ಒಳಮೀಸಲಾತಿ ರೋಸ್ಟರ್ ಹಂಚಿಕೆಗೆ ವಿರೋಧ: 24ರಂದು ಬೆಂಗಳೂರಿನಲ್ಲಿ ಸಮಾವೇಶ ಬಾಗೇಪಲ್ಲಿ:- ಒಳಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ, ಹಳೇ ಮೀಸಲಾತಿ ನಿಯಮದಂತೆ ತ್ವರಿತ ನೇಮಕಾತಿಗೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಮಾ.24ರಂದು ಬೆಳಗ್ಗೆ 10ಕ್ಕೆ ಬೃಹತ್ ಸಮಾವೇಶವನ್ನು ಕೈಗೊಂಡಿದ್ದು, ಇದರಲ್ಲಿ ಬಂಜಾರ, ಭೋವಿ, ಕೊರಮ, ಕೊರಚ, ಚರ್ಮಕಾರ, ಸೂಕ್ಷ್ಮ ಪರಿಶಿಷ್ಟ ಜಾತಿಗಳ ಸಮುದಾಯದವರು ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಸದಸ್ಯರಾದ ಎಂ.ವಿ.ಕೃಷ್ಣಪ್ಪ ಕರೆ ನೀಡಿದರು. ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಭಾನುವಾರ ಭೋವಿ ಸಮಾಜ ಹಾಗೂ ಸೂಕ್ಷ್ಮ ಪರಿಶಿಷ್ಟ ಜಾತಿಗಳ ನೇತೃತ್ವದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಿಗೆ ಅವೈಜ್ಞಾನಿಕ ಒಳಮೀಸಲಾತಿ ಹಾಗೂ ರೋಸ್ಟರ್ ಪದ್ಧತಿ ಜಾರಿ ಮಾಡಿದ್ದು, ಇದು ಎಸ್‌ಸಿ ಒಳಮೀಸಲಾತಿ ವರ್ಗೀಕರಣದಲ್ಲಿ ಸಿ-ಪ್ರವರ್ಗದಲ್ಲಿರುವ ಬಂಜಾರ, ಭೋವಿ, ಕೊರಚ, ಕೊರಮ, ಆದಿಯಾ, ಅಗೇರ ಸೇರಿದಂತೆ 63 ಜಾತಿಗಳಿಗೆ ಮಾರಕವಾಗಿದೆ. ರೋಸ್ಟರ್ ಪದ್ಧತಿ ಜೀವಂತ ಶವವಾಗಿದೆ. ಈ ಅನ್ಯಾಯ ಸರಿಪಡಿಸಲು ಆಗ್ರಹಿಸಿ ಈ ಸಮಾವೇಶ ಆಯೋಜಿಸಿದ್ದು, ಈ ಸಮುದಾಯಗಳ ಪ್ರತಿ ಮನೆಯಿಂದ ಒಬ್ಬ ಸದಸ್ಯ ಭಾಗವಹಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ. ಆದ್ದರಿಂದ ಸಾಗರೋಪಾದಿಯಾಗಿ ಸಮುದಾಯದ ಜನರು ಆಗಮಿಸಬೇಕು ಎಂದು ತಿಳಿಸಿದರು. ಎಸ್‌ಸಿ ರೋಸ್ಟರ್ ಪದ್ಧತಿ ಪ್ರಕಾರ ಈ 63 ಸಮುದಾಯದವರಿಗೆ ಮೀಸಲು ಸೌಲಭ್ಯ ದೊರೆಯಬೇಕಾದರೆ ಎರಡು ತಲೆಮಾರು ಬೇಕಾಗುತ್ತದೆ. ಇದು ಶಾಶ್ವತವಾಗಿ ಜಾರಿಯಾದರೆ ಈ ಸಮುದಾಯಗಳೆಲ್ಲ ಅಧೋಗತಿಯತ್ತ ಮುಖ ಮಾಡಲಿವೆ. ಸಮಾಜದ ಬೆಳವಣಿಗೆಯೂ ಇಳಿಮುಖವಾಗಲಿದೆ ಎಂದು ಎಚ್ಚರಿಸಿದರು. ಅಪೂರ್ಣವಾಗಿರುವ ನ್ಯಾ.ನಾಗಮೋಹನದಾಸ್ ವರದಿಯಲ್ಲೇ 29 ಕೋಷ್ಟಕಗಳ ಪೈಕಿ 19 ಕೋಷ್ಟಕಗಳಲ್ಲಿ ಈ ಸಮುದಾಯಗಳು ಸಾಮಾಜಿಕವಾಗಿ ಹಿಂದುಳಿದಿವೆ. ಸುಪ್ರೀಕೋರ್ಟ್ ತೀರ್ಪಿನ ಪ್ರಕಾರ ಹಿಂದುಳಿವಿಕೆಯ ಆಧಾರದ ಮೇಲೆ ಒಳಮೀಸಲಾತಿ ವರ್ಗೀಕರಣವಾದರೆ ಇವುಗಳೆಲ್ಲವೂ ಎ-ಪ್ರವರ್ಗದಲ್ಲಿ ಬರಬೇಕು. ಆದರೆ ರಾಜಕೀಯ ಶಕ್ತಿ, ಧ್ವನಿ ಇಲ್ಲದ ಕಾರಣಕ್ಕೆ ಸಿ-ಪ್ರವರ್ಗಕ್ಕೆ ಸೇರಿಸಲಾಗಿದೆ. ಆದ್ದರಿಂದ ಒಳ ಮೀಸಲಾತಿ ವರ್ಗೀಕರಣವನ್ನೇ ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರದಿಂದ ಜನಗಣತಿ ನಡೆಯಲಿದ್ದು, ಇದರಿಂದ ದೊರೆಯುವ ಎಸ್‌ಸಿ ಜನಸಂಖ್ಯೆ ದತ್ತಾಂಶದ ಮೇಲೆ ಒಳಮೀಸಲಾತಿ ನಿಗದಿಪಡಿಸಬೇಕು. ಈಗ ಆಗಿರುವ ಅನ್ಯಾಯ ಸರಿಪಡಿಸಿದ್ದರೆ ಸಿಡಿದೇಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಭೋವಿ ಸಮಾಜದ ಜಿಲ್ಲಾ ಅದ್ಯಕ್ಷ ಪಿ.ಡಿ.ವೆಂಕಟರಾಮನ ಮಾತನಾಡಿ, ಮೀಸಲಾತಿ ವಿಷಯದಲ್ಲಿ ಅನ್ಯಾಯ ಮಾಡಿದ ಹಿಂದಿನ ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸಿದ್ದು, ಇದೀಗ ಒಳಮೀಸಲಾತಿಯಲ್ಲಿನ ಸಮಸ್ಯೆ ಬಗೆಹರಿಸದಿದ್ದರೆ ಕಾಂಗ್ರೆಸ್ ಸರ್ಕಾರಕ್ಕೂ ಪಾಠ ಕಲಿಸುವುದು ನಿಶ್ಚಿತ. ಎಸ್‌ಸಿ ಶೇ.15ರಷ್ಟು ಪ್ರಕಾರ ನೇಮಕಾತಿ ಕೈಗೊಂಡಿರುವುದು ತಾತ್ಕಾಲಿಕವಾಗಿ ನಿರಾಳತೆ ಸಿಕ್ಕಿದೆ. ನಮಗೆ ದುರಾಸೆ ಇಲ್ಲ. ಎಸ್‌ಸಿಗಳೆಲ್ಲರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಬೇಕು. ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಎಸ್‌ಸಿ-ಎಸ್‌ಟಿ ಮೀಸಲಾತಿ ಪ್ರಮಾಣ ಏರಿಕೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು. ಎಸ್‌ಸಿಪಿ-ಟಿಎಸ್‌ಪಿ ಹಣವನ್ನು ಪೂರ್ಣಪ್ರಮಾಣದಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಬಳಕೆ ಮಾಡಬೇಕು. ಅನ್ಯಉದ್ದೇಶಕ್ಕೆ ಬಳಕೆಗೆ ಕಡಿವಾಣ ಹಾಕಬೇಕು. ಹೀಗಾಗಿ, ಈ ಎಲ್ಲ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭೋವಿ ಸಂಘದ ಅಧ್ಯಕ್ಷ ವಿನಯ್ ಕುಮಾರ್, ಅಶ್ವತ್ಥಪ್ಪ,ಶ್ರೀನಿವಾಸ್ ಕೆ.ವಿ.,ಲಂಬೂ ಶ್ರೀನಿವಾಸ್, ರಾಮಾಂಜನಪ್ಪ,ನಾರಾಯಣಪ್ಪ,ವೆಂಕಟೇಶ್. ಆರ್.,ತಿವೇಂದ್ರ,ನರೇಂದ್ರ,ರಂಗಸ್ವಾಮಿ, ತಿಪ್ಪನ್ನ ಹಾಗೂ ಇತರರು ಹಾಜರಿದ್ದರು.

- Post by Venu Gopal2
- ದೊಡ್ಡಬಳ್ಳಾಪುರ ಬಾಡಿಗೆ ಮನೆಯಲ್ಲಿ ವಾಸವಿರುವ ವಿದ್ಯಾರ್ಥಿಗಳ ಲ್ಯಾಪ್ ಟಾಪ್ ಕಳ್ಳತನ ಗೀತಂ ಯುನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಘಟನೆ ಒಂದೇ ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೂರು ಲ್ಯಾಪ್ ಟಾಪ್ ಗಳ ಕಳ್ಳತನ ಲ್ಯಾಪ್‌ಟಾಪ್ ಕಳ್ಳತನ ಮಾಡಿಕೊಂಡು ಹೊರ ಹೋಗುವ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆ ಲ್ಯಾಪ್ ಟಾಪ್ ಕಳೆದಿರುವುದರಿಂದ ವೃತ್ತಿಪರ ಪ್ರಾಜೆಕ್ಟ್ ತಯಾರಿಸಲು ಮುಂದಾಗಿದ್ದ ವಿದ್ಯಾರ್ಥಿಗಳಿಗೆ ಸಂಕಷ್ಟ ಆಂದ್ರಮೂಲದ ಎಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಸಂಕಷ್ಟ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗದೇನಹಳ್ಳಿ2
- ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್‌ಗೆ ಡಿಕ್ಕಿ ಯುವಕ ಜೀವನ್ ಕುಮಾರ್ (25) ಸ್ಥಳದಲ್ಲೇ ಸಾವು...1
- ಹೈದರಾಬಾದ್‌ನ ಹೋಟೆಲ್ ಒಂದರಲ್ಲಿ ಆಹಾರಕ್ಕಾಗಿ ಬಂದ ಭಿಕ್ಷುಕನ ಮೇಲೆ ಸಿಬ್ಬಂದಿ ಬಿಸಿನೀರು ಸುರಿದಿರುವ ಆರೋಪ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯನ್ನು ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಇಬ್ರಾಹಿಂ ಖಾನ್ ವಿಡಿಯೋ ಮಾಡಿ ಬಹಿರಂಗಪಡಿಸಿದ ಬಳಿಕ ಅದು ವೈರಲ್ ಆಗಿದೆ. ಗ್ರಾಹಕರಿಗೆ ತೊಂದರೆ ಉಂಟುಮಾಡುತ್ತಿದ್ದಾನೆ ಎಂಬ ಕಾರಣ ಹೇಳಿ ಸಿಬ್ಬಂದಿ ಈ ರೀತಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕೃತ್ಯವನ್ನು ಸಾಮಾಜಿಕ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದು, ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಘಟನೆ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.1
- Tod ಶ್ರೀನಿವಾಸಪುರ ತಾಲ್ಲೂಕಿನ ವಳಗೇರನಹಳ್ಳಿ ಕ್ರಾಸ್ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಅಪಘಾತವಾಗಿ ರಸ್ತೆ ಬಳಿ ಉರುಳಿ ಬಿದ್ದಿದ್ದು ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಜೆಡಿಎಸ್ ಮುಖಂಡರಾದ ಸಿ.ಎಂ.ಆರ್ ಶ್ರೀನಾಥ್ ಅಣ್ಣನವರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಧೈರ್ಯ ತುಂಬಿ ನಂತರ ಅಲ್ಲಿಂದಲೇ ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸಿ ನಂತರ ಕೆ.ಎಸ್.ಆರ್.ಟಿ.ಸಿ ಡಿ.ಸಿ ರವರಿಗೆ ಕರೆ ಮಾಡಿ ಸಮಸ್ಯೆಯ ಬಗ್ಗೆ ವಿವರಿಸಿ ತಕ್ಷಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದರು... true news kolar1
- ಸೂರ್ಯನ ಬಿಸಿಲಿನ ತಾಪಕ್ಕೆ ನೀರನ್ನು ಅರಸಿ ಬಂದ ನಾಯಿಗೆ. ನೀರುಣಿಸಿ ಮಾನವೀಯತೆ ಮೆರೆದ ಮಾನವ ನೀರನ್ನು ಅರಸಿ ಬಂದ ನಾಯಿಗೆ ಬಸ್ಸಿನಲ್ಲಿ ವ್ಯಕ್ತಿಯೊಬ್ಬರು ನಾಯಿ ಯ ಬಾಯಿಗೆ ನೀರುಣಿಸಿ ಮಾನವೀಯತೆ ಮೆರೆದಿದ್ದಾರೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ ಸಾರ್ವಜನಿಕರು ತಮ್ಮ ತಮ್ಮ ಮನೆಯ ಮುಂದೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವುದಕ್ಕೆ ನೀರಿ ನ ವ್ಯವಸ್ಥೆ ಮಾಡಬೇಕಾಗಿರುವುದು ಮಾನವ ಧರ್ಮ ದಯವಿಟ್ಟು ಪ್ರಾಣಿ ಪಕ್ಷಿಗಳಿಗೆ ನಿಮ್ಮ ಮನೆ ಹಾಗೂ ಊರಿನಲ್ಲಿ ಕುಡಿಯುವುದಕ್ಕೆ ವ್ಯವಸ್ಥೆ ಮಾಡಿ .1
- KOLAR KI.AWAAZ KOUSAR NEWS1
- ದೇವನಹಳ್ಳಿ ಮದ್ಯ ಪ್ರಾಚ್ಯ ದೇಶಗಳಲ್ಲಿ ಯುದ್ದ ಮುಂದುವರೆದ ಹಿನ್ನೆಲೆ, ಡೊಮೆಸ್ಟಿಕ್ ಸಿಲಿಂಡರ್ ಗ್ಯಾಸ್ ಗೂ ಜನ ಪರದಾಟ, ದೇವನಹಳ್ಳಿ ಪಟ್ಟಣದ ಹೆಚ್.ಪಿ ಗ್ಯಾಸ್ ನಲ್ಲಿ ಅಡುಗೆ ಸಿಲಿಂಡರ್ ಗೆ ಮುಗಿಬಿದ್ದ ಜನ, ಹೆಚ್.ಪಿ ಗ್ಯಾಸ್ ಬುಕ್ ಮಾಡಿ 20 ದಿನಗಳು ಕಳೆದು ಇದೀಗ ಕೆಲವೇ ಕೆಲವು ಸಿಲಿಂಡರ್ ಗಳು ಮಾತ್ರ ಹಂಚಿಕೆ ಕೆಲವೇ ಕೆಲವು ಸಿಲಿಂಡರ್ ಗಳು ಪಡೆಯಲು ಹೆಚ್ .ಪಿ ಗ್ಯಾಸ್ ಕಚೇರಿ ಮುಂದೆ ಕ್ಯೂನಿಂತ ಜನ, ಹೆಚ್. ಪಿ ಗ್ಯಾಸ್ ವಿರುದ್ದ ಜನರ ಆಕ್ರೋಶ, ಕಳೆದ 20 ದಿನಗಳ ಹಿಂದೆ ಬುಕ್ ಮಾಡಿದ್ರು, ಒಟಿಪಿ ಪಡೆದು ಸಿಲಿಂಡರ್ ಕೊಡ್ತಿಲ್ಲ ಅಂತಾ ಆಕ್ರೋಶ, ನಾ ಮುಂದು ತಾ ಮುಂದು ಅಂತಾ ಅಡುಗೆ ಸಿಲಿಂಡರ್ ಗಳು ಪಡೆಯಲು ನೂಕು ನೂಗ್ಗಲು, ಟಾಟಾ ಏಸ್ ಗಾಡಿಯಲ್ಲಿ 50 ಸಿಲಿಂಡರ್ ಗಳು ತುಂಬಿಕೊಂಡುಬಂದಿರೋ ಹೆಚ್.ಪಿ ಸಿಬ್ಬಂದಿ, ನಾನು ಬುಕ್ ಮಾಡಿದ್ದೇನೆ ನಮಗೆ ಕೊಡಿ ನಮಗೆ ಕೊಡಿ ಅಂತಾ ದುಂಬಾಲು ಬಿದ್ದ ಜನ, 20 ದಿನಗಳಿಂದ ಅಡುಗೆ ಸಿಲಿಂಡರ್ ಪೂರೈಕೆ ಹಾಗ್ತಿಲ್ಲ ಅಂತಾ ಗ್ಯಾಸ್ ಕಚೇರಿ ಬಳಿ ಮಹಿಳೆಯರ ಆಕ್ರೋಶ, ಸಚಿವ ಕೆಹೆಚ್ ಮುನಿಯಪ್ಪ ಸ್ವ ಕ್ಷೇತ್ರದಲ್ಲಿ ಅಡುಗೆ ಸಿಲಿಂಡರ್ ಗಳಿಗೂ ಆಹಾಕರ, ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಪಟ್ಟಣ1