ಸುರಪಗಟ್ಟಿ ಗ್ರಾಮದಲ್ಲಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ : ಹಣ ವಸೂಲಿ ಮಾಡುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕ್ರಮ ಖಚಿತ ಶಾಸಕ ಪಠಾಣ್ ಶಿಗ್ಗಾವಿ : ಗ್ರಾಮಗಳಲ್ಲಿ ಹಕ್ಕುಪತ್ರ ನೀಡುವ ವಿಷಯವಾಗಿ ಹಣ ವಸೂಲಿ ಮಾಡುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಬಗ್ಗೆ ನನ್ನ ಗಮನಕ್ಕೆ ಬಂದರೆ ಕ್ರಮ ಖಚಿತ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ತಾಲೂಕಿನ ಸುರಪಗಟ್ಟಿ ಗ್ರಾಮದಲ್ಲಿ ಕಂದಾಯ ಗ್ರಾಮ/ಉಪಗ್ರಾಮದಲ್ಲಿನ ನಿವಾಸಿಗಳಿಗೆ ೧೧೧ ಹಕ್ಕು ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು. ಮುಖ್ಯಮಂತ್ರಿ ವಿಶೇಷ ಅನುದಾನ ಅಡಿಯಲ್ಲಿ ೧೪೦೦ ಕೋಟಿ ಅನುದಾನ ಕ್ಷೇತ್ರಕ್ಕೆ ತಂದಿದ್ದೇನೆ. ಕುಡಿಯುವ ನೀರಿನ ಯೋಜನೆಗಾಗಿ ಒಟ್ಟು ೩೫೦ ಕೋಟಿ ಹಣ ಮಂಜೂರಾಗಿದ್ದು, ಅದರಲ್ಲಿ ಸತತವಾಗಿ ೨೪ ಗಂಟೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ೧೦೯ ಕೋಟಿ ಹಣ ಮೀಸಲಿಡಲಾಗಿದೆ ಎಂದರು. ತಾಲೂಕಿನಲ್ಲಿ ಸುಮಾರು ೨೦ ಸಾವಿರ ಕುಟುಂಬದ ಸದಸ್ಯರಿಗೆ ಹಕ್ಕುಪತ್ರ ಕೊಡುವ ಸಂಕಲ್ಪವಿದೆ. ಇಲ್ಲಿಯವರೆಗೂ ೮೫೦೦ ಹಕ್ಕುಪತ್ರ ನೀಡಲಾಗಿದೆ ಜೊತೆಗೆ ೬ ಸಾವಿರ ಕಡು ಬಡವರಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಲು ಯೋಜನೆ ರೂಪಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಗುಡ್ಡಪ್ಪ ಜಲದಿ, ಮುಖಂಡರಾದ ಚಂದ್ರು ಮಾಯಣ್ಣವರ, ಅಣ್ಣಪ್ಪ ಲಮಾಣಿ, ಮಲ್ಲಿಕಾರ್ಜುನಗೌಡ ಪಾಟೀಲ, ಮಲ್ಲಮ್ಮ ಸೋಮನಕಟ್ಟಿ, ಬಾಬರ ಭೋವಾಜಿ ಸೇರಿದಂತೆ ಗ್ರಾಮಸ್ಥರು ಹಾಗೂ ಫಲಾನುಭಾವಿಗಳು ಇದ್ದರು.
ಸುರಪಗಟ್ಟಿ ಗ್ರಾಮದಲ್ಲಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ : ಹಣ ವಸೂಲಿ ಮಾಡುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಕ್ರಮ ಖಚಿತ ಶಾಸಕ ಪಠಾಣ್ ಶಿಗ್ಗಾವಿ : ಗ್ರಾಮಗಳಲ್ಲಿ ಹಕ್ಕುಪತ್ರ ನೀಡುವ ವಿಷಯವಾಗಿ ಹಣ ವಸೂಲಿ ಮಾಡುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಬಗ್ಗೆ ನನ್ನ ಗಮನಕ್ಕೆ ಬಂದರೆ ಕ್ರಮ ಖಚಿತ ಎಂದು ಶಾಸಕ ಯಾಸೀರ ಅಹ್ಮದಖಾನ ಪಠಾಣ ಹೇಳಿದರು. ತಾಲೂಕಿನ ಸುರಪಗಟ್ಟಿ ಗ್ರಾಮದಲ್ಲಿ ಕಂದಾಯ
ಗ್ರಾಮ/ಉಪಗ್ರಾಮದಲ್ಲಿನ ನಿವಾಸಿಗಳಿಗೆ ೧೧೧ ಹಕ್ಕು ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು. ಮುಖ್ಯಮಂತ್ರಿ ವಿಶೇಷ ಅನುದಾನ ಅಡಿಯಲ್ಲಿ ೧೪೦೦ ಕೋಟಿ ಅನುದಾನ ಕ್ಷೇತ್ರಕ್ಕೆ ತಂದಿದ್ದೇನೆ. ಕುಡಿಯುವ ನೀರಿನ ಯೋಜನೆಗಾಗಿ ಒಟ್ಟು ೩೫೦ ಕೋಟಿ ಹಣ ಮಂಜೂರಾಗಿದ್ದು, ಅದರಲ್ಲಿ ಸತತವಾಗಿ ೨೪ ಗಂಟೆ ಶಾಶ್ವತವಾಗಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ೧೦೯ ಕೋಟಿ ಹಣ ಮೀಸಲಿಡಲಾಗಿದೆ ಎಂದರು. ತಾಲೂಕಿನಲ್ಲಿ ಸುಮಾರು ೨೦ ಸಾವಿರ ಕುಟುಂಬದ ಸದಸ್ಯರಿಗೆ
ಹಕ್ಕುಪತ್ರ ಕೊಡುವ ಸಂಕಲ್ಪವಿದೆ. ಇಲ್ಲಿಯವರೆಗೂ ೮೫೦೦ ಹಕ್ಕುಪತ್ರ ನೀಡಲಾಗಿದೆ ಜೊತೆಗೆ ೬ ಸಾವಿರ ಕಡು ಬಡವರಿಗೆ ವಸತಿ ವ್ಯವಸ್ಥೆ ಕಲ್ಪಿಸಿಕೊಡಲು ಯೋಜನೆ ರೂಪಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅದ್ಯಕ್ಷ ಗುಡ್ಡಪ್ಪ ಜಲದಿ, ಮುಖಂಡರಾದ ಚಂದ್ರು ಮಾಯಣ್ಣವರ, ಅಣ್ಣಪ್ಪ ಲಮಾಣಿ, ಮಲ್ಲಿಕಾರ್ಜುನಗೌಡ ಪಾಟೀಲ, ಮಲ್ಲಮ್ಮ ಸೋಮನಕಟ್ಟಿ, ಬಾಬರ ಭೋವಾಜಿ ಸೇರಿದಂತೆ ಗ್ರಾಮಸ್ಥರು ಹಾಗೂ ಫಲಾನುಭಾವಿಗಳು ಇದ್ದರು.
- ಬಳ್ಳಾರಿ: ಸಚಿವ ಡಿ. ಸುಧಾಕರ್ ನಿಧನ: "ಎಲ್ಲವೂ ವಿಧಿಯಾಟ'' ಎಂದು ಭಾವುಕರಾದ ಸಚಿವ ಜಮೀರ್ ಅಹಮದ್! ಸಚಿವ ಡಿ. ಸುಧಾಕರ್ ಅವರ ಅಕಾಲಿಕ ನಿಧನಕ್ಕೆ ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮದ್ ಚಳ್ಳಕೆರೆಯಲ್ಲಿ ಸೋಮವಾರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಯಾರು ಯಾವಾಗ ನಮ್ಮನ್ನು ಬಿಟ್ಟು ಹೋಗುತ್ತಾರೆ ಎಂದು ತಿಳಿಯುವುದಿಲ್ಲ, ಎಲ್ಲವೂ ವಿಧಿಯಾಟ' ಎಂದು ಅವರು ಭಾವುಕರಾಗಿ ನುಡಿದರು. ಕೇವಲ ಮಂಡಿ ನೋವಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಸುಧಾಕರ್ ಅವರಿಗೆ ನಂತರ ಶ್ವಾಸಕೋಶದ ಸಮಸ್ಯ ೆ ಕಾಣಿಸಿಕೊಂಡಿತ್ತು. ಸದಾ ಹಸನ್ಮುಖಿಯಾಗಿದ್ದ ಅವರು ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಜಮೀರ್ ಸ್ಮರಿಸಿದರು. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ದೇವರಲ್ಲಿ ಪ್ರಾರ್ಥಿಸಿದರು.1
- ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಮೇ 10ರಂದು ತಾಯಿ ದಿನವನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಸೇರಿದಂತೆ ಹಿರಿಯ ಸಾಹಿತಿಗಳು, ಪತ್ರಕರ್ತರು ಮತ್ತು ಸಾರ್ವಜನಿಕರು ತಮ್ಮ ತಾಯಂದಿರನ್ನು ಗೌರವಿಸಿ, ಸಿಹಿ ಹಂಚಿ ವಂದಿಸಿದರು. ಈ ದಿನ ತಾಯಿಯ ಆದರ್ಶ ಗುಣಗಳನ್ನು ಸ್ಮರಿಸಿ, ಪೋಷಕರನ್ನು ಪೂಜಿಸುವುದರ ಮಹತ್ವವನ್ನು ಸಾರಲಾಯಿತು.4
- ಬಾಯಲ್ಲಿ ನೀರೂರಿಸುವ ಮಾವಿನಕಾಯಿ ಒಗ್ಗರಣೆ ಉಪ್ಪಿನಕಾಯಿ ಮಾಡುವ ಸುಲಭ ವಿಧಾನ ಇಲ್ಲಿದೆ. ಈ ದಿಢೀರ್ ಉಪ್ಪಿನಕಾಯಿಯನ್ನು ಮಾಡಿದ ತಕ್ಷಣವೇ ಅಥವಾ ಒಂದೆರಡು ಗಂಟೆಗಳ ನಂತರ ಅನ್ನ, ದೋಸೆ ಮತ್ತು ಚಪಾತಿ ಜೊತೆ ಸವಿಯಬಹುದು. ಮನೆಯಲ್ಲಿ ಕೇವಲ 2 ಮಾವಿನಕಾಯಿಗಳಿದ್ದರೆ, ನಿಮಿಷಗಳಲ್ಲಿ ಇದನ್ನು ತಯಾರಿಸಬಹುದು.1
- ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಕಾರ, ರಾಜಕೀಯ ಶಕ್ತಿಯು ಪ್ರಗತಿ ಮತ್ತು ಸ್ವಾಭಿಮಾನದ ಎಲ್ಲಾ ಬಾಗಿಲುಗಳನ್ನು ತೆರೆಯುವ ಮಾಸ್ಟರ್ ಕೀ ಆಗಿದೆ. ಸಕಲ ಸಿದ್ಧಿಯನ್ನು ಸಾಧಿಸಲು ಇದೊಂದು ಅತಿ ಮುಖ್ಯ ಸಾಧನವಾಗಿದೆ.1
- ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ. ಕುಷ್ಟಗಿ:- ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕುಷ್ಟಗಿ ಪಟ್ಟಣದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ, ದ್ವೀತಿಯ ಮತ್ತು ಅತಿ ಹೆಚ್ಚು ಅಂಕಪಡೆದ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಕುಷ್ಟಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲೆಂಕಪ್ಪ ವಾಲಿಕಾರ ತಿಳಿಸಿದರು. ಇಲ್ಲಿನ ಹಳೆ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು 2025- 2026ನೇ ಸಾಲಿನ ಈ ವರ್ಷದ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಮುದೇನೂರು ಗ್ರಾಮದಲ್ಲಿ ಹಮ್ಮಿಕೊಳ್ಳಬೇಕಾಗಿತ್ತು. ಕಾರಣಾಂತರಗಳಿಂದ ಮುದೇನೂರು ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಆಗುವುದಿಲ್ಲ ಆದರೆ ಮುಂದಿನ ತಿಂಗಳಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲು ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳಿಂದ ಮತ್ತು ಎಲ್ಲಾ ಸದಸ್ಯರಿಂದ ಒಪ್ಪಿಗೆ ಪಡೆಯಲಾಗಿದೆ. ಮುಂದಿನ ದಿನಮಾನದಲ್ಲಿ ಯಾವ ಕಡೆ ಸಮ್ಮೇಳನ ನೆಡೆಸಿದರೆ ಸೂಕ್ತ ಆಗುತ್ತದೆ ಎಂಬ ತೀರ್ಮಾನ ತೆಗೆದುಕೊಂಡು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲಾಗುವದು ಎಂದರು. ಅದರಂತೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎಸ್.ಎಸ್‌ಎಲ್.ಸಿ. ಮತ್ತು ಯುಪಿಸಿ ಮಕ್ಕಳಿಗೆ ವಿಶೇಷ ಸನ್ಮಾನ ಸಮಾರಂಭ ಏರ್ಪಡಿಸಿಲಾಗುತ್ತಿದೆ ಆದ್ದರಿಂದ ತಾಲೂಕಿನ ಪ್ರಥಮ, ದ್ವೀತಿಯ ಸ್ಥಾನದಲ್ಲಿ ಹಾಗೂ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಲಾಗುವದು ಈ ಒಂದು ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಲಹೆ ಸಹಕಾರ ಬಹಳ ಅಗತ್ಯವಾಗಿದ್ದು ಈ ಒಂದು ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣೇಗೌಡ ಪಾಟೀಲ ಮಾತನಾಡಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೆ ಮೊದಲು ಸೂಕ್ತ ತೀರ್ಮಾನ ತೆಗೆದುಕೊಂಡು ಸಭೆ ಸಮಾರಂಭ ಏರ್ಪಡಿಸಬೇಕಾಗುತ್ತದೆ ಈ ವರ್ಷದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕುಷ್ಟಗಿ ತಾಲೂಕಿನಲ್ಲಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಆದರೆ ಪ್ರತಿಯೊಬ್ಬರ ಸಲಹೆ ಸಹಕಾರ ಅಗತ್ಯವಾಗಿದೆ ಸೂಕ್ತ ನಿರ್ಧಾರದೊಂದಿಗೆ ಜಿಲ್ಲಾ ಸಮ್ಮೇಳನ ನಡೆಸಲಾಗುವದು ಎಂಬ ಹೇಳಿದರು. ಈ ಸಂದರ್ಭದಲ್ಲಿ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶರಣಪ್ಪ ವಡಗೇರಿ, ನಿಕಟ ಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನಮೇಶ ಗುಮಗೇರಾ, ರವೀಂದ್ರ ಬಾಕಳೆ, ಉಮೇಶ ಹಿರೇಮಠ, ಸಾಹಿತಿಗಳಾದ ಅಮರೇಗೌಡ ಪಾಟೀಲ ಜಾಲಿಹಾಳ, ದೇವರಾಜ ವಿಶ್ವ ಕರ್ಮ, ದೊಡ್ಡಪ್ಪ ಕೈಲವಾಡಗಿ, ಹ.ಯ.ಈಟಿಯವರ್, ಆರ್.ಕೆ.ಸುಬೇದಾರ, ವಿದ್ಯಾ ಕಂಪಾಪೂರಮಠ, ಎಸ್.ಜೆ.ಕಡೆಮನಿ, ಶ್ರೀನಿವಾಸ ಕಟ್ಲಿ, ನಿಂಗಪ್ಪ ಸಜ್ಜನ್, ಚನ್ನಪ್ಪ ಬಾವಿಮನಿ, ಸಂತೋಷ ತೋಟದ್, ಹನಮೇಶ ಶಾಖಾಪೂರ, ಕ.ಕಾ.ಪ.ಸ.ತಾಲೂಕು ಅಧ್ಯಕ್ಷ ಪವಾಡೆಪ್ಪ ಚೌಡ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಜ್ಯ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತ ಲಲಿತಮ್ಮ ಹಿರೇಮಠ ಇವರಿಗೆ ಸನ್ಮಾನಿಸಿ ಗೌರವಿಸಿದರು.2
- ರೈಲ್ವೆ ಕಾಮಗಾರಿಯ ಕಂದಕದಲ್ಲಿ ಮುಳುಗಿ 17 ವರ್ಷದ ಬಾಲಕ ಸಾವು: ಗ್ರಾಮಸ್ಥರಲ್ಲಿ ಆತಂಕ ಕುಷ್ಟಗಿ: ತಾಲೂಕಿನ ವಿವಿಧೆಡೆ ರೈಲ್ವೆ ಇಲಾಖೆಯ ಕಾಮಗಾರಿಗಾಗಿ ಮಣ್ಣು (ಮರಂ) ತೆಗೆಯಲು ನಿರ್ಮಿಸಲಾಗಿರುವ ಆಳವಾದ ಕಂದಕಗಳು ಇದೀಗ ಸಾವಿನ ಬಲೆಗಳಾಗಿ ಪರಿಣಮಿಸುತ್ತಿರುವ ಆತಂಕಕಾರಿ ಘಟನೆಗಳು ಬೆಳಕಿಗೆ ಬರುತ್ತಿವೆ. ವಣಗೇರಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದ್ದ ನೀರು ತುಂಬಿದ ಕಂದಕದಲ್ಲಿ ಈಜಲು ತೆರಳಿದ್ದ ಕೆ.ಬೋದೂರು ಗ್ರಾಮದ 17 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ಘಟನೆ ನಡೆದಿದೆ. ವಣಗೇರಿ ಗ್ರಾಮದ ಸರ್ವೇ ನಂ. 24/1/3ರ ಜಮೀನಿನಲ್ಲಿ ರೈಲ್ವೆ ಕಾಮಗಾರಿಗಾಗಿ ಸುಮಾರು 6 ಎಕರೆ ಪ್ರದೇಶದಲ್ಲಿ ಮಣ್ಣು ತೆಗೆಯಲಾಗಿತ್ತು. ಇದರಿಂದ ಸುಮಾರು 45ರಿಂದ 50 ಅಡಿ ಆಳದ ಬೃಹತ್ ಕಂದಕ ನಿರ್ಮಾಣವಾಗಿದ್ದು, ಮಳೆ ಹಾಗೂ ಬಸಿ ನೀರು ತುಂಬಿ ಸಂಪೂರ್ಣ ಜಲಾವೃತಗೊಂಡಿತ್ತು. ಕೆ.ಬೋದೂರು ಗ್ರಾಮದ ಹನುಮಂತಪ್ಪ ತಂದೆ ಬಸವರಾಜ ಗೊರೆಬಾಳ (17) ಹಾಗೂ ಇನ್ನೊಬ್ಬ ಬಾಲಕ ಈಜಲು ಕಂದಕದ ಬಳಿ ತೆರಳಿದ್ದ ವೇಳೆ, ಆಳದ ಅರಿವಿಲ್ಲದೆ ನೀರಿನ ಸೆಳೆತಕ್ಕೆ ಸಿಲುಕಿ ಹನುಮಂತಪ್ಪ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ತಹಶೀಲ್ದಾರ ಅಶೋಕ ಶಿಗ್ಗಾಂವಿ, ಅಗ್ನಿಶಾಮಕ ಠಾಣಾಧಿಕಾರಿ ಮಾಳಿಂಗರಾಯ ಹಾಗೂ ಸಿಬ್ಬಂದಿ, ಕುಷ್ಟಗಿ ಪಿಎಸ್‌ಐ ಹನಮಂತಪ್ಪ ತಳವಾರ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಶೋಧ ಕಾರ್ಯಾಚರಣೆ ಆರಂಭಿಸಿತು. ನಿನ್ನೆ ಆರಂಭವಾದ ನಿರಂತರ ಕಾರ್ಯಾಚರಣೆಯ ಬಳಿಕ ಇಂದು ಬೆಳಿಗ್ಗೆ ಸುಮಾರು 9.30ಕ್ಕೆ ಬಾಲಕನ ಮೃತದೇಹ ಪತ್ತೆಯಾಯಿತು. ವಣಗೇರಿ ಮಾತ್ರವಲ್ಲದೆ ತಾಲೂಕಿನ ಟೆಂಗುಂಟಿ, ಕೆ.ಹೊಸೂರು, ಕಂದಕೂರು ಹಾಗೂ ಜಿ.ಗಂಗನಾಳ ಸೇರಿದಂತೆ ಹಲವು ಪ್ರದೇಶಗಳಲ್ಲಿ ರೈಲ್ವೆ ಯೋಜನೆಗಾಗಿ ಮಣ್ಣು ಮತ್ತು ಮರಳು ತೆಗೆಯಲಾಗಿದ್ದು, ಆಳವಾದ ಕಂದಕಗಳು ನಿರ್ಮಾಣಗೊಂಡಿವೆ. ಕೆಲವೆಡೆ ನೀರು ತುಂಬಿಕೊಂಡಿದ್ದು, ಇನ್ನೂ ಕೆಲವು ಸ್ಥಳಗಳಲ್ಲಿ ಅಪಾಯಕಾರಿಯಾಗಿ ತೆರೆದ ಸ್ಥಿತಿಯಲ್ಲಿವೆ. ಇದರಿಂದ ಗ್ರಾಮಸ್ಥರು ಹಾಗೂ ಜಾನುವಾರುಗಳಿಗೆ ಪ್ರಾಣಾಪಾಯ ಎದುರಾಗುವ ಭೀತಿ ಹೆಚ್ಚಾಗಿದೆ. ಸುರಕ್ಷತಾ ಕ್ರಮಗಳಿಲ್ಲದೆ ಕಂದಕಗಳನ್ನು ಬಿಟ್ಟಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮೀನಿನ ಮಾಲೀಕರು ಹಾಗೂ ರೈಲ್ವೆ ಕಾಮಗಾರಿ ನಿರ್ವಹಣೆಯ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿರುವ ಸ್ಥಳೀಯರು, ಮೃತ ಬಾಲಕನ ಕುಟುಂಬಕ್ಕೆ ಸರ್ಕಾರ ಹಾಗೂ ರೈಲ್ವೆ ಇಲಾಖೆ ತಕ್ಷಣ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದಲ್ಲದೆ, ಅಪಾಯಕಾರಿ ಕಂದಕಗಳ ಸುತ್ತ ತಂತಿ ಬೇಲಿ ಅಳವಡಿಸುವುದು, ಎಚ್ಚರಿಕೆ ಫಲಕಗಳನ್ನು ಸ್ಥಾಪಿಸುವುದು ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.4
- ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾವೇರಿ ಜಿಲ್ಲೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಬ್ಯಾಡಗಿ ಶಾಸಕರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.1
- Jai Bheem sir Chetan ahinsa social worker and Samanthawadi Jai Bheem sir1
- ಹೊಸನಗರ ಪ್ರದೇಶದಲ್ಲಿ ಕಳ್ಳರ ಹಾವಳಿ ಹೆಚ್ಚಿರುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ, ಇದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ನಿಮ್ಮ ಮನೆ ಮತ್ತು ಕುಟುಂಬದ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.3