logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಈದ್ ಮಿಲಾದ್: ಶಾಂತಿ ಸುವ್ಯವಸ್ಥೆ ಕಾಪಾಡಲು ಚಳ್ಳಕೆರೆಯಲ್ಲಿ ಪೊಲೀಸರಿಂದ ಬೃಹತ್ ಪಥಸಂಚಲನ ಚಳ್ಳಕೆರೆ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪಥಸಂಚಲನ ನಡೆಸಲಾಯಿತು. ನಗರದ ಪೊಲೀಸ್ ಠಾಣೆಯ ಮುಂಭಾಗದಿಂದ ಆರಂಭವಾದ ಈ ಶಿಸ್ತುಬದ್ಧ ಪಥಸಂಚಲನವು ಚಿತ್ರದುರ್ಗ ರಸ್ತೆ, ಅಂಬೇಡ್ಕರ್ ವೃತ್ತ, ಎಸ್.ಆರ್. ರಸ್ತೆ, ಬೆಂಗಳೂರು ರಸ್ತೆ, ಬಸವೇಶ್ವರ ವೃತ್ತ, ಹಳೆನಗರದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಮೂಲಕ ಸಾಗಿ ಬಳ್ಳಾರಿ ರಸ್ತೆಯವರೆಗೆ ಜರುಗಿತು. ನಗರದ ಅಷ್ಟ ದಿಕ್ಕುಗಳಲ್ಲೂ ಸಂಚರಿಸಿದ ಪೊಲೀಸ್ ಪಡೆ, ಸಾರ್ವಜನಿಕರಲ್ಲಿ ಧೈರ್ಯ ಮತ್ತು ಭದ್ರತೆಯ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಯಿತು. ಚಳ್ಳಕೆರೆ ವಿಭಾಗದ ಡಿವೈಎಸ್‌ಪಿ ಸತ್ಯನಾರಾಯಣ ರಾವ್ ಅವರ ನೇತೃತ್ವದಲ್ಲಿ ನಡೆದ ಈ ಪಥಸಂಚಲನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಕೆ. ಕುಮಾರ್, ಪಿಎಸ್‌ಐ ಶಿವರಾಜ್ ಸೇರಿದಂತೆ ಕೆಎಸ್‌ಆರ್‌ಪಿ , ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಎಲ್ಲರೂ ಅನ್ಯೋನ್ಯತೆಯಿಂದ, ಶಾಂತಿ ಹಾಗೂ ಸೌಹಾರ್ದತೆಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಬೇಕು,ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

14 hrs ago
user_Kiran M J
Kiran M J
Local News Reporter ಚಳ್ಳಕೆರೆ, ಚಿತ್ರದುರ್ಗ, ಕರ್ನಾಟಕ•
14 hrs ago

ಈದ್ ಮಿಲಾದ್: ಶಾಂತಿ ಸುವ್ಯವಸ್ಥೆ ಕಾಪಾಡಲು ಚಳ್ಳಕೆರೆಯಲ್ಲಿ ಪೊಲೀಸರಿಂದ ಬೃಹತ್ ಪಥಸಂಚಲನ ಚಳ್ಳಕೆರೆ: ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಪಥಸಂಚಲನ ನಡೆಸಲಾಯಿತು. ನಗರದ ಪೊಲೀಸ್ ಠಾಣೆಯ ಮುಂಭಾಗದಿಂದ ಆರಂಭವಾದ ಈ ಶಿಸ್ತುಬದ್ಧ ಪಥಸಂಚಲನವು ಚಿತ್ರದುರ್ಗ ರಸ್ತೆ, ಅಂಬೇಡ್ಕರ್ ವೃತ್ತ, ಎಸ್.ಆರ್. ರಸ್ತೆ, ಬೆಂಗಳೂರು ರಸ್ತೆ, ಬಸವೇಶ್ವರ ವೃತ್ತ, ಹಳೆನಗರದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಮೂಲಕ ಸಾಗಿ ಬಳ್ಳಾರಿ ರಸ್ತೆಯವರೆಗೆ ಜರುಗಿತು. ನಗರದ ಅಷ್ಟ ದಿಕ್ಕುಗಳಲ್ಲೂ ಸಂಚರಿಸಿದ ಪೊಲೀಸ್ ಪಡೆ, ಸಾರ್ವಜನಿಕರಲ್ಲಿ ಧೈರ್ಯ ಮತ್ತು ಭದ್ರತೆಯ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಯಿತು. ಚಳ್ಳಕೆರೆ ವಿಭಾಗದ ಡಿವೈಎಸ್‌ಪಿ ಸತ್ಯನಾರಾಯಣ ರಾವ್ ಅವರ ನೇತೃತ್ವದಲ್ಲಿ ನಡೆದ ಈ ಪಥಸಂಚಲನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಕೆ. ಕುಮಾರ್, ಪಿಎಸ್‌ಐ ಶಿವರಾಜ್ ಸೇರಿದಂತೆ ಕೆಎಸ್‌ಆರ್‌ಪಿ , ಠಾಣೆಯ ಪೊಲೀಸ್ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಎಲ್ಲರೂ ಅನ್ಯೋನ್ಯತೆಯಿಂದ, ಶಾಂತಿ ಹಾಗೂ ಸೌಹಾರ್ದತೆಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಬೇಕು,ಎಂದು ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

More news from ಕರ್ನಾಟಕ and nearby areas
  • ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೋಲೀಸ್ ಪಥಸಂಚಲನ. ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ನಗರದಲ್ಲಿ ಡಿವೈಎಸ್ ಪಿ ಸತ್ಯನಾರಾಯಣ ರಾವ್ ಇವರ ನೇತೃತ್ವದಲ್ಲಿ ಪೊಲೀಸರು ಪರೇಡ್ ಹಾಗೂ ಪಥಸಂಚಲನ ನಡೆಸಲಾಯಿತು.. ನಗರದ ಪೋಲೀಸ್ ಠಾಣೆಯಿಂದ ಹೊರಟ ಪೋಲೀಸ್ ಪಥ ಸಂಚಲನ ಅಂಬೇಡ್ಕರ್ ಸರ್ಕಲ್, ನೆಹರು ವೃತ್ತ, ದಿಂದ ಬಳ್ಖಾರಿ ಮುಖ್ಯರಸ್ತೆಯಿಂದ ಪಾವಗಡ ರಸ್ತೆ,ಮಹದೇವಿ ರಸ್ತೆ ಹಿರಿಯೂರು ಚಿತ್ರದುರ್ಗ ಮುಖ್ಯ ರಸ್ತೆಗೆ ತಲುಪಿ ಮತ್ತೆ ಸಂಗೊಳ್ಳಿ ರಾಯಣ್ಣ ರಸ್ತೆಯಿಂದ ಗಾಂಧಿ ನಗರದ ಮುಖ್ಯ ರಸ್ತೆಯಿಂದ ಸೋಮುಗುದ್ದು ರಸ್ತೆಯವರಗೆ ಸಂಚರಿಸಿ ನಂತರ ಪೊಲೀಸ್ ಠಾಣೆವರ್ಗೂ ಪಥ ಸಂಚಲನ ನಡೆಸಲಾಯಿತು.ಈ ಸಂದರ್ಭದಲ್ಲಿ ಡಿವೈಎಸ್ ಪಿ ಎಂಜೆ.ಸತ್ಯನಾರಾಯಣ ರಾವ್.ಪೋಲೀಸ್ ಇನ್ಸ್ಪೆಕ್ಟರ್ ಕೆ.ಕುಮಾರ್ ಪಿಎಸ್ಐ ಶಿವರಾಜ್ ಹಾಗೂ ಕೆ.ಎಸ್ ಆರ್ ಪಿ ತುಕ್ಕಡ್ಡಿ,.ಪೋಲೀಸ್ ಸಿಬ್ಬಂದಿಗಳು ಮತ್ತು ಹೊಂಗಾಡ್ಸ ಗಳು‌ ಪಥಸಂಚಲ ಇದ್ದರು
    1
    ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು  ಪೋಲೀಸ್ ಪಥಸಂಚಲನ.
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ನಗರದಲ್ಲಿ  ಡಿವೈಎಸ್ ಪಿ ಸತ್ಯನಾರಾಯಣ ರಾವ್ ಇವರ ನೇತೃತ್ವದಲ್ಲಿ ಪೊಲೀಸರು ಪರೇಡ್ ಹಾಗೂ ಪಥಸಂಚಲನ ನಡೆಸಲಾಯಿತು..
ನಗರದ ಪೋಲೀಸ್ ಠಾಣೆಯಿಂದ  ಹೊರಟ ಪೋಲೀಸ್  ಪಥ ಸಂಚಲನ ಅಂಬೇಡ್ಕರ್ ಸರ್ಕಲ್, ನೆಹರು  ವೃತ್ತ, ದಿಂದ ಬಳ್ಖಾರಿ ಮುಖ್ಯರಸ್ತೆಯಿಂದ ಪಾವಗಡ ರಸ್ತೆ,ಮಹದೇವಿ ರಸ್ತೆ ಹಿರಿಯೂರು ಚಿತ್ರದುರ್ಗ  ಮುಖ್ಯ ರಸ್ತೆಗೆ   ತಲುಪಿ ಮತ್ತೆ  ಸಂಗೊಳ್ಳಿ ರಾಯಣ್ಣ  ರಸ್ತೆಯಿಂದ ಗಾಂಧಿ ನಗರದ ಮುಖ್ಯ ರಸ್ತೆಯಿಂದ  ಸೋಮುಗುದ್ದು ರಸ್ತೆಯವರಗೆ  ಸಂಚರಿಸಿ ನಂತರ ಪೊಲೀಸ್ ಠಾಣೆವರ್ಗೂ ಪಥ ಸಂಚಲನ ನಡೆಸಲಾಯಿತು.ಈ ಸಂದರ್ಭದಲ್ಲಿ ಡಿವೈಎಸ್ ಪಿ ಎಂಜೆ.ಸತ್ಯನಾರಾಯಣ ರಾವ್.ಪೋಲೀಸ್ ಇನ್ಸ್ಪೆಕ್ಟರ್ ಕೆ.ಕುಮಾರ್ 
ಪಿಎಸ್ಐ ಶಿವರಾಜ್ ಹಾಗೂ ಕೆ.ಎಸ್ ಆರ್ ಪಿ ತುಕ್ಕಡ್ಡಿ,.ಪೋಲೀಸ್  ಸಿಬ್ಬಂದಿಗಳು ಮತ್ತು ಹೊಂಗಾಡ್ಸ ಗಳು‌ ಪಥಸಂಚಲ ಇದ್ದರು
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    14 hrs ago
  • ವರಮಹಾಲಕ್ಷ್ಮಿ ಹಬ್ಬಕ್ಕೆ ಮೆರಗು: ನಟ ಚಿರಂಜೀವಿ ಹುಟ್ಟುಹಬ್ಬದ ಸವಿನೆನಪಿನಲ್ಲಿ ಪೌರಕಾರ್ಮಿಕರಿಗೆ ಸೀರೆ ವಿತರಣೆ ​ಪಾವಗಡ: ಸಿನಿಮಾ ನಟನೆಯನ್ನು ಮೆಚ್ಚಿ ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸುವುದಷ್ಟೇ ಅಲ್ಲದೆ, ನಟರು ಮಾಡುವ ಸಾಮಾಜಿಕ ಸೇವಾ ಕಾರ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜಕ್ಕೆ ನೈಜ ಒಳಿತಾಗುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಶಮಿ ವೃಕ್ಷ ಅಭಿವೃದ್ಧಿ ಸಮಿತಿ ಟ್ರಸ್ಟ್ ಕಾರ್ಯದರ್ಶಿ ಸತ್ಯ ಲೋಕೇಶ್ ತಿಳಿಸಿದರು. ​ಪಟ್ಟಣದ ಬ್ರೈಟ್ ಫ್ಯೂಚರ್ ಕಂಪ್ಯೂಟರ್ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರ 71ನೇ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣದ ಮಹಿಳಾ ಪೌರಕಾರ್ಮಿಕರಿಗೆ ಹಾಗೂ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಮಹಿಳಾ ಕಾರ್ಮಿಕರಿಗೆ ಉಚಿತ ಸೀರೆಗಳನ್ನು ವಿತರಿಸುವ ಮೂಲಕ ಹಬ್ಬದ ಸಡಗರಕ್ಕೆ ಚಾಲನೆ ನೀಡಲಾಯಿತು. ​ಕಾರ್ಯಕ್ರಮದ ಮುಖ್ಯ ರೂವಾರಿ, ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಾನಂ ಶಶಿಕಿರಣ್ ಮಾತನಾಡಿ, "ಚಿರಂಜೀವಿ ಅವರು ಕೇವಲ ನಟನಾಗಿ ಉಳಿಯದೆ, ಬ್ಲಡ್ ಬ್ಯಾಂಕ್ ಸ್ಥಾಪಿಸಿ ರಕ್ತದ ಅಗತ್ಯವಿರುವ ಸಾವಿರಾರು ಜನರಿಗೆ ನೆರವಾಗುವ ಮೂಲಕ ದೇಶಾದ್ಯಂತ ರಕ್ತದಾನದ ಮಹತ್ವ ಸಾರಿದ್ದಾರೆ. ಮುಂಬರುವ ವರಮಹಾಲಕ್ಷ್ಮಿ ಹಬ್ಬವನ್ನು ಬಡ ಮಹಿಳಾ ಕಾರ್ಮಿಕರು ಸಂಭ್ರಮದಿಂದ ಆಚರಿಸಲಿ ಎಂಬ ಉದ್ದೇಶದಿಂದ ಈ ಸಮಾಜ ಸೇವೆಗೆ ಮುನ್ನುಡಿ ಬರೆದಿದ್ದೇವೆ" ಎಂದರು. ​ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳ್ಳೇಕಾರ ಲೋಕೇಶ್ ಮಾತನಾಡಿ, ಸೇವಾ ಟ್ರಸ್ಟ್ ವತಿಯಿಂದ ಇದುವರೆಗೆ ಸುಮಾರು 13,500 ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಬಡವರ ಸೇವೆ ಮಾಡುತ್ತಿರುವ ಮಾನಂ ಶಶಿಕಿರಣ್ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ​ಅಂಗನವಾಡಿಗೆ ಧನಸಹಾಯ & ಸಾಂಸ್ಕೃತಿಕ ಸಂಭ್ರಮ: ಇದೇ ವೇಳೆ ಪಟ್ಟಣದ ಆದರ್ಶ ನಗರದ ಅಂಗನವಾಡಿ ಕೇಂದ್ರದ ನವೀಕರಣಕ್ಕಾಗಿ ₹15,000 ಮೊತ್ತದ ಚೆಕ್ ಅನ್ನು ಶಿಕ್ಷಕಿ ಭೂಲಕ್ಷ್ಮಿ ಅವರಿಗೆ ಹಸ್ತಾಂತರಿಸಲಾಯಿತು. ಸುಮಾರು 100 ಮಹಿಳಾ ಕಾರ್ಮಿಕರಿಗೆ ಉಚಿತ ಸೀರೆ ವಿತರಿಸಲಾಯಿತು. ಉನ್ನತಿ ತರಬೇತಿಯ ವಿದ್ಯಾರ್ಥಿನಿಯರು ಚಿರಂಜೀವಿ ಅವರ ಜನಪ್ರಿಯ ಗೀತೆಗಳಿಗೆ ಸಖತ್ ನೃತ್ಯ ಮಾಡಿ ಸಭಿಕರನ್ನು ರಂಜಿಸಿದರು. ಅತ್ಯುತ್ತಮವಾಗಿ ನೃತ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಷಾ ಬಾಬು ಹಾಗೂ ಗಣ್ಯರು ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಿದರು. ಕೊನೆಯಲ್ಲಿ 71ನೇ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಕೇಕ್ ಕತ್ತರಿಸಿ ಶುಭಾಶಯ ಕೋರಲಾಯಿತು. ​ಕಾರ್ಯಕ್ರಮದಲ್ಲಿ ಚಿರಂಜೀವಿ ಅಭಿಮಾನಿಗಳಾದ ಮಾಜಿ ಪುರಸಭಾ ಸದಸ್ಯರಾದ ರಿಜ್ವಾನ್ ಹುಲ್ಲಾ, ಷಾ ಬಾಬು, ನಂದೀಶ್, ಮುತ್ಯಾಲಪ್ಪ ಹಾಗೂ ಪ್ರಮುಖರಾದ ಶ್ರೀಧರ್ ಗುಪ್ತ, ಸೋಲಾರ್ ರಾಜಶೇಖರ್ ರೆಡ್ಡಿ, ಅಮಿಲಿನೇನಿ ನರೇಶ್, ಶಾರು, ಸಂಧ್ಯಾ ಮಾನಂ, ವಿಶಾಲ್, ಪ್ರಜ್ವಲ್, ಶಿಕ್ಷಕಿ ನಳಿನಾ, ಚಂದನ, ಶಿವಕುಮಾರ್, ಹರ್ಷ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಪಾವಗಡ ವರದಿ
    1
    ವರಮಹಾಲಕ್ಷ್ಮಿ ಹಬ್ಬಕ್ಕೆ ಮೆರಗು: ನಟ ಚಿರಂಜೀವಿ ಹುಟ್ಟುಹಬ್ಬದ ಸವಿನೆನಪಿನಲ್ಲಿ ಪೌರಕಾರ್ಮಿಕರಿಗೆ ಸೀರೆ ವಿತರಣೆ 

​ಪಾವಗಡ: ಸಿನಿಮಾ ನಟನೆಯನ್ನು ಮೆಚ್ಚಿ ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸುವುದಷ್ಟೇ ಅಲ್ಲದೆ, ನಟರು ಮಾಡುವ ಸಾಮಾಜಿಕ ಸೇವಾ ಕಾರ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜಕ್ಕೆ ನೈಜ ಒಳಿತಾಗುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಶಮಿ ವೃಕ್ಷ ಅಭಿವೃದ್ಧಿ ಸಮಿತಿ ಟ್ರಸ್ಟ್ ಕಾರ್ಯದರ್ಶಿ ಸತ್ಯ ಲೋಕೇಶ್ ತಿಳಿಸಿದರು. 
​ಪಟ್ಟಣದ ಬ್ರೈಟ್ ಫ್ಯೂಚರ್ ಕಂಪ್ಯೂಟರ್ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರ 71ನೇ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪಟ್ಟಣದ ಮಹಿಳಾ ಪೌರಕಾರ್ಮಿಕರಿಗೆ ಹಾಗೂ ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ಮಹಿಳಾ ಕಾರ್ಮಿಕರಿಗೆ ಉಚಿತ ಸೀರೆಗಳನ್ನು ವಿತರಿಸುವ ಮೂಲಕ ಹಬ್ಬದ ಸಡಗರಕ್ಕೆ ಚಾಲನೆ ನೀಡಲಾಯಿತು.
​ಕಾರ್ಯಕ್ರಮದ ಮುಖ್ಯ ರೂವಾರಿ, ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಾನಂ ಶಶಿಕಿರಣ್ ಮಾತನಾಡಿ, "ಚಿರಂಜೀವಿ ಅವರು ಕೇವಲ ನಟನಾಗಿ ಉಳಿಯದೆ, ಬ್ಲಡ್ ಬ್ಯಾಂಕ್ ಸ್ಥಾಪಿಸಿ ರಕ್ತದ ಅಗತ್ಯವಿರುವ ಸಾವಿರಾರು ಜನರಿಗೆ ನೆರವಾಗುವ ಮೂಲಕ ದೇಶಾದ್ಯಂತ ರಕ್ತದಾನದ ಮಹತ್ವ ಸಾರಿದ್ದಾರೆ. ಮುಂಬರುವ ವರಮಹಾಲಕ್ಷ್ಮಿ ಹಬ್ಬವನ್ನು ಬಡ ಮಹಿಳಾ ಕಾರ್ಮಿಕರು ಸಂಭ್ರಮದಿಂದ ಆಚರಿಸಲಿ ಎಂಬ ಉದ್ದೇಶದಿಂದ ಈ ಸಮಾಜ ಸೇವೆಗೆ ಮುನ್ನುಡಿ ಬರೆದಿದ್ದೇವೆ" ಎಂದರು.
​ವಾಲ್ಮೀಕಿ ಜಾಗೃತಿ ವೇದಿಕೆ ಅಧ್ಯಕ್ಷ ಪಾಳ್ಳೇಕಾರ ಲೋಕೇಶ್ ಮಾತನಾಡಿ, ಸೇವಾ ಟ್ರಸ್ಟ್ ವತಿಯಿಂದ ಇದುವರೆಗೆ ಸುಮಾರು 13,500 ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಬಡವರ ಸೇವೆ ಮಾಡುತ್ತಿರುವ ಮಾನಂ ಶಶಿಕಿರಣ್ ಅವರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
​ಅಂಗನವಾಡಿಗೆ ಧನಸಹಾಯ & ಸಾಂಸ್ಕೃತಿಕ ಸಂಭ್ರಮ:
ಇದೇ ವೇಳೆ ಪಟ್ಟಣದ ಆದರ್ಶ ನಗರದ ಅಂಗನವಾಡಿ ಕೇಂದ್ರದ ನವೀಕರಣಕ್ಕಾಗಿ ₹15,000 ಮೊತ್ತದ ಚೆಕ್ ಅನ್ನು ಶಿಕ್ಷಕಿ ಭೂಲಕ್ಷ್ಮಿ ಅವರಿಗೆ ಹಸ್ತಾಂತರಿಸಲಾಯಿತು. ಸುಮಾರು 100 ಮಹಿಳಾ ಕಾರ್ಮಿಕರಿಗೆ ಉಚಿತ ಸೀರೆ ವಿತರಿಸಲಾಯಿತು. ಉನ್ನತಿ ತರಬೇತಿಯ ವಿದ್ಯಾರ್ಥಿನಿಯರು ಚಿರಂಜೀವಿ ಅವರ ಜನಪ್ರಿಯ ಗೀತೆಗಳಿಗೆ ಸಖತ್ ನೃತ್ಯ ಮಾಡಿ ಸಭಿಕರನ್ನು ರಂಜಿಸಿದರು. ಅತ್ಯುತ್ತಮವಾಗಿ ನೃತ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಷಾ ಬಾಬು ಹಾಗೂ ಗಣ್ಯರು ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಿದರು. ಕೊನೆಯಲ್ಲಿ 71ನೇ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಕೇಕ್ ಕತ್ತರಿಸಿ ಶುಭಾಶಯ ಕೋರಲಾಯಿತು. 
​ಕಾರ್ಯಕ್ರಮದಲ್ಲಿ ಚಿರಂಜೀವಿ ಅಭಿಮಾನಿಗಳಾದ ಮಾಜಿ ಪುರಸಭಾ ಸದಸ್ಯರಾದ ರಿಜ್ವಾನ್ ಹುಲ್ಲಾ, ಷಾ ಬಾಬು, ನಂದೀಶ್, ಮುತ್ಯಾಲಪ್ಪ ಹಾಗೂ ಪ್ರಮುಖರಾದ ಶ್ರೀಧರ್ ಗುಪ್ತ, ಸೋಲಾರ್ ರಾಜಶೇಖರ್ ರೆಡ್ಡಿ, ಅಮಿಲಿನೇನಿ ನರೇಶ್, ಶಾರು, ಸಂಧ್ಯಾ ಮಾನಂ, ವಿಶಾಲ್, ಪ್ರಜ್ವಲ್, ಶಿಕ್ಷಕಿ ನಳಿನಾ, ಚಂದನ, ಶಿವಕುಮಾರ್, ಹರ್ಷ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಪಾವಗಡ ವರದಿ
    user_Ctv news
    Ctv news
    Voice of people ಪಾವಗಡ, ತುಮಕೂರು, ಕರ್ನಾಟಕ•
    4 hrs ago
  • NICE ಸಂಸ್ಥೆ ನಡೆಸಿರುವ ಅಕ್ರಮ ಮತ್ತು ವಂಚನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಜೆಡಿಎಸ್ ನಿಯೋಗ ಬೆಂಗಳೂರು: NICE ಸಂಸ್ಥೆ ನಡೆಸಿರುವ ಅಕ್ರಮ ಮತ್ತು ವಂಚನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೆಡಿಎಸ್ ನಿಯೋಗ ಇಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದರು. ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ, ಹೈಕೋರ್ಟ್ ತೀರ್ಪಿನ ಪ್ರತಿ ಸಮೇತ 5 ಪುಟಗಳ ಮನವಿ ಪತ್ರ ಸಲ್ಲಿಸಿದರು.
    1
    NICE ಸಂಸ್ಥೆ ನಡೆಸಿರುವ ಅಕ್ರಮ ಮತ್ತು ವಂಚನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಸಿದ ಜೆಡಿಎಸ್ ನಿಯೋಗ 
ಬೆಂಗಳೂರು: NICE ಸಂಸ್ಥೆ ನಡೆಸಿರುವ ಅಕ್ರಮ ಮತ್ತು ವಂಚನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜೆಡಿಎಸ್ ನಿಯೋಗ ಇಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದರು.
ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ, ಹೈಕೋರ್ಟ್ ತೀರ್ಪಿನ ಪ್ರತಿ ಸಮೇತ 5 ಪುಟಗಳ ಮನವಿ ಪತ್ರ ಸಲ್ಲಿಸಿದರು.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    13 hrs ago
  • ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ *ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಆ 25ರಂದು ಪಟ್ಟಣದಲ್ಲಿ , (AITUC) ಕರ್ನಾಟಕ ರಾಜ್ಯವ ಅಂಗನವಾಡಿ ಕಾರ್ತಕರ್ತೆಯರು , ಮತ್ತು ಸಹಾಯಕಿಯರ ಪೆಡರೇಷನ್ ಕಾರ್ಯಕರ್ತೆಯರು. ತಮ್ಮ ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ , ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ , AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು. ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ , ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು. ಮುಖಂಡ ಹೆಚ್. ವೀರಣ್ಣ ನೇತೃತ್ವದಲ್ಲಿ , ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ನೀಡಿದರು. ಹೆಚ್.ವೀರಣ್ಣ ಹಾಗೂ ತಾಲೂಕಾಧ್ಯಕ್ಷರಾದ , ಎನ್ ಸುಮಾ ಮಾತನಾಡಿದರು. ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ , ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರಿಗೆ ಹಾಗೂ ಸಿಡಿಪಿಒ ಮಾಲುಂಬೀರವರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು. ತಾಲೂಕು ಪದಾಧಿಕಾರಿಗಳಾದ ಕೆ. ಪದ್ಮ‍ಾವತಿ , ಕೆ.ಹೆಚ್.ಕವಿತಾ , ಬಿ.ಪಾರ್ವತಮ್ಮ , ಹೆಚ್.ಅನ್ನಪೂರ್ಣ , ಜಿ.ಪದ್ಮಾವತಿ , ಓ. ಕರಿವಸಮ್ಮ , ಜೆ.ಜಯಮಾಲ , ಮೀನಾಕ್ಷಿ , ಶಿವಲೀಲಾ , ಗಾಯತ್ರಿ , ರೇಣುಕಮ್ಮ , ಚಂದ್ರಮ್ಮ , ಬಸಮ್ಮ , ಸುಜಾತ , ಸುಮಲತಾ , ರೇಣುಕಾ , ದ್ಯಾಮಕ್ಕ , ಅನಸೂಯ ಸೇರಿದಂತೆ. ಪಟ್ಟಣ ಸೇರಿದಂತೆ , ತಾಲೂಕಿನ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
*ಕೂಡ್ಲಿಗಿ : AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಆ 25ರಂದು ಪಟ್ಟಣದಲ್ಲಿ , (AITUC) ಕರ್ನಾಟಕ ರಾಜ್ಯವ ಅಂಗನವಾಡಿ ಕಾರ್ತಕರ್ತೆಯರು , ಮತ್ತು ಸಹಾಯಕಿಯರ ಪೆಡರೇಷನ್  ಕಾರ್ಯಕರ್ತೆಯರು. ತಮ್ಮ  ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ,  ಸರ್ಕಾರಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ವಿವಿದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ , AITUC ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು. ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ , ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು. ಮುಖಂಡ ಹೆಚ್. ವೀರಣ್ಣ  ನೇತೃತ್ವದಲ್ಲಿ ,  ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ನೀಡಿದರು. ಹೆಚ್.ವೀರಣ್ಣ ಹಾಗೂ ತಾಲೂಕಾಧ್ಯಕ್ಷರಾದ , ಎನ್ ಸುಮಾ ಮಾತನಾಡಿದರು. ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ , ತಹಶಿಲ್ದಾರರಾದ ವಿ.ಕೆ.ನೇತ್ರಾವತಿಯವರಿಗೆ ಹಾಗೂ ಸಿಡಿಪಿಒ ಮಾಲುಂಬೀರವರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು. ತಾಲೂಕು ಪದಾಧಿಕಾರಿಗಳಾದ  ಕೆ. ಪದ್ಮ‍ಾವತಿ ,  ಕೆ.ಹೆಚ್.ಕವಿತಾ , ಬಿ.ಪಾರ್ವತಮ್ಮ , ಹೆಚ್.ಅನ್ನಪೂರ್ಣ ,  ಜಿ.ಪದ್ಮಾವತಿ , ಓ. ಕರಿವಸಮ್ಮ , ಜೆ.ಜಯಮಾಲ ,  ಮೀನಾಕ್ಷಿ , ಶಿವಲೀಲಾ , ಗಾಯತ್ರಿ , ರೇಣುಕಮ್ಮ , ಚಂದ್ರಮ್ಮ , ಬಸಮ್ಮ , ಸುಜಾತ , ಸುಮಲತಾ , ರೇಣುಕಾ , ದ್ಯಾಮಕ್ಕ , ಅನಸೂಯ ಸೇರಿದಂತೆ. ಪಟ್ಟಣ ಸೇರಿದಂತೆ  , ತಾಲೂಕಿನ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ✍ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    17 hrs ago
  • “ನನ್ನದೇ ಬೆಳೆ, ನನ್ನದೇ ಬೆಲೆ!” 🌾 ಬಳ್ಳಾರಿಯಲ್ಲಿ ನಾಳೆಯಿಂದ ರೈತ ಸಂತೆ ಆರಂಭ | ವಿಷಮುಕ್ತ ಆಹಾರಕ್ಕೆ ಒತ್ತು ಬಳ್ಳಾರಿಯಲ್ಲಿ ಆಗಸ್ಟ್ 26ರಿಂದ ‘ರೈತ ಸಂತೆ’ ಆರಂಭ! 🌾 ಗ್ರಾಹಕರಿಗೆ ನೈಸರ್ಗಿಕ ಹಾಗೂ ವಿಷಮುಕ್ತ ಕೃಷಿ ಉತ್ಪನ್ನಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಬಳ್ಳಾರಿಯ ಗಾಂಧಿ ಭವನದಲ್ಲಿ ರೈತ ಸಂತೆ ಆರಂಭವಾಗಲಿದೆ. “ನನ್ನದೇ ಬೆಳೆ, ನನ್ನದೇ ಬೆಲೆ, ನನ್ನದೇ ಮಾರಾಟ” ಎಂಬ ಪರಿಕಲ್ಪನೆಯಡಿ ರೈತರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ. ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ನೈಸರ್ಗಿಕ ಕೃಷಿಕರು ಭಾಗವಹಿಸಲಿದ್ದಾರೆ. 📍 ಸ್ಥಳ: ಗಾಂಧಿ ಭವನ, ಬಳ್ಳಾರಿ 📅 ದಿನಾಂಕ: ಆಗಸ್ಟ್ 26, 2026 ⏰ ಸಮಯ: ಬೆಳಿಗ್ಗೆ 11 ಗಂಟೆ 📆 ಮುಂದೆ: ಪ್ರತಿ ಬುಧವಾರ 🌱 ವಿಶೇಷತೆ: ನೈಸರ್ಗಿಕ ಮತ್ತು ವಿಷಮುಕ್ತ ಕೃಷಿ ಉತ್ಪನ್ನಗಳು ರೈತರ ಆರ್ಥಿಕ ಸ್ವಾವಲಂಬನೆ ಹಾಗೂ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ಈ ಪ್ರಯತ್ನದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ. #Ballari #Bellary #ರೈತಸಂತೆ #ರೈತಸಂಪದ #ನೈಸರ್ಗಿಕಕೃಷಿ #ವಿಷಮುಕ್ತಆಹಾರ #ರೈತರು #ಕೃಷಿ #FarmersMarket #OrganicFarming #NaturalFarming #KarnatakaNews #BallariNews #KannadaNews #Karnataka #Farmers #OrganicFood #LocalFarmers #asnnews24kannada
    1
    “ನನ್ನದೇ ಬೆಳೆ, ನನ್ನದೇ ಬೆಲೆ!” 🌾 ಬಳ್ಳಾರಿಯಲ್ಲಿ ನಾಳೆಯಿಂದ ರೈತ ಸಂತೆ ಆರಂಭ | ವಿಷಮುಕ್ತ ಆಹಾರಕ್ಕೆ ಒತ್ತು
ಬಳ್ಳಾರಿಯಲ್ಲಿ ಆಗಸ್ಟ್ 26ರಿಂದ ‘ರೈತ ಸಂತೆ’ ಆರಂಭ! 🌾
ಗ್ರಾಹಕರಿಗೆ ನೈಸರ್ಗಿಕ ಹಾಗೂ ವಿಷಮುಕ್ತ ಕೃಷಿ ಉತ್ಪನ್ನಗಳನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಬಳ್ಳಾರಿಯ ಗಾಂಧಿ ಭವನದಲ್ಲಿ ರೈತ ಸಂತೆ ಆರಂಭವಾಗಲಿದೆ.
“ನನ್ನದೇ ಬೆಳೆ, ನನ್ನದೇ ಬೆಲೆ, ನನ್ನದೇ ಮಾರಾಟ” ಎಂಬ ಪರಿಕಲ್ಪನೆಯಡಿ ರೈತರು ತಮ್ಮ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಿದ್ದಾರೆ.
ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ನೈಸರ್ಗಿಕ ಕೃಷಿಕರು ಭಾಗವಹಿಸಲಿದ್ದಾರೆ.
📍 ಸ್ಥಳ: ಗಾಂಧಿ ಭವನ, ಬಳ್ಳಾರಿ
📅 ದಿನಾಂಕ: ಆಗಸ್ಟ್ 26, 2026
⏰ ಸಮಯ: ಬೆಳಿಗ್ಗೆ 11 ಗಂಟೆ
📆 ಮುಂದೆ: ಪ್ರತಿ ಬುಧವಾರ
🌱 ವಿಶೇಷತೆ: ನೈಸರ್ಗಿಕ ಮತ್ತು ವಿಷಮುಕ್ತ ಕೃಷಿ ಉತ್ಪನ್ನಗಳು
ರೈತರ ಆರ್ಥಿಕ ಸ್ವಾವಲಂಬನೆ ಹಾಗೂ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ಈ ಪ್ರಯತ್ನದ ಕುರಿತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.
#Ballari #Bellary #ರೈತಸಂತೆ #ರೈತಸಂಪದ #ನೈಸರ್ಗಿಕಕೃಷಿ #ವಿಷಮುಕ್ತಆಹಾರ #ರೈತರು #ಕೃಷಿ #FarmersMarket #OrganicFarming #NaturalFarming #KarnatakaNews #BallariNews #KannadaNews #Karnataka #Farmers #OrganicFood #LocalFarmers #asnnews24kannada
    user_AsnNews24Kannada
    AsnNews24Kannada
    Local News Reporter Ballari, Karnataka•
    10 hrs ago
  • ‘ಭಾರತ್ ಜೋಡೋ ಸಂಘ’: ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕೆ.ಎಸ್. ಕಿರಣ್ ಕುಮಾರ್ ಕರೆ ‘ಭಾರತ್ ಜೋಡೋ ಸಂಘ’: ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕೆ.ಎಸ್. ಕಿರಣ್ ಕುಮಾರ್ ಕರೆ ------------- ಚಿಕ್ಕನಾಯಕನಹಳ್ಳಿ: ಕರ್ನಾಟಕ ಸರ್ಕಾರದ ಯೋಜನೆಯಾದ ‘ಭಾರತ್ ಜೋಡೋ ಸಂಘ’ ರಚನೆಯಲ್ಲಿ ಯೂತ್ ಕಾಂಗ್ರೆಸ್ ಸದಸ್ಯರು ಹಾಗೂ ಸ್ಥಳೀಯ ಯುವಕ-ಯುವತಿಯರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ ಕರೆ ನೀಡಿದ್ದಾರೆ. ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕಿರಣ್ ಕುಮಾರ್ ಅವರ ನಾಯಕತ್ವದಲ್ಲಿ ಆಯೋಜಿಸಲಾಗಿದ್ದ ‘ಭಾರತ್ ಜೋಡೋ ಸಂಘ’ ರಚನೆಯ ಕುರಿತಾದ ಅರಿವು ಹಾಗೂ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. 27 ಪಂಚಾಯಿತಿಗಳಲ್ಲೂ ಸಂಘ ರಚನೆ: ಪ್ರತಿ ಗ್ರಾಮದಲ್ಲೂ 16 ರಿಂದ 35 ವರ್ಷ ವಯೋಮಾನದ ಯುವ ಜನತೆಯನ್ನು ಪ್ರೇರೇಪಿಸಿ ಸಂಘಟಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಚಿಕ್ಕನಾಯಕನಹಳ್ಳಿ ವ್ಯಾಪ್ತಿಯ 27 ಗ್ರಾಮ ಪಂಚಾಯಿತಿಗಳು, 1 ಪುರಸಭೆ ಹಾಗೂ 1 ಪಟ್ಟಣ ಪಂಚಾಯತಿಯಲ್ಲಿ ಸಂಘ ರಚನೆಗೆ ಅವಕಾಶವಿದ್ದು, ಸ್ಥಳೀಯ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ವಹಿಸಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ರಾಜಣ್ಣ ಆಗಮಿಸಿ ಯುವ ಮುಖಂಡರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಲಾಯಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಸಿ.ಪುರ ನಿದರ್ಶನ್, ಹುಳಿಯಾರ್ ಯೋಗೀಶ್, ಕೃಷ್ಣೇಗೌಡ, ಅಗಸರಹಳ್ಳಿ ನರಸಿಂಹಮೂರ್ತಿ ಸೇರಿದಂತೆ ಹಲವು ಪ್ರಮುಖ ಯುವ ನಾಯಕರು ಉಪಸ್ಥಿತರಿದ್ದರು.
    1
    ‘ಭಾರತ್ ಜೋಡೋ ಸಂಘ’: ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕೆ.ಎಸ್. ಕಿರಣ್ ಕುಮಾರ್ ಕರೆ
‘ಭಾರತ್ ಜೋಡೋ ಸಂಘ’: ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆಗೆ ಕೆ.ಎಸ್. ಕಿರಣ್ ಕುಮಾರ್ ಕರೆ
-------------
ಚಿಕ್ಕನಾಯಕನಹಳ್ಳಿ: ಕರ್ನಾಟಕ ಸರ್ಕಾರದ ಯೋಜನೆಯಾದ ‘ಭಾರತ್ ಜೋಡೋ ಸಂಘ’ ರಚನೆಯಲ್ಲಿ ಯೂತ್ ಕಾಂಗ್ರೆಸ್ ಸದಸ್ಯರು ಹಾಗೂ ಸ್ಥಳೀಯ ಯುವಕ-ಯುವತಿಯರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ ಕರೆ ನೀಡಿದ್ದಾರೆ.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಕಿರಣ್ ಕುಮಾರ್ ಅವರ ನಾಯಕತ್ವದಲ್ಲಿ ಆಯೋಜಿಸಲಾಗಿದ್ದ ‘ಭಾರತ್ ಜೋಡೋ ಸಂಘ’ ರಚನೆಯ ಕುರಿತಾದ ಅರಿವು ಹಾಗೂ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
27 ಪಂಚಾಯಿತಿಗಳಲ್ಲೂ ಸಂಘ ರಚನೆ:
ಪ್ರತಿ ಗ್ರಾಮದಲ್ಲೂ 16 ರಿಂದ 35 ವರ್ಷ ವಯೋಮಾನದ ಯುವ ಜನತೆಯನ್ನು ಪ್ರೇರೇಪಿಸಿ ಸಂಘಟಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಚಿಕ್ಕನಾಯಕನಹಳ್ಳಿ ವ್ಯಾಪ್ತಿಯ 27 ಗ್ರಾಮ ಪಂಚಾಯಿತಿಗಳು, 1 ಪುರಸಭೆ ಹಾಗೂ 1 ಪಟ್ಟಣ ಪಂಚಾಯತಿಯಲ್ಲಿ ಸಂಘ ರಚನೆಗೆ ಅವಕಾಶವಿದ್ದು, ಸ್ಥಳೀಯ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಚಿಕ್ಕನಾಯಕನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಚಂದ್ರಶೇಖರ್ ವಹಿಸಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ರಾಜಣ್ಣ ಆಗಮಿಸಿ ಯುವ ಮುಖಂಡರಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಸಭೆಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಇಲಾಯಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಸಿ.ಪುರ ನಿದರ್ಶನ್, ಹುಳಿಯಾರ್ ಯೋಗೀಶ್, ಕೃಷ್ಣೇಗೌಡ, ಅಗಸರಹಳ್ಳಿ ನರಸಿಂಹಮೂರ್ತಿ ಸೇರಿದಂತೆ ಹಲವು ಪ್ರಮುಖ ಯುವ ನಾಯಕರು ಉಪಸ್ಥಿತರಿದ್ದರು.
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    12 hrs ago
  • ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ರೋಗಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕಳ್ಳನೊಬ್ಬ ಕಳ್ಳತನ ಮಾಡಿದ್ದು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ರೋಗಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕಳ್ಳನೊಬ್ಬ ಕಳ್ಳತನ ಮಾಡಿದ್ದು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಇನ್ನೂ ಕಳೆದ ಮೂರು ದಿನಗಳ ಹಿಂದೆ ಚಿಕಿತ್ಸೆಗೆಂದು ರೋಗಿಯೊಬ್ಬರು ಧಾಖಲಾಗಿದ್ದು ಈ ವೇಳೆ ರೋಗಿಯ ಸಂಬಂದಿಕರೊಬ್ಬರು ನೆನ್ನೆ ತಡರಾತ್ರಿ ನಿದ್ರೆಗೆ ಜಾರಿದ್ದು ಈ ವೇಳೆ ಕಳ್ಳನೊಬ್ಬ ಆಸ್ಪತ್ರೆ ವಾರ್ಡ್ ಗೆ ಬಂದಿದ್ದು ಮಲಗಿದ್ದ ರೋಗಿಯ ಸಂಬಂದಿ ಕದುರಪ್ಪ ಎಂಬುವವರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕದ್ದು ಪರಾರಿಯಾಗಿದ್ದು ಈ ಒಂದು ದೃಶ್ಯಗಳು ಆಸ್ಪತ್ರೆಯಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸರ್ಕಾರಿ ‌ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ಸಂಬಂದಿಕರು ಎಷ್ಟು ಸೇಫ್ ಎಂಬುದು ಸಾರ್ವಜನಿಕರಲ್ಲಿ ಪ್ರಷ್ನೆ ಮೂಡಿಸಿದೆ. ಇನ್ನೂ ಈ ಸಂಬಂದ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಾಗಿದ್ದು ಪೊಲೀಸರು ಕಳ್ಳನ ಪತ್ತೆಗಾಗಿ ಬಲೆ‌ ಬೀಸಿದ್ದಾರೆ.
    1
    ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ರೋಗಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕಳ್ಳನೊಬ್ಬ ಕಳ್ಳತನ ಮಾಡಿದ್ದು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ
ಹಿರಿಯೂರು ಸರ್ಕಾರಿ ಆಸ್ಪತ್ರೆಯಲ್ಲಿ ತಡರಾತ್ರಿ ರೋಗಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕಳ್ಳನೊಬ್ಬ ಕಳ್ಳತನ ಮಾಡಿದ್ದು ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಇನ್ನೂ ಕಳೆದ ಮೂರು ದಿನಗಳ ಹಿಂದೆ  ಚಿಕಿತ್ಸೆಗೆಂದು ರೋಗಿಯೊಬ್ಬರು ಧಾಖಲಾಗಿದ್ದು ಈ ವೇಳೆ ರೋಗಿಯ ಸಂಬಂದಿಕರೊಬ್ಬರು ನೆನ್ನೆ ತಡರಾತ್ರಿ ನಿದ್ರೆಗೆ ಜಾರಿದ್ದು ಈ ವೇಳೆ ಕಳ್ಳನೊಬ್ಬ ಆಸ್ಪತ್ರೆ ವಾರ್ಡ್ ಗೆ ಬಂದಿದ್ದು ಮಲಗಿದ್ದ ರೋಗಿಯ ಸಂಬಂದಿ ಕದುರಪ್ಪ ಎಂಬುವವರ ಜೇಬಿನಲ್ಲಿದ್ದ ಮೊಬೈಲ್ ಫೋನ್ ಅನ್ನ ಕದ್ದು ಪರಾರಿಯಾಗಿದ್ದು ಈ ಒಂದು ದೃಶ್ಯಗಳು ಆಸ್ಪತ್ರೆಯಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸರ್ಕಾರಿ ‌ಆಸ್ಪತ್ರೆಗಳಲ್ಲಿ ರೋಗಿಗಳು ಹಾಗೂ ಸಂಬಂದಿಕರು ಎಷ್ಟು ಸೇಫ್ ಎಂಬುದು ಸಾರ್ವಜನಿಕರಲ್ಲಿ ಪ್ರಷ್ನೆ ಮೂಡಿಸಿದೆ. ಇನ್ನೂ ಈ ಸಂಬಂದ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಖರಣ ಧಾಖಲಾಗಿದ್ದು ಪೊಲೀಸರು ಕಳ್ಳನ ಪತ್ತೆಗಾಗಿ ಬಲೆ‌ ಬೀಸಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    11 hrs ago
  • ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯ ಸಂಬಂಧಿಕರ ಮೊಬೈಲ್ ‌ಕದ್ದ ಕಳ್ಳ. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಯ ಮೊಬೈಲ್ ಕದ್ದ ಕಳ್ಳ.. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಸುಮಾರು 12ಗಂಟೆ ಸಮಯದಲ್ಲಿ ಕಳ್ಳನೊಬ್ಬ ರೋಗಿಯ ಸಂಬಂಧಿ ಕದುರಪ್ಪ ಎನ್ನುವವರ ಜೇಬುನಲ್ಲಿದ್ದ ಮೊಬೈಲ್ ಕಳ್ಳತನ ಮ ಮಾಡಿದ್ದಾನೆ ಮೊಬೈಲ್ ಕಳ್ಳತನ ದೃಶ್ಯ ಆಸ್ಪತ್ರೆಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೊಬೈಲ್ ಕಳೆದುಕೊಂಡವರು ಪೋಲಿಸ್ ಇಲಾಖೆಯ ಗಮನಕ್ಕೆ ತಂದಿದ್ದು ಸಿ ಸಿ ಕ್ಯಾಮೆರಾವನ್ನು ಪರಿಶೀಲಿಸಿದ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
    1
    ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯ ಸಂಬಂಧಿಕರ ಮೊಬೈಲ್ ‌ಕದ್ದ ಕಳ್ಳ.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಯ ಮೊಬೈಲ್ ಕದ್ದ ಕಳ್ಳ..
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ  ರಾತ್ರಿ ಸುಮಾರು 12ಗಂಟೆ ಸಮಯದಲ್ಲಿ ಕಳ್ಳನೊಬ್ಬ ರೋಗಿಯ ಸಂಬಂಧಿ ಕದುರಪ್ಪ ಎನ್ನುವವರ ಜೇಬುನಲ್ಲಿದ್ದ  ಮೊಬೈಲ್ ಕಳ್ಳತನ ಮ ಮಾಡಿದ್ದಾನೆ 
ಮೊಬೈಲ್ ಕಳ್ಳತನ  ದೃಶ್ಯ ಆಸ್ಪತ್ರೆಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೊಬೈಲ್ ಕಳೆದುಕೊಂಡವರು ಪೋಲಿಸ್ ಇಲಾಖೆಯ ಗಮನಕ್ಕೆ ತಂದಿದ್ದು
ಸಿ ಸಿ ಕ್ಯಾಮೆರಾವನ್ನು ಪರಿಶೀಲಿಸಿದ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
    user_Suresh Belagere
    Suresh Belagere
    Photographer ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    19 hrs ago
  • ಮುಂದಿನ 6 ತಿಂಗಳಲ್ಲಿ 1 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬೃಹತ್ ಘೋಷಣೆ ಲಖನೌ: ಉತ್ತರ ಪ್ರದೇಶದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಭ ಸುದ್ದಿ ನೀಡಿದ್ದಾರೆ. ಮುಂಬರುವ ಆರು ತಿಂಗಳ ಅವಧಿಯಲ್ಲಿ ರಾಜ್ಯದ ಸುಮಾರು 1 ಲಕ್ಷ ಯುವಕರಿಗೆ ಸರ್ಕಾರಿ ನೇಮಕಾತಿ ಪತ್ರಗಳನ್ನು ವಿತರಿಸಲಾಗುವುದು ಎಂದು ಅವರು ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಕಟಿಸಿದ್ದಾರೆ. ಈ ಪ್ರಕ್ರಿಯೆಯನ್ನು ಪ್ರತಿ ವಾರ ಹಂತ-ಹಂತವಾಗಿ (ಬ್ಯಾಚ್‌ಗಳಲ್ಲಿ) ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ತಮ್ಮ ಆಡಳಿತಾವಧಿಯ ಪಾರದರ್ಶಕತೆ ಹಾಗೂ ಸಾಧನೆಗಳನ್ನು ಎತ್ತಿಹಿಡಿಯುವುದರ ಜೊತೆಗೆ 2017 ಕ್ಕೂ ಮುಂಚಿನ ನೇಮಕಾತಿ ವ್ಯವಸ್ಥೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. **ಸುದ್ದಿಯ ಪ್ರಮುಖ ಅಂಶಗಳು:** * **1 ಲಕ್ಷ ಹೊಸ ಉದ್ಯೋಗ ಪತ್ರ:** ಮುಂದಿನ 6 ತಿಂಗಳಲ್ಲಿ 1,00,000 ಅರ್ಹ ಯುವಕರಿಗೆ ನಿಯಮಿತವಾಗಿ ಬ್ಯಾಚ್‌ಗಳ ಮೂಲಕ ನೇಮಕಾತಿ ಆದೇಶಗಳನ್ನು ನೀಡಲು ಸರ್ಕಾರ ಯೋಜಿಸಿದೆ. * **9.30 ಲಕ್ಷ ಉದ್ಯೋಗಗಳ ಸಾಧನೆ:** ಕಳೆದ ಒಂಬತ್ತೂವರೆ ವರ್ಷಗಳ ‘ಡಬಲ್-ಎಂಜಿನ್’ ಬಿಜೆಪಿ ಸರ್ಕಾರವು 9.30 ಲಕ್ಷಕ್ಕೂ ಹೆಚ್ಚು ಯುವಕರಿಗೆ ಪಾರದರ್ಶಕವಾಗಿ ಸರ್ಕಾರಿ ಉದ್ಯೋಗ ಒದಗಿಸಿದೆ. ಈ ಪೈಕಿ ಒಂದೇ ಒಂದು ನೇಮಕಾತಿಯೂ ನ್ಯಾಯಾಲಯದಲ್ಲಿ ಪ್ರಶ್ನೆಗೊಳಗಾಗಿಲ್ಲ ಎಂದು ಸಿಎಂ ಪ್ರತಿಪಾದಿಸಿದರು. * **ಹಿಂದಿನ ವ್ಯವಸ್ಥೆಗೆ ವೀಟೋ:** 2017 ಕ್ಕೂ ಮೊದಲು ರಾಜ್ಯದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ಹಾಗೂ 'ಕುಲ ಆಡಳಿತ' ತಾಂಡವವಾಡುತ್ತಿತ್ತು. ಇದರಿಂದಾಗಿ ಅರ್ಹ ಯುವಕರು ಕೆಲಸವಿಲ್ಲದೆ ಅಲೆಯಬೇಕಾಯಿತು ಮತ್ತು ಅಂತಿಮವಾಗಿ ನ್ಯಾಯಾಲಯಗಳು ತಡೆಯಾಜ್ಞೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಯೋಗಿ ಆದಿತ್ಯನಾಥ್ ಟೀಕಿಸಿದರು. * **ಅಕ್ರಮವೆಸಗುವವರ ವಿರುದ್ಧ ಶೂನ್ಯ ಸಹಿಷ್ಣುತೆ:** ನೇಮಕಾತಿ ಮಂಡಳಿಗಳು ಹಾಗೂ ಸರ್ಕಾರಿ ಯಂತ್ರದಲ್ಲಿದ್ದ ಭ್ರಷ್ಟರನ್ನು ತಳೆದುಹಾಕಲಾಗಿದೆ. ಪರೀಕ್ಷಾ ಅಕ್ರಮಗಳಲ್ಲಿ ತೊಡಗುವ 'ವಂಚನೆ ಮಾಫಿಯಾ' ಮತ್ತು ಕಿಂಗ್‌ಪಿನ್‌ಗಳ ಬೆನ್ನುಮೂಳೆ ಮುರಿಯಲು ಸರ್ಕಾರ ‘ಶೂನ್ಯ ಸಹಿಷ್ಣುತೆ’ ನೀತಿಯಡಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು. ಯುವಕರ ಪ್ರತಿಭೆ ಮತ್ತು ಶಕ್ತಿಯನ್ನು ತಾರತಮ್ಯವಿಲ್ಲದೆ ಬಳಸಿಕೊಂಡಾಗ ಇಡೀ ರಾಜ್ಯವು ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿಗಳು, ಅರ್ಹತೆಗೆ ಆದ್ಯತೆ ನೀಡುವುದೇ ತಮ್ಮ ಸರ್ಕಾರದ ಮುಖ್ಯ ಉದ್ದೇಶ ಎಂದಿದ್ದಾರೆ.
    1
    ಮುಂದಿನ 6 ತಿಂಗಳಲ್ಲಿ 1 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬೃಹತ್ ಘೋಷಣೆ
ಲಖನೌ: ಉತ್ತರ ಪ್ರದೇಶದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಭ ಸುದ್ದಿ ನೀಡಿದ್ದಾರೆ. ಮುಂಬರುವ ಆರು ತಿಂಗಳ ಅವಧಿಯಲ್ಲಿ ರಾಜ್ಯದ ಸುಮಾರು 1 ಲಕ್ಷ ಯುವಕರಿಗೆ ಸರ್ಕಾರಿ ನೇಮಕಾತಿ ಪತ್ರಗಳನ್ನು ವಿತರಿಸಲಾಗುವುದು ಎಂದು ಅವರು ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಕಟಿಸಿದ್ದಾರೆ. ಈ ಪ್ರಕ್ರಿಯೆಯನ್ನು ಪ್ರತಿ ವಾರ ಹಂತ-ಹಂತವಾಗಿ (ಬ್ಯಾಚ್‌ಗಳಲ್ಲಿ) ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ತಮ್ಮ ಆಡಳಿತಾವಧಿಯ ಪಾರದರ್ಶಕತೆ ಹಾಗೂ ಸಾಧನೆಗಳನ್ನು ಎತ್ತಿಹಿಡಿಯುವುದರ ಜೊತೆಗೆ 2017 ಕ್ಕೂ ಮುಂಚಿನ ನೇಮಕಾತಿ ವ್ಯವಸ್ಥೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
**ಸುದ್ದಿಯ ಪ್ರಮುಖ ಅಂಶಗಳು:**
* **1 ಲಕ್ಷ ಹೊಸ ಉದ್ಯೋಗ ಪತ್ರ:** ಮುಂದಿನ 6 ತಿಂಗಳಲ್ಲಿ 1,00,000 ಅರ್ಹ ಯುವಕರಿಗೆ ನಿಯಮಿತವಾಗಿ ಬ್ಯಾಚ್‌ಗಳ ಮೂಲಕ ನೇಮಕಾತಿ ಆದೇಶಗಳನ್ನು ನೀಡಲು ಸರ್ಕಾರ ಯೋಜಿಸಿದೆ.
* **9.30 ಲಕ್ಷ ಉದ್ಯೋಗಗಳ ಸಾಧನೆ:** ಕಳೆದ ಒಂಬತ್ತೂವರೆ ವರ್ಷಗಳ ‘ಡಬಲ್-ಎಂಜಿನ್’ ಬಿಜೆಪಿ ಸರ್ಕಾರವು 9.30 ಲಕ್ಷಕ್ಕೂ ಹೆಚ್ಚು ಯುವಕರಿಗೆ ಪಾರದರ್ಶಕವಾಗಿ ಸರ್ಕಾರಿ ಉದ್ಯೋಗ ಒದಗಿಸಿದೆ. ಈ ಪೈಕಿ ಒಂದೇ ಒಂದು ನೇಮಕಾತಿಯೂ ನ್ಯಾಯಾಲಯದಲ್ಲಿ ಪ್ರಶ್ನೆಗೊಳಗಾಗಿಲ್ಲ ಎಂದು ಸಿಎಂ ಪ್ರತಿಪಾದಿಸಿದರು.
* **ಹಿಂದಿನ ವ್ಯವಸ್ಥೆಗೆ ವೀಟೋ:** 2017 ಕ್ಕೂ ಮೊದಲು ರಾಜ್ಯದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ಹಾಗೂ 'ಕುಲ ಆಡಳಿತ' ತಾಂಡವವಾಡುತ್ತಿತ್ತು. ಇದರಿಂದಾಗಿ ಅರ್ಹ ಯುವಕರು ಕೆಲಸವಿಲ್ಲದೆ ಅಲೆಯಬೇಕಾಯಿತು ಮತ್ತು ಅಂತಿಮವಾಗಿ ನ್ಯಾಯಾಲಯಗಳು ತಡೆಯಾಜ್ಞೆ ನೀಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಯೋಗಿ ಆದಿತ್ಯನಾಥ್ ಟೀಕಿಸಿದರು.
* **ಅಕ್ರಮವೆಸಗುವವರ ವಿರುದ್ಧ ಶೂನ್ಯ ಸಹಿಷ್ಣುತೆ:** ನೇಮಕಾತಿ ಮಂಡಳಿಗಳು ಹಾಗೂ ಸರ್ಕಾರಿ ಯಂತ್ರದಲ್ಲಿದ್ದ ಭ್ರಷ್ಟರನ್ನು ತಳೆದುಹಾಕಲಾಗಿದೆ. ಪರೀಕ್ಷಾ ಅಕ್ರಮಗಳಲ್ಲಿ ತೊಡಗುವ 'ವಂಚನೆ ಮಾಫಿಯಾ' ಮತ್ತು ಕಿಂಗ್‌ಪಿನ್‌ಗಳ ಬೆನ್ನುಮೂಳೆ ಮುರಿಯಲು ಸರ್ಕಾರ ‘ಶೂನ್ಯ ಸಹಿಷ್ಣುತೆ’ ನೀತಿಯಡಿ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಸಿದರು.
ಯುವಕರ ಪ್ರತಿಭೆ ಮತ್ತು ಶಕ್ತಿಯನ್ನು ತಾರತಮ್ಯವಿಲ್ಲದೆ ಬಳಸಿಕೊಂಡಾಗ ಇಡೀ ರಾಜ್ಯವು ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿಗಳು, ಅರ್ಹತೆಗೆ ಆದ್ಯತೆ ನೀಡುವುದೇ ತಮ್ಮ ಸರ್ಕಾರದ ಮುಖ್ಯ ಉದ್ದೇಶ ಎಂದಿದ್ದಾರೆ.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    13 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.