Shuru
Apke Nagar Ki App…
ದನಗರ ಗೌಳಿಗರ ಗಜಾ ನೃತ್ಯ ಅಳ್ನಾವರ (ಧಾರವಾಡ )ಅಳ್ನಾವರ ತಾಲ್ಲೂಕಿನ ಹೊನ್ನಾಪೂರ ಗ್ರಾಮದಲ್ಲಿ ಬಾನುವಾರ ಸಂಜೆ ನಡೆದ ಹಿಂದೂ ಸಮಾವೇಶದ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿದ ಶಿವನಗರ ಗೌಳಿ ತಾಂಡಾದ ದನಗರಗೌಳಿಗರು ಸಾಂಪ್ರದಾಯಿಕ ಜಾನಪದ ಗಜಾ ನೃತ್ಯ ಪ್ರದರ್ಶಿಸಿದರು. ಇದು ನೋಡುಗರ ಮನ ತಣಿಸಿತು. ಯುಕವರು, ಹಿರಿಯರನ್ನು ಒಳಗೊಂಡ ತಂಡ ಪಾರಂಪರಿಕ ವಾದ್ಯಗಳೊಂದಿಗೆ ಬಿಳಿ ಶುಭ್ರ ಪೋಷಾಕುಗಳನ್ನು ದರಿಸಿ ಹಾಡಿನ ನಿನಾದಕ್ಕೆ ಹೆಜ್ಜೆ ಹಾಕಿದರು. ಕೈಯಲ್ಲಿ ಯುದ ಹಿಡಿದು ಕುಣಿದು ಕುಪ್ಪಳಿಸುವ ನೋಟ ಎಲ್ಲರ ಗಮನ ಸೆಳೆಯಿತು. ದೇವ ದೇವತೆಯರ ಪ್ರಕೃತಿ ಕುರಿತಾಗಿ ಹಾಡನ್ನು ಹಾಡುವ ಮೂಲಕ ಭಕ್ತಿ ಲೋಕ ಸೃಷ್ಟಿಸಿದ್ದರು. ವಾದ್ಯ ವೃಂದದ ನಿನಾಧ ಗ್ರಾಮದ ಬೀದಿಯಲ್ಲಿ ಝೆಂಕರಿಸಿತು. ಹಿರಿಯರಾದ ಪ್ರದೀಪ ಗಾವಡೆ, ಡೊಳು ಡೋಯಿಪೋಡೆ, ವಿಠ್ಠಲ ಕೋಳಪ್ಪೆ ಮತ್ತಿತರು ಇದ್ದರು.
Vineetmiskin Alnavar
ದನಗರ ಗೌಳಿಗರ ಗಜಾ ನೃತ್ಯ ಅಳ್ನಾವರ (ಧಾರವಾಡ )ಅಳ್ನಾವರ ತಾಲ್ಲೂಕಿನ ಹೊನ್ನಾಪೂರ ಗ್ರಾಮದಲ್ಲಿ ಬಾನುವಾರ ಸಂಜೆ ನಡೆದ ಹಿಂದೂ ಸಮಾವೇಶದ ಭವ್ಯ ಮೆರವಣಿಗೆಯಲ್ಲಿ ಭಾಗವಹಿಸಿದ ಶಿವನಗರ ಗೌಳಿ ತಾಂಡಾದ ದನಗರಗೌಳಿಗರು ಸಾಂಪ್ರದಾಯಿಕ ಜಾನಪದ ಗಜಾ ನೃತ್ಯ ಪ್ರದರ್ಶಿಸಿದರು. ಇದು ನೋಡುಗರ ಮನ ತಣಿಸಿತು. ಯುಕವರು, ಹಿರಿಯರನ್ನು ಒಳಗೊಂಡ ತಂಡ ಪಾರಂಪರಿಕ ವಾದ್ಯಗಳೊಂದಿಗೆ ಬಿಳಿ ಶುಭ್ರ ಪೋಷಾಕುಗಳನ್ನು ದರಿಸಿ ಹಾಡಿನ ನಿನಾದಕ್ಕೆ ಹೆಜ್ಜೆ ಹಾಕಿದರು. ಕೈಯಲ್ಲಿ ಯುದ ಹಿಡಿದು ಕುಣಿದು ಕುಪ್ಪಳಿಸುವ ನೋಟ ಎಲ್ಲರ ಗಮನ ಸೆಳೆಯಿತು. ದೇವ ದೇವತೆಯರ ಪ್ರಕೃತಿ ಕುರಿತಾಗಿ ಹಾಡನ್ನು ಹಾಡುವ ಮೂಲಕ ಭಕ್ತಿ ಲೋಕ ಸೃಷ್ಟಿಸಿದ್ದರು. ವಾದ್ಯ ವೃಂದದ ನಿನಾಧ ಗ್ರಾಮದ ಬೀದಿಯಲ್ಲಿ ಝೆಂಕರಿಸಿತು. ಹಿರಿಯರಾದ ಪ್ರದೀಪ ಗಾವಡೆ, ಡೊಳು ಡೋಯಿಪೋಡೆ, ವಿಠ್ಠಲ ಕೋಳಪ್ಪೆ ಮತ್ತಿತರು ಇದ್ದರು.
More news from ಕರ್ನಾಟಕ and nearby areas
- ಬಾಗಲಕೋಟೆ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಕೆ ಫೌಂಡೇಶನ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸ್ತ್ರೀ ಸಂಭ್ರಮ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ವಿಜಯಾನಂದ ಕಾಶಪ್ಪನವರ್ ಅವರು “ನಾ ಡ್ರೈವರ” ಹಾಡಿಗೆ ಸಕ್ಕತ್ ಹೆಜ್ಜೆ ಹಾಕಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರ ಜೊತೆ ಉತ್ಸಾಹದಿಂದ ನೃತ್ಯ ಮಾಡಿದ ಅವರು, ವೇದಿಕೆಯಲ್ಲಿ ಹರ್ಷಭರಿತ ವಾತಾವರಣ ನಿರ್ಮಿಸಿದರು. ಅವರ ನೃತ್ಯವನ್ನು ಕಂಡು ಮಹಿಳೆಯರು ಕೈತಟ್ಟಿ ಪ್ರೋತ್ಸಾಹ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಹಲವಾರು ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದರು.1
- Post by @april14news1
- ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ಶಿವಯೋಗಮಂದಿರದ ಗೋವು ಶಾಲೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬಾಗಲವಾಡ ಗ್ರಾಮದ ಶ್ರೀಅಮರೇಗೌಡ್ರ ಬಿಳಿ ಜೋಳದ ಮೇವು ಪೆಂಡಿಗಳನ್ನು ಶಿವಯೋಗಮಂದಿರಕ್ಕೆ ನೀಡಿದ್ದಾರೆ. ಅಮರೇಗೌಡ್ರ ಅವರನ್ನು ಶಿವಯೋಗಮಂದಿರದ ಮ್ಯಾನೇಜರ್ ಅವರು ಸತ್ಕರಿಸಿ ಗೌರವಿಸಿದರು.1
- ದಾವಣಗೆರೆ : ದಾವಣಗೆರೆ ದಕ್ಷಿಣ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಬಿಟ್ಟ ವಿಚಾರ. ಯುಗಾದಿ ಹಬ್ಬದ ನಂತರ ನೋಡೋಣ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು. ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್ . ಮಲ್ಲಿಕಾರ್ಜುನ್ ಅವರು ರೂ.1061 ಲಕ್ಷಗಳ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.1
- ವಿಜಯಪುರ: ಮಾರ್ಚ್ 14ರಂದು ರಂಭಾಪುರಿ ಮಠದ ಭೂವಿ ಪೂಜೆ ವಿಜಯಪುರ ನಗರದ ಸುರಭಿ ಲೇಔಟ್ ನಲ್ಲಿ ಮಾರ್ಚ್ 14ರಂದು ರಂಭಾಪುರಿ ಪೀಠದ ನೂತನ ಮಠದ ಸ್ಥಾಪನೆಗೆ ಭೂಮಿ ಪೂಜೆ ನಡೆಯಲಿದೆ ಎಂದು ಮಮದಾಪುರ ಶ್ರೀಗಳು ತಿಳಿಸಿದ್ದಾರೆ. ಐದು ಪಂಚಪೀಠ ಮಠಾಧೀಶರನ್ನು ನೀಡಿದ ಜಿಲ್ಲೆಗೆ ರಂಭಾಪುರಿ ಮಠ ಇರಲಿಲ್ಲ. ನಿವೇಶನ ನಿಗದಿಯಾಗಿದ್ದು, ನಾಡಿನ ಮಠಾಧೀಶರು ಹಾಗೂ ಸಚಿವ ಎಂ.ಬಿ. ಪಾಟೀಲ್ ಅವರ ನೇತೃತ್ವದಲ್ಲಿ ಮಠದ ನಿರ್ಮಾಣದ ಭೂಮಿ ಪೂಜೆ ಜರುಗಲಿದೆ ಎಂದು ಅವರು ಭಾನುವಾರದಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿಕೆ ನೀಡಿದರು.1
- Post by ನಾಗರಾಜ3
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಮಾ.11 ರಿಂದ ಮುಷ್ಕರ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಹೇಳಿದರು. ಧಾರವಾಡ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.11ರಿಂದ ಮಾ.15ರವರೆಗೆ ಎಲ್ಲ ಸರಕಾರಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು. ತುರ್ತು ಸೇವೆಗಳನ್ನು ಮಾತ್ರ ನೀಡಲಾಗುವುದು. 2ನೇ ಹಂತದಲ್ಲಿ ಮಾ.16ರಿಂದ ಅನಿರ್ದಿಷ್ಟ ಅವಧಿಯವರೆಗೆ ಎಲ್ಲ ವೈದ್ಯರು, ಅಧಿಕಾರಿಗಳು ಹಾಗೂ ನೌಕರರು ಗೈರುಹಾಜರಾಗುವ ಮೂಲಕೂ ಮುಷ್ಕರ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವಿದಾಸ ಶಾಂತಿಕರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಕೇಂದ್ರ ಸಂಘದ ರಾಜ್ಯ ಅಧ್ಯಕ್ಷೆ ಚಂದ್ರಿಕಾ ದಂಬಳ್ಳಿ, ಅರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಜಿ.ವಿ. ಓಂಕಾರಗೌಡ್ರ ಸೇರಿದಂತೆ ಇತರರಿದ್ದರು.1
- ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪಬ್ಲಿಕ್ ಶಾಲೆಗಳಾಗಿ ಪರಿವರ್ತಿಸುವ ಕುರಿತು ಸದನದ ಪ್ರಶ್ನಾವಳಿ ಸಂದರ್ಭದಲ್ಲಿ ಬಾಗಲಕೋಟ ವಿಪ ಸದಸ್ಯ ಹನಮಂತ ನಿರಾಣಿ ಅವರು ಸೋಮವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರನ್ನು ಪ್ರಶ್ನಿಸಿದರು. ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಸೂಕ್ತ ಅನುದಾನ ಒದಗಿಸಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರಕುವಂತೆ ಕ್ರಮ ಕೈಗೊಳ್ಳಬೇಕು. ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ ಒಂದರಂತೆ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲು ಯೋಜನೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಸಂಬಂಧ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳುವುದು ಸೂಕ್ತ ಎಂದು ಸಚಿವರ ಗಮನಕ್ಕೆ ತಂದರು.1
- Post by @april14news1