ದುಸ್ಥಿತಿಯಲ್ಲಿ ವಿಜಯನಗರ ಕಾಲದ ವಸಂತೇಶ್ವರ ದೇವಾಲಯ'ದೇವಾಲಯ! ಪುರತತ್ವ ಇಲಾಖೆ ಒಳಪಡಿಸಿ ಸಂರಕ್ಷಣೆ ನೀಡಿ! ದುಸ್ಥಿತಿಯಲ್ಲಿ ವಿಜಯನಗರ ಕಾಲದ ವಸಂತೇಶ್ವರ ದೇವಾಲಯ'ದೇವಾಲಯ! ಪುರತತ್ವ ಇಲಾಖೆ ಒಳಪಡಿಸಿ! ನಾಗಸ್ವರ, ವಾದಕ,ಡೋಲುನಗಾರಿ,ಯಿಂದ ದಿನಾಲೂ ಸಂಗೀತ ಸೇವೆ ದೇವಲಾಪುರದ ವಸಂತೇಶ್ವರ ದೇಗುಲದ ವಾಸ್ತುಶಿಲ್ಪ ವೈಭವ! ತಾಳಿಕೋಟೆ ಕದನಕ್ಕೂ ಮೊದಲು ನಿರ್ಮಾಣಗೊಂಡ ದೇವಾಲಯ! ಈ ಭಾಗದ ವಿಜಯನಗರ ಸಾಮ್ರಾಜ್ಯ ಇತಿಹಾಸ ಸಾರುವ ಜೀವಂತ ಸಾಕ್ಷಿಗಳಲ್ಲೊಂದು! ಅಂದಿನ ಕಾಲದ ಸಂಗೀತ ಮಹತ್ವದ ಬಗ್ಗೆ ಅನಾವರಣ ಕೂಡ್ಲಿಗಿ:ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ವೈಭವವನ್ನು ಸಾರುತ್ತಿದ್ದ, ಐತಿಹಾಸಿಕ ಮಹತ್ವವುಳ್ಳ ವಸಂತೇಶ್ವರ ದೇವಾಲಯವು ಇಂದು ಸೂಕ್ತ ನಿರ್ವಹಣೆಯಿಲ್ಲದೆ ಅಕ್ಷರಶಃ ಅವಸಾನದ ಅಂಚಿನಲ್ಲಿದೆ. ಶತಮಾನಗಳ ಇತಿಹಾಸವನ್ನು ತನ್ನ ಮಡಿಲಲ್ಲಿ ಹೊತ್ತಿರುವ ಈ ದೇವಾಲಯವು, ಇದೀಗ ಕಲ್ಲು-ಮುಳ್ಳುಗಳ ಪಾಲಾಗಿ, ಪುರಾತತ್ವ ಇಲಾಖೆಯ ನಿರ್ಲಕ್ಷ್ಯದ ಸಂಕೇತವಾಗಿ ಮಾರ್ಪಟ್ಟಿದೆ. ಮರೆಯಾಗುತ್ತಿರುವ ಕೆತ್ತನೆಗಳ ವೈಭವ ವಿಜಯನಗರ ಕಾಲದ ವಿಶೇಷ ಶೈಲಿಯಲ್ಲಿ ನಿರ್ಮಿತವಾದ ಈ ದೇವಾಲಯದ ಕಂಬಗಳು, ಗೋಡೆಗಳ ಮೇಲಿನ ಸೂಕ್ಷ್ಮ ಕೆತ್ತನೆಗಳು ಮತ್ತು ಶಿಲ್ಪಕಲೆಗಳು ಪ್ರವಾಸಿಗರನ್ನು ಬೆರಗುಗೊಳಿಸುವಂತಿವೆ. ಆದರೆ, ಇಂದು ಅವು ಬಿಸಿಲು-ಮಳೆಗೆ ಸಿಲುಕಿ ಸವೆಯುತ್ತಿವೆ. ದೇವಾಲಯದ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಮೇಲ್ಛಾವಣಿಯು ಯಾವಾಗ ಕುಸಿದು ಬೀಳುತ್ತದೋ ಎಂಬ ಆತಂಕದಲ್ಲಿ ಸ್ಥಳೀಯರು ಇದ್ದಾರೆ. ದೇವಾಲಯದ ಆವರಣವು ಕಸ ಮತ್ತು ಗಿಡ ಕಂಟಿಗಳ ಪಾಲಾಗಿದ್ದು, ಪುರಾತನ ಸ್ಮಾರಕಕ್ಕೆ ಇರಬೇಕಾದ ಕನಿಷ್ಠ ಗೌರವವೂ ಇಲ್ಲಿ ಕಾಣುತ್ತಿಲ್ಲ. ತುರ್ತಾಗಿ ಬೇಕಿದೆ ಸಂರಕ್ಷಣೆ! ಸದ್ಯದ ಪರಿಸ್ಥಿತಿಯಲ್ಲಿ ದೇವಾಲಯದ ಕಟ್ಟಡವು ಅಸುರಕ್ಷಿತವಾಗಿದೆ. ತಜ್ಞರ ಪ್ರಕಾರ, ಕೂಡಲೇ ಇಲಾಖೆಯು ಮಧ್ಯಪ್ರವೇಶಿಸಿ, ದೇವಾಲಯದ ಬಿರುಕುಗಳನ್ನು ಮುಚ್ಚುವುದು, ಆವರಣವನ್ನು ಸ್ವಚ್ಛಗೊಳಿಸುವುದು ಮತ್ತು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡುವುದು ಅತ್ಯಗತ್ಯ. ಮುಂದಿನ ಪೀಳಿಗೆಗೆ ಈ ಐತಿಹಾಸಿಕ ಕುರುಹನ್ನು ಪುರಾತತ್ವ ಇಲಾಖೆಯು ದೇವಾಲಯವನ್ನು ತಮ್ಮ ಸುಪರ್ದಿಗೆ ಪಡೆದು, ತಕ್ಷಣವೇ ಜೀರ್ಣೋದ್ಧಾರ ಆರಂಭಿಸಬೇಕು. ದೇವಾಲಯದ ಸುತ್ತಮುತ್ತಲ ಪ್ರದೇಶವನ್ನು ಅಭಿವೃದ್ಧಿಪಡಿಸಿ, ಪ್ರವಾಸಿ ತಾಣವಾಗಿ ಗುರುತಿಸಬೇಕು. ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಶಾಶ್ವತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕು. ಇತಿಹಾಸದ ಸಾಕ್ಷಿಯಾಗಿರುವ ಈ ವಸಂತೇಶ್ವರ ದೇವಾಲಯವು ಕಣ್ಮರೆಯಾಗುವ ಮುನ್ನ, ಸಂಬಂಧಪಟ್ಟ ಇಲಾಖೆಯು ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳಬೇಕಿದೆ. ಇತಿಹಾಸ ಪ್ರಸಿದ್ಧ ದೇವಲಾಪುರ (ಗಜ್ಜಾಪುರದ ಉಪಗ್ರಾಮ) ಗ್ರಾಮದಲ್ಲಿರುವ 'ವಸಂತೇಶ್ವರ ದೇವಾಲಯ'ವು (ಸ್ಥಳೀಯವಾಗಿ ವಸಂತ ಮಲ್ಲಿಕಾರ್ಜುನ ಎಂದೂ ಕರೆಯಲ್ಪಡುವ ಮತ್ತು ) ವಿಜಯನಗರ ಸಾಮ್ರಾಜ್ಯದ ಶಿಲ್ಪಕಲೆ ಮತ್ತು ಧಾರ್ಮಿಕ ಇತಿಹಾಸದ ಉತ್ತುಂಗ ಸ್ಥಿತಿಗೆ ಕನ್ನಡಿ ಹಿಡಿಯುವಂತೆ ನಿಂತಿದೆ. ಕ್ರಿಸ್ತಶಕ 16ನೇ ಶತಮಾನದ ವಿಜಯನಗರದ ಸದಾಶಿವದೇವರಾಯನ ಕಾಲದ ಶಾಸನೋಕ್ತ ಹಿನ್ನೆಲೆ ಹೊಂದಿರುವ ವಾಸ್ತುಶಿಲ್ಪ ದೇಗುಲ. ವೈಭವದ ಇತಿಹಾಸ ಮತ್ತು ಹಿನ್ನೆಲೆ ದೇವಲಾಪುರವು ಇಂದು ಬೇಚರಾಕ್ (ಜನವಸತಿ ಇಲ್ಲದ) ಗ್ರಾಮವಾಗಿದ್ದರೂ, ವಿಜಯನಗರದ ಕಾಲದಲ್ಲಿ ಅತ್ಯಂತ ವೈಭವದಿಂದ ಕೂಡಿತ್ತು ಎಂಬುದಕ್ಕೆ ಇಲ್ಲಿ ಕಂಡುಬರುವ ಕೋಟೆ, ಬಾವಿ, ಮತ್ತು ಅವಶೇಷಗಳು , ದೇವಸ್ಥಾನ ಸುತ್ತಲೂ ಕೋಟೆಗಳು ರಕ್ಷಣೆ, ವೀಕ್ಷಣ ಗೋಪುರ ಈಗಲೂ ಸಹ ನೋಡಬಹುದು. ಕ್ರಿಸ್ತಶಕ 1552ರ ಸದಾಶಿವದೇವರಾಯನ ಆಳ್ವಿಕೆಯ ಕಾಲದ ಶಾಸನದಲ್ಲಿ ಈ ದೇವಸ್ಥಾನವನ್ನು 'ವಸಂತ ಮಲ್ಲಿಕಾರ್ಜುನ' ಎಂದು ಕರೆಯಲಾಗಿದ್ದರೆ, ಸ್ಥಳೀಯರು ಇದನ್ನು 'ವಸಂತೇಶ್ವರ ದೇವಾಲಯ'ಅಥವಾ ಕುರಿಹಿಕ್ಕಿ ಲಿಂಗೇಶ್ವರ ದೇವಾಲಯ ಎಂದು ಭಕ್ತಿಯಿಂದ ಆರಾಧಿಸುತ್ತಿದ್ದಾರೆ. ಉತ್ತರಕ್ಕೆ ಮುಖ ಮಾಡಿದೆ. ತ್ರಿಕೂಟಾಚಲ ಶೈಲಿಯ ವಿಶಿಷ್ಟ ವಾಸ್ತುಶಿಲ್ಪ ಇತಿಹಾಸ ಮತ್ತು ಪ್ರಾಚ್ಯವಸ್ತು ಸಂಶೋಧಕರ ಪ್ರಕಾರ, ಈ ದೇವಾಲಯವು ವಿಜಯನಗರ ಕಾಲದ ವಿಶಿಷ್ಟ ತ್ರಿಕೂಟಾಚಲ (ಮೂರು ಗರ್ಭಗೃಹಗಳನ್ನು ಹೊಂದಿರುವ) ಶೈಲಿಯಲ್ಲಿದೆ. ದೇವಾಲಯದ ಭವ್ಯ ರಚನೆಯು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ: ರಚನಾ ವಿನ್ಯಾಸ: ವಿಶಾಲವಾದ ಪ್ರಾಂಗಣದಲ್ಲಿ ತಲೆಯೆತ್ತಿ ನಿಂತಿರುವ ಈ ದೇವಾಲಯವು ಮೂರು ಗರ್ಭಗೃಹಗಳು, ಅಂತರಾಳ, ಅರ್ಧಮಂಟಪ, ಸಭಾಮಂಟಪ, ಮಹಾಮಂಟಪ, ಮುಖಮಂಟಪ ಮತ್ತು ವಿಸ್ತಾರವಾದ ದ್ವಾರಮಾರ್ಗಗಳನ್ನು ಒಳಗೊಂಡಿದೆ. ಗರ್ಭಗೃಹದ ವೈಶಿಷ್ಟ್ಯ ಗರ್ಭಗೃಹದಲ್ಲಿ ಹಸರುಬಣ್ಣದ ಅತ್ಯಂತ ನಯವಾದ ಕಲ್ಲಿನಿಂದ ಕೆತ್ತಲಾದ ಸುಂದರ ಲಿಂಗವಿದ್ದು, ಇದರ ಪೀಠ (ಇವೆ) ಅತ್ಯಂತ ಎತ್ತರವಾಗಿದೆ. ಲಿಂಗದ ಒಳ ಇಕ್ಕಲಿನಲ್ಲಿ ವಿಶಿಷ್ಟ ಕೆತ್ತನೆಗಳು ಗಮನ ಸೆಳೆಯುತ್ತವೆ. ಶಿಲ್ಪಕಲೆಯ ಸೌಂದರ್ಯ ಮತ್ತು ಶಿಖರ ವೈಭವ ದೇವಾಲಯದ ಪ್ರಾಕಾರ ಮತ್ತು ಪ್ರದಕ್ಷಿಣಾಪಥವು ಭಕ್ತರಿಗೆ ನೆಮ್ಮದಿ ನೀಡುವಂತಿದೆ. ದೇವಾಲಯದ ಮಧ್ಯದಲ್ಲಿ ನಾಲ್ಕು ಕಂಬಗಳಿದ್ದು, ಇವುಗಳ ಮೇಲೆ ಚೌಕಾಕಾರ, ಅಷ್ಟಕೋನಾಕೃತಿ ಹಾಗೂ ಸುಂದರವಾದ ಉಬ್ಬುಶಿಲ್ಪಗಳನ್ನು ಅತ್ಯಂತ ಆಕರ್ಷಕವಾಗಿ ಕೆತ್ತಲಾಗಿದೆ. ಸಭಾಮಂಟಪದ ಮಧ್ಯಭಾಗದಲ್ಲಿರುವ ರಂಗಶಿಲೆ ಮತ್ತು ಮುಖಮಂಟಪದಲ್ಲಿರುವ ಕಂಬಗಳ ಕೆತ್ತನೆಗಳು ವಿಜಯನಗರದ ಶಿಲ್ಪಕಲೆಯ ಪ್ರೌಢಿಮೆಯನ್ನು ಉದಾಹರಿಸುತ್ತವೆ. ದೇಗುಲದ ಮೇಲ್ಭಾಗದಲ್ಲಿ ಇಟ್ಟಿಗೆ ಮತ್ತು ಸುಣ್ಣದ ಗಾರೆಯಿಂದ ನಿರ್ಮಿತವಾದ ಭವ್ಯವಾದ ಮೂರು ಮೂರ್ತಿಗಳನ್ನೊಳಗೊಂಡ ಶಿಖರ (ಗೋಪುರ) ಇಂದಿಗೂ ಸುಸ್ಥಿತಿಯಲ್ಲಿದ್ದು, ದೂರದಿಂದಲೇ ಭಕ್ತರನ್ನು ಮತ್ತು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಇತಿಹಾಸ ಪ್ರೇಮಿಗಳ ಕಳಕಲೀ "ವಿಜಯನಗರದ ಇತಿಹಾಸ ಮತ್ತು ವಾಸ್ತುಶಿಲ್ಪ ಅಧ್ಯಯನಕ್ಕೆ ದೇವಲಾಪುರದ ವಸಂತೇಶ್ವರ ದೇವಾಲಯವು ಅತ್ಯಂತ ಪ್ರಮುಖ ಆಕರವಾಗಿದೆ. ದೇವಲಾಪುರ ದಾನದ ಸಂಪೂರ್ಣ ವಿವರ ಪತ್ತೆ! ಹಂಪಿ (ವಿಜಯನಗರ) ವಿಜಯನಗರದ ಸದಾಶಿವದೇವರ ಮುಖಮಂಟಪದ ಮುಂಭಾಗದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದ ಜಗತಿಯ ಮೇಲಿರುವ ಶಾಸನವು ವಿಜಯನಗರ ಸಾಮ್ರಾಜ್ಯದ ಕಾಲದ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಜಯನಗರ ಕಾಲದ ಐತಿಹಾಸಿಕ ಹಿನ್ನೆಲೆ! ರಾಜ ಸದಾಶಿವದೇವರಾಯನ ಆಳ್ವಿಕೆ ಮತ್ತು ಕಾಲದ ವಿಜಯನಗರದ ಅರಸರಾದ ಸದಾಶಿವದೇವ ಮಹಾರಾಯರು ರಾಜ್ಯಭಾರ ಮಾಡುತ್ತಿದ್ದ ಕಾಲಕ್ಕೆ ಸೇರಿದ್ದಾಗಿದೆ. ಇತಿಹಾಸದ ಹಿನ್ನಲೆ! ಕ್ರಿಸ್ತಶಕ 1552ರ ಜನವರಿ 25, ಸೋಮವಾರ. ವಿಜಯನಗರದ ಪ್ರಮುಖ ದಂಡನಾಯಕರಾದ ಕೃಷ್ಣಪ್ಪನಾಯಕರ ಕಾರ್ಯಕರ್ತರಾದ (ಏಜೆಂಟ್) ವೇಲೂರ ತಿಮ್ಮಪ್ಪನಾಯಕರ ಮಗ ರಾಮಪ್ಪನಾಯಕರು ಹಾಗೂ ಬಯ್ಯಪನಾಯಕರ ಮಗ ಕೃಷ್ಣಮ್ಮನಾಯಕರು ಸೇರಿ ಈ ಧರ್ಮದಾನವನ್ನು ನೀಡಿದ್ದಾರೆ. ದೇವಲಾಪುರದಲ್ಲಿ ನೆಲೆಸಿರುವ ವಸಂತ ಮಲ್ಲಿಕಾರ್ಜುನ ದೇವರಿಗೆ ನಿರಂತರವಾಗಿ ಸಂಗೀತ ಸೇವೆ ಸಲ್ಲಿಸುವ ಉದ್ದೇಶದಿಂದ ಈ ದಾನ ಮಾಡಲಾಗಿದೆ. ದೇವಸ್ಥಾನದಲ್ಲಿ ಎರಡು ನಾಗಸ್ವರ ಹಾಗೂ ಎರಡು ಡೋಲುನಗಾರಿಗಳನ್ನು ಬಾರಿಸುವ ಕಾಯಕದಲ್ಲಿ ನಿರತರಾಗಿದ್ದ ಕೋನಯ್ಯ ರಾವೂತರ ಮಗ ಪಿಟೀಲುಗಾರ,ವಾದಕ ಮೂಸಿಯ ರಾವೂತ ಎಂಬ ಕಲಾವಿದನಿಗೆ ಜೀವನೋಪಾಯಕ್ಕಾಗಿ ಮತ್ತು ದೇವರ ಕಾಯಕಕ್ಕಾಗಿ ಇಡೀ 'ಪನ್ನುಳ-ನುಂಕನಹಳ್ಳಿ' ಗ್ರಾಮವನ್ನೇ ದಾನವಾಗಿ ಬಿಡಲಾಗಿತ್ತು ಎಂಬ ಅಪರೂಪದ ಮಾಹಿತಿ ಶಾಸನದಿಂದ ತಿಳಿದುಬಂದಿದೆ. ಕೆತ್ತನೆಗಾರನಿಗೂ ಸಿಕ್ಕಿತು ಮಾನ್ಯ ಭೂಮಿ ಇಷ್ಟೇ ಅಲ್ಲದೆ, ಈ ಸುಂದರವಾದ ಐತಿಹಾಸಿಕ ಶಾಸನವನ್ನು ಕಲ್ಲಿನ ಮೇಲೆ ಅತ್ಯಂತ ನಿಖರವಾಗಿ ಕೆತ್ತಿದ ಅಕ್ಕಸಾಲಿಗ ಸಿರಿಯಣ್ಣನ ಮಗ ಸಿರಿಯಣ್ಣನಿಗೆ ಈ ಗ್ರಾಮದಲ್ಲಿ 'ಮಾನ್ಯದ ಭೂಮಿ' ಯನ್ನು ಉಡುಗೊರೆಯಾಗಿ ನೀಡಲಾಗಿತ್ತು ಎಂಬ ಕಲಾಭಿಮಾನದ ಉಲ್ಲೇಖವೂ ಇಲ್ಲಿದೆ. ಇತಿಹಾಸ ತಜ್ಞರ ದೃಷ್ಟಿಯಲ್ಲಿ ಇದರ ಮಹತ್ವ ವಿಜಯನಗರ ಕಾಲದಲ್ಲಿ ಕೇವಲ ಪೂಜೆ-ಪುನಸ್ಕಾರಗಳಿಗಷ್ಟೇ ಅಲ್ಲದೆ, ದೇವಸ್ಥಾನಗಳಲ್ಲಿ ಕಲೆ ಮತ್ತು ಸಂಗೀತ ಸೇವೆಗೆ (ನಾಗಸ್ವರ ಮತ್ತು ವಾದ್ಯ ಕಲಾವಿದರಿಗೆ) ಎಷ್ಟು ಉನ್ನತ ಗೌರವವಿತ್ತು ಮತ್ತು ಇಡೀ ಗ್ರಾಮಗಳನ್ನೇ ಅವರಿಗೆ ದಾನವಾಗಿ ನೀಡಲಾಗುತ್ತಿತ್ತು ಎಂಬುದಕ್ಕೆ ಈ ಶಾಸನವೇ ಪ್ರತ್ಯಕ್ಷ ಸಾಕ್ಷಿ. ಅಲ್ಲದೆ ಶಾಸನ ಕೆತ್ತಿದ ಶಿಲ್ಪಿಯನ್ನು ಗೌರವಿಸಿರುವುದು ಅಂದಿನ ಕಲಾ ಪ್ರೇಮವನ್ನು ಬಿಂಬಿಸುತ್ತದೆ." "ವಸಂತೇಶ್ವರ ದೇವಾಲಯವನ್ನು ಶಿಥಿಲತೆಯನ್ನು ಪರಿಗಣಿಸಿ, ಇಲಾಖೆಯು ಈ ತಾಣವನ್ನು ಪುರಾತತ್ವ ನಿಯಮಗಳಿಗನುಗುಣವಾಗಿ ಅಭಿವೃದ್ಧಿಪಡಿಸಲು ಮತ್ತು ಮರುಸ್ಥಾಪಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಇಲಾಖೆಯ ತಾಂತ್ರಿಕ ತಂಡವು ಶೀಘ್ರವೇ ದೇವಾಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಯಲಿದೆ" ಡಾ. ಆರ್ ಶೇಜೇಶ್ವರ ನಿರ್ದೇಶಕರು (ಪುರಾತತ್ವ) ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಹಂಪಿ
ದುಸ್ಥಿತಿಯಲ್ಲಿ ವಿಜಯನಗರ ಕಾಲದ ವಸಂತೇಶ್ವರ ದೇವಾಲಯ'ದೇವಾಲಯ! ಪುರತತ್ವ ಇಲಾಖೆ ಒಳಪಡಿಸಿ ಸಂರಕ್ಷಣೆ ನೀಡಿ! ದುಸ್ಥಿತಿಯಲ್ಲಿ ವಿಜಯನಗರ ಕಾಲದ ವಸಂತೇಶ್ವರ ದೇವಾಲಯ'ದೇವಾಲಯ! ಪುರತತ್ವ ಇಲಾಖೆ ಒಳಪಡಿಸಿ! ನಾಗಸ್ವರ, ವಾದಕ,ಡೋಲುನಗಾರಿ,ಯಿಂದ ದಿನಾಲೂ ಸಂಗೀತ ಸೇವೆ ದೇವಲಾಪುರದ ವಸಂತೇಶ್ವರ ದೇಗುಲದ ವಾಸ್ತುಶಿಲ್ಪ ವೈಭವ! ತಾಳಿಕೋಟೆ ಕದನಕ್ಕೂ ಮೊದಲು ನಿರ್ಮಾಣಗೊಂಡ ದೇವಾಲಯ! ಈ ಭಾಗದ ವಿಜಯನಗರ ಸಾಮ್ರಾಜ್ಯ ಇತಿಹಾಸ ಸಾರುವ ಜೀವಂತ ಸಾಕ್ಷಿಗಳಲ್ಲೊಂದು! ಅಂದಿನ ಕಾಲದ ಸಂಗೀತ ಮಹತ್ವದ ಬಗ್ಗೆ ಅನಾವರಣ ಕೂಡ್ಲಿಗಿ:ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ವೈಭವವನ್ನು ಸಾರುತ್ತಿದ್ದ, ಐತಿಹಾಸಿಕ ಮಹತ್ವವುಳ್ಳ ವಸಂತೇಶ್ವರ ದೇವಾಲಯವು ಇಂದು ಸೂಕ್ತ ನಿರ್ವಹಣೆಯಿಲ್ಲದೆ ಅಕ್ಷರಶಃ ಅವಸಾನದ ಅಂಚಿನಲ್ಲಿದೆ. ಶತಮಾನಗಳ ಇತಿಹಾಸವನ್ನು ತನ್ನ ಮಡಿಲಲ್ಲಿ ಹೊತ್ತಿರುವ ಈ ದೇವಾಲಯವು, ಇದೀಗ ಕಲ್ಲು-ಮುಳ್ಳುಗಳ ಪಾಲಾಗಿ, ಪುರಾತತ್ವ ಇಲಾಖೆಯ ನಿರ್ಲಕ್ಷ್ಯದ ಸಂಕೇತವಾಗಿ ಮಾರ್ಪಟ್ಟಿದೆ. ಮರೆಯಾಗುತ್ತಿರುವ ಕೆತ್ತನೆಗಳ ವೈಭವ ವಿಜಯನಗರ ಕಾಲದ ವಿಶೇಷ ಶೈಲಿಯಲ್ಲಿ ನಿರ್ಮಿತವಾದ ಈ ದೇವಾಲಯದ ಕಂಬಗಳು, ಗೋಡೆಗಳ ಮೇಲಿನ ಸೂಕ್ಷ್ಮ ಕೆತ್ತನೆಗಳು ಮತ್ತು ಶಿಲ್ಪಕಲೆಗಳು ಪ್ರವಾಸಿಗರನ್ನು ಬೆರಗುಗೊಳಿಸುವಂತಿವೆ. ಆದರೆ, ಇಂದು ಅವು ಬಿಸಿಲು-ಮಳೆಗೆ ಸಿಲುಕಿ ಸವೆಯುತ್ತಿವೆ. ದೇವಾಲಯದ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಮೇಲ್ಛಾವಣಿಯು ಯಾವಾಗ ಕುಸಿದು ಬೀಳುತ್ತದೋ ಎಂಬ ಆತಂಕದಲ್ಲಿ ಸ್ಥಳೀಯರು ಇದ್ದಾರೆ. ದೇವಾಲಯದ ಆವರಣವು ಕಸ ಮತ್ತು ಗಿಡ ಕಂಟಿಗಳ ಪಾಲಾಗಿದ್ದು, ಪುರಾತನ ಸ್ಮಾರಕಕ್ಕೆ ಇರಬೇಕಾದ ಕನಿಷ್ಠ ಗೌರವವೂ ಇಲ್ಲಿ ಕಾಣುತ್ತಿಲ್ಲ. ತುರ್ತಾಗಿ ಬೇಕಿದೆ ಸಂರಕ್ಷಣೆ! ಸದ್ಯದ ಪರಿಸ್ಥಿತಿಯಲ್ಲಿ ದೇವಾಲಯದ ಕಟ್ಟಡವು ಅಸುರಕ್ಷಿತವಾಗಿದೆ. ತಜ್ಞರ ಪ್ರಕಾರ, ಕೂಡಲೇ ಇಲಾಖೆಯು ಮಧ್ಯಪ್ರವೇಶಿಸಿ, ದೇವಾಲಯದ ಬಿರುಕುಗಳನ್ನು ಮುಚ್ಚುವುದು, ಆವರಣವನ್ನು ಸ್ವಚ್ಛಗೊಳಿಸುವುದು ಮತ್ತು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡುವುದು ಅತ್ಯಗತ್ಯ. ಮುಂದಿನ ಪೀಳಿಗೆಗೆ ಈ ಐತಿಹಾಸಿಕ ಕುರುಹನ್ನು ಪುರಾತತ್ವ
ಇಲಾಖೆಯು ದೇವಾಲಯವನ್ನು ತಮ್ಮ ಸುಪರ್ದಿಗೆ ಪಡೆದು, ತಕ್ಷಣವೇ ಜೀರ್ಣೋದ್ಧಾರ ಆರಂಭಿಸಬೇಕು. ದೇವಾಲಯದ ಸುತ್ತಮುತ್ತಲ ಪ್ರದೇಶವನ್ನು ಅಭಿವೃದ್ಧಿಪಡಿಸಿ, ಪ್ರವಾಸಿ ತಾಣವಾಗಿ ಗುರುತಿಸಬೇಕು. ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಶಾಶ್ವತ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಬೇಕು. ಇತಿಹಾಸದ ಸಾಕ್ಷಿಯಾಗಿರುವ ಈ ವಸಂತೇಶ್ವರ ದೇವಾಲಯವು ಕಣ್ಮರೆಯಾಗುವ ಮುನ್ನ, ಸಂಬಂಧಪಟ್ಟ ಇಲಾಖೆಯು ಎಚ್ಚೆತ್ತುಕೊಂಡು ತುರ್ತು ಕ್ರಮ ಕೈಗೊಳ್ಳಬೇಕಿದೆ. ಇತಿಹಾಸ ಪ್ರಸಿದ್ಧ ದೇವಲಾಪುರ (ಗಜ್ಜಾಪುರದ ಉಪಗ್ರಾಮ) ಗ್ರಾಮದಲ್ಲಿರುವ 'ವಸಂತೇಶ್ವರ ದೇವಾಲಯ'ವು (ಸ್ಥಳೀಯವಾಗಿ ವಸಂತ ಮಲ್ಲಿಕಾರ್ಜುನ ಎಂದೂ ಕರೆಯಲ್ಪಡುವ ಮತ್ತು ) ವಿಜಯನಗರ ಸಾಮ್ರಾಜ್ಯದ ಶಿಲ್ಪಕಲೆ ಮತ್ತು ಧಾರ್ಮಿಕ ಇತಿಹಾಸದ ಉತ್ತುಂಗ ಸ್ಥಿತಿಗೆ ಕನ್ನಡಿ ಹಿಡಿಯುವಂತೆ ನಿಂತಿದೆ. ಕ್ರಿಸ್ತಶಕ 16ನೇ ಶತಮಾನದ ವಿಜಯನಗರದ ಸದಾಶಿವದೇವರಾಯನ ಕಾಲದ ಶಾಸನೋಕ್ತ ಹಿನ್ನೆಲೆ ಹೊಂದಿರುವ ವಾಸ್ತುಶಿಲ್ಪ ದೇಗುಲ. ವೈಭವದ ಇತಿಹಾಸ ಮತ್ತು ಹಿನ್ನೆಲೆ ದೇವಲಾಪುರವು ಇಂದು ಬೇಚರಾಕ್ (ಜನವಸತಿ ಇಲ್ಲದ) ಗ್ರಾಮವಾಗಿದ್ದರೂ, ವಿಜಯನಗರದ ಕಾಲದಲ್ಲಿ ಅತ್ಯಂತ ವೈಭವದಿಂದ ಕೂಡಿತ್ತು ಎಂಬುದಕ್ಕೆ ಇಲ್ಲಿ ಕಂಡುಬರುವ ಕೋಟೆ, ಬಾವಿ, ಮತ್ತು ಅವಶೇಷಗಳು , ದೇವಸ್ಥಾನ ಸುತ್ತಲೂ ಕೋಟೆಗಳು ರಕ್ಷಣೆ, ವೀಕ್ಷಣ ಗೋಪುರ ಈಗಲೂ ಸಹ ನೋಡಬಹುದು. ಕ್ರಿಸ್ತಶಕ 1552ರ ಸದಾಶಿವದೇವರಾಯನ ಆಳ್ವಿಕೆಯ ಕಾಲದ ಶಾಸನದಲ್ಲಿ ಈ ದೇವಸ್ಥಾನವನ್ನು 'ವಸಂತ ಮಲ್ಲಿಕಾರ್ಜುನ' ಎಂದು ಕರೆಯಲಾಗಿದ್ದರೆ, ಸ್ಥಳೀಯರು ಇದನ್ನು 'ವಸಂತೇಶ್ವರ ದೇವಾಲಯ'ಅಥವಾ ಕುರಿಹಿಕ್ಕಿ ಲಿಂಗೇಶ್ವರ ದೇವಾಲಯ ಎಂದು ಭಕ್ತಿಯಿಂದ ಆರಾಧಿಸುತ್ತಿದ್ದಾರೆ. ಉತ್ತರಕ್ಕೆ ಮುಖ ಮಾಡಿದೆ. ತ್ರಿಕೂಟಾಚಲ ಶೈಲಿಯ ವಿಶಿಷ್ಟ ವಾಸ್ತುಶಿಲ್ಪ ಇತಿಹಾಸ ಮತ್ತು ಪ್ರಾಚ್ಯವಸ್ತು ಸಂಶೋಧಕರ ಪ್ರಕಾರ, ಈ ದೇವಾಲಯವು ವಿಜಯನಗರ ಕಾಲದ ವಿಶಿಷ್ಟ ತ್ರಿಕೂಟಾಚಲ (ಮೂರು ಗರ್ಭಗೃಹಗಳನ್ನು ಹೊಂದಿರುವ) ಶೈಲಿಯಲ್ಲಿದೆ. ದೇವಾಲಯದ ಭವ್ಯ ರಚನೆಯು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ: ರಚನಾ ವಿನ್ಯಾಸ: ವಿಶಾಲವಾದ ಪ್ರಾಂಗಣದಲ್ಲಿ ತಲೆಯೆತ್ತಿ ನಿಂತಿರುವ ಈ ದೇವಾಲಯವು ಮೂರು ಗರ್ಭಗೃಹಗಳು,
ಅಂತರಾಳ, ಅರ್ಧಮಂಟಪ, ಸಭಾಮಂಟಪ, ಮಹಾಮಂಟಪ, ಮುಖಮಂಟಪ ಮತ್ತು ವಿಸ್ತಾರವಾದ ದ್ವಾರಮಾರ್ಗಗಳನ್ನು ಒಳಗೊಂಡಿದೆ. ಗರ್ಭಗೃಹದ ವೈಶಿಷ್ಟ್ಯ ಗರ್ಭಗೃಹದಲ್ಲಿ ಹಸರುಬಣ್ಣದ ಅತ್ಯಂತ ನಯವಾದ ಕಲ್ಲಿನಿಂದ ಕೆತ್ತಲಾದ ಸುಂದರ ಲಿಂಗವಿದ್ದು, ಇದರ ಪೀಠ (ಇವೆ) ಅತ್ಯಂತ ಎತ್ತರವಾಗಿದೆ. ಲಿಂಗದ ಒಳ ಇಕ್ಕಲಿನಲ್ಲಿ ವಿಶಿಷ್ಟ ಕೆತ್ತನೆಗಳು ಗಮನ ಸೆಳೆಯುತ್ತವೆ. ಶಿಲ್ಪಕಲೆಯ ಸೌಂದರ್ಯ ಮತ್ತು ಶಿಖರ ವೈಭವ ದೇವಾಲಯದ ಪ್ರಾಕಾರ ಮತ್ತು ಪ್ರದಕ್ಷಿಣಾಪಥವು ಭಕ್ತರಿಗೆ ನೆಮ್ಮದಿ ನೀಡುವಂತಿದೆ. ದೇವಾಲಯದ ಮಧ್ಯದಲ್ಲಿ ನಾಲ್ಕು ಕಂಬಗಳಿದ್ದು, ಇವುಗಳ ಮೇಲೆ ಚೌಕಾಕಾರ, ಅಷ್ಟಕೋನಾಕೃತಿ ಹಾಗೂ ಸುಂದರವಾದ ಉಬ್ಬುಶಿಲ್ಪಗಳನ್ನು ಅತ್ಯಂತ ಆಕರ್ಷಕವಾಗಿ ಕೆತ್ತಲಾಗಿದೆ. ಸಭಾಮಂಟಪದ ಮಧ್ಯಭಾಗದಲ್ಲಿರುವ ರಂಗಶಿಲೆ ಮತ್ತು ಮುಖಮಂಟಪದಲ್ಲಿರುವ ಕಂಬಗಳ ಕೆತ್ತನೆಗಳು ವಿಜಯನಗರದ ಶಿಲ್ಪಕಲೆಯ ಪ್ರೌಢಿಮೆಯನ್ನು ಉದಾಹರಿಸುತ್ತವೆ. ದೇಗುಲದ ಮೇಲ್ಭಾಗದಲ್ಲಿ ಇಟ್ಟಿಗೆ ಮತ್ತು ಸುಣ್ಣದ ಗಾರೆಯಿಂದ ನಿರ್ಮಿತವಾದ ಭವ್ಯವಾದ ಮೂರು ಮೂರ್ತಿಗಳನ್ನೊಳಗೊಂಡ ಶಿಖರ (ಗೋಪುರ) ಇಂದಿಗೂ ಸುಸ್ಥಿತಿಯಲ್ಲಿದ್ದು, ದೂರದಿಂದಲೇ ಭಕ್ತರನ್ನು ಮತ್ತು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಇತಿಹಾಸ ಪ್ರೇಮಿಗಳ ಕಳಕಲೀ "ವಿಜಯನಗರದ ಇತಿಹಾಸ ಮತ್ತು ವಾಸ್ತುಶಿಲ್ಪ ಅಧ್ಯಯನಕ್ಕೆ ದೇವಲಾಪುರದ ವಸಂತೇಶ್ವರ ದೇವಾಲಯವು ಅತ್ಯಂತ ಪ್ರಮುಖ ಆಕರವಾಗಿದೆ. ದೇವಲಾಪುರ ದಾನದ ಸಂಪೂರ್ಣ ವಿವರ ಪತ್ತೆ! ಹಂಪಿ (ವಿಜಯನಗರ) ವಿಜಯನಗರದ ಸದಾಶಿವದೇವರ ಮುಖಮಂಟಪದ ಮುಂಭಾಗದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದ ಜಗತಿಯ ಮೇಲಿರುವ ಶಾಸನವು ವಿಜಯನಗರ ಸಾಮ್ರಾಜ್ಯದ ಕಾಲದ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಜಯನಗರ ಕಾಲದ ಐತಿಹಾಸಿಕ ಹಿನ್ನೆಲೆ! ರಾಜ ಸದಾಶಿವದೇವರಾಯನ ಆಳ್ವಿಕೆ ಮತ್ತು ಕಾಲದ ವಿಜಯನಗರದ ಅರಸರಾದ ಸದಾಶಿವದೇವ ಮಹಾರಾಯರು ರಾಜ್ಯಭಾರ ಮಾಡುತ್ತಿದ್ದ ಕಾಲಕ್ಕೆ ಸೇರಿದ್ದಾಗಿದೆ. ಇತಿಹಾಸದ ಹಿನ್ನಲೆ! ಕ್ರಿಸ್ತಶಕ 1552ರ ಜನವರಿ 25, ಸೋಮವಾರ. ವಿಜಯನಗರದ ಪ್ರಮುಖ ದಂಡನಾಯಕರಾದ ಕೃಷ್ಣಪ್ಪನಾಯಕರ ಕಾರ್ಯಕರ್ತರಾದ (ಏಜೆಂಟ್) ವೇಲೂರ ತಿಮ್ಮಪ್ಪನಾಯಕರ ಮಗ ರಾಮಪ್ಪನಾಯಕರು ಹಾಗೂ ಬಯ್ಯಪನಾಯಕರ ಮಗ ಕೃಷ್ಣಮ್ಮನಾಯಕರು ಸೇರಿ ಈ ಧರ್ಮದಾನವನ್ನು
ನೀಡಿದ್ದಾರೆ. ದೇವಲಾಪುರದಲ್ಲಿ ನೆಲೆಸಿರುವ ವಸಂತ ಮಲ್ಲಿಕಾರ್ಜುನ ದೇವರಿಗೆ ನಿರಂತರವಾಗಿ ಸಂಗೀತ ಸೇವೆ ಸಲ್ಲಿಸುವ ಉದ್ದೇಶದಿಂದ ಈ ದಾನ ಮಾಡಲಾಗಿದೆ. ದೇವಸ್ಥಾನದಲ್ಲಿ ಎರಡು ನಾಗಸ್ವರ ಹಾಗೂ ಎರಡು ಡೋಲುನಗಾರಿಗಳನ್ನು ಬಾರಿಸುವ ಕಾಯಕದಲ್ಲಿ ನಿರತರಾಗಿದ್ದ ಕೋನಯ್ಯ ರಾವೂತರ ಮಗ ಪಿಟೀಲುಗಾರ,ವಾದಕ ಮೂಸಿಯ ರಾವೂತ ಎಂಬ ಕಲಾವಿದನಿಗೆ ಜೀವನೋಪಾಯಕ್ಕಾಗಿ ಮತ್ತು ದೇವರ ಕಾಯಕಕ್ಕಾಗಿ ಇಡೀ 'ಪನ್ನುಳ-ನುಂಕನಹಳ್ಳಿ' ಗ್ರಾಮವನ್ನೇ ದಾನವಾಗಿ ಬಿಡಲಾಗಿತ್ತು ಎಂಬ ಅಪರೂಪದ ಮಾಹಿತಿ ಶಾಸನದಿಂದ ತಿಳಿದುಬಂದಿದೆ. ಕೆತ್ತನೆಗಾರನಿಗೂ ಸಿಕ್ಕಿತು ಮಾನ್ಯ ಭೂಮಿ ಇಷ್ಟೇ ಅಲ್ಲದೆ, ಈ ಸುಂದರವಾದ ಐತಿಹಾಸಿಕ ಶಾಸನವನ್ನು ಕಲ್ಲಿನ ಮೇಲೆ ಅತ್ಯಂತ ನಿಖರವಾಗಿ ಕೆತ್ತಿದ ಅಕ್ಕಸಾಲಿಗ ಸಿರಿಯಣ್ಣನ ಮಗ ಸಿರಿಯಣ್ಣನಿಗೆ ಈ ಗ್ರಾಮದಲ್ಲಿ 'ಮಾನ್ಯದ ಭೂಮಿ' ಯನ್ನು ಉಡುಗೊರೆಯಾಗಿ ನೀಡಲಾಗಿತ್ತು ಎಂಬ ಕಲಾಭಿಮಾನದ ಉಲ್ಲೇಖವೂ ಇಲ್ಲಿದೆ. ಇತಿಹಾಸ ತಜ್ಞರ ದೃಷ್ಟಿಯಲ್ಲಿ ಇದರ ಮಹತ್ವ ವಿಜಯನಗರ ಕಾಲದಲ್ಲಿ ಕೇವಲ ಪೂಜೆ-ಪುನಸ್ಕಾರಗಳಿಗಷ್ಟೇ ಅಲ್ಲದೆ, ದೇವಸ್ಥಾನಗಳಲ್ಲಿ ಕಲೆ ಮತ್ತು ಸಂಗೀತ ಸೇವೆಗೆ (ನಾಗಸ್ವರ ಮತ್ತು ವಾದ್ಯ ಕಲಾವಿದರಿಗೆ) ಎಷ್ಟು ಉನ್ನತ ಗೌರವವಿತ್ತು ಮತ್ತು ಇಡೀ ಗ್ರಾಮಗಳನ್ನೇ ಅವರಿಗೆ ದಾನವಾಗಿ ನೀಡಲಾಗುತ್ತಿತ್ತು ಎಂಬುದಕ್ಕೆ ಈ ಶಾಸನವೇ ಪ್ರತ್ಯಕ್ಷ ಸಾಕ್ಷಿ. ಅಲ್ಲದೆ ಶಾಸನ ಕೆತ್ತಿದ ಶಿಲ್ಪಿಯನ್ನು ಗೌರವಿಸಿರುವುದು ಅಂದಿನ ಕಲಾ ಪ್ರೇಮವನ್ನು ಬಿಂಬಿಸುತ್ತದೆ." "ವಸಂತೇಶ್ವರ ದೇವಾಲಯವನ್ನು ಶಿಥಿಲತೆಯನ್ನು ಪರಿಗಣಿಸಿ, ಇಲಾಖೆಯು ಈ ತಾಣವನ್ನು ಪುರಾತತ್ವ ನಿಯಮಗಳಿಗನುಗುಣವಾಗಿ ಅಭಿವೃದ್ಧಿಪಡಿಸಲು ಮತ್ತು ಮರುಸ್ಥಾಪಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಇಲಾಖೆಯ ತಾಂತ್ರಿಕ ತಂಡವು ಶೀಘ್ರವೇ ದೇವಾಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಯಲಿದೆ" ಡಾ. ಆರ್ ಶೇಜೇಶ್ವರ ನಿರ್ದೇಶಕರು (ಪುರಾತತ್ವ) ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಹಂಪಿ
- ಚಿಕ್ಕಜೋಗಿಹಳ್ಳಿ : ಮೂರು ವರೆ ದಶಕಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ RNK ನಿಜಲಿಂಗಪ್ಪ ರವರಿಗೆ , ಸಂಘಟನೆಗಳಿಂದ ಗೌರವ ಸನ್ಮಾನ - ಬೀಳ್ಕೊಡುಗೆ_ವಿಜಯನಗರ ಜಿಲ್ಲೆ ಕೂಡ್ಲಿಗಿ *ಚಿಕ್ಕಜೋಗಿಹಳ್ಳಿ : ಮೂರು ವರೆ ದಶಕಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತರಾದ RNK ನಿಜಲಿಂಗಪ್ಪ ರವರಿಗೆ , ಸಂಘಟನೆಗಳಿಂದ ಗೌರವ ಸನ್ಮಾನ - ಬೀಳ್ಕೊಡುಗೆ*_ವಿಜಯನಗರ ಜಿಲ್ಲೆ ಕೂಡ್ಲಿಗಿ : ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ಜುಲೈ 31ರಂದು , ಉಪ ಆರೋಗ್ಯಕೇಂದ್ರದಲ್ಲಿ ಡಿ ದರ್ಜೆ ನೌಕರರಾದ RNK ನಿಜಲಿಂಗಪ್ಪರವರಿಗೆ. ವಯೋ ನಿವೃತ್ತಿ ಹೊಂದಿದ RNK ನಿಜಲಿಂಗಪ್ಪರವರನ್ನು , ಆರೋಗ್ಯ ಸಿಬ್ಬಂದಿ ಹಾಗೂ ಡಾ ॥ ವಿಷ್ಣು ಸೇನಾ ಸಮಿತಿ ಸೇರಿದಂತೆ. ವಿವಿದ ಸಂಘಟನೆಗಳ ಪದಾಧಿಕಾರಿಗಳು , ಅವರನ್ನು ಸನ್ಮಾನಿಸಿ ಗೌರವ ಪೂರ್ವಕವಾಗಿ ಬಿಳ್ಕೊಟ್ಟರು. ಮೂಲತಃ ಕೊಟ್ಟೂರು ರಾಂಪುರ ಗ್ರಾಮದವರಾದ , ನಿಜಲಿಂಗಪ್ಪರವರು. ಕಳೆದ ಮೂರು ದಶಕಗಳ ಹಿಂದೆಯೇ , ಬಳ್ಳಾರಿಯ ರೇಷ್ಮೆ ಇಲಾಖೆಯಲ್ಲಿ. ಮಾಸಿಕ ಭತ್ಯೆ ಹೊರಗುತ್ತಿಗೆ ಆಧಾರದಂತೆ , ಹತ್ತು ವರ್ಷಗಳ ಕಾಲ ಡಿ ದರ್ಜೆ ನೌಕರರಾಗಿ ಕರ್ಥವ್ಯೆ ನಿರ್ವಹಿಸಿದ್ದರು. ತದನಂತರ ಆರೊಗ್ಯ ಇಲಾಖೆಯಲ್ಲಿ ಕೆಲ ವರ್ಷಗಳ ಕಾಲ , ಹೊರಗುತ್ತಿಗೆ ಡಿ ದರ್ಜೆ ನೌಕರಾಗಿ ಕರ್ಥವ್ಯ ನಿರ್ವಹಿಸಿದರು. ನಂತರ ವಷ್ಠೆ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ , ಖಾಯಂ ನೌಕರರಾಗಿ ಗುರುತಿಸಿಕೊಂಡು ಮೂರುವರೆ ದಶಕಗಳ ಕಾಲ ಡಿ ದರ್ಜೆ ನೌಕರರಾರಿ ಕರ್ಥವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ್ದಾರೆ. ನಿಜಲಿಂಪ್ಪರವರು ಚಿಕ್ಕಜೋಗಳ್ಳಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ , 1998 ರಿಂದ ಸೇವೆ ಆರಂಭಿಸಿ ಜುಲೈ 31 2026 ರವರೆಗೆ. ಅಂದರೆ ಸತತ 34 ವರ್ಷಗಳ ಕಾಲ , ಚಿಕ್ಕಜೋಗಿಹಳ್ಳಿ ಉಪ ಆರೋಗ್ಯಕೇಂದ್ರದಲ್ಲಿ ಸೇವೆ ಸಲ್ಪಿಸಿದ್ದಾರೆ. 31 7 2026ರಂದು , ಅವರು ವಯೋ ನಿವೃತ್ತಿ ಹೊಂದಿರುತ್ತಾರೆ. ಅವರ ಸಾರ್ಥಕ ಸೇವೆ ಹಾಗೂ ಸನ್ನಡತೆ ಮೆಚ್ಚಿದ , ಆರೋಗ್ಯ ಇಲಾಖಾಧಿಕಾರಿಗಳು ಸಿಬ್ಬಂದಿಯವರು. ಮತ್ತು ಡಾ ॥ ವಿಷ್ಣು ಸೇನಾ ಸಮಿತಿ ಸೇರಿದಂತೆ , ವಿವಿದ ಸಂಘಟನೆಗಳ ಪದಾಧಿಕಾರಿಗಳು. ನಿಜಲಿಂಗಪ್ಪರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಿ , ಅಭಿಮಾನದಿಂದ ಹಾರೈಸಿ ಸರಳ ಬೀಳ್ಕೊಡುಗೆ ಸಮಾರಂಭದ ಮೂಲಕ ಬೀಳ್ಕೊಟ್ಟಿದ್ದಾರೆ. ಡಾ ॥ ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ಮಹಮದ್ ಸಾಧಿಕ್ ರವರು ಮಾತನಾಡಿ , ನಿಜಲಿಂಗಪ್ಪರವರು ಸಜ್ಜನ ಪ್ರಾಮಾಣಿಕ ನೌಕರರಾಗಿದ್ದರು. ಅವರು ಕಿಂಚಿತ್ತು ಯಾವುದೇ ದೋಷರೋಪಗಳಿಲ್ಲದೆ , ನಿಷ್ಕಳಂಕದಿಂದ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದು. ನಿಜಲಿಂಗಪ್ಪರವರ ಸಾರ್ಥಕ ಸೇವೆಗಾಗಿ , ಅವರನ್ನು ಅವರ ಮಡದಿಯೊಡಗೂಡಿ ತಾವು ಗೌರವಿಸಿ ಸನ್ಮಾನಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಅವರಿಗೆ ಮುಂದಿನ ಆರೋಗ್ಯ ಆಯಸ್ಸು ಸುಖಮಯವಾಗಿರಲೆಂದು , ತಾವು ದೇವರಲ್ಲಿ ಕೋರುವುದಾಗಿ ಅವರು ತಿಳಿಸಿದ್ದಾರೆ. ವಿಷ್ಣು ಸೇನಾ ಸಮಿತಿ ಮುಖಂಡರಾದ ಜನನಾಯಕ ಕುರಿಹಟ್ಟಿ ಓಬಣ್ಣ , ಮಲಿಯಪ್ಪ , ರಾಜು ಸೇರಿದಂತೆ. ವಿವಿದ ಸಂಘಟನೆಗಳ ಪದಾಧಿಕಾರಿಗಳು ಸದಸ್ಯರು. ಮತ್ತು ಆರೊಗ್ಯ ಇಲಾಖಾಧಿಕಾರಿಗಳು ಸಿಬ್ಬಂದಿಯವರು ಉಪಸ್ಥಿತರಿದ್ದು. ನಿಜಲಿಂಗಪ್ಪರವರಿಗೆ ನಿವೃತ್ತಿ ಜೀವನ , ಸುಖಮಯವಾಗಿರಲೆಂದು ಶುಭ ಹಾರೈಸಿದ್ದಾರೆ. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*3
- ರೈತರ ಹಕ್ಕಿಗಾಗಿ ನಡೆಯುತ್ತಿರುವ ಬೃಹತ್ ಪ್ರತಿಭಟನಾ ಬ್ಯಾಲಿಗೆ ಅಭೂತಪೂರ್ವ ಜನಬೆಂಬಲ ಸಾವಿರಾರು ರೈತರು, ವಿವಿಧ ರೈತಪರ ಸಂಘಟನೆಗಳ ಮುಖಂಡರು, ಸಾರ್ವಜನಿಕರು ಹಾಗೂ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಿನಿಂದ ಭಾಗವಹಿಸಿ ರೈತರ ನ್ಯಾಯಸಮ್ಮತ ನೀರಿನ ಹಕ್ಕಿಗಾಗಿ ಧ್ವನಿಯಾಗಿದ್ದಾರೆ.1
- ಗುರು ಕನಕ ವಿದ್ಯಾ ಕೇಂದ್ರದಲ್ಲಿ ಗುರು ಪೂರ್ಣಿಮೆ: ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಕೂಡ್ಲಿಗಿ: ತಾಲೂಕಿನ ತಾಯಕನಹಳ್ಳಿ ಶ್ರೀ ಗುರು ಕನಕ ವಿದ್ಯಾ ಕೇಂದ್ರದಲ್ಲಿ ಬುಧವಾರ ಗುರು ಪೂರ್ಣಿಮೆ ಪ್ರಯುಕ್ತ ಅಕ್ಷರಭ್ಯಾಸೋತ್ಸವ ಕಾರ್ಯಕ್ರಮದ ಅಂಗವಾಗಿ ಎಲ್.ಕೆ ಜಿ ಮಕ್ಕಳಿಗೆ ಸಾಮೂಹಿಕವಾಗಿ ಅಕ್ಷರಭ್ಯಾಸ ಆರಂಭೋತ್ಸವವನ್ನು ಪಾಲಕ ಪೋಷಕರು ಅದ್ದೂರಿಯಾಗಿ ಭಾಗವಹಿಸಿ ತಮ್ಮ ಮಕ್ಕಳಿಗೆ ಗುರುಗಳ ಸಮ್ಮುಖದಲ್ಲಿ ವೇದೋಕ್ತವಾಗಿ ಅಕ್ಷರ ಅಭ್ಯಾಸವನ್ನು ಮಾಡಿಸಿ ಧನ್ಯತಾಭಾವವನ್ನು ತಳಿದರು. 40 ಕ್ಕೂ ಹೆಚ್ಚು ಮಕ್ಕಳು ಪೋಷಕರ ಜೊತೆಗೂಡಿ ಅಕ್ಷರಾಭ್ಯಾಸ ಮಾಡಿದರು. ಪೋಷಕರು ಕೂಡ ಗುರುಕುಲ ಪದ್ಧತಿಯ ಅಕ್ಷರಾಭ್ಯಾಸ ಮಾಡಿಸುವ ಕಾರ್ಯಕ್ರಮದಿಂದ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿಗಳು ಬಿ.ಟಿ. ಮಂಜಣ್ಣ ಮಾತನಾಡಿ, ಶಿಕ್ಷಣ ಮತ್ತು ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಮಕ್ಕಳಿಗೆ ಮನೆಯ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಮಕ್ಕಳಿಗೆ ಮನೆಯಿಂದಲೇ ಉತ್ತಮ ಸಂಸ್ಕಾರ ನೀಡಿ. ಅಮೃತ ಹಸ್ತದಿಂದ ಗುರುಗಳ ಮಾರ್ಗದರ್ಶನದಿಂದ ಗುರುಪೂರ್ಣಿಮೆಯ ದಿನ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸುವುದು ಸಂಪ್ರದಾಯವಾಗಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗಲೆಂಬ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಲೆಂಬ ಸದುದ್ದೇಶದಿಂದ ಸಂಸ್ಥೆ ವತಿಯಿಂದ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ಪ್ರಯೋಜನ ಪಡೆಯಬೇಕು. ಋಷಿಮುನಿಗಳ ಕಾಲದಲ್ಲಿ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡಿಸಿ ಸಮಾಜದ ಸತ್ಪಜೆಗಳನ್ನಾಗಿ ರೂಪಿಸುತ್ತಿದ್ದರು. ಅದೇ ಮಾದರಿಯಲ್ಲಿ ಮಕ್ಕಳಿಗೆ ಸಂಸ್ಕಾರ, ಮೌಲ್ಯಗಳನ್ನು ಕಲಿಸಿ ಸನ್ಮಾರ್ಗದತ್ತ ನಡೆಯುವಂತೆ ಪ್ರೇರೇಪಿಸುವ ಜೊತೆಗೆ ಗುಣಮಟ್ಟದ ಸಂಸ್ಕಾರ ಪೋಷಕರು ಮಹತ್ತರ ಜವಾಬ್ದಾರಿಯಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಬಳಕೆ ಜಾಸ್ತಿಯಾಗಿದ್ದು, ಇದನ್ನು ತಡೆಯಬೇಕು. ಮೊಬೈಲ್ ಸದ್ಬಳಕೆ ಎಷ್ಟು ಉಪಯುಕ್ತವೋ ಅಷ್ಟೇ ದುರ್ಬಳಕೆ ಅವಕಾಶಗಳು ಇದರಲ್ಲಿ ಸಾಕಷ್ಟು ಅಡಗಿದೆ. ಹೀಗಿರುವಾಗ ಮಕ್ಕಳಿಗೆ ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಪೋಷಕರು ಮೊಬೈಲ್ ಕೊಡಿಸುವುದು ತರವಲ್ಲ. ಮೊಬೈಲನ್ನು ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡುವುದು ಸರಿಯಿಲ್ಲ, ಅದರ ಅತಿಯಾದ ಬಳಕೆಯಿಂದ ತಮ್ಮ ವಿದ್ಯಾರ್ಥಿ ಜೀವನ ಹಾಳಾಗುತ್ತದೆ ಎಂಬ ಪರಿಜ್ಞಾನ ಮಕ್ಕಳಲ್ಲಿ ಬೆಳೆಯುವ ವಯಸ್ಸಿನವರೆಗೂ ಅವರಿಗೆ ಮೊಬೈಲ್ ಕೊಡಿಸುವುದು ಸೂಕ್ತವಲ್ಲ. ಇದರಿಂದ ಅವರ ಬುದ್ಧಿಶಕ್ತಿ ಬೆಳವಣಿಗೆ ಕುಂಠಿತಗೊಳ್ಳಲಿದೆ ಎಂದರು. ಈ ವೇಳೆ ಸುನಿತಾ ಗುರುರಾಜ್ ಮುಖ್ಯ ಶಿಕ್ಷಕಿ ಪ್ರಾಸ್ತಾವಿಕವಾಗಿ ಮಾತನಾಡಿ ಗು-ಎಂದರೆ ಅಂಧಕಾರ ರ-ಎಂದರೆ ಕಳೆಯುವ ಅಜ್ಞಾನದಿಂದ ಜ್ಞಾನದ ಕಡೆಗೆ ಕೊಂಡೊಯ್ಯುವ ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಶಕ್ತಿ ಗುರು ತಂದೆ ತಾಯಿ ಹೊರತುಪಡಿಸಿ ಗುರು ವ್ಯಕ್ತಿಯ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ ಅವರಿಗೆ ಗೌರವ ಸಮರ್ಪಣೆ ಮಾಡುವ ದಿನ ಇದಾಗಿದೆ. ಗುರುಪೂರ್ಣಿಮೆ ಮಾಹಿತಿ ತಿಳಿಸಿ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ನೀಡಿ ಎಂದು ತಿಳಿಸಿದರು. ಈ ವೇಳೆ ಚಿಕ್ಕೋವನಹಳ್ಳಿ ಶ್ರೀ ವೀರೇಶ ಸ್ವಾಮಿ ಪುರೋಹಿತರು ಪೂಜಾ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಹಂಪಮ್ಮ ಪೂಜಾರ್, ಮಂಜುಳಾ, ಸುಮಿತ್ರ, ರುದ್ರಮ್ಮ, ನೇತ್ರಾವತಿ, ಮಮತಾ, ಜಿಪಿ ಬಸವರಾಜ್, ಬೋಧಕೇತರ ಸಿಬ್ಬಂದಿ ವರ್ಗದವರಾದ ಮಲ್ಲಿಕಾರ್ಜುನ ಶಾಂತಕುಮಾರ್ ವನಜಾಕ್ಷಮ್ಮ ಹಾಗೂ ಶಾಲಾ ಮಕ್ಕಳು, ಪೋಷಕರು ಭಾಗವಹಿಸಿದ್ದರು.1
- ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ ಜೋಗಿಮಟ್ಟಿ ರಸ್ತೆಯಲ್ಲಿ ಮರಹತ್ಯೆ ಚಿತ್ರದುರ್ಗ ನಗರದ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ಮಹಾದ್ವಾರದ ಬಳಿ ಬೆಳೆದಿದ್ದ ನೆರಳೆ ಮರವನ್ನು ದುಷ್ಕರ್ಮಿಗಳು ಕಡಿದಿದ್ದ ಹಿನ್ನೆಲೆಯಲ್ಲಿ ಜೋಗಿಮಟ್ಟಿ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಆರು ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ದಿನ ಹಾಕಿದ್ದ ಗಿಡಗಳು ಇಂದು ಫಸಲು ಬಿಡುತ್ತಿದ್ದವು. ಆದರೆ ಇದನ್ನು ಕಡಿದ ಪರಿಣಾಮ ಅರಣ್ಯ ಇಲಾಖೆ ಅಧಿಕಾರಿಗಳು FIR ದಾಖಲಿಸಲು ಆಗ್ರಹಿಸಿದರು. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಾದ ಗೋಪ್ಯಾನಾಯ್ಕ ಅವರಿಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿ ಪ್ರಭುಶಂಕರ್ ಮತ್ತು ಸಿಬ್ಬಂದಿ ಗಳು ಆಗಮಿಸಿ ಮಹಜರು ಮಾಡಿದರು. ಇದೇ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷರಾದ ಮಾಲತೇಶ್ ಅರಸ್ , ಜೋಗಿಮಟ್ಟಿ ಗೆಳೆಯರ ಬಳದ ಮಾರ್ಗದರ್ಶಕ ರಾಜಣ್ಣ , ಮಾಜಿ ಅಧ್ಯಕ್ಷರಾದ ರವಿಕುಮಾರ್, ರಾಘವೇಂದ್ರ, ಕಾರ್ಯದರ್ಶಿ ಮಂಜುನಾಥ್ , ರವಿಬಡಗಿ ಇತರರು ಇದ್ದರು. ಬೈಟ್: ರಾಜಣ್ಣ2
- ಹಿರಿಯೂರು ನಗರದಲ್ಲಿಂದು ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ನ ವತಿಯಿಂದ ಪ್ರತಿಭಟನೆ ಹಿರಿಯೂರು ನಗರದಲ್ಲಿಂದು ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ನ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಇನ್ನೂ ಕರ್ನಾಟಕ ಪ್ರದೇಶ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯ ರೆಡ್ಡಿ ಅವರ ಆದೇಶದಂತೆ, ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅವರ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಹಾಗೂ ಅವರ ರಾಜೀನಾಮೆಗೆ ಆಗ್ರಹಿಸಿ ಹಿರಿಯೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಹೋರಾಟದಲ್ಲಿ ಚಿತ್ರದುರ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಮಹಿಳಾ ಪ್ರಧಾನಕಾರ್ಯದರ್ಶಿಗಳು ಹಿರಿಯೂರು ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.1
- ಕೂಡ್ಲಿಗಿ : ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ರವರು ಸಂಘಟನಾಚತುರರು , ಹಾಗೂ ಬಹು ಜನಪ್ರೀಯ ಮಾದರಿ ಶಾಸಕರಾಗಿದ್ದಾರೆ - ಹರ್ಕರ್ ವೇಣುಗೋಪಾಲ್ ರಾವ್ -ವಿಜಯನಗರ ಜಿಲ್ಲೆ ಕೂಡ್ಲಿಗಿ *ಕೂಡ್ಲಿಗಿ : ಶಾಸಕ ಡಾ ॥ ಎನ್ ಟಿ ಶ್ರೀನಿವಾಸ್ ರವರು ಸಂಘಟನಾಚತುರರು , ಹಾಗೂ ಬಹು ಜನಪ್ರೀಯ ಮಾದರಿ ಶಾಸಕರಾಗಿದ್ದಾರೆ - ಹರ್ಕರ್ ವೇಣುಗೋಪಾಲ್ ರಾವ್* -ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣಕ್ಕೆ , ಜು 30 ರಂದು. ಎಐಸಿಸಿ ಕಾರ್ಯದರ್ಶಿ ಹಾಗೂ ಪಕ್ಷದ ವೀಕ್ಷಕರಾದ , ಹರ್ಕರ್ ವೇಣುಗೋಪಾಲ್ ರವರು ಭೇಟಿ ನೀಡಿದರು. ಅವರು ಪಟ್ಟಣದ ಅನುಬಂಧ ಕಲ್ಯಾಣ ಮಂಟಪದಲ್ಲಿ , ಪಕ್ಷದ ವಿವಿದ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕೇಂದ್ರ ಸರ್ಕಾರ ನೀಟ್ ಪ್ರೆಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಮೂಲಕ , ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದೆ. ಸಂಬಂಧಿಸಿದಂತೆ ರಾಹುಲ್ ಗಾಂದಿಯವರ ನೇತೃತ್ವದಲ್ಲಿ , ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ನಿರಂತರ ಹೋರಾಟ ಮಾಡಲಾಗುತ್ತಿದೆ. ಜನ ಪ್ರಜ್ಞಾವಂತರಿದ್ದು , ಮುಂದಿನ ದಿನಗಳಲ್ಲಿ ಮೋದಿ ಅಮಿತ್ ಷ್ ನೇತೃತ್ವದ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. *ಪಕ್ಷದ ಗಣ್ಯಾತಿ ಗಣ್ಯರು ಭಾಗಿ*- ಸಭೆಯಲ್ಲಿ ಕೆಪಿಸಿಸಿ ಅಬ್ಜರ್ವರ್ ಗಳಾದ ಮರಿಯೋಜಿರಾವ್ , ಶ್ರೀಮತಿ ಆರತಿ ಚಂದ್ರಶೇಖರ್ , ಕೆಪಿಸಿಸಿ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಸುಭಾಷ್ ರಾಥೋಡ್ , ಕಾಂಗ್ರೇಸ್ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷರು ಹಾಗು ಮಾಜಿ ಶಾಸಕರಾದ ಶಿರಾಜ್ ಶೇಖ್ , ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಜಿಲ್ಲಾ ಹಾಗೂ ತಾಲೂಕು ಮುಖಂಡರ ಅಭಿಪ್ರಾಯಗಳನ್ನು , ಸಲಹೆ ಸೂಸನೆಗಳನ್ನು ಆಲಿಸಲಾಯಿತು. ಪಕ್ಷದ ಸಂಘಟೆ ಭಲವರ್ಧೆನೆಗಾಗಿ , ಪ್ರಮುಖರು ಸದೀರ್ಘವಾಗಿ ಚರ್ಚಿಸಿದರು. ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಕಾವಲ್ಲಿ ಶಿವಪ್ಪನಾಯಕ , ಕೂಡ್ಲಿಗಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಮ್ ಗುರುಸಿದ್ದನಗೌಡ , ಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ಆಧ್ಯಕ್ಷ ಕೆ.ಜಿ.ಕಮಾರ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ಪಕ್ಷದ ಅನೇಕ ಮುಖಂಡರು , ವಿವಿದ ವಿಭಾಗಗಳ ಪ್ರಮುಖರು , ಕ್ಷೇತ್ರದೆಲ್ಲೆಡೆಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ - 9008937428 / 8151937428*4
- Post by YSRmedia vijayanagaraupsates1