logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಹಾಸ್ಟೆಲ್‌ಗಳಿಗೆ ಭೇಟಿ ನೀಡದ ವಾರ್ಡನ್‌ಗಳ ವಿರುದ್ಧ ಕ್ರಮ: ಸಚಿವ ತಂಗಡಗಿ ಎಚ್ಚರಿಕೆ* ಹಾಸ್ಟೆಲ್‌ಗೆ ಸಚಿವರ ದಿಢೀರ್ ಭೇಟಿ* *ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ‌ಸಚಿವರು* ಮೈಸೂರು: ಸೆ.16 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳ ವಾರ್ಡನ್‌ಗಳು ಹಾಸ್ಟೆಲ್‌ಗಳಿಗೆ ನಿಯಮಿತವಾಗಿ ಭೇಟಿ ನೀಡಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸುವುದು ಕಡ್ಡಾಯ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಹಾಗೂ ಹಾಸ್ಟೆಲ್‌ಗಳಿಗೆ ಭೇಟಿ ನೀಡದ ವಾರ್ಡನ್‌ಗಳನ್ನು ಅಮಾನತುಗೊಳಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಎಚ್ಚರಿಕೆ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವ್ಯಾಪ್ತಿಗೆ ಬರುವ ಕುವೆಂಪು ನಗರದಲ್ಲಿನ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಸಚಿವರು ಬುಧವಾರ ದಿಢೀರ್ ಭೇಟಿ ನೀಡಿ, ಹಾಸ್ಟೆಲ್‌ನ ಕೊಠಡಿಗಳು, ಅಡುಗೆಮನೆ, ಊಟದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುವ ಮೂಲಸೌಕರ್ಯ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಸಚಿವರು ಖುದ್ದಾಗಿ ಪರಿಶೀಲಿಸಿದರು. *ಮೂಲಸೌಕರ್ಯಕ್ಕೆ ಒತ್ತು:* ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಪ್ರತಿನಿತ್ಯ ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಹಾಸ್ಟೆಲ್‌ನ ನಿರ್ವಹಣೆ, ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳ ಮೂಲಭೂತ ಸೌಲಭ್ಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸಬೇಕು. ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. “ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಹಾಸ್ಟೆಲ್‌ಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ, ಅವ್ಯವಸ್ಥೆ ಅಥವಾ ಗುಣಮಟ್ಟದ ಕೊರತೆಯನ್ನು ಸಹಿಸುವುದಿಲ್ಲ ಎಂದರು.‌ ವಾರ್ಡನ್ ಗಳು ಮಕ್ಕಳೊಂದಿಗೆ ಊಟ ಮಾಡಿದಾಗ ಮಾತ್ರ ಅವರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಹೇಗಿದೆ ಎಂಬುದು ಖುದ್ದಾಗಿ ತಿಳಿಯಲಿದೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರ ಸಮಸ್ಯೆಗಳನ್ನು ಅರಿತುಕೊಳ್ಳಬೇಕು. ತಿಂಗಳುಗಟ್ಟಲೆ ಪೋಷಕರನ್ನು ಬಿಟ್ಟು ಶಿಕ್ಷಣಕ್ಕಾಗಿ ಹಾಸ್ಟೆಲ್‌ನಲ್ಲಿ ಉಳಿಯುವ ಮಕ್ಕಳಿಗೆ ವಾರ್ಡನ್‌ಗಳು ಪೋಷಕರ ಸ್ಥಾನದಲ್ಲಿ ನಿಂತು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.‌ *ಶುಚಿತ್ವ‌‌ ಕಿಟ್‌ಗಳನ್ನು ಸರಿಯಾಗಿ ಒದಗಿಸಿ:* ಇನ್ನು ವಿದ್ಯಾರ್ಥಿಗಳ ರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಕಡ್ಡಾಯವಾಗಿ ಮಾಡಿಸಬೇಕು. ಶುಚಿತ್ವ ಕಿಟ್‌ಗಳನ್ನು ಸಮರ್ಪಕವಾಗಿ ಮತ್ತು ಸರಿಯಾದ ಸಮಯಕ್ಕೆ ವಿತರಿಸಬೇಕು. ಸ್ವಚ್ಛತಾ ಕಿಟ್‌ಗಳ ವಿತರಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು, ಹಾಸ್ಟೆಲ್‌ನಲ್ಲಿ ದೊರೆಯುತ್ತಿರುವ ಸೌಲಭ್ಯ, ಊಟ, ಶುಚಿತ್ವ ಇನ್ನಿತರ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಂದ ಖುದ್ದಾಗಿ ಮಾಹಿತಿ ಪಡೆದರು. ಇದಕ್ಕೂ ಮುನ್ನ ಸಚಿವರು ಸ್ಥಳದಲ್ಲಿದ್ದ ವಾರ್ಡನ್ ಗಳನ್ನು ಹೊರಗೆ ಕಳುಹಿಸಿ ವಿದ್ಯಾರ್ಥಿಗಳ ಬಳಿ ಮಾಹಿತಿ ಪಡೆದರು. *‘ವಿದ್ಯಾ ವಾಹಿನಿ’ ಕಾರ್ಯಕ್ರಮ;* ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ‘ವಿದ್ಯಾ ವಾಹಿನಿ’ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಇದರಡಿ ಹಿರಿಯ ವಿದ್ಯಾರ್ಥಿಗಳು ಪಿಯುಸಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿಷಯಗಳಲ್ಲಿ ಟ್ಯೂಷನ್‌ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಇದೇ ವೇಳೆ ಸಚಿವರ ಗಮನಕ್ಕೆ ತಂದರು.‌

12 hrs ago
user_Shiva Belagavi
Shiva Belagavi
Photographer ಅಥಣಿ, ಬೆಳಗಾವಿ, ಕರ್ನಾಟಕ•
12 hrs ago
43353879-8fa4-428a-8033-2665bd6fb171

ಹಾಸ್ಟೆಲ್‌ಗಳಿಗೆ ಭೇಟಿ ನೀಡದ ವಾರ್ಡನ್‌ಗಳ ವಿರುದ್ಧ ಕ್ರಮ: ಸಚಿವ ತಂಗಡಗಿ ಎಚ್ಚರಿಕೆ* ಹಾಸ್ಟೆಲ್‌ಗೆ ಸಚಿವರ ದಿಢೀರ್ ಭೇಟಿ* *ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ, ಸ್ವಚ್ಛತೆ ಹಾಗೂ ಗುಣಮಟ್ಟದ ಆಹಾರಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ‌ಸಚಿವರು* ಮೈಸೂರು: ಸೆ.16 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳ ವಾರ್ಡನ್‌ಗಳು ಹಾಸ್ಟೆಲ್‌ಗಳಿಗೆ ನಿಯಮಿತವಾಗಿ ಭೇಟಿ ನೀಡಿ, ವಿದ್ಯಾರ್ಥಿಗಳ ಸಮಸ್ಯೆ ಆಲಿಸುವುದು ಕಡ್ಡಾಯ. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಹಾಗೂ ಹಾಸ್ಟೆಲ್‌ಗಳಿಗೆ ಭೇಟಿ ನೀಡದ ವಾರ್ಡನ್‌ಗಳನ್ನು ಅಮಾನತುಗೊಳಿಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಅವರು ಎಚ್ಚರಿಕೆ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವ್ಯಾಪ್ತಿಗೆ ಬರುವ ಕುವೆಂಪು ನಗರದಲ್ಲಿನ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಸಚಿವರು ಬುಧವಾರ ದಿಢೀರ್ ಭೇಟಿ ನೀಡಿ, ಹಾಸ್ಟೆಲ್‌ನ ಕೊಠಡಿಗಳು, ಅಡುಗೆಮನೆ, ಊಟದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುವ ಮೂಲಸೌಕರ್ಯ ಸೇರಿದಂತೆ ವಿವಿಧ ವ್ಯವಸ್ಥೆಗಳನ್ನು ಸಚಿವರು ಖುದ್ದಾಗಿ ಪರಿಶೀಲಿಸಿದರು. *ಮೂಲಸೌಕರ್ಯಕ್ಕೆ ಒತ್ತು:* ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಪ್ರತಿನಿತ್ಯ ಗುಣಮಟ್ಟದ ಹಾಗೂ ಪೌಷ್ಟಿಕ ಆಹಾರ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಅವರು, ಹಾಸ್ಟೆಲ್‌ನ ನಿರ್ವಹಣೆ, ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳ ಮೂಲಭೂತ ಸೌಲಭ್ಯಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸಬೇಕು. ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪುವಂತೆ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. “ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭವಿಷ್ಯಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಹಾಸ್ಟೆಲ್‌ಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ, ಅವ್ಯವಸ್ಥೆ ಅಥವಾ ಗುಣಮಟ್ಟದ ಕೊರತೆಯನ್ನು ಸಹಿಸುವುದಿಲ್ಲ ಎಂದರು.‌ ವಾರ್ಡನ್ ಗಳು ಮಕ್ಕಳೊಂದಿಗೆ ಊಟ ಮಾಡಿದಾಗ ಮಾತ್ರ ಅವರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಹೇಗಿದೆ ಎಂಬುದು ಖುದ್ದಾಗಿ ತಿಳಿಯಲಿದೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರ ಸಮಸ್ಯೆಗಳನ್ನು ಅರಿತುಕೊಳ್ಳಬೇಕು. ತಿಂಗಳುಗಟ್ಟಲೆ ಪೋಷಕರನ್ನು ಬಿಟ್ಟು ಶಿಕ್ಷಣಕ್ಕಾಗಿ ಹಾಸ್ಟೆಲ್‌ನಲ್ಲಿ ಉಳಿಯುವ ಮಕ್ಕಳಿಗೆ ವಾರ್ಡನ್‌ಗಳು ಪೋಷಕರ ಸ್ಥಾನದಲ್ಲಿ ನಿಂತು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.‌ *ಶುಚಿತ್ವ‌‌ ಕಿಟ್‌ಗಳನ್ನು ಸರಿಯಾಗಿ ಒದಗಿಸಿ:* ಇನ್ನು ವಿದ್ಯಾರ್ಥಿಗಳ ರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಕಡ್ಡಾಯವಾಗಿ ಮಾಡಿಸಬೇಕು. ಶುಚಿತ್ವ ಕಿಟ್‌ಗಳನ್ನು ಸಮರ್ಪಕವಾಗಿ ಮತ್ತು ಸರಿಯಾದ ಸಮಯಕ್ಕೆ ವಿತರಿಸಬೇಕು. ಸ್ವಚ್ಛತಾ ಕಿಟ್‌ಗಳ ವಿತರಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಿದ ಸಚಿವರು, ಹಾಸ್ಟೆಲ್‌ನಲ್ಲಿ ದೊರೆಯುತ್ತಿರುವ ಸೌಲಭ್ಯ, ಊಟ, ಶುಚಿತ್ವ ಇನ್ನಿತರ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಂದ ಖುದ್ದಾಗಿ ಮಾಹಿತಿ ಪಡೆದರು. ಇದಕ್ಕೂ ಮುನ್ನ ಸಚಿವರು ಸ್ಥಳದಲ್ಲಿದ್ದ ವಾರ್ಡನ್ ಗಳನ್ನು ಹೊರಗೆ ಕಳುಹಿಸಿ ವಿದ್ಯಾರ್ಥಿಗಳ ಬಳಿ ಮಾಹಿತಿ ಪಡೆದರು. *‘ವಿದ್ಯಾ ವಾಹಿನಿ’ ಕಾರ್ಯಕ್ರಮ;* ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ‘ವಿದ್ಯಾ ವಾಹಿನಿ’ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಇದರಡಿ ಹಿರಿಯ ವಿದ್ಯಾರ್ಥಿಗಳು ಪಿಯುಸಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿಷಯಗಳಲ್ಲಿ ಟ್ಯೂಷನ್‌ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಇದೇ ವೇಳೆ ಸಚಿವರ ಗಮನಕ್ಕೆ ತಂದರು.‌

More news from ಕರ್ನಾಟಕ and nearby areas
  • ಅಥಣಿಯಲ್ಲಿ ಎಸ್‌ಐಆರ್-2026 (SIR-2026) ವಿಶೇಷ ಮತದಾರರ ನೋಂದಣಿ ಜಾಗೃತಿ ಅಭಿಯಾನ ಯಶಸ್ವಿ ​ಅಥಣಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR)-2026 ರ ಅಂಗವಾಗಿ ಅಥಣಿಯ ಕೆ.ಇ. ಲೋಕಪೂರ ಪದವಿ ಮಹಾವಿದ್ಯಾಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮತದಾರರ ನೋಂದಣಿ ಕುರಿತು ವ್ಯಾಪಕ ಅರಿವು ಹಾಗೂ ಜಾಗೃತಿ ಮೂಡಿಸಲು SVEEP ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಯಿತು. ​ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅತಿಥಿಗಳು ಮತ್ತು ಅಧಿಕಾರಿಗಳು, ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಮತ್ತು ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವುದು ರಾಷ್ಟ್ರೀಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಅಲ್ಲದೆ, ಯುವ ಮತದಾರರು ಹೊಸ ಮತದಾರರ ನೊಂದಣಿ, ತಿದ್ದುಪಡಿ ಹಾಗೂ ಆಧಾರ್ ಜೋಡಣೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡು ಇತರರಿಗೂ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. ​ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿಯ ಟಿ.ಪಿ.ಒ. ಆದ ಶ್ರೀ ಬಿ.ಬಿ. ಗಾವಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಕೆ.ಇ. ಲೋಕಪೂರ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಆರ್.ಎನ್. ನಾಯಕ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ​ವೇದಿಕೆಯಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಸ್.ಎನ್. ಹಿರೇಮಠ, ಜೆ.ಡಿ. ಪವಾರ, ಕಿರಣ ಕಳ್ಳಿಮಠ, ಮಹೇಶ ಮಾಂಗ, ವಿಶ್ವನಾಥ ಮೋರೆ, ಕಿರಣಗ ಗೆಜ್ಜಿ ಸೇರಿದಂತೆ ಇತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ​​ಕಾರ್ಯಕ್ರಮದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡು ಮತದಾರರ ಜಾಗೃತಿಯ ಪ್ರತಿಜ್ಞೆ ಸ್ವೀಕರಿಸಿದರು. ಎಸ್.ವಿ.ಇ.ಇ.ಪಿ. (SVEEP) ಚಟುವಟಿಕೆಗಳಡಿ ಹಮ್ಮಿಕೊಂಡಿದ್ದ ಈ ವಿಶೇಷ ಅಭಿಯಾನವು ಯಶಸ್ವಿಯಾಗಿ ಸಂಪನ್ನಗೊಂಡಿತು.
    4
    ಅಥಣಿಯಲ್ಲಿ ಎಸ್‌ಐಆರ್-2026 (SIR-2026) ವಿಶೇಷ ಮತದಾರರ ನೋಂದಣಿ ಜಾಗೃತಿ ಅಭಿಯಾನ ಯಶಸ್ವಿ
​ಅಥಣಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR)-2026 ರ ಅಂಗವಾಗಿ ಅಥಣಿಯ ಕೆ.ಇ. ಲೋಕಪೂರ ಪದವಿ ಮಹಾವಿದ್ಯಾಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮತದಾರರ ನೋಂದಣಿ ಕುರಿತು ವ್ಯಾಪಕ ಅರಿವು ಹಾಗೂ ಜಾಗೃತಿ ಮೂಡಿಸಲು SVEEP ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಯಿತು.
​ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅತಿಥಿಗಳು ಮತ್ತು ಅಧಿಕಾರಿಗಳು, ಪ್ರತಿಯೊಬ್ಬ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವುದು ಮತ್ತು ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವುದು ರಾಷ್ಟ್ರೀಯ ಕರ್ತವ್ಯವಾಗಿದೆ ಎಂದು ತಿಳಿಸಿದರು. ಅಲ್ಲದೆ, ಯುವ ಮತದಾರರು ಹೊಸ ಮತದಾರರ ನೊಂದಣಿ, ತಿದ್ದುಪಡಿ ಹಾಗೂ ಆಧಾರ್ ಜೋಡಣೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಂಡು ಇತರರಿಗೂ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.
​ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿಯ ಟಿ.ಪಿ.ಒ. ಆದ ಶ್ರೀ ಬಿ.ಬಿ. ಗಾವಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾರ್ಗದರ್ಶನ ನೀಡಿದರು. ಕೆ.ಇ. ಲೋಕಪೂರ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಆರ್.ಎನ್. ನಾಯಕ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
​ವೇದಿಕೆಯಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಎಸ್.ಎನ್. ಹಿರೇಮಠ, ಜೆ.ಡಿ. ಪವಾರ, ಕಿರಣ ಕಳ್ಳಿಮಠ, ಮಹೇಶ ಮಾಂಗ, ವಿಶ್ವನಾಥ ಮೋರೆ, ಕಿರಣಗ ಗೆಜ್ಜಿ ಸೇರಿದಂತೆ ಇತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
​​ಕಾರ್ಯಕ್ರಮದಲ್ಲಿ ಕಾಲೇಜಿನ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡು ಮತದಾರರ ಜಾಗೃತಿಯ ಪ್ರತಿಜ್ಞೆ ಸ್ವೀಕರಿಸಿದರು. ಎಸ್.ವಿ.ಇ.ಇ.ಪಿ. (SVEEP) ಚಟುವಟಿಕೆಗಳಡಿ ಹಮ್ಮಿಕೊಂಡಿದ್ದ ಈ ವಿಶೇಷ ಅಭಿಯಾನವು ಯಶಸ್ವಿಯಾಗಿ ಸಂಪನ್ನಗೊಂಡಿತು.
    user_Dr RAMANNA.S.D
    Dr RAMANNA.S.D
    Journalist ಅಥಣಿ, ಬೆಳಗಾವಿ, ಕರ್ನಾಟಕ•
    51 min ago
  • ವಿಶಾಲ ಕೆರೆ, ಪ್ರಶಾಂತ ವಾತಾವರಣ. ಮನಸ್ಸಿಗೆ ಮುದ ನೀಡುವ ಸಂಗೀತ ವಾದ್ಯಗಳ ನಿನಾದ. ಕತ್ತಲೆ ರಂಗು ತುಂಬಿದ ಲೇಸರ್‌ ಶೋ. ಕಗ್ಗತ್ತಲ ಬಾನಲ್ಲಿ ಕಲ್ಯಾಣ ಕರ್ನಾಟಕ ವೈಶಿಷ್ಟ್ಯ ಸ್ಫುಟವಾಗಿ ಪರಿಚಯಿಸಿದ ಡ್ರೋನ್ ಶೋ. ನಭದಲ್ಲಿ ಚಿತ್ತಾರ ಮೂಡಿಸಿದ ಪಟಾಕಿಗಳು... ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕಲಬುರಗಿಯ ನಗರದ ಶರಣಬಸವೇಶ್ವರ ಅಪ್ಪ ಕೆರೆ ಆವರಣದಲ್ಲಿ ಬುಧವಾರ ರಾತ್ರಿ ಕಂಡ ದೃಶ್ಯಗಳಿವು. #ಕಲಬುರಗಿ #ಲೇಸರ್‌ಶೋ #ಕಲ್ಯಾಣಕರ್ನಾಟಕ #ಉತ್ಸವ #ಸಿಎಂ #ಡಿಕೆಶಿವಕುಮಾರ್ #Kalburagi #lasershow #Prajavani #PrajavaniVideo
    1
    ವಿಶಾಲ ಕೆರೆ, ಪ್ರಶಾಂತ ವಾತಾವರಣ. ಮನಸ್ಸಿಗೆ ಮುದ ನೀಡುವ ಸಂಗೀತ ವಾದ್ಯಗಳ ನಿನಾದ. ಕತ್ತಲೆ ರಂಗು ತುಂಬಿದ ಲೇಸರ್‌ ಶೋ. ಕಗ್ಗತ್ತಲ ಬಾನಲ್ಲಿ ಕಲ್ಯಾಣ ಕರ್ನಾಟಕ ವೈಶಿಷ್ಟ್ಯ ಸ್ಫುಟವಾಗಿ ಪರಿಚಯಿಸಿದ ಡ್ರೋನ್ ಶೋ. ನಭದಲ್ಲಿ ಚಿತ್ತಾರ ಮೂಡಿಸಿದ ಪಟಾಕಿಗಳು...
ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಕಲಬುರಗಿಯ ನಗರದ ಶರಣಬಸವೇಶ್ವರ ಅಪ್ಪ ಕೆರೆ ಆವರಣದಲ್ಲಿ ಬುಧವಾರ ರಾತ್ರಿ ಕಂಡ ದೃಶ್ಯಗಳಿವು.
#ಕಲಬುರಗಿ #ಲೇಸರ್‌ಶೋ #ಕಲ್ಯಾಣಕರ್ನಾಟಕ #ಉತ್ಸವ #ಸಿಎಂ #ಡಿಕೆಶಿವಕುಮಾರ್   
#Kalburagi #lasershow  #Prajavani #PrajavaniVideo
    user_Shiva Belagavi
    Shiva Belagavi
    Photographer ಅಥಣಿ, ಬೆಳಗಾವಿ, ಕರ್ನಾಟಕ•
    6 hrs ago
  • ರಬಕವಿ-ಬನಹಟ್ಟಿ: ಇಂದಿರಾ ಕ್ಯಾಂಟೀನ್ ಉದ್ಘಾಟನಾ ವೇಳೆ ವಾಗ್ವಾದ ಸಚಿವರ ಸಮ್ಮುಖದಲ್ಲೇ ಪರಸ್ಪರ ವಾಗ್ದಾಳಿ ರಬಕವಿ-ಬನಹಟ್ಟಿ ತಾಲೂಕು ಬನಹಟ್ಟಿ ನಗರದ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ, ಸಚಿವರ ಸಮ್ಮುಖದಲ್ಲೇ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಕಾರ್ಯಕ್ರಮದ ವೇಳೆ ನಡೆದ ಈ ವಾಗ್ವಾದದಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಾಗ್ವಾದಕ್ಕೆ ಕಾರಣವೇನು? ಯಾವ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆಯಿತು ಸಚಿವರ ಸಮ್ಮುಖದಲ್ಲೇ ಈ ಬೆಳವಣಿಗೆಗೆ ಕಾರಣವೇನು
    1
    ರಬಕವಿ-ಬನಹಟ್ಟಿ: ಇಂದಿರಾ ಕ್ಯಾಂಟೀನ್ ಉದ್ಘಾಟನಾ ವೇಳೆ ವಾಗ್ವಾದ ಸಚಿವರ ಸಮ್ಮುಖದಲ್ಲೇ ಪರಸ್ಪರ ವಾಗ್ದಾಳಿ
ರಬಕವಿ-ಬನಹಟ್ಟಿ ತಾಲೂಕು
ಬನಹಟ್ಟಿ ನಗರದ ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ, ಸಚಿವರ ಸಮ್ಮುಖದಲ್ಲೇ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ  ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಕಾರ್ಯಕ್ರಮದ ವೇಳೆ ನಡೆದ ಈ ವಾಗ್ವಾದದಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ವಾಗ್ವಾದಕ್ಕೆ ಕಾರಣವೇನು?
ಯಾವ ವಿಚಾರಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆಯಿತು ಸಚಿವರ ಸಮ್ಮುಖದಲ್ಲೇ ಈ ಬೆಳವಣಿಗೆಗೆ ಕಾರಣವೇನು
    user_Shanur Kullolli
    Shanur Kullolli
    ರಬಕವಿ ಬನಹಟ್ಟಿ, ಬಾಗಲಕೋಟೆ, ಕರ್ನಾಟಕ•
    8 hrs ago
  • ರನ್ನ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ಆರ್.ಬಿ. ತಿಮ್ಮಾಪುರ ಮುಧೋಳ : ನಗರದ ಕವಿಚಕ್ರವರ್ತಿ ರನ್ನ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಕ್ರೀಡಾಕೂಟ ಹಾಗೂ ಸಿ.ಎಂ. ಕಪ್ 2026 ಕಾರ್ಯಕ್ರಮವನ್ನು ಶಾಸಕ ಆರ್.ಬಿ. ತಿಮ್ಮಾಪುರ ಅವರು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಬೆಳಗಲಿ ಪಪಂ ಅಧ್ಯಕ್ಷೆ ರೂಪಾ ಹೊಸಟ್ಟಿ, ಬಿಇಒ ಎಸ್.ಎಂ. ಮುಲ್ಲಾ, ವೆಂಕಣ್ಣ ಗಿಡ್ಡಪ್ಪನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತುಕಾರಾಮ ಲಮಾಣಿ ಸೇರಿದಂತೆ ಇತರರು ಇದ್ದರು.
    1
    ರನ್ನ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟ ಉದ್ಘಾಟಿಸಿದ ಶಾಸಕ ಆರ್.ಬಿ. ತಿಮ್ಮಾಪುರ
ಮುಧೋಳ : ನಗರದ ಕವಿಚಕ್ರವರ್ತಿ ರನ್ನ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ದಸರಾ ಕ್ರೀಡಾಕೂಟ ಹಾಗೂ ಸಿ.ಎಂ. ಕಪ್ 2026 ಕಾರ್ಯಕ್ರಮವನ್ನು ಶಾಸಕ ಆರ್.ಬಿ. ತಿಮ್ಮಾಪುರ ಅವರು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ವೇಳೆ ಬೆಳಗಲಿ ಪಪಂ ಅಧ್ಯಕ್ಷೆ ರೂಪಾ ಹೊಸಟ್ಟಿ, ಬಿಇಒ ಎಸ್.ಎಂ. ಮುಲ್ಲಾ, ವೆಂಕಣ್ಣ ಗಿಡ್ಡಪ್ಪನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತುಕಾರಾಮ ಲಮಾಣಿ ಸೇರಿದಂತೆ ಇತರರು ಇದ್ದರು.
    user_ಗೋವಿಂದಪ್ಪ ತಳವಾರ
    ಗೋವಿಂದಪ್ಪ ತಳವಾರ
    ಮುಧೋಳ, ಬಾಗಲಕೋಟೆ, ಕರ್ನಾಟಕ•
    1 hr ago
  • ಯರಗಟ್ಟಿ-ಸವದತ್ತಿ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಬಿಜೆಪಿ ಆಗ್ರಹ ಯರಗಟ್ಟಿ-ಸವದತ್ತಿ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಬಿಜೆಪಿ ಆಗ್ರಹ ಯರಗಟ್ಟಿ: ಅವಳಿ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಬಿಜೆಪಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ‘ತಾಲ್ಲೂಕಿನಲ್ಲಿ ಶೇ 25ಕ್ಕಿಂತ ಹೆಚ್ಚು ಪ್ರಮಾಣದ ಮಳೆ ಕೊರತೆಯಾಗಿದೆ. ಇದರಿಂದ ಬೆಳೆಗಳು ಸಂಪೂರ್ಣವಾಗಿ ಒಣಗಿದ್ದು, ಕಾಳು ಕಟ್ಟುವ ಹಂತದಲ್ಲಿದ್ದ ಹೆಸರು, ಉದ್ದು, ಗೋವಿನಜೋಳ ನೆಲ ಕಚ್ಚಿದೆ. ಅಲ್ಲದೆ ಶೇಂಗಾ, ಸೋಯಾ, ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳು ಸಹ ಸಂಪೂರ್ಣವಾಗಿ ಹಾಳಾಗಿವೆ’ ಎಂದು ಹೇಳಿದರು. ‘ಬಿತ್ತನೆ, ಕಳೆ ಸೇರಿದಂತೆ ಬೆಳೆಗೆ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದು, ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಅರಿಯಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ತಾಲ್ಲೂಕುಗಳನ್ನು ಬರ ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮಂಡಳ ಉಪಾಧ್ಯಕ್ಷರಾದ ಮಹಾಂತೇಶ ಗೋಡಿ ಹಾಗೂ ಸಂಜುಕುಮಾರ ನವಲಗುಂದ ಮಾತನಾಡಿ, ‘ರೈತರ ಸಂಕಷ್ಟ ಪರಿಗಣಿಸಿ ವೈಜ್ಞಾನಿಕವಾಗಿ ಬೆಳೆ ಹಾನಿಯ ಸಮೀಕ್ಷೆ ನಡೆಸುವ ಮೂಲಕ ಖಚಿತಪಡಿಸಿಕೊಳ್ಳಬೇಕು. ಗೋ ಶಾಲೆ ತೆರೆಯಬೇಕು ಮತ್ತು ಕುಡಿಯುವ ನೀರು, ಮೇವಿನ ಕೊರತೆಯಾಗದಂತೆ ತೀವ್ರ ನಿಗಾ ವಹಿಸಬೇಕು’ ಎಂದು ಆಗ್ರಹಿಸಿದರು. ಪಟ್ಟಣದ ಮಹಾಂತ ದುರದುಂಡೇಶ್ವರ ಮಠದಿಂದ ಹೊರಟ ಪ್ರತಿಭಟನಾ ಮೆರವಣೆಗೆ ಬಾಗವಾ ಚೌಕ್, ಗಾಂಧಿ ವೃತದ ಮೂಲಕ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಟೈಯರಗೆ ಮತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಕೃಷಿ ಅಧಿಕಾರಿ ಶಿವಪ್ರಕಾಶ ಪಾಟೀಲ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರಾಮದುರ್ಗ ಮಂಡಳ ಅಧ್ಯಕ್ಷ ಡಾ. ಕೆ. ವ್ಹಿ. ಪಾಟೀಲ, ಬಿಜೆಪಿ ಮಂಡಳ ಉಪಾಧ್ಯಕ್ಷರಾದ ಮಹಾಂತೇಶ ಗೋಡಿ, ಸಂಜುಕುಮಾರ ನವಲಗುಂದ, ತಾ. ಪಂ‌ ಮಾಜಿ ಅಧ್ಯಕ್ಷ ಪರ್ವತಗೌಡ ಪಾಟೀಲ, ಈರಣ್ಣಾ ಚಂದರಗಿ, ವೆಂಕಟೇಶ ದೇವರಡ್ಡಿ, ಗೌಡಪ್ಪ ಸವದತ್ತಿ, ವೆಂಕಣ್ಣಾ ಹುರಕನ್ನವರ, ಚೇತನ ಜಕಾತಿ ಕೃಷ್ಣಮೂರ್ತಿ ತೋರಗಲ್ಲ, ಮಹಾಂತೇಶ ಚೆನ್ನಗೌಡರ, ಆನಂದ ಅತ್ತೂಗೋಳ, ಮಹಾದೇವ ಮುರಗೋಡ, ಈರಣ್ಣಾ ವೀರಶೆಟ್ಟಿ, ಆನಂದ ಬಾಗೋಡಿ, ಸದಾನಂದ ಪಾಟೀಲ, ಕುಮಾರ ಹಿರೇಮಠ, ಬಸವರಾಜ ಕಟ್ಟಿಮನಿ, ಶಿವಾನಂದ ಪಟ್ಟಣಶೆಟ್ಟಿ, ಚಂದ್ರಪ್ಪ ಹೊಸಮನಿ, ಪಂಚು ಪಂಚನ್ನವರ, ಶಂಕರ ದಂಡೈನ್ನವರ, ಚಂದ್ರಶೇಖರ ಸವದತ್ತಿ, ಮೈತ್ರಾ ಹೊಂಗಲ, ಲಕ್ಷ್ಮೀ ಪಾಟೀಲ, ಕಸ್ತೂರಿ ಹೊಸೂರ, ಸುಜಾತ ಬೆನಕಟ್ಟಿ, ವಾಜಿರ್ಬಿ ಚೈಪ್ತಿ, ಸಿಕ್ಕುಬಾಯಿ ಕುಂಬಾರ ಸೇರಿದಂತೆ ಅನೇಕರು ಇದ್ದರು.
    1
    ಯರಗಟ್ಟಿ-ಸವದತ್ತಿ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಬಿಜೆಪಿ ಆಗ್ರಹ
ಯರಗಟ್ಟಿ-ಸವದತ್ತಿ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಬಿಜೆಪಿ ಆಗ್ರಹ
ಯರಗಟ್ಟಿ: ಅವಳಿ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಬಿಜೆಪಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ಮಂಡಳ ಅಧ್ಯಕ್ಷ ವಿರೂಪಾಕ್ಷ ಮಾಮನಿ ಮಾತನಾಡಿ, ‘ತಾಲ್ಲೂಕಿನಲ್ಲಿ ಶೇ 25ಕ್ಕಿಂತ ಹೆಚ್ಚು ಪ್ರಮಾಣದ ಮಳೆ ಕೊರತೆಯಾಗಿದೆ. ಇದರಿಂದ ಬೆಳೆಗಳು ಸಂಪೂರ್ಣವಾಗಿ ಒಣಗಿದ್ದು, ಕಾಳು ಕಟ್ಟುವ ಹಂತದಲ್ಲಿದ್ದ ಹೆಸರು, ಉದ್ದು, ಗೋವಿನಜೋಳ ನೆಲ ಕಚ್ಚಿದೆ. ಅಲ್ಲದೆ ಶೇಂಗಾ, ಸೋಯಾ, ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳು ಸಹ ಸಂಪೂರ್ಣವಾಗಿ ಹಾಳಾಗಿವೆ’ ಎಂದು ಹೇಳಿದರು.
‘ಬಿತ್ತನೆ, ಕಳೆ ಸೇರಿದಂತೆ ಬೆಳೆಗೆ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದು, ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಬೆಳೆ ಹಾನಿಯ ವಾಸ್ತವ ಸ್ಥಿತಿಯನ್ನು ಅರಿಯಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ತಾಲ್ಲೂಕುಗಳನ್ನು ಬರ ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ  ಮಂಡಳ ಉಪಾಧ್ಯಕ್ಷರಾದ ಮಹಾಂತೇಶ ಗೋಡಿ ಹಾಗೂ ಸಂಜುಕುಮಾರ ನವಲಗುಂದ ಮಾತನಾಡಿ, ‘ರೈತರ ಸಂಕಷ್ಟ ಪರಿಗಣಿಸಿ ವೈಜ್ಞಾನಿಕವಾಗಿ ಬೆಳೆ ಹಾನಿಯ ಸಮೀಕ್ಷೆ ನಡೆಸುವ ಮೂಲಕ ಖಚಿತಪಡಿಸಿಕೊಳ್ಳಬೇಕು. ಗೋ ಶಾಲೆ ತೆರೆಯಬೇಕು ಮತ್ತು ಕುಡಿಯುವ ನೀರು, ಮೇವಿನ ಕೊರತೆಯಾಗದಂತೆ ತೀವ್ರ ನಿಗಾ ವಹಿಸಬೇಕು’ ಎಂದು ಆಗ್ರಹಿಸಿದರು.
ಪಟ್ಟಣದ ಮಹಾಂತ ದುರದುಂಡೇಶ್ವರ ಮಠದಿಂದ ಹೊರಟ ಪ್ರತಿಭಟನಾ ಮೆರವಣೆಗೆ ಬಾಗವಾ ಚೌಕ್, ಗಾಂಧಿ ವೃತದ ಮೂಲಕ  ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಟೈಯರಗೆ ಮತ್ತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಿತ್ರಕ್ಕೆ ಬೆಂಕಿ ಹಚ್ಚಿ  ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಕೃಷಿ ಅಧಿಕಾರಿ ಶಿವಪ್ರಕಾಶ ಪಾಟೀಲ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಮದುರ್ಗ ಮಂಡಳ ಅಧ್ಯಕ್ಷ ಡಾ. ಕೆ. ವ್ಹಿ. ಪಾಟೀಲ, ಬಿಜೆಪಿ ಮಂಡಳ ಉಪಾಧ್ಯಕ್ಷರಾದ  ಮಹಾಂತೇಶ ಗೋಡಿ, ಸಂಜುಕುಮಾರ ನವಲಗುಂದ, ತಾ. ಪಂ‌ ಮಾಜಿ ಅಧ್ಯಕ್ಷ ಪರ್ವತಗೌಡ ಪಾಟೀಲ, ಈರಣ್ಣಾ ಚಂದರಗಿ, ವೆಂಕಟೇಶ ದೇವರಡ್ಡಿ, ಗೌಡಪ್ಪ ಸವದತ್ತಿ, ವೆಂಕಣ್ಣಾ ಹುರಕನ್ನವರ, ಚೇತನ ಜಕಾತಿ ಕೃಷ್ಣಮೂರ್ತಿ ತೋರಗಲ್ಲ, ಮಹಾಂತೇಶ ಚೆನ್ನಗೌಡರ, ಆನಂದ ಅತ್ತೂಗೋಳ,  ಮಹಾದೇವ ಮುರಗೋಡ, ಈರಣ್ಣಾ ವೀರಶೆಟ್ಟಿ, ಆನಂದ ಬಾಗೋಡಿ, ಸದಾನಂದ ಪಾಟೀಲ, ಕುಮಾರ ಹಿರೇಮಠ, ಬಸವರಾಜ ಕಟ್ಟಿಮನಿ, ಶಿವಾನಂದ ಪಟ್ಟಣಶೆಟ್ಟಿ, ಚಂದ್ರಪ್ಪ ಹೊಸಮನಿ, ಪಂಚು ಪಂಚನ್ನವರ, ಶಂಕರ ದಂಡೈನ್ನವರ, ಚಂದ್ರಶೇಖರ ಸವದತ್ತಿ, ಮೈತ್ರಾ  ಹೊಂಗಲ,  ಲಕ್ಷ್ಮೀ ಪಾಟೀಲ, ಕಸ್ತೂರಿ ಹೊಸೂರ, ಸುಜಾತ ಬೆನಕಟ್ಟಿ, ವಾಜಿರ್ಬಿ ಚೈಪ್ತಿ, ಸಿಕ್ಕುಬಾಯಿ ಕುಂಬಾರ ಸೇರಿದಂತೆ ಅನೇಕರು ಇದ್ದರು.
    user_Manohar megeri
    Manohar megeri
    Local News Reporter ಗೋಕಾಕ, ಬೆಳಗಾವಿ, ಕರ್ನಾಟಕ•
    2 hrs ago
  • Dad and kids challenge!  #riyagowda @riyagowda #riyamshee_yogeshagowda #fathersonchallenge #fatheranddaughterchallenge Like Nastya and her Dad  #dadchallenge #dadandson #daddaughterchallenge #familychallenge #dadlife Multi DO & Ryan's World  The Lift/Balance Challenge Humorous Routines #DadSonChallenge Dad and kids challenge!  #riyagowda @riyagowda #riyamshee_yogeshagowda #fathersonchallenge #fatheranddaughterchallenge Like Nastya and her Dad #dadchallenge #dadandson #daddaughterchallenge #familychallenge #dadlife Multi DO & Ryan's World  The Lift/Balance Challenge Humorous Routines #DadSonChallenge
    3
    Dad and kids challenge! 

#riyagowda @riyagowda

#riyamshee_yogeshagowda

#fathersonchallenge #fatheranddaughterchallenge

Like Nastya and her Dad

 #dadchallenge #dadandson #daddaughterchallenge #familychallenge #dadlife

Multi DO & Ryan's World 

The Lift/Balance Challenge

Humorous Routines

#DadSonChallenge


Dad and kids challenge! 
#riyagowda @riyagowda
#riyamshee_yogeshagowda
#fathersonchallenge #fatheranddaughterchallenge
Like Nastya and her Dad
#dadchallenge #dadandson #daddaughterchallenge #familychallenge #dadlife
Multi DO & Ryan's World 
The Lift/Balance Challenge
Humorous Routines
#DadSonChallenge
    user_Chethana Muniswamygowda
    Chethana Muniswamygowda
    Press advisory Tikota, Vijayapura•
    3 hrs ago
  • 30 ವರ್ಷಗಳಾದರೂ ಹಕ್ಕುಪತ್ರ ನೀಡಿರುವುದನ್ನು ಖಂಡಿಸಿ , ರೈತ ಸಂಘ ಪ್ರತಿಭಟನೆ.. ಕೊಲ್ಹಾರ: ಆಲಮಟ್ಟಿ ಜಲಾಶಯಕ್ಕಾಗಿ ಮನೆ, ಮಠ ಹಾಗೂ ಜಮೀನು ಕಳೆದುಕೊಂಡ ಮುಳುಗಡೆ ಸಂತ್ರಸ್ತರಿಗೆ 30 ವರ್ಷಗಳಾದರೂ ಹಕ್ಕುಪತ್ರ ನೀಡದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಕೊಲ್ಹಾರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಶಶಿಕಾಂತ ಗುರೂಜಿ ಹಾಗೂ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡರು. ಹಕ್ಕುಪತ್ರ ವಿತರಣೆ, ಮುಳವಾಡ ಏತ ನೀರಾವರಿ ಮೂಲಕ ಕೆರೆಗಳ ಭರ್ತಿ, ಕುಡಿಯುವ ನೀರಿಗೆ 20 ಟಿಎಂಸಿ ನೀರು ಕಾಯ್ದಿರಿಸುವುದು ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ರೈತರು ಆಗ್ರಹಿಸಿದರು. ಅಧಿಕಾರಿಗಳು ಬಾಕಿ ಬೇಡಿಕೆಗಳನ್ನು ನಾಲ್ಕು ತಿಂಗಳಲ್ಲಿ ಬಗೆಹರಿಸುವುದಾಗಿ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.
    4
    30 ವರ್ಷಗಳಾದರೂ ಹಕ್ಕುಪತ್ರ ನೀಡಿರುವುದನ್ನು ಖಂಡಿಸಿ , ರೈತ ಸಂಘ ಪ್ರತಿಭಟನೆ..
ಕೊಲ್ಹಾರ: ಆಲಮಟ್ಟಿ ಜಲಾಶಯಕ್ಕಾಗಿ ಮನೆ, ಮಠ ಹಾಗೂ ಜಮೀನು ಕಳೆದುಕೊಂಡ ಮುಳುಗಡೆ ಸಂತ್ರಸ್ತರಿಗೆ 30 ವರ್ಷಗಳಾದರೂ ಹಕ್ಕುಪತ್ರ ನೀಡದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರ ಕೊಲ್ಹಾರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಶಶಿಕಾಂತ ಗುರೂಜಿ ಹಾಗೂ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡರು.
ಹಕ್ಕುಪತ್ರ ವಿತರಣೆ, ಮುಳವಾಡ ಏತ ನೀರಾವರಿ ಮೂಲಕ ಕೆರೆಗಳ ಭರ್ತಿ, ಕುಡಿಯುವ ನೀರಿಗೆ 20 ಟಿಎಂಸಿ ನೀರು ಕಾಯ್ದಿರಿಸುವುದು ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ರೈತರು ಆಗ್ರಹಿಸಿದರು. ಅಧಿಕಾರಿಗಳು ಬಾಕಿ ಬೇಡಿಕೆಗಳನ್ನು ನಾಲ್ಕು ತಿಂಗಳಲ್ಲಿ ಬಗೆಹರಿಸುವುದಾಗಿ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.
    user_S L TEGGI
    S L TEGGI
    Voice of people ಕೊಲ್ಹಾರ, ವಿಜಯಪುರ, ಕರ್ನಾಟಕ•
    9 hrs ago
  • ಕಿತ್ತೂರು ಹೋರಾಟದಲ್ಲಿ ಚೆನ್ನಮ್ಮಳ ತ್ಯಾಗ, ದೇಶ ಪ್ರೇಮ ಅಪಾರ :ಸಂಶೋಧಕ ಯ. ರು. ಪಾಟೀಲ ಅಥಣಿ :ಕಿತ್ತೂರು ಹೋರಾಟದಲ್ಲಿ ತ್ಯಾಗ, ದೇಶ ಪ್ರೇಮ ಅಪಾರವಾಗಿತ್ತು. ಕಿತ್ತೂರು ಸೈನಿಕರು ಭಂಟರು,ವೀರರು, ಪ್ರಾಣದ ಹಂಗು ತೊರೆದು ಹೋರಾಟ ಮಾಡುವವರಾಗಿದ್ದರು.ವೇತನಕ್ಕಾಗಿ ಕೆಲಸ ಮಾಡುವವರಾಗಿರಲಿಲ್ಲ. ದೇಶ ಪ್ರೇಮಿಗಳಾಗಿದ್ದರು. ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಸವಾಯಿ ಮಲ್ಲಸರ್ಜನಂತಹ ಅನೇಕ ವೀರರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ ಎಂದು ಬೆಳಗಾವಿಯ ಸಂಶೋಧಕ ವಾಗ್ಮಿ  ಯ. ರು. ಪಾಟೀಲ ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿಯ ಕನ್ನಡ ವಿಭಾಗ ಹಾಗೂ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಹಯೋಗದೊಂದಿಗೆ  ಕಾಲೇಜಿನ ಸಭಾಂಗಣದಲ್ಲಿ 'ಕಿತ್ತೂರು ಸಂಸ್ಥಾನ ಮತ್ತು ರಾಣಿ ಚನ್ನಮ್ಮ ಅವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ  ಸಿಂಹಾಸನಕ್ಕಾಗಿ ತಮ್ಮ ಮಗನಿಗೆ ಭೈರವ ಕಂಕಣ ಕಟ್ಟಿದ ಮಹಾನ್ ಹೋರಾಟಗಾರ್ತಿ ಕಿತ್ತೂರು ಚೆನ್ನಮ್ಮ. ಐತಿಹಾಸಿಕ ಮಾಹಿತಿಗಳು ಮತ್ತು ಹೊಸ ಸಾಹಿತ್ಯ ಕೃತಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಪ್ರಭಾರ ​ಪ್ರಾಚಾರ್ಯರಾದ ಪ್ರೊ. ಶಾಂತಿನಾಥ ಬಳೋಜ ಅವರು ಕಾರ್ಯಕ್ರಮ ಉದ್ಘಾಟಿಸಿ  ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪ್ರಥಮ ಹೋರಾಟಗಾರ್ತಿ ಚೆನ್ನಮ್ಮ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನ ಹೊಂದಿದ್ದಾರೆ ಎಂದು ಸ್ಮರಿಸಿದರು. ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ  ಯ. ರು. ಪಾಟೀಲ  ಅವರು "ಕಿತ್ತೂರು ಸಂಸ್ಥಾನದ ಮೇಲೆ ಇತ್ತೀಚಿಗೆ ಬಂದ ಸಾಹಿತ್ಯ ಕೃತಿಗಳ ಅವಲೋಕನ" ಕುರಿತು  ವಿಶೇಷ ಉಪನ್ಯಾಸ ನೀಡಿದರು. ಬೆಳಗಾವಿ ಕಿತ್ತೂರು ​ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈ ಕಾರ್ಯಕ್ರಮದ ಮೂಲಕ ಕಿತ್ತೂರು ಸಂಸ್ಥಾನದ ಪರಿಚಯ ಅವಳ ಶೂರತನ, ವೀರತನ, ಧೈರ್ಯ ನಮಗೆ ಮತ್ತೆ ಮತ್ತೆ ಪುಟಿದೇಳಲು ಹುಮ್ಮಸ್ಸು ತುಂಬುತ್ತೆ.ಕಿತ್ತೂರು ಚೆನ್ನಮ್ಮನ ಕುರಿತು ನಾವೆಲ್ಲರೂ ತಿಳಿದುಕೊಳ್ಳಬೇಕು.  ದೇಶ, ದೇಶಪ್ರೇಮ, ಸ್ವಾಭಿಮಾನ, ನಮ್ಮ ನರನಾಡಿಗಳಲ್ಲಿ ರಕ್ತ ಸಂಚಾರವಾಗುತ್ತದೆ. ತ್ಯಾಖರೇ ಎಂಬ ಇಂಗ್ಲಿಷ್ ಅಧಿಕಾರಿ ಹತ್ಯೆ ಆಗುತ್ತದೆ. ಸಹಾಯಕ ಸೈನ್ಯ ಪದ್ಧತಿ ಮೂಲಕ ಕಿತ್ತೂರಿನ ಮೇಲೆ ದಾಳಿ ಮಾಡುತ್ತಾರೆ. ಬ್ರಿಟಿಷರಿಗೆ ನಮ್ಮ ದುಷ್ಟ ಜನರ ಸಹಕಾರದಿಂದ ಮೂರನೇ ದಾಳಿ ಮೂಲಕ ಅರಮನೆ ಧ್ವಂಸ  ಆಗುತ್ತದೆ.ಆದರೆ ಇಂದು ಚೆನ್ನಮ್ಮಳಿಗೆ ಸಾಕಷ್ಟು ಪ್ರಚಾರ ಸಿಗದೇ ಇರೋದಕ್ಕೆ ನಮ್ಮ ವ್ಯವಸ್ಥೆ ನಿರ್ಲಕ್ಷ ಕಾರಣ ಎಂದು ಹೇಳಿದರು. ಈ ವೇಳೆ ಕನ್ನಡ ವಿಭಾಗದ ಮುಖ್ಯಸ್ಥರಾದ ಸಂತೋಷ ಉಂಡಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತಿಹಾಸ ವಿಭಾಗದ ಬಸಯ್ಯ ಮಠಪತಿ ಅವರು ಉಪಸ್ಥಿತರಿದ್ದರು. ಈ ವೇಳೆ ಡಾ ವಿಜಯ ಕಾಂಬಳೆ, ಡಾ ಪದ್ಮಶ್ರೀ, ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ, ಪ್ರೋ ಪಿ ಎಲ್ ಪೂಜಾರಿ,ಡಾ. ಶಿವಾನಂದ ಹೆಳವರ,ಡಾ. ಆರ್ ಜಿ ಗೊಂಧಳೆ,ಡಾ. ಎ ಜಿ ಮಾದರ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    4
    ಕಿತ್ತೂರು ಹೋರಾಟದಲ್ಲಿ ಚೆನ್ನಮ್ಮಳ ತ್ಯಾಗ, ದೇಶ ಪ್ರೇಮ ಅಪಾರ :ಸಂಶೋಧಕ ಯ. ರು. ಪಾಟೀಲ
ಅಥಣಿ :ಕಿತ್ತೂರು ಹೋರಾಟದಲ್ಲಿ ತ್ಯಾಗ, ದೇಶ ಪ್ರೇಮ ಅಪಾರವಾಗಿತ್ತು. ಕಿತ್ತೂರು ಸೈನಿಕರು ಭಂಟರು,ವೀರರು, ಪ್ರಾಣದ ಹಂಗು ತೊರೆದು ಹೋರಾಟ ಮಾಡುವವರಾಗಿದ್ದರು.ವೇತನಕ್ಕಾಗಿ ಕೆಲಸ ಮಾಡುವವರಾಗಿರಲಿಲ್ಲ. ದೇಶ ಪ್ರೇಮಿಗಳಾಗಿದ್ದರು. ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ, ಸವಾಯಿ ಮಲ್ಲಸರ್ಜನಂತಹ ಅನೇಕ ವೀರರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಾರೆ ಎಂದು ಬೆಳಗಾವಿಯ ಸಂಶೋಧಕ ವಾಗ್ಮಿ  ಯ. ರು. ಪಾಟೀಲ ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥಣಿಯ ಕನ್ನಡ ವಿಭಾಗ ಹಾಗೂ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠದ ಸಹಯೋಗದೊಂದಿಗೆ  ಕಾಲೇಜಿನ ಸಭಾಂಗಣದಲ್ಲಿ 'ಕಿತ್ತೂರು ಸಂಸ್ಥಾನ ಮತ್ತು ರಾಣಿ ಚನ್ನಮ್ಮ ಅವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ 
ಸಿಂಹಾಸನಕ್ಕಾಗಿ ತಮ್ಮ ಮಗನಿಗೆ ಭೈರವ ಕಂಕಣ ಕಟ್ಟಿದ ಮಹಾನ್ ಹೋರಾಟಗಾರ್ತಿ ಕಿತ್ತೂರು ಚೆನ್ನಮ್ಮ. ಐತಿಹಾಸಿಕ ಮಾಹಿತಿಗಳು ಮತ್ತು ಹೊಸ ಸಾಹಿತ್ಯ ಕೃತಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಪ್ರಭಾರ ​ಪ್ರಾಚಾರ್ಯರಾದ ಪ್ರೊ. ಶಾಂತಿನಾಥ ಬಳೋಜ ಅವರು ಕಾರ್ಯಕ್ರಮ ಉದ್ಘಾಟಿಸಿ  ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಪ್ರಥಮ ಹೋರಾಟಗಾರ್ತಿ ಚೆನ್ನಮ್ಮ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಸ್ಥಾನ ಹೊಂದಿದ್ದಾರೆ ಎಂದು ಸ್ಮರಿಸಿದರು. ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ  ಯ. ರು. ಪಾಟೀಲ  ಅವರು "ಕಿತ್ತೂರು ಸಂಸ್ಥಾನದ ಮೇಲೆ ಇತ್ತೀಚಿಗೆ ಬಂದ ಸಾಹಿತ್ಯ ಕೃತಿಗಳ ಅವಲೋಕನ" ಕುರಿತು  ವಿಶೇಷ ಉಪನ್ಯಾಸ ನೀಡಿದರು.
ಬೆಳಗಾವಿ ಕಿತ್ತೂರು ​ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈ ಕಾರ್ಯಕ್ರಮದ ಮೂಲಕ ಕಿತ್ತೂರು ಸಂಸ್ಥಾನದ ಪರಿಚಯ ಅವಳ ಶೂರತನ, ವೀರತನ, ಧೈರ್ಯ ನಮಗೆ ಮತ್ತೆ ಮತ್ತೆ ಪುಟಿದೇಳಲು ಹುಮ್ಮಸ್ಸು ತುಂಬುತ್ತೆ.ಕಿತ್ತೂರು ಚೆನ್ನಮ್ಮನ ಕುರಿತು ನಾವೆಲ್ಲರೂ ತಿಳಿದುಕೊಳ್ಳಬೇಕು.  ದೇಶ, ದೇಶಪ್ರೇಮ, ಸ್ವಾಭಿಮಾನ, ನಮ್ಮ ನರನಾಡಿಗಳಲ್ಲಿ ರಕ್ತ ಸಂಚಾರವಾಗುತ್ತದೆ. ತ್ಯಾಖರೇ ಎಂಬ ಇಂಗ್ಲಿಷ್ ಅಧಿಕಾರಿ ಹತ್ಯೆ ಆಗುತ್ತದೆ. ಸಹಾಯಕ ಸೈನ್ಯ ಪದ್ಧತಿ ಮೂಲಕ ಕಿತ್ತೂರಿನ ಮೇಲೆ ದಾಳಿ ಮಾಡುತ್ತಾರೆ. ಬ್ರಿಟಿಷರಿಗೆ ನಮ್ಮ ದುಷ್ಟ ಜನರ ಸಹಕಾರದಿಂದ ಮೂರನೇ ದಾಳಿ ಮೂಲಕ ಅರಮನೆ ಧ್ವಂಸ  ಆಗುತ್ತದೆ.ಆದರೆ ಇಂದು ಚೆನ್ನಮ್ಮಳಿಗೆ ಸಾಕಷ್ಟು ಪ್ರಚಾರ ಸಿಗದೇ ಇರೋದಕ್ಕೆ ನಮ್ಮ ವ್ಯವಸ್ಥೆ ನಿರ್ಲಕ್ಷ ಕಾರಣ ಎಂದು ಹೇಳಿದರು.
ಈ ವೇಳೆ ಕನ್ನಡ ವಿಭಾಗದ ಮುಖ್ಯಸ್ಥರಾದ ಸಂತೋಷ ಉಂಡಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇತಿಹಾಸ ವಿಭಾಗದ ಬಸಯ್ಯ ಮಠಪತಿ ಅವರು ಉಪಸ್ಥಿತರಿದ್ದರು. ಈ ವೇಳೆ ಡಾ ವಿಜಯ ಕಾಂಬಳೆ, ಡಾ ಪದ್ಮಶ್ರೀ, ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ, ಪ್ರೋ ಪಿ ಎಲ್ ಪೂಜಾರಿ,ಡಾ. ಶಿವಾನಂದ ಹೆಳವರ,ಡಾ. ಆರ್ ಜಿ ಗೊಂಧಳೆ,ಡಾ. ಎ ಜಿ ಮಾದರ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
    user_Dr RAMANNA.S.D
    Dr RAMANNA.S.D
    Journalist ಅಥಣಿ, ಬೆಳಗಾವಿ, ಕರ್ನಾಟಕ•
    2 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.