ರೈತರ ಹಿತರಕ್ಷಣೆಯೇ ಪರಮೋಚ್ಚ ಧ್ಯೇಯವೆಂದು ನಂಬಿರುವ ರಾಜ್ಯ ಸರ್ಕಾರ, "ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ” ಎಂಬ ತತ್ವದೊಂದಿಗೆ ತುಂಗಭದ್ರಾ ಅಣೆಕಟ್ಟಿನ ಗೇಟ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಿತ್ತು. ಯಾವುದೇ ವಿಳಂಬವಿಲ್ಲದೆ ಜಲಾಶಯಕ್ಕೆ ನೂತನ ಗೇಟ್‌ಗಳನ್ನು ಅಳವಡಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಅವುಗಳನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ (ಟಿ.ಬಿ. ಡ್ಯಾಂ) ಗೇಟ್ ಸಂಖ್ಯೆ 18ರ ಬಳಿ ಜಲಸಂಪನ್ಮೂಲ ಇಲಾಖೆ ಹಾಗೂ ತುಂಗಭದ್ರಾ ಮಂಡಳಿಯ ಜಂಟಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 33 ನೂತನ ಸ್ಪಿಲ್‌ವೇ ಗೇಟ್‌ಗಳನ್ನು ಲೋಕಾರ್ಪಣೆ ಮಾಡಲಾಯಿತು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್, ಆಂಧ್ರಪ್ರದೇಶ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ಶ್ರೀ ಎ. ರೇವಂತ್ ರೆಡ್ಡಿ ಘನ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಸಚಿವರಾದ ಶ್ರೀ ಹೆಚ್.ಕೆ. ಪಾಟೀಲ್, ಶ್ರೀ ಎನ್.ಎಸ್. ಬೋಸರಾಜು ಹಾಗೂ ಶ್ರೀ ಶಿವರಾಜ್ ತಂಗಡಗಿ ಅವರು ಭಾಗವಹಿಸಿದ್ದರು. ಇದರ ಜೊತೆಗೆ, ಕೊಪ್ಪಳ ಲೋಕಸಭಾ ಸದಸ್ಯ ರಾಜಶೇಖರ್ ಇಟ್ನಾಳ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಣೆಕಟ್ಟಿನ ಸುರಕ್ಷತೆ, ನೀರಾವರಿ ವ್ಯವಸ್ಥೆ ಮತ್ತು ರೈತರ ಹಿತಾಸಕ್ತಿಗೆ ಸರ್ಕಾರ ಬದ್ಧವಾಗಿದೆ ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ರೈತರ ಹಿತರಕ್ಷಣೆಯೇ ಪರಮೋಚ್ಚ ಧ್ಯೇಯವೆಂದು ನಂಬಿರುವ ರಾಜ್ಯ ಸರ್ಕಾರ, "ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ” ಎಂಬ ತತ್ವದೊಂದಿಗೆ ತುಂಗಭದ್ರಾ ಅಣೆಕಟ್ಟಿನ ಗೇಟ್ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಿತ್ತು. ಯಾವುದೇ ವಿಳಂಬವಿಲ್ಲದೆ ಜಲಾಶಯಕ್ಕೆ ನೂತನ ಗೇಟ್‌ಗಳನ್ನು ಅಳವಡಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಅವುಗಳನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ (ಟಿ.ಬಿ. ಡ್ಯಾಂ) ಗೇಟ್ ಸಂಖ್ಯೆ 18ರ ಬಳಿ ಜಲಸಂಪನ್ಮೂಲ ಇಲಾಖೆ ಹಾಗೂ
ತುಂಗಭದ್ರಾ ಮಂಡಳಿಯ ಜಂಟಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ 33 ನೂತನ ಸ್ಪಿಲ್‌ವೇ ಗೇಟ್‌ಗಳನ್ನು ಲೋಕಾರ್ಪಣೆ ಮಾಡಲಾಯಿತು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕೇಂದ್ರ ಜಲಶಕ್ತಿ ಸಚಿವ ಶ್ರೀ ಸಿ.ಆರ್. ಪಾಟೀಲ್, ಆಂಧ್ರಪ್ರದೇಶ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ಶ್ರೀ ಎ. ರೇವಂತ್ ರೆಡ್ಡಿ ಘನ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಸಚಿವರಾದ ಶ್ರೀ ಹೆಚ್.ಕೆ. ಪಾಟೀಲ್, ಶ್ರೀ ಎನ್.ಎಸ್. ಬೋಸರಾಜು ಹಾಗೂ ಶ್ರೀ ಶಿವರಾಜ್
ತಂಗಡಗಿ ಅವರು ಭಾಗವಹಿಸಿದ್ದರು. ಇದರ ಜೊತೆಗೆ, ಕೊಪ್ಪಳ ಲೋಕಸಭಾ ಸದಸ್ಯ ರಾಜಶೇಖರ್ ಇಟ್ನಾಳ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಣೆಕಟ್ಟಿನ ಸುರಕ್ಷತೆ, ನೀರಾವರಿ ವ್ಯವಸ್ಥೆ ಮತ್ತು ರೈತರ ಹಿತಾಸಕ್ತಿಗೆ ಸರ್ಕಾರ ಬದ್ಧವಾಗಿದೆ ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
- ಯಾದಗಿರಿ ನಗರದ ಕೋಳಿವಾಡ ಪ್ರದೇಶದಲ್ಲಿ ಜೂನ್ 25ರಂದು ಮೊಹರಂ ಹಬ್ಬದ ಸಡಗರ ಮನೆಮಾಡಿದೆ. ಇಮಾಮ್ ಖಾಸಿಂ ಸವಾರಿ ಮತ್ತು ಅಲೈ ಕಾರ್ಯಕ್ರಮಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು, ಭಕ್ತರು ಅಲೈ ಕಾರ್ಯಕ್ರಮಕ್ಕಾಗಿ 24 ಬಂಡಿಗಳಷ್ಟು ಹಸಿ ಕಟ್ಟಿಗೆಯನ್ನು ಸಮರ್ಪಿಸುವ ಮೂಲಕ ತಮ್ಮ ಭಕ್ತಿ ಮತ್ತು ಶ್ರದ್ಧೆಯನ್ನು ಪ್ರದರ್ಶಿಸಿದ್ದಾರೆ. ಮೊಹರಂ ಹಬ್ಬವು ತ್ಯಾಗ, ಶಾಂತಿ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಹಬ್ಬವಾಗಿದ್ದು, ಕೋಳಿವಾಡದಲ್ಲಿ ಹಲವು ದಶಕಗಳಿಂದ ವಿಶೇಷ ಸಂಪ್ರದಾಯಗಳೊಂದಿಗೆ ಇದನ್ನು ಆಚರಿಸಲಾಗುತ್ತಿದೆ. ಅಲೈ ಕಾರ್ಯಕ್ರಮಕ್ಕಾಗಿ ಹರಕೆ ರೂಪದಲ್ಲಿ ಕಟ್ಟಿಗೆಗಳನ್ನು ಸಮರ್ಪಿಸುವುದು ಇಲ್ಲಿನ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಕಟ್ಟಿಗೆಗಳನ್ನು ಸಮರ್ಪಿಸಿದ ಭಕ್ತರು ತಮ್ಮ ಕುಟುಂಬದ ಸುಖ-ಶಾಂತಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಸ್ಥಳೀಯ ಹಿರಿಯರ ಪ್ರಕಾರ, ಇಮಾಮ್ ಖಾಸಿಂ ಸವಾರಿಯು ಕೋಳಿವಾಡ ಮೊಹರಂ ಆಚರಣೆಯ ಮುಖ್ಯ ಆಕರ್ಷಣೆಯಾಗಿದ್ದು, ಇದು ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಹಬ್ಬದ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪ್ರಾರ್ಥನೆಗಳು ಮತ್ತು ಸಾಂಪ್ರದಾಯಿಕ ವಿಧಿವಿಧಾನಗಳು ನಡೆಯುತ್ತಿದ್ದು, ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸುತ್ತಿದ್ದಾರೆ. ವಿಶೇಷವಾಗಿ, ಕೋಳಿವಾಡದ ಮೊಹರಂ ಆಚರಣೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಜನರು ಒಗ್ಗಟ್ಟಿನಿಂದ ಪಾಲ್ಗೊಳ್ಳುತ್ತಾರೆ. ಎರಡೂ ಸಮುದಾಯದವರು ಹಬ್ಬದ ಸಿದ್ಧತೆ, ಸೇವಾ ಕಾರ್ಯಗಳು ಮತ್ತು ವಿವಿಧ ಕಾರ್ಯಕ್ರಮಗಳಲ್ಲಿ ಕೈಜೋಡಿಸುವ ಮೂಲಕ ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂದೇಶವನ್ನು ಸಾರುತ್ತಿದ್ದಾರೆ. ಆದ್ದರಿಂದ, ಇಮಾಮ್ ಖಾಸಿಂ ಸವಾರಿ ಮತ್ತು ಅಲೈ ಕಾರ್ಯಕ್ರಮವು ಕೇವಲ ಧಾರ್ಮಿಕ ಆಚರಣೆಯಾಗಿರದೆ, ಹಿಂದೂ-ಮುಸ್ಲಿಂ ಭಾವೈಕ್ಯತೆ, ಸಾಮಾಜಿಕ ಸಾಮರಸ್ಯ ಮತ್ತು ಪರಸ್ಪರ ಸಹಬಾಳ್ವೆಯ ಸಂಕೇತವಾಗಿ ಗುರುತಿಸಿಕೊಂಡಿದೆ.1
- ಯಾದಗಿರಿ ನಗರದ ವಾರ್ಡ್ ನಂ. ೨ ರಲ್ಲಿರುವ ಗಂಗಾನಗರ ಮತ್ತು ಅನಮೂಲ್ ಕಾಲೋನಿ ನಿವಾಸಿಗಳು, ಜಿಲ್ಲಾಧಿಕಾರಿಗಳ ಮನೆಯಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ, ಶಿಥಿಲಗೊಂಡ ಮಹಿಳಾ ಶೌಚಾಲಯಗಳು ಮತ್ತು ತುಂಬಿ ಗಬ್ಬೆದ್ದು ನಾರುತ್ತಿರುವ ಚರಂಡಿಗಳ ಸಮಸ್ಯೆಯನ್ನು ವಿರೋಧಿಸಿ ವಿನೂತನ ಪ್ರತಿಭಟನೆ ನಡೆಸಿದರು. ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಅವರ ನೇತೃತ್ವದಲ್ಲಿ, ನಿವಾಸಿಗಳು ಖಾಲಿ ಚಂಬುಗಳನ್ನು ಹಿಡಿದು ಸ್ವಚ್ಛತೆಯ ಕೊರತೆ ವಿರುದ್ಧ ಧ್ವನಿ ಎತ್ತಿದರು. ಈ ಪ್ರತಿಭಟನೆಯ ಬೆನ್ನಲ್ಲೇ, ನಗರಸಭೆ ಪೌರಾಯುಕ್ತ ಉಮೇಶ್ ಚವ್ಹಾಣ ಅವರು ಬೆಳಗ್ಗೆಯೇ ಸ್ಥಳಕ್ಕೆ ಭೇಟಿ ನೀಡಿ, ನಗರದಾದ್ಯಂತ ಕಾಲ್ನಡಿಗೆಯಲ್ಲಿ ಸಂಚರಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ, ಚರಂಡಿ ಸ್ವಚ್ಛತೆ, ಮಹಿಳಾ ಶೌಚಾಲಯ, ಕುಡಿಯುವ ನೀರು, ಕೊಳವೆಬಾವಿ ದುರಸ್ತಿ ಮತ್ತು ವಿದ್ಯುತ್ ದೀಪ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಅತಿ ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಸಾರ್ವಜನಿಕರು ಯಾವುದೇ ಕಾರಣಕ್ಕೂ ಚರಂಡಿಗಳಲ್ಲಿ ಕಸಕಡ್ಡಿ, ಪ್ಲಾಸ್ಟಿಕ್ ಸೇರಿದಂತೆ ಬಳಕೆಯಾಗದ ವಸ್ತುಗಳನ್ನು ಎಸೆಯಬಾರದೆಂದೂ, ಸಿ.ಸಿ. ರಸ್ತೆ ಮತ್ತು ಚರಂಡಿಗಳ ಮೇಲೆ ಅಕ್ರಮವಾಗಿ ಬಂಡೆಕಲ್ಲುಗಳು ಅಥವಾ ಸಾಮಗ್ರಿಗಳನ್ನು ಹಾಕಬಾರದೆಂದೂ ಜಾಗೃತಿ ಮೂಡಿಸಿದರು. ಪೌರಾಯುಕ್ತರು ತಮ್ಮ ಆದೇಶದಂತೆ ಕೆಳಮಟ್ಟದ ಅಧಿಕಾರಿಗಳಿಗೆ ಸ್ಥಳದಲ್ಲೇ ಇದ್ದು, ಸ್ವಚ್ಛತಾ ಕಾರ್ಯ ಸಂಪೂರ್ಣ ಮುಗಿಯುವವರೆಗೆ ನಿಂತು ನೋಡಿಕೊಳ್ಳುವಂತೆ ಖಡಕ್ ಸೂಚನೆ ನೀಡಿದರು. ಇದರ ಬೆನ್ನಲ್ಲೇ, ಅಧಿಕಾರಿ ಸಿಬ್ಬಂದಿ, ಕಾರ್ಮಿಕರು ಜೆ.ಸಿ.ಬಿ. ಮುಖಾಂತರ ಚರಂಡಿ ಸ್ವಚ್ಛತೆ, ಮಹಿಳಾ ಶೌಚಾಲಯ, ಕೆಟ್ಟು ನಿಂತ ಬೋರ್‌ವೆಲ್ ಮತ್ತು ವಿದ್ಯುತ್ ದೀಪಗಳ ದುರಸ್ತಿ ಕಾರ್ಯವನ್ನು ಪ್ರಾರಂಭಿಸಿದರು. ಈ ತಕ್ಷಣದ ಸ್ಪಂದನೆಗೆ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಅವರು ನಗರಸಭೆ ಪೌರಾಯುಕ್ತರಿಗೆ ಧನ್ಯವಾದ ತಿಳಿಸಿದರು. ಈ ಹೋರಾಟದಲ್ಲಿ ಪವನ್, ವಿಶಾಲ್, ಶಿವರಾಜ್, ವಿಶ್ವನಾಥ್, ಮಹೇಶ್, ಮೌನೇಶ್, ಹನುಮಂತ, ಮಲ್ಲಪ್ಪ, ವಾಟ್ಸಾಪ್, ರಾಜುಗೌಡ, ಸಾಬಣ್ಣ, ಯಂಕಪ್ಪ, ಈಶಪ್ಪ, ಮಾದೇಪ್ಪ, ಈರಪ್ಪ, ವೀರೇಶ್, ಅಂಜು, ಶರಣಪ್ಪ, ದುರ್ಗಪ್ಪ, ಮಲ್ಲಿಕಾರ್ಜುನ್, ರವಿ, ಚಂದಪ್ಪ, ತಾಯ, ಭೀಮಪ್ಪ, ಪ್ರಜ್ವಲ್, ರಾಮಪ್ಪ, ನರಸಪ್ಪ, ರಾಜಮ್ಮ, ದೇವಕಿಮ್ಮ, ಬಸಮ್ಮ, ಲಕ್ಷ್ಮಿ, ನಾಗಮ್ಮ, ಶಾನಮ್ಮ, ಮಲ್ಲಮ್ಮ, ಗಂಗಮ್ಮ, ಶಿವಮ್ಮ, ಮಲ್ಲಮ್ಮ ಚಟ್ನಳ್ಳಿ, ತಾಯಮ್ಮ ಸಿದ್ದಮ್ಮ, ಶಾಂತಮ್ಮ ಸಿದ್ದಮ್ಮ ಕೆ, ದುರ್ಗಮ್ಮ ಹತ್ತಿಕುಣಿ, ಮಲ್ಲಮ್ಮ ಸೂಗೂರು, ದೇವಮ್ಮ ಸೂಗೂರು, ಸುಮಂಗಲಾ, ಮರಿಯಮ್ಮ ಬಂಡಲಿ, ಭೀಮವ್ವ ಹೊಸಳ್ಳಿ, ಗಂಗಮ್ಮ ಹೊಸಳ್ಳಿ ಸೇರಿದಂತೆ ಅನೇಕ ನಿವಾಸಿಗಳು ಭಾಗವಹಿಸಿದ್ದರು. ನಗರಸಭೆ ಪೌರಾಯುಕ್ತರ ಈ ಕ್ಷಿಪ್ರ ಸ್ಪಂದನೆಗೆ ಗಂಗಾನಗರ ಮತ್ತು ಅನಮೂಲ್ ಕಾಲೋನಿ ನಿವಾಸಿಗಳು ಸಂತಸ ವ್ಯಕ್ತಪಡಿಸಿದ್ದಾರೆ.2
- ಸೇಡಂ ತಾಲೂಕಿನಲ್ಲಿ ಪ್ರಮುಖ ರಸ್ತೆ ನಿರ್ಮಾಣ ಕಾಮಗಾರಿಗೆ ಸಚಿವ ಡಾ. ಶರಣಪ್ರಕಾಶ ಪಾಟೀಲರು ಅಡಿಗಲ್ಲು ನೆರವೇರಿಸಿ ಭೂಮಿ ಪೂಜೆ ಮಾಡಿದ್ದಾರೆ. ಸೇಡಂ-ನಿಡಗುಂದ ಮುಖ್ಯರಸ್ತೆಯಿಂದ ಬಿಬ್ಬಳ್ಳಿ ಕಾಚೂರುವರೆಗಿನ ರಸ್ತೆ ನಿರ್ಮಾಣ ಹಾಗೂ ತರನಳ್ಳಿ ಗ್ರಾಮದ ಕೂಡು ರಸ್ತೆಗೆ ಸಿಡಿ ನಿರ್ಮಾಣಕ್ಕಾಗಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯು 2025-26ನೇ ಸಾಲಿನ ಕೆಕೆ.ಆರ್.ಡಿ.ಬಿ ಸಾಮಾನ್ಯ ಯೋಜನೆ ಅಡಿಯಲ್ಲಿ ಅನುಷ್ಠಾನಗೊಳ್ಳಲಿದೆ. ಈ ಬಿಬ್ಬಳ್ಳಿ ಕಾಚೂರು ಕೂಡು ರಸ್ತೆ ಕಾಮಗಾರಿಯ ಅಂದಾಜು ವೆಚ್ಚ 250 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.1
- ರಾಯಚೂರು ಜಿಲ್ಲಾಡಳಿತದಿಂದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಆಚರಣೆ ಸಂಬಂಧ ಗುರುವಾರ ಬೆಳಿಗ್ಗೆ 11 ಗಂಟೆಗೆ ಅಪರ ಜಿಲ್ಲಾಧಿಕಾರಿ ಶಿವಾನಂದ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಈ ಸಭೆಯಲ್ಲಿ ಸಮುದಾಯದ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ನಾಡಿನ ಅಭಿವೃದ್ಧಿಗಾಗಿ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಕೆಂಪೇಗೌಡರ ಪರಿಶ್ರಮದಿಂದ ಬೆಂಗಳೂರು ಇಂದು ವಿಶ್ವಮಟ್ಟದಲ್ಲಿ ಹೆಸರು ಗಳಿಸಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಸರ್ಕಾರದ ನಿರ್ದೇಶನದಂತೆ ಕೆಂಪೇಗೌಡರ ಜೀವನ ಸಾಧನೆಗಳನ್ನು ಸ್ಮರಿಸುವ ಸಲುವಾಗಿ ಇದೇ ಜೂನ್ 27 ರಂದು ನಗರದ ಪಂಡಿತ ಜಂಬಲದಿನ್ನಿ ರಂಗಮಂದಿರದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಪರ ಜಿಲ್ಲಾಧಿಕಾರಿಗಳು ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಗೆ ಜೂನ್ 27 ರ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಿದರು. ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಗಣ್ಯರಿಗೆ ವಿತರಿಸಲು, ರಂಗಮಂದಿರದ ಆವರಣದಲ್ಲಿ ಕುಡಿಯುವ ನೀರು ಸೇರಿದಂತೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಹಾಗೂ ನಗರದ ಮುಖ್ಯ ರಸ್ತೆಗಳು ಮತ್ತು ಆವರಣದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ನಿರ್ದೇಶನ ನೀಡಲಾಯಿತು.1
- ದಿನಾಂಕ 25.6.26 ರಂದು, ಹುಣಸಗಿಯಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಆರ್ ಪಿಡಿ ಟಾಸ್ಕ್ ಪೋರ್ಸ್ ಮತ್ತು ವಿಕಲಚೇತನರ ಸಂಘ ಸವಸ್ಥೆಗಳ ವಕ್ಕೂಟ ತಾಲೂಕು ಸಮಿತಿ ಹುಣಸಗಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಳೆದ ಎರಡು ಮೂರು ತಿಂಗಳಿಂದ ವಿಕಲಚೇತನರ ವೇತನವನ್ನು ಸ್ಥಗಿತಗೊಳಿಸಿರುವ ವಿಷಯ ಕುರಿತು ತಾಲೂಕು ದಂಡಾಧಿಕಾರಿಗಳ ಮೂಲಕ ಈ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಪ್ರತಿಕ್ರಿಯಿಸಿದ ತಹಸೀಲ್ದಾರ್ ಎಂ. ಬಸವರಾಜ್ ಅವರು, ಇದು ರಾಜ್ಯ ಮಟ್ಟದ ಸಮಸ್ಯೆಯಾಗಿದ್ದು, ಇದನ್ನು ಶೀಘ್ರವಾಗಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.4
- ರಾಜ್ಯದಲ್ಲಿ ಒಬ್ಬ ಪತ್ರಕರ್ತನ ವಿರುದ್ಧ ಇಡೀ ವ್ಯವಸ್ಥೆಯ ಷಡ್ಯಂತ್ರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಕಾನೂನು ಮತ್ತು ಸಂವಿಧಾನದ ಅಸ್ತಿತ್ವದ ಬಗ್ಗೆ ತೀವ್ರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.1
- ಯಾದಗಿರಿ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕಲ್ಯಾಣ ಕರ್ನಾಟಕದ ಸರ್ವಜನಾಂಗದ ನಾಯಕರು ಹಾಗೂ ಮಾಜಿ ಸಚಿವ ಕೆ. ಶಿವನಗೌಡ ನಾಯಕ ಅವರ 49ನೇ ಜನ್ಮದಿನಾಚರಣೆ ಅಂಗವಾಗಿ ನಡೆಯಲಿರುವ ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿ ನಡೆಸಲಾಯಿತು. ಜುಲೈ 14ರಂದು ರಾಯಚೂರು ಜಿಲ್ಲೆಯ ಕವಿತಾಳದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ಣಯದ ಮೂಲಕ ಹಕ್ಕೊತ್ತಾಯ ಸಲ್ಲಿಸಲು ನಿರ್ಧರಿಸಲಾಗಿದೆ. ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಕೆ.ಎಸ್.ಎನ್. ಸಾಮಾಜಿಕ ಸೇವಾ ಸಮಿತಿ ವತಿಯಿಂದ ಆಯೋಜಿಸಿರುವ ಈ ಬೃಹತ್ ಸಮಾವೇಶದಲ್ಲಿ ಸಮಗ್ರ ನೀರಾವರಿ ಯೋಜನೆ, ನವಲಿ ಜಲಾಶಯ ನಿರ್ಮಾಣ, ತಿಂಥಿಣಿ ಬ್ರಿಜ್ ಜಲಾಶಯ ನಿರ್ಮಾಣ ಹಾಗೂ ಕಲ್ಯಾಣ ಕರ್ನಾಟಕಕ್ಕೆ ಏಮ್ಸ್ ಮಂಜೂರಾತಿಗೆ ಒತ್ತಾಯಿಸಿ ಪ್ರಬಲ ನಿರ್ಣಯವನ್ನು ಮಂಡಿಸಲಾಗುವುದು ಎಂದು ಅವರು ತಿಳಿಸಿದರು. ಈ ಸುದ್ದಿಗೋಷ್ಠಿಯಲ್ಲಿ ಮಾಜಿ ನಗರಸಭೆ ಅಧ್ಯಕ್ಷೆ ಕು. ಲಲಿತಾ ಅನಪುರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಜುಲೈ 14ರಂದು ಕೆ. ಶಿವನಗೌಡ ನಾಯಕ ಅವರ ಜನ್ಮದಿನವನ್ನು ಬೃಹತ್ ಹಕ್ಕೊತ್ತಾಯ ಸಮಾವೇಶವಾಗಿ ಆಚರಿಸಲಾಗುವುದು ಎಂದು ತಿಳಿಸಲಾಗಿದೆ.1
- ಯಾದಗಿರಿ ಜಿಲ್ಲೆಯ ಅರಕೇರ ಬಿ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಸಂಭ್ರಮ ಮನೆಮಾಡಿದ್ದು, ಜನರು ಸಂತೋಷದಿಂದ ಪಾಲ್ಗೊಳ್ಳುತ್ತಿದ್ದಾರೆ.1
- ಯಾದಗಿರಿ ತಾಲೂಕಿನ ಠಾಣಗುಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಡಗಿಮದ್ರ ಗ್ರಾಮದಲ್ಲಿ ಡಬ್ಬಿನ ಕೆರೆ ಸಮಗ್ರ ಅಭಿವೃದ್ಧಿ ಕಾಮಗಾರಿಯ ನರೇಗಾ ಕೂಲಿ ಕಾರ್ಮಿಕರು ಮೊಹರಂ ಹಬ್ಬದ ನಿಮಿತ್ತ ಹೆಜ್ಜೆ ಹಾಕಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರಾದ ಜಮಾಲ್ ಸಾಬ್ ಎ ಹೆಡಗಿಮದ್ರಾ, ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭೇದಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಬಹಳ ವಿಜೃಂಭಣೆಯಿಂದ ಮೊಹರಂ ಹಬ್ಬವನ್ನು ಆಚರಿಸಲಾಗಿದೆ ಎಂದು ತಿಳಿಸಿದರು. ಭಾರತ ದೇಶವು ಸರ್ವ ಜನಾಂಗದ ಶಾಂತಿಯ ತೋಟ ಎಂಬ ಸಂದೇಶವನ್ನು ಸಾರುವ ಈ ಹಬ್ಬ ಎಲ್ಲರಲ್ಲೂ ಸಂತೋಷ ತಂದಿದೆ ಎಂದು ಅವರು ಹೇಳಿದರು. ಸರ್ಕಾರಗಳು ಮತ್ತು ರಾಜಕಾರಣಿಗಳು ಜಾತಿ, ಧರ್ಮ ಹಾಗೂ ಮೇಲು-ಕೀಳು ಎನ್ನುವ ಮೂಲಕ ಜನರ ನಡುವೆ ವಿಷಬೀಜ ಬಿತ್ತಿದರೂ ಕೂಡ, ಈ ಹಬ್ಬದಲ್ಲಿ ಎಲ್ಲರೂ ಒಂದಾಗಿ ಆಚರಿಸುವುದು ವಾಡಿಕೆಯಾಗಿದೆ. ಜನರ ಈ ಒಗ್ಗಟ್ಟನ್ನು ನೋಡಿ ರಾಜಕಾರಣಿಗಳಿಗೆ ನುಂಗಲಾರದ ತುತ್ತಾಗಿದೆ ಎಂದು ಜಮಾಲ್ ಸಾಬ್ ಅಭಿಪ್ರಾಯಪಟ್ಟರು. ಇಂತಹ ಹಬ್ಬಗಳು ಜನರನ್ನು ಒಗ್ಗೂಡಿಸಿ, ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಲು ಸಿದ್ಧರಾಗುವಂತೆ ಮಾಡಬೇಕು ಎಂದು ಅವರು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮರೆಪ್ಪ ಶಂಕರಬಂಡಿ, ಸುರೇಶ್ ತೆಳಿಗೇರಿ, ಮರೆಪ್ಪ ಕೋಟೆಕಲ್, ನಂದಪ್ಪ ಬೈರಪ್ಪೋರ್, ಭೀಮರಾಯ ಪೂಜಾರಿ, ಸಾಬಣ್ಣ ಹೆಳವೂರು, ಸಾಹೇಬ್ ಗೌಡ ಅಲಿಪುರ, ಮಲ್ಲಮ್ಮ ಅಂಬಿಗೇರ್, ಮಹೆಬೂಬೀ ಹುಲ್ಕಲ್, ಮಲ್ಲಮ್ಮ ಸುಲಗಿತ್ತಿ, ಶಾಂತಮ್ಮ ಬಂಡಿಮನಿ, ಸಲೀಮಾ ಮುಲ್ಲಾ, ನಾಗಮ್ಮ ಪೂಜಾರಿ, ಹಣಮಂತಿ ಒರುಂಚಿ, ಮಲ್ಲಮ್ಮ ಪತ್ಪುರ್ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.1