ರಾಜ್ಯದ ೧೦೧ ಬರಪೀಡಿತ ತಾಲೂಕು ಘೋಷಣೆ ಮಾಡಿದ ಸರ್ಕಾರ; ರೈತರಿಗೆ ಸಿಗಲಿರುವ ಪ್ರಮುಖ ನೆರವು ಪರಿಹಾರ ಪಡೆಯಿರಿ ! ಬೆಳೆ ಹಾನಿ ಪರಿಹಾರ ಶೇ.33ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವ ರೈತರಿಗೆ ನಿಯಮಾನುಸಾರ ಇನ್‌ಪುಟ್ ಸಬ್ಸಿಡಿ ರೂಪದಲ್ಲಿ ಪರಿಹಾರಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಕೃಷಿ ಸಾಲಕ್ಕೆ ಸಡಿಲಿಕೆ : ಬರಪೀಡಿತ ಪ್ರದೇಶಗಳಲ್ಲಿನ ಕೃಷಿ ಸಾಲಗಳ ಮರುಪಾವತಿಗೆ ನಿಯಮಾನುಸಾರ ತಾತ್ಕಾಲಿಕ ವಿರಾಮ (Moratorium) ನೀಡುವ ಹಾಗೂ ಬಾಕಿ ವಸೂಲಾತಿಗೆ ಸಡಿಲಿಕೆ ನೀಡುವ ಕ್ರಮ ಕೈಗೊಳ್ಳಲಾಗುತ್ತದೆ. ಬೆಳೆ ವಿಮೆ ಪರಿಹಾರ : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸಿರುವ ರೈತರಿಗೆ ಬೆಳೆ ನಷ್ಟದ ಆಧಾರದ ಮೇಲೆ ಮಧ್ಯಂತರ ಪರಿಹಾರ ಸೇರಿದಂತೆ ವಿಮಾ ಮೊತ್ತವನ್ನು ತ್ವರಿತವಾಗಿ ಒದಗಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಮೇವು ಮತ್ತು ಕುಡಿಯುವ ನೀರು : ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಅಗತ್ಯವಿರುವ ಕಡೆಗಳಲ್ಲಿ ಮೇವು ವಿತರಣೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುತ್ತದೆ. ನರೇಗಾ ಉದ್ಯೋಗ : ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಕೊರತೆಯಿಂದ ಜನರು ವಲಸೆ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚುವರಿ ಉದ್ಯೋಗದಿನಗಳನ್ನು ಒದಗಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಬರಪೀಡಿತ ತಾಲೂಕುಗಳ ಘೋಷಣೆಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ ರೈತರಿಗೆ ಬೆಳೆ ನಷ್ಟ ಪರಿಹಾರ, ಸಾಲ ಮರುಪಾವತಿ ಸಡಿಲಿಕೆ, ಬೆಳೆ ವಿಮೆ ಹಾಗೂ ಜಾನುವಾರುಗಳಿಗೆ ಮೇವು-ನೀರಿನಂತಹ ವಿವಿಧ ಪರಿಹಾರ ಕ್ರಮಗಳು ದೊರೆಯುವ ನಿರೀಕ್ಷೆ ಇದೆ.
ರಾಜ್ಯದ ೧೦೧ ಬರಪೀಡಿತ ತಾಲೂಕು ಘೋಷಣೆ ಮಾಡಿದ ಸರ್ಕಾರ; ರೈತರಿಗೆ ಸಿಗಲಿರುವ ಪ್ರಮುಖ ನೆರವು ಪರಿಹಾರ ಪಡೆಯಿರಿ ! ಬೆಳೆ ಹಾನಿ ಪರಿಹಾರ ಶೇ.33ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿರುವ ರೈತರಿಗೆ ನಿಯಮಾನುಸಾರ ಇನ್‌ಪುಟ್ ಸಬ್ಸಿಡಿ ರೂಪದಲ್ಲಿ ಪರಿಹಾರಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಕೃಷಿ ಸಾಲಕ್ಕೆ ಸಡಿಲಿಕೆ : ಬರಪೀಡಿತ ಪ್ರದೇಶಗಳಲ್ಲಿನ ಕೃಷಿ ಸಾಲಗಳ ಮರುಪಾವತಿಗೆ ನಿಯಮಾನುಸಾರ ತಾತ್ಕಾಲಿಕ ವಿರಾಮ (Moratorium) ನೀಡುವ ಹಾಗೂ ಬಾಕಿ ವಸೂಲಾತಿಗೆ ಸಡಿಲಿಕೆ ನೀಡುವ ಕ್ರಮ ಕೈಗೊಳ್ಳಲಾಗುತ್ತದೆ. ಬೆಳೆ ವಿಮೆ ಪರಿಹಾರ : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ವಿಮೆ ಮಾಡಿಸಿರುವ ರೈತರಿಗೆ ಬೆಳೆ ನಷ್ಟದ ಆಧಾರದ ಮೇಲೆ ಮಧ್ಯಂತರ ಪರಿಹಾರ ಸೇರಿದಂತೆ ವಿಮಾ ಮೊತ್ತವನ್ನು ತ್ವರಿತವಾಗಿ ಒದಗಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಮೇವು ಮತ್ತು ಕುಡಿಯುವ ನೀರು : ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಅಗತ್ಯವಿರುವ ಕಡೆಗಳಲ್ಲಿ ಮೇವು ವಿತರಣೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗುತ್ತದೆ. ನರೇಗಾ ಉದ್ಯೋಗ : ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗದ ಕೊರತೆಯಿಂದ ಜನರು ವಲಸೆ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚುವರಿ ಉದ್ಯೋಗದಿನಗಳನ್ನು ಒದಗಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಬರಪೀಡಿತ ತಾಲೂಕುಗಳ ಘೋಷಣೆಯಿಂದ ಚಿಕ್ಕನಾಯಕನಹಳ್ಳಿ ತಾಲೂಕಿನ ರೈತರಿಗೆ ಬೆಳೆ ನಷ್ಟ ಪರಿಹಾರ, ಸಾಲ ಮರುಪಾವತಿ ಸಡಿಲಿಕೆ, ಬೆಳೆ ವಿಮೆ ಹಾಗೂ ಜಾನುವಾರುಗಳಿಗೆ ಮೇವು-ನೀರಿನಂತಹ ವಿವಿಧ ಪರಿಹಾರ ಕ್ರಮಗಳು ದೊರೆಯುವ ನಿರೀಕ್ಷೆ ಇದೆ.
- ತವರು-ಕೊಟ್ಟ ಮನೆಗಳ ಬೆಸುಗೆಯ ಗೌರಿ ಹಬ್ಬ: ಹೆಣ್ಣುಮಕ್ಕಳ ಮೊಗದಲ್ಲಿ ಹರಸುವ ಸಂಭ್ರಮ ತವರು-ಕೊಟ್ಟ ಮನೆಗಳ ಬೆಸುಗೆಯ ಗೌರಿ ಹಬ್ಬ: ಹೆಣ್ಣುಮಕ್ಕಳ ಮೊಗದಲ್ಲಿ ಹರಸುವ ಸಂಭ್ರಮ --------------------- ಹುಳಿಯಾರು ಪೇಪರ್ ಕಿರಣ್ ನ್ಯೂಸ್: ಗೌರಿ ಹಬ್ಬವೆಂದರೆ ಸಾಕು ಭಾರತೀಯ ಪರಂಪರೆಯಲ್ಲಿ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ-ಸಂತೋಷ. ಅದರಲ್ಲೂ ಮದುವೆಯಾಗಿ ಹೊಸ ಮನೆಗೆ ತೆರಳಿರುವ ಹೆಣ್ಣು ಮಕ್ಕಳಿಗೆ ಈ ಹಬ್ಬದ ತವರಿನ ನೆನಪುಗಳು ದುಪ್ಪಟ್ಟು ಖುಷಿ ನೀಡುತ್ತವೆ. ವರ್ಷಕ್ಕೊಮ್ಮೆ ತವರು ಮನೆಯಿಂದ ತಂದೆ-ತಾಯಿ, ಅಣ್ಣ-ತಮ್ಮಂದಿರು ಪ್ರೀತಿಯಿಂದ ಬಂದು ಬಾಗಿನ ನೀಡುವುದು, ಅಥವಾ ಹೆಣ್ಣು ಮಗಳನ್ನು ತವರಿಗೆ ಕರೆತಂದು ಉಪಚರಿಸುವುದು ಯುಗಯುಗಗಳಿಂದ ಬೆಳೆದುಬಂದ ಭಾವನಾತ್ಮಕ ಪರಂಪರೆಯಾಗಿದೆ. ಬಡತನವಿರಲಿ, ಸಿರಿತನವಿರಲಿ; ಪ್ರತಿಯೊಂದು ಕುಟುಂಬವೂ ತಮ್ಮ ಶಕ್ತಿಸಾರವಾಗಿ ಗೌರಿ ಹಬ್ಬವನ್ನು ಆಚರಿಸಿ ಮಗಳ ಸಂತೋಷಕ್ಕಾಗಿ ಶ್ರಮಿಸುತ್ತದೆ. ಈ ಹಬ್ಬವು ಹುಟ್ಟಿದ ಮನೆ ಹಾಗೂ ಕೊಟ್ಟ ಮನೆಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಪವಿತ್ರ ಕೊಂಡಿಯಾಗಿದೆ. ಬಾಗಿನದ ಮಹತ್ವ ಮತ್ತು ಶ್ರೀಮಂತ ಸಂಸ್ಕೃತಿ ಗೌರಿ ಹಬ್ಬದಲ್ಲಿ ನೀಡುವ 'ಬಾಗಿನ' ಕೇವಲ ವಸ್ತುಗಳ ಮೂಟೆಯಲ್ಲ, ಅದು ತವರಿನ ಅಕ್ಷಯ ಪ್ರೀತಿ ಮತ್ತು ಆಶೀರ್ವಾದದ ಸಂಕೇತ. ಬಾಗಿನದ ಸಾಮಗ್ರಿಗಳು: ಮೊರದಲ್ಲಿ ಅರಿಶಿನ, ಕುಂಕುಮ, ಬಳೆ, ಕನ್ನಡಿ, ಬಾಚಣಿಕೆ, ಕಪ್ಪು ದಾರ, ಅಕ್ಕಿ, ಬೇಳೆ ಧಾನ್ಯಗಳು, ಬೆಲ್ಲ, ತೆಂಗಿನಕಾಯಿ ಹಾಗೂ ಮಂಗಳ ದ್ರವ್ಯಗಳನ್ನು ಜೋಡಿಸಿ ಪೂಜಿಸಲಾಗುತ್ತದೆ. ಮಂಗಳ ಗೌರಿ ಪೂಜೆ: ಸುಮಂಗಲಿಯರು ತಮ್ಮ ಮುತ್ತೈದೆತನ, ಕುಟುಂಬದ ಕ್ಷೇಮ ಹಾಗೂ ಐಶ್ವರ್ಯಕ್ಕಾಗಿ ಸ್ವರ್ಣ ಗೌರಿಯನ್ನು ನಿಷ್ಠೆಯಿಂದ ಪೂಜಿಸಿ, ಹಿರಿಯ ಮುತ್ತೈದೆಯರಿಗೆ ಹಾಗೂ ತಾಯಿಗೆ ಬಾಗಿನ ನೀಡಿ ಆಶೀರ್ವಾದ ಪಡೆಯುತ್ತಾರೆ. ಭಾವನಾತ್ಮಕ ಬೆಸುಗೆ: ಮದುವೆಯಾಗಿ ಬೇರೆ ಮನೆಗೆ ಹೋದ ಮಗಳು ಕ್ಷೇಮವಾಗಿರಲಿ, ಆಕೆಯ ಸಂಸಾರದಲ್ಲಿ ಧಾನ್ಯ-ಧನ ಸಂಪತ್ತು ಸದಾ ಸಮೃದ್ಧವಾಗಿರಲಿ ಎಂಬ ಹಾರೈಕೆ ಈ ಬಾಗಿನದ ಹಿಂದಿರುವ ಮುಖ್ಯ ಉದ್ದೇಶ. ಸಂಪ್ರದಾಯದ ಉಳಿವಿಗೆ ಗ್ರಾಮೀಣ ಜನರ ಶ್ರಮ ಬದಲಾಗುತ್ತಿರುವ ಆಧುನಿಕ ಯುಗದಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರಗಳಲ್ಲಿ ಗೌರಿ ಹಬ್ಬದ ಕಳೆ ಕುಂದಿಲ್ಲ. ಹಬ್ಬದ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಹೊಸ ಬಟ್ಟೆ, ಆಭರಣ ಹಾಗೂ ತವರಿನ ತಿನಿಸುಗಳನ್ನು ನೀಡಿ ಸತ್ಕರಿಸುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯವೆಂದೇ ಭಾವಿಸಲಾಗಿದೆ. ಸಾಮಾಜಿಕವಾಗಿ ಎಷ್ಟೇ ಆಧುನಿಕತೆ ಬಂದರೂ, ತವರು ಮನೆಯಿಂದ ಬರುವ ಬಾಗಿನಕ್ಕಾಗಿ ಕಾಯುವ ಹೆಣ್ಣು ಮಗಳ ಕಣ್ಣಿನ ಕಾತುರ ಮತ್ತು ಅದನ್ನು ನೀಡುವಾಗ ಹೆತ್ತವರ ಮೊಗದಲ್ಲಿ ಮೂಡುವ ತೃಪ್ತಿ ನಮ್ಮ ಸಂಸ್ಕೃತಿಯ ಸಜೀವ ಸಾಕ್ಷಿಯಾಗಿದೆ. ಬಾಂಧವ್ಯದ ಬೆಸುಗೆಯಾಗಿರುವ ಈ ಗೌರಿ ಹಬ್ಬವು ನಾಡಿನಾದ್ಯಂತ ಸೌಹಾರ್ದತೆ ಮತ್ತು ಪ್ರೀತಿಯನ್ನು ಪಸರಿಸುತ್ತಿದೆ.1
- ಚಿಕ್ಕನಾಯಕನಹಳ್ಳಿ: ಅಗಸರಹಳ್ಳಿಯಲ್ಲಿ ಕಿರಾತಕ ಕಿಡಿಗೇಡಿಗಳಿಂದ ಅಡಿಕೆ ಸಸಿಗಳ ಸರ್ವ ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಅಗಸರಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಜಮೀನಿನಲ್ಲಿದ್ದ ನೂರಾರು ಅಡಿಕೆ ಸಸಿಗಳನ್ನು ಯಾರೋ ದುಷ್ಕರ್ಮಿಗಳು ಕಡಿದು ಹಾಕಿ ವಿಕೃತಿ ಮೆರೆದಿರುವ ಘಟನೆ ಬುಧವಾರ ನಡೆದಿದೆ. ಗ್ರಾಮದ ಪುಟ್ಟಬಸವಯ್ಯ ಅವರ ಮಗ ಚಂದ್ರಣ್ಣ ಎಂಬುವರಿಗೆ ಸೇರಿದ ಜಮೀನಿನಲ್ಲಿ ಈ ಕೃತ್ಯ ನಡೆದಿದೆ. ಚಂದ್ರಣ್ಣ ಅವರು ತಮ್ಮ ಜಮೀನಿನಲ್ಲಿ ಅತ್ಯಂತ ಮುತುವರ್ಜಿಯಿಂದ ಅಡಿಕೆ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದರು. ಆದರೆ, ಇಂದು ಬೆಳಿಗ್ಗೆ ತೋಟಕ್ಕೆ ತೆರಳಿದಾಗ ಸಸಿಗಳನ್ನು ಕಡಿದು ಹಾಕಿರುವುದು ಬೆಳಕಿಗೆ ಬಂದಿದೆ. ಕಷ್ಟಪಟ್ಟು ಬೆಳೆಸಿದ್ದ ಸಸಿಗಳು ನಾಶವಾಗಿರುವುದನ್ನು ಕಂಡು ರೈತ ಚಂದ್ರಣ್ಣ ಕಣ್ಣೀರು ಹಾಕಿದ್ದು, ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. "ಯಾರೊಂದಿಗೂ ಹಗೆತನವಿರಲಿಲ್ಲ, ಈ ರೀತಿ ಬೆಳೆ ನಾಶ ಮಾಡಿ ಹೊಟ್ಟೆಗೆ ಹೊಡೆದಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಮತ್ತು ನನಗೆ ಪರಿಹಾರ ಕೊಡಿಸಬೇಕು" ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಸ್ಥರು ರೈತನಿಗೆ ಬೆಂಬಲವಾಗಿ ನಿಂತು, ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.1
- ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ಪವಾಡ ಮತ್ತು ವೈವಿಧ್ಯತೆ ಇತಿಹಾಸದ ದಾಖಲೆ ಪುಟದಲ್ಲಿ ಸೇರಿದೆ. ಶಿರಾ : ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ಪವಾಡ ಮತ್ತು ವೈವಿಧ್ಯತೆ ಇತಿಹಾಸದ ದಾಖಲೆ ಪುಟದಲ್ಲಿ ಸೇರಿದೆ. ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕ ದೇವತಾ ಕಾರ್ಯಗಳಿಗೆ ಅತ್ಯಂತ ಉನ್ನತವಾದ ಸ್ಥಾನವಿದೆ. ಅನಾದಿ ಕಾಲದಿಂದಲೂ ಮಾನವನು ತನ್ನ ದೈನಂದಿನ ಜೀವನದ ಭಾಗವಾಗಿ ದೇವರನ್ನು ಆರಾಧಿಸುತ್ತಾ ಬಂದಿದ್ದಾನೆ. ದೇವತಾ ಕಾರ್ಯಗಳು ಎಂದರೆ ಕೇವಲ ಆಚರಣೆಗಳಲ್ಲ, ಅವು ಮಾನವನ ಮನಸ್ಸನ್ನು ಶುದ್ಧೀಕರಿಸುವ ಮತ್ತು ಸಮಾಜವನ್ನು ಒಟ್ಟಾಗಿ ಜೋಡಿಸುವ ಪವಿತ್ರ ವಿಧಿ ವಿಧಾನಗಳಾಗಿವೆ,ಧಾರ್ಮಿಕ ದೇವತಾ ಕಾರ್ಯಗಳು ಮನುಷ್ಯನಲ್ಲಿ ಭಕ್ತಿ, ಶ್ರದ್ಧೆ ಮತ್ತು ಸಂಸ್ಕೃತಿಯನ್ನು ಬೆಳೆಸುತ್ತವೆ. ಇವುಗಳನ್ನು ಕೇವಲ ಮೂಢನಂಬಿಕೆಯಾಗಿ ನೋಡದೆ, ಅವುಗಳ ಹಿಂದಿರುವ ವೈಜ್ಞಾನಿಕ ಮತ್ತು ಸಾಮಾಜಿಕ ಮಹತ್ವವನ್ನು ಅರಿತು ಆಚರಿಸಬೇಕು. ಆಗ ಮಾತ್ರ ಸಮಾಜದಲ್ಲಿ ಶಾಂತಿ ಮತ್ತು ಸುಖ-ಸಮೃದ್ಧಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು. ಶಿರಾ ತಾಲೂಕಿನ ಗೌಡಗೆರೆ ಹೋಬಳಿ ಕಳವರಹಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀಜುಂಜಪ್ಪ ಸ್ವಾಮಿ ನೂತನ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಐತಿಹಾಸಿಕ ಪ್ರಸಿದ್ಧ ಶ್ರೀ ಜುಂಜಪ್ಪ ಸ್ವಾಮಿಗೆ ಎಲ್ಲರೂ ಒಗ್ಗೂಡಿ ಭವ್ಯ ದೇಗುಲ ನಿರ್ಮಾಣ ಮಾಡುತ್ತಿರುವುದು, ಕಳವರಹಳ್ಳಿಗೆ ದೊಡ್ಡ ಕಳಸವಿದ್ದಂತೆ. ನಾವು ಎಲ್ಲರೂ ಒಗ್ಗಟ್ಟಾಗಿ ದೇಗುಲ ನಿರ್ಮಾಣ ಮಾಡುವಂತ ಸಂಕಲ್ಪ ಮಾಡಬೇಕು. ರಾಜ್ಯದಲ್ಲಿ ಹಾಗೂ ಸಿರಾ ತಾಲೂಕಿನಲ್ಲಿ ಇನ್ನು ಮುಂದೆ ಯಾದರು ಉತ್ತಮ ಮಳೆಯಾಗಿ ಎಲ್ಲ ರೈತರ ಬದುಕು ಸುಂದರವಾಗಿರಲಿ ಎಂದು ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿಯಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು. ಶ್ರೀ ಮದ್ದಮ್ಮ ದೇವಿ ದೇವಸ್ಥಾನದ ಪಟ್ಟದ ಪೂಜಾರ್ ದೊಡ್ಡರಾಜಪ್ಪ, ಹುಣಸೆಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹುಣಸೆಹಳ್ಳಿ ಶಶಿಧರ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಸಂಕಾಪುರ ಚಿದಾನಂದ, ಕಳವರಹಳ್ಳಿ ಶ್ರೀ ಜುಂಜಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮುದ್ದು ಕೃಷ್ಣೆಗೌಡ, ಕಾರ್ಯದರ್ಶಿ ನರಸಿಂಹಮೂರ್ತಿ, ಭೂಕಾಂತೇ ಗೌಡ, ಕೃಷ್ಣಪ್ಪ, ಹೊಸೂರು ಮಂಜೇಗೌಡ, ಸಿದ್ದಣ್ಣ, ದೊಡ್ಡಯ್ಯ, ಸಿದ್ದಾಪುರ ಮಂಜುನಾಥ್, ನಾಗೇಂದ್ರ ಗೌಡ, ಭೂತಣ್ಣ ಸೇರಿದಂತೆ ಅಕ್ಕ ಪಕ್ಕದ ಗ್ರಾಮಸ್ಥರು, 12 ಜನ ಕೈವಾಡಸ್ತರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.1
- ಸಿಂಪಲ್ ಮ್ಯಾಚ್..1
- ರಸ್ತೆಗೆ ಚಾಚಿದ ಕಳ್ಳೆ ಬೈಕ್ ಸವಾರರು ಸ್ವಲ್ಪ ಯಾಮಾರಿದರೆ ಕಳ್ಳೆಯೋಳಗೆ ಬೈಕ್.1
- ಚಿತ್ರದುರ್ಗದಲ್ಲಿ ‘ಸೀರತ್ ಅಭಿಯಾನ’! 🔥 ಪ್ರವಾದಿ ಮುಹಮ್ಮದ್ ﷺ ಸಂದೇಶ ಸಾರಲು ಸಜ್ಜು! #SeeratUnNabi #ಸೀರತ್_ಅಭಿಯಾನ #ಕ್ರಾಂತಿಯಜ್ಯೋತಿ #ಪ್ರವಾದಿಮುಹಮ್ಮದ್ﷺ #Muhammadﷺ #ProphetMuhammad #SeeratCampaign #JamaatEIslamiHind #ಚಿತ್ರದುರ್ಗ #Chitradurga #ChitradurgaNews #KarnatakaNews #KannadaNews #BreakingNews #ViralNews #LocalNews #CTownNews #CtownNews #NewsUpdate #ಸುದ್ದಿ #ಸುದ್ದಿವಾಹಿನಿ1
- ಚಳ್ಳಕೆರೆ ನಗರದಲ್ಲಿಂದು ಈದುಮಿಲಾದ್ ಅಂಗವಾಗಿ ಚಳ್ಳಕೆರೆ ನಗರದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಚಳ್ಳಕೆರೆ ನಗರದಲ್ಲಿಂದು ಈದುಮಿಲಾದ್ ಅಂಗವಾಗಿ ಚಳ್ಳಕೆರೆ ನಗರದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ನಗರದ ಗಾಂಧಿನಗರದ ಮಸೀದಿ ಬಳಿ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಟಿ. ರಘುಮೂರ್ತಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈದುಮಿಲಾದ್ ಹಬ್ಬವು ಪ್ರೀತಿ, ಸಹೋದರತೆ, ಶಾಂತಿ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಪವಿತ್ರ ದಿನವಾಗಿದೆ. ಸಮಾಜದಲ್ಲಿ ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಬೇಕು ಎಂದು ಕರೆ ನೀಡಿದರು. ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು. ಮುಖಂಡರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. ಈ ವೇಳೆ ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು. ಈದುಮಿಲಾದ್ ಮೂಲಕ ಶಾಂತಿ, ಸಹೋದರತೆ ಮತ್ತು ಸೌಹಾರ್ದತೆಯ ಸಂದೇಶ ಸಾರುವ ಮೂಲಕ ಚಳ್ಳಕೆರೆ ನಗರ ಗಮನ ಸೆಳೆಯಿತು.1
- ಚಿಕ್ಕನಾಯಕನಹಳ್ಳಿ: ಬಿ-ಪಾಳ್ಯದಲ್ಲಿ ಈದ್ ಮಿಲಾದ್ ಆಚರಣೆ: ಹಿಂದೂ-ಮುಸ್ಲಿಂ ಭಾವೈಕ್ಯತೆ ಮೆರೆದ ಸಂಘಟನೆಗಳು ಚಿಕ್ಕನಾಯಕನಹಳ್ಳಿ: ಬಿ-ಪಾಳ್ಯದಲ್ಲಿ ಈದ್ ಮಿಲಾದ್ ಆಚರಣೆ: ಹಿಂದೂ-ಮುಸ್ಲಿಂ ಭಾವೈಕ್ಯತೆ ಮೆರೆದ ಸಂಘಟನೆಗಳು -------------------- ಚಿಕ್ಕನಾಯಕನಹಳ್ಳಿ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ತಾಲೂಕಿನ ಬಿ-ಪಾಳ್ಯದಲ್ಲಿರುವ ಶ್ರೀ ಗುರು ಸಿದ್ದರಾಮೇಶ್ವರ ಶ್ರವಣದೋಷ ಹಾಗೂ ಮಾತು ಬಾರದ ವಿಶೇಷ ಚೇತನ ಮಕ್ಕಳ ಶಾಲೆಯಲ್ಲಿ ಅಖಿಲ ಕರ್ನಾಟಕ ಆಂಬುಲೆನ್ಸ್ ರೋಡ್ ಸೇಫ್ಟಿ ಸಂಘ (ರಿ) ಮತ್ತು ರೂಪಾಂತರ ಮಹಿಳಾ ಸಶಕ್ತೀಕರಣ ಹಾಗೂ ಸಮುದಾಯ ಅಭಿವೃದ್ಧಿ ಸಂಸ್ಥೆ (ರಿ) ವತಿಯಿಂದ ವಿಶೇಷ ಚೇತನ ಮಕ್ಕಳೊಂದಿಗೆ ಈದ್ ಮಿಲಾದ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಹಿಂದೂ-ಮುಸ್ಲಿಂ ಬಾಂಧವ್ಯ ಹಾಗೂ ಭಾವೈಕ್ಯತೆ ಮೆರೆಯಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರೂಪಾಂತರ ಸಂಸ್ಥೆಯ ಸಂಸ್ಥಾಪಕಿ ರೂಪಶ್ರೀ, "ಚಿಕ್ಕನಾಯಕನಹಳ್ಳಿ ತಾಲೂಕು ‘ಹಿಂದೂ-ಮುಸ್ಲಿಂ ನಾವೆಲ್ಲಾ ಒಂದೇ’ ಎಂಬ ಸಾಮರಸ್ಯದ ಸಂದೇಶದೊಂದಿಗೆ ಇಡೀ ದೇಶಕ್ಕೆ ಮಾದರಿಯಾಗಿದೆ. ಭಾರತ ಮಾತೆಯ ಮಕ್ಕಳಾದ ನಾವೆಲ್ಲರೂ ಜಾತಿ ವೈಮನಸ್ಸು ಹಾಗೂ ಭೇದ-ಭಾವಗಳನ್ನು ಮರೆತು ದೇಶದ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ. ಇಂದಿನ ಯುವಪಡೆ ಜಾತೀಯತೆಯನ್ನು ತೊರೆದು ದೇಶದ ಉಜ್ವಲ ಭವಿಷ್ಯ ಹಾಗೂ ಸಮಾಜದ ಪ್ರಗತಿಗೆ ಜಾಗೃತರಾಗಿ ಶ್ರಮಿಸಬೇಕು," ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ರೂಪಾಂತರ ಸಂಸ್ಥೆಯ ಸಂಸ್ಥಾಪಕಿ ರೂಪಶ್ರೀ ಹಾಗೂ AKARS ಸಂಘದ ಅಧ್ಯಕ್ಷ ಎಂ.ಡಿ. ಅಫ್ಸರ್, ಪ್ರಮುಖರಾದ ಪ್ರೀತಮ್, ತೋವಿದ್, ಮನು, ಶೇಖ್, ಅಕ್ಬರ್ ಮತ್ತು ಅಫ್ರಿದ್ ಉಪಸ್ಥಿತರಿದ್ದರು.2