ಬೆಳಗಾವಿಯ ಕಮಲ ಬಸದಿಯಲ್ಲಿ 5 ದಿನಗಳ ಧರ್ಮಚಕ್ರ ಆರಾಧನಾ ಮಹೋತ್ಸವ ಆಚರಣೆ ಬೆಳಗಾವಿ: ಬೆಳಗಾವಿಯ ಕೋಟೆ ಆವರಣದಲ್ಲಿರುವ ಐತಿಹಾಸಿಕ ಕಮಲ ಬಸದಿಯಲ್ಲಿ ಇದೇ ಏಪ್ರಿಲ್ 24 ರಿಂದ 28 ರವರೆಗೆ ಇದು ದಿನಗಳ ಕಾಲ ಧರ್ಮಚಕ್ರ ಆರಾಧನಾ ಮಹೋತ್ಸವವನ್ನು ಆಚರಿಸಲಾಗಿತ್ತಿದೆ ಎಂದು ಮಾಜಿ ಶಾಸಕ ಹಾಗೂ ಮಹೋತ್ಸವ ಸಮಿತಿ ಅಧ್ಯಕ್ಷ ಸಂಜಯ ಪಾಟೀಲ ಅವರು ಇಂದಿಲ್ಲಿ ಹೇಳಿದರು. ಬೆಳಗಾವಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಗರ ಸರ್ವ ಧರ್ಮಗಳ ನೆಲೆ ಬೀಡಾಗಿದೆ.ಇಲ್ಲಿ ಎಲ್ಲ ಧರ್ಮ , ಸಂಪ್ರದಾಯದ ಮಹೋತ್ಸವಗಳು ನಡೆಯುತ್ತವೆ . ಇದೀಗ ವಿಶ್ವ ಶಾಂತಿಗಾಗಿ ಜೈನ ಧರ್ಮದ ಒಂದು ಐತಿಹಾಸಿಕ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಹೀರಾಚಂದ ಕಲಮನಿ ಅವರು ಮಾತನಾಡಿ ಏಪ್ರಿಲ್ 24 ರಂದು ಬೆಳಿಗ್ಗೆ ಕಮಲ ಬಸದಿ ಆವರಣದಲ್ಲಿ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ವೀರಕುಮಾರ ಪಾಟೀಲ, ಸಂಜಯ ಪಾಟೀಲ, ಅರಿಹಂತ ಉದ್ಯೋಗ ಸಮೂಹದ ಉತ್ತಮ ಪಾಟೀಲ ಮತ್ತು ಅಭಿನಂದನ ಪಾಟೀಲ, ಖ್ಯಾತ ನ್ಯಾಯವಾದಿ ರವಿರಾಜ ಪಾಟೀಲ, ಉದ್ಯಮಿ ಭರತ ಬಾಗಿ ಮೊದಲಾದವರು ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅದರಂತೆ ಏಪ್ರಿಲ 25 ರಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಮರಾಠಾ ಲೈಟ ಇನ್ನಫೆಂಟ್ರಿ ಕಮಾಡಿಂಗ ಆಪಿಸರ್ ಬ್ರಿಗೇಡಿಯರ್ ಜಾಯದೀಪ ಮುಖರ್ಜಿ, ಶಾಸಕರಾದ ರಾಜು ಸೇಠ, ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ, ಚೆನ್ನರಾಜ ಹಟ್ಟಿಹೊಳಿ, ಬುಡಾ ಚೇರಮನ ಲಕ್ಷ್ಮಣರಾವ ಚಿಂಗಳೆ ಮೊದಲಾದವರು ಈ ಮಹೋತ್ಸವಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು. ಏಪ್ರಿಲ್ 26 ರಂದು ಸಂಸದ ಜಗದೀಶ್ ಶೆಟ್ಟರ್, ಕೆ.ಎಲ್.ಇ.ಸಂಸ್ಥೆಯ ಗೌರವಾಧ್ಯಕ್ಷ ಡಾ.ಪ್ರಭಾಕರ ಕೋರೆ, ವಿಧಾನ ಪರಿಷತ್ತ ಸದಸ್ಯ ಲಖನ ಜಾರಕಿಹೊಳಿ, ಮಾಜಿ ಶಾಸಕ ಅನಿಲ ಬೆನಕೆ, ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ಭಾಲಚಂದ್ರ ಪಾಟೀಲ, ಸಂಜಯ ಶೆಟೆ, ಇವರು ಆಗಮಿಸಲಿದ್ದು ಅಂದು ಸುಮಾರು 500 ಮಕ್ಕಳಿಗೆ ಮೌಂಜಿ ಬಂಧನ ಕಾರ್ಯಕ್ರಮ ನಡೆಯಲಿದೆ ಎಂದರು. ಏಪ್ರಿಲ್ 27 ರಂದು ಸಾಂಖ್ಯಿಕ ಇಲಾಖೆಯ ಕಾರ್ಯದರ್ಶಿ ಮನೋಜ ಜೈನ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ , ಪೋಲಿಸ್ ಆಯುಕ್ತ ಬೊರಸೆ ಭೋಷಣ ಗುಲಾಬರಾವ, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಕೆ.ರಾಮರಾಜನ , ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ ಎಂ. ಬುಡಾ ಆಯುಕ್ತ ಸಿ.ಡಬ್ಲು ಶಕೀಲ ಅಹ್ಮದ್ ಇವರು ಆಗಮಿಸಲಿದ್ದು, ಅಂದು ಭವ್ಯ ರಥೋತ್ಸವ ನಡೆಯಲಿದೆ ಎಂದರು. ಏಪ್ರಿಲ್ 28 ರಂದು ಶಾಸಕ ಗಣೇಶ ಹುಕ್ಕೇರಿ, ಜಿ.ಪಂ .ಸಿಇಓ ರಾಹುಲ ಶಿಂದೆ, ಕರ್ನಲ ಮೊಹಿಂದರಪಾಲ ಸಿಂಗ್, ಕ್ಯಾಂಟೋನಮೆಂಟ್ ಸಿಇಓ ಹರಿವಿಜಯ, ಉದ್ಯಮಿಗಳಾದ ಪಿ.ಪಿ.ದೊಡ್ಡಣ್ಣವರ, ಗೋಪಾಲ ಜಿನಗೌಡ, ಅಪ್ಪಾಸಾಹೇಬ ಕಲಮನಿ, ಧನ್ಯಕುಮಾರ ಕಸ್ತೂರಿ, ಪದ್ಮಶ್ರೀ ಹನಮಣ್ಣವರ ಇವರು ಆಗಮಿಸಲಿದ್ದು ಅಂದು ಕಳಸ ಅಭಿಷೇಕ ಕಾರ್ಯಕ್ರಮ ನಡೆಯಲಿದೆ. ಇದರೊಂದಿಗೆ ಐದು ದಿನಗಳ ಕಾಲ ವಿವಿಧ ಆರಾಧನಾ ಮತ್ತು ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಈ ಎಲ್ಲ ಕಾರ್ಯಕ್ರಮಗಳು ಆಚಾರ್ಯ ಶ್ರೀ ಧರ್ಮಸೇನ ಮುನಿಗಳ ಸಾನಿಧ್ಯದಲ್ಲಿ ನಡೆಯಲಿವೆ ಎಂದು ಅವರು ತಿಳಿಸಿದರು. ಮಹೋತ್ಸವ ಸಮಿತಿ ಅಧ್ಯಕ್ಷ ಸುನಿಲ ಹನಮಣ್ಣವರ ಅವರು ಮಾತನಾಡಿ ಕಮಲ ಬಸದಿಯ ಅಭಿವೃದ್ಧಿಗೆ ಎಸರಕಾರ ಅನುದಾನ ನೀಡಿದೆ. . ಪ್ರಸ್ತುತ ಸರಕಾರ 2. ಕೋಟಿ 75 ಲಕ್ಷ ರೂ . ಅನುದಾನ ನೀಡಿದ್ದು, ಮುಂಬರುವ ದಿನಗಳಲ್ಲಿ ಇನ್ನಷ್ಟು ಅನುದಾನ ಬಿಡುಗಡೆಯಾಗಲಿದೆ.ಈ ಅನುದಾನದಲ್ಲಿ ಹಂಪಿ ಮಾದರಿಯಲ್ಲಿ ಧ್ವನಿ ಬೆಳಕು ವ್ಯವಸ್ಥೆ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಮಹೋತ್ಸವ ಸಮಿತಿಯ ಉಪಾಧ್ಯಕ್ಷ ರವಿರಾಜ ಪಾಟೀಲ, ಪದಾಧಿಕಾರಿಗಳಾದ ಸನ್ಮತಿ ಕಸ್ತೂರಿ, ಕುಂತಿನಾಥ ಕಲಮನಿ , ಪದ್ಮರಾಜ ವೈಜನ್ನವರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

- ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಹೊರವಲಯದಲ್ಲಿ ಇಂದು ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಚರಂಡಿಯಲ್ಲಿ ಬಿದ್ದಿದ್ದ ಅನಾಮಧೇಯ ವ್ಯಕ್ತಿಯೊಬ್ಬನ ಶವ ಇಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆನಚನಮರಡಿ ಕ್ರಾಸ್ ಬಳಿ ಇರುವ RJ ಪೆಟ್ರೋಲ್ ಬಂಕ್ ಹತ್ತಿರದ ಮುಖ್ಯ ರಸ್ತೆಯ ಚರಂಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಚರಂಡಿಯೊಳಗೆ ವ್ಯಕ್ತಿಯೊಬ್ಬ ಮೃತಪಟ್ಟು ಹಲವು ದಿನಗಳೇ ಕಳೆದಿರುವ ಶಂಕೆ ವ್ಯಕ್ತವಾಗಿದೆ. ಇಂದು ಅತಿಯಾದ ದುರ್ವಾಸನೆ ಬರುತ್ತಿದ್ದ ಕಾರಣ ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಗೋಕಾಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಸದ್ಯ ಶವದ ಸುತ್ತ ಬಿಗಿ ಕಾವಲು ಹಾಕಲಾಗಿದೆ. ಮೃತ ವ್ಯಕ್ತಿ ಯಾರು? ಎಲ್ಲಿಯವನು? ಎಂಬ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಾವು ಕೊಲೆಯೋ ಅಥವಾ ಆಕಸ್ಮಿಕವಾಗಿ ಚರಂಡಿಗೆ ಬಿದ್ದು ಸಂಭವಿಸಿದ ಅಪಘಾತವೋ ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ1
- ಅಭಿಮಾನಿಗಳ ಮೇಲೆ ಕೆಂಡಾಮಂಡಲವಾದ ದಳಪತಿ ವಿಜಯ್: ಪ್ರಚಾರದ ವೇಳೆ ನಡೆದಿದ್ದೇನು? ಅಭಿಮಾನಿಗಳ ಮೇಲೆ ವಿಜಯ್ ಕೋಪ (VIDEO) ಟಿವಿಕೆ ಮುಖ್ಯಸ್ಥ ವಿಜಯ್ ತಮ್ಮ ಅಭಿಮಾನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ತಮಿಳುನಾಡು ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಅವರ ವಾಹನವನ್ನು ನೂರಾರು ಜನರು ಸುತ್ತುವರಿದರು. ಮುಂದೆ ಸಾಗಲು ಸಾಧ್ಯವಾಗದೆ ಪರಿಸ್ಥಿತಿ ಅಪಾಯಕಾರಿ ಎಂದು ಗ್ರಹಿಸಿದ ಅವರು, ಜನಸಮೂಹ ಪಕ್ಕಕ್ಕೆ ಸರಿಯುವಂತೆ ಕೋಪದಿಂದ ಒತ್ತಾಯಿಸಿದರು. ವಿಜಯ್ ಅವರ ಇತ್ತೀಚಿನ ಕ್ಯಾಲಿಗಳಲ್ಲಿ ಅಭಿಮಾನಿಗಳ ಅತಿಯಾದ ಉತ್ಸಾಹ ಸಮಸ್ಯೆ ಉಂಟುಮಾಡುತ್ತಿರುವುದು ಗೊತ್ತೇ1
- ..... ಪೊಲೀಸ್ ಅಧಿಕಾರಿ ಮೇಲೆ ..... ಅಧಿಕಾರಿಗಳಿಂದ ಕಿರುಕುಳ ವಿಡಿಯೋ ಮಾಡಿ ನ್ಯಾಯಕ್ಕಾಗಿ ಅಂಗಲಾಚಿದ ಇನ್ಸ್‌ಪೆಕ್ಟರ್ ಶ್ರೀನಿವಾಸ್ . . . #suddipoint #enrisamasse #policeofficer1
- Post by Uday Chougale1
- ಚಿಕ್ಕೋಡಿ:ಸ್ಲೋ ಆಗಿ ರೋಡ್ ಹಂಪ್ ದಾಟುತ್ತಿದ್ದ ಓಮಿನಿ ಕಾರಗೆ ಫಾಸ್ಟ್ ಆಗಿ ಬಂದ ಕೆಎಸ್ ಆರ್ ಟಿಸಿ ಬಸ್ ಹಿಂಬದಿಗೆ ಗುದ್ದಿದ ಘಟನೆ ಚಿಕ್ಕೋಡಿ ಪಟ್ಟಣದ ಇಂದಿರಾನಗರ ಬಳಿ ನಡೆದಿದೆ. ಇವತ್ತು ಬೆಳಗಿನಜಾವ ಈ ಘಟನೆ ನಡೆದಿದೆ.ಅಪಘಾತದ ದೃಶ್ಯ ಸ್ಥಳೀಯ ಅಂಗಡಿಯ ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದೆ.ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಓಮಿನಿ ಕಾರ ಮಾಲಿಕರ ಹಾಗೂ ಕೆಎಸ್ಆರ್ಟಿಸಿ ಚಾಲಕ,ನಿರ್ವಾಹಕ ಮಧ್ಯೆ ಮಾತಿನ ಚಕಮಕಿ ನಡೆಯಿತು.ಬಸ್ ನ ಡಿಕ್ಕಿಯಾದ ಪರಿಣಾಮ ಓಮಿನಿ ಕಾರಿನ ಹಿಂಭಾಗ ನುಜ್ಜುಗುಜ್ಜಾಗಿದೆ.ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.4
- ಈಗಲಾದರೂ ನಮ್ಮ ಜನ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ನಮ್ಮ ಜಾತಿಯ ನಾಯಕ ನಮ್ಮ ಸಮಾಜದ ನಾಯಕ ಅನ್ನೋದನ್ನ ಬಿಟ್ಟು ಅಭಿವೃದ್ಧಿ ಕಡೆ ಗಮನಕೊಟ್ಟರೆ ರಾಜ್ಯ ಅಭಿವೃದ್ಧಿ ಆಗಲಿಕ್ಕೆ ಮಾತ್ರ ಸಾಧ್ಯ1
- Post by @april14news1
- Post by @april14news1