Shuru
Apke Nagar Ki App…
ಕ್ರಿಕೆಟ್ ಟೂರ್ನಮೆಂಟ್ ಟ್ರೋಫಿ ಅನಾವರಣ: ಸಚಿವ ಜಮೀರ್ ಅಹಮದ್ ಖಾನ್ ಸಚಿವ ಜಮೀರ್ ಅಹಮದ್ ಖಾನ್ ಅವರು ಬಿ ಝಡ್ ಕಪ್ 2026 ಕ್ರಿಕೆಟ್ ಟೂರ್ನಮೆಂಟ್ ಟ್ರೋಫಿ ಅನಾವರಣ ಗೊಳಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆವಿ ಪ್ರಭಾಕರ್, ಸಚಿವರ ಮಾಧ್ಯಮ ಸಲಹೆ ಗಾರ ಎಸ್. ಲಕ್ಷ್ಮೀನಾರಾಯಣ, 9 ಡಡ್ರೀಮ್ಸ್ ನ ಮಂಜುನಾಥ್, ಸನತ್, ನವೀನ್ ಉಪಸ್ಥಿತರಿದ್ದರು.
Shubha @ SH
ಕ್ರಿಕೆಟ್ ಟೂರ್ನಮೆಂಟ್ ಟ್ರೋಫಿ ಅನಾವರಣ: ಸಚಿವ ಜಮೀರ್ ಅಹಮದ್ ಖಾನ್ ಸಚಿವ ಜಮೀರ್ ಅಹಮದ್ ಖಾನ್ ಅವರು ಬಿ ಝಡ್ ಕಪ್ 2026 ಕ್ರಿಕೆಟ್ ಟೂರ್ನಮೆಂಟ್ ಟ್ರೋಫಿ ಅನಾವರಣ ಗೊಳಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆವಿ ಪ್ರಭಾಕರ್, ಸಚಿವರ ಮಾಧ್ಯಮ ಸಲಹೆ ಗಾರ ಎಸ್. ಲಕ್ಷ್ಮೀನಾರಾಯಣ, 9 ಡಡ್ರೀಮ್ಸ್ ನ ಮಂಜುನಾಥ್, ಸನತ್, ನವೀನ್ ಉಪಸ್ಥಿತರಿದ್ದರು.
More news from Vijayapura and nearby areas
- ಕರ್ನಾಟಕದಲ್ಲಿ ಗಣಪತಿಗೆ ಮೆರವಣಿಗೆಗೆ ಡಿಜೆ ಅನುಮತಿ ಇಲ್ಲಾ ಎಂದ ಗೃಹ ಮಂತ್ರಿ ಪಿಯಾಂಕ :ಖರ್ಗೆ ವಿರುದ್ಧ ಬಿ ಜೆ ಪಿ ಮುಖಂಡರು ಗಣಪತಿಗೆ ಯಾಕೆ ಡಿಜಿ ಇಲ್ಲಾ ಗೃಹ ಮಂತ್ರಿಯ ರೆ ಮುಸಾಲ್ಮಾನರಿಗೆ ನಾಲಕ್ಕು ಐದು ಸಲಾ ಮೈಕ್ ಹಚ್ಚಿ ನಮಾಜ್ ಮಾಡುತ್ತಾರೆ ನಮಗ ಏಕೆ ಇಲ್ಲ ಹೇಳಿ ಗೃಹ ಮಂತ್ರಿ ಯರೆ ನಮಗೂ ಡಿಜಿ ಪರ್ಮಿಷನ್ ಕೊಡಬೇಕು ಇಲ್ಲಾಂದ್ರೆ ನಾವು ಬಿಡುವುದಿಲ್ಲ ಬಿಜೆಪಿ ಮುಖಂಡ ರಾಜ ಹೇಳಿಕೆ1
- ಒಬ್ಬ ವ್ಯಕ್ತಿಯ ದಾರಿಗೆ ಯಾವತ್ತಿಗೂ ಹೂವಾಗಬೇಕು ವಿನಹ ಮುಳ್ಳಾಗಬಾರದು: ಶ್ರೀ ಷ. ಬ್ರ. ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು. ಒಬ್ಬ ವ್ಯಕ್ತಿಯ ದಾರಿಗೆ ಯಾವತ್ತಿಗೂ ಹೂವಾಗಬೇಕು ವಿನಹ ಮುಳ್ಳಾಗಬಾರದು: ಶ್ರೀ ಷ. ಬ್ರ. ವಿಶ್ವರಾಧ್ಯ ಮಳೆಂದ್ರ ಶಿವಾಚಾರ್ಯರು.1
- ಜಿಲ್ಲೆಯಲ್ಲಿ ಬಾಕಿರುವ ಬಿಲ್ಲನ್ನು ಶೀಘ್ರದಲ್ಲೇ ಪಾವತಿಸಲು ಸೂಚನೆ ನೀಡಲಾಗಿದೆ: ಡಿಸಿ ಸಂಗಪ್ಪ1
- ಈದ್ ಮಿಲಾದ್ ಹಿನ್ನೆಲೆ ಪೊಲೀಸರಿಂದ ಮುಧೋಳ ನಗರದಲ್ಲಿ ಪಥ ಸಂಚಲನ ಮುಧೋಳ : ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಪಥ ಸಂಚಲನ ನಡೆಯಿತು. ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ ಪಥ ಸಂಚಲನ ಶಿವಾಜಿ ವೃತ್ತ, ಬರಗಿ ಮಸೀದಿ, ಗಾಂಧಿ ಚೌಕ್, ತಂಬಾಕ್ ಚೌಕ್, ಜೈ ಭಾರತ ಸರ್ಕಲ್, ಜಡಗಣ್ಣ-ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು.2
- ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ಬ್ಯಾರಿಕೇಡ್ ಮುರಿದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು.. ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ಬ್ಯಾರಿಕೇಡ್ ಮುರಿದು ಡಿಸಿ ಕಚೇರಿಗೆ ಮುತ್ತಿಗೆ ಹಾಕಿದರು..1
- ಈದ್ ಮಿಲಾದ ಹಬ್ಬ ; ಭಾವೈಕ್ಯತೆಗೆ ಸಾಕ್ಷಿ ಇಳಕಲ್ ಜನತೆ ....... ಈದ್ ಮಿಲಾದ ಹಬ್ಬ ; ಭಾವೈಕ್ಯತೆಗೆ ಸಾಕ್ಷಿ ಇಳಕಲ್ ಜನತೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಸಂಭ್ರಮದಿಂದ ಈದ್ ಮಿಲಾದ ಹಬ್ಬ ಆಚರಿಸಲಾಯಿತು. ಈ ಸಂದರ್ಭದಲ್ಲಿ ಭವ್ಯ ಮೆರವಣಿಗೆ ಸಾಗಿತು. ಈ ಸಂದರ್ಭದಲ್ಲಿ ಹಿಂದು ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ತಿಳಿಸಿ, ಭಾವೈಕ್ಯತೆ ಮೆರೆದರು.1
- ಈದ್ ಮಿಲಾದ್ ಹಿನ್ನೆಲೆ ಜಮಖಂಡಿಯಲ್ಲಿ ಪೊಲೀಸ್ ಪರೇಡ್ ! ಅಹಿತಕರ ಘಟನೆ ತಡೆಗೆ ಪೊಲೀಸರ ಕಟ್ಟೆಚ್ಚರ ! ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಪಡೆ ಬಲ ಪ್ರದರ್ಶನ ! ಡಿವೈಎಸ್‌ಪಿ ಸಯ್ಯದ ರೋಷನ್ ಜಮೀರ ಮಾರ್ಗದರ್ಶನದಲ್ಲಿ ಪರೇಡ್1
- ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಭೀಮ್ ಆರ್ಮಿ ಬೃಹತ್ ಹೋರಾಟ ಮುಧೋಳ : ನಗರದ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಹಾಗೂ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ಜರುಗಿತು. ಡಾ.ಅಂಬೇಡ್ಕರ್ ವೃತ್ತದಿಂದ ಸರ್ಕಾರಿ ಆಸ್ಪತ್ರೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಮಾರ್ಗದುದ್ದಕ್ಕೂ ಆಸ್ಪತ್ರೆಗೆ ಅಗತ್ಯ ಸಿಬ್ಬಂದಿ ಒದಗಿಸಬೇಕು, ಗುಣಮಟ್ಟದ ಚಿಕಿತ್ಸೆಗೆ ನೀಡಬೇಕು ಒತ್ತಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಆಸ್ಪತ್ರೆ ಆವರಣದಲ್ಲಿನ ಸಭೆಯಲ್ಲಿ ಮಾತನಾಡಿದ ಭೀಮ್ ಆರ್ಮಿ ಮೂಲ ನಿವಾಸಿ ಏಕತಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಸುನೀಲ ಕಂಬೋಗಿ, ವಿವಿಧ ರೋಗಗಳಿಗೆ ಸಂಬಂಧಿಸಿದ ತಜ್ಞ ವೈದ್ಯರ ಕೊರತೆ, ವೈದ್ಯಕೀಯ ಸಿಬ್ಬಂದಿಯ ಅಸಮರ್ಪಕ ಲಭ್ಯತೆ, ಅಗತ್ಯ ಚಿಕಿತ್ಸೆಯಲ್ಲಿ ವಿಳಂಬ ಹಾಗೂ ಆಸ್ಪತ್ರೆಯ ಕೆಲ ವೈದ್ಯರನ್ನು ನಿಯೋಜನೆಯ ಮೇಲೆ ಬೇರೆ ಸರ್ಕಾರಿ ಆಸ್ಪತ್ರೆಗಳಿಗೆ ನಿಯೋಜಿಸಿರುವುದರಿಂದ ಬಡ ಮತ್ತು ಮಧ್ಯಮ ವರ್ಗದ ಜನರು ಬೇರೆ ಆಸ್ಪತ್ರೆಗಳಿಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕರಿಗೆ ಸೂಕ್ತ ಆರೋಗ್ಯ ಸೇವೆಗಳು ಸಿಗದೆ ಪರದಾಡುವಂತಾಗಿದೆ ಎಂದು ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಯು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರಿಗೆ ಪ್ರಮುಖ ಸರ್ಕಾರಿ ಆರೋಗ್ಯ ಸೇವಾ ಕೇಂದ್ರವಾಗಿದೆ. ಆದರೆ ಆಸ್ಪತ್ರೆಯಲ್ಲಿ ಅಗತ್ಯ ಪ್ರಮಾಣದ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಲಭ್ಯವಿಲ್ಲದಿರುವುದರಿಂದ ಸಾರ್ವಜನಿಕರು ಸೂಕ್ತ ಚಿಕಿತ್ಸೆ ಪಡೆಯಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಅಸಮಾಧಾನ ಹೊರಹಾಕಿದರು. ರಾಜ್ಯ ಸಂಚಾಲಕ ಅನಿಲ ಬರಗಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಯಿಂದ ಕೂಡಿದೆ. ಮುಧೋಳ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಬೇರೆ ಆಸ್ಪತ್ರೆಗೆ ನಿಯೋಜನೆ ಮಾಡಿರುವ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಖಾಲಿ ಇರುವ ವೈದ್ಯರನ್ನು ಮತ್ತು ಸಿಬ್ಬಂದಿಯನ್ನು ಭರ್ತಿ ಮಾಡಿ ಆಸ್ಪತ್ರೆಯ ಅವಶ್ಯಕತೆಯನ್ನು ಶೀಘ್ರದಲ್ಲಿಯೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಿಗೆ ಗುಣಮಟ್ಟದ ಮತ್ತು ಸಮಯೋಚಿತ ಚಿಕಿತ್ಸೆ ದೊರೆಯುವಂತೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಹಾಗೂ ಮುಧೋಳ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು. ಎಂದು ಆಗ್ರಹಿಸಿದರು. ರಾಜ್ಯ ಘಟಕದ ಅಧ್ಯಕ್ಷ ಲವಿತ ಮೇತ್ರಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬರುವ ಬಡವರಿಗೆ ಗುಣಮಟ್ಟದ ಚಿಕಿತ್ಸೆ ಮರೀಚಿಕೆಯಾಗಿದೆ. ಕೂಡಲೇ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಮಾನದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಡಿಎಚ್‍ಒ ಡಾ.ರಾಜಕುಮಾರ ಯರಗಲ್ ಮಾತನಾಡಿ, ಇಲ್ಲಿಂದ ನಿಯೋಜನೆಗೊಂಡ ನಾಲ್ಕು ವೈದ್ಯರ ನಿಯೋಜನೆ ಆದೇಶವನ್ನು ರದ್ದು ಮಾಡಲಾಗಿದೆ ಎಂದು ಪತ್ರಗಳನ್ನು ಪ್ರತಿಭಟನಾ ಕಾರರಿಗೆ ತೋರಿಸಿದರು. ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಿಕ ಮನವಿ ಸ್ವೀಕರಿಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ನೀಡಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ ಮಲಘಾಣ, ಡಾ, ಅಶೋಕ ಸೂರ್ಯವಂಶಿ, ಮುಖಂಡರಾದ ಸದಾಶಿವ ಬಾಡಗಂಡಿ, ಸುಂದರ ದೊಡಮನಿ, ಪುಟ್ಟು ಮೇತ್ರಿ, ಮಹಾದೇವಿ ಅಮಲಝರಿ, ಗೀತಾ, ರವಿ ಬೆಳಗಲಿ, ಮಹಾದೇವ ಮೀಸಿ, ಭೀಮಸಿ ಭಜಂತ್ರಿ, ಶೇಖರ ಬಾಗಿ ಮುಂತಾದವರು ಇದ್ದರು.1
- ಭಿರಡಿ ಶ್ರೀ ಮಹಾದೇವ ಜಾತ್ರೆಗೆ ದೇಣಿಗೆಯ ನೀಡಿದ ಭಕ್ತರಿಗೆ ಸನ್ಮಾನ1