ರಾಜ್ಯ ವರಿಷ್ಠರೇ ಬಹಿರಂಗವಾಗಿ ನುಡಿದಿದ್ದಾರೆ. ಈ ಬೆಳವಣಿಗೆಗಳ ನಡುವೆ ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್ ಅವರು, 'ಡಾ.ಕೆ.ಸುಧಾಕರ್ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆಯಲಿ' ಎಂದಿರುವ ಮಾತುಗಳು ಮೈತ್ರಿಯನ್ನು ಕದಡಿದೆ. ಶಾಸಕ ಬಿ.ಎನ್.ರವಿಕುಮಾರ್ ಅವರ ಮಾತುಗಳು ಜಿಲ್ಲಾ ಜೆಡಿಎಸ್‌ನಲ್ಲಿಯೇ ನಾನಾ ರೀತಿ ವಿಶ್ಲೇಷಣೆಗೆ ಒಳಗಾಗುತ್ತಿವೆ. ಅಷ್ಟಕ್ಕೂ ಆಗಿದ್ದೇನು: ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರು ಕೆಐಎಡಿಬಿಗೆ ಭೂ ಸ್ವಾಧೀನ ವಿರೋಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿದ್ದಾರೆ. ಈ ಧರಣಿಯಲ್ಲಿ ಪಾಲ್ಗೊಂಡ ಸಂಸದ ಡಾ.ಕೆ.ಸುಧಾಕರ್ ಅವರು, ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ನಡುವಿನ ಆಪ್ತತೆಯ ಬಗ್ಗೆ ಮಾತನಾಡಿದ್ದರು. 'ಕಳ್ಳರು ಕಳ್ಳರು ಸಂತೆಯಲ್ಲಿ ಸೇರಿದ್ದಾರೆ' ಎಂದು ಟೀಕಿಸಿದ್ದರು. ಸಂಸದರ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸಿ ಶಾಸಕ ರವಿಕುಮಾರ್, ಡಾ.ಕೆ.ಸುಧಾಕರ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ್ದರು. 'ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಪಡಯಲಿ ನೋಡೋಣ' ಎಂದು ಸವಾಲು ಹಾಕಿದ್ದರು. ಶಾಸಕರ ಈ ಸವಾಲು ಬಿಜೆಪಿಯನ್ನು ಕೆರಳಿಸಿದೆ. ಬಿಜೆಪಿ ಜಿಲ್ಲಾ ಘಟಕವು ಶಾಸಕರಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ, 'ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಎನ್‌ಡಿಎ ಮೈತ್ರಿ ಅಗತ್ಯವಿಲ್ಲದಿದ್ದರೆ ಪ್ರತ್ಯೇಕವಾಗಿ ಚುನಾವಣೆ ಎದುರಿಸೋಣ' ಎಂದಿದ್ದಾರೆ. ಹೀಗೆ
ಶಾಸಕರ ಮಾತುಗಳು ತಣ್ಣಗಿದ್ದ ಮೈತ್ರಿಕೂಟವನ್ನು ತೀವ್ರವಾಗಿ ಕಡದಿವೆ. ಸಚಿವರಿಗೆ ಹತ್ತಿರ: ಶಾಸಕ ಬಿ.ಎನ್.ರವಿಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಆಪ್ತ ವಲಯದಲ್ಲಿ ಇದ್ದಾರೆ. ಖುದ್ದು ಜೆಡಿಎಸ್ ಕಾರ್ಯಕರ್ತರಿಗೂ ಇದು ತಿಳಿದಿದೆ. ಸಚಿವ ಸುಧಾಕರ್ ಮತ್ತು ರವಿಕುಮಾರ್ ನಡುವೆ ಉತ್ತಮ ಸಂಬಂಧವಿದೆ ಎನ್ನುತ್ತಾರೆ ಶಿಡ್ಲಘಟ್ಟ ರಾಜಕೀಯ ಆಳ ಅಗಲ ಬಲ್ಲವರು. 2025ರ ನವೆಂಬರ್ 24ರಂದು ಶಿಡ್ಲಘಟ್ಟ ಹೊರವಲಯದ ಹನುಮಂತಪುರದ ಬಳಿ ನಡೆದ ₹1,328.67 ಕೋಟಿ ಮೊತ್ತದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮತ್ತು ₹672.07 ಕೋಟಿ ಮೊತ್ತ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ'ರವಿಕುಮಾರ್ ಅವರಿಂದ ನಮಗೆ ಸಹಕಾರವಿದೆ' ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಿದ್ದರು. 'ಶಿಡ್ಲಘಟ್ಟದಲ್ಲಿ ಜೆಡಿಎಸ್ ಶಾಸಕರಿದ್ದರೂ ಅವರು ನಮಗೆ ಪೂರ್ಣ ಸಹಕಾರ ನೀಡುತ್ತಿದ್ದಾರೆ. ಜೆಡಿಎಸ್ ಶಾಸಕರ ಕ್ಷೇತ್ರದಲ್ಲಿ ಇಷ್ಟು ದೊಡ್ಡ ಮಟ್ಟದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ' ಎಂದು ಮುಖ್ಯಮಂತ್ರಿ ತಿಳಿಸಿದ್ದರು. ಚಿಂತಾಮಣಿ ಮಾಜಿ ಶಾಸಕರೂ ಆದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ರಾಜಕೀಯ ಎದುರಾಳಿಯಾಗಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟ ಮತ್ತು ಚಿಕ್ಕಬಳ್ಳಾಪುರ ರಾಜಕೀಯದ ಕುರಿತು ಕೆಲವು ತಿಂಗಳ ಹಿಂದೆ ಕೃಷ್ಣಾರೆಡ್ಡಿ ಮತ್ತು ಸಂಸದ ಡಾ.ಕೆ.ಸುಧಾಕರ್ ಭೇಟಿಯಾಗಿ ಚರ್ಚೆ ಸಹ ನಡೆಸಿದ್ದರು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಮೈತ್ರಿಕೂಟದಡಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಮುನ್ನಡೆಯುತ್ತಿದ್ದಾರೆ.ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಾಯಕರು ಎನ್‌ಡಿಎ ಮೈತ್ರಿಕೂಟ ಮತ್ತು ಸುಧಾಕರ್ ನಾಯಕತ್ವದ ಅಡಿಯಲ್ಲಿಯೇ ಸಾಗುತ್ತಿದ್ದಾರೆ. ಚಿಮುಲ್, ಪಿಎಲ್‌ಡಿ ಬ್ಯಾಂಕ್, ಟಿಎಪಿಸಿಎಂಎಸ್ ಚುನಾವಣೆಗಳಲ್ಲಿ ಒಮ್ಮತದಿಂದ ಮುನ್ನಡೆದಿದ್ದಾರೆ. ಆ ಫಲವಾಗಿ ಅಧಿಕಾರವೂ ದಕ್ಕಿದೆ. ಆದರೆ ಈಗ ಶಿಡ್ಲಘಟ್ಟ ಶಾಸಕರ ಮಾತುಗಳು ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 'ರಾಜಕೀಯ ಏನೇ ಇರಲಿ. ವೈಯಕ್ತಿಕ ಟೀಕೆಗಳು ಸಲ್ಲದು. ನಮ್ಮದು ಮೈತ್ರಿಕೂಟ. ಸಮಸ್ಯೆಗಳಿದ್ದರೆ ಪರಸ್ಪರ ರಾಜ್ಯ ನಾಯಕರ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು' ಎಂದು ಖುದ್ದು ಜೆಡಿಎಸ್ ಜಿಲ್ಲಾ ಪದಾಧಿಕಾರಿಗಳೇ ತಿಳಿಸುತ್ತಿದ್ದಾರೆ. ಸಂಸದ ಡಾ.ಕೆ.ಸುಧಾಕರ್ ಅವರ ವಿರುದ್ಧ ಶಾಸಕ ಬಿ.ಎನ್.ರವಿಕುಮಾರ್ ನೀಡಿರುವ ಬಿಡು ಬೀಸಿನ ಹೇಳಿಕೆಗಳಿಂದ ಜಿಲ್ಲಾ ಜೆಡಿಎಸ್ ಘಟಕವೂ ಅಂತರ ಕಾಯ್ದುಕೊಂಡಿದೆ.
- ನೆಲಮಂಗಲ ಬೆಂಕಿ ಪೊಟ್ಟಣಕ್ಕಾಗಿ ಬಾರ್ ಸಪ್ಲೈಯರ್ ಗೆ ಚಾಕು ಇರಿದಿದ್ದ ಪ್ರಕರಣ ಚಾಕು ಇರಿದು ಎಸ್ಕೇಪ್ ಆಗಿದ್ದ ಆರೋಪಿಯ ಬಂಧನ ಕಳೆದ ಏ.11 ರಂದು ನೆಲಮಂಗಲ ತಾಲ್ಲೂಕಿನ ದಾಬಸ್ಪೇಟೆಯಲ್ಲಿ ನಡೆದಿದ್ದ ಘಟನೆ ಸಪ್ತಗಿರಿ ಬಾರ್ ನಲ್ಲಿ ಮ್ಯಾಚ್ ಬಾಕ್ಸ್ ತಡವಾಗಿ ನೀಡಿದಕ್ಕೆ ಗಲಾಟೆ ಆರೋಪಿ ಪಾವಗಡದ ಮೊಹಮ್ಮದ್ ಸುಫಿಯಾನ್ (20) ಧಾರವಾಡದ ಮೂಲದ ಬಾರ್ ಸಫ್ಲೈಯರ್ ಸಂಜುಗೆ ಚಾಕು ಇರಿತ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸದ್ಯ ಆರೋಪಿಯನ್ನ ಬಂಧಿಸಿರುವ ದಾಬಾಸ್ ಪೇಟೆ ಪೊಲೀಸರು ಆರೋಪಿ ಮೊಹಮ್ಮದ್ ಪರಪ್ಪನ ಅಗ್ರಹಾರಕ್ಕೆ ಅಟ್ಟಿರೋ ಪೊಲೀಸರು.2
- Post by Vv Vv1
- ಪವನ್ ಕಲ್ಯಾಣ್ ಶೀಘ್ರವಾಗಿ ಗುಣಮುಖರಾಗಲಿ ಎಂದು ಅಭಿಮಾನಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರಿಂದ ವಿಶೇಷ ಪೂಜೆ:- ಬಾಗೇಪಲ್ಲಿ:-ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಬಾಗೇಪಲ್ಲಿ ಅವರ ಅಭಿಮಾನಿಗಳು ಮತ್ತು ಜನಸೇನಾ ಕಾರ್ಯಕರ್ತರು ಅವರು ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಪಟ್ಟಣದ ಪ್ರಸಿದ್ಧ ಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಜನಸೇನಾ ಪಕ್ಷದ ಮುಖಂಡ ಹಾಗೂ ವಕೀಲರಾದ ನರಸಿಂಹ ಮೂರ್ತಿ ಮಾತನಾಡಿ ಪಟ್ಟಣದ ಜಡಲ ಭೈರವೇಶ್ವರ ದೇವಾಲಯದಲ್ಲಿ ಪವನ್ ಕಲ್ಯಾಣ್ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ತದನಂತರ ದೇವಾಲಯದ ಮುಂದೆ ತೆಂಗಿನಕಾಯಿ ಒಡೆದು ಪವನ್ ಕಲ್ಯಾಣ್ ಅವರು ಬೇಗನೇ ಚೇತರಿಸಿಕೊಂಡು ಸಕ್ರಿಯ ರಾಜಕೀಯಕ್ಕೆ ಮರಳಲಿ ಎಂದು ಅಭಿಮಾನಿಗಳು ಪಟ್ಟಣದ ಭೈರವೇಶ್ವರ ಹಾಗೂ ಆಂಜನೇಯ ಸ್ವಾಮಿ ದೇವಾಲಯಗಳು ಮತ್ತು ಇತರ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ದೀಪಾರಾಧನೆ ಮತ್ತು ಪ್ರಾರ್ಥನೆಗಳನ್ನು ಮಾಡಿದರು. ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು. ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ಶನಿವಾರ ಸಂಜೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಚೇತರಿಸಿಕೊಳ್ಳುತ್ತಿರುವ ಅವರಿಗೆ 10 ದಿನಗಳ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ. ಎಂದು ಹೇಳಿದರು. ಸಭೆಯಲ್ಲಿದ್ದಾಗಲೇ ತೀವ್ರ ಅಸ್ವಸ್ಥ ಶುಕ್ರವಾರ ಬೆಳಿಗ್ಗೆ ಅಧಿಕಾರಿಗಳೊಂದಿಗೆ ಆಡಳಿತ ಸಂಬಂಧಿತ ಸಭೆ ನಡೆಸುತ್ತಿದ್ದಾಗ ಪವನ್ ಕಲ್ಯಾಣ್ ಅವರು ಹಠಾತ್ ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣವೇ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ನಂತರ ವೈದ್ಯರ ತಂಡವು ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಶಿಫಾರಸು ಮಾಡಿತು ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ ಎಂದು ಹೇಳಿದರು. ಆದ್ದರಿಂದ ಇಂದು ಬಾಗೇಪಲ್ಲಿ ಪಟ್ಟಣದಲ್ಲಿ ಪವನ್ ಕಲ್ಯಾಣ್ ಬೇಗ ಗುಣಮುಖರಾಗಲೆಂದು ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮತ್ತು ಹೋಮಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಮೃತ ಕುಮಾರ್, ರಾಮು.ವಿ.ಅಜಯ್, ಮಂಜುನಾಥ್,ಅರುಣ್ ಕೆ.ಎನ್ ಹಾಗೂ ಸಾರ್ವಜನಿಕರು ಹಾಜರಿದ್ದರು.1
- ಬಿರಿಯಾನಿ–ಸೀರೆಗೆ ಜನರ ನೂಕುನುಗ್ಗಲು ಟೇಕಲ್ ಕಾರ್ಯಕ್ರಮದಲ್ಲಿ ಗೊಂದಲ, ನಿಯಂತ್ರಣಕ್ಕೆ ಹರಸಾಹಸ1
- ನಾರಿಶಕ್ತಿ ವಂದನಾ ಮಸೂದೆ ಮಂಡನೆ ವಿರುದ್ಧ ಮತ ಚಲಾಯಿಸಿದ ಕಾಂಗ್ರೇಸ್ ಮಿತ್ರ ಪಕ್ಷಗಳ ನಡೆ ಖಂಡಿಸಿ ಬೃಹತ್ ಪ್ರತಿಭಟನೆ1
- Post by Chand Pasha1
- KOLAR KI.AWAAZ KOUSAR1
- ಜನಸ್ಪಂದನದಲ್ಲಿ ಪಿಡಿಒ ಮೇಲೆ ಶಾಸಕರ ಆಕ್ರೋಶ ಅರ್ಜಿ ಎಸೆದು ವರ್ಗಾವಣೆಗೆ ಸೂಚನೆ1