Shuru
Apke Nagar Ki App…
ಮಲೆ ಮಹದೇಶ್ವರ ಬೆಟ್ಟದ ಆನೆ ತಲೆ ದಿಂಬ ಹತ್ತಿರ ಒಂಟಿ ಸಲಗ ಪ್ರತ್ಯಕ್ಷ... ವಿಶೇಷ ಸೂಚನೆ :ಭಕ್ತಾದಿಗಳ ಗಮನಕ್ಕೆ ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನಗಳಲ್ಲಿ ಬರುವ ಭಕ್ತಾದಿಗಳಲ್ಲಿ ವಿನಂತಿ ಬೆಟ್ಟದ ಹಾದಿಯ ಆನೆ ತಲೆದಿಂಬು ಹತ್ತಿರ ಒಂಟಿ ಸಲಗವೊಂದು ರಸ್ತೆ ಬದಿಯಲ್ಲೇ ಬೀಡುಬಿಟ್ಟಿದೆ ರಾತ್ರಿ ಹಾಗೂ ಹಗಲು ವೇಳೆ ಈ ಮಾರ್ಗದಲ್ಲಿ ಸಂಚರಿಸುವಾಗ ಅತೀ ಹೆಚ್ಚು ಜಾಗರೂಕರಾಗಿರಿ ವನಪ್ರದೇಶದಲ್ಲಿ ಅನಗತ್ಯವಾಗಿ ವಾಹನ ನಿಲ್ಲಿಸಬೇಡಿ ಮತ್ತು ಕಾಡು ಪ್ರಾಣಿಗಳ ಬಗ್ಗೆ ಎಚ್ಚರದಿಂದಿರಿ ನಿಮ್ಮ ಪ್ರಯಾಣ ಸುಖಕರವಾಗಿರಲಿ..
ಉಸ್ಮಾನ್ ಖಾನ್
ಮಲೆ ಮಹದೇಶ್ವರ ಬೆಟ್ಟದ ಆನೆ ತಲೆ ದಿಂಬ ಹತ್ತಿರ ಒಂಟಿ ಸಲಗ ಪ್ರತ್ಯಕ್ಷ... ವಿಶೇಷ ಸೂಚನೆ :ಭಕ್ತಾದಿಗಳ ಗಮನಕ್ಕೆ ಮಲೆ ಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನಗಳಲ್ಲಿ ಬರುವ ಭಕ್ತಾದಿಗಳಲ್ಲಿ ವಿನಂತಿ ಬೆಟ್ಟದ ಹಾದಿಯ ಆನೆ ತಲೆದಿಂಬು ಹತ್ತಿರ ಒಂಟಿ ಸಲಗವೊಂದು ರಸ್ತೆ ಬದಿಯಲ್ಲೇ ಬೀಡುಬಿಟ್ಟಿದೆ ರಾತ್ರಿ ಹಾಗೂ ಹಗಲು ವೇಳೆ ಈ ಮಾರ್ಗದಲ್ಲಿ ಸಂಚರಿಸುವಾಗ ಅತೀ ಹೆಚ್ಚು ಜಾಗರೂಕರಾಗಿರಿ ವನಪ್ರದೇಶದಲ್ಲಿ ಅನಗತ್ಯವಾಗಿ ವಾಹನ ನಿಲ್ಲಿಸಬೇಡಿ ಮತ್ತು ಕಾಡು ಪ್ರಾಣಿಗಳ ಬಗ್ಗೆ ಎಚ್ಚರದಿಂದಿರಿ ನಿಮ್ಮ ಪ್ರಯಾಣ ಸುಖಕರವಾಗಿರಲಿ..
More news from ಕರ್ನಾಟಕ and nearby areas
- ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ 2026 ನೆಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಾದಪ್ಪನ ಮಹಾರಥೋತ್ಸವ ವಿಜೃಂಭಣೆ ಜರುಗಿತು. #ಮಲೆಗಳಲ್ಲಿ ಮೈದಳೆದ ಮಾದೇವನ ಸನ್ನಿಧಿಯಲ್ಲಿ ಹೊಸ ವರ್ಷದ ಸಂಭ್ರಮ! 🌿 ಬೇವು-ಬೆಲ್ಲದ ಸವಿ ಒಂದೆಡೆಯಾದರೆ, ಬೆಟ್ಟದ ದಾರಿಯಲ್ಲಿ ಮಾದಪ್ಪನ ಸಾರಥ್ಯದ ಸಡಗರ ಇನ್ನೊಂದೆಡೆ. ಯುಗಾದಿ ಹಬ್ಬ ಹಾಗೂ ಮಹದೇಶ್ವರ ಬೆಟ್ಟದ ಜಾತ್ರೆಯ ಹಾರ್ದಿಕ ಶುಭಾಶಯಗಳು.1
- ಮಲೆ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಮಹಾರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು. ಈ ಮೂಲಕ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು. ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ನೇತೃತ್ವದಲ್ಲಿ ವಿಶೇಷ ಪೂಜೆಗಳು ಜರುಗಿದವು. ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ರಥೋತ್ಸವ, ಗುರು ಬ್ರಹ್ಮೋತ್ಸವ ಹಾಗೂ ಅನ್ನ ಬ್ರಹ್ಮೋತ್ಸವವೂ ಭಕ್ತಿಭಾವದಿಂದ ನೆರವೇರಿತು.2
- ಮಳವಳ್ಳಿ ಹಂಗ್ರಾಪುರ ಗ್ರಾಮದಲ್ಲಿ ಯುಗಾದಿ ಹಬ್ಬದ ಹೊನ್ನೇರು ಪೂಜಾ ಕಾರ್ಯಕ್ರಮ ಸಂಪನ್ನ ಮಳವಳ್ಳಿ ತಾಲೂಕಿನ ಹಂಗ್ರಾಪುರ ಗ್ರಾಮದ ಶ್ರೀ ಮಠದಲ್ಲಿ ಸಂಪ್ರದಾಯ ಬದ್ಧ ಆಚರಣೆಯಂತೆ ಹೊಸ ವರ್ಷದ ಯುಗಾದಿ ಸಂವತ್ಸರದಲ್ಲಿ ಹೊನ್ನೇರು ಪೂಜಾ ಕಾರ್ಯಕ್ರಮ ಅಪಾರ ಭಕ್ತರ ಗುರುವಾರ ಸಂಪನ್ನಗೊಂಡಿತು. ಪ್ರತಿವರ್ಷದಂತೆ ಈ ವರ್ಷವೂ ಹಂಗ್ರಾಪುರ ಮಠದ ಶ್ರೀ ಬಸವ ಲಿಂಗ ದೇಸಿ ಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಆಯೋಜಿಸಿದ್ದ ಯುಗಾದಿ ಸಂವತ್ಸರದ ಹೊನ್ನೇರು ಪೂಜಾ ಕಾರ್ಯಕ್ರಮಗಳು ಸಂಪ್ರದಾಯ ಬದ್ಧವಾಗಿ ಜರುಗಿದವು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು ಈ ಸಂದರ್ಭದಲ್ಲಿ ಹೊನ್ನೇರುಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೀಡಿದರು ನಂತರ ಆಗಮಿಸಿದ ಜನರಿಗೆ ಶ್ರೀಮಠದಲ್ಲಿ ಪ್ರಸಾದ ವಿತರಣೆ ಮಾಡಲಾಯಿತು1
- ಮೈಸೂರು: ಸಂವತ್ಸರಾದಿ (ಅಕ್ಷರಶಃ' ವರ್ಷದ ಆರಂಭ'. ಯುಗ ಎಂದರೆ "ಯುಗ" ಮತ್ತು ಆದಿ ಎಂದರೆ "ಆರಂಭ") ಎಂದೂ ಕರೆಯಲ್ಪಡುವ ಈ ಹಬ್ಬವು ಹಿಂದೂ ಕ್ಯಾಲೆಂಡರ್‌ನಲ್ಲಿ ವರ್ಷದ ಮೊದಲ ದಿನವಾಗಿದೆ ಎಂದು ವಿಜಯನಗರದ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್.ಶ್ರೀನಿವಾಸ್ ಹೇಳಿದರು. ಯುಗಾದಿ ಅಂಗವಾಗಿ ದೇವಾಲಯದಲ್ಲಿ ಶ್ರೀ ಸ್ವಾಮಿಗೆ ನಡೆದ ವಿಶೇಷ ಪೂಜಾ ಕೈಂಕರ್ಯದ ಬಳಿದ ಭಕ್ತಾದಿಗಳಿಗೆ ಪ್ರಸಾದ ವಿತರಿಸಿ ಅವರು ಮಾತನಾಡಿದರು. ವರ್ಷದ ಮೊದಲ ದಿನವೇ ಯುಗಾದಿ ಎಂಬುದು ಹಿಂದೂ ಧರ್ಮದ ಪ್ರತೀತಿಯಾಗಿದೆ. ಬೇವು- ಬೆಲ್ಲದ ಸಮಾಗಮದ ಈ ದಿನದಂದು ಆ ಭಗವಂತನು ಎಲ್ಲರಿಗೂ ಸರ್ವಮಂಗಳವನ್ನುಂಟು ಮಾಡಲಿ ಎಂದು ಆಶಿಸಿದರು. ಯೋಗಾನರಸಿಂಹ ಸ್ವಾಮಿ ದೇವಾಲಯದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ನೂತನ ದಿನಚರಿ ( ಕ್ಯಾಲೆಂಡರ್ ) ಅನ್ನು ದೇಗುಲದ ಸಂಸ್ಥಾಪಕರಾದ ನಾಡೋಜ ಪ್ರೊ.ಭಾಷ್ಯಂ ಸ್ವಾಮೀಜಿ ಅವರ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಗಿದೆ ಎಂದ ಶ್ರೀನಿವಾಸನ್ ಅವರು,ಇ ಯುಗಾದಿಯಿಂದ ಮುಂದಿನ ಸಾಲಿನ ಯುಗಾದಿವರೆಗಿನ ಧಾರ್ಮಿಕ ಪರಂಪರೆಯುಳ್ಳ, ದೇವಾಲಯದ ಎಲ್ಲ ಉತ್ಸವಗಳು ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿಗಳು ಈ ದಿನಚರಿಯಲ್ಲಿ ಇರುವುದು ವಿಶೇಷವಾಗಿದೆ ಎಂದರು. ಈ ಒಂದು ಕಾರ್ಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಾ ಬಂದಿರುವ ನಗರದ ನಯನ ಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಕೆ.ಬಿ ಕುಮಾರ್ ಅವರ ಸೇವಾ ಕಾರ್ಯಗಳು ಹೀಗೆ ಮುಂದುವರೆಯಲಿ, ಶ್ರೀ ಸ್ವಾಮಿಯ ಆಶೀರ್ವಾದ ಸದಾ ಅವರ ಮೇಲಿರಲಿ ಹಾಗೂ ನಾಡಿನ ಎಲ್ಲ ಜನರಿಗೂ ಒಳಿತಾಗಲಿ ಎಂದು ಹಾರೈಸಿದರು. ಇದೇ ವೇಳೆ ನೂತನ ದಿನಚರಿಯನ್ನು ಬಿಡುಗಡೆ ಮಾಡಿದ ಗಣ್ಯರುಗಳು, ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ದೇವಾಲಯ ಮತ್ತಷ್ಟು ಅಭಿವೃದ್ದಿ ಹೊಂದಲಿ ಎಂದು ಆಶಿಸಿದರು. ಈ ಸಂಧರ್ಭದಲ್ಲಿ ದೇವಾಲಯದ ಸಂಸ್ಥಾಪಕರಾದ ನಾಡೋಜ ಪ್ರೊ.ಭಾಷ್ಯಂ ಸ್ವಾಮೀಜಿ, ನಯನ ಕುಮಾರ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಕೆ.ಬಿ ಕುಮಾರ್ ದಂಪತಿ, ರಘುಲಾಲ್ ಕಂಪನಿಯ ಮುಖ್ಯಸ್ಥರಾದ ರಾಘವ್ ದಂಪತಿ, ಮೈಸೂರಿನ ಪ್ರತಿಷ್ಠಿತ ಅಸ್ಕರ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ಸೂರ್ಯ ನಾರಾಯಣ ರಾಜು ಅವರುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.1
- SIDDIQA HANDICAPPED WELFARE TRUST Wilson Garden Bangalore Distrubuted Ration to the members of KAVERI PHYSICALLY DISABLED WELFARE TRUST #kvnews1
- *ಭಾರತ ನಲ್ಲಿ ವೈರಲ್*1
- ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು4
- ಹನೂರು: ಚೈತ್ರ ಮಾಸದ ಆಗಮನದೊಂದಿಗೆ ಪ್ರಕೃತಿಯಲ್ಲಿ ಹೊಸ ಕಳೆ ಬಂದಿದೆ. ಸುಗ್ಗಿ ಕಾಲದ ಸಂಭ್ರಮವನ್ನು ಹೊತ್ತು ತರುವ 'ಕ್ರೋಧಿ ನಾಮ ಸಂವತ್ಸರ' ಯುಗಾದಿ ಹಬ್ಬವನ್ನು ನಾಡಿನಾದ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಸುದ್ದಿಯ ಮುಖ್ಯಾಂಶಗಳು: ಬೇವು-ಬೆಲ್ಲದ ಸಾರ: ಜೀವನದ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕೇತವಾಗಿ ಮನೆಮನೆಗಳಲ್ಲಿ ಬೇವು-ಬೆಲ್ಲ ಹಂಚಿ ಸಂಭ್ರಮಿಸಲಾಗುತ್ತಿದೆ. ಹೊಸ ವರ್ಷದ ಆರಂಭ: ಹಿಂದೂ ಪಂಚಾಂಗದ ಪ್ರಕಾರ ಇಂದಿನಿಂದ ಹೊಸ ವರ್ಷ ಆರಂಭವಾಗುತ್ತಿದ್ದು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪಂಚಾಂಗ ಶ್ರವಣ ಕಾರ್ಯಕ್ರಮಗಳು ನಡೆಯುತ್ತಿವೆ. ಸಂಭ್ರಮದ ಆಚರಣೆ: ಹಬ್ಬದ ಪ್ರಯುಕ್ತ ಮನೆಗಳ ಮುಂದೆ ರಂಗೋಲಿ, ತೋರಣಗಳ ಅಲಂಕಾರದೊಂದಿಗೆ ಹೋಳಿಗೆ (ಒಬ್ಬಟ್ಟು) ಸೇರಿದಂತೆ ವೈವಿಧ್ಯಮಯ ಖಾದ್ಯಗಳ ಸವಿ ಉಣಲಾಗುತ್ತಿದೆ. "ಕಹಿ-ಸಿಹಿ ಸಮ್ಮಿಲನದ ಈ ಯುಗಾದಿ ಎಲ್ಲರ ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಆಶಿಸುತ್ತೇವೆ." ವರದಿ: ಉಸ್ಮಾನ್ ಖಾನ್,1