logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಜನಸ್ಪಂದನೆ ಪಡೆದ ಜೆಡಿಎಸ್ 'ನ್ಯಾಯದ ನಡಿಗೆ' - ಪಾದಯಾತ್ರೆಯ ಮೊದಲ ದಿನ ಹರಿದು ಬಂದ ಜನಸಾಗರ aksharakranti news ಜನಸ್ಪಂದನೆ ಪಡೆದ ಜೆಡಿಎಸ್ 'ನ್ಯಾಯದ ನಡಿಗೆ' - ಪಾದಯಾತ್ರೆಯ ಮೊದಲ ದಿನ ಹರಿದು ಬಂದ ಜನಸಾಗರ ಕೊಪ್ಪಳ,: ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಎರಡು ದಿನಗಳ 'ನ್ಯಾಯಕ್ಕಾಗಿ ನಡೆ' ಪಾದಯಾತ್ರೆ ಮಂಗಳವಾರ ಮುಂಜಾನೆ ಬೆಳಗಟ್ಟಿಯಿಂದ ಪ್ರಾರಂಭವಾಯಿತು. ಪಾದಯಾತ್ರೆಗೆ ಬೆಳಗಟ್ಟಿಯ ಕನಕರಾಯ ದೇವಸ್ಥಾನ - ಮುಸ್ತಫಾ ಖಾದ್ರಿ ದರ್ಗಾ ಆವರಣದಲ್ಲಿ ಚಾಲನೆ ನೀಡಲಾಯಿತು. ಪಕ್ಷದ ಗೌರವಾಧ್ಯಕ್ಷ ಈಶಪ್ಪ ಮಾದಿನೂರು, ಸಿ ವಿ ಚಂದ್ರಶೇಖರ್, ಓಬಿಸಿ ಘಟಕದ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ ಮತ್ತು ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಹಿಟ್ನಾಳ್ ಪಾದಯಾತ್ರೆಯ ಮಹತ್ವ ವಿವರಿಸಿದರು. ನೂರಾರು ಜನ ಪಾದಯಾತ್ರೆಯಲ್ಲಿ ಹಟ್ಟಿ ಕ್ರಾಸ್ ಮೂಲಕ ರಘುನಾಥನಹಳ್ಳಿಯ ಕಡೆಗೆ ಹೆಜ್ಜೆ ಹಾಕಿದರು. ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಮಾಜಿ ಶಾಸಕ ರಾಜ ವೆಂಕಟಪ್ಪ ನಾಯಕ ಅಲ್ಲಿ ಪಾದಯಾತ್ರೆಯನ್ನು ಕೂಡಿಕೊಂಡರು. ಸಿ ವಿ ಚಂದ್ರಶೇಖರ್ ಹಾಗೂ ಅವರ ಪಾದಯಾತ್ರೆಯ ತಂಡದವರನ್ನು ಸನ್ಮಾನಿಸಿ ಕೊಪ್ಪಳ ತಾಲೂಕಿನ ಜನರಿಗಾಗಿ ಹಮ್ಮಿಕೊಂಡಿರುವ ಈ ಹೋರಾಟ ಯಶಸ್ವಿಯಾಗಲಿ ಎಂದರು. ಅಳವಂಡಿಗೆ ಸಾಗುವ ಮಾರ್ಗದಲ್ಲಿ ಒಣಗಿದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ನಾಯಕರು ಭೇಟಿಯಾಗಿ ಸಂವಾದಿಸಿದರು. ಬರಗಾಲ ಹಾಗೂ ಸರಕಾರದ ನಿರ್ಲಕ್ಷತೆಯಿಂದ ರೈತರಿಗೆ ಉಂಟಾಗಿರುವ ಸಮಸ್ಯೆಗಳನ್ನು ರೈತರು ಮುಖಂಡರ ಗಮನಕ್ಕೆ ತಂದರು. ಅಳವಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮರುಳರಾಧ್ಯ ಶಿವಚಾರ್ಯರು ಮಹಾಸ್ವಾಮಿಜಿ ಆಶೀರ್ವಚನ ನೀಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರಿಗೆ ಯಶಸ್ಸು ಸಿಗಲಿ ಎಂದರು. ನಾಡಗೌಡ ಮತ್ತು ನಾಯಕ್ ಅವರು ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಅದಕ್ಷತೆ ಮತ್ತು ಸರಕಾರದ ನಿರಾಸಕ್ತಿಯನ್ನು ಖಂಡಿಸಿದರು. ಪ್ರತಿಯೊಂದು ಸಮಸ್ಯೆಗೂ ಕೇಂದ್ರ ಸರಕಾರದ ಕಡೆಗೆ ಬೆರಳು ತೋರಿಸುವ ರಾಜ್ಯ ಸರ್ಕಾರದ ನಿಲುವನ್ನು ಟೀಕಿಸಿದರು. ಜೆಡಿಎಸ್ ನಾಯಕರಿಗೆ ಸಾಮಾನ್ಯ ಜ್ಞಾನ ಇಲ್ಲ ಎಂದು ಪಾದಯಾತ್ರೆಯ ಕುರಿತು ಶಾಸಕರು ವ್ಯಂಗ್ಯವಾಡಿದ್ದು ಖಂಡನಾರ್ಹ ಎಂದು ಸಿವಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ಅಳವಂಡಿಯಿಂದ ಕಂಪ್ಲಿ ಮಾರ್ಗವಾಗಿ ಸಾಗಿದ ಮುಖಂಡರು ಮೊರನಾಳ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿದರು. ಗುಣಮಟ್ಟದ ವಿದ್ಯುತ್ ಪೂರೈಕೆಯ ಕೊರತೆಯಿಂದ ರೈತರು ಮತ್ತು ಜನಸಾಮಾನ್ಯರ ಮೇಲೆ ಆಗಿರುವ ಪರಿಣಾಮವನ್ನು ಈಶಪ್ಪ ಮಾದಿನೂರು ವಿವರಿಸಿದರು. ವಿದ್ಯುತ್ ಮತ್ತು ನೀರು ಪೂರೈಕೆ ಸರಕಾರದ ಆದ್ಯ ಕರ್ತವ್ಯವಾಗಿದ್ದು ಇವುಗಳನ್ನು ಪೂರೈಸುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು. ಮೊರನಾಳ ಗ್ರಾಮದ ರೈತ ಲಕ್ಷ್ಮಪ್ಪ ಮಗಳದ ಅವರ ಆಹ್ವಾನದ ಮೇರೆಗೆ ಅವರ ಮೂರುವರೆ ಎಕರೆ ಜಮೀನಿನಲ್ಲಿ ಒಣಗಿದ ಬೆಳೆಯನ್ನು ವೀಕ್ಷಿಸಿದರು. ತಮಗೆ ಆಗಿರುವ ನಷ್ಟದ ಕುರಿತು ಮಗಳದ ವಿವರಿಸಿದರು. ಮೊರನಾಳ ಹೊರ ವಲಯದ ಜಮೀನುಗಳಲ್ಲಿ ರೈತ ಮಹಿಳೆಯರು ಹಾಗೂ ಯುವಕರೊಂದಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಹ ಭೋಜನ ನಡೆಸಿದರು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ತಮಗೆ ಆಗುತ್ತಿರುವ ಅನ್ಯಾಯವನ್ನು ಆ ಯುವಕರು ಮತ್ತು ಮಹಿಳೆಯರು ಎಳೆ ಎಳೆಯಾಗಿ ಬಿಡಿಸಿ ಇಟ್ಟರು. ಕಳೆದ 13 ವರ್ಷಗಳಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಒಮ್ಮೆಯೂ ಇತ್ತ ಕಡೆ ತಲೆ ಹಾಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರದ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ತಮಗೆ ಸಿಗುವ ಕೂಲಿಯಲ್ಲಿ ವ್ಯತ್ಯಾಸವಾಗುತ್ತಿದೆ. ತಮಗೆ ನ್ಯಾಯ ಕೊಡಿಸಿ ಎಂದು ವಿನಂತಿಸಿದರು. ಮೂರನಾಳ ಗ್ರಾಮದಿಂದ ಬೆಟಗೇರಿಗೆ ತೆರಳಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿನ ಸಂಗೊಳ್ಳಿ ರಾಯಣ್ಣ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಸಾರ್ವಜನಿಕ ಸಭೆ ನಡೆಸಿದರು. ಗಂಗಾವತಿಯ ಮೈತ್ರಿ ಪಕ್ಷದ ಯುವ ಮುಖಂಡರಾದ ಸಂಗಮೇಶ್ ಸುಗ್ರೀವ ಮಾತನಾಡಿ, ರೈತರನ್ನು ನಿರ್ಲಕ್ಷಿಸಿದ ಕಾಂಗ್ರೆಸ್ ಸರಕಾರ ಮುಂದಿನ ಚುನಾವಣೆಗಳಲ್ಲಿ ನೆಲಕಚ್ಚುವುದು ಖಚಿತ, ಮೈತ್ರಿ ಪಕ್ಷ ಗೆಲುವು ನಿಶ್ಚಿತ ಎಂದು ಹೇಳಿದರು. ಕರಿಯಪ್ಪ ಹಾಲವರ್ತಿ, ಮೂರ್ತೆಪ್ಪ ಹಿಟ್ನಾಳ ಹಾಗೂ ಸಿ ವಿ ಚಂದ್ರಶೇಖರ್ ನ್ಯಾಯ ಸಿಗುವ ತನಕ ಜೆಡಿಎಸ್ ಹೋರಾಟ ಮಾಡಲಿದೆ. ಅಗತ್ಯವೆನಿಸಿದರೆ ಬೆಂಗಳೂರಿನ ತನಕ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು. ಮಳೆ ಕೊರತೆಯಿಂದಾಗಿ ಸಂಪೂರ್ಣವಾಗಿ ಒಣಗಿರುವ ಬೆಟಗೇರಿ ಕೆರೆಯನ್ನು ವೀಕ್ಷಿಸಿ ಸ್ಥಳೀಯ ಜನರೊಂದಿಗೆ ಸಂವಾದ ನಡೆಸಿದರು. ಬೆಟಗೇರಿಯಿಂದ ಬಿಸರಳ್ಳಿ ಗ್ರಾಮಕ್ಕೆ ತೆರಳಿ ಸಂಜೆ ಸಾರ್ವಜನಿಕ ಸಭೆ ನಡೆಸಿದರು. ರೈತರ ಬದುಕಿಗಾಗಿ ಹಮ್ಮಿಕೊಂಡ ಈ ಹೋರಾಟದಲ್ಲಿ ಸಾರ್ವಜನಿಕರ ಬೆಂಬಲ ಕೋರಿದರು. ಮೊದಲನೇ ದಿನ ನಡೆದ ಪಾದಯಾತ್ರೆಗೆ ಜನರಿಂದ ಅದ್ಭುತ ಪೂರ್ವ ಸ್ಪಂದನೆ ದೊರೆಯಿತು. ಯುವಕರು ಮಹಿಳೆಯರು ಹಾಗೂ ರೈತರು ಭಾರಿ ಸಂಖ್ಯೆಯಲ್ಲಿ ಮುಖಂಡರೊಡನೆ ಹೆಜ್ಜೆ ಹಾಕಿದರು. ಎರಡನೇ ದಿನದ ವಿವರ : ಬುಧವಾರ ಮುಂಜಾನೆ 8 ಗಂಟೆಗೆ ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದಿಂದ ಆರಂಭವಾಗುವ ಪಾದಯಾತ್ರೆ ಹಿರೇ ಸಿಂದೋಗಿ, ಕಾಟ್ರಳ್ಳಿ, ಕೋಳೂರು ದದೇಗಲ್ ಗ್ರಾಮಗಳ ಮೂಲಕ ಸಾಗಿ ಕೊಪ್ಪಳ ಪ್ರವೇಶಿಸಲಿದೆ. ನೂರಾರು ಜನ ಪಾದಯಾತ್ರೆಯನ್ನು ಸೇರಿಕೊಳ್ಳಲಿದ್ದಾರೆ. ಬನ್ನಿಕಟ್ಟಿ, ಲೇಬರ್ ವೃತ್ತ, ಅಶೋಕ ವೃತ್ತ ಶ್ರೀ ಬಸವೇಶ್ವರ ವೃತ್ತದ ಮೂಲಕ ಜಿಲ್ಲಾಡಳಿತ ಕಚೇರಿಯ ಆವರಣವನ್ನು ತಲುಪಲಿದೆ. ಸಂಜೆ ನಡೆಯುವ ಸಮಾರೋಪ ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿಬಿ ಸುರೇಶ್ ಬಾಬು, ಶಾಸಕರಾದ ಕರೆಮ್ಮ ನಾಯಕ್, ಶರಣಗೌಡ ಕಂದುಕೂರ ಹಾಗೂ ಪಕ್ಷದ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ್ ಮಾತನಾಡಲಿದ್ದಾರೆ. ಈ ಮುಖಂಡರ ನಿಯೋಗದ ನಾಯಕತ್ವ ವಹಿಸಿ ಸಿ ವಿ ಚಂದ್ರಶೇಖರ್ ಜಿಲ್ಲಾಧಿಕಾರಿ ಗಳಿಗೆ ಈ ಕೂಡಲೇ ಕೊಪ್ಪಳವನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಮತ್ತು ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಿದ್ದಾರೆ. .

5 hrs ago
user_ಅಕ್ಷರಕ್ರಾಂತಿ ನ್ಯೂಸ್
ಅಕ್ಷರಕ್ರಾಂತಿ ನ್ಯೂಸ್
Local News Reporter ಕೊಪ್ಪಳ, ಕೊಪ್ಪಳ, ಕರ್ನಾಟಕ•
5 hrs ago
aae6a26a-d65d-4287-aa62-8275f61adc90

ಜನಸ್ಪಂದನೆ ಪಡೆದ ಜೆಡಿಎಸ್ 'ನ್ಯಾಯದ ನಡಿಗೆ' - ಪಾದಯಾತ್ರೆಯ ಮೊದಲ ದಿನ ಹರಿದು ಬಂದ ಜನಸಾಗರ aksharakranti news ಜನಸ್ಪಂದನೆ ಪಡೆದ ಜೆಡಿಎಸ್ 'ನ್ಯಾಯದ ನಡಿಗೆ' - ಪಾದಯಾತ್ರೆಯ ಮೊದಲ ದಿನ ಹರಿದು ಬಂದ ಜನಸಾಗರ ಕೊಪ್ಪಳ,: ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಎರಡು ದಿನಗಳ 'ನ್ಯಾಯಕ್ಕಾಗಿ ನಡೆ' ಪಾದಯಾತ್ರೆ ಮಂಗಳವಾರ ಮುಂಜಾನೆ ಬೆಳಗಟ್ಟಿಯಿಂದ ಪ್ರಾರಂಭವಾಯಿತು. ಪಾದಯಾತ್ರೆಗೆ ಬೆಳಗಟ್ಟಿಯ ಕನಕರಾಯ ದೇವಸ್ಥಾನ - ಮುಸ್ತಫಾ ಖಾದ್ರಿ ದರ್ಗಾ ಆವರಣದಲ್ಲಿ ಚಾಲನೆ ನೀಡಲಾಯಿತು. ಪಕ್ಷದ ಗೌರವಾಧ್ಯಕ್ಷ ಈಶಪ್ಪ ಮಾದಿನೂರು, ಸಿ ವಿ ಚಂದ್ರಶೇಖರ್, ಓಬಿಸಿ ಘಟಕದ ಜಿಲ್ಲಾಧ್ಯಕ್ಷ ಕರಿಯಪ್ಪ ಹಾಲವರ್ತಿ ಮತ್ತು ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಹಿಟ್ನಾಳ್ ಪಾದಯಾತ್ರೆಯ ಮಹತ್ವ ವಿವರಿಸಿದರು. ನೂರಾರು ಜನ ಪಾದಯಾತ್ರೆಯಲ್ಲಿ ಹಟ್ಟಿ ಕ್ರಾಸ್ ಮೂಲಕ ರಘುನಾಥನಹಳ್ಳಿಯ ಕಡೆಗೆ ಹೆಜ್ಜೆ ಹಾಕಿದರು. ಮಾಜಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಮಾಜಿ ಶಾಸಕ ರಾಜ ವೆಂಕಟಪ್ಪ ನಾಯಕ ಅಲ್ಲಿ ಪಾದಯಾತ್ರೆಯನ್ನು ಕೂಡಿಕೊಂಡರು. ಸಿ ವಿ ಚಂದ್ರಶೇಖರ್ ಹಾಗೂ ಅವರ ಪಾದಯಾತ್ರೆಯ ತಂಡದವರನ್ನು ಸನ್ಮಾನಿಸಿ ಕೊಪ್ಪಳ ತಾಲೂಕಿನ ಜನರಿಗಾಗಿ ಹಮ್ಮಿಕೊಂಡಿರುವ ಈ ಹೋರಾಟ ಯಶಸ್ವಿಯಾಗಲಿ ಎಂದರು. ಅಳವಂಡಿಗೆ ಸಾಗುವ ಮಾರ್ಗದಲ್ಲಿ ಒಣಗಿದ ಜಮೀನುಗಳಲ್ಲಿ ಕೆಲಸ ಮಾಡುತ್ತಿದ್ದ ರೈತರನ್ನು ನಾಯಕರು ಭೇಟಿಯಾಗಿ ಸಂವಾದಿಸಿದರು. ಬರಗಾಲ ಹಾಗೂ ಸರಕಾರದ ನಿರ್ಲಕ್ಷತೆಯಿಂದ ರೈತರಿಗೆ ಉಂಟಾಗಿರುವ ಸಮಸ್ಯೆಗಳನ್ನು ರೈತರು ಮುಖಂಡರ ಗಮನಕ್ಕೆ ತಂದರು. ಅಳವಂಡಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮರುಳರಾಧ್ಯ ಶಿವಚಾರ್ಯರು ಮಹಾಸ್ವಾಮಿಜಿ ಆಶೀರ್ವಚನ ನೀಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕರಿಗೆ ಯಶಸ್ಸು ಸಿಗಲಿ ಎಂದರು. ನಾಡಗೌಡ ಮತ್ತು ನಾಯಕ್ ಅವರು ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಅದಕ್ಷತೆ ಮತ್ತು ಸರಕಾರದ ನಿರಾಸಕ್ತಿಯನ್ನು ಖಂಡಿಸಿದರು. ಪ್ರತಿಯೊಂದು

a364ae8a-b862-4d14-aec6-023f202ef1f4

ಸಮಸ್ಯೆಗೂ ಕೇಂದ್ರ ಸರಕಾರದ ಕಡೆಗೆ ಬೆರಳು ತೋರಿಸುವ ರಾಜ್ಯ ಸರ್ಕಾರದ ನಿಲುವನ್ನು ಟೀಕಿಸಿದರು. ಜೆಡಿಎಸ್ ನಾಯಕರಿಗೆ ಸಾಮಾನ್ಯ ಜ್ಞಾನ ಇಲ್ಲ ಎಂದು ಪಾದಯಾತ್ರೆಯ ಕುರಿತು ಶಾಸಕರು ವ್ಯಂಗ್ಯವಾಡಿದ್ದು ಖಂಡನಾರ್ಹ ಎಂದು ಸಿವಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು. ಅಳವಂಡಿಯಿಂದ ಕಂಪ್ಲಿ ಮಾರ್ಗವಾಗಿ ಸಾಗಿದ ಮುಖಂಡರು ಮೊರನಾಳ ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿದರು. ಗುಣಮಟ್ಟದ ವಿದ್ಯುತ್ ಪೂರೈಕೆಯ ಕೊರತೆಯಿಂದ ರೈತರು ಮತ್ತು ಜನಸಾಮಾನ್ಯರ ಮೇಲೆ ಆಗಿರುವ ಪರಿಣಾಮವನ್ನು ಈಶಪ್ಪ ಮಾದಿನೂರು ವಿವರಿಸಿದರು. ವಿದ್ಯುತ್ ಮತ್ತು ನೀರು ಪೂರೈಕೆ ಸರಕಾರದ ಆದ್ಯ ಕರ್ತವ್ಯವಾಗಿದ್ದು ಇವುಗಳನ್ನು ಪೂರೈಸುವಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು. ಮೊರನಾಳ ಗ್ರಾಮದ ರೈತ ಲಕ್ಷ್ಮಪ್ಪ ಮಗಳದ ಅವರ ಆಹ್ವಾನದ ಮೇರೆಗೆ ಅವರ ಮೂರುವರೆ ಎಕರೆ ಜಮೀನಿನಲ್ಲಿ ಒಣಗಿದ ಬೆಳೆಯನ್ನು ವೀಕ್ಷಿಸಿದರು. ತಮಗೆ ಆಗಿರುವ ನಷ್ಟದ ಕುರಿತು ಮಗಳದ ವಿವರಿಸಿದರು. ಮೊರನಾಳ ಹೊರ ವಲಯದ ಜಮೀನುಗಳಲ್ಲಿ ರೈತ ಮಹಿಳೆಯರು ಹಾಗೂ ಯುವಕರೊಂದಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಹ ಭೋಜನ ನಡೆಸಿದರು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ತಮಗೆ ಆಗುತ್ತಿರುವ ಅನ್ಯಾಯವನ್ನು ಆ ಯುವಕರು ಮತ್ತು ಮಹಿಳೆಯರು ಎಳೆ ಎಳೆಯಾಗಿ ಬಿಡಿಸಿ ಇಟ್ಟರು. ಕಳೆದ 13 ವರ್ಷಗಳಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಒಮ್ಮೆಯೂ ಇತ್ತ ಕಡೆ ತಲೆ ಹಾಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರದ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ತಮಗೆ ಸಿಗುವ ಕೂಲಿಯಲ್ಲಿ ವ್ಯತ್ಯಾಸವಾಗುತ್ತಿದೆ. ತಮಗೆ ನ್ಯಾಯ ಕೊಡಿಸಿ ಎಂದು ವಿನಂತಿಸಿದರು. ಮೂರನಾಳ ಗ್ರಾಮದಿಂದ ಬೆಟಗೇರಿಗೆ ತೆರಳಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿನ ಸಂಗೊಳ್ಳಿ ರಾಯಣ್ಣ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಸಾರ್ವಜನಿಕ ಸಭೆ ನಡೆಸಿದರು. ಗಂಗಾವತಿಯ ಮೈತ್ರಿ ಪಕ್ಷದ ಯುವ ಮುಖಂಡರಾದ ಸಂಗಮೇಶ್ ಸುಗ್ರೀವ ಮಾತನಾಡಿ, ರೈತರನ್ನು ನಿರ್ಲಕ್ಷಿಸಿದ ಕಾಂಗ್ರೆಸ್

2d83e6c0-4a2d-46df-af81-7ec9e5d1e31a

ಸರಕಾರ ಮುಂದಿನ ಚುನಾವಣೆಗಳಲ್ಲಿ ನೆಲಕಚ್ಚುವುದು ಖಚಿತ, ಮೈತ್ರಿ ಪಕ್ಷ ಗೆಲುವು ನಿಶ್ಚಿತ ಎಂದು ಹೇಳಿದರು. ಕರಿಯಪ್ಪ ಹಾಲವರ್ತಿ, ಮೂರ್ತೆಪ್ಪ ಹಿಟ್ನಾಳ ಹಾಗೂ ಸಿ ವಿ ಚಂದ್ರಶೇಖರ್ ನ್ಯಾಯ ಸಿಗುವ ತನಕ ಜೆಡಿಎಸ್ ಹೋರಾಟ ಮಾಡಲಿದೆ. ಅಗತ್ಯವೆನಿಸಿದರೆ ಬೆಂಗಳೂರಿನ ತನಕ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು. ಮಳೆ ಕೊರತೆಯಿಂದಾಗಿ ಸಂಪೂರ್ಣವಾಗಿ ಒಣಗಿರುವ ಬೆಟಗೇರಿ ಕೆರೆಯನ್ನು ವೀಕ್ಷಿಸಿ ಸ್ಥಳೀಯ ಜನರೊಂದಿಗೆ ಸಂವಾದ ನಡೆಸಿದರು. ಬೆಟಗೇರಿಯಿಂದ ಬಿಸರಳ್ಳಿ ಗ್ರಾಮಕ್ಕೆ ತೆರಳಿ ಸಂಜೆ ಸಾರ್ವಜನಿಕ ಸಭೆ ನಡೆಸಿದರು. ರೈತರ ಬದುಕಿಗಾಗಿ ಹಮ್ಮಿಕೊಂಡ ಈ ಹೋರಾಟದಲ್ಲಿ ಸಾರ್ವಜನಿಕರ ಬೆಂಬಲ ಕೋರಿದರು. ಮೊದಲನೇ ದಿನ ನಡೆದ ಪಾದಯಾತ್ರೆಗೆ ಜನರಿಂದ ಅದ್ಭುತ ಪೂರ್ವ ಸ್ಪಂದನೆ ದೊರೆಯಿತು. ಯುವಕರು ಮಹಿಳೆಯರು ಹಾಗೂ ರೈತರು ಭಾರಿ ಸಂಖ್ಯೆಯಲ್ಲಿ ಮುಖಂಡರೊಡನೆ ಹೆಜ್ಜೆ ಹಾಕಿದರು. ಎರಡನೇ ದಿನದ ವಿವರ : ಬುಧವಾರ ಮುಂಜಾನೆ 8 ಗಂಟೆಗೆ ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದಿಂದ ಆರಂಭವಾಗುವ ಪಾದಯಾತ್ರೆ ಹಿರೇ ಸಿಂದೋಗಿ, ಕಾಟ್ರಳ್ಳಿ, ಕೋಳೂರು ದದೇಗಲ್ ಗ್ರಾಮಗಳ ಮೂಲಕ ಸಾಗಿ ಕೊಪ್ಪಳ ಪ್ರವೇಶಿಸಲಿದೆ. ನೂರಾರು ಜನ ಪಾದಯಾತ್ರೆಯನ್ನು ಸೇರಿಕೊಳ್ಳಲಿದ್ದಾರೆ. ಬನ್ನಿಕಟ್ಟಿ, ಲೇಬರ್ ವೃತ್ತ, ಅಶೋಕ ವೃತ್ತ ಶ್ರೀ ಬಸವೇಶ್ವರ ವೃತ್ತದ ಮೂಲಕ ಜಿಲ್ಲಾಡಳಿತ ಕಚೇರಿಯ ಆವರಣವನ್ನು ತಲುಪಲಿದೆ. ಸಂಜೆ ನಡೆಯುವ ಸಮಾರೋಪ ಸಭೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿಬಿ ಸುರೇಶ್ ಬಾಬು, ಶಾಸಕರಾದ ಕರೆಮ್ಮ ನಾಯಕ್, ಶರಣಗೌಡ ಕಂದುಕೂರ ಹಾಗೂ ಪಕ್ಷದ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ್ ಮಾತನಾಡಲಿದ್ದಾರೆ. ಈ ಮುಖಂಡರ ನಿಯೋಗದ ನಾಯಕತ್ವ ವಹಿಸಿ ಸಿ ವಿ ಚಂದ್ರಶೇಖರ್ ಜಿಲ್ಲಾಧಿಕಾರಿ ಗಳಿಗೆ ಈ ಕೂಡಲೇ ಕೊಪ್ಪಳವನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಮತ್ತು ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಿದ್ದಾರೆ. .

More news from ಕರ್ನಾಟಕ and nearby areas
  • ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಡಿ ಶೀಘ್ರವೇ 9000 ಎಕರೆ ಜಮೀನಿಗೆ ನೀರು: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಕೊಪ್ಪಳ : ತಾಲೂಕಿನ ಬಹುನಿರೀಕ್ಷಿತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಒಟ್ಟು 9000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು. ನಗರದ ಎಸ್.ಎಫ್. ಶಾಲೆಯ ಎದುರುಗಡೆಯಿರುವ ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಅಳವಂಡಿ ಬೇಟಗೇರಿ ಏತ ನೀರಾವರಿ ಯೋಜನೆಯು ಕೊಪ್ಪಳ ತಾಲ್ಲೂಕಿನ ಹನಕುಂಟಿ ಗ್ರಾಮದಿಂದ 2 ಕಿ.ಮೀ. ಹತ್ತಿರದಲ್ಲಿರುತ್ತದೆ. ಸದರಿ ಯೋಜನೆಗೆ ಮೂಲತಃ ಕೃಷ್ಣ ಕೊಳ್ಳದ ವ್ಯಾಪ್ತಿಯಲ್ಲಿ ಬರುವ ತುಂಗಭದ್ರ ನದಿಯಿಂದ 0.50 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಒಟ್ಟು 9000 ಏಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿರುತ್ತದೆ. ಈ ಯೋಜನೆಗೆ ಈ ಹಿಂದೆ 87.10 ಕೋಟಿಗಳಿಗೆ ಡಿ.ಪಿ.ಆರ್ ಅನ್ನು ಸರ್ಕಾರಕ್ಕೆ ಸಲ್ಲಸಿ ದಿನಾಂಕ: 30.12.2014 ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ ಎಂದರು. ಜಾಕ್‌ವೆಲ್, ಇನ್‌ಟೇಕ್ ಕಾಲುವೆ. ರೈಸಿಂಗ್ ಮೇನ್, ಡೆಲಿವರಿ ಚೇಂಬರ್ ಹಾಗೂ ಟ್ರಾನ್ಸ್‌ಮಿಷನ್ ಲೈನ್, 33 ಕೆವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗಳನ್ನು ಗುತ್ತಿಗೆದಾರರಾದ ಜಿ.ಶಂಕರ್ ರವರಿಗೆ ಟೆಂಡ‌ರ್ ಆಧಾರದ ಮೇಲೆ 61.30 ಕೋಟಿಗಳಿಗೆ 21.02.2016 ರಂದು ವಹಿಸಲಾಗಿತ್ತು. ಈ ಯೋಜನೆಯಡಿ ಜಾಕ್‌ವೆಲ್, ಇನ್‌ಟೀಕ್ ಕಾಲುವೆ ಉದ್ದ 1.02 ಕಿ.ಮೀ. 16.50ಕಿ.ಮೀ ಉದ್ದ ಎಂಎಸ್ ರೈಸಿಂಗ್ ಮೇನ್, 1760 ಹೆಚ್.ಪಿ ಸಾಮರ್ಥ್ಯದ 2+1 ಪಂಪ್ ಮತ್ತು ಮೋಟಾರಗಳು, 2 ಡೆಲವರಿ ಚೇಂಬರ್‌ಗಳು. ಜಾಕ್‌ವೆಲ್ ಪಕ್ಕದಲ್ಲಿ 33/6.6 ಕೆವಿ ಸಬ್ ಸ್ಟೇಷನ್, 6.10 ಕಿ.ಮೀ ಉದ್ದ ಟ್ರಾನ್ಸ್‌ಮಿಷನ್ ಲೈನ್ ಹಾಗೂ ಟರ್ಮಿನಲ್ ಬೇ ಸಿರ್ಮಿಸಲಾಗಿರುತ್ತದೆ. ದಿನಾಂಕ 10.09.2026 ರಂದು ಸಬ್ ಸ್ಟೇಷನ್ ಚಾರ್ಜ್ ಮಾಡಲಾಗಿರುತ್ತದೆ ಎಂದು ಹೇಳಿದರು. ಪ್ರತಿ ಪಂಪ್‌ನಿಂದ 28.28 ಕ್ಯೂಸೆಕ್ಸ್ ರಂತೆ ಒಟ್ಟು 56.56 ಕ್ಯೂಸೆಕ್ಸ್ ನೀರನ್ನು ಹರಿಸಲಾಗುವುದು ಹಾಗೂ ಜಲಾಶಯದ ನೀರಿನ ಮಟ್ಟ 1605.00 ಅಡಿ (ಜಲಾಶಯದ ಸಾಮರ್ಥ್ಯ 28.70 ಟಿ.ಎಂ.ಸಿ ವರೆಗು) ತಲುಪುವವರೆಗೆ ಲಭ್ಯವಿರುವ ನೀರನ್ನು ಪಡೆಯಬಹುದು. ಈ ಯೋಜನೆಯ ಹೆಚ್ಚುವರಿ 3000 ಎಕರೆ ಕ್ಷೇತ್ರದ ನೀರಾವರಿ ಕಲ್ಪಿಸುವ ಕಾಮಗಾರಿಯನ್ನು ಎ ವಿಆರ್ ಕನ್ಸಟ್ರಕ್ಷನ್ಸ್ ಇವರಿಗೆ ರೂ:4.59 ಕೋಟಿಗಳಿಗೆ ದಿನಾಂಕ: 30/03/2021 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಿದ್ದು, ಈ ಕಾಮಗಾರಿಯಲ್ಲಿ ರೈಸಿಂಗ್ ಮೇನ್ ಪೂರ್ಣಗೊಂಡಿದೆ ಮತ್ತು ಪಂಪುಗಳನ್ನು ಅಳವಡಿಸುವುದು ಹಾಗೂ ಸಬ್‌ಸ್ಟೇಷನ್ ಕಾಮಗಾರಿಗಳು ಬಾಕಿ ಉಳಿದಿರುತ್ತದೆ ಎಂದರು. ಪ್ರಸ್ತುತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಪರಿಷ್ಕೃತ ಡಿ.ಪಿ.ಆರ್ ಅನ್ನು ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯಲ್ಲಿ ಮಂಡಿಸಿದ್ದು. ರೂ.211.00 ಕೋಟಿಗಳಿಗೆ ಅನುಮೋದನೆ ನೀಡಿರುತ್ತಾರೆ. ಯೋಜನೆಯಡಿ 6000 ಎಕರೆ ಜಮೀನುಗಳಗೆ ಈಗಾಗಲೇ ಒಟ್ಟಾರೆ 39.78 ಕಿ.ಮೀ ಉದ್ದದ ಮುಖ್ಯ ಕಾಲುವೆ ಹಾಗೂ ಉಪ ಕಾಲುವೆಗಳ ನಿರ್ಮಾಣ ಪೂರ್ಣಗೊಂಡಿರುತ್ತದೆ ಎಂದು ತಿಳಿಸಿದರು. 3000 ಏಕರೆ ಜಮೀನುಗಳಗೆ ಮಧ್ಯ ಪ್ರದೇಶ ಮಾದರಿಯ ಮುಖ್ಯ ಪೈಪ್‌ಲೈನ್ ಹಾಗೂ ವಿತರಣಾ ಕಾಲುವೆ ಪೈಪ್‌ಲೈನ್ ಕಾಮಗಾರಿಯನ್ನು ರೂ. 11.50 ಕೋಟಿಗಳಿಗೆ ಟೆಂಡರ್ ಕರೆಯಲಾಗಿದ್ದು, ಚಿದು ಇನ್ಫ್ರಾಟೆಕ್ ಪ್ರೈ.ಲಿ (CHIDU INFRATECH PRIVATE LIMITED) ಇವರಿಗೆ ರೂ:11.80 ಕೋಟಿಗಳಿಗೆ ದಿನಾಂಕ: 22/08/2025 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಲಾಗಿರುತ್ತದೆ. ಈ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ ಎಂದರು. ಡೆಲಿವರಿ ಚೇಂಬರ್ ನಿಂದ ಬ್ಲಾಕ್-1 ಗೆ ಹೆ.ಡಿ.ಪಿ.ಇ ಪೈಪ್ (Dia-355 to 125) ನ ಒಟ್ಟು ಉದ್ದ 8.7 ಕಿ.ಮೀ, ಪೈಪ್ ನೆಟ್‌ವರ್ಕ್ ನಿಂದ 1243 ಎಕರೆ ಬ್ಲಾಕ್-2 ಗೆ ಎಂಎಸ್ ಪೈಪ್ (Dia-380, 360, 330) ಹಾಗೂ ಹೆ.ಡಿ.ಪಿ.ಇ ಪೈಪ್ (Dia-355 to 125)ನ ಒಟ್ಟು ಉದ್ದ 16.82 ಕಿ.ಮೀ ಪೈಪ್ ನೆಟ್‌ವರ್ಕ್ ನಿಂದ 1757 ಎಕರೆ ಒಟ್ಟಾರೆ 3000 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಸಲು ಯೋಜಿಸಲಾಗಿರುತ್ತದೆ. ಪ್ರತಿ 20 ಹೆಕ್ಟೇರ್ ಜಮೀನುಗಳಗೆ ಪೈಪ್‌ ಗಳಂದ ಚೆಕ್ ಓಟ್ ಲೆಟ್ ನಿಂದಾ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು. *ಒಟ್ಟು 9 ಹಳ್ಳಿಗಳಿಗೆ ಅನುಕೂಲ:* ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ಮೈನಾಳ್ಳಿ, ಹಂದ್ರಾಳ, ಅಳವಂಡಿ, ಕವಲೂರು, ಹಿರೇಸಿಂದೋಗಿ, ಬಿಕ್ಕನಹಳ್ಳಿ, ಬೆಟ್ಟಗೇರಿ ಹಾಗೂ ಕುಕನೂರು ತಾಲೂಕಿನ ತಳಕಲ್ಲು, ಕೋಮಲಾಪುರ ಸೇರಿದಂತೆ ಒಟ್ಟು 9 ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಅಲ್ಲದೆ, 9000 ಎಕರೆ ಹೊಲಗಾಲುವೆಗಳ ನಿರ್ಮಾಣಕ್ಕಾಗಿ 47 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಶಾಸಕರು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದರಾದ ಕರಡಿ ಸಂಗಣ್ಣ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ, ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
    1
    ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಡಿ ಶೀಘ್ರವೇ 9000 ಎಕರೆ ಜಮೀನಿಗೆ ನೀರು: ಶಾಸಕ ಕೆ.ರಾಘವೇಂದ್ರ ಹಿಟ್ನಾಳ್
ಕೊಪ್ಪಳ : ತಾಲೂಕಿನ ಬಹುನಿರೀಕ್ಷಿತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಒಟ್ಟು 9000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಹೇಳಿದರು.
ನಗರದ ಎಸ್.ಎಫ್. ಶಾಲೆಯ ಎದುರುಗಡೆಯಿರುವ ತಮ್ಮ ಕಾರ್ಯಾಲಯದಲ್ಲಿ ಮಂಗಳವಾರ  ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಳವಂಡಿ ಬೇಟಗೇರಿ ಏತ ನೀರಾವರಿ ಯೋಜನೆಯು ಕೊಪ್ಪಳ ತಾಲ್ಲೂಕಿನ ಹನಕುಂಟಿ ಗ್ರಾಮದಿಂದ 2 ಕಿ.ಮೀ. ಹತ್ತಿರದಲ್ಲಿರುತ್ತದೆ. ಸದರಿ ಯೋಜನೆಗೆ ಮೂಲತಃ ಕೃಷ್ಣ ಕೊಳ್ಳದ ವ್ಯಾಪ್ತಿಯಲ್ಲಿ ಬರುವ ತುಂಗಭದ್ರ ನದಿಯಿಂದ 0.50 ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯಿಂದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಒಟ್ಟು 9000 ಏಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿರುತ್ತದೆ. ಈ ಯೋಜನೆಗೆ ಈ ಹಿಂದೆ 87.10 ಕೋಟಿಗಳಿಗೆ ಡಿ.ಪಿ.ಆರ್ ಅನ್ನು ಸರ್ಕಾರಕ್ಕೆ ಸಲ್ಲಸಿ ದಿನಾಂಕ: 30.12.2014 ರಂದು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ ಎಂದರು.
ಜಾಕ್‌ವೆಲ್, ಇನ್‌ಟೇಕ್ ಕಾಲುವೆ. ರೈಸಿಂಗ್ ಮೇನ್, ಡೆಲಿವರಿ ಚೇಂಬರ್ ಹಾಗೂ ಟ್ರಾನ್ಸ್‌ಮಿಷನ್ ಲೈನ್, 33 ಕೆವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗಳನ್ನು ಗುತ್ತಿಗೆದಾರರಾದ ಜಿ.ಶಂಕರ್ ರವರಿಗೆ ಟೆಂಡ‌ರ್ ಆಧಾರದ ಮೇಲೆ 61.30 ಕೋಟಿಗಳಿಗೆ 21.02.2016 ರಂದು ವಹಿಸಲಾಗಿತ್ತು. ಈ ಯೋಜನೆಯಡಿ ಜಾಕ್‌ವೆಲ್, ಇನ್‌ಟೀಕ್ ಕಾಲುವೆ ಉದ್ದ 1.02 ಕಿ.ಮೀ. 16.50ಕಿ.ಮೀ ಉದ್ದ ಎಂಎಸ್ ರೈಸಿಂಗ್ ಮೇನ್, 1760 ಹೆಚ್.ಪಿ ಸಾಮರ್ಥ್ಯದ 2+1 ಪಂಪ್ ಮತ್ತು ಮೋಟಾರಗಳು, 2 ಡೆಲವರಿ ಚೇಂಬರ್‌ಗಳು. ಜಾಕ್‌ವೆಲ್ ಪಕ್ಕದಲ್ಲಿ 33/6.6 ಕೆವಿ ಸಬ್ ಸ್ಟೇಷನ್, 6.10 ಕಿ.ಮೀ ಉದ್ದ ಟ್ರಾನ್ಸ್‌ಮಿಷನ್ ಲೈನ್ ಹಾಗೂ ಟರ್ಮಿನಲ್ ಬೇ ಸಿರ್ಮಿಸಲಾಗಿರುತ್ತದೆ. ದಿನಾಂಕ 10.09.2026 ರಂದು ಸಬ್ ಸ್ಟೇಷನ್ ಚಾರ್ಜ್ ಮಾಡಲಾಗಿರುತ್ತದೆ ಎಂದು ಹೇಳಿದರು.
ಪ್ರತಿ ಪಂಪ್‌ನಿಂದ 28.28 ಕ್ಯೂಸೆಕ್ಸ್ ರಂತೆ ಒಟ್ಟು 56.56 ಕ್ಯೂಸೆಕ್ಸ್ ನೀರನ್ನು ಹರಿಸಲಾಗುವುದು ಹಾಗೂ ಜಲಾಶಯದ ನೀರಿನ ಮಟ್ಟ 1605.00 ಅಡಿ (ಜಲಾಶಯದ ಸಾಮರ್ಥ್ಯ 28.70 ಟಿ.ಎಂ.ಸಿ ವರೆಗು) ತಲುಪುವವರೆಗೆ ಲಭ್ಯವಿರುವ ನೀರನ್ನು ಪಡೆಯಬಹುದು. ಈ ಯೋಜನೆಯ ಹೆಚ್ಚುವರಿ 3000 ಎಕರೆ ಕ್ಷೇತ್ರದ ನೀರಾವರಿ ಕಲ್ಪಿಸುವ ಕಾಮಗಾರಿಯನ್ನು ಎ ವಿಆರ್ ಕನ್ಸಟ್ರಕ್ಷನ್ಸ್ ಇವರಿಗೆ ರೂ:4.59 ಕೋಟಿಗಳಿಗೆ ದಿನಾಂಕ: 30/03/2021 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಿದ್ದು, ಈ ಕಾಮಗಾರಿಯಲ್ಲಿ ರೈಸಿಂಗ್ ಮೇನ್ ಪೂರ್ಣಗೊಂಡಿದೆ ಮತ್ತು ಪಂಪುಗಳನ್ನು ಅಳವಡಿಸುವುದು ಹಾಗೂ ಸಬ್‌ಸ್ಟೇಷನ್ ಕಾಮಗಾರಿಗಳು ಬಾಕಿ ಉಳಿದಿರುತ್ತದೆ ಎಂದರು.
ಪ್ರಸ್ತುತ ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯ ಪರಿಷ್ಕೃತ ಡಿ.ಪಿ.ಆರ್ ಅನ್ನು ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯಲ್ಲಿ ಮಂಡಿಸಿದ್ದು. ರೂ.211.00 ಕೋಟಿಗಳಿಗೆ ಅನುಮೋದನೆ ನೀಡಿರುತ್ತಾರೆ. ಯೋಜನೆಯಡಿ 6000 ಎಕರೆ ಜಮೀನುಗಳಗೆ ಈಗಾಗಲೇ ಒಟ್ಟಾರೆ 39.78 ಕಿ.ಮೀ ಉದ್ದದ ಮುಖ್ಯ ಕಾಲುವೆ ಹಾಗೂ ಉಪ ಕಾಲುವೆಗಳ ನಿರ್ಮಾಣ ಪೂರ್ಣಗೊಂಡಿರುತ್ತದೆ ಎಂದು ತಿಳಿಸಿದರು.
3000 ಏಕರೆ ಜಮೀನುಗಳಗೆ ಮಧ್ಯ ಪ್ರದೇಶ ಮಾದರಿಯ ಮುಖ್ಯ ಪೈಪ್‌ಲೈನ್ ಹಾಗೂ ವಿತರಣಾ ಕಾಲುವೆ ಪೈಪ್‌ಲೈನ್ ಕಾಮಗಾರಿಯನ್ನು ರೂ. 11.50 ಕೋಟಿಗಳಿಗೆ ಟೆಂಡರ್ ಕರೆಯಲಾಗಿದ್ದು, ಚಿದು ಇನ್ಫ್ರಾಟೆಕ್ ಪ್ರೈ.ಲಿ (CHIDU INFRATECH PRIVATE LIMITED) ಇವರಿಗೆ ರೂ:11.80 ಕೋಟಿಗಳಿಗೆ ದಿನಾಂಕ: 22/08/2025 ರಂದು (9 ತಿಂಗಳ ಅವಧಿಗೆ) ಟರ್ನಕೀ ಆಧಾರದ ಮೇಲೆ ವಹಿಸಲಾಗಿರುತ್ತದೆ. ಈ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿರುತ್ತದೆ ಎಂದರು.
ಡೆಲಿವರಿ ಚೇಂಬರ್ ನಿಂದ ಬ್ಲಾಕ್-1 ಗೆ ಹೆ.ಡಿ.ಪಿ.ಇ ಪೈಪ್ (Dia-355 to 125) ನ ಒಟ್ಟು ಉದ್ದ 8.7 ಕಿ.ಮೀ, ಪೈಪ್ ನೆಟ್‌ವರ್ಕ್ ನಿಂದ 1243 ಎಕರೆ ಬ್ಲಾಕ್-2 ಗೆ ಎಂಎಸ್ ಪೈಪ್  (Dia-380, 360, 330) ಹಾಗೂ ಹೆ.ಡಿ.ಪಿ.ಇ ಪೈಪ್ (Dia-355 to 125)ನ  ಒಟ್ಟು ಉದ್ದ 16.82 ಕಿ.ಮೀ ಪೈಪ್ ನೆಟ್‌ವರ್ಕ್ ನಿಂದ 1757 ಎಕರೆ ಒಟ್ಟಾರೆ 3000 ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಸಲು ಯೋಜಿಸಲಾಗಿರುತ್ತದೆ. ಪ್ರತಿ 20 ಹೆಕ್ಟೇರ್ ಜಮೀನುಗಳಗೆ ಪೈಪ್‌ ಗಳಂದ ಚೆಕ್ ಓಟ್ ಲೆಟ್ ನಿಂದಾ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು.
*ಒಟ್ಟು 9 ಹಳ್ಳಿಗಳಿಗೆ ಅನುಕೂಲ:* ಅಳವಂಡಿ-ಬೆಟ್ಟಗೇರಿ ಏತ ನೀರಾವರಿ ಯೋಜನೆಯಿಂದ ಕೊಪ್ಪಳ ತಾಲೂಕಿನ ಮೈನಾಳ್ಳಿ, ಹಂದ್ರಾಳ, ಅಳವಂಡಿ, ಕವಲೂರು, ಹಿರೇಸಿಂದೋಗಿ, ಬಿಕ್ಕನಹಳ್ಳಿ, ಬೆಟ್ಟಗೇರಿ ಹಾಗೂ ಕುಕನೂರು ತಾಲೂಕಿನ ತಳಕಲ್ಲು, ಕೋಮಲಾಪುರ ಸೇರಿದಂತೆ ಒಟ್ಟು 9 ಗ್ರಾಮಗಳ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಅಲ್ಲದೆ, 9000 ಎಕರೆ ಹೊಲಗಾಲುವೆಗಳ ನಿರ್ಮಾಣಕ್ಕಾಗಿ 47 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಶಾಸಕರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಂಸದರಾದ ಕರಡಿ ಸಂಗಣ್ಣ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಸನ್ನ ಗಡಾದ, ಜಿ.ಪಂ ಮಾಜಿ ಅಧ್ಯಕ್ಷರಾದ ಎಸ್.ಬಿ. ನಾಗರಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
    user_STAR OF KOPPAL
    STAR OF KOPPAL
    Local News Reporter ಕೊಪ್ಪಳ, ಕೊಪ್ಪಳ, ಕರ್ನಾಟಕ•
    13 hrs ago
  • ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’! ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು! ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’! ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು! ನಮಸ್ಕಾರ ಬಂಧುಗಳೇ... ​ನಾಡಿನಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದೆ. ಬೀದಿ ಬೀದಿಗಳಲ್ಲಿ ವಿಘ್ನನಿವಾರಕನ ಜಯಘೋಷ ಮೊಳಗುತ್ತಿದೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ 'ಹುಡಿಯದ ಓಣಿ'ಯಲ್ಲಿ ಕಂಡುಬಂದ ಈ ದೃಶ್ಯ ಮಾತ್ರ ಇಡೀ ನಾಡಿನ ಗಮನ ಸೆಳೆಯುವಂತಿದೆ, ಪ್ರತಿಯೊಬ್ಬರ ಮನ ಮುಟ್ಟುವಂತಿದೆ! ​ಹೌದು, ಇಲ್ಲಿ ಒಂದೆಡೆ ಅಲ್ಲಾಹನ ಪ್ರಾರ್ಥನೆ ನಡೆಯುವ ಮಸೀದಿ ಇದ್ದರೆ... ಅದೇ ಮಸೀದಿಯ ಅಂಗಳದ ಪಕ್ಕದಲ್ಲೇ ಸಿದ್ದಿವಿನಾಯಕ ವಿರಾಜಮಾನನಾಗಿದ್ದಾನೆ! ವಿಶೇಷ ಎಂದರೆ, ಯಾವುದೇ ಜಾತಿ-ಧರ್ಮದ ಹಂಗಿಲ್ಲದೆ, ಇಲ್ಲಿನ ಮುಸ್ಲಿಂ ಸಮುದಾಯದ ಪುಟ್ಟ ಮಕ್ಕಳು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ತಮ್ಮ ಕೈಯಾರೆ ಕಾಯಿ ಒಡೆದು, ಪೂಜೆ ಸಲ್ಲಿಸಿ, ಪ್ರಸಾದ ಹಂಚಿ ಹಬ್ಬದ ಸಂಭ್ರಮದಲ್ಲಿದ್ದಾರೆ. ​ಇನ್ನು ಅತ್ಯಂತ ಖುಷಿಯ ವಿಷಯ ಎಂದರೆ... ಇಲ್ಲಿನ ಮಕ್ಕಳು ಕೇವಲ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿಲ್ಲ, ಬದಲಾಗಿ ಅತ್ಯಂತ ಪ್ರೀತಿಯಿಂದ ಈ ಮೂರ್ತಿಗೆ 'ಹುಡಿಯದ ಓಣಿಯ ಸಾಮ್ರಾಟ್' ಎಂದೇ ನಾಮಕರಣ ಮಾಡಿದ್ದಾರೆ! ​ಸಾಮ್ರಾಟ್ ಎಂಬ ಹೆಸರಿನಲ್ಲಿ ಗಣಪತಿಯನ್ನು ನೆನೆಯುತ್ತಿರುವ ಈ ಮಕ್ಕಳ ಮನಸ್ಸಿನಲ್ಲಿ 'ನಾವೆಲ್ಲರೂ ಒಂದೇ' ಎನ್ನುವ ಭ್ರಾತೃತ್ವದ ಸದ್ಭಾವನೆ ಆಳವಾಗಿ ಬೇರೂರಿದೆ. ಧರ್ಮಗಳ ಹೆಸರಿನಲ್ಲಿ ಕಹಿ ವಾತಾವರಣ ಸೃಷ್ಟಿಯಾಗುವ ಈ ದಿನಗಳಲ್ಲಿ, ಮುಂಡರಗಿಯ ಈ ಪುಟ್ಟ ಮಕ್ಕಳು ಇಡೀ ಸಮಾಜಕ್ಕೇ ಪ್ರೀತಿ ಮತ್ತು ಸೌಹಾರ್ದತೆಯ ದೊಡ್ಡ ಪಾಠ ಹೇಳಿಕೊಡುತ್ತಿದ್ದಾರೆ. ​ಶರೀಫ-ಶಿವಯೋಗಿಗಳು ನಡೆದ ಸೌಹಾರ್ದತೆಯ ನೆಲದಲ್ಲಿ, ಮುಂಡರಗಿಯ ಹುಡಿಯದ ಓಣಿಯ ಈ ಪುಟ್ಟ ಮಕ್ಕಳ ನಡೆ ಇಡೀ ನಾಡಿಗೆ ಭಾವೈಕ್ಯತೆಯ ಹೊಸ ಬೆಳಕನ್ನು ತೋರುತ್ತಿದೆ. ನಾವೆಲ್ಲರೂ ಒಂದೇ ಎನ್ನುವ ಈ ಮಕ್ಕಳ ಪ್ರೀತಿಗೆ ಕನ್ನಡಿಗರ ಪರವಾಗಿ ಹೃದಯಪೂರ್ವಕ ಸಾಷ್ಟಾಂಗ ನಮನಗಳು
    1
    ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’!  ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು!
ಮಸೀದಿಯ ಪಕ್ಕದಲ್ಲಿ ಕೂತ ‘ಹುಡಿಯದ ಓಣಿಯ ಸಾಮ್ರಾಟ್’!  ಮುಂಡರಗಿಯಲ್ಲಿ ಸೌಹಾರ್ದತೆಯ ಗಣೇಶೋತ್ಸವ ಮೆರೆದ ಮುಸ್ಲಿಂ ಮಕ್ಕಳು!
ನಮಸ್ಕಾರ ಬಂಧುಗಳೇ...
​ನಾಡಿನಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದೆ. ಬೀದಿ ಬೀದಿಗಳಲ್ಲಿ ವಿಘ್ನನಿವಾರಕನ ಜಯಘೋಷ ಮೊಳಗುತ್ತಿದೆ. ಆದರೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ 'ಹುಡಿಯದ ಓಣಿ'ಯಲ್ಲಿ ಕಂಡುಬಂದ ಈ ದೃಶ್ಯ ಮಾತ್ರ ಇಡೀ ನಾಡಿನ ಗಮನ ಸೆಳೆಯುವಂತಿದೆ, ಪ್ರತಿಯೊಬ್ಬರ ಮನ ಮುಟ್ಟುವಂತಿದೆ!
​ಹೌದು, ಇಲ್ಲಿ ಒಂದೆಡೆ ಅಲ್ಲಾಹನ ಪ್ರಾರ್ಥನೆ ನಡೆಯುವ ಮಸೀದಿ ಇದ್ದರೆ... ಅದೇ ಮಸೀದಿಯ ಅಂಗಳದ ಪಕ್ಕದಲ್ಲೇ ಸಿದ್ದಿವಿನಾಯಕ ವಿರಾಜಮಾನನಾಗಿದ್ದಾನೆ! ವಿಶೇಷ ಎಂದರೆ, ಯಾವುದೇ ಜಾತಿ-ಧರ್ಮದ ಹಂಗಿಲ್ಲದೆ, ಇಲ್ಲಿನ ಮುಸ್ಲಿಂ ಸಮುದಾಯದ ಪುಟ್ಟ ಮಕ್ಕಳು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ತಮ್ಮ ಕೈಯಾರೆ ಕಾಯಿ ಒಡೆದು, ಪೂಜೆ ಸಲ್ಲಿಸಿ, ಪ್ರಸಾದ ಹಂಚಿ ಹಬ್ಬದ ಸಂಭ್ರಮದಲ್ಲಿದ್ದಾರೆ.
​ಇನ್ನು ಅತ್ಯಂತ ಖುಷಿಯ ವಿಷಯ ಎಂದರೆ... ಇಲ್ಲಿನ ಮಕ್ಕಳು ಕೇವಲ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿಲ್ಲ, ಬದಲಾಗಿ ಅತ್ಯಂತ ಪ್ರೀತಿಯಿಂದ ಈ ಮೂರ್ತಿಗೆ 'ಹುಡಿಯದ ಓಣಿಯ ಸಾಮ್ರಾಟ್' ಎಂದೇ ನಾಮಕರಣ ಮಾಡಿದ್ದಾರೆ!
​ಸಾಮ್ರಾಟ್ ಎಂಬ ಹೆಸರಿನಲ್ಲಿ ಗಣಪತಿಯನ್ನು ನೆನೆಯುತ್ತಿರುವ ಈ ಮಕ್ಕಳ ಮನಸ್ಸಿನಲ್ಲಿ 'ನಾವೆಲ್ಲರೂ ಒಂದೇ' ಎನ್ನುವ ಭ್ರಾತೃತ್ವದ ಸದ್ಭಾವನೆ ಆಳವಾಗಿ ಬೇರೂರಿದೆ. ಧರ್ಮಗಳ ಹೆಸರಿನಲ್ಲಿ ಕಹಿ ವಾತಾವರಣ ಸೃಷ್ಟಿಯಾಗುವ ಈ ದಿನಗಳಲ್ಲಿ, ಮುಂಡರಗಿಯ ಈ ಪುಟ್ಟ ಮಕ್ಕಳು ಇಡೀ ಸಮಾಜಕ್ಕೇ ಪ್ರೀತಿ ಮತ್ತು ಸೌಹಾರ್ದತೆಯ ದೊಡ್ಡ ಪಾಠ ಹೇಳಿಕೊಡುತ್ತಿದ್ದಾರೆ.
​ಶರೀಫ-ಶಿವಯೋಗಿಗಳು ನಡೆದ ಸೌಹಾರ್ದತೆಯ ನೆಲದಲ್ಲಿ, ಮುಂಡರಗಿಯ ಹುಡಿಯದ ಓಣಿಯ ಈ ಪುಟ್ಟ ಮಕ್ಕಳ ನಡೆ ಇಡೀ ನಾಡಿಗೆ ಭಾವೈಕ್ಯತೆಯ ಹೊಸ ಬೆಳಕನ್ನು ತೋರುತ್ತಿದೆ. ನಾವೆಲ್ಲರೂ ಒಂದೇ ಎನ್ನುವ ಈ ಮಕ್ಕಳ ಪ್ರೀತಿಗೆ ಕನ್ನಡಿಗರ ಪರವಾಗಿ ಹೃದಯಪೂರ್ವಕ ಸಾಷ್ಟಾಂಗ ನಮನಗಳು
    user_Ranganath Kandagal
    Ranganath Kandagal
    TV News Anchor ಮುಂಡರಗಿ, ಗದಗ, ಕರ್ನಾಟಕ•
    18 hrs ago
  • *ಭಕ್ತರ ಇಷ್ಟಾರ್ಥ ಈಡೇರಿಸುವ ದ್ಯಾಮವ್ವನ ಮಗನಾಗಿ ಮೂಡಿಬಂದ ಗೌರಿ-ಗಣೇಶ - ತೆಗ್ಗಿನ ಓಣಿಯಲ್ಲಿ ಭಕ್ತಿ ಸಾಗರ!* ಕುಷ್ಟಗಿ:* ಪಟ್ಟಣದಲ್ಲಿ ಈ ಬಾರಿಯ ಗಣೇಶೋತ್ಸವದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ತೆಗ್ಗಿನ ಓಣಿಯ ಸರ್ವ ಧರ್ಮಗಳ ಗೆಳೆಯರ ಬಳಗದ ವಿಶೇಷ ಗಣೇಶ ಮೂರ್ತಿ. ಪ್ರತಿ ವರ್ಷ ಒಂದೊಂದು ವಿಭಿನ್ನ ಪರಿಕಲ್ಪನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವ ಈ ಬಳಗವು, ಈ ಬಾರಿ ಅತ್ಯಾಧುನಿಕ *ಎಐ ತಂತ್ರಜ್ಞಾನದ* ನೆರವಿನೊಂದಿಗೆ ಅತ್ಯಂತ ಅರ್ಥಗರ್ಭಿತವಾದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಇಡೀ ಕುಷ್ಟಗಿಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. *ಪುರಾಣದೊಂದಿಗೆ ಗ್ರಾಮ ದೇವತೆಯ ಸಮಾಗಮ:‌ ಲೋಕ ಕಲ್ಯಾಣಕ್ಕಾಗಿ ಪಾರ್ವತಿಯು ತನ್ನ ಹಣೆಯ ಬೆವರಿನ ಮಣ್ಣಿನಿಂದ ವರಪುತ್ರ ಗಣೇಶನನ್ನು ಸೃಷ್ಟಿಸಿದ ಪೌರಾಣಿಕ ಕಥೆಯನ್ನೇ ಇಲ್ಲಿ ಮರುಸೃಷ್ಟಿ ಮಾಡಲಾಗಿದೆ. ಕುಷ್ಟಗಿಯ ಜನರ ಪಾಲಿಗೆ ಗ್ರಾಮ ದೇವತೆ ಶ್ರೀ ದ್ಯಾಮಾಂಬಿಕಾ ದೇವಿಯೇ ಸಾಕ್ಷಾತ್ ಪಾರ್ವತಿ. ಆ ದ್ಯಾಮವ್ವನೇ ತನ್ನ ಮಗನಾದ ಗಣೇಶನನ್ನು ಭೂಮಿಗೆ ಕಳುಹಿಸಿದ್ದಾಳೆ ಎಂಬ ಭಾವದಲ್ಲಿ ಈ ಅಲಂಕಾರ ಮೂಡಿಬಂದಿದೆ. ಹಿನ್ನೆಲೆಯಲ್ಲಿ ಕೈಲಾಸವಾಸಿ ಶಿವ, ತಾಯಿ ಪಾರ್ವತಿ (ದ್ಯಾಮವ್ವ) ಮತ್ತು ಮುಂದೆ ಪುಟ್ಟ ಬಾಲ ಗಣೇಶ ಕುಳಿತಿರುವ ದೃಶ್ಯವು ನೋಡುಗರಿಗೆ ದೈವತ್ವದ ಅನುಭೂತಿಯನ್ನು ನೀಡುತ್ತಿದೆ. ಕೇವಲ ಮಣ್ಣಿನ ಮೂರ್ತಿಯಲ್ಲ, ಇದೊಂದು ಜೀವಂತ ಪುರಾಣ ದರ್ಶನವೇ ಸರಿ. ಈ ಅರ್ಥಪೂರ್ಣ ಅಲಂಕಾರವು ಮಾಜಿ ಪುರಸಭೆ ಅಧ್ಯಕ್ಷ *ಮಹಾಂತೇಶ್ ಕಲಬಾವಿ* ಸೇರಿದಂತೆ ತೆಗ್ಗಿನ ಓಣಿಯ ಯುವ ಬಳಗದ ಅವಿರತ ಪರಿಶ್ರಮದ ಫಲವಾಗಿದೆ. ವಿಶೇಷವೆಂದರೆ ಹಿಂದೂ-ಮುಸ್ಲಿಂ ಯುವಕರು ಜಾತಿ ಬೇಧ ಮರೆತು ಒಂದಾಗಿ ಈ ಗಣೇಶನನ್ನು ಪ್ರತಿಷ್ಠಾಪಿಸಿರುವುದು ನಿಜವಾದ ಸರ್ವ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ. ತೆಗ್ಗಿನ ಓಣಿಯ ಯುವಕರ ಈ ಸೃಜನಶೀಲತೆ, ಧಾರ್ಮಿಕ ಚಿಂತನೆ ಮತ್ತು ತಂತ್ರಜ್ಞಾನದ ಬಳಕೆಯು ಇತರ ಮಂಡಳಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
    2
    *ಭಕ್ತರ ಇಷ್ಟಾರ್ಥ ಈಡೇರಿಸುವ ದ್ಯಾಮವ್ವನ ಮಗನಾಗಿ ಮೂಡಿಬಂದ ಗೌರಿ-ಗಣೇಶ - ತೆಗ್ಗಿನ ಓಣಿಯಲ್ಲಿ ಭಕ್ತಿ ಸಾಗರ!*
ಕುಷ್ಟಗಿ:* ಪಟ್ಟಣದಲ್ಲಿ ಈ ಬಾರಿಯ ಗಣೇಶೋತ್ಸವದಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ತೆಗ್ಗಿನ ಓಣಿಯ ಸರ್ವ ಧರ್ಮಗಳ ಗೆಳೆಯರ ಬಳಗದ ವಿಶೇಷ ಗಣೇಶ ಮೂರ್ತಿ.
ಪ್ರತಿ ವರ್ಷ ಒಂದೊಂದು ವಿಭಿನ್ನ ಪರಿಕಲ್ಪನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸುವ ಈ ಬಳಗವು, ಈ ಬಾರಿ ಅತ್ಯಾಧುನಿಕ *ಎಐ ತಂತ್ರಜ್ಞಾನದ* ನೆರವಿನೊಂದಿಗೆ ಅತ್ಯಂತ ಅರ್ಥಗರ್ಭಿತವಾದ ಮೂರ್ತಿಯನ್ನು ಪ್ರತಿಷ್ಠಾಪಿಸಿ ಇಡೀ ಕುಷ್ಟಗಿಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
*ಪುರಾಣದೊಂದಿಗೆ ಗ್ರಾಮ ದೇವತೆಯ ಸಮಾಗಮ:‌ ಲೋಕ ಕಲ್ಯಾಣಕ್ಕಾಗಿ ಪಾರ್ವತಿಯು ತನ್ನ ಹಣೆಯ ಬೆವರಿನ ಮಣ್ಣಿನಿಂದ ವರಪುತ್ರ ಗಣೇಶನನ್ನು ಸೃಷ್ಟಿಸಿದ ಪೌರಾಣಿಕ ಕಥೆಯನ್ನೇ ಇಲ್ಲಿ ಮರುಸೃಷ್ಟಿ ಮಾಡಲಾಗಿದೆ. ಕುಷ್ಟಗಿಯ ಜನರ ಪಾಲಿಗೆ ಗ್ರಾಮ ದೇವತೆ ಶ್ರೀ ದ್ಯಾಮಾಂಬಿಕಾ ದೇವಿಯೇ ಸಾಕ್ಷಾತ್ ಪಾರ್ವತಿ. ಆ ದ್ಯಾಮವ್ವನೇ ತನ್ನ ಮಗನಾದ ಗಣೇಶನನ್ನು ಭೂಮಿಗೆ ಕಳುಹಿಸಿದ್ದಾಳೆ ಎಂಬ ಭಾವದಲ್ಲಿ ಈ ಅಲಂಕಾರ ಮೂಡಿಬಂದಿದೆ.
ಹಿನ್ನೆಲೆಯಲ್ಲಿ ಕೈಲಾಸವಾಸಿ ಶಿವ, ತಾಯಿ ಪಾರ್ವತಿ (ದ್ಯಾಮವ್ವ) ಮತ್ತು ಮುಂದೆ ಪುಟ್ಟ ಬಾಲ ಗಣೇಶ ಕುಳಿತಿರುವ ದೃಶ್ಯವು ನೋಡುಗರಿಗೆ ದೈವತ್ವದ ಅನುಭೂತಿಯನ್ನು ನೀಡುತ್ತಿದೆ. ಕೇವಲ ಮಣ್ಣಿನ ಮೂರ್ತಿಯಲ್ಲ, ಇದೊಂದು ಜೀವಂತ ಪುರಾಣ ದರ್ಶನವೇ ಸರಿ.
ಈ ಅರ್ಥಪೂರ್ಣ ಅಲಂಕಾರವು ಮಾಜಿ ಪುರಸಭೆ ಅಧ್ಯಕ್ಷ *ಮಹಾಂತೇಶ್ ಕಲಬಾವಿ* ಸೇರಿದಂತೆ ತೆಗ್ಗಿನ ಓಣಿಯ ಯುವ ಬಳಗದ ಅವಿರತ ಪರಿಶ್ರಮದ ಫಲವಾಗಿದೆ. ವಿಶೇಷವೆಂದರೆ ಹಿಂದೂ-ಮುಸ್ಲಿಂ ಯುವಕರು ಜಾತಿ ಬೇಧ ಮರೆತು ಒಂದಾಗಿ ಈ ಗಣೇಶನನ್ನು ಪ್ರತಿಷ್ಠಾಪಿಸಿರುವುದು ನಿಜವಾದ ಸರ್ವ ಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ.
ತೆಗ್ಗಿನ ಓಣಿಯ ಯುವಕರ ಈ ಸೃಜನಶೀಲತೆ, ಧಾರ್ಮಿಕ ಚಿಂತನೆ ಮತ್ತು ತಂತ್ರಜ್ಞಾನದ ಬಳಕೆಯು ಇತರ ಮಂಡಳಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.
    user_Pavadeppa c choudiki
    Pavadeppa c choudiki
    ಕುಷ್ಟಗಿ, ಕೊಪ್ಪಳ, ಕರ್ನಾಟಕ•
    4 hrs ago
  • ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ. ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ. ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ. ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ. ಗದಗ : ಪವಿತ್ರ ಶ್ರಾವಣ ಮಾಸದ ನಿಮಿತ್ಯ ತಿಂಗಳ ಪರ್ಯಂತ ಆರಂಭವಾದ ಪುರಾಣ ಪ್ರವಚನ,ಭಜನೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆಯುವುದು ಸರ್ವೇ ಸಾಮಾನ್ಯವಾಗಿ ನಡೆಯುತ್ತಿರುವುದು ಕಂಡು ಬರುತ್ತವೆ ಅದರಂತೆ ಶ್ರೀ ಮಾರುತೇಶ್ವರ ಭಜನಾ ಮುಕ್ತಾಯದ ಮಹಾ ಮಂಗಲ ನಿಮಿತ್ಯವಾಗಿ ಭರ್ಜರಿ ತಯಾರಿ ನಡೆಸಿರುವ ದೃಶ್ಯಗಳು ನೋಡುಗರ ಕಣ್ಮಣ ಸೆಳೆಯಿತು. ತಾಲೂಕಿನ ಕದಡಿ ಗ್ರಾಮದ ಶ್ರೀ ಮಾರುತೇಶ್ವರ ಭಜನಾ ಮುಕ್ತಾಯದ ಅಂಗವಾಗಿ ಮಹಾ ಮಂಗಲವು ಬುಧವಾರ ಜರುಗಿವುದರ ಪೂರ್ವದಲ್ಲಿ ಮಂಗಳವಾರ ರಾತ್ರಿ ಸಂಪೂರ್ಣ ಸಪ್ತಾಹ ಕಾರ್ಯಕ್ರಮ ನೆರವೇರಸಲಾಗುವುದು,ಅದರ ಪ್ರಯುಕ್ತ ಗ್ರಾಮದ ಶ್ರೀ ಮಾರುತಿ ಮಂದಿರವನ್ನೊಳಗೊಂಡು ಗ್ರಾಮ ಪಂಚಾಯತ ಮುಂದಿನ ಆವರಣದಲ್ಲಿ ಮಹಿಳೆಯರು ಸೇರಿ ರಂಗೋಲಿ ಬಿಡಿಸುತ್ತಿರುವುದು ಹಾಗೂ ದಾರಿ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಅಳವಡಿಸಿರಿ ಶೃಂಗರಿಸಿರುವುದು ಬಹು ಸುಂದರವಾಗಿ ಕಂಗೊಳಿಸುತ್ತಿರುವುದು. ನೋಡುಗರ ಕಣ್ಮಣಿ ಸೆಳೆಯಿತು. ಸಂಘದ ಸಮಿತ್ರರು ಮಾಸ ಪರ್ಯಂತ ಗ್ರಾಮದಲ್ಲಿ ಭಜನೆ ಮಾಡುತ್ತಾ ಭಕ್ತಿಯ ಪದಗಳನ್ನು ಪಠಿಸುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಗ್ರಾಮದ ಅದಿದೇವ ದೇವತೆಗಳಿಗೆ ಕಾಯಿ ಕರ್ಪುರ ದೀಪಗಳ ಬೆಳಗುತ್ತಾ ಭಕ್ತಿಯ ಗಾನ ಸುಧೆಗಳನ್ನು ಪ್ರತಿ ದಿನ ಬೆಳಗಿನ ಜಾವ ಮೊಳಗಿಸುತ್ತಿರುವುದು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದ್ದವು.. ಶ್ರಾವಣ ಮಾಸದ ಕೊನೆಯ ದಿವಸ ಭಜನಾ ಮುಕ್ತಾಯದ ಹಿಂದಿನ ದಿನ ಭರ್ಜರಿ ತಯಾರಿ ನಡೆಸಿರುವುದು ಗ್ರಾಮದ ತುಂಬೆಲ್ಲಾ ಹಬ್ಬದ ಸಂಭ್ರಮದ ವಾತಾವರಣ ಆವರಿಸಿತ್ತು...
    2
    ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ.
ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ.
ಶ್ರೀ ಮಾರುತೇಶ್ವರ ಭಜನಾ ಮಹಾ ಮಂಗಲ ನಿಮಿತ್ಯ ಭರ್ಜರಿ ತಯಾರಿ.
ವಿದ್ಯುತ್ ದೀಪಾಲಂಕಾರದ ಜೊತೆಗೆ ಬಣ್ಣ ಬಣ್ಣದ ರಂಗೋಲಿ ಅದ್ದೂರಿ ಸ್ವಾಗತ.
ಗದಗ : ಪವಿತ್ರ ಶ್ರಾವಣ ಮಾಸದ ನಿಮಿತ್ಯ ತಿಂಗಳ ಪರ್ಯಂತ ಆರಂಭವಾದ ಪುರಾಣ ಪ್ರವಚನ,ಭಜನೆಗಳು ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಭಕ್ತಿಯ ಪರಾಕಾಷ್ಠೆ ಮೆರೆಯುವುದು ಸರ್ವೇ ಸಾಮಾನ್ಯವಾಗಿ ನಡೆಯುತ್ತಿರುವುದು ಕಂಡು ಬರುತ್ತವೆ ಅದರಂತೆ ಶ್ರೀ ಮಾರುತೇಶ್ವರ ಭಜನಾ ಮುಕ್ತಾಯದ ಮಹಾ ಮಂಗಲ ನಿಮಿತ್ಯವಾಗಿ ಭರ್ಜರಿ ತಯಾರಿ ನಡೆಸಿರುವ ದೃಶ್ಯಗಳು ನೋಡುಗರ ಕಣ್ಮಣ ಸೆಳೆಯಿತು.
ತಾಲೂಕಿನ ಕದಡಿ ಗ್ರಾಮದ ಶ್ರೀ ಮಾರುತೇಶ್ವರ ಭಜನಾ  ಮುಕ್ತಾಯದ ಅಂಗವಾಗಿ ಮಹಾ ಮಂಗಲವು ಬುಧವಾರ ಜರುಗಿವುದರ ಪೂರ್ವದಲ್ಲಿ ಮಂಗಳವಾರ ರಾತ್ರಿ ಸಂಪೂರ್ಣ ಸಪ್ತಾಹ ಕಾರ್ಯಕ್ರಮ ನೆರವೇರಸಲಾಗುವುದು,ಅದರ ಪ್ರಯುಕ್ತ ಗ್ರಾಮದ ಶ್ರೀ ಮಾರುತಿ ಮಂದಿರವನ್ನೊಳಗೊಂಡು ಗ್ರಾಮ ಪಂಚಾಯತ ಮುಂದಿನ ಆವರಣದಲ್ಲಿ ಮಹಿಳೆಯರು ಸೇರಿ ರಂಗೋಲಿ ಬಿಡಿಸುತ್ತಿರುವುದು ಹಾಗೂ ದಾರಿ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಅಳವಡಿಸಿರಿ ಶೃಂಗರಿಸಿರುವುದು ಬಹು ಸುಂದರವಾಗಿ ಕಂಗೊಳಿಸುತ್ತಿರುವುದು. ನೋಡುಗರ ಕಣ್ಮಣಿ ಸೆಳೆಯಿತು.
ಸಂಘದ ಸಮಿತ್ರರು ಮಾಸ ಪರ್ಯಂತ ಗ್ರಾಮದಲ್ಲಿ ಭಜನೆ ಮಾಡುತ್ತಾ ಭಕ್ತಿಯ ಪದಗಳನ್ನು ಪಠಿಸುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಗ್ರಾಮದ ಅದಿದೇವ ದೇವತೆಗಳಿಗೆ ಕಾಯಿ ಕರ್ಪುರ ದೀಪಗಳ ಬೆಳಗುತ್ತಾ ಭಕ್ತಿಯ ಗಾನ ಸುಧೆಗಳನ್ನು ಪ್ರತಿ ದಿನ ಬೆಳಗಿನ ಜಾವ ಮೊಳಗಿಸುತ್ತಿರುವುದು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿದ್ದವು..
ಶ್ರಾವಣ ಮಾಸದ ಕೊನೆಯ ದಿವಸ ಭಜನಾ ಮುಕ್ತಾಯದ ಹಿಂದಿನ ದಿನ ಭರ್ಜರಿ ತಯಾರಿ ನಡೆಸಿರುವುದು ಗ್ರಾಮದ ತುಂಬೆಲ್ಲಾ ಹಬ್ಬದ ಸಂಭ್ರಮದ ವಾತಾವರಣ ಆವರಿಸಿತ್ತು...
    user_ಪ್ರಕಾಶ ಗುದ್ನೇಪ್ಪನವರ.
    ಪ್ರಕಾಶ ಗುದ್ನೇಪ್ಪನವರ.
    Local News Reporter ಗದಗ, ಗದಗ, ಕರ್ನಾಟಕ•
    3 hrs ago
  • ಬರದ ಬೇಗುದಿ: ಶೇಂಗಾ ಬೆಳೆ ಉಳಿಸಲು ಟ್ಯಾಂಕರ್ ನೀರಿನ ಮೊರೆ: ಸಾಲ ಮಾಡಿ ನೀರುಣಿಸುತ್ತಿರುವ ರೈತರು ಕೂಡ್ಲಿಗಿ: ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿರುವ ಶೇಂಗಾ ಬೆಳೆ ಒಣಗುವ ಹಂತಕ್ಕೆ ತಲುಪಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಗುಡೇಕೋಟೆ ಗ್ರಾಮದ ರೈತ ಶಾಮ್ ರಾವ್ ಅವರು ಮಳೆಯ ನಿರೀಕ್ಷೆಯಲ್ಲಿದ್ದ ಶೇಂಗಾ ಬೆಳೆಗೆ ಟ್ಯಾಂಕರ್ ಮೂಲಕ ನೀರುಣಿಸುತ್ತಿರುವ ದೃಶ್ಯ ರೈತರ ಸಂಕಷ್ಟಕ್ಕೆ ಕನ್ನಡಿ ಹಿಡಿದಂತಾಗಿದೆ. ಶಾಮ್ ರಾವ್ ಅವರು ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ತೇವಾಂಶದ ಕೊರತೆಯಿಂದ ಒಣಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಬೆಳೆ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಟ್ರ್ಯಾಕ್ಟರ್ ಮೂಲಕ ಟ್ಯಾಂಕರ್ ನೀರನ್ನು ಹೊಲಕ್ಕೆ ಸಾಗಿಸಿ ಶೇಂಗಾ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಈಗಾಗಲೇ ಒಂದು ಟ್ಯಾಂಕರ್ ನೀರಿಗೆ ₹500ರಂತೆ 10 ಟ್ಯಾಂಕರ್ ನೀರು ಹಾಕಲಾಗಿದ್ದು, ನೀರಿಗಾಗಿಯೇ ಸುಮಾರು ₹5,000 ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆ ಬಾರದಿದ್ದರೆ ಇನ್ನಷ್ಟು ನೀರು ಹಾಕಬೇಕಾದ ಅನಿವಾರ್ಯತೆ ರೈತನ ಮುಂದಿದೆ.
    1
    ಬರದ ಬೇಗುದಿ: ಶೇಂಗಾ ಬೆಳೆ ಉಳಿಸಲು ಟ್ಯಾಂಕರ್ ನೀರಿನ ಮೊರೆ: ಸಾಲ ಮಾಡಿ ನೀರುಣಿಸುತ್ತಿರುವ ರೈತರು 
ಕೂಡ್ಲಿಗಿ: ಮಳೆ ಕೈಕೊಟ್ಟ ಪರಿಣಾಮ ಬಿತ್ತನೆ ಮಾಡಿರುವ ಶೇಂಗಾ ಬೆಳೆ ಒಣಗುವ ಹಂತಕ್ಕೆ ತಲುಪಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಗುಡೇಕೋಟೆ ಗ್ರಾಮದ ರೈತ ಶಾಮ್ ರಾವ್ ಅವರು ಮಳೆಯ ನಿರೀಕ್ಷೆಯಲ್ಲಿದ್ದ ಶೇಂಗಾ ಬೆಳೆಗೆ ಟ್ಯಾಂಕರ್ ಮೂಲಕ ನೀರುಣಿಸುತ್ತಿರುವ ದೃಶ್ಯ ರೈತರ ಸಂಕಷ್ಟಕ್ಕೆ ಕನ್ನಡಿ ಹಿಡಿದಂತಾಗಿದೆ.
ಶಾಮ್ ರಾವ್ ಅವರು ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ತೇವಾಂಶದ ಕೊರತೆಯಿಂದ ಒಣಗುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಬೆಳೆ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಟ್ರ್ಯಾಕ್ಟರ್ ಮೂಲಕ ಟ್ಯಾಂಕರ್ ನೀರನ್ನು ಹೊಲಕ್ಕೆ ಸಾಗಿಸಿ ಶೇಂಗಾ ಬೆಳೆಗೆ ನೀರು ಹಾಯಿಸುತ್ತಿದ್ದಾರೆ. ಈಗಾಗಲೇ ಒಂದು ಟ್ಯಾಂಕರ್ ನೀರಿಗೆ ₹500ರಂತೆ 10 ಟ್ಯಾಂಕರ್ ನೀರು ಹಾಕಲಾಗಿದ್ದು, ನೀರಿಗಾಗಿಯೇ ಸುಮಾರು ₹5,000 ವೆಚ್ಚವಾಗಿದೆ. ಮುಂದಿನ ದಿನಗಳಲ್ಲಿಯೂ ಮಳೆ ಬಾರದಿದ್ದರೆ ಇನ್ನಷ್ಟು ನೀರು ಹಾಕಬೇಕಾದ ಅನಿವಾರ್ಯತೆ ರೈತನ ಮುಂದಿದೆ.
    user_ಹೂಡೇಂ ಮಂಜುನಾಥ
    ಹೂಡೇಂ ಮಂಜುನಾಥ
    Local News Reporter ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    5 hrs ago
  • *ಕೂಡ್ಲಿಗಿ : ನಾಗರೀಕ ಹಿತರಕ್ಷಣಾ ವೇದಿಕೆಯಿಂದ , ಅದ್ಧೂರಿ ಊರಗಣಪ ಪ್ರತಿಷ್ಠಾನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಸೆಪ್ಟೆಂಬರ್ 14ರಂದು ಪಟ್ಟಣದ ಮೇನ್ ಬಾಯ್ಸ್ ಶಾಲೆಯ ಆವರಣದಲ್ಲಿ , ಶ್ರೀಗಣೇಶ ಚತುರ್ಥಿ ಪ್ರಯುಕ್ತ ನಾಗರೀಕ ಹಿತರಕ್ಷಣೆ ವೇದಿಕೆ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಮನೆ ಅದ್ಧೂರಿಯಾಗಿ ಜರುಗಿತು. ನಾಗರೀಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ನೇತೃತ್ವದಲ್ಲಿ , ಪ್ರತಿ ವರ್ಷಗಳಂತೆಯೇ ಗಣೇಶ ಮೂರ್ತಿ ದ‍ಾನಿಗಳು. ಹಾಗೂ ಗೌಡ ಮನೆತನದ ಮುಖಂಡರಾದ , ಪಟ್ಟಣದ ಹೆಚ್.ವೀರನಗೌಡ ರವರ ಮನೆಯಿಂದ , ಗಣೇಶನ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು. ಶಾಸ್ತ್ರೋಕ್ತವಾಗಿ ಪೂಜಿಸಿ ವಾಹನದಲ್ಲಿರಿಸಿಕೊಂಡು , ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಬಹು ಅದ್ಧೂರಿಯಾಗಿ ಮೆರವಣಿಗೆ ಸಾಗಿ ವೇದಿಕೆಗೆ ಕರೆತರಲಾಯಿತು. ಪಟ್ಟಣದ ಶ್ರೀಚಂದ್ರಶೇಖರ ಆಜಾದ್ ರಂಗಮಂದಿರದ ವೇದಿಕೆ ಯಲ್ಲಿ , ಪುರೋಹಿತರಾದ ಎಮ್ ಎಮ್ ಉಮೇಶರವರ ನೇತೃತ್ವದಲ್ಲಿ. ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜಿಸಿ ಪ್ರತಿಷ್ಠಾಪಿಸಲಾಯಿತು, ತದನಂತರ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ನಂತರ ವೇದಭ್ರಾಹ್ಮಣ ಆರಾಧಕರಾದ ಬ್ರಹ್ಮಲಿಂಗಾಚಾರಿಗಳ ಪುರೋಹಿತ್ವದಲ್ಲಿ , ಪೂಜಾ ಕೈಂ ಕರ್ಯಗಳಾದಿಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಗರೀಕರ ಹಿತರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು , ಹಿರಿಯನಾಗರೀಕರು , ಹಿರಿಯರು , ಗಣ್ಯರು ಮುಖಂಡರು , ನೂರಾರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    *ಕೂಡ್ಲಿಗಿ : ನಾಗರೀಕ ಹಿತರಕ್ಷಣಾ ವೇದಿಕೆಯಿಂದ , ಅದ್ಧೂರಿ ಊರಗಣಪ ಪ್ರತಿಷ್ಠಾನೆ*-ವಿಜಯನಗರ ಜಿಲ್ಲೆ ಕೂಡ್ಲಿಗಿ : ಸೆಪ್ಟೆಂಬರ್ 14ರಂದು  ಪಟ್ಟಣದ ಮೇನ್ ಬಾಯ್ಸ್ ಶಾಲೆಯ ಆವರಣದಲ್ಲಿ , ಶ್ರೀಗಣೇಶ ಚತುರ್ಥಿ ಪ್ರಯುಕ್ತ ನಾಗರೀಕ ಹಿತರಕ್ಷಣೆ ವೇದಿಕೆ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಮನೆ ಅದ್ಧೂರಿಯಾಗಿ ಜರುಗಿತು. ನಾಗರೀಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ ನೇತೃತ್ವದಲ್ಲಿ , ಪ್ರತಿ ವರ್ಷಗಳಂತೆಯೇ ಗಣೇಶ ಮೂರ್ತಿ ದ‍ಾನಿಗಳು. ಹಾಗೂ ಗೌಡ ಮನೆತನದ ಮುಖಂಡರಾದ , ಪಟ್ಟಣದ ಹೆಚ್.ವೀರನಗೌಡ ರವರ ಮನೆಯಿಂದ , ಗಣೇಶನ ಬೃಹತ್ ಗಾತ್ರದ ಗಣೇಶ ಮೂರ್ತಿಯನ್ನು. ಶಾಸ್ತ್ರೋಕ್ತವಾಗಿ ಪೂಜಿಸಿ ವಾಹನದಲ್ಲಿರಿಸಿಕೊಂಡು , ಪಟ್ಟಣದ ಪ್ರಮುಖ ರಸ್ತೆಯ ಮೂಲಕ ಬಹು ಅದ್ಧೂರಿಯಾಗಿ ಮೆರವಣಿಗೆ ಸಾಗಿ ವೇದಿಕೆಗೆ ಕರೆತರಲಾಯಿತು. ಪಟ್ಟಣದ ಶ್ರೀಚಂದ್ರಶೇಖರ ಆಜಾದ್ ರಂಗಮಂದಿರದ ವೇದಿಕೆ ಯಲ್ಲಿ , ಪುರೋಹಿತರಾದ ಎಮ್ ಎಮ್ ಉಮೇಶರವರ ನೇತೃತ್ವದಲ್ಲಿ. ಧಾರ್ಮಿಕ ವಿಧಿ ವಿಧಾನದೊಂದಿಗೆ ಪೂಜಿಸಿ ಪ್ರತಿಷ್ಠಾಪಿಸಲಾಯಿತು, ತದನಂತರ ಗಣೇಶ  ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು. ನಂತರ ವೇದಭ್ರಾಹ್ಮಣ ಆರಾಧಕರಾದ ಬ್ರಹ್ಮಲಿಂಗಾಚಾರಿಗಳ ಪುರೋಹಿತ್ವದಲ್ಲಿ , ಪೂಜಾ ಕೈಂ ಕರ್ಯಗಳಾದಿಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ನಾಗರೀಕರ ಹಿತರಕ್ಷಣಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸದಸ್ಯರು , ಹಿರಿಯನಾಗರೀಕರು , ಹಿರಿಯರು , ಗಣ್ಯರು ಮುಖಂಡರು  , ನೂರಾರು ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    9 hrs ago
  • ಅಲಂಪೂರ್ ಪೇಟೆಯಲ್ಲಿ ಗಣೇಶನ ಪ್ರತಿಷ್ಠಾಪನೆ ; ಪ್ರಸಾದಕ್ಕೆ ಚಾಲನೆ ನೀಡಿದ ಮುಖಂಡರು ಇಲಕಲ್ ನಗರದ ಅಲಂಪೂರ ಪೇಟೆಯಲ್ಲಿ ಓಣಿಯ ಗುರುಹಿರಿಯರು ಯುವ ಮಿತ್ರರಿಂದ ಪ್ರತಿಷ್ಠಾಪನೆಗೊಂಡಿರುವ ಗಣೇಶಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರದ ಹಿರಿಯ ಮುಖಂಡರಾದ ವೆಂಕಟೇಶ ಸಾಕಾ, ಮಂಜುನಾಥ ಹೊಸಮನಿ, ನಗರ ಪಿಎಸ್ಐ ನಾಗರಾಜ ಗಡಾದ, ಹನುಮಂತ ತುಂಬದ, ಅಶೋಕ ಪೂಜಾರಿ ಹಾಗೂ ಅನಂಪುರ್ಪೇಟೆಯ ಯುವ ಮಿತ್ರರು ಉಪಸ್ಥಿತರಿದ್ದರು
    4
    ಅಲಂಪೂರ್ ಪೇಟೆಯಲ್ಲಿ ಗಣೇಶನ ಪ್ರತಿಷ್ಠಾಪನೆ ; ಪ್ರಸಾದಕ್ಕೆ ಚಾಲನೆ ನೀಡಿದ ಮುಖಂಡರು
ಇಲಕಲ್ ನಗರದ ಅಲಂಪೂರ ಪೇಟೆಯಲ್ಲಿ
ಓಣಿಯ ಗುರುಹಿರಿಯರು ಯುವ ಮಿತ್ರರಿಂದ ಪ್ರತಿಷ್ಠಾಪನೆಗೊಂಡಿರುವ ಗಣೇಶಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದಕ್ಕೆ ಚಾಲನೆ ನೀಡಿದರು. 
ಈ ಸಂದರ್ಭದಲ್ಲಿ ನಗರದ ಹಿರಿಯ ಮುಖಂಡರಾದ ವೆಂಕಟೇಶ ಸಾಕಾ,  ಮಂಜುನಾಥ ಹೊಸಮನಿ, ನಗರ ಪಿಎಸ್ಐ ನಾಗರಾಜ ಗಡಾದ, ಹನುಮಂತ ತುಂಬದ, ಅಶೋಕ ಪೂಜಾರಿ ಹಾಗೂ ಅನಂಪುರ್ಪೇಟೆಯ ಯುವ ಮಿತ್ರರು ಉಪಸ್ಥಿತರಿದ್ದರು
    user_ಶರಣಗೌಡ ಕಂದಕೂರ
    ಶರಣಗೌಡ ಕಂದಕೂರ
    Local News Reporter ಇಳಕಲ್, ಬಾಗಲಕೋಟೆ, ಕರ್ನಾಟಕ•
    9 hrs ago
  • ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ *ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಐತಿಹಾಸಿಕ ಸರ್ಕಾರಿ ಮೇನ್ ಬಾಯ್ಸ್ ಸ್ಕೂಲ್ ಕ್ಷೇಮಾಭಿವೃದ್ಧಿಗಾಗಿ ತಾವು ಯಾವುದೇ ಹಂತದ ಕಾನೂನಾತ್ಮಕ ಹೋರಾಟಕ್ಕೆ , ಹಾಗೂ ಎಲ್ಲಾ ರೀತಿಯ ತ್ಯಾಗ ಬಲಿದಾನಕ್ಕೆ ಸಿದ್ಧರಿರುವುದಾಗಿ ಹೋರಾಟಗಾರರು ಘೋಷಿಸಿದ್ದಾರೆ. ಅದೇ ರೀತಿಯಾಗಿ ಸರ್ಕಾರಿ ಶಾಲಾಭಿವೃದ್ಧಿಗಾಗಿ , ತಾವು ಸದಾ ಭದ್ಧರಾಗಿರುವುದಾಗಿ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ನುಡಿದಿದ್ದಾರೆ. ಪತ್ರಕರ್ತರೊಂದಿಗೆ ಹೋರಾಟಗಾರರಾದ ರಾಘವೇಂದ್ರರವರು ಮಾತನಾಡಿದ್ದು , ಮೇನ್ ಬಾಯ್ಸ್ ಸ್ಕೂಲ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣಮಾಗಿದ್ದು. ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ಕುತಂತ್ರದಿಂದಾಗಿ , ನಿರಂತರವಾಗಿ ಶೋಷಣೆಗೆ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದೆ. ಆ ಅವ್ಯವಸ್ಥೆಯ ವಿರುದ್ಧ ತಾವು ಮೌನ ಪ್ರತಿಭಟನೆ ಹಮ್ಮಿಕೊಂಡಿರುವುದ‍ಾಗಿ , ಶಾಲಾಕ್ಷೇಮಾಭಿವೃದ್ಧಿ ಹೋರಾಟಗಾರರು. ಎಸ್ಡಿ ಎಮ್ಸಿ ಮೇಲುಸ್ತುವಾರಿ ಸಮಿತಿ ರಾಜ್ಯ ಉಪಾಧ್ಯಕ್ಷರಾದ , ಗುನ್ನಳ್ಳಿ ರಾಘವೇಂದ್ರ ನುಡಿದಿದ್ದಾರೆ. ಅವರು ಶಾಲಾ ಆವರಣದಲ್ಲಿ , ಯಾವುದೇ ಖಾಸಗೀ ಕಾರ್ಯಕ್ರಮ ಜರುಗುವುದನ್ನು ವಿರೋಧಿಸುತ್ತಿದ್ದು. ಮತ್ತು ಶಾಲಾವರಣ ಕೆಲ ಪಟ್ಟಭದ್ರರ ಕಪಿಮುಷ್ಠಿಯಲ್ಲಿ ನಲುಗುತ್ತಿದೆ , ಇದರಿಂದಾಗಿ ಶಾಲಾವಾತಾರಣದಲ್ಲಿ ಶಾಂತಿಗೆ ಭಂಗವಾಗಲಿದೆ. ಇದರ ವಿರುದ್ಧ ತಾವು ಮೌನ ಪ್ರತಿಭಟನೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಶಾಸಕರ ಮನವಿಯ ಮೇರೆಗೆ ಹೋರಾಟವನ್ನು ತಾವು , ತಾತ‍್ಕಾಲಿಕ ಸಮಯ ಮಾತ್ರ ಹಿಂಪಡೆಯುತ್ತಿದ್ದು. ಗಣೇಶೋತ್ಸವ ನಂತರದಲ್ಲಿ ಹೋರಾಟ ಮುಂದುವರೆಯಲಿದ್ದು , ಬೀದಿಗಿಳಿದು ಹೋರಾಟಗಳನ್ನು ನಡೆಸಲಾಗುವುದು. ಶಾಲೆ ಸ್ಥಳಾಂತರಕ್ಕೆ ಯಾವುದೇ ಕಾರಣಕ್ಕೆ ಅವಕಾಶ ಕೊಡೋದಿಲ್ಲ , ಶಾಲಾ ಆವರಣ ಉಳಿವಿಗಾಗಿ ಕ್ಷೇಮಾಭಿವೃದ್ಧಿಗೆ ತ‍ಾವು ಎಂತಹ ತ್ಯಾಗ ಬಲಿದಾನಕ್ಕೂ ಸಿದ್ಧರಿರುವುದ‍ಾಗಿ ಅವರು ಘೋಷಿಸಿದರು. ಶಾಲೆಯ ಉಳಿವಿಗಾಗಿ ಶಾಲಾ ಆವರಣ ಉಳಿವಿಗಾಗಿ , ಶ‍ಾಲೆಯ ಹಳೇ ವಿದ್ಯಾರ್ಥಿಗಳ ಸಂಘಟನೆ ಮಾಡಿ ಜಾಗೃತಿ ಆಂದೊಲನ ಹೋರಾಟಗಳನ್ನಿ ಹಮ್ಮಿಕೊಳ್ಳಲ‍ಾಗುವುದು. ಮತ್ತು ಶಾಲಾ ಕ್ಷೇಮಾಭಿವೃದ್ಧಿಗಾಗಿ , ನ್ಯ‍ಾಯ‍ಲಯದ ಮೊರೆ ಹೋಗಲಾಗುವುದು. ತಾವು ಕ‍ಾನೂನಾತ್ಮಕವಾಗಿ ಹೋರಾಡಲು ಸರ್ವಸಿದ್ಧವಿದ್ದು , ಎಲ್ಲಾ ಹಂತದ ಹೋರಾಟಕ್ಕೆ ಪೂರ್ವ ತಯಾರಿ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಅಭಿವೃದ್ಧಿ ನೆಪದಲ್ಲಿ ಶಾಲಾ ಮೂಲ ಆಕರಕ್ಕೆ ಯಾವುದೇ ದಕ್ಕೆಯಾಗಬಾರದು , ಅದು ಕಾನೂನು ಬಾಹೀರವಾಗಲಿದ್ದು. ಆಭಿವೃದ್ಧಿಯ ಹರಿಕಾರರಾದ ಶ‍ಾಸಕರ ಮನವಿಗೆ ಮಾನ್ಯತೆ ನೀಡಿ , ಅವರ ಅಭಿವೃದ್ಧಿ ಪರನಿಲುವಿನ ಮೇಲೆ ವಿಶ್ವಾಸವಿಟ್ಟು ತಾವು ಮೌನ ಪ್ರತಿಭಟನೆಯನ್ನು ತಾತ್ಕ‍ಾಲಿಕವಾಗಿ ನಿಲ್ಲಿಸಲಾಗುವುದೆಂದು ಅವರು ತಿಳಿಸಿದರು. ಹಿಂದೆ ಶಾಸಕರು ಸಮ್ಮುಖದಲ್ಲಿ ಪ್ರತಿಭಟನೆ ಮಾಡುತ್ತಿರುವವರನ್ನುದ್ಧೇಶಿಸಿ ಮಾತನ‍ಾಡಿದ ಶಾಸಕರು , ಹೋರಾಟಗಾರರಲ್ಲಿರುವ ಶಾಲಾಕಾಳಜಿಯನ್ನು ಪ್ರಶಂಸಿದರು. ಮತ್ತು ಶೀಘ್ರವೇ ಶಾಲೆಯ ಕ್ಷೇಮಾಭಿವೃದ್ಧಿಗೆ ಚಾಲನೆ ನೀಡಲಾಗುವುದು. ಸರ್ಕಾರಿ ಶಾಲ‍ೆಗಳ ಕ್ಷೇಮ‍ಾಭಿವೃದ್ಧಿಗೆ ತಾವು ಸದಾ ಬದ್ಧರಿರುವುದಾಗಿ , ಶಾಸಕರು ಹೋರಾಟಗಾರರಿಗೆ ಮನವರಿಕೆ ಮ‍ಾಡಿಕೊಟ್ಟರು. ಶಾಲೆಯನ್ನು ಐತಿಹಾಸಿಕ ಶಾಲೆಯನ್ನಾಗಿ ಮಾಡುತ್ತೇನೆಂದು ಭರವಸೆ ನೀಡಿದರು , ಸುಸಜ್ಜಿತವಾದಂತಹ ಗುಣ ಮಟ್ಟದ ಶಿಕ್ಷಣ ಒದಗಿಸುವುದಕ್ಕೆ. ಅಗತ್ಯ ಸೌಕರ್ಯಗಳನ್ನು ಒಸಗಿಸುವುದಾಗಿ ನುಡಿದರು. ಶಾಲೆಯ ಮೂಲ ಆಕಾರಕ್ಕೆ ಧಕ್ಕೆ ತರದೇ ಉನ್ನತೀಕರಿಸಲ‍ಾಗುವುದೆಂದು , ಶಾಲಾ ಆವರಣವನ್ನು ಮತ್ತಷ್ಟು ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದೆಂದು ಶಾಸಕರು ಭರವಸೆ ನೀಡಿದ್ದಾರೆನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಹತ್ತಾರು ಪ್ರಮುಖ ಸಂಘಟನೆಗಳ , ಮುಖಂಡರು ಗಣ್ಯರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    4
    ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್
*ಕೂಡ್ಲಿಗಿ : ಶಾಲಾ ಕ್ಷೇಮಾವೃದ್ಧಿಗಾಗಿ ತ್ಯಾಗ ಬಲಿದಾನಕ್ಕೆ ಸಿದ್ಧ- ರಾಘವೇಂದ್ರ , ಶಾಲಾ ಕ್ಷೇಮಾಭಿವೃದ್ಧಿಗೆ ಸದಾ ಬದ್ಧ - ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್*- ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ  ಐತಿಹಾಸಿಕ ಸರ್ಕಾರಿ ಮೇನ್ ಬಾಯ್ಸ್ ಸ್ಕೂಲ್ ಕ್ಷೇಮಾಭಿವೃದ್ಧಿಗಾಗಿ ತಾವು ಯಾವುದೇ ಹಂತದ ಕಾನೂನಾತ್ಮಕ ಹೋರಾಟಕ್ಕೆ , ಹಾಗೂ ಎಲ್ಲಾ ರೀತಿಯ ತ್ಯಾಗ ಬಲಿದಾನಕ್ಕೆ ಸಿದ್ಧರಿರುವುದಾಗಿ ಹೋರಾಟಗಾರರು ಘೋಷಿಸಿದ್ದಾರೆ. ಅದೇ ರೀತಿಯಾಗಿ ಸರ್ಕಾರಿ ಶಾಲಾಭಿವೃದ್ಧಿಗಾಗಿ , ತಾವು ಸದಾ ಭದ್ಧರಾಗಿರುವುದಾಗಿ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ನುಡಿದಿದ್ದಾರೆ. ಪತ್ರಕರ್ತರೊಂದಿಗೆ ಹೋರಾಟಗಾರರಾದ ರಾಘವೇಂದ್ರರವರು ಮಾತನಾಡಿದ್ದು , ಮೇನ್ ಬಾಯ್ಸ್ ಸ್ಕೂಲ್ ಸ್ವಾತಂತ್ರ್ಯ ಪೂರ್ವದಲ್ಲಿಯೇ ನಿರ್ಮಾಣಮಾಗಿದ್ದು.  ಕೆಲ ಪಟ್ಟ ಭದ್ರ ಹಿತಾಸಕ್ತಿಗಳ ಕುತಂತ್ರದಿಂದಾಗಿ , ನಿರಂತರವಾಗಿ ಶೋಷಣೆಗೆ ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿದೆ. ಆ ಅವ್ಯವಸ್ಥೆಯ ವಿರುದ್ಧ ತಾವು ಮೌನ ಪ್ರತಿಭಟನೆ ಹಮ್ಮಿಕೊಂಡಿರುವುದ‍ಾಗಿ , ಶಾಲಾಕ್ಷೇಮಾಭಿವೃದ್ಧಿ ಹೋರಾಟಗಾರರು. ಎಸ್ಡಿ ಎಮ್ಸಿ ಮೇಲುಸ್ತುವಾರಿ ಸಮಿತಿ ರಾಜ್ಯ ಉಪಾಧ್ಯಕ್ಷರಾದ ,  ಗುನ್ನಳ್ಳಿ ರಾಘವೇಂದ್ರ ನುಡಿದಿದ್ದಾರೆ. ಅವರು ಶಾಲಾ ಆವರಣದಲ್ಲಿ , ಯಾವುದೇ ಖಾಸಗೀ ಕಾರ್ಯಕ್ರಮ ಜರುಗುವುದನ್ನು ವಿರೋಧಿಸುತ್ತಿದ್ದು. ಮತ್ತು ಶಾಲಾವರಣ ಕೆಲ ಪಟ್ಟಭದ್ರರ ಕಪಿಮುಷ್ಠಿಯಲ್ಲಿ ನಲುಗುತ್ತಿದೆ , ಇದರಿಂದಾಗಿ ಶಾಲಾವಾತಾರಣದಲ್ಲಿ ಶಾಂತಿಗೆ ಭಂಗವಾಗಲಿದೆ. ಇದರ ವಿರುದ್ಧ ತಾವು ಮೌನ ಪ್ರತಿಭಟನೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಶಾಸಕರ ಮನವಿಯ ಮೇರೆಗೆ ಹೋರಾಟವನ್ನು ತಾವು , ತಾತ‍್ಕಾಲಿಕ ಸಮಯ ಮಾತ್ರ ಹಿಂಪಡೆಯುತ್ತಿದ್ದು. ಗಣೇಶೋತ್ಸವ ನಂತರದಲ್ಲಿ ಹೋರಾಟ ಮುಂದುವರೆಯಲಿದ್ದು , ಬೀದಿಗಿಳಿದು ಹೋರಾಟಗಳನ್ನು ನಡೆಸಲಾಗುವುದು. ಶಾಲೆ ಸ್ಥಳಾಂತರಕ್ಕೆ ಯಾವುದೇ ಕಾರಣಕ್ಕೆ ಅವಕಾಶ ಕೊಡೋದಿಲ್ಲ  ,  ಶಾಲಾ ಆವರಣ ಉಳಿವಿಗಾಗಿ ಕ್ಷೇಮಾಭಿವೃದ್ಧಿಗೆ ತ‍ಾವು ಎಂತಹ ತ್ಯಾಗ ಬಲಿದಾನಕ್ಕೂ ಸಿದ್ಧರಿರುವುದ‍ಾಗಿ ಅವರು ಘೋಷಿಸಿದರು. ಶಾಲೆಯ ಉಳಿವಿಗಾಗಿ ಶಾಲಾ ಆವರಣ ಉಳಿವಿಗಾಗಿ , ಶ‍ಾಲೆಯ ಹಳೇ ವಿದ್ಯಾರ್ಥಿಗಳ ಸಂಘಟನೆ ಮಾಡಿ ಜಾಗೃತಿ ಆಂದೊಲನ ಹೋರಾಟಗಳನ್ನಿ ಹಮ್ಮಿಕೊಳ್ಳಲ‍ಾಗುವುದು. ಮತ್ತು ಶಾಲಾ ಕ್ಷೇಮಾಭಿವೃದ್ಧಿಗಾಗಿ , ನ್ಯ‍ಾಯ‍ಲಯದ ಮೊರೆ ಹೋಗಲಾಗುವುದು. ತಾವು ಕ‍ಾನೂನಾತ್ಮಕವಾಗಿ ಹೋರಾಡಲು ಸರ್ವಸಿದ್ಧವಿದ್ದು ,  ಎಲ್ಲಾ ಹಂತದ ಹೋರಾಟಕ್ಕೆ ಪೂರ್ವ ತಯಾರಿ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಅಭಿವೃದ್ಧಿ ನೆಪದಲ್ಲಿ ಶಾಲಾ ಮೂಲ ಆಕರಕ್ಕೆ ಯಾವುದೇ ದಕ್ಕೆಯಾಗಬಾರದು ,  ಅದು ಕಾನೂನು ಬಾಹೀರವಾಗಲಿದ್ದು. ಆಭಿವೃದ್ಧಿಯ ಹರಿಕಾರರಾದ ಶ‍ಾಸಕರ ಮನವಿಗೆ ಮಾನ್ಯತೆ ನೀಡಿ , ಅವರ ಅಭಿವೃದ್ಧಿ ಪರನಿಲುವಿನ ಮೇಲೆ ವಿಶ್ವಾಸವಿಟ್ಟು ತಾವು ಮೌನ ಪ್ರತಿಭಟನೆಯನ್ನು  ತಾತ್ಕ‍ಾಲಿಕವಾಗಿ ನಿಲ್ಲಿಸಲಾಗುವುದೆಂದು ಅವರು ತಿಳಿಸಿದರು. ಹಿಂದೆ ಶಾಸಕರು ಸಮ್ಮುಖದಲ್ಲಿ ಪ್ರತಿಭಟನೆ ಮಾಡುತ್ತಿರುವವರನ್ನುದ್ಧೇಶಿಸಿ ಮಾತನ‍ಾಡಿದ ಶಾಸಕರು , ಹೋರಾಟಗಾರರಲ್ಲಿರುವ ಶಾಲಾಕಾಳಜಿಯನ್ನು ಪ್ರಶಂಸಿದರು. ಮತ್ತು ಶೀಘ್ರವೇ ಶಾಲೆಯ ಕ್ಷೇಮಾಭಿವೃದ್ಧಿಗೆ ಚಾಲನೆ ನೀಡಲಾಗುವುದು. ಸರ್ಕಾರಿ ಶಾಲ‍ೆಗಳ ಕ್ಷೇಮ‍ಾಭಿವೃದ್ಧಿಗೆ ತಾವು ಸದಾ ಬದ್ಧರಿರುವುದಾಗಿ , ಶಾಸಕರು ಹೋರಾಟಗಾರರಿಗೆ ಮನವರಿಕೆ ಮ‍ಾಡಿಕೊಟ್ಟರು.  ಶಾಲೆಯನ್ನು ಐತಿಹಾಸಿಕ ಶಾಲೆಯನ್ನಾಗಿ ಮಾಡುತ್ತೇನೆಂದು  ಭರವಸೆ ನೀಡಿದರು ,  ಸುಸಜ್ಜಿತವಾದಂತಹ ಗುಣ ಮಟ್ಟದ ಶಿಕ್ಷಣ ಒದಗಿಸುವುದಕ್ಕೆ.  ಅಗತ್ಯ ಸೌಕರ್ಯಗಳನ್ನು ಒಸಗಿಸುವುದಾಗಿ ನುಡಿದರು. ಶಾಲೆಯ ಮೂಲ ಆಕಾರಕ್ಕೆ ಧಕ್ಕೆ ತರದೇ ಉನ್ನತೀಕರಿಸಲ‍ಾಗುವುದೆಂದು , ಶಾಲಾ ಆವರಣವನ್ನು ಮತ್ತಷ್ಟು ಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದೆಂದು ಶಾಸಕರು ಭರವಸೆ ನೀಡಿದ್ದಾರೆನ್ನಲಾಗುತ್ತಿದೆ. ಈ ಸಂದರ್ಭದಲ್ಲಿ ಹತ್ತಾರು ಪ್ರಮುಖ ಸಂಘಟನೆಗಳ , ಮುಖಂಡರು ಗಣ್ಯರು ಉಪಸ್ಥಿತರಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*
    user_ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ
    ಕೂಡ್ಲಿಗಿ, ವಿಜಯನಗರ, ಕರ್ನಾಟಕ•
    11 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.