logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಸಚಿವ ಡಿ ಸುಧಾಕರ್ ಆರೋಗ್ಯದಲ್ಲಿ ಏರುಪೇರು ಮಣಿಪಾಲ ಆಸ್ಪತ್ರೆಗೆ ದಾಖಲು.. ಸಚಿವ ಡಿ ಸುಧಾಕರ್ ಆರೋಗ್ಯದಲ್ಲಿ ಏರುಪೇರಾಗಿದ್ದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ವಾಸಕೋಶದ ಸೋಂಕಿನ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡ ಡಿ ಸುಧಾಕರ್ ಅವರನ್ನು ತಕ್ಷಣವೇ ಯಶವಂತಪುರದ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಘಾ ಘಟಕದಲ್ಲಿ ಡಿ ಸುಧಾಕರ‌್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಕರ್ನಾಟಕದ ಸಾಂಖ್ಯಿಕ ಹಾಗೂ ಅಂಕಿ ಸಂಕಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಡಿ ಸುಧಾಕರ್ ಆರೋಗ್ಯದ ಏರುಪೇರಾಗಿದ್ದು ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

1 hr ago
user_Suresh Belagere
Suresh Belagere
Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
1 hr ago
fe180ecf-30cb-4d2e-8b41-a36be2a2638e

ಸಚಿವ ಡಿ ಸುಧಾಕರ್ ಆರೋಗ್ಯದಲ್ಲಿ ಏರುಪೇರು ಮಣಿಪಾಲ ಆಸ್ಪತ್ರೆಗೆ ದಾಖಲು.. ಸಚಿವ ಡಿ ಸುಧಾಕರ್ ಆರೋಗ್ಯದಲ್ಲಿ ಏರುಪೇರಾಗಿದ್ದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ವಾಸಕೋಶದ ಸೋಂಕಿನ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡ ಡಿ ಸುಧಾಕರ್ ಅವರನ್ನು ತಕ್ಷಣವೇ ಯಶವಂತಪುರದ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಘಾ ಘಟಕದಲ್ಲಿ ಡಿ ಸುಧಾಕರ‌್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಕರ್ನಾಟಕದ ಸಾಂಖ್ಯಿಕ ಹಾಗೂ ಅಂಕಿ ಸಂಕಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಡಿ ಸುಧಾಕರ್ ಆರೋಗ್ಯದ ಏರುಪೇರಾಗಿದ್ದು ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

More news from ಕರ್ನಾಟಕ and nearby areas
  • ಏಪ್ರಿಲ್1 ರಿಂದ 15 ನೇ ತಾರೀಖಿನವರೆಗೆ ಸ್ವಯಂ ಜನಗಣತೆ..
    1
    ಏಪ್ರಿಲ್1 ರಿಂದ 15 ನೇ ತಾರೀಖಿನವರೆಗೆ  ಸ್ವಯಂ ಜನಗಣತೆ..
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    1 hr ago
  • ಚಪ್ಪಲಿ ಪೊರಕೆ ತೋರಿಸುವುದು ಬಿಜೆಪಿ ಸಂಸ್ಕೃತಿ ಎಂದು ಚಿತ್ರದುರ್ಗದಲ್ಲಿ ಯೋಗೀಶ್ ಬಾಬು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ದ್ರಾಕ್ಷ ರಸ ಮಂಡಳಿ ಅಧ್ಯಕ್ಷರಾದ ಯೋಗೀಶ್ ಬಾಬು ಅವರು ಮಾತನಾಡಿದ್ದು ಯಾರಿಗೂ ಕೂಡ ಅಲ್ಲಿಗೆ ಬರ್ರಿ ಇಲ್ಲಿಗೆ ಬರ್ರಿ ಎಂದು ಸವಾಲ್ ಹಾಕುವುದು ಸರಿಯಲ್ಲ, ಎಲ್ಲರಿಗೂ ಕೂಡ ವಾಕ್ ಸ್ವಾತಂತ್ರ್ಯ ಇರುತ್ತದೆ‌. ದಾವಣಗೆರೆಗೆ ಬನ್ನಿ ಎಂದು ಹೇಳುವುದು ತಪ್ಪು ಎಂದು ಟಾಂಗ್ ಕೊಟ್ಟಿದ್ದಾರೆ
    1
    ಚಪ್ಪಲಿ ಪೊರಕೆ ತೋರಿಸುವುದು ಬಿಜೆಪಿ ಸಂಸ್ಕೃತಿ ಎಂದು ಚಿತ್ರದುರ್ಗದಲ್ಲಿ ಯೋಗೀಶ್ ಬಾಬು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿ ದ್ರಾಕ್ಷ ರಸ ಮಂಡಳಿ ಅಧ್ಯಕ್ಷರಾದ ಯೋಗೀಶ್ ಬಾಬು ಅವರು ಮಾತನಾಡಿದ್ದು ಯಾರಿಗೂ ಕೂಡ ಅಲ್ಲಿಗೆ ಬರ್ರಿ ಇಲ್ಲಿಗೆ ಬರ್ರಿ ಎಂದು ಸವಾಲ್ ಹಾಕುವುದು ಸರಿಯಲ್ಲ, ಎಲ್ಲರಿಗೂ ಕೂಡ ವಾಕ್ ಸ್ವಾತಂತ್ರ್ಯ ಇರುತ್ತದೆ‌. ದಾವಣಗೆರೆಗೆ ಬನ್ನಿ ಎಂದು ಹೇಳುವುದು ತಪ್ಪು ಎಂದು ಟಾಂಗ್ ಕೊಟ್ಟಿದ್ದಾರೆ
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    17 hrs ago
  • ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾನದಿಗೆ ಸೇತುವೆಗಳ ಮೇಲಿಂದ ಕಸ ಎಸೆಯುತ್ತಿದ್ದು ಅವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭದ್ರಾನದಿ ಸಂರಕ್ಷಣಾ ಪಡೆ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.ಪವಿತ್ರ ನದಿಗೆ ಕೆಲ ಅನಾಗರಿಕ ಸಾರ್ವಜನಿಕರು ಎರಡು ಸೇತುವೆಗಳ ಮೇಲಿಂದ ಕಸ,ಪ್ಲಾಸ್ಟಿಕ್ ಬ್ಯಾಗ್ ಎಸೆದು ಮಲೀನ ಮಾಡುತ್ತಿದ್ದು, ಇದರಿಂದ ನದಿ ಹಾಗೂ ಜಲಚರಗಳಿಗೆ ಕುತ್ತು ತರುತ್ತಿದೆ. 1974 ಜಾಲಮಾಲಿನ್ಯ ಕಾಯ್ದೆ ತಡೆಗಟ್ಟುವ ಸೆಕ್ಷನ್ 24 ರ ಅನ್ವಯ ಅಪರಾಧವಾಗಿದೆ. ಈ ಹಿನ್ನಲೆಯಲ್ಲಿ 41 ಮತ್ತು 45 ರ ಸೆಕ್ಷನ್ ಅನ್ವಯ ದಂಡನೆಯನ್ನು ವಿಧಿಸಬಹು ದಾಗಿದೆ. ಘನ ತ್ಯಾಜ್ಯ ನಿರ್ವಹಣೆ 2016 ರ ಕಾಯ್ದೆ ಅನ್ವಯ ಯಾವುದೇ ನದಿ ಪಾತ್ರ ಗಳಲ್ಲಿ ಕಸ ಎಸೆಯುವುದು, ಘನತ್ಯಾಜ್ಯ ನಿರ್ಬಂಧವಿದ್ದರೂ ಆದೇಶ ಗಾಳಿಗೆ ತೂರಿದಂತಾಗಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಲವು ನಗರಸಭೆಗಳ ಮೇಲೆ ಪರಿಸರ ಪರಿಹಾರ ವಿಧಿಸಿದ್ದು ಓಡಿಶಾ ರಾಜ್ಯದ ಕೇಂದ್ರಪುರ ಮುನಿಸಿಪಾಲಿಟಿ, ಚಂಬಲ್ ನದಿ ಪ್ರಕರಣ, ಗೊರಕ್ ಪುರ ಕೊಳಚೆ ನೀರು ಪ್ರಕರಣಗಳನ್ನು ಗಮನಿಸಿ ಕೂಡಲೇ ಭದ್ರಾ ನದಿಯ ಮಾಲಿನ್ಯ ತಡೆಗೆ ಮುಂದಾಗುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಭದ್ರಾ ನದಿ ಸಂರಕ್ಷಣಾ ಪಡೆಯ ಸಿ.ತೀರ್ಥೇಶ್,ಡಿಎಸ್ಎಸ್ ಮುಖಂಡ ದಾಸರಕಲ್ಲಳ್ಳಿ ನಾಗರಾಜ್, ಹರೀಶ್, ಹಿರಿಯ ಹೋರಾಟಗಾರ ಜಯಣ್ಣ, ಗಣೇಶ್, ರೈತ ಮುಖಂಡ ಇಮ್ರಾನ್ ಪಾಷಾ, ಭದ್ರಾನದಿ ಸಂರಕ್ಷಣಪಡೆಯ ಮುಖ್ಯಸ್ಥ ರಾದ ಕಾರ್ತಿಕ್ ಕಿದ್ಮಯ್ ಉಪಸ್ಥಿತರಿದ್ದರು.
    1
    ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾನದಿಗೆ ಸೇತುವೆಗಳ ಮೇಲಿಂದ ಕಸ ಎಸೆಯುತ್ತಿದ್ದು ಅವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭದ್ರಾನದಿ ಸಂರಕ್ಷಣಾ ಪಡೆ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.ಪವಿತ್ರ ನದಿಗೆ ಕೆಲ ಅನಾಗರಿಕ ಸಾರ್ವಜನಿಕರು ಎರಡು ಸೇತುವೆಗಳ ಮೇಲಿಂದ ಕಸ,ಪ್ಲಾಸ್ಟಿಕ್ ಬ್ಯಾಗ್ ಎಸೆದು ಮಲೀನ ಮಾಡುತ್ತಿದ್ದು, ಇದರಿಂದ ನದಿ ಹಾಗೂ ಜಲಚರಗಳಿಗೆ ಕುತ್ತು ತರುತ್ತಿದೆ. 
1974 ಜಾಲಮಾಲಿನ್ಯ ಕಾಯ್ದೆ ತಡೆಗಟ್ಟುವ ಸೆಕ್ಷನ್ 24 ರ ಅನ್ವಯ ಅಪರಾಧವಾಗಿದೆ. ಈ ಹಿನ್ನಲೆಯಲ್ಲಿ 41 ಮತ್ತು 45 ರ ಸೆಕ್ಷನ್ ಅನ್ವಯ ದಂಡನೆಯನ್ನು ವಿಧಿಸಬಹು ದಾಗಿದೆ. ಘನ ತ್ಯಾಜ್ಯ ನಿರ್ವಹಣೆ 2016 ರ ಕಾಯ್ದೆ ಅನ್ವಯ ಯಾವುದೇ ನದಿ ಪಾತ್ರ ಗಳಲ್ಲಿ ಕಸ ಎಸೆಯುವುದು, ಘನತ್ಯಾಜ್ಯ ನಿರ್ಬಂಧವಿದ್ದರೂ ಆದೇಶ ಗಾಳಿಗೆ ತೂರಿದಂತಾಗಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಲವು ನಗರಸಭೆಗಳ ಮೇಲೆ ಪರಿಸರ ಪರಿಹಾರ ವಿಧಿಸಿದ್ದು ಓಡಿಶಾ ರಾಜ್ಯದ ಕೇಂದ್ರಪುರ ಮುನಿಸಿಪಾಲಿಟಿ, ಚಂಬಲ್ ನದಿ ಪ್ರಕರಣ, ಗೊರಕ್ ಪುರ ಕೊಳಚೆ ನೀರು ಪ್ರಕರಣಗಳನ್ನು ಗಮನಿಸಿ ಕೂಡಲೇ ಭದ್ರಾ ನದಿಯ ಮಾಲಿನ್ಯ ತಡೆಗೆ ಮುಂದಾಗುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭದ್ರಾ ನದಿ ಸಂರಕ್ಷಣಾ ಪಡೆಯ ಸಿ.ತೀರ್ಥೇಶ್,ಡಿಎಸ್ಎಸ್ ಮುಖಂಡ ದಾಸರಕಲ್ಲಳ್ಳಿ ನಾಗರಾಜ್, ಹರೀಶ್, ಹಿರಿಯ ಹೋರಾಟಗಾರ ಜಯಣ್ಣ, ಗಣೇಶ್, ರೈತ ಮುಖಂಡ ಇಮ್ರಾನ್ ಪಾಷಾ, ಭದ್ರಾನದಿ ಸಂರಕ್ಷಣಪಡೆಯ ಮುಖ್ಯಸ್ಥ ರಾದ ಕಾರ್ತಿಕ್ ಕಿದ್ಮಯ್ ಉಪಸ್ಥಿತರಿದ್ದರು.
    user_ಆರ್.ವಿ.ಕೃಷ್ಣ
    ಆರ್.ವಿ.ಕೃಷ್ಣ
    Local News Reporter ಶಿವಮೊಗ್ಗ, ಶಿವಮೊಗ್ಗ, ಕರ್ನಾಟಕ•
    12 hrs ago
  • ಚಲಿಸುತ್ತಿದ್ದ ಬಸ್ಸಿನಿಂದ ಆಯತಪ್ಪಿ ಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ #JB_News_Kannada #ಬೆಳ್ತಂಗಡಿ
    1
    ಚಲಿಸುತ್ತಿದ್ದ ಬಸ್ಸಿನಿಂದ ಆಯತಪ್ಪಿ ಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ
#JB_News_Kannada #ಬೆಳ್ತಂಗಡಿ
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Ballari, Karnataka•
    11 hrs ago
  • ಕುಣಿಗಲ್‌ ತಾಲ್ಲೂಕಿನ ಉಜ್ಜನಿ ಗ್ರಾಮದಲ್ಲಿ ಚೌಡೇಶ್ವರಿ ದೇವಿ ಜಾತ್ರೆ ಪ್ರಯುಕ್ತ ಇಂದು ಅಗ್ನಿಕೊಂಡ ಉತ್ಸವಕ್ಕೆ ಚಾಲನೆ ನೀಡಲಾಯಿತು. ಏಷ್ಯಾದಲ್ಲಿ ಅತಿ ಎತ್ತರದ ಅಗ್ನಿಕೊಂಡ ಉತ್ಸವ ಎಂದು ಪ್ರಸಿದ್ಧಿ ಪಡೆದಿದೆ. ಈ ಅಗ್ನಿಕೊಂಡಕ್ಕೆ ಹುಲಿಯೂರುದುರ್ಗ, ಚೌಡನಕುಪ್ಪೆ, ಉಜ್ಜನಿಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೊಂಡಕ್ಕೆ ಸೌದೆ ಸಮರ್ಪಿಸಿ ತಾಯಿ ಚೌಡೇಶ್ವರಿ ದೇವಿ ಯ ಕೃಪೆ ಗೆ ಪಾತ್ರರಾದರು....
    1
    ಕುಣಿಗಲ್‌ ತಾಲ್ಲೂಕಿನ ಉಜ್ಜನಿ ಗ್ರಾಮದಲ್ಲಿ ಚೌಡೇಶ್ವರಿ ದೇವಿ ಜಾತ್ರೆ ಪ್ರಯುಕ್ತ ಇಂದು ಅಗ್ನಿಕೊಂಡ ಉತ್ಸವಕ್ಕೆ ಚಾಲನೆ ನೀಡಲಾಯಿತು.  ಏಷ್ಯಾದಲ್ಲಿ ಅತಿ ಎತ್ತರದ ಅಗ್ನಿಕೊಂಡ ಉತ್ಸವ ಎಂದು ಪ್ರಸಿದ್ಧಿ ಪಡೆದಿದೆ. ಈ ಅಗ್ನಿಕೊಂಡಕ್ಕೆ ಹುಲಿಯೂರುದುರ್ಗ, ಚೌಡನಕುಪ್ಪೆ, ಉಜ್ಜನಿಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೊಂಡಕ್ಕೆ ಸೌದೆ ಸಮರ್ಪಿಸಿ ತಾಯಿ ಚೌಡೇಶ್ವರಿ ದೇವಿ ಯ ಕೃಪೆ ಗೆ ಪಾತ್ರರಾದರು....
    user_ಗಿರೀಶ್ B
    ಗಿರೀಶ್ B
    Local News Reporter ತುಮಕೂರು, ತುಮಕೂರು, ಕರ್ನಾಟಕ•
    10 hrs ago
  • ಕಡೂರು : ಸುಮಾರು ಎರಡು ಎಕರೆ ಪ್ರದೇಶದ ತೋಟದಲ್ಲಿ ಫಸಲು ಬಂದಿದ್ದ ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಅಂಚೇಚೋಮನಹಳ್ಳಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ನಡೆದಿದೆ. ಡಿ.ಕಾರೇಹಳ್ಳಿ ಗ್ರಾಮದ ರೈತ ಚಂದ್ರಪ್ಪ‌ ಎಂಬುವವರಿಗೆ ಸೇರಿದ ಜಮೀನನಲ್ಲಿ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಬಾಳೆಗೊನೆ ಬಿಟ್ಟಿದ್ದ ಸುಮಾರು 1500 ಬಾಳೆಗಿಡಗಳನ್ನು ಕಡಿದು ಹಾಕಿದ್ದಾರೆ. ಬಾಳೆಗಿಡಗಳ ಬೆಳೆಗಾಗಿ ಸಂಘ, ಬ್ಯಾಂಕ್ ಹಾಗೂ ಕೈಗಡ ಸೇರಿ ಸುಮಾರು 5ಲಕ್ಷ ಸಾಲ ಮಾಡಲಾಗಿದೆ. ಬಾಳೆಗಿಡದ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುತ್ತಾ ಬರಲಾಗಿದೆ. ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಡಿದು ಹಾಕಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚುವಂತೆ ರೈತ ಚಂದ್ರಪ್ಪ ದೂರು ನೀಡಿದ್ದಾರೆ. ಮಂಗಳವಾರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೃತ್ಯ ವೆಸಗಿದ ಕಿಡಿಗೇಡಿಗಳ ಪತ್ತೆಗಾಗಿ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    3
    ಕಡೂರು : ಸುಮಾರು ಎರಡು ಎಕರೆ ಪ್ರದೇಶದ ತೋಟದಲ್ಲಿ ಫಸಲು ಬಂದಿದ್ದ ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ತಾಲ್ಲೂಕಿನ ಅಂಚೇಚೋಮನಹಳ್ಳಿ ಗ್ರಾಮದ ಬಳಿ ಸೋಮವಾರ ತಡರಾತ್ರಿ ನಡೆದಿದೆ.
ಡಿ.ಕಾರೇಹಳ್ಳಿ ಗ್ರಾಮದ ರೈತ ಚಂದ್ರಪ್ಪ‌ ಎಂಬುವವರಿಗೆ ಸೇರಿದ ಜಮೀನನಲ್ಲಿ ಕಿಡಿಗೇಡಿಗಳು ಸೋಮವಾರ ತಡರಾತ್ರಿ ಬಾಳೆಗೊನೆ ಬಿಟ್ಟಿದ್ದ ಸುಮಾರು 1500 ಬಾಳೆಗಿಡಗಳನ್ನು ಕಡಿದು ಹಾಕಿದ್ದಾರೆ.
ಬಾಳೆಗಿಡಗಳ ಬೆಳೆಗಾಗಿ ಸಂಘ, ಬ್ಯಾಂಕ್ ಹಾಗೂ ಕೈಗಡ ಸೇರಿ ಸುಮಾರು 5ಲಕ್ಷ ಸಾಲ ಮಾಡಲಾಗಿದೆ. ಬಾಳೆಗಿಡದ ಬೆಳೆಯನ್ನು ನಂಬಿಕೊಂಡು ಜೀವನ ನಡೆಸುತ್ತಾ ಬರಲಾಗಿದೆ. ಸುಮಾರು 20ಲಕ್ಷ ಮೌಲ್ಯದ ಬಾಳೆಗಿಡಗಳನ್ನು ಕಡಿದು ಹಾಕಿರುವ ಕಿಡಿಗೇಡಿಗಳನ್ನು ಪತ್ತೆಹಚ್ಚುವಂತೆ ರೈತ ಚಂದ್ರಪ್ಪ ದೂರು ನೀಡಿದ್ದಾರೆ.
ಮಂಗಳವಾರ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೃತ್ಯ ವೆಸಗಿದ ಕಿಡಿಗೇಡಿಗಳ ಪತ್ತೆಗಾಗಿ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    user_Kadur News
    Kadur News
    ಪತ್ರಕರ್ತ Kadur, Chikkamagaluru•
    13 hrs ago
  • ಶುದ್ದ ಕುಡಿಯುವ ನೀರಿನ ಘಟಕಗಳ ಹಾಗೂ ಆಶ್ರಯ ಯೋಜನೆ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ಬಾಗೇಪಲ್ಲಿ:- ಇಂದು ಬಾಗೆಪಲ್ಲಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಎಸ್. ಎನ್. ಸುಬ್ಬಾರೆಡ್ಡಿ ಶಾಸಕರು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರ ರವರ ಅಧ್ಯಕ್ಷತೆಯಲ್ಲಿ ಡಾ|| ನವೀನ್ ಭಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ. ಪಂ ರವರ ಉಪಸ್ಥಿತಿಯಲ್ಲಿ ಶುದ್ದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ, ಶುದ್ದ ಕುಡಿಯುವ ನೀರಿನ ಘಟಕಗಳ ಬಗ್ಗೆ ಮತ್ತು ಆಶ್ರಯ ಯೋಜನೆ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯದರ್ಶಿ ಜಿ. ಪಂ,ಜಿಲ್ಲಾ ಕುಡಿಯುವ ನೀರು & ನೖರ್ಮಲ್ಯ ಇಲಾಖೆಯ ಇಂಜಿನಿಯರ್ ಬಾಗೆಪಲ್ಲಿ ಗುಡಿಬಂಡೆ,ಹಾಗೂ ಚೇಳೂರು ತಾಲ್ಲೂಕಿನ ತಹಶಿಲ್ದಾರು,ಕಾರ್ಯನಿರ್ವಾಹಕ ಅಧಿಕಾರಿಗಳು,ಸಹಾಯಕ ನಿರ್ದೇಶಕರು ,ಮೂರು ತಾಲ್ಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ಸಿಬ್ಬಂದಿಗಳು ಹಾಜರಿದ್ದರು
    1
    ಶುದ್ದ ಕುಡಿಯುವ ನೀರಿನ ಘಟಕಗಳ ಹಾಗೂ ಆಶ್ರಯ ಯೋಜನೆ ಬಗ್ಗೆ ಪ್ರಗತಿ ಪರಿಶೀಲನೆ ಸಭೆ
ಬಾಗೇಪಲ್ಲಿ:- ಇಂದು ಬಾಗೆಪಲ್ಲಿ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ  ಎಸ್. ಎನ್. ಸುಬ್ಬಾರೆಡ್ಡಿ ಶಾಸಕರು ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರ ರವರ ಅಧ್ಯಕ್ಷತೆಯಲ್ಲಿ  ಡಾ|| ನವೀನ್ ಭಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿ. ಪಂ ರವರ ಉಪಸ್ಥಿತಿಯಲ್ಲಿ ಶುದ್ದ ಕುಡಿಯುವ ನೀರಿನ  ಸಮಸ್ಯೆ ಬಗ್ಗೆ, ಶುದ್ದ ಕುಡಿಯುವ ನೀರಿನ ಘಟಕಗಳ ಬಗ್ಗೆ ಮತ್ತು ಆಶ್ರಯ ಯೋಜನೆ ಬಗ್ಗೆ ಪ್ರಗತಿ ಪರಿಶೀಲನೆ ಸಭೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯದರ್ಶಿ ಜಿ. ಪಂ,ಜಿಲ್ಲಾ ಕುಡಿಯುವ ನೀರು & ನೖರ್ಮಲ್ಯ ಇಲಾಖೆಯ ಇಂಜಿನಿಯರ್
ಬಾಗೆಪಲ್ಲಿ  ಗುಡಿಬಂಡೆ,ಹಾಗೂ
ಚೇಳೂರು ತಾಲ್ಲೂಕಿನ ತಹಶಿಲ್ದಾರು,ಕಾರ್ಯನಿರ್ವಾಹಕ ಅಧಿಕಾರಿಗಳು,ಸಹಾಯಕ ನಿರ್ದೇಶಕರು ,ಮೂರು ತಾಲ್ಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ಸಿಬ್ಬಂದಿಗಳು ಹಾಜರಿದ್ದರು
    user_Gopala Reddy R N
    Gopala Reddy R N
    Press advisory ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಕರ್ನಾಟಕ•
    18 hrs ago
  • Post by Suresh Belagere
    1
    Post by Suresh Belagere
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    15 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.