ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘ(ರಿ)ನಾಗರಭಾವಿ ಬೆಂಗಳೂರು ಸಂಘದ ಕುರಿತು ಹುಬ್ಬಳ್ಳಿಯಲ್ಲಿ ಯಶಸ್ವಿ ಸಭೆ* ನಮಸ್ಕಾರ ವೀಕ್ಷಕರೇ ಸಿಟಿ ನೆಕ್ಸ್ಟ್ ನ್ಯೂಸ್ ನಲ್ಲಿ ತಮ್ಮೆಲ್ಲರಿಗೂ ಸುಸ್ವಾಗತ ಇಂದು ಹುಬ್ಬಳ್ಳಿಯಲ್ಲಿ. *ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘ(ರಿ)ನಾಗರಭಾವಿ ಬೆಂಗಳೂರು ಸಂಘದ ಕುರಿತು ಹುಬ್ಬಳ್ಳಿಯಲ್ಲಿ ಯಶಸ್ವಿ ಸಭೆ* ದಿನಾಂಕ 15.2.2026 ರಂದು ಹುಬ್ಬಳ್ಳಿಯ ಲಿಡಕರ್ ಭವನದಲ್ಲಿ ಮುಂಜಾನೆ 11.00 ಗಂಟೆಗೆ ರಾಜ್ಯದ ಸಮಸ್ತ ಸಮಗಾರ (ಚಮ್ಮಾರ)ಹರಳಯ್ಯ ಸಮಾಜದ ಸಭೆಯನ್ನ ರಾಜ್ಯ ಸಂಘದ ವಿಷಯವಾಗಿ ಕರೆಯಲಾಗಿತ್ತು, (ಸದರಿ ಸಭೆಯು ಮಹಾಶಿವರಾತ್ರಿಯ ನಿಮಿತ್ಯ ೧ ಗಂಟೆ ತಡವಾಗಿ ಸರಿಯಾಗಿ ೧೨-೦೦ಕ್ಕೆ ಆರಂಭವಾಯಿತು) (ಈ ಮದ್ಯ ಸಮಾಜದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಂಘದ ಸದಸ್ಯ ಬಾಂಧವರು ತಮ್ಮ ತಮ್ಮ ಪರಿಚಯ ಮಾಡಿಕೊಂಡರು) ವಿವಿಧ ಜಿಲ್ಲೆಗಳಿಂದ ಸಮಗಾರ(ಚಮ್ಮಾರ) ಸಮಾಜದ ಬಂಧುಗಳು ಸಮಾಜದ ಸಮುದಾಯದ ಮತ್ತು ಸಂಘದ ಹಿತದ್ರಷ್ಟಿಯಿಂದ ಈ ಸಭೆಗೆ* ಹಾಜರಾಗಿದ್ದು ವಿಶೇಷವಾಗಿತ್ತು* ಸದರಿ ಸಭೆಯಲ್ಲಿ ಯಾವುದೇ ಗೊಂದಲ ಮತ್ತು ಇತರೆ ವಿಷಯಗಳತ್ತ ಸಭೆ ದಾರಿ ತಪ್ಪಬಾರದು ಮತ್ತು ಸಮಯದ ಅಭಾವ ಉಂಟಾಗಬಾರದೆಂದು ಕೇವಲ ಎರಡು ವಿಷಯದ ಬಗ್ಗೆ ಮಾತ್ರ ಒಂದರಿಂದ ಎರಡು ನಿಮಿಷ ಪ್ರಥಮ ಚರ್ಚಾ ವಿಷಯವಾಗಿ *೧) ನೂತನ ಕಾರ್ಯಕಾರಿ ಸದಸ್ಯರ ಆಯ್ಕೆ ಅವಿರೋಧ ವ ಚುನಾವಣೆ ಮೂಲಕ ನಡೆಸುವ ಬಗ್ಗೆ ಮತ್ತು* *೨) ರಾಜ್ಯ ಸಂಘದ ಪದಾಧಿಕಾರಿಗಳ ಎರಡು ವರ್ಷದ ಅವಧಿ ಮುಗಿದಿದ್ದು ಸಮನ್ವಯದಿಂದ ಸದಸ್ಯರ ಆಯ್ಕೆಗೆ ಹಿರಿಯರ ಕೋರ ಕಮೀಟಿ ರಚನೆ ಮತ್ತು ಆಯ್ಕೆಯ ಬಗ್ಗೆ ಎಂಬುದಾಗಿ ವಿಂಗಡಿಸಲಾಗಿತ್ತು* ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘದ ಕಾರ್ಯಕಾರಿಣಿಯ ಎರಡು ವರ್ಷದ ಆಡಳಿತ ಅವಧಿಯು ಮುಗಿದ ಪ್ರಯುಕ್ತ ಹೊಸ ಕಾರ್ಯಕಾರಿಣಿಯ ರಚನೆಯ ಕುರಿತಾಗಿ ಸಹಕಾರ ಸಂಘದ ನಿಯಮಾವಳಿಗಳ ಅನುಸಾರ ಸೂಕ್ತ ಕ್ರಮ ಕೈಗೊಳ್ಳಲು ಸರ್ವ ಸದಸ್ಯರನ್ನು,ಸಮಾಜದ ಹಿರಿಯರನ್ನು ಹಾಗೂ ಹಿತಚಿಂತಕರನ್ನು ಸದರಿ ಸಭೆಗೆ ಆವ್ಹಾನಿಸಲಾಗಿತ್ತು. ಸಭೆಗೆ ಹಾಜರಾದ ಸರ್ವಸದಸ್ಯರು, ಹಾಗೂ ಸಮಾಜದ ಎಲ್ಲ ಧುರೀಣರು ಸುದೀರ್ಘವಾಗಿ ಚರ್ಚಿಸಿ ಕೆಳಗಿನಂತೆ ನಡವಳಿಗಳನ್ನು ಅನುಮೋದಿಸಿದಂತೆ ಅವರೆಲ್ಲರ ಸಹಿ ಪಡೆಯಲಾಯಿತು. *ಸ್ವಾಗತ* ಸಂಘದ ನಿರ್ಗಮಿತ ಉಪಾಧ್ಯಕ್ಷ ಪರಶುರಾಮ ಅರಕೇರಿ ಸ್ವಾಗತಿಸುವ ಮೂಲಕ ಸಮಸ್ವಯದ ಮತ್ತು ಇತರೆ ವಿಷಯಗಳನ್ನ ಪ್ರಸ್ತಾಪಿಸಿದರು. ಸಮಾಜದ ಹಿತಚಿಂತಕರು/ಸಭೆಯ ಆಯೋಜಕರಾದ/ ಸದಸ್ಯರಾದ ಗುರುನಾಥ ಉಳ್ಳಿಕಾಶಿ ಅವರು ಸರ್ವರಿಗೂ ಶರಣು ಶರಣಾರ್ಥಿಗಳ ಮೂಲಕ ಪ್ರಾಸ್ತಾವಿಕವಾಗಿ ಮಾತನಾಡಿ ಕ.ರಾ.ಸ.ಹ.ಸಂಘದ ಎರಡು ವರ್ಷದ ಅವಧಿ ಪೂರ್ಣಗೊಂಡಿದ್ದು, ರಾಜ್ಯ ಕಾರ್ಯಕಾರಿಣಿ ಹಾಗೂ ಜಿಲ್ಲಾ ಕಾರ್ಯಕಾರಿಣಿಗಳು ಕಾನೂನಾತ್ಮಕವಾಗಿ ಅಸ್ತಿತ್ವ ಕಳೆದುಕೊಂಡಿವೆ ಈ ನಿಟ್ಟಿನಲ್ಲಿ ಸೂಕ್ತ ಸಂಧರ್ಭದಲ್ಲಿ ರಾಜ್ಯ ಸಂಘವು ಸಮರ್ಪಕ ಸಭೆಗಳ ಮೂಲಕ ಸಮಾಜ ಬಂಧುಗಳಿಗೆ ಸಂಘದ ವಿಷಯಗಳನ್ನ ಪ್ರಸ್ತಾಪಿಸಲು ವಿಫಲವಾದ ಕಾರಣ,ಸಂಘದ ಸ .ಸಾ .ಸಭೆ ನಡೆಸದೇ ಅಧಿಕಾರಾವಧಿಯನ್ನು ವಿಸ್ತರಿಸಿಕೊಂಡ ಕಾರಣ, ಸಮಾಜದ ಧ್ವನಿಯಾಗಬೇಕಾದ ಸಂಘ ಸೂಕ್ತ ಸಮಯದಲ್ಲಿ ಗಟ್ಟಿಯಾಗಿ ಸಮಾಜದ ಪರ ನಿಲ್ಲದ್ದನ್ನ,ಒಳಮೀಸಲಾತಿಯಾದಿಯಾಗಿ ಸಮಾಜದ ಪಾಲು ಕೇಳದೇ ಇರುವದು, ಜಿಲ್ಲಾ ಘಟಕಗಳ ನಿಯೋಜನೆಯ ಬಗ್ಗೆ , ಪ್ರಸ್ತುತ ವಿಷಯ ಮತ್ತು ಸಮಸ್ಯೆಗಳ ಬಗ್ಗೆ, ರಾಜ್ಯ ಸಂಘಕ್ಕೆ ಅನುದಾನದ ಬಗ್ಗೆ,ವಾಟ್ಸ್ಯಾಪ್ ಚರ್ಚೆಗಳ ಬಗ್ಗೆ, ರಾಜ್ಯ ಸಂಘದ ವಿರುದ್ದ ಸಂಘ ಸಂಸ್ಥೆಗಳ ರಿಜಿಸ್ಟಾರ್ ಗೆ ಸಲ್ಲಿಸಿದ ದೂರಿನ ಬಗ್ಗೆ ಹಾಗೂ ಇತರೆ ಬಹಳಷ್ಟು ಪ್ರಶ್ನೆಗಳು ಸಮಾಜ ಬಾಂಧವರನ್ನ ಕಾಡುತ್ತಿದ್ದು ಉತ್ತರಿಸಬೇಕಾದವರು ರಾಜೀನಾಮೆ ನೀಡಿದ್ದು ವಿಸರ್ಜಿತ ಸಂಘದ ಹಂಗಾಮಿ ಅಧ್ಯಕ್ಷ ಜಗದೀಶ ಬೆಟಗೇರಿ ಹಾಗೂ ಸಂಭಂಧಿಸಿದವರನ್ನ ಕರೆದು ಉತ್ತರ ಪಡೆಯುವಂತಾಗಲು ಸದರಿ ಸಭೆ ನಡೆಸಲು ನಿರ್ಧರಿಸಿದಂತೆ ಈ ಸಭೆ ಕರೆಯಲಾಗಿದ್ದು ಅದರಂತೆ ತಮ್ಮ ಅನೇಕ ಕೆಲಸ ಕಾರ್ಯಗಳನ್ನ ಬದಿಗೊತ್ತಿ ಸಮಾಜದ ಸಂಘದ ಹಿತದ್ರಷ್ಟಿಯಿಂದ ರಾಜ್ಯದ ವಿವಿಧ ಮೂಲೆಗಳಿಂದ ಹಿರಿಯರು ಯುವ ಮಿತ್ರರು ಸಹೋದರಿಯರು ಆಗಮಿಸಿದ್ದಕ್ಕೆ ಶರಣು ಶರಣಾರ್ಥಿಗಳನ್ನು ಸಲ್ಲಿಸುವ ಮೂಲಕ ನೂತನ ಕಾರ್ಯಕಾರಿ ಆಯ್ಕೆಯ ಬಗ್ಗೆ ಮತ್ತು ಹಿರಿಯರ ಕೋರ್ ಕಮೀಟಿ ಬಗ್ಗೆ ಸಮನ್ವಯದ ಆಯ್ಕೆಯ ಮೂಲಕ ಸಭೆಯಲ್ಲಿ ನಿರ್ಣಯಿಸಲು ಎಲ್ಲರೂ ತಮ್ಮ ಅಭಿಪ್ರಾಯವನ್ನ ಮಂಡಿಸುವ ಬಗ್ಗೆ ಮಾತನಾಡಿ ಸಭೆಯ ಮಹತ್ವವನ್ನ ತಿಳಿಸಿದರು. ಸದರಿ ಸಭೆಯಲ್ಲಿ ಭಾಗವಹಿಸಿದ ಶೇ ೯೯ %ರಷ್ಟು ಸದಸ್ಯರು ಮಾತನಾಡಿ ೨ ವಿಷಯಗಳಿಗೆ ಸಂಭಂಧಿಸಿದಂತೆ ಅವಿರೋಧ ಆಯ್ಕೆ ಬಗ್ಗೆ ಸಹಮತ ಮತ್ತು ಒಮ್ಮತದ ನಿರ್ಣಯಕ್ಕೆ ಬಂದರೂ ಒಂದೆರಡು ಜನ ಮಾತ್ರ ಚುನಾವಣೆಯ ಬಗ್ಗೆ ಮಾತನಾಡಿದರು. ಚುನಾವಣೆಯ ಬಗ್ಗೆ ಸಭೆಯಲ್ಲಿ ಬಹುಸಂಖ್ಯೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಮತ್ತು ಅನೇಕ ಸದಸ್ಯರು ಹಂಗಾಮಿ ಅಧ್ಯಕರು ಮತ್ತು ಪದಾಧಿಕಾರಿಗಳಿಗೆ ಜಿಲ್ಲಾಘಟಕ ಗಳ ಅವಧಿ ಮತ್ತು ಸಂಘದ ಲೆಟರಹೆಡ್ (ಜಿಲ್ಲೆಯೊಂದರ ವಿಷಯವಾಗಿ) ದುರುಪಯೋಗದ ಬಗ್ಗೆ ತೀವ್ರ ಪ್ರಶ್ನೆ ಮಾಡಿದರು. ಹೀಗಾಗಿ ಸಭೆಯಲ್ಲಿ ಕೆಲವು ಕ್ಷಣ ಕೋಲಾಹಲ ಮೂಡಿತು. ಸದರಿ ಪ್ರಶ್ನೆಗಳಿಗೆ ಉತ್ತರವಾಗಿ ಹಂಗಾಮಿ ಅಧ್ಯಕ್ಷ ಜಗದೀಶ ಬೆಟಗೇರಿ ಉತ್ತರಿಸುವ ಯತ್ನ ಮಾಡಿದರು ಮತ್ತು ತಾವು ತಮ್ಮ ಅವಧಿ ಮುಗಿದ ಬಗ್ಗೆ ಹಂಗಾಮಿಯಾಗಿದ್ದು ರಾಜ್ಯದ ವಿವಿಧ ಜಿಲ್ಲೆಯ ಪದಾಧಿಕಾರಿಗಳ ಅವಧಿ ಸಹ ತನ್ನಿಂದ ತಾನೆ ಮುಗಿದಂತೆ ಎಂದು ತಿಳಿಸಿದರು ಮತ್ತು ಹಿರಿಯರ ಕೋರ ಕಮೀಟಿ ರಚಿಸಿ ಹೊಸ ಕಾರ್ಯ ಕಾರಿ ಸದಸ್ಯರನ್ನ ಜಿಲ್ಲಾವಾರು ಆಯ್ಕೆಯ ಬಗ್ಗೆ ಕೋರಿದರು ಮತ್ತು ಸಹಕಾರ ಸಂಘದ ರಿಜಿಸ್ಟಾರ ಮೂಲಕ ಚುನಾವಣೆಗೆ ಮುಂದಾದರೆ ಸಂಘದ ಹಣ ಪೋಲಾಗುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರಲ್ಲದೇ ಸಂಘದ ಮಾಜಿ ಕಾರ್ಯದರ್ಶಿ ಮಾತನಾಡಲು ಅವಕಾಶ ನೀಡದಿದ್ದರೆ ಸಭೆಯಿಂದ ಎದ್ದು ಹೋಗುವದಾಗಿ ಹೊರಟುನಿಂತಾಗ ಸಭೆಯಲ್ಲಿ ಕೆಲಕ್ಷಣ ಗೊಂದಲ ಮತ್ತು ಉದ್ವಿಘ್ನತೆ ತಲೆದೂರಿತು. ಇತರೆ ಹಿರಿಯರಿಗೆ ಮಾತನಾಡಲು ನೀಡಿದ ಅವಕಾಶವನ್ನು ಸುನೀಲ ಮದಲಬಾವಿಯವರಿಗೆ ನೀಡಿದರು ಆಗ ಅವರು ಕಳೆದ ಎರಡು ವರ್ಷಗಳ ಅವಧಿಯಲ್ಲಿನ ತಮ್ಮ ಸಾಧನೆಯನ್ನ ಸಭೆಗೆ ತಿಳಿಸುವ ಪ್ರಯತ್ನ ಮಾಡಿದರು ಮತ್ತು ಹೊಸ ಆಯ್ಕೆಗೆ ಜಿಲ್ಲಾವಾರು ಅವಿರೋಧ ಯತ್ನದ ಮೂಲಕ ಲಭ್ಯವಿರುವ ಸಂಖ್ಯಾನುಸಾರ ಆಯ್ಕೆ ಬಗ್ಗೆ ಪ್ರಸ್ತಾಪಿಸಿ ಸಂಘದ ಹಣದ ಬಗ್ಗೆ ಕಾಳಜಿ ಹೇಳಿದರು ಮತ್ತು ಕಳೆದ ೨೦/೦೧/೨೦೨೬ ಕ್ಕೆ ಅವಧಿ ಮುಗಿದ ಬಗ್ಗೆ ವ ಅವಧಿ ಯಸಶ್ವಿ ಪೂರೈಸಿದ ಬಗ್ಗೆ ಪತ್ರ ಸಲ್ಲಿಸಿದ ಬಗ್ಗೆ ಸ ಸಾ ಸಭೆ ನಡೆಸಲು ಪರವಾನಿಗೆ ಕೋರಿ ಡಿ .ಆರ ರವರಿಗೆ ಪತ್ರ ಬರೆದ ಬಗ್ಗೆ ತಿಳಿಸಿದರು. (ಎಲ್ಲೂ ಸಹ ತಮ್ಮ ವಿವರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ/ ಮೂಲೆಗಳಿಂದ ಸಂಘಕ್ಕೆ ಬಂದ ಲಿಖಿತ ಪತ್ರಗಳ ಬಗ್ಗೆ ದೂರೂಗಳ ಬಗ್ಗೆ ಚಕಾರವೆತ್ತಲಿಲ್ಲ) ಮತ್ತು ಆ ಬಗ್ಗೆ ಏನೂ ಹೇಳದೇ ನಾನು ನಿಮ್ಮೊಂದಿಗಿದ್ದೇನೆ. ನನಗೆ ಕರೆಮಾಡಿ ಎಂದರು, ಅಧಿಕಾರಿಯೊಬ್ಬರು ಸಹಕರಿಸಿದ ಬಗ್ಗೆ ,ತಾವೊಬ್ಬರೇ ಸಂಘದ ಹಿತಕ್ಕೆ ಶ್ರಮಿಸಿದ ಬಗ್ಗೆ ದಾಖಲೆಗಳ ಸರಿಪಡಿಸಿದ ಬಗ್ಗೆ ಹೇಳಿದರು ಆದರೆ (ತಮ್ಮ ವಿವರದಲ್ಲಿ ಒಳಮೀಸಲಾತಿ ಮತ್ತು ಸಮಾಜದ ಪಾಲಿನ ಬಗ್ಗೆ ಚಕಾರವೆತ್ತಲಿಲ್ಲ.) ಭೀಮರಾವ್ ಪವಾರ ಮಾತನಾಡಿ ರಾಜ್ಯದಲ್ಲಿ ಬಹುಪಾಲು ಸಮಗಾರ(ಚಮ್ಮಾರ)ರು ಇರುವದು ಬೆಳಗಾವಿ ಜಿಲ್ಲೆಯಲ್ಲಿ ಅವರು ಬಡವರಾಗಿದ್ದು ಅವರೆಲ್ಲರನ್ನ ಜೊತೆಗೆ ಕರೆದೊಯ್ಯುವ ಕೆಲಸ ವಾಗಬೇಕಿದೆ ಎಂದರು. ಮಾಜಿ ಉಪಾಧ್ಯಕ್ಷರಾದ ಪರಶುರಾಮ ಅರಕೇರಿ ಯವರು ಮಾತನಾಡಿ ಮನೆಯಿಂದ ಊಟದ ಬುತ್ತಿಕಟ್ಟಿಕೊಂಡು ಬೆಂಗಳೂರಿಗೆ ಹೋಗಿ ಕೆಲಸ ಮಾಡಿದ ಬಗ್ಗೆ ಮತ್ತು ಮಾಜಿ ಸದಸ್ಯರು ಸಭೆಗೆ ಹಾಜರಾಗಲು ಟಿಎ ಡಿಎ ಕೇಳುತ್ತಿದ್ದು ಸಂಘ ಅಷ್ಟು ಶಕ್ತಿಶಾಲಿಯಾಗಿಲ್ಲವೆಂದು ಹೇಳಿದರು ತಮ್ಮ ಊರು ಓಣಿಗಳಲ್ಲಿ ಸಮಾಜ ಕಟ್ಟುವ ಕೆಲಸದ ಬಗ್ಗೆ ಮಾತನಾಡುತ್ತಿರುವಾಗ ಜಿಲ್ಲೆಯೊಂದರ ಹಲವು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಅವಿರೋಧ ವಾದರೂ ಸರಿ ಚುನಾವಣೆ ಎಂದರೂ ಸರಿ ಎಂದು ತಮ್ಮ ಮಾತು ಮುಗಿಸಿದರು. ಸದಸ್ಯರಾದ ವಾಯ್ ಸಿ ಕಾಂಬ್ಳೆ ಮಾತನಾಡಿ ಅವಿರೋಧ ಆಯ್ಕೆಯ ಬಗ್ಗೆ ಸಹಮತ ವ್ಯಕ್ತಪಡಿಸಿ ಜಿಲ್ಲಾವಾರು ಪಾರದರ್ಶಕ ಆಯ್ಕೆ ಬಗ್ಗೆ ಹೇಳಿದರು ಮತ್ತು ಕೋರ ಕಮೀಟಿ ಯ ಹೆಸರನ್ನ ಹಿರಿಯರ ಸಮಿತಿ ಎಂದರೆ ಸೂಕ್ತ ಮತ್ತು ಅದರಲ್ಲಿರುವವರು ಇಸಿ ಸದಸ್ಯರಾಗುವಂತಾದರೆ ತಪ್ಪು ಎಂದು ತಿಳಿಸಿದರು. ಸಭೆಯ ಹಿರಿಯರಾದ ಡಾ ಮೋಹನ ಉಳ್ಳಿಕಾಶಿ ಯವರು ಕೊನೆಯದಾಗಿ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತ ನಾವು ಸಮಗಾರಸಮುದಾಯ ದವರು ಅಸ್ಪೃಶ್ಯರಲ್ಲೇ ಸ್ವಲ್ಪ ಸುಸಂಕೃತರು ಎಂದು ಕರೆಸಿಕೊಳ್ಳುತ್ತೇವೆ. ಅದಕ್ಕೆ ಅನುಗುಣವಾಗಿ ಸಮಾಜವನ್ನು ಕಟ್ಟೋಣ. ಒಗ್ಗಟ್ಟಾಗಿ ಸಂಘಟನೆ ಎಂಬ ಸಸಿಗೆ ಎಲ್ಲರೂ ನೀರೇರದು ಹೆಮ್ಮರವಾಗಿ ಬೆಳೆಸಿ ಶ್ರಮದ ಫಲ ಕೊಡುವಂತೆ ಪೋಶಿಷೋಣ ಎಂದು ಕರೆ ನೀಡಿದರು. "ಹರಳಯ್ಯ-ಕಲ್ಯಾಣಮ್ಮನವರ ಹಾದಿಯಲ್ಲಿ ಸಾಗೋಣ: ಹರಳಯ್ಯದಂಪತಿಗಳು ೧೨ ನೇ ಶತಮಾನದಲ್ಲಿ ತನ್ನ ತೊಡೆಯಚರ್ಮವನ್ನ ತೆಗೆದು ಹದಗೊಳಿಸಿ ಬಸವಣ್ಣನವರಿಗೆ ಪಾದರಕ್ಷೆ ಮಾಡಿದರು, ಅದರಂತೆ ನಾವು ನಮ್ಮ ಮನಸ್ಸುಗಳನ್ನು ಹದಗೊಳಿಸಿ ಒಗ್ಗಟ್ಟಿನಿಂದ ಸಮಾಜವನ್ನು ಕಟ್ಟೋಣ ಎಂದು ಉಪದೇಶಿಸಿದರು. ಶಿವಶರಣ ಹರಳಯ್ಯ ಮತ್ತು ಕಲ್ಯಾಣಮ್ಮನವರು ಕಾಯಕ ಹಾಗೂ ದಾಸೋಹದ ಮೂಲಕ ಜಾತಿ ಪದ್ಧತಿಯನ್ನು ಮೆಟ್ಟಿ ನಿಂತವರು. ಅವರ ಒಗ್ಗಟ್ಟಿನ ಕ್ರಾಂತಿಯೇ ಇಂದು ನಮ್ಮ ಅಸ್ಮಿತೆಗೆ ಬುನಾದಿಯಾಗಿದೆ ಎಂದು ಸ್ಮರಿಸಿ,ಭಿನ್ನಾಭಿಪ್ರಾಯ, ದ್ವೇಷ, ಅಹಮ್ಮಿಕೆ ಬಿಟ್ಟು , ಸಮುದಾಯದ ಹಿತದೃಷ್ಟಿಯಿಂದ ವಚನ ಸಂಸ್ಕೃತಿಯ ಪ್ರೇರಣೆಯಂತೆ,ಜಗಜ್ಯೋತಿ ಬಸವಣ್ಣನವರ "ಇವ ನಮ್ಮವ" ಎಂಬ ತತ್ವದಡಿ ರಾಜ್ಯ ಸಮಗಾರ(ಚಮ್ಮಾರ) ಸಂಘವನ್ನು ಬೆಳೆಸೋಣ ಎಂದು ಕರೆ ನೀಡಿದರು.ಜಿಲ್ಲೆ ಮತ್ತು ವಯಸ್ಸಿನ ಮತ್ತು ವೈಯಕ್ತಿಕ ಭೇದ ಮರೆತು ನಾವೆಲ್ಲರೂ ಸಮಗಾರ ಸಮುದಾಯದ ಮಕ್ಕಳು ಎಂಬ ಒಮ್ಮನಸ್ಸಿನಿಂದ ಬೆಳೆಯಬೇಕೆಂದು ಕರೆ ನೀಡಲಾಯಿತು.ಸಮಾಜದ ಮಹಿಳೆಯರು ಮತ್ತು ಯುವಕರು ಸಂಘಟನೆಯಲ್ಲಿ ಒಳಗೊಳ್ಳುವ ಕೊರತೆ ಬಗ್ಗೆ ವಿಷಾದಿಸಿದರು. ಇದರ ಬಗ್ಗೆ ವಿಶ್ಲೇಷಣೆ ಅವಶ್ಯ ಎಂದು ವಿವರಿಸಿದರು. ಒಕ್ಕೂಟ ಉದಕದಂತಿರಲಿ ಹಾಗೂ - "ಹೊಲಿದ ಚರ್ಮದ ಚೀಲ ಹೇಗೆ ಭಾರವನ್ನು ಹೊರುತ್ತದೆಯೋ, ಹಾಗೆಯೇ ಸಮುದಾಯವು ಒಂದಾದರೆ ಯಾವುದೇ ಕಷ್ಟವನ್ನು ಎದುರಿಸಬಹುದು. ನಮ್ಮ ಮುಂದಿನ ಪೀಳಿಗೆಯ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಒಗ್ಗಟ್ಟು ಅನಿವಾರ್ಯ" ಎಂದು ಸಭೆಯಲ್ಲಿ ಪ್ರತಿಪಾದಿಸಿದರು. ನಮ್ಮ ಗುರಿ ಒಂದೇ, ನಮ್ಮ ಹಾದಿ ಒಂದೇ... ಎಂಬ ಸಂದೇಶ ದೊಂದಿಗೆ ತಮ್ಮ ಹಿತನುಡಿಯನ್ನು ಮುಕ್ತಾಯಗೊಳಿಸಿದರು. ಗುರುನಾಥ -ಉಳ್ಳಿಕಾಶಿ ಸುಮಾರು ೧೬+೩ ಜನ ಹಿರಿಯ ಕೋರ ಕಮೀಟಿ ಸದಸ್ಯರ ಹೆಸರನ್ನ ಸಭೆಗೆ ತಿಳಿಸಿದರು ಎಲ್ಲರೂ ಚಪ್ಪಾಳೆಯ ಮೂಲಕ ಒಪ್ಪಿಗೆ ಸೂಚಿಸಿದರು. *ಸೂಕ್ತ ಹಿರಿಯರ ಕೋರ ಕಮೀಟಿ ರಚಿಸುವ ಹೊಣೆಯನ್ನ ಹಿರಿಯರಾದ ಡಾ: ಮೋಹನ್ ಉಳ್ಳಿಕಾಶಿ ರವರಿಗೆ ನೀಡಲಾಯಿತು* ಹೇಗಾದರೂ ಸರಿ ಎರಡು ಮೂರೂ ಗಂಟೆಗೆ ಸಭೆ ಮುಗಿಸಬೇಕೆನ್ನುವ ಆಯೋಜಕರ ಆಸೆ ನೆರವೇರಲಿಲ್ಲ. ಸಭೆಯು ಸಂಜೆ ೬-೪೫ರವರೆಗೆ ನಿರರ್ಗಳವಾಗಿ ನೆರವೇರಿತು. ಇಷ್ಟೊಂದು ಸಹಕಾರ ನೀಡಿದ ಸಭೆಯ ಯಶಸ್ಸಿಗೆ ಕಾರಣರಾದ ಸಮಾಜದ ಸಕಲ ಹಿರಿಯರಿಗೆ ನಿವ್ರತ್ತ ನೌಕರ ವರ್ಗಕ್ಕೆ,ಕೇವಲ ಒಂದೆ ರಜೆ ಮತ್ತು ಮಹಾಶಿವರಾತ್ರಿ ಇದ್ದಾಗ್ಯೂ ಸಭೆಗೆ ಆಗಮಿಸಿ ಸಹಕರಿಸಿದ ನೌಕರ ಬಾಂಧವರ ಕಳಕಳಿಗೆ,ತಮ್ಮ ಅನಾರೋಗ್ಯ ಬದಿಗೊತ್ತಿ ಸಭೆಯ ಸಭಾಂಗಣ ತುಂಬಿದ ಹಿರಿಯರಿಗೆ,ಮಹಿಳೆಯರಿಗೆ ಯುವ ಸಮಾಜದ ಮುಖಂಡರಿಗೆ ಸಭೆಗೆ ಆಗಮಿಸಿದ ಸಕಲ ಸಮಗಾರ(ಚಮ್ಮಾರ) ಬಾಂಧವರಿಗೆ ಪತ್ರಕರ್ತರಿಗೆ ಪ್ರತ್ಯಕ್ಷ ಪರೋಕ್ಷ ಸಹಕರಿಸಿ ಸಭೆಯ ಆಶಯಗಳಿಗೆ ಸ್ಪಂದಿಸಿದ ಮಾಜಿ ಸಮಿತಿಯವರಿಗೆ ಸಭೆಯ ಆಯೋಜಕರಾಗಿ ನಿರ್ವಹಣೆಗಾರರಾಗಿ ಗುರುನಾಥ -ಉಳ್ಳಿಕಾಶಿ ಶರಣುಶರಣಾರ್ಥಿಗಳನ್ನ ಸಲ್ಲಿಸಿದರು. *ಕೋರ ಕಮೀಟಿಯ ಸದಸ್ಯರ ವಿವರ* 1)ಡಾ.ಮೋಹನ ಉಳ್ಳಿಕಾಶಿ (ಕೋರ ಕಮೀಟಿಯ ಪ್ರಮುಖರು) 2)ಜಗದೀಶ ಬೆಟಗೇರಿ 3)ಭೀಮರಾವ ಪವಾರ 4)ವೈ.ಸಿ.ಕಾಂಬಳೆ 5)ಮೈಲಾರೆಪ್ಪ ಸೌದಾಗರ 6)ರಾಜಕುಮಾರ ಟಿಳೇಕರ 7)ಸುಭಾಷ ಕಾನಡೆ 8)ವಸಂತ ಮನಗೂಳಿ 9)ಗೋವಿಂದ ನಾಯ್ಕ 10)ಸುಬ್ಬಣ್ಣ 11)ಎ.ಎಸ್.ರಾಯಮಾನೆ 12)ಅಪ್ಪಾಸಾಹೇಬ ಮನಗೂಳಿ 13)ಬಸವರಾಜ ಮಾನೆ 14)ಶೇಖರ ಸೌದಾಗರ 15)ಪ್ರಶಾಂತ ಹೊಸಮನಿ 16)ಪರಶುರಾಮ ಅರಕೇರಿ 17)ಗುರುನಾಥ ಉಳ್ಳಿಕಾಶಿ 18)ಆನಂದ ಮದನಭಾವಿ 19)ವಿರುಪಾಕ್ಷಿ ಗಾಮನಗಟ್ಟಿ ರವರು *ಕೋರ ಕಮೀಟಿಯಲ್ಲಿರುತ್ತಾರೆ* ಸಭೆಯಲ್ಲಿ ಹಿರಿಯರಾದ ಮಾರ್ಕಂಡೇಯ ದೊಡ್ಡಮನಿ ಡಾ:ಮೋಹನ್ ಉಳ್ಳಿಕಾಶಿ ಜಗದೀಶ ಬೆಟಗೇರಿ ಪರಶುರಾಮ ಅರಕೇರಿ ಗುರುನಾಥ ಉಳ್ಳಿಕಾಶಿ ಆನಂದ ಮೊದಲಬಾವಿ ಧರ್ಮಣ್ಣಾ ಸಾಣಕೇನವರ ಭೀಮರಾವ್ ಪವಾರ ಮಹಾದೇವ್ ಕಬಾಡೆ ಸುನೀಲ ಮದಲಬಾವಿ ಅಶೋಕ ಸೌದಾಗರ ಎಲ್ಲಪ್ಪ ಬೆಂಡಿಗೇರಿ ಗೋವಿಂದ ನಾಯ್ಕ ಚನ್ನವೀರ ಗಾಮನಗಟ್ಟಿ ಹನಮಂತ ಕದಂ ಮಹಾದೇವರಾವ್ ಬಿಜಾಪುರ ಅರ್ಜುನ ಕಾಂಬ್ಳೆ ಬಸವರಾಜ ಮಾನೆ ವಿಠ್ಟಲ ಸೂರ‍್ಯವಂಶಿ ಫಕ್ಕೀರಪ್ಪ ಬೆಟಗೇರಿ ಬಿ ಆರ ಕಟ್ಟಿಮನಿ ಅಶೋಕ ಸೌದಾಗರ ನಾಗರಾಜ ಕಲಾದಗಿ ಶಂಕರ ಜಮಖಂಡಿ ಲೋಹಿತ ಗಾಮನಗಟ್ಟಿ ಸಂಜೀವ್ ಲೋಕಾಪುರ ರಾಘವೇಂದ್ರ ಶಾಹಪೂರ ಸಂದೀಪ ಮಿಶ್ರೀಕೋಟಿ ಮಂಜುಳಾ ಬೆಣಗಿ ಪ್ರೇಮಾ ಭಂಢಾರಿ ಚಂದ್ರಶೇಖರ ಮುಂಡೇವಾಡಿ ಪರಮಾನಂದ ಹಳ್ಳೂರ ಮುತ್ತಣ್ಣ ಕಬಾಡೆ ಮೈಲಾರೆಪ್ಪ ಸೌದಾಗರ ಭರಮರೆಡ್ಡಿ ದೊಡ್ಡಮನಿ ಪ್ರಶಾಂತ ಹೊಸಮನಿ ರಮೇಶ ಸಾಂಬ್ರಾಣಿ ರಾಜಕುಮಾರ- ಟಿಳೇಕರ್ ರಾಜು -ವಿಜಾಪುರ ಸಚಿನ್ -ಕೊಡ್ತೆ ಶ್ರೀನಿವಾಸ -ಶಹಾಪುರ ಡಾ: ಶಿವಾನಂದ -ದೊಡ್ಡಮನಿ ವಸಂತ -ಮನಗೂಳಿ ಅಡಿವೆಪ್ಪ- ಚಂದಾವರಿ ಎಲ್ಲಪ್ಪ -ಸಾಣಕೇನವರ ಅಶೋಕ -ಭಂಢಾರಿ ಸುನೀಲ್ -ಮಿರಜಕರ ಅನಿಲ -ಸೌದಾಗರ ಪ್ರಭು -ಅಣ್ಣಿಗೇರಿ ಸಂತೋಷ -ಹೊಂಗಲ್ಲ ವಸಂತ -ಬೆಟಗೇರಿ ಪ್ರಥ್ವಿ -ಬೆಟಗೇರಿ ಧ್ರುವ ಗಾಮನಗಟ್ಟಿ ಮಂಜುನಾಥ ಸಣ್ಣಕ್ಕಿ ಕಿರಣ ಗಾಮನಗಟ್ಟಿ ಶ್ರೀಪಾದ ಬೆಟಗೇರಿ ಹಾಗೂ ಸಮಗಾರ(ಚಮ್ಮಾರ) ಸಮಾಜದ ಇನ್ನೂ ನೂರಾರು ಪ್ರಮುಖರು ಉಪಸ್ಥಿತರಿರುವ ಮೂಲಕ ಮಾತನಾಡಿ ತಮ್ಮ ಸಮಾಜದ ಕಳಕಳಿ ವ್ಯಕ್ತಪಡಿಸಿದರು. ವಂನಾರ್ಪಣೆಗಳೊಂದಿಗೆ ಸಭೆಯನ್ನ ಮೊಟಕುಗೊಳಿಸಲಾಯಿತು.
ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘ(ರಿ)ನಾಗರಭಾವಿ ಬೆಂಗಳೂರು ಸಂಘದ ಕುರಿತು ಹುಬ್ಬಳ್ಳಿಯಲ್ಲಿ ಯಶಸ್ವಿ ಸಭೆ* ನಮಸ್ಕಾರ ವೀಕ್ಷಕರೇ ಸಿಟಿ ನೆಕ್ಸ್ಟ್ ನ್ಯೂಸ್ ನಲ್ಲಿ ತಮ್ಮೆಲ್ಲರಿಗೂ ಸುಸ್ವಾಗತ ಇಂದು ಹುಬ್ಬಳ್ಳಿಯಲ್ಲಿ. *ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘ(ರಿ)ನಾಗರಭಾವಿ ಬೆಂಗಳೂರು ಸಂಘದ ಕುರಿತು ಹುಬ್ಬಳ್ಳಿಯಲ್ಲಿ ಯಶಸ್ವಿ ಸಭೆ* ದಿನಾಂಕ 15.2.2026 ರಂದು ಹುಬ್ಬಳ್ಳಿಯ ಲಿಡಕರ್ ಭವನದಲ್ಲಿ ಮುಂಜಾನೆ 11.00 ಗಂಟೆಗೆ ರಾಜ್ಯದ ಸಮಸ್ತ ಸಮಗಾರ (ಚಮ್ಮಾರ)ಹರಳಯ್ಯ ಸಮಾಜದ ಸಭೆಯನ್ನ ರಾಜ್ಯ ಸಂಘದ ವಿಷಯವಾಗಿ ಕರೆಯಲಾಗಿತ್ತು, (ಸದರಿ ಸಭೆಯು ಮಹಾಶಿವರಾತ್ರಿಯ ನಿಮಿತ್ಯ ೧ ಗಂಟೆ ತಡವಾಗಿ ಸರಿಯಾಗಿ ೧೨-೦೦ಕ್ಕೆ ಆರಂಭವಾಯಿತು) (ಈ ಮದ್ಯ ಸಮಾಜದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಂಘದ ಸದಸ್ಯ ಬಾಂಧವರು ತಮ್ಮ ತಮ್ಮ ಪರಿಚಯ ಮಾಡಿಕೊಂಡರು) ವಿವಿಧ ಜಿಲ್ಲೆಗಳಿಂದ ಸಮಗಾರ(ಚಮ್ಮಾರ) ಸಮಾಜದ ಬಂಧುಗಳು ಸಮಾಜದ ಸಮುದಾಯದ ಮತ್ತು ಸಂಘದ ಹಿತದ್ರಷ್ಟಿಯಿಂದ ಈ ಸಭೆಗೆ* ಹಾಜರಾಗಿದ್ದು ವಿಶೇಷವಾಗಿತ್ತು* ಸದರಿ ಸಭೆಯಲ್ಲಿ ಯಾವುದೇ ಗೊಂದಲ ಮತ್ತು ಇತರೆ ವಿಷಯಗಳತ್ತ ಸಭೆ ದಾರಿ ತಪ್ಪಬಾರದು ಮತ್ತು ಸಮಯದ ಅಭಾವ ಉಂಟಾಗಬಾರದೆಂದು ಕೇವಲ ಎರಡು ವಿಷಯದ ಬಗ್ಗೆ ಮಾತ್ರ ಒಂದರಿಂದ ಎರಡು ನಿಮಿಷ ಪ್ರಥಮ ಚರ್ಚಾ ವಿಷಯವಾಗಿ *೧) ನೂತನ ಕಾರ್ಯಕಾರಿ ಸದಸ್ಯರ ಆಯ್ಕೆ ಅವಿರೋಧ ವ ಚುನಾವಣೆ ಮೂಲಕ ನಡೆಸುವ ಬಗ್ಗೆ ಮತ್ತು* *೨) ರಾಜ್ಯ ಸಂಘದ ಪದಾಧಿಕಾರಿಗಳ ಎರಡು ವರ್ಷದ ಅವಧಿ ಮುಗಿದಿದ್ದು ಸಮನ್ವಯದಿಂದ ಸದಸ್ಯರ ಆಯ್ಕೆಗೆ ಹಿರಿಯರ ಕೋರ ಕಮೀಟಿ ರಚನೆ ಮತ್ತು ಆಯ್ಕೆಯ ಬಗ್ಗೆ ಎಂಬುದಾಗಿ ವಿಂಗಡಿಸಲಾಗಿತ್ತು* ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘದ ಕಾರ್ಯಕಾರಿಣಿಯ ಎರಡು ವರ್ಷದ ಆಡಳಿತ ಅವಧಿಯು ಮುಗಿದ ಪ್ರಯುಕ್ತ ಹೊಸ ಕಾರ್ಯಕಾರಿಣಿಯ ರಚನೆಯ ಕುರಿತಾಗಿ ಸಹಕಾರ ಸಂಘದ ನಿಯಮಾವಳಿಗಳ ಅನುಸಾರ ಸೂಕ್ತ ಕ್ರಮ ಕೈಗೊಳ್ಳಲು ಸರ್ವ ಸದಸ್ಯರನ್ನು,ಸಮಾಜದ ಹಿರಿಯರನ್ನು ಹಾಗೂ ಹಿತಚಿಂತಕರನ್ನು ಸದರಿ ಸಭೆಗೆ ಆವ್ಹಾನಿಸಲಾಗಿತ್ತು. ಸಭೆಗೆ ಹಾಜರಾದ ಸರ್ವಸದಸ್ಯರು, ಹಾಗೂ ಸಮಾಜದ ಎಲ್ಲ ಧುರೀಣರು ಸುದೀರ್ಘವಾಗಿ ಚರ್ಚಿಸಿ ಕೆಳಗಿನಂತೆ ನಡವಳಿಗಳನ್ನು ಅನುಮೋದಿಸಿದಂತೆ ಅವರೆಲ್ಲರ ಸಹಿ ಪಡೆಯಲಾಯಿತು. *ಸ್ವಾಗತ* ಸಂಘದ ನಿರ್ಗಮಿತ ಉಪಾಧ್ಯಕ್ಷ ಪರಶುರಾಮ ಅರಕೇರಿ ಸ್ವಾಗತಿಸುವ ಮೂಲಕ ಸಮಸ್ವಯದ ಮತ್ತು ಇತರೆ ವಿಷಯಗಳನ್ನ ಪ್ರಸ್ತಾಪಿಸಿದರು. ಸಮಾಜದ ಹಿತಚಿಂತಕರು/ಸಭೆಯ ಆಯೋಜಕರಾದ/ ಸದಸ್ಯರಾದ ಗುರುನಾಥ ಉಳ್ಳಿಕಾಶಿ ಅವರು ಸರ್ವರಿಗೂ ಶರಣು ಶರಣಾರ್ಥಿಗಳ ಮೂಲಕ ಪ್ರಾಸ್ತಾವಿಕವಾಗಿ ಮಾತನಾಡಿ ಕ.ರಾ.ಸ.ಹ.ಸಂಘದ ಎರಡು ವರ್ಷದ ಅವಧಿ ಪೂರ್ಣಗೊಂಡಿದ್ದು, ರಾಜ್ಯ ಕಾರ್ಯಕಾರಿಣಿ ಹಾಗೂ ಜಿಲ್ಲಾ ಕಾರ್ಯಕಾರಿಣಿಗಳು ಕಾನೂನಾತ್ಮಕವಾಗಿ ಅಸ್ತಿತ್ವ ಕಳೆದುಕೊಂಡಿವೆ ಈ ನಿಟ್ಟಿನಲ್ಲಿ ಸೂಕ್ತ ಸಂಧರ್ಭದಲ್ಲಿ ರಾಜ್ಯ ಸಂಘವು ಸಮರ್ಪಕ ಸಭೆಗಳ ಮೂಲಕ ಸಮಾಜ ಬಂಧುಗಳಿಗೆ ಸಂಘದ ವಿಷಯಗಳನ್ನ ಪ್ರಸ್ತಾಪಿಸಲು ವಿಫಲವಾದ ಕಾರಣ,ಸಂಘದ ಸ .ಸಾ .ಸಭೆ ನಡೆಸದೇ ಅಧಿಕಾರಾವಧಿಯನ್ನು ವಿಸ್ತರಿಸಿಕೊಂಡ ಕಾರಣ, ಸಮಾಜದ ಧ್ವನಿಯಾಗಬೇಕಾದ ಸಂಘ ಸೂಕ್ತ ಸಮಯದಲ್ಲಿ ಗಟ್ಟಿಯಾಗಿ ಸಮಾಜದ ಪರ ನಿಲ್ಲದ್ದನ್ನ,ಒಳಮೀಸಲಾತಿಯಾದಿಯಾಗಿ ಸಮಾಜದ ಪಾಲು ಕೇಳದೇ ಇರುವದು, ಜಿಲ್ಲಾ ಘಟಕಗಳ ನಿಯೋಜನೆಯ ಬಗ್ಗೆ , ಪ್ರಸ್ತುತ ವಿಷಯ ಮತ್ತು ಸಮಸ್ಯೆಗಳ ಬಗ್ಗೆ, ರಾಜ್ಯ ಸಂಘಕ್ಕೆ ಅನುದಾನದ ಬಗ್ಗೆ,ವಾಟ್ಸ್ಯಾಪ್ ಚರ್ಚೆಗಳ ಬಗ್ಗೆ, ರಾಜ್ಯ ಸಂಘದ ವಿರುದ್ದ ಸಂಘ ಸಂಸ್ಥೆಗಳ ರಿಜಿಸ್ಟಾರ್ ಗೆ ಸಲ್ಲಿಸಿದ ದೂರಿನ ಬಗ್ಗೆ ಹಾಗೂ ಇತರೆ ಬಹಳಷ್ಟು ಪ್ರಶ್ನೆಗಳು ಸಮಾಜ ಬಾಂಧವರನ್ನ ಕಾಡುತ್ತಿದ್ದು ಉತ್ತರಿಸಬೇಕಾದವರು ರಾಜೀನಾಮೆ ನೀಡಿದ್ದು ವಿಸರ್ಜಿತ ಸಂಘದ ಹಂಗಾಮಿ ಅಧ್ಯಕ್ಷ ಜಗದೀಶ ಬೆಟಗೇರಿ ಹಾಗೂ ಸಂಭಂಧಿಸಿದವರನ್ನ ಕರೆದು ಉತ್ತರ ಪಡೆಯುವಂತಾಗಲು ಸದರಿ ಸಭೆ ನಡೆಸಲು ನಿರ್ಧರಿಸಿದಂತೆ ಈ ಸಭೆ ಕರೆಯಲಾಗಿದ್ದು ಅದರಂತೆ ತಮ್ಮ ಅನೇಕ ಕೆಲಸ ಕಾರ್ಯಗಳನ್ನ ಬದಿಗೊತ್ತಿ ಸಮಾಜದ ಸಂಘದ ಹಿತದ್ರಷ್ಟಿಯಿಂದ ರಾಜ್ಯದ ವಿವಿಧ ಮೂಲೆಗಳಿಂದ ಹಿರಿಯರು ಯುವ ಮಿತ್ರರು ಸಹೋದರಿಯರು ಆಗಮಿಸಿದ್ದಕ್ಕೆ ಶರಣು ಶರಣಾರ್ಥಿಗಳನ್ನು ಸಲ್ಲಿಸುವ ಮೂಲಕ ನೂತನ ಕಾರ್ಯಕಾರಿ ಆಯ್ಕೆಯ ಬಗ್ಗೆ ಮತ್ತು ಹಿರಿಯರ ಕೋರ್ ಕಮೀಟಿ ಬಗ್ಗೆ ಸಮನ್ವಯದ ಆಯ್ಕೆಯ ಮೂಲಕ ಸಭೆಯಲ್ಲಿ ನಿರ್ಣಯಿಸಲು ಎಲ್ಲರೂ ತಮ್ಮ ಅಭಿಪ್ರಾಯವನ್ನ ಮಂಡಿಸುವ ಬಗ್ಗೆ
ಮಾತನಾಡಿ ಸಭೆಯ ಮಹತ್ವವನ್ನ ತಿಳಿಸಿದರು. ಸದರಿ ಸಭೆಯಲ್ಲಿ ಭಾಗವಹಿಸಿದ ಶೇ ೯೯ %ರಷ್ಟು ಸದಸ್ಯರು ಮಾತನಾಡಿ ೨ ವಿಷಯಗಳಿಗೆ ಸಂಭಂಧಿಸಿದಂತೆ ಅವಿರೋಧ ಆಯ್ಕೆ ಬಗ್ಗೆ ಸಹಮತ ಮತ್ತು ಒಮ್ಮತದ ನಿರ್ಣಯಕ್ಕೆ ಬಂದರೂ ಒಂದೆರಡು ಜನ ಮಾತ್ರ ಚುನಾವಣೆಯ ಬಗ್ಗೆ ಮಾತನಾಡಿದರು. ಚುನಾವಣೆಯ ಬಗ್ಗೆ ಸಭೆಯಲ್ಲಿ ಬಹುಸಂಖ್ಯೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಮತ್ತು ಅನೇಕ ಸದಸ್ಯರು ಹಂಗಾಮಿ ಅಧ್ಯಕರು ಮತ್ತು ಪದಾಧಿಕಾರಿಗಳಿಗೆ ಜಿಲ್ಲಾಘಟಕ ಗಳ ಅವಧಿ ಮತ್ತು ಸಂಘದ ಲೆಟರಹೆಡ್ (ಜಿಲ್ಲೆಯೊಂದರ ವಿಷಯವಾಗಿ) ದುರುಪಯೋಗದ ಬಗ್ಗೆ ತೀವ್ರ ಪ್ರಶ್ನೆ ಮಾಡಿದರು. ಹೀಗಾಗಿ ಸಭೆಯಲ್ಲಿ ಕೆಲವು ಕ್ಷಣ ಕೋಲಾಹಲ ಮೂಡಿತು. ಸದರಿ ಪ್ರಶ್ನೆಗಳಿಗೆ ಉತ್ತರವಾಗಿ ಹಂಗಾಮಿ ಅಧ್ಯಕ್ಷ ಜಗದೀಶ ಬೆಟಗೇರಿ ಉತ್ತರಿಸುವ ಯತ್ನ ಮಾಡಿದರು ಮತ್ತು ತಾವು ತಮ್ಮ ಅವಧಿ ಮುಗಿದ ಬಗ್ಗೆ ಹಂಗಾಮಿಯಾಗಿದ್ದು ರಾಜ್ಯದ ವಿವಿಧ ಜಿಲ್ಲೆಯ ಪದಾಧಿಕಾರಿಗಳ ಅವಧಿ ಸಹ ತನ್ನಿಂದ ತಾನೆ ಮುಗಿದಂತೆ ಎಂದು ತಿಳಿಸಿದರು ಮತ್ತು ಹಿರಿಯರ ಕೋರ ಕಮೀಟಿ ರಚಿಸಿ ಹೊಸ ಕಾರ್ಯ ಕಾರಿ ಸದಸ್ಯರನ್ನ ಜಿಲ್ಲಾವಾರು ಆಯ್ಕೆಯ ಬಗ್ಗೆ ಕೋರಿದರು ಮತ್ತು ಸಹಕಾರ ಸಂಘದ ರಿಜಿಸ್ಟಾರ ಮೂಲಕ ಚುನಾವಣೆಗೆ ಮುಂದಾದರೆ ಸಂಘದ ಹಣ ಪೋಲಾಗುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದರಲ್ಲದೇ ಸಂಘದ ಮಾಜಿ ಕಾರ್ಯದರ್ಶಿ ಮಾತನಾಡಲು ಅವಕಾಶ ನೀಡದಿದ್ದರೆ ಸಭೆಯಿಂದ ಎದ್ದು ಹೋಗುವದಾಗಿ ಹೊರಟುನಿಂತಾಗ ಸಭೆಯಲ್ಲಿ ಕೆಲಕ್ಷಣ ಗೊಂದಲ ಮತ್ತು ಉದ್ವಿಘ್ನತೆ ತಲೆದೂರಿತು. ಇತರೆ ಹಿರಿಯರಿಗೆ ಮಾತನಾಡಲು ನೀಡಿದ ಅವಕಾಶವನ್ನು ಸುನೀಲ ಮದಲಬಾವಿಯವರಿಗೆ ನೀಡಿದರು ಆಗ ಅವರು ಕಳೆದ ಎರಡು ವರ್ಷಗಳ ಅವಧಿಯಲ್ಲಿನ ತಮ್ಮ ಸಾಧನೆಯನ್ನ ಸಭೆಗೆ ತಿಳಿಸುವ ಪ್ರಯತ್ನ ಮಾಡಿದರು ಮತ್ತು ಹೊಸ ಆಯ್ಕೆಗೆ ಜಿಲ್ಲಾವಾರು ಅವಿರೋಧ ಯತ್ನದ ಮೂಲಕ ಲಭ್ಯವಿರುವ ಸಂಖ್ಯಾನುಸಾರ ಆಯ್ಕೆ ಬಗ್ಗೆ ಪ್ರಸ್ತಾಪಿಸಿ ಸಂಘದ ಹಣದ ಬಗ್ಗೆ ಕಾಳಜಿ ಹೇಳಿದರು ಮತ್ತು ಕಳೆದ ೨೦/೦೧/೨೦೨೬ ಕ್ಕೆ ಅವಧಿ ಮುಗಿದ ಬಗ್ಗೆ ವ ಅವಧಿ ಯಸಶ್ವಿ ಪೂರೈಸಿದ ಬಗ್ಗೆ ಪತ್ರ ಸಲ್ಲಿಸಿದ ಬಗ್ಗೆ ಸ ಸಾ ಸಭೆ ನಡೆಸಲು ಪರವಾನಿಗೆ ಕೋರಿ ಡಿ .ಆರ ರವರಿಗೆ ಪತ್ರ ಬರೆದ ಬಗ್ಗೆ ತಿಳಿಸಿದರು. (ಎಲ್ಲೂ ಸಹ ತಮ್ಮ ವಿವರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ/ ಮೂಲೆಗಳಿಂದ ಸಂಘಕ್ಕೆ ಬಂದ ಲಿಖಿತ ಪತ್ರಗಳ ಬಗ್ಗೆ ದೂರೂಗಳ ಬಗ್ಗೆ ಚಕಾರವೆತ್ತಲಿಲ್ಲ) ಮತ್ತು ಆ ಬಗ್ಗೆ ಏನೂ ಹೇಳದೇ ನಾನು ನಿಮ್ಮೊಂದಿಗಿದ್ದೇನೆ. ನನಗೆ ಕರೆಮಾಡಿ ಎಂದರು, ಅಧಿಕಾರಿಯೊಬ್ಬರು ಸಹಕರಿಸಿದ ಬಗ್ಗೆ ,ತಾವೊಬ್ಬರೇ ಸಂಘದ ಹಿತಕ್ಕೆ ಶ್ರಮಿಸಿದ ಬಗ್ಗೆ ದಾಖಲೆಗಳ ಸರಿಪಡಿಸಿದ ಬಗ್ಗೆ ಹೇಳಿದರು ಆದರೆ (ತಮ್ಮ ವಿವರದಲ್ಲಿ ಒಳಮೀಸಲಾತಿ ಮತ್ತು ಸಮಾಜದ ಪಾಲಿನ ಬಗ್ಗೆ ಚಕಾರವೆತ್ತಲಿಲ್ಲ.) ಭೀಮರಾವ್ ಪವಾರ ಮಾತನಾಡಿ ರಾಜ್ಯದಲ್ಲಿ ಬಹುಪಾಲು ಸಮಗಾರ(ಚಮ್ಮಾರ)ರು ಇರುವದು ಬೆಳಗಾವಿ ಜಿಲ್ಲೆಯಲ್ಲಿ ಅವರು ಬಡವರಾಗಿದ್ದು ಅವರೆಲ್ಲರನ್ನ ಜೊತೆಗೆ ಕರೆದೊಯ್ಯುವ ಕೆಲಸ ವಾಗಬೇಕಿದೆ ಎಂದರು. ಮಾಜಿ ಉಪಾಧ್ಯಕ್ಷರಾದ ಪರಶುರಾಮ ಅರಕೇರಿ ಯವರು ಮಾತನಾಡಿ ಮನೆಯಿಂದ ಊಟದ ಬುತ್ತಿಕಟ್ಟಿಕೊಂಡು ಬೆಂಗಳೂರಿಗೆ ಹೋಗಿ ಕೆಲಸ ಮಾಡಿದ ಬಗ್ಗೆ ಮತ್ತು ಮಾಜಿ ಸದಸ್ಯರು ಸಭೆಗೆ ಹಾಜರಾಗಲು ಟಿಎ ಡಿಎ ಕೇಳುತ್ತಿದ್ದು ಸಂಘ ಅಷ್ಟು ಶಕ್ತಿಶಾಲಿಯಾಗಿಲ್ಲವೆಂದು ಹೇಳಿದರು ತಮ್ಮ ಊರು ಓಣಿಗಳಲ್ಲಿ ಸಮಾಜ ಕಟ್ಟುವ ಕೆಲಸದ ಬಗ್ಗೆ ಮಾತನಾಡುತ್ತಿರುವಾಗ ಜಿಲ್ಲೆಯೊಂದರ ಹಲವು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಅವಿರೋಧ ವಾದರೂ ಸರಿ ಚುನಾವಣೆ ಎಂದರೂ ಸರಿ ಎಂದು ತಮ್ಮ ಮಾತು ಮುಗಿಸಿದರು. ಸದಸ್ಯರಾದ ವಾಯ್ ಸಿ ಕಾಂಬ್ಳೆ ಮಾತನಾಡಿ ಅವಿರೋಧ ಆಯ್ಕೆಯ ಬಗ್ಗೆ ಸಹಮತ ವ್ಯಕ್ತಪಡಿಸಿ ಜಿಲ್ಲಾವಾರು ಪಾರದರ್ಶಕ ಆಯ್ಕೆ ಬಗ್ಗೆ ಹೇಳಿದರು ಮತ್ತು ಕೋರ ಕಮೀಟಿ ಯ ಹೆಸರನ್ನ ಹಿರಿಯರ ಸಮಿತಿ ಎಂದರೆ ಸೂಕ್ತ ಮತ್ತು ಅದರಲ್ಲಿರುವವರು ಇಸಿ ಸದಸ್ಯರಾಗುವಂತಾದರೆ ತಪ್ಪು ಎಂದು ತಿಳಿಸಿದರು. ಸಭೆಯ ಹಿರಿಯರಾದ ಡಾ ಮೋಹನ ಉಳ್ಳಿಕಾಶಿ ಯವರು ಕೊನೆಯದಾಗಿ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತ ನಾವು ಸಮಗಾರಸಮುದಾಯ ದವರು ಅಸ್ಪೃಶ್ಯರಲ್ಲೇ ಸ್ವಲ್ಪ
ಸುಸಂಕೃತರು ಎಂದು ಕರೆಸಿಕೊಳ್ಳುತ್ತೇವೆ. ಅದಕ್ಕೆ ಅನುಗುಣವಾಗಿ ಸಮಾಜವನ್ನು ಕಟ್ಟೋಣ. ಒಗ್ಗಟ್ಟಾಗಿ ಸಂಘಟನೆ ಎಂಬ ಸಸಿಗೆ ಎಲ್ಲರೂ ನೀರೇರದು ಹೆಮ್ಮರವಾಗಿ ಬೆಳೆಸಿ ಶ್ರಮದ ಫಲ ಕೊಡುವಂತೆ ಪೋಶಿಷೋಣ ಎಂದು ಕರೆ ನೀಡಿದರು. "ಹರಳಯ್ಯ-ಕಲ್ಯಾಣಮ್ಮನವರ ಹಾದಿಯಲ್ಲಿ ಸಾಗೋಣ: ಹರಳಯ್ಯದಂಪತಿಗಳು ೧೨ ನೇ ಶತಮಾನದಲ್ಲಿ ತನ್ನ ತೊಡೆಯಚರ್ಮವನ್ನ ತೆಗೆದು ಹದಗೊಳಿಸಿ ಬಸವಣ್ಣನವರಿಗೆ ಪಾದರಕ್ಷೆ ಮಾಡಿದರು, ಅದರಂತೆ ನಾವು ನಮ್ಮ ಮನಸ್ಸುಗಳನ್ನು ಹದಗೊಳಿಸಿ ಒಗ್ಗಟ್ಟಿನಿಂದ ಸಮಾಜವನ್ನು ಕಟ್ಟೋಣ ಎಂದು ಉಪದೇಶಿಸಿದರು. ಶಿವಶರಣ ಹರಳಯ್ಯ ಮತ್ತು ಕಲ್ಯಾಣಮ್ಮನವರು ಕಾಯಕ ಹಾಗೂ ದಾಸೋಹದ ಮೂಲಕ ಜಾತಿ ಪದ್ಧತಿಯನ್ನು ಮೆಟ್ಟಿ ನಿಂತವರು. ಅವರ ಒಗ್ಗಟ್ಟಿನ ಕ್ರಾಂತಿಯೇ ಇಂದು ನಮ್ಮ ಅಸ್ಮಿತೆಗೆ ಬುನಾದಿಯಾಗಿದೆ ಎಂದು ಸ್ಮರಿಸಿ,ಭಿನ್ನಾಭಿಪ್ರಾಯ, ದ್ವೇಷ, ಅಹಮ್ಮಿಕೆ ಬಿಟ್ಟು , ಸಮುದಾಯದ ಹಿತದೃಷ್ಟಿಯಿಂದ ವಚನ ಸಂಸ್ಕೃತಿಯ ಪ್ರೇರಣೆಯಂತೆ,ಜಗಜ್ಯೋತಿ ಬಸವಣ್ಣನವರ "ಇವ ನಮ್ಮವ" ಎಂಬ ತತ್ವದಡಿ ರಾಜ್ಯ ಸಮಗಾರ(ಚಮ್ಮಾರ) ಸಂಘವನ್ನು ಬೆಳೆಸೋಣ ಎಂದು ಕರೆ ನೀಡಿದರು.ಜಿಲ್ಲೆ ಮತ್ತು ವಯಸ್ಸಿನ ಮತ್ತು ವೈಯಕ್ತಿಕ ಭೇದ ಮರೆತು ನಾವೆಲ್ಲರೂ ಸಮಗಾರ ಸಮುದಾಯದ ಮಕ್ಕಳು ಎಂಬ ಒಮ್ಮನಸ್ಸಿನಿಂದ ಬೆಳೆಯಬೇಕೆಂದು ಕರೆ ನೀಡಲಾಯಿತು.ಸಮಾಜದ ಮಹಿಳೆಯರು ಮತ್ತು ಯುವಕರು ಸಂಘಟನೆಯಲ್ಲಿ ಒಳಗೊಳ್ಳುವ ಕೊರತೆ ಬಗ್ಗೆ ವಿಷಾದಿಸಿದರು. ಇದರ ಬಗ್ಗೆ ವಿಶ್ಲೇಷಣೆ ಅವಶ್ಯ ಎಂದು ವಿವರಿಸಿದರು. ಒಕ್ಕೂಟ ಉದಕದಂತಿರಲಿ ಹಾಗೂ - "ಹೊಲಿದ ಚರ್ಮದ ಚೀಲ ಹೇಗೆ ಭಾರವನ್ನು ಹೊರುತ್ತದೆಯೋ, ಹಾಗೆಯೇ ಸಮುದಾಯವು ಒಂದಾದರೆ ಯಾವುದೇ ಕಷ್ಟವನ್ನು ಎದುರಿಸಬಹುದು. ನಮ್ಮ ಮುಂದಿನ ಪೀಳಿಗೆಯ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಒಗ್ಗಟ್ಟು ಅನಿವಾರ್ಯ" ಎಂದು ಸಭೆಯಲ್ಲಿ ಪ್ರತಿಪಾದಿಸಿದರು. ನಮ್ಮ ಗುರಿ ಒಂದೇ, ನಮ್ಮ ಹಾದಿ ಒಂದೇ... ಎಂಬ ಸಂದೇಶ ದೊಂದಿಗೆ ತಮ್ಮ ಹಿತನುಡಿಯನ್ನು ಮುಕ್ತಾಯಗೊಳಿಸಿದರು. ಗುರುನಾಥ -ಉಳ್ಳಿಕಾಶಿ ಸುಮಾರು ೧೬+೩ ಜನ ಹಿರಿಯ ಕೋರ ಕಮೀಟಿ ಸದಸ್ಯರ ಹೆಸರನ್ನ ಸಭೆಗೆ ತಿಳಿಸಿದರು ಎಲ್ಲರೂ ಚಪ್ಪಾಳೆಯ ಮೂಲಕ ಒಪ್ಪಿಗೆ ಸೂಚಿಸಿದರು. *ಸೂಕ್ತ ಹಿರಿಯರ ಕೋರ ಕಮೀಟಿ ರಚಿಸುವ ಹೊಣೆಯನ್ನ ಹಿರಿಯರಾದ ಡಾ: ಮೋಹನ್ ಉಳ್ಳಿಕಾಶಿ ರವರಿಗೆ ನೀಡಲಾಯಿತು* ಹೇಗಾದರೂ ಸರಿ ಎರಡು ಮೂರೂ ಗಂಟೆಗೆ ಸಭೆ ಮುಗಿಸಬೇಕೆನ್ನುವ ಆಯೋಜಕರ ಆಸೆ ನೆರವೇರಲಿಲ್ಲ. ಸಭೆಯು ಸಂಜೆ ೬-೪೫ರವರೆಗೆ ನಿರರ್ಗಳವಾಗಿ ನೆರವೇರಿತು. ಇಷ್ಟೊಂದು ಸಹಕಾರ ನೀಡಿದ ಸಭೆಯ ಯಶಸ್ಸಿಗೆ ಕಾರಣರಾದ ಸಮಾಜದ ಸಕಲ ಹಿರಿಯರಿಗೆ ನಿವ್ರತ್ತ ನೌಕರ ವರ್ಗಕ್ಕೆ,ಕೇವಲ ಒಂದೆ ರಜೆ ಮತ್ತು ಮಹಾಶಿವರಾತ್ರಿ ಇದ್ದಾಗ್ಯೂ ಸಭೆಗೆ ಆಗಮಿಸಿ ಸಹಕರಿಸಿದ ನೌಕರ ಬಾಂಧವರ ಕಳಕಳಿಗೆ,ತಮ್ಮ ಅನಾರೋಗ್ಯ ಬದಿಗೊತ್ತಿ ಸಭೆಯ ಸಭಾಂಗಣ ತುಂಬಿದ ಹಿರಿಯರಿಗೆ,ಮಹಿಳೆಯರಿಗೆ ಯುವ ಸಮಾಜದ ಮುಖಂಡರಿಗೆ ಸಭೆಗೆ ಆಗಮಿಸಿದ ಸಕಲ ಸಮಗಾರ(ಚಮ್ಮಾರ) ಬಾಂಧವರಿಗೆ ಪತ್ರಕರ್ತರಿಗೆ ಪ್ರತ್ಯಕ್ಷ ಪರೋಕ್ಷ ಸಹಕರಿಸಿ ಸಭೆಯ ಆಶಯಗಳಿಗೆ ಸ್ಪಂದಿಸಿದ ಮಾಜಿ ಸಮಿತಿಯವರಿಗೆ ಸಭೆಯ ಆಯೋಜಕರಾಗಿ ನಿರ್ವಹಣೆಗಾರರಾಗಿ ಗುರುನಾಥ -ಉಳ್ಳಿಕಾಶಿ ಶರಣುಶರಣಾರ್ಥಿಗಳನ್ನ ಸಲ್ಲಿಸಿದರು. *ಕೋರ ಕಮೀಟಿಯ ಸದಸ್ಯರ ವಿವರ* 1)ಡಾ.ಮೋಹನ ಉಳ್ಳಿಕಾಶಿ (ಕೋರ ಕಮೀಟಿಯ ಪ್ರಮುಖರು) 2)ಜಗದೀಶ ಬೆಟಗೇರಿ 3)ಭೀಮರಾವ ಪವಾರ 4)ವೈ.ಸಿ.ಕಾಂಬಳೆ 5)ಮೈಲಾರೆಪ್ಪ ಸೌದಾಗರ 6)ರಾಜಕುಮಾರ ಟಿಳೇಕರ 7)ಸುಭಾಷ ಕಾನಡೆ 8)ವಸಂತ ಮನಗೂಳಿ 9)ಗೋವಿಂದ ನಾಯ್ಕ 10)ಸುಬ್ಬಣ್ಣ 11)ಎ.ಎಸ್.ರಾಯಮಾನೆ 12)ಅಪ್ಪಾಸಾಹೇಬ ಮನಗೂಳಿ 13)ಬಸವರಾಜ ಮಾನೆ 14)ಶೇಖರ ಸೌದಾಗರ 15)ಪ್ರಶಾಂತ ಹೊಸಮನಿ 16)ಪರಶುರಾಮ ಅರಕೇರಿ 17)ಗುರುನಾಥ ಉಳ್ಳಿಕಾಶಿ 18)ಆನಂದ ಮದನಭಾವಿ 19)ವಿರುಪಾಕ್ಷಿ ಗಾಮನಗಟ್ಟಿ ರವರು *ಕೋರ ಕಮೀಟಿಯಲ್ಲಿರುತ್ತಾರೆ* ಸಭೆಯಲ್ಲಿ ಹಿರಿಯರಾದ ಮಾರ್ಕಂಡೇಯ ದೊಡ್ಡಮನಿ ಡಾ:ಮೋಹನ್ ಉಳ್ಳಿಕಾಶಿ ಜಗದೀಶ ಬೆಟಗೇರಿ ಪರಶುರಾಮ ಅರಕೇರಿ ಗುರುನಾಥ ಉಳ್ಳಿಕಾಶಿ ಆನಂದ ಮೊದಲಬಾವಿ ಧರ್ಮಣ್ಣಾ ಸಾಣಕೇನವರ ಭೀಮರಾವ್ ಪವಾರ ಮಹಾದೇವ್ ಕಬಾಡೆ ಸುನೀಲ ಮದಲಬಾವಿ ಅಶೋಕ ಸೌದಾಗರ ಎಲ್ಲಪ್ಪ ಬೆಂಡಿಗೇರಿ ಗೋವಿಂದ ನಾಯ್ಕ ಚನ್ನವೀರ ಗಾಮನಗಟ್ಟಿ ಹನಮಂತ ಕದಂ ಮಹಾದೇವರಾವ್ ಬಿಜಾಪುರ ಅರ್ಜುನ ಕಾಂಬ್ಳೆ ಬಸವರಾಜ ಮಾನೆ ವಿಠ್ಟಲ ಸೂರ‍್ಯವಂಶಿ ಫಕ್ಕೀರಪ್ಪ ಬೆಟಗೇರಿ ಬಿ ಆರ ಕಟ್ಟಿಮನಿ ಅಶೋಕ ಸೌದಾಗರ ನಾಗರಾಜ ಕಲಾದಗಿ ಶಂಕರ ಜಮಖಂಡಿ ಲೋಹಿತ ಗಾಮನಗಟ್ಟಿ ಸಂಜೀವ್ ಲೋಕಾಪುರ ರಾಘವೇಂದ್ರ ಶಾಹಪೂರ ಸಂದೀಪ ಮಿಶ್ರೀಕೋಟಿ ಮಂಜುಳಾ ಬೆಣಗಿ ಪ್ರೇಮಾ ಭಂಢಾರಿ ಚಂದ್ರಶೇಖರ ಮುಂಡೇವಾಡಿ ಪರಮಾನಂದ ಹಳ್ಳೂರ ಮುತ್ತಣ್ಣ ಕಬಾಡೆ ಮೈಲಾರೆಪ್ಪ ಸೌದಾಗರ ಭರಮರೆಡ್ಡಿ ದೊಡ್ಡಮನಿ ಪ್ರಶಾಂತ ಹೊಸಮನಿ ರಮೇಶ ಸಾಂಬ್ರಾಣಿ ರಾಜಕುಮಾರ- ಟಿಳೇಕರ್ ರಾಜು -ವಿಜಾಪುರ ಸಚಿನ್ -ಕೊಡ್ತೆ ಶ್ರೀನಿವಾಸ -ಶಹಾಪುರ ಡಾ: ಶಿವಾನಂದ -ದೊಡ್ಡಮನಿ ವಸಂತ -ಮನಗೂಳಿ ಅಡಿವೆಪ್ಪ- ಚಂದಾವರಿ ಎಲ್ಲಪ್ಪ -ಸಾಣಕೇನವರ ಅಶೋಕ -ಭಂಢಾರಿ ಸುನೀಲ್ -ಮಿರಜಕರ ಅನಿಲ -ಸೌದಾಗರ ಪ್ರಭು -ಅಣ್ಣಿಗೇರಿ ಸಂತೋಷ -ಹೊಂಗಲ್ಲ ವಸಂತ -ಬೆಟಗೇರಿ ಪ್ರಥ್ವಿ -ಬೆಟಗೇರಿ ಧ್ರುವ ಗಾಮನಗಟ್ಟಿ ಮಂಜುನಾಥ ಸಣ್ಣಕ್ಕಿ ಕಿರಣ ಗಾಮನಗಟ್ಟಿ ಶ್ರೀಪಾದ ಬೆಟಗೇರಿ ಹಾಗೂ ಸಮಗಾರ(ಚಮ್ಮಾರ) ಸಮಾಜದ ಇನ್ನೂ ನೂರಾರು ಪ್ರಮುಖರು ಉಪಸ್ಥಿತರಿರುವ ಮೂಲಕ ಮಾತನಾಡಿ ತಮ್ಮ ಸಮಾಜದ ಕಳಕಳಿ ವ್ಯಕ್ತಪಡಿಸಿದರು. ವಂನಾರ್ಪಣೆಗಳೊಂದಿಗೆ ಸಭೆಯನ್ನ ಮೊಟಕುಗೊಳಿಸಲಾಯಿತು.
- Tandav by Small Child ?1
- ಹುಬ್ಬಳ್ಳಿ ರಣಹದ್ದು ಜಾಗೃತಿ ಸಿಟಿ ನೆಷ್ಟ ನ್ಯೂಸ್ 24/7 ಕನ್ನಡವಾಗಿದೆ ಸುದ್ದಿ ವಾಹಿನಿ. ಕನ್ನಡ ಟೆಲಿವಿಷನ್ ನ್ಯೂಸ್‌ನಲ್ಲಿ ಹಿಂದೆಂದೂ ಕಾಣದ ಉತ್ತಮ ಗುಣಮಟ್ಟದ ಸುದ್ದಿ ವಿಷಯವನ್ನು ತಲುಪಿಸುವುದು. 'ಲೈವ್' ಕನ್ನಡ ಹಾಗೂ ಹಿಂದಿ ಸುದ್ದಿಯನ್ನು ಕರ್ನಾಟಕದ ಮನೆ ಬಾಗಿಲಿಗೆ ತಂದ ತಂಡದಿಂದ ಪ್ರಚಾರ. ಈ ಧೈರ್ಯಶಾಲಿ, ವಿಶ್ವಾಸಾರ್ಹ ಮತ್ತು ದೃಢನಿರ್ಧಾರದ ತಂಡವು ನಿಮಗೆ 'ಯಾವುದೇ ವೆಚ್ಚದಲ್ಲಿ' ವಿಶ್ವಾಸಾರ್ಹ ಸುದ್ದಿಯನ್ನು ತರುತ್ತದೆ ಪಡೆಯುವಲ್ಲಿ ಮೊದಲಿಗರಾಗಿರಿ: - ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳನ್ನು ಬ್ರೇಕಿಂಗ್ - ವ್ಯಾಪಕವಾದ ಹೈಪರ್ ಸ್ಥಳೀಯ ಸುದ್ದಿ - ಕರ್ನಾಟಕದ ರಾಜಕೀಯದ ಆಳವಾದ ಕವರೇಜ್ - ವಿವರವಾದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿ - ಇತ್ತೀಚಿನ ಕ್ರೀಡಾ ಪಂದ್ಯಗಳು, ಅಂಕಗಳು ಮತ್ತು ಇನ್ನಷ್ಟು - ವಿಶಾಲವಾದ ಸಿನಿಮಾ ವ್ಯಾಪ್ತಿ ಮತ್ತು ದೊಡ್ಡದು ಸ್ಟಾರ್ ಕಥೆಗಳು - ಪ್ರಪಂಚದಾದ್ಯಂತ ಆಸಕ್ತಿದಾಯಕ ಕಥೆಗಳು *PLEASE SUBSCRIBE CITY NEXT NEWS 24 7*1
- Post by Nitishgoud Tadas Patil press r1
- ಶಿಗ್ಗಾವಿ, ತಾಲೂಕಿನ ಗಂಜೀಗಟ್ಟಿ ಗ್ರಾಮದಲ್ಲಿನ ಚರಮೂರ್ತೆಶ್ವರ ಮಠದಲ್ಲಿ ಶಿವರಾತ್ರಿ ಅಂಗವಾಗಿ ಭವ್ಯ ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ನಂತರ ಮಠದ ಆವರಣದಲ್ಲಿ ಸಾವಿರಾರೂ ಭಕ್ತರು ಪ್ರಸಾದ ಸವಿದರು. ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರುಗಿದವು ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.2
- ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಸುರಪಗಟ್ಟಿ ಗ್ರಾಮದ ಶ್ರೀ ಹನುಮಂತಪ್ಪ ಮೆತ್ತಿಗಟ್ಟಿ ಇವರಿಗೆ ಸೇರಿದ ಮೆಕ್ಕೆ ಜೋಳದ ಮೇವುಗೆ ಆಕಸ್ಮಿಕ ಬೆಂಕಿ ತಗಲಿ ಅಪಾರ ಪ್ರಮಾಣದ ಮೇವು ಸುಟ್ಟು ಕರಲಾಗಿದೆ, ಗ್ರಾಮದ ನಾಗರಿಕರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿ ಬೆಂಕಿ ಆರಿಸಿದ್ದರು, ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಹಾನಿಯಾದ ಬಗ್ಗೆ ತಹಶೀಲ್ದಾರ್ ಗೆ ಮಾಹಿತಿ ನೀಡಲಾಯಿತು,2
- ರಾಮದುರ್ಗ : ಸುರೇಬಾನ ನಾಡಕಚೇರಿ ಮುಂಭಾಗದಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ತಿಂದು ಉಗುಳಲು ಬಕೆಟ್ ಇಡುತ್ತಿರುವ ದೃಶ್ಯ ಕಂಡು ಬಂದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರತಿ ದಿನ ಸಾವಿರಾರು ಜನರು ವಿವಿಧ ಸರ್ಕಾರಿ ಕೆಲಸಗಳಿಗಾಗಿ ನಾಡಕಚೇರಿಗೆ ಭೇಟಿ ನೀಡುತ್ತಾರೆ. ಇಂತಹ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕಾದ ಜವಾಬ್ದಾರಿ ಅಧಿಕಾರಿಗಳದ್ದಾಗಿದ್ದರೂ, ಆವರಣದಲ್ಲಿ ಅಸ್ವಚ್ಛತೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ. ಇನ್ನೂ ಆತಂಕಕಾರಿ ವಿಷಯವೆಂದರೆ, ನಾಡಕಚೇರಿ ಆವರಣದಲ್ಲೇ ಪೂರ್ವ ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ದಿನನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾನ್ ಮಸಾಲ ಹಾಗೂ ಗುಟ್ಕಾ ಉಗುಳುವಿಕೆ ಮಕ್ಕಳ ಆರೋಗ್ಯಕ್ಕೂ ಹಾನಿಕಾರಕವಾಗುವ ಸಾಧ್ಯತೆ ಇದೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಮತ್ತು ಸಾರ್ವಜನಿಕರು ಅಧಿಕಾರಿಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣ ಎಂದು ಆರೋಪಿಸಿದ್ದಾರೆ. ತಕ್ಷಣವೇ ಸ್ವಚ್ಛತಾ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಿಕೆ ನಿಷೇಧಿಸಲು ಕಠಿಣ ಕ್ರಮ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.3
- ಬೆಳಗಾಂವ ಜಿಲ್ಲಾ ರಾಮದುರ್ಗ ತಾಲೂಕಿನ ಹೊಸಕೋಟೆ ಗ್ರಾಮದ ಸಾರ್ವಜನಿಕರು ರಾಮದುರ್ಗ ತಾಲೂಕಿಗೆ ಬಂದಂತ ಆರೋಗ್ಯ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿ ತಮ್ಮ ಅಳಿಲನ್ನು ಮಾಧ್ಯಮದವರ ಮುಂದೆ ಹೇಳಿಕೊಂಡರು. ಹೊಸಕೋಟೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಬ್ಬ ಡಾಕ್ಟರ್ ಇದ್ದು ಎರಡು ವರ್ಷದಿಂದ ಅವರ ಸೇವೆ ಒಳ್ಳೆ ತರಹ ಮಾಡುತ್ತಾ ಬಂದಿದ್ದು ಹೊಸಕೋಟೆ ಗ್ರಾಮದ ಸುತ್ತು ಮುತ್ತಿಲಿನ ಹಳ್ಳಿಗಳಿಗೆ ಇವರ ಸೇವೆ ಅಚ್ಚುಮೆಚ್ಚಿಗೆ ಪಾತ್ರರಾಗಿದ್ದಾರೆ. ಈಗ ಸರ್ಕಾರದವರು ಇವರನ್ನು ವರ್ಗಾವಣೆ ಮಾಡಿದ್ದಕ್ಕೆ ಹೊಸಕೋಟೆ ಗ್ರಾಮಸ್ಥರು ಅವರನ್ನು ವರ್ಗಾವಣೆ ಮಾಡದಂತೆ ಮನವಿ ಸಲ್ಲಿಸಿ ತಮ್ಮ ಅನಿಸಿಕೆಗಳನ್ನು ಮಾಧ್ಯಮದವರು ಮುಂದೆ ಹೇಳಿಕೊಂಡು ಅವರನ್ನು ವರ್ಗಾವಣೆ ಮಾಡಿದಲ್ಲಿ ಜಿಲ್ಲಾಮಟ್ಟದಲ್ಲಿ ಸತ್ಯಾಗ್ರಹ ಮಾಡಲಾಗುವುದೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.1
- This is new rumors spreading by Pakistani media, Shame1