ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ತ್ರಿಷಾ , ಅಂತರಾಷ್ಟ್ರೀಯ ಡೊಳ್ಳು ಕುಣಿತಕ್ಕೆ ಆಯ್ಕೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ತ್ರಿಷಾ , ಅಂತರಾಷ್ಟ್ರೀಯ ಡೊಳ್ಳು ಕುಣಿತಕ್ಕೆ ಆಯ್ಕೆ ಚಿತ್ರದುರ್ಗ: ಜಿಲ್ಲೆಯ ಹಿರಿಯೂರಿನ ತ್ರಿಷಾ ಅವರು ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರ ಮಟ್ಟದ ಜಾನಪದ ಕಲಾಮೇಳದ ಡೊಳ್ಳುಕುಣಿತ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ತಂಡ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದೆ. ಈ ತಂಡದಲ್ಲಿ ಹಿರಿಯೂರಿನ ತ್ರಿಶಾ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾಲೇಜು ತಂಡ ಡೊಳ್ಳು ಕುಣಿತದ ನೃತ್ಯ ಸ್ಪರ್ಧೆಯಲ್ಲಿ ಅಂತರ ವಿಶ್ವವಿದ್ಯಾಲಯ, ರಾಜ್ಯ ಮಟ್ಟ, ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿ ಅಂತರಾಷ್ಟ್ರೀಯ ಸ್ಪರ್ಧೆಗೆ ಗೆ ಆಯ್ಕೆಯಾಗಿದೆ. ಈ ತಂಡದಲ್ಲಿರುವ ತ್ರಿಶಾ ಗುಜ್ಜಾರ್ ಅವರನ್ನು ಐಸಿರಿ ಕಲಾ ವೃಂದದ ಅಧ್ಯಕ್ಷ ಶಿವಶಂಕರ ಮಠದ್, ಡಿ.ಎಂ.ಸಿದ್ದಗಂಗಾ, ಸಿರೀಶ್ ಆರ್.ಎಸ್.ಮಠದ್, ಭರತನಾಟ್ಯ ಕಲಾವಿದೆ ಶ್ರೀಗೌರಿ ಆರ್.ಎಸ್. ಮಠದ್, ಕಲಾಸಂಪದ ನಾಟ್ಯ ಶಾಲೆಯ ಗೀತಾ ಭಟ್, ನಾಗಶ್ರೀ ಭಟ್, ಪರಮೇಶ್ವರ ಭಟ್ ಅಭಿನಂದಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ತ್ರಿಷಾ , ಅಂತರಾಷ್ಟ್ರೀಯ ಡೊಳ್ಳು ಕುಣಿತಕ್ಕೆ ಆಯ್ಕೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ತ್ರಿಷಾ , ಅಂತರಾಷ್ಟ್ರೀಯ ಡೊಳ್ಳು ಕುಣಿತಕ್ಕೆ ಆಯ್ಕೆ ಚಿತ್ರದುರ್ಗ: ಜಿಲ್ಲೆಯ ಹಿರಿಯೂರಿನ ತ್ರಿಷಾ ಅವರು ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರ ಮಟ್ಟದ ಜಾನಪದ ಕಲಾಮೇಳದ ಡೊಳ್ಳುಕುಣಿತ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ತಂಡ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದೆ. ಈ ತಂಡದಲ್ಲಿ ಹಿರಿಯೂರಿನ ತ್ರಿಶಾ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾಲೇಜು ತಂಡ ಡೊಳ್ಳು ಕುಣಿತದ ನೃತ್ಯ ಸ್ಪರ್ಧೆಯಲ್ಲಿ ಅಂತರ ವಿಶ್ವವಿದ್ಯಾಲಯ, ರಾಜ್ಯ ಮಟ್ಟ, ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿ ಅಂತರಾಷ್ಟ್ರೀಯ ಸ್ಪರ್ಧೆಗೆ ಗೆ ಆಯ್ಕೆಯಾಗಿದೆ. ಈ ತಂಡದಲ್ಲಿರುವ ತ್ರಿಶಾ ಗುಜ್ಜಾರ್ ಅವರನ್ನು ಐಸಿರಿ ಕಲಾ ವೃಂದದ ಅಧ್ಯಕ್ಷ ಶಿವಶಂಕರ ಮಠದ್, ಡಿ.ಎಂ.ಸಿದ್ದಗಂಗಾ, ಸಿರೀಶ್ ಆರ್.ಎಸ್.ಮಠದ್, ಭರತನಾಟ್ಯ ಕಲಾವಿದೆ ಶ್ರೀಗೌರಿ ಆರ್.ಎಸ್. ಮಠದ್, ಕಲಾಸಂಪದ ನಾಟ್ಯ ಶಾಲೆಯ ಗೀತಾ ಭಟ್, ನಾಗಶ್ರೀ ಭಟ್, ಪರಮೇಶ್ವರ ಭಟ್ ಅಭಿನಂದಿಸಿದ್ದಾರೆ.
- ಏಪ್ರಿಲ್1 ರಿಂದ 15 ನೇ ತಾರೀಖಿನವರೆಗೆ ಸ್ವಯಂ ಜನಗಣತೆ..1
- ಚಪ್ಪಲಿ ಪೊರಕೆ ತೋರಿಸುವುದು ಬಿಜೆಪಿ ಸಂಸ್ಕೃತಿ ಎಂದು ಚಿತ್ರದುರ್ಗದಲ್ಲಿ ಯೋಗೀಶ್ ಬಾಬು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ದ್ರಾಕ್ಷ ರಸ ಮಂಡಳಿ ಅಧ್ಯಕ್ಷರಾದ ಯೋಗೀಶ್ ಬಾಬು ಅವರು ಮಾತನಾಡಿದ್ದು ಯಾರಿಗೂ ಕೂಡ ಅಲ್ಲಿಗೆ ಬರ್ರಿ ಇಲ್ಲಿಗೆ ಬರ್ರಿ ಎಂದು ಸವಾಲ್ ಹಾಕುವುದು ಸರಿಯಲ್ಲ, ಎಲ್ಲರಿಗೂ ಕೂಡ ವಾಕ್ ಸ್ವಾತಂತ್ರ್ಯ ಇರುತ್ತದೆ. ದಾವಣಗೆರೆಗೆ ಬನ್ನಿ ಎಂದು ಹೇಳುವುದು ತಪ್ಪು ಎಂದು ಟಾಂಗ್ ಕೊಟ್ಟಿದ್ದಾರೆ1
- ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾನದಿಗೆ ಸೇತುವೆಗಳ ಮೇಲಿಂದ ಕಸ ಎಸೆಯುತ್ತಿದ್ದು ಅವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭದ್ರಾನದಿ ಸಂರಕ್ಷಣಾ ಪಡೆ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.ಪವಿತ್ರ ನದಿಗೆ ಕೆಲ ಅನಾಗರಿಕ ಸಾರ್ವಜನಿಕರು ಎರಡು ಸೇತುವೆಗಳ ಮೇಲಿಂದ ಕಸ,ಪ್ಲಾಸ್ಟಿಕ್ ಬ್ಯಾಗ್ ಎಸೆದು ಮಲೀನ ಮಾಡುತ್ತಿದ್ದು, ಇದರಿಂದ ನದಿ ಹಾಗೂ ಜಲಚರಗಳಿಗೆ ಕುತ್ತು ತರುತ್ತಿದೆ. 1974 ಜಾಲಮಾಲಿನ್ಯ ಕಾಯ್ದೆ ತಡೆಗಟ್ಟುವ ಸೆಕ್ಷನ್ 24 ರ ಅನ್ವಯ ಅಪರಾಧವಾಗಿದೆ. ಈ ಹಿನ್ನಲೆಯಲ್ಲಿ 41 ಮತ್ತು 45 ರ ಸೆಕ್ಷನ್ ಅನ್ವಯ ದಂಡನೆಯನ್ನು ವಿಧಿಸಬಹು ದಾಗಿದೆ. ಘನ ತ್ಯಾಜ್ಯ ನಿರ್ವಹಣೆ 2016 ರ ಕಾಯ್ದೆ ಅನ್ವಯ ಯಾವುದೇ ನದಿ ಪಾತ್ರ ಗಳಲ್ಲಿ ಕಸ ಎಸೆಯುವುದು, ಘನತ್ಯಾಜ್ಯ ನಿರ್ಬಂಧವಿದ್ದರೂ ಆದೇಶ ಗಾಳಿಗೆ ತೂರಿದಂತಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಲವು ನಗರಸಭೆಗಳ ಮೇಲೆ ಪರಿಸರ ಪರಿಹಾರ ವಿಧಿಸಿದ್ದು ಓಡಿಶಾ ರಾಜ್ಯದ ಕೇಂದ್ರಪುರ ಮುನಿಸಿಪಾಲಿಟಿ, ಚಂಬಲ್ ನದಿ ಪ್ರಕರಣ, ಗೊರಕ್ ಪುರ ಕೊಳಚೆ ನೀರು ಪ್ರಕರಣಗಳನ್ನು ಗಮನಿಸಿ ಕೂಡಲೇ ಭದ್ರಾ ನದಿಯ ಮಾಲಿನ್ಯ ತಡೆಗೆ ಮುಂದಾಗುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಭದ್ರಾ ನದಿ ಸಂರಕ್ಷಣಾ ಪಡೆಯ ಸಿ.ತೀರ್ಥೇಶ್,ಡಿಎಸ್ಎಸ್ ಮುಖಂಡ ದಾಸರಕಲ್ಲಳ್ಳಿ ನಾಗರಾಜ್, ಹರೀಶ್, ಹಿರಿಯ ಹೋರಾಟಗಾರ ಜಯಣ್ಣ, ಗಣೇಶ್, ರೈತ ಮುಖಂಡ ಇಮ್ರಾನ್ ಪಾಷಾ, ಭದ್ರಾನದಿ ಸಂರಕ್ಷಣಪಡೆಯ ಮುಖ್ಯಸ್ಥ ರಾದ ಕಾರ್ತಿಕ್ ಕಿದ್ಮಯ್ ಉಪಸ್ಥಿತರಿದ್ದರು.1
- ಕಡೂರು : ಸುಮಾರು ಎರಡು ಎಕರೆ ಪ್ರದೇಶದ ತೋಟದಲ್ಲಿ ಫಸಲು ಬಂದಿದ್ದ ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಅಂಚೇಚೋಮನಹಳ್ಳಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ನಡೆದಿದೆ. ಡಿ.ಕಾರೇಹಳ್ಳಿ ಗ್ರಾಮದ ರೈತ ಚಂದ್ರಪ್ಪ ಎಂಬುವವರಿಗೆ ಸೇರಿದ ಜಮೀನನಲ್ಲಿ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಬಾಳೆಗೊನೆ ಬಿಟ್ಟಿದ್ದ ಸುಮಾರು 1500 ಬಾಳೆಗಿಡಗಳನ್ನು ಕಡಿದು ಹಾಕಿದ್ದಾರೆ. ಬಾಳೆಗಿಡಗಳ ಬೆಳೆಗಾಗಿ ಸಂಘ, ಬ್ಯಾಂಕ್ ಹಾಗೂ ಕೈಗಡ ಸೇರಿ ಸುಮಾರು 5ಲಕ್ಷ ಸಾಲ ಮಾಡಲಾಗಿದೆ. ಬಾಳೆಗಿಡದ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುತ್ತಾ ಬರಲಾಗಿದೆ. ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಡಿದು ಹಾಕಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚುವಂತೆ ರೈತ ಚಂದ್ರಪ್ಪ ದೂರು ನೀಡಿದ್ದಾರೆ. ಮಂಗಳವಾರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೃತ್ಯ ವೆಸಗಿದ ಕಿಡಿಗೇಡಿಗಳ ಪತ್ತೆಗಾಗಿ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.3
- ಕುಣಿಗಲ್ ತಾಲ್ಲೂಕಿನ ಉಜ್ಜನಿ ಗ್ರಾಮದಲ್ಲಿ ಚೌಡೇಶ್ವರಿ ದೇವಿ ಜಾತ್ರೆ ಪ್ರಯುಕ್ತ ಇಂದು ಅಗ್ನಿಕೊಂಡ ಉತ್ಸವಕ್ಕೆ ಚಾಲನೆ ನೀಡಲಾಯಿತು. ಏಷ್ಯಾದಲ್ಲಿ ಅತಿ ಎತ್ತರದ ಅಗ್ನಿಕೊಂಡ ಉತ್ಸವ ಎಂದು ಪ್ರಸಿದ್ಧಿ ಪಡೆದಿದೆ. ಈ ಅಗ್ನಿಕೊಂಡಕ್ಕೆ ಹುಲಿಯೂರುದುರ್ಗ, ಚೌಡನಕುಪ್ಪೆ, ಉಜ್ಜನಿಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೊಂಡಕ್ಕೆ ಸೌದೆ ಸಮರ್ಪಿಸಿ ತಾಯಿ ಚೌಡೇಶ್ವರಿ ದೇವಿ ಯ ಕೃಪೆ ಗೆ ಪಾತ್ರರಾದರು....1
- ಅರಕಲಗೂಡು : ಪುಣ್ಯ ಕ್ಷೇತ್ರ ಧರ್ಮಸ್ಥಳ ಹಾಗು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ದರ್ಶನಕ್ಕೆ ಅನುಕೂಲವಾಗುವಂತೆ ಧರ್ಮಸ್ಥಳ ದಿಂದ ಮೈಸೂರಿಗೆ ನೇರ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿರುವುದನ್ನು ಸ್ವಾಗತಿಸಿ ಸಂತೆಮರೂರು ಗ್ರಾಮಸ್ಥರು ನೂತನ ಬಸ್‌ಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು. ಇಂದು ಬೆಳಿಗ್ಗೆ 5-20ಕ್ಕೆ ಆಗಮಿಸಿದ ಸಾರಿಗೆ ಬಸ್‌ನ್ನು ಗ್ರಾಮಸ್ಥರು ತಡೆದು ಹೂವಿನ ಅಲಂಕಾರಗೊಳಿಸಿ ಪೂಜೆ ಸಲ್ಲಿಸಿದರು.ಅಲ್ಲದೆ ಕೆಲವರು ಬಸ್ ಏರಿ ಸುಬ್ರಹ್ಮಣ್ಯ,ಧರ್ಮಸ್ಥಳಕ್ಕೆ ಪ್ರಯಾಣ ಕೂಡ ಆರಂಭಿಸಿದರು. ಈ ನೂತ ಬಸ್ ನಿತ್ಯವೂ ಬಿಸಿಲೆ ಘಾಟ್ ಮೂಲಕ ಅರಕಲಗೂಡು ಸಂತೆಮರೂರು,ಜೋಡಿಗುಬ್ಬಿ,ಹಳ್ಳಿಮೈಸೂರು,ಭೇರ್ಯ,ಕೆ.ಆರ್.ಮಾರ್ಗವಾಗಿ ಮೈಸೂರಿಗೆ ತೆರಳಲಿ ತಂಗಲಿದೆ.ಪುನಃ ಬೆಳಗ್ಗೆ 6ಗಂಟೆಗೆ ಮೈಸೂರಿನಿಂದ ಹೊರಟು ಅದೇ ಮಾರ್ಗವಾಗಿ ಸಂಚರಿಸಿ ಕುಕ್ಕೆ ಸುಬ್ರಹ್ಮಣ್ಯ ಮೂಲಕ ಧರ್ಮಸ್ಥಳಕ್ಕೆ ತೆರಳಲಿದೆ. ನಿತ್ಯವೂ ತಾಲೂಕಿನಿಂದ ಕುಕ್ಕೆ ಸುಬ್ರಹ್ಮಣ್ಯ,ಧರ್ಮಸ್ಥಳಕ್ಕೆ ಪ್ರಯಾಣಿಕರು ಹೋಗಿಬರುತ್ತಿದ್ದು,ಈ ನೂತನ ಸಾರಿಗೆ ಬಸ್ ಅತೀ ಸಮೀಪ ಮಾರ್ಗದಲ್ಲಿ ಇರುವ ಕಾರಣ ಹೆಚ್ಚಿನ ಪ್ರಯಾಣಿಕರು ಈ ಬಸ್ ಸೌಲಭ್ಯವನ್ನು ಪಡೆಯಲು ಅವಕಾಶ ದೊರೆತಂತೆ ಆಗಿದೆ ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದರು. ಅರಕಲಗೂಡಿನಿಂದ ಸಂತೆಮರೂರು-ಜೋಡಿಗುಬ್ಬಿ,ಹಳ್ಳಿಮೈಸೂರು ಮಾರ್ಗವಾಗಿ ಮೈಸೂರಿಗೆ ತೆರಳಲು ಸಕಾಲಿಕವಾಗಿ ಸಾರಿಗೆ ಬಸ್ ಸೇವೆಯಿಂದ ತ್ಭಾಗದ ಹತ್ತಾರು ಹಳ್ಳಿಗಳ ಜನರು ವಂಚನೆಗೊಂಡಿದ್ದರು.ಈ ಮಾರ್ಗ ಅರಕಲಗೂಡಿನಿಂದ ಮೈಸೂರಿಗೆ ಸಂಚರಿಸುವ ಪ್ರಯಾಣಿಕರಿಗೆ ಅತೀ ಸಮೀಪವಾಗಿತ್ತು.ಅಲ್ಲದೆ ಬೆಳಕಿನ ವೇಳೆ ಬಿಸಿಲೆ ಘಾಟ್ ಸೌಂಧರ್ಯವನ್ನು ಸವಿಯಲು ಮತ್ತೊಂದು ಅವಕಾಶ ದೊರೆತಂತ್ತಾಗಿದೆ.ಈ ಅವಕಾಶ ಮತ್ತು ಪ್ರಯಾಣಿಕರ ಸಮಸ್ಯೆಗೆ ಪರಿಹಾರ ಒದಗಿಸಿರುವ ಸಾರಿಗೆ ಸಂಸ್ಥೆ ಅಧಿಕಾರಿಗಳನ್ನು ಇಡೀ ಪ್ರಯಾಣಿಕರ ಪರವಾಗಿ ಸಂತೆಮರೂರು ಗ್ರಾಮಸ್ಥರು ಅಭಿನಂದಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಾಂತರಾಜೇ ಅರಸು,ಮಲ್ಲರಾಜೇ ಅರಸು,ಕಾರ್ತಿಕ ಅರಸು,ಬಾಲರಾಜೇ ಅರಸು ಇತರರು ಇದ್ದರು. #dharmasthala #ksrtc1
- ಚಲಿಸುತ್ತಿದ್ದ ಬಸ್ಸಿನಿಂದ ಆಯತಪ್ಪಿ ಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ #JB_News_Kannada #ಬೆಳ್ತಂಗಡಿ1
- Post by Suresh Belagere1