ರಾಜ್ಯವು ಸೇರಿದಂತೆ ದೇಶದೆಲ್ಲೆಡೆ ದಿಡೀರನೆ ಉದ್ಭವವಾಗಿರುವ ಅನಿಲ ಸಿಲಿಂಡರ್ ಅಭಾವಕ್ಕೆ ಇಂದು ದೇಶದ ಜನಸಾಮಾನ್ಯ ಸಂಪೂರ್ಣ ತತ್ತರಿಸುತ್ತಿದ್ದಾನೆ *ಸಿಲಿಂಡರ್ ಅಭಾವ ವಿರೋಧಿಸಿ ಆಪ್ ಪ್ರತಿಭಟನೆ* ರಾಜ್ಯವು ಸೇರಿದಂತೆ ದೇಶದೆಲ್ಲೆಡೆ ದಿಡೀರನೆ ಉದ್ಭವವಾಗಿರುವ ಅನಿಲ ಸಿಲಿಂಡರ್ ಅಭಾವಕ್ಕೆ ಇಂದು ದೇಶದ ಜನಸಾಮಾನ್ಯ ಸಂಪೂರ್ಣ ತತ್ತರಿಸುತ್ತಿದ್ದಾನೆ. ಕೋಟ್ಯಾಂತರ ಜನ ದಿಡೀರನೆ ನಿರುದ್ಯೋಗಿಗಳಾಗಿ ಬೀದಿಗೆ ಬೀಳುವ ಪರಿಸ್ಥಿತಿಯನ್ನು ಸೃಷ್ಟಿಸಿರುವ ಬಿಜೆಪಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಆಮ್ ಆದ್ಮಿ ಪಕ್ಷ ಇಂದು ತೀವ್ರ ಪ್ರತಿಭಟನೆಯನ್ನು ನಡೆಸಿತು. ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಸುದ್ದಿಗಾರರೊಂದಿಗೆ ಮಾತನಾಡುತ್ತಾ " ಪ್ರಧಾನಿ ಮೋದಿ ಅವರ ಅಮೆರಿಕ ಗುಲಾಮಗಿರಿ ವಿದೇಶಾಂಗ ನೀತಿಯಿಂದಾಗಿ ದೇಶದ ಕೋಟ್ಯಾಂತರ ಜನ ದಿಡೀರನೆ ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಹಿಂದೆ ಕೊರೋನಾ ಸಂದರ್ಭದಲ್ಲಿಯೂ ಸಹ ಇದೇ ರೀತಿಯ ಅವಾಂತರಕ್ಕೆ ತಳ್ಳಿದ್ದ ಬಿಜೆಪಿ ಕೇಂದ್ರ ಸರ್ಕಾರ ಪ್ರತಿ ದಿವಸ ತಪ್ಪು ತಪ್ಪು ಹೆಜ್ಜೆಗಳನ್ನು ಇಡುತ್ತಾ ಜನಸಾಮಾನ್ಯರನ್ನು ದಾರಿ ತಪ್ಪಿಸುತ್ತಿದ್ದಾರೆ. ವಿಶ್ವದಲ್ಲಿ ಎಂತಹ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಸಹ ಭಾರತವು ತನ್ನ ಅಲಿಪ್ತ ಶೃಂಗ ವಿದೇಶಾಂಗ ನೀತಿಯನ್ನು ಮುಂದುವರಿಸಿತ್ತು. ಆದರೆ ಈಗ ಪ್ರಧಾನಿ ಮೋದಿಯವರು ತಮ್ಮ ರಹಸ್ಯಗಳನ್ನು ಮುಚ್ಚಿಕೊಳ್ಳಲು ಅಮೆರಿಕ - ಇಸ್ರೇಲ್ ಪರವಾದಂತಹ ಶರಣಾಗತಿ ನೀತಿಯನ್ನು ಅನುಸರಿಸುತ್ತಿರುವುದು ದೇಶದ ಜನ ಗಮನಿಸಬೇಕಿದೆ. ಕೂಡಲೇ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಉದ್ಭವಿಸಿರುವ ಅಡುಗೆ ಅನಿಲ ಪೂರೈಕೆಯನ್ನು ಸರಾಗವಾಗಿ ಮಾಡದಿದ್ದಲ್ಲಿ ಪಕ್ಷವು ಮತ್ತಷ್ಟು ತೀವ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ" ಎಂದು ಎಚ್ಚರಿಸಿದರು. ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಮಾತನಾಡಿ " ರಾಜ್ಯದಲ್ಲಿ ಎಲ್ಲೆಡೆ ಅವ್ಯಾಹತವಾಗಿ ಕಾಳಸಂತೆಯಲ್ಲಿ ದುಬಾರಿ ವೆಚ್ಚದಲ್ಲಿ ಮಾರಾಟದಂತೆಯನ್ನು ನಿಲ್ಲಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ವಿಧಾನಸಭೆಯಲ್ಲಿ ಆಹಾರ ಪೂರೈಕೆ ಸಚಿವ ಮುನಿಯಪ್ಪ ಅಸಹಾಯಕರಾಗಿ ಮಾತನಾಡುತ್ತಿರುವುದು ನಿಜಕ್ಕೂ ಬೇಸರ ತರಿಸುತ್ತಿದೆ. ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿರುವುದನ್ನು ಪಕ್ಷವು ಸಹಿಸುವುದಿಲ್ಲ" ಎಂದು ಗುಡುಗಿದರು. ಪ್ರತಿಭಟನೆಯಲ್ಲಿ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿಕಾಂತ ರಾವ್, ರಾಜ್ಯ ಉಪಾಧ್ಯಕ್ಷ ರುದ್ರಯ್ಯ ನವಲಿ ಮಠ ,ಜಗದೀಶ್ ವಿ. ಸದಂ,ಲೋಹಿತ್ ಕುಮಾರ್ , ಉಷಾ ಮೋಹನ್, ಪುಷ್ಪ ಕೇಶವ್, ರವಿಕುಮಾರ್ ಸೇರಿದಂತೆ ಅನೇಕ ಮುಖಂಡರುಗಳು ಕಾರ್ಯಕರ್ತರು ಭಾಗವಹಿಸಿದ್ದರು.

- Post by ಅರವಿಂದ್ ರಾಜೀವ್1
- Post by SUDHUR CHAULANI NEWS1
- Post by Gulam Muhammad1
- Post by Shivanand1
- ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ಏರ್ ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳಿಂದ ಭರ್ಜರಿಕಾರ್ಯಾಚರಣೆ. ಅಕ್ರಮವಾಗಿ ಸಾಗಾಟ ಮಾಡ್ತಿದ್ದ ಹೈಡ್ರೋಪೊನಿಕ್ ಗಾಂಜಾ ಜಪ್ತಿ. 1.125 ಕೆಜೆ ತೂಕದ 39.37 ಲಕ್ಷ ಮೌಲ್ಯದ ಗಾಂಜಾ ಸೀಜ್. ಅಕ್ರಮ ಗಾಂಜಾವನ್ನ ಫೋಟೋ ಫ್ರೇಮಿನ ಒಳಗೆ ಇಟ್ಟು ಸಾಗಾಟ. ಬ್ಯಾಗ್ ಪರಿಶೀಲನೆ ವೇಳೆ ಅಕ್ರಮ ಗಾಂಜಾ ಸಾಗಾಟ ಬೆಳಕಿಗೆ. ಬ್ಯಾಂಕಾಗ್ ನಿಂದ ಬೆಂಗಳೂರಿಗೆ ಬರುವ ವೇಳೆ ಆರೋಪಿ ಲಾಕ್. ಆರೋಪಿ ವಿರುದ್ದ NDPS ಕಾಯ್ದೆ 1985ರಡಿ ಪ್ರಕರಣ ದಾಖಲು. ಆರೋಪಿಯನ್ನ ಬಂದಿಸಿ ತನಿಖೆ ಕೈಗೊಂಡಿರುವ ಕಸ್ಟಮ್ಸ್ ಅಧಿಕಾರಿಗಳು. ದೇವನಹಳ್ಳಿ ಕೆಂಪೇಗೌಡ ಎರ್ ಪೋರ್ಟಿನಲ್ಲಿ ಘಟನೆ.1
- ಶ್ರೀನಿವಾಸಪುರ: ದಲಿತ ಕುಟುಂಬದ ಮೇಲೆ ದೌರ್ಜನ್ಯ; ಮಹಿಳೆಯನ್ನು ಕಾರಿನಿಂದ ಗುದ್ದಿ ರಂಗನಾಥ್, ರಘು ನಾಥ್ ರೆಡ್ಡಿ,ಶಂಕರ ರೆಡ್ಡಿ,ಬಾಬುರೆಡ್ಡಿ,ಬೆಳ್ಳಮ್ ಶ್ರೀನಿವಾಸ್ ರೆಡ್ಡಿ, ಅನಿಲ್ ಕುಮಾರ್, ಕೊಲೆ ಯತ್ನ - ಸಂತ್ರಸ್ತರಿಗೆ ನ್ಯಾಯಕ್ಕಾಗಿ ಆಗ್ರಹ ಶ್ರೀನಿವಾಸಪುರ: ತಾಲೂಕಿನ ನೆಲವಂಕಿ ಹೋಬಳಿ, ಜೋಡಿ ಕೊತ್ತಪಲ್ಲಿ ಗ್ರಾಮದ ಕಡಪ ರಸ್ತೆಯಲ್ಲಿ ವಾಸವಾಗಿರುವ ದಲಿತ ಕುಟುಂಬವೊಂದರ ಮೇಲೆ ಭೂ ವಿವಾದದ ಹಿನ್ನೆಲೆಯಲ್ಲಿ ಮಾರಣಾಂತಿಕ ಹಲ್ಲೆ ಹಾಗೂ ದೌರ್ಜನ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿವರ: ಜೋಡಿ ಕೊತ್ತಪಲ್ಲಿ ಗ್ರಾಮದ ಸರ್ವೆ ನಂ. 58ರ ಜಮೀನು ದಲಿತ ನಾರಾಯಣಸ್ವಾಮಿ ಎಂಬುವವರಿಗೆ ಸೇರಿದ್ದು, ಕಳೆದ ಹಲವು ವರ್ಷಗಳಿಂದ ಪಕ್ಕದ ಜಮೀನಿನ ಮಾಲೀಕ ರಂಗನಾಥ್ ಎಂಬುವವರು ಅವರ ಕುಟುಂಬದವರು ಈ ಕುಟುಂಬದ ಮೇಲೆ ಇಲ್ಲಸಲ್ಲದ ಕಾರಣಕ್ಕೆ ಗಲಾಟೆ ಮಾಡುತ್ತಾ ದೌರ್ಜನ್ಯ ನಡೆಸುತ್ತಾ ಬಂದಿದ್ದಾರೆ ಎಂದು ಆರೋಪಿಸಲಾಗಿದೆ. ದಿನಾಂಕ 16-03-2026ರ ಸೋಮವಾರದಂದು, ಅಧಿಕಾರಿಗಳು ಹಾಗೂ ರಂಗನಾಥ್ ಎಂಬುವವರು ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಏಕಾಏಕಿ ಜೆಸಿಬಿ ಯೊಂದಿಗೆ ನಾರಾಯಣಸ್ವಾಮಿ ಅವರ ಜಮೀನಿಗೆ ನುಗ್ಗಿ ಗಲಾಟೆ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ದಲಿತ ಕುಟುಂಬದ ಹೆಣ್ಣುಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. "ರಸ್ತೆಯ ವಿಚಾರವಾಗಿ ಉಭಯ ಕಡೆಯವರು ತಲಾ 10 ಅಡಿ ಜಾಗ ಬಿಡೋಣ" ಎಂದು ನಾರಾಯಣಸ್ವಾಮಿ ಮನವಿ ಮಾಡಿದರೂ ಸಹ, ಅದಕ್ಕೆ ಒಪ್ಪದ ರಂಗನಾಥ್ ಕುಟುಂಬ ವು , "ನಾವು ಒಂದು ಅಡಿ ಜಾಗವನ್ನೂ ಬಿಡುವುದಿಲ್ಲ" ಎಂದು ಹಠ ಹಿಡಿದು ಗಲಾಟೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಕೂಡ ರಂಗತ್ ಪರವಾಗಿ ನಿಂತು, ದಲಿತ ಕುಟುಂಬಕ್ಕೆ ರಕ್ಷಣೆ ನೀಡುವ ಬದಲು "ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ" ಎಂದು ಬೆದರಿಸಿ, ಅವರ ಜಾಗದಲ್ಲೇ ರಸ್ತೆ ಮಾಡಲು ಕುಮ್ಮಕ್ಕು ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅದೇ ದಿನ ಸಂಜೆ, ರಂಗನಾಥ್ ಸಹಜರರು ದಲಿತ ಮಹಿಳೆಯ ಮೇಲೆ ಕಾರನ್ನು ಹರಿಸಿ ಕೊಲೆ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಮಹಿಳೆ ಸದ್ಯ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ತಹಶೀಲ್ದಾರ್ ಅವರು ಆದೇಶ ಮಾಡಿದ್ದಾರೆ ಎಂಬ ನಕಲಿ ಪತ್ರವನ್ನು ತೋರಿಸಿ, ಅಧಿಕಾರಿಗಳ ಹೆಸರಿನಲ್ಲಿ ದಲಿತ ಕುಟುಂಬವನ್ನು ಬೆದರಿಸಿ ದೌರ್ಜನ್ಯ ಎಸಗಿರುವುದು ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಕ್ಕಾಗಿ ಆಗ್ರಹ: "ನಮ್ಮ ಸ್ವಂತ ಜಮೀನಿನಲ್ಲಿ ನಮಗೆ ರಕ್ಷಣೆ ಇಲ್ಲವೇ? ದಲಿತರಿಗೆ ಈ ನಾಡಿನಲ್ಲಿ ಸಮಾನತೆ ಮತ್ತು ನ್ಯಾಯ ಸಿಗುವುದಿಲ್ಲವೇ?" ಎಂದು ಸಂತ್ರಸ್ತ ಕುಟುಂಬ ಪ್ರಶ್ನಿಸಿದೆ. ಸಂಬಂಧಪಟ್ಟ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರು ಹಾಗೂ ಜಾಂಭವ ಯುವ ಸೇನೆ ಸಂಘಟನೆ ಒತ್ತಾಯಿಸಿದೆ .1
- ಇಂದು ರಾಜ್ಯಾದ್ಯಂತ ಎಲ್ಲಾ ರೈಲ್ವೆ ನಿಲ್ದಾಣ ಮುಂದೆ ಕರವೇ ಪ್ರತಿಭಟನೆ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮುಂಭಾಗ & MDDTI ಟ್ರೈನಿಂಗ್ ಸೆಂಟರ್ ಮುಂದೆ ಪ್ರತಿಭಟನೆ ಪ್ರತಿಭಟನೆ ಹಿನ್ನಲ್ಲೆ ರೈಲ್ವೆ ನಿಲ್ದಾಣ ಮುಂಭಾಗ ಬೀಗಿ ಪೊಲೀಸ್ ಬಂದೋಬಸ್ತ್ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ರೈಲ್ವೆ ನಿಲ್ದಾಣ ಮುಂಭಾಗ ಐವತ್ತಕ್ಕೂ ಹೆಚ್ಚು ಪೋಲೀಸ್ ಸಿಬ್ಬಂದಿ ನಿಯೋಜನೆ ಎರಡು ಬಿಎಂಟಿಸಿ ಬಸ್ ಗಳನ್ನ ನೀಯೋಜನೆ ಮಾಡಲಾಗಿದೆ. ಡಿವಿಜನಲ್ ರೈಲ್ವೆ ಮ್ಯಾನೇಜರ್ ಕಛೇರಿ ಮುಂದೆ ಕರವೇ ಕಾರ್ಯಕರ್ತರು ಪ್ರತಿಭಟನೆ.*ರಾಜ್ಯದ ಕೇಂದ್ರ ಮಂತ್ರಿಗಳ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ ಕೇಂದ್ರ ಸರ್ಕಾರ ಕನ್ನಡಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಆಕ್ರೋಶ..ಬೇಕೆ ಬೇಕೆ ನ್ಯಾಯ ಬೇಕು ಎನ್ನುತ್ತಿರುವ ಕಾರ್ಯಕರ್ತರು ರೈಲ್ವೆ ಇಲಾಖೆಗೆ ದಿಕ್ಕಾರ ಕೂಗಿದ ಪ್ರತಿಭಟನೆಕಾರರು.* ಮುಂಬಡ್ತಿಯ ನಡ್ಸತಿರೋ ಪರೀಕ್ಷೆ ಬರಿ ಹಿಂದಿ ಇಂಗ್ಲಿಷ್ ಅಲ್ಲಿ ಮಾಡ್ತಿದ್ದಾರೆ ಕನ್ನಡ ವಿದ್ಯಾರ್ಥಿಗಳ ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡ್ತಿದ್ದಾರೆ ಕುಮಾರಸ್ವಾಮಿ, ಶೋಬಾ ಕರಂದ್ಲಾಜ್,ಪ್ರಹ್ಲಾದ ಜೋಶಿ, ಯಾಕೆ ಈ ಬಗ್ಗೆ ಮಾತಾಡ್ತಿಲ್ಲ ರಾಜ್ಯ ಸಚಿವರ ಮನೆ ಮುಂದೆ ಹೋರಾಟ ಮಾಡ್ತಾರೆ ರೈಲ್ವೆಯಲ್ಲಿ ಕೆಲಸ ಮಾಡ್ತಿರುವ ಕನ್ನಡಿಗರಿಗೆ ಹಿಂದಿ ಬರೋದಿಲ್ಲ ಉತ್ತರ ಭಾರತದವರಿಗೆ ಮಾತ್ರ ಅನುಕೂಲ ಆಗುವಂತೆ ಹಿಂದಿ ಇಂಗ್ಲಿಷ್ ಅಲ್ಲಿ ಪರೀಕ್ಷೆ ಕನ್ನಡ ಅಭ್ಯರ್ಥಿಗಳಿಗೆ ಮೋಸ ಆಗಲು ಬಿಡಲ್ಲ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಮಾಡುತ್ತೇವೆ ಬೈಟ್ : ಸಣ್ಣೀರಪ್ಪ, ಕನ್ನಡಪರ ಹೋರಟಗಾರ1
- ಮಧ್ಯಪ್ರದೇಶದ ಅದಾನಿ ಗ್ರೂಪಿನ ಕಾರ್ಖಾನೆಯಲ್ಲಿ ಕಾರ್ಮಿಕನೊಬ್ಬ ಮೇಲಿನಿಂದ ಬಿದ್ದು ಮರಣ ಹೊಂದಿರುತ್ತಾನೆ, ಈ ಸಂಬಂಧ ಕಾರ್ಮಿಕರು ನ್ಯಾಯ ಕೇಳಿದಾಗ ಉಡಾಫೆ ಮಾತನಾಡಿದ ಅಧಿಕಾರಿಗಳು, ಆತನ ಶವವನ್ನು ಮುಚ್ಚಿಡಲು ಪ್ರಯತ್ನಿಸಿದಾಗ ರೊಚ್ಚಿಗೆದ್ದ ಕಾರ್ಮಿಕರು ಪೊಲೀಸ್ ಜೀಪ್ ಸೇರಿದಂತೆ ವಾಹನಗಳು, ಕಾರ್ಖಾನೆಯನ್ನು ಉಡೀಸ್ ಮಾಡಿದ್ದಾರೆ ಎನ್ನಲಾಗಿದೆ...1
- Facebook mein ek dusre ko support karna good night1