ಗಜಪಡೆಗೆ ಭರ್ಜರಿ ಸ್ವಾಗತಕ್ಕೆ ಸಿದ್ಧತೆ: ಅರಮನೆ ಅಂಗಳದಲ್ಲಿ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಹಿನ್ನೆಲೆಯಲ್ಲಿ ಗಜಪಡೆ ಆಗಮನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಆನೆಗಳ ವಾಸ್ತವ್ಯಕ್ಕಾಗಿ ಅರಮನೆ ಆವರಣದಲ್ಲಿ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆಗಸ್ಟ್ 26ರಂದು ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸಲಿವೆ. ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ನಡೆಯಲಿರುವ ಗಜಪಯಣ ಕಾರ್ಯಕ್ರಮದ ಮೂಲಕ ಕಾಡಿನಿಂದ ನಾಡಿಗೆ ಗಜಪಡೆ ಕಾಲಿಡಲಿದೆ. ಬಳಿಕ ವೀರನಹೊಸಹಳ್ಳಿಯಿಂದ ಮೈಸೂರಿನ ಅರಣ್ಯ ಭವನಕ್ಕೆ ಆನೆಗಳು ಆಗಮಿಸಲಿವೆ. ಅರಣ್ಯ ಭವನದಲ್ಲಿ ಎರಡು ದಿನ ವಾಸ್ತವ್ಯ ಹೂಡುವ ಗಜಪಡೆ, ಆಗಸ್ಟ್ 28ರಂದು ಅರಮನೆ ಆವರಣ ಪ್ರವೇಶಿಸಲಿದೆ. ಜಂಬೂಸವಾರಿ ಮೆರವಣಿಗೆ ಮುಗಿಯುವವರೆಗೂ ಅರಮನೆ ಆವರಣದಲ್ಲೇ ಆನೆಗಳು ವಾಸ್ತವ್ಯ ಹೂಡಲಿವೆ. ಆನೆಗಳ ಜೊತೆಗೆ ಮಾವುತರು ಹಾಗೂ ಕಾವಾಡಿಗಳ ಕುಟುಂಬದವರ ವಾಸ್ತವ್ಯಕ್ಕೂ ಅರಮನೆ ಆವರಣದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಇನ್ನೂ 3 ಆನೆಗಳ ತಂಡ ಮೈಸೂರಿಗೆ ಆಗಮಿಸಲಿದೆ.
ಗಜಪಡೆಗೆ ಭರ್ಜರಿ ಸ್ವಾಗತಕ್ಕೆ ಸಿದ್ಧತೆ: ಅರಮನೆ ಅಂಗಳದಲ್ಲಿ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಹಿನ್ನೆಲೆಯಲ್ಲಿ ಗಜಪಡೆ ಆಗಮನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಆನೆಗಳ ವಾಸ್ತವ್ಯಕ್ಕಾಗಿ ಅರಮನೆ ಆವರಣದಲ್ಲಿ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆಗಸ್ಟ್ 26ರಂದು ಮೊದಲ ಹಂತದಲ್ಲಿ 9 ಆನೆಗಳು ಮೈಸೂರಿಗೆ ಆಗಮಿಸಲಿವೆ. ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ನಡೆಯಲಿರುವ ಗಜಪಯಣ ಕಾರ್ಯಕ್ರಮದ ಮೂಲಕ ಕಾಡಿನಿಂದ ನಾಡಿಗೆ ಗಜಪಡೆ ಕಾಲಿಡಲಿದೆ. ಬಳಿಕ ವೀರನಹೊಸಹಳ್ಳಿಯಿಂದ ಮೈಸೂರಿನ ಅರಣ್ಯ ಭವನಕ್ಕೆ ಆನೆಗಳು ಆಗಮಿಸಲಿವೆ. ಅರಣ್ಯ ಭವನದಲ್ಲಿ ಎರಡು ದಿನ ವಾಸ್ತವ್ಯ ಹೂಡುವ ಗಜಪಡೆ, ಆಗಸ್ಟ್ 28ರಂದು ಅರಮನೆ ಆವರಣ ಪ್ರವೇಶಿಸಲಿದೆ. ಜಂಬೂಸವಾರಿ ಮೆರವಣಿಗೆ ಮುಗಿಯುವವರೆಗೂ ಅರಮನೆ ಆವರಣದಲ್ಲೇ ಆನೆಗಳು ವಾಸ್ತವ್ಯ ಹೂಡಲಿವೆ. ಆನೆಗಳ ಜೊತೆಗೆ ಮಾವುತರು ಹಾಗೂ ಕಾವಾಡಿಗಳ ಕುಟುಂಬದವರ ವಾಸ್ತವ್ಯಕ್ಕೂ ಅರಮನೆ ಆವರಣದಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗುತ್ತಿದೆ. ಎರಡನೇ ಹಂತದಲ್ಲಿ ಇನ್ನೂ 3 ಆನೆಗಳ ತಂಡ ಮೈಸೂರಿಗೆ ಆಗಮಿಸಲಿದೆ.
- ಅಭಿಮನ್ಯುವಿಗೆ ಗೌರವದ ಬೀಳ್ಕೊಡುಗೆ: ವೀರನಹೊಸಹಳ್ಳಿಯಲ್ಲಿ ಭಾವುಕ ಕ್ಷಣ ಮೈಸೂರು ದಸರಾ ಜಂಬೂಸವಾರಿಯಲ್ಲಿ ಹಲವು ವರ್ಷಗಳ ಕಾಲ ಅಂಬಾರಿ ಹೊತ್ತು ನಾಡಿನ ಗಮನ ಸೆಳೆದ ದಸರಾ ಆನೆ ಅಭಿಮನ್ಯುವಿಗೆ ವೀರನಹೊಸಹಳ್ಳಿಯಲ್ಲಿ ಗೌರವದ ಬೀಳ್ಕೊಡುಗೆ ನೀಡಲಾಯಿತು. 2026ರ ದಸರಾ ಗಜಪಯಣಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಅಭಿಮನ್ಯುವಿನ ದೀರ್ಘಕಾಲದ ಸೇವೆಯನ್ನು ಗಣ್ಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಮರಿಸಿದರು. ದಸರಾ ಆನೆಗಳ ಪಯಣಕ್ಕೆ ಆಗಮಿಸಿದ್ದ ಅಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಅಭಿಮನ್ಯುವಿಗೆ ಗೌರವ ಸಲ್ಲಿಸಿದರು. ಈ ವೇಳೆ ಅಭಿಮನ್ಯುವಿನ ಸೇವೆಯನ್ನು ನೆನಪಿಸಿಕೊಂಡು ಭಾವುಕ ವಾತಾವರಣ ನಿರ್ಮಾಣವಾಗಿತ್ತು.1
- ಟಾಕ್ಸಿಕ್ ಯಶಸ್ಸಿಗೆ ರಕ್ತದಾನ; ಯಶ್ ಅಭಿಮಾನಿಗಳ ವಿಭಿನ್ನ ಶುಭಾಶಯ ಮೈಸೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರ ವಿಶ್ವದಾದ್ಯಂತ ತೆರೆಕಾಣುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಯಶ್ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಶುಭಕೋರಿದ್ದಾರೆ. ಸಿನಿಮಾ ಯಶಸ್ಸಿಗಾಗಿ ಕೇವಲ ಸಂಭ್ರಮಾಚರಣೆ ನಡೆಸುವುದಕ್ಕೆ ಸೀಮಿತವಾಗದೆ, ರಕ್ತದಾನ ಮಾಡುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ನಗರದ ಸಯಾಜಿರಾವ್ ರಸ್ತೆಯಲ್ಲಿರುವ ಜೀವಧಾರ ರಕ್ತನಿಧಿ ಕೇಂದ್ರದ ಆವರಣದಲ್ಲಿ ಯಶ್ ಅಭಿಮಾನಿಗಳು ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ವಿಶೇಷ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ನೂರಾರು ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ರಕ್ತದಾನ ಮಾಡಿದರು. ಯುವಕರು, ಮಹಿಳೆಯರು ಸೇರಿದಂತೆ ವಿವಿಧ ವಯೋಮಾನದ ಅಭಿಮಾನಿಗಳು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯ ಸಂದೇಶ ಸಾರಿದರು. ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಅಭಿಮಾನಿಗಳು ಪೋಸ್ಟರ್‌ಗಳಿಗೆ ಹಾಲಿನ ಅಭಿಷೇಕ, ಕಟೌಟ್‌ಗಳಿಗೆ ಹಾರ ಹಾಕುವುದು, ಪಟಾಕಿ ಸಿಡಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಆದರೆ ಮೈಸೂರಿನ ಯಶ್ ಅಭಿಮಾನಿಗಳು ಈ ಬಾರಿ ಸಮಾಜಕ್ಕೆ ಉಪಯುಕ್ತವಾಗುವ ಕಾರ್ಯದ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿರುವುದು ವಿಶೇಷವಾಗಿತ್ತು. ರಕ್ತದಾನದ ಮೂಲಕ ಅಗತ್ಯವಿರುವವರಿಗೆ ನೆರವಾಗುವ ಉದ್ದೇಶದಿಂದ ಶಿಬಿರ ನಡೆಸಲಾಗಿದೆ. ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ಯಶ್ ಅವರು ಯುವಜನತೆಗೆ ಪ್ರೇರಣೆಯಾಗಿದ್ದು, ಅವರ ‘ಟಾಕ್ಸಿಕ್’ ಚಿತ್ರ ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಲಿ ಎಂಬ ಆಶಯದಿಂದ ಈ ಮಾನವೀಯ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು. ಅಭಿಮಾನ ಎಂದರೆ ಕೇವಲ ಸಂಭ್ರಮಿಸುವುದಲ್ಲ; ಸಮಾಜಕ್ಕೆ ಉಪಯೋಗವಾಗುವ ಕೆಲಸ ಮಾಡುವುದೂ ಅಭಿಮಾನದ ಒಂದು ರೂಪ ಎಂಬ ಸಂದೇಶವನ್ನು ಶಿಬಿರದ ಮೂಲಕ ಸಾರಲಾಗಿದೆ ಎಂದರು. ಶಿಬಿರದಲ್ಲಿ ಪಾಲ್ಗೊಂಡ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ತಮ್ಮ ನೆಚ್ಚಿನ ನಟನಿಗೆ ವಿಭಿನ್ನ ರೀತಿಯಲ್ಲಿ ಶುಭಾಶಯ ಸಲ್ಲಿಸಿದರು. ಸಿನಿಮಾ ಯಶಸ್ವಿಯಾಗುವುದರ ಜೊತೆಗೆ ರಕ್ತದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವೂ ಇದರಿಂದ ನಡೆಯಿತು. ಯಶ್ ಅವರ ಚಿತ್ರ ಬಿಡುಗಡೆ ಸಂಭ್ರಮವನ್ನು ಸಾಮಾಜಿಕ ಸೇವೆಯೊಂದಿಗೆ ಬೆಸೆದ ಅಭಿಮಾನಿಗಳ ಈ ನಡೆ ಸಾರ್ವಜನಿಕರ ಗಮನ ಸೆಳೆಯಿತು.1
- ಮಾಮರ ಸೌಹಾರ್ದ ಸಹಕಾರ ಸಂಘದ ವತಿಯಿಂದ ಸದಸ್ಯರಿಗೆ ಅಗತ್ಯ ಎಲ್ಲಾ ಮೂಲ ಸೌಲಭ್ಯಗಳ ನೀಡಲಾಗುತ್ತಿದೆ ಮಳವಳ್ಳಿಯಲ್ಲಿ ಉಪಾಧ್ಯಕ್ಷ ಗುರುಮೂರ್ತಿ ಹೇಳಿಕೆ ಮಾಮರ ಸೌಹಾರ್ದ ಸಹಕಾರ ಸಂಘವು ಸದಸ್ಯರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಉಪಾಧ್ಯಕ್ಷ ಗುರುಮೂರ್ತಿ ಸೌಲಭ್ಯಗಳ ಕುರಿತು ಮಾಹಿತಿ1
- ಕರ್ನಾಟಕದ ಪಾಲಿಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಸತ್ತುಹೋಗಿದೆ ಎಂದು ಎಳ್ಳು, ನೀರು ಬಿಟ್ಟು ರಸ್ತೆತಡೆ ನಡೆಸಿ ಅಕ್ರೋಶ ಕಾವೇರಿ ನೀರು ನಿರ್ವಹಣಾ ಸಮಿತಿ ವಿರುದ್ದ ಪ್ರತಿಭಟನೆ ವರದಿ: ಹೊಮ್ಮನಂಜುಂಡನಾಯಕ ಕರ್ನಾಟಕದ ಪಾಲಿಗೆ ಕಾವೇರಿ ನೀರು ನಿರ್ವಹಣಾ ಸಮಿತಿ ಸತ್ತುಹೋಗಿದೆ ಎಂದು ಎಳ್ಳು, ನೀರು ಬಿಟ್ಟು ಅಕ್ರೋಶ ರಾಷ್ಟ್ರೀಯ ಜಲನೀತಿ ಜಾರಿಗೆ ಶ್ರೀನಿವಾಸಗೌಡ ಆಗ್ರಹ ಚಾಮರಾಜನಗರ: ಕಾವೇರಿ ನೀರು ನಿರ್ವಹಣಾ ಸಮಿತಿಯು ಕರ್ನಾಟಕದ ಪಾಲಿಗೆ ಸತ್ತು ಹೋಗಿದೆ ಎಂದು ಆರೋಪಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಎಳ್ಳು, ನೀರು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ನಗರದ ಭುವನೇಶ್ವರಿ ವೃತ್ತದಲ್ಲಿ ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಜಮಾಯಿಸಿದ್ದ ಪ್ರತಿಭಟನಾನಿರತರು ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ದ ಘೋಷಣೆ ಕೂಗಿ ಕಾವೇರಿ ನೀರು ನಿರ್ವಹಣಾ ಸಮಿತಿಯು ಕರ್ನಾಟಕದ ಪಾಲಿಗೆ ಸತ್ತು ಹೋಗಿದೆ ಎಂದು ಎಳ್ಳು, ನೀರು ಬಿಟ್ಟು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಕರ್ನಾಟಕದ ಪಾಲಿಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ಸತ್ತು ಹೋಗಿದೆ ಎಂದು ಎಳ್ಳು, ನೀರು ಬಿಟ್ಟು, ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ. ನಿರ್ವಹಣಾ ಸಮಿತಿಯ ಒಬ್ಬ ಸದಸ್ಯರು ಕರ್ನಾಟಕಕ್ಕೆ ಭೇಟಿ ನೀಡಿ ಇಲ್ಲಿನ ಜಲಾಶಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಿಲ್ಲ. ಅಧ್ಯಯನ ಮಾಡಿಲ್ಲ. ಕರ್ನಾಟಕದಲ್ಲಿ ಮಳೆ ಆಗಿದೆಯೋ, ಇಲ್ಲವೋ ಪರಿಶೀಲನೆ ಮಾಡಿಲ್ಲ ಅದನ್ನು ಬಿಟ್ಟು ದೆಹಲಿಯಲ್ಲಿ ಕುಳಿತು ನೀರು ಬಿಡಿ, ನೀರು ಬಿಡಿ ಎಂದರೆ ಎಲ್ಲಿಂದ ನೀರು ಬಿಡುವುದು ಎಂದು ಕಿಡಿಕಾರಿದರು. ಕರ್ನಾಟಕದ ಜಲಾಶಯಗಳು ಬತ್ತಿ ಹೋಗುತ್ತಿವೆ. ರಾಜ್ಯದಲ್ಲಿ ಜನತೆ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ.ಅತ್ಯಂತ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯದ ಜನತೆ ಇದ್ದಾರೆ. ಎರಡು ರಾಜ್ಯಗಳ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಿದೆ ಕಾವೇರಿ ನೀರು ನಿರ್ವಹಣಾ ಸಮಿತಿ ತೀರ್ಪು ನೀಡುವುದು ಅತ್ಯಂತ ಖಂಡನೀಯ ವಾದದ್ದು,ತಕ್ಷಣವೇ ಕಾವೇರಿ ನೀರು ನಿರ್ವಹಣಾ ಮಂಡಳಿ ವಜಾಮಾಡಿ ರಾಷ್ಟ್ರೀಯ ಜಲನೀತಿಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ತಮಿಳುನಾಡಿನವರು ಕಾವೇರಿ ನೀರಿನ ವಿಚಾರದಲ್ಲಿ ಪದೇಪದೇ ಖ್ಯಾತೆ ತೆಗೆಯುವುದು ಸರಿಯಲ್ಲ. ಇದು ಮುಂದುವರೆದರೆ ಮುಂದಿನ ದಿನಗಳಲ್ಲಿ ಪುಣಜನೂರು ಗೇಟ್ ಬಂದ್ ಮಾಡಿ ತಮಿಳುನಾಡಿನ ವಾಹನ, ಉತ್ಪನ್ನ, ಸಿನಿಮಾ ಪ್ರದರ್ಶನ ತಡೆಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಶಾ.ಮುರಳಿ, ನಿಜಧ್ವನಿಗೋವಿಂದರಾಜು, ಪಣ್ಯದಹುಂಡಿ ರಾಜು, ರಾಚಪ್ಪ, ಜಗದೀಶ್, ತಾಂಡವಮೂರ್ತಿ, ಆಟೋ ಲಿಂಗರಾಜು, ನಂಜುಂಡಸ್ವಾಮಿ, ಮುತ್ತಿಗೆ ಗೋವಿಂದ ರಾಜು, ಇತರರು ಭಾಗವಹಿಸಿದ್ದರು.3
- ಕತ್ತಲೆಯಿಂದ ಬೆಳಕಿನೆಡೆಗೆ: ಈದ್ ಮಿಲಾದ್-ಉನ್-ನಬಿ ಹುಟ್ಟಿದ ಕಥೆ ಸುಮಾರು 1400 ವರ್ಷಗಳ ಹಿಂದಿನ ಮಾತು. ಅರೇಬಿಯಾದ ಮರಳುಗಾಡು ಸಂಪೂರ್ಣ ಅಂಧಕಾರದಲ್ಲಿ ಮುಳುಗಿತ್ತು. ಅನ್ಯಾಯ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ, ಮೂಢನಂಬಿಕೆಗಳು ಮತ್ತು ಪರಸ್ಪರ ಕಚ್ಚಾಡುವಿಕೆಗಳು ಸಮಾಜವನ್ನು ಆವರಿಸಿದ್ದವು. ಇಂತಹ ಸಂದರ್ಭದಲ್ಲಿ ಇಡೀ ಮಾನವಕುಲಕ್ಕೆ ಶಾಂತಿ ಮತ್ತು ಕರುಣೆಯ ಸಂದೇಶ ನೀಡಲು ಒಬ್ಬ ಮಾರ್ಗದರ್ಶಿಯ ಅಗತ್ಯವಿತ್ತು. ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾದ ‘ರಬೀ-ಉಲ್-ಅವ್ವಲ್’ 12 ರಂದು, ಮೆಕ್ಕಾ ನಗರದಲ್ಲಿ ಪವಿತ್ರ ಪ್ರವಾದಿ ಮುಹಮ್ಮದ್ (ಸ.ಅ) ಅವರ ಜನನವಾಯಿತು. ತಂದೆ ಅಬ್ದುಲ್ಲಾ ಅವರ ಅಗಲಿಕೆಯ ನಂತರ ಜನಿಸಿದ ಈ ಮಗುವಿಗೆ ತಾಯಿ ಆಮಿನಾ ಮತ್ತು ಅಜ್ಜ ಅಬ್ದುಲ್ ಮುತ್ತಲಿಬ್ ಪ್ರೀತಿಯಿಂದ ಆಸರೆಯಾದರು. ಬೆಳೆಯುತ್ತಾ ತಮ್ಮ ಅಸಾಧಾರಣ ಸತ್ಯಸಂಧತೆ ಮತ್ತು ಪ್ರಾಮಾಣಿಕತೆಯಿಂದಾಗಿ ಜನರು ಅವರನ್ನು ‘ಅಲ್-ಅಮೀನ್’ (ನಂಬಿಕಸ್ಥ) ಎಂದು ಗೌರವದಿಂದ ಕರೆದರು. ಮುಂದೆ ಅವರು ಸಮಾಜಕ್ಕೆ ಕೇವಲ ಧರ್ಮವನ್ನಷ್ಟೇ ಬೋಧಿಸಲಿಲ್ಲ; ಬದಲಿಗೆ: ಹೆಣ್ಣು ಮಕ್ಕಳಿಗೆ ಗೌರವ ಮತ್ತು ಹಕ್ಕುಗಳನ್ನು ನೀಡಿದರು. ಬಡವರು, ಅನಾಥರು ಮತ್ತು ಗುಲಾಮರ ಮೇಲಿನ ಶೋಷಣೆಯನ್ನು ನಿಲ್ಲಿಸಿ ಸಮಾನತೆಯನ್ನು ಸಾರಿದರು. "ನಿಮ್ಮ ನೆರೆಹೊರೆಯವರು ಹಸಿದಿರುವಾಗ ನೀವು ಹೊಟ್ಟೆ ತುಂಬ ಉಣ್ಣುವುದು ಸರಿಯಲ್ಲ" ಎಂದು ಸಹಾನುಭೂತಿಯ ಪಾಠ ಕಲಿಸಿದರು. ಈ ಆಚರಣೆ ಆರಂಭವಾಗಿದ್ದು ಹೇಗೆ? ಪ್ರವಾದಿಯವರ ಕಾಲದ ನಂತರ, ಶತಮಾನಗಳು ಕಳೆದಂತೆ ಜನರು ಅವರ ತ್ಯಾಗ, ಬೋಧನೆ ಮತ್ತು ಮಾನವೀಯ ಸಂದೇಶಗಳನ್ನು ಮುಂದಿನ ಪೀಳಿಗೆಗೆ ನೆನಪಿಸಲು ಒಂದು ವಿಶೇಷ ದಿನವನ್ನು ಮೀಸಲಿಡಲು ಬಯಸಿದರು. 12ನೇ ಶತಮಾನದ ಸುಮಾರಿಗೆ ಇಸ್ಲಾಮಿಕ್ ಜಗತ್ತಿನ ವಿದ್ವಾಂಸರು ಹಾಗೂ ಆಡಳಿತಗಾರರು ಪ್ರವಾದಿಯವರ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಲು ಆರಂಭಿಸಿದರು. ಇರ್ಬಿಲ್ (ಇಂದಿನ ಇರಾಕ್) ನಗರದ ರಾಜ ಮುಜಫ್ಫರ್ ಅಲ್-ದಿನ್ ಈ ದಿನವನ್ನು ದೊಡ್ಡ ಉತ್ಸವದಂತೆ ಆಯೋಜಿಸಿ, ಬಡವರಿಗೆ ಆಹಾರ ವಿತರಿಸಿ, ಪ್ರವಾದಿಯವರ ಜೀವನ ಚರಿತ್ರೆ ಮತ್ತು ಕವಿತೆಗಳನ್ನು ವಾಚಿಸುವ ಸಂಪ್ರದಾಯವನ್ನು ವ್ಯಾಪಕವಾಗಿ ಬೆಳೆಸಿದನು. ಕಾಲಾನಂತರದಲ್ಲಿ ಈ ಸಂಪ್ರದಾಯ ಈಜಿಪ್ಟ್, ಟರ್ಕಿ ಸೇರಿದಂತೆ ಇಡೀ ವಿಶ್ವದಾದ್ಯಂತ ಹರಡಿತು. ಇಂದು ಏಕೆ ಆಚರಿಸಲಾಗುತ್ತದೆ? ಮಿಲಾದ್-ಉನ್-ನಬಿ ಎಂದರೆ ಕೇವಲ ಹಬ್ಬದ ಸಡಗರವಲ್ಲ; ಅದು ಪ್ರವಾದಿಯವರ ಬದುಕನ್ನು ಸ್ಮರಿಸುವ ದಿನ. ಕೃತಜ್ಞತೆ: ಪ್ರವಾದಿಯವರ ಮೂಲಕ ಸಮಾಜಕ್ಕೆ ಸಿಕ್ಕ ಶಾಂತಿ ಮತ್ತು ಜ್ಞಾನದ ಸಂದೇಶಕ್ಕೆ ಕೃತಜ್ಞತೆ ಸಲ್ಲಿಸುವುದು. ದಾನ-ಧರ್ಮ: ಹಸಿದವರಿಗೆ ಅನ್ನದಾನ ಮಾಡುವುದು ಮತ್ತು ಅಗತ್ಯವಿರುವವರಿಗೆ ಸಹಾಯ ಮಾಡುವುದು. ಸೌಹಾರ್ದತೆ: ಮೆರವಣಿಗೆ ಮತ್ತು ಪ್ರಾರ್ಥನೆಗಳ ಮೂಲಕ ಸಮಾಜದಲ್ಲಿ ಸೋದರತ್ವ ಮತ್ತು ಪ್ರೀತಿಯನ್ನು ಸಾರುವುದು. ಕತ್ತಲೆಯನ್ನು ಹೋಗಲಾಡಿಸಿ ಮಾನವೀಯತೆಯ ಬೆಳಕು ಚೆಲ್ಲಿದ ಪ್ರವಾದಿಯವರ ಜನ್ಮದಿನವನ್ನು ಇಂದು ವಿಶ್ವದಾದ್ಯಂತ ಅತ್ಯಂತ ಶ್ರದ್ಧೆಯಿಂದ ‘ಈದ್ ಮಿಲಾದ್-ಉನ್-ನಬಿ’ ಎಂದು ಆಚರಿಸಲಾಗುತ್ತದೆ.2
- ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಸೇವೆಗೆ 1,000 ಹಣ ಕೇಳಿರುವ ಬಗ್ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಗ್ರಾಮದ ಬಡ ಕುಟುಂಬದ ರೈತಾಪಿ ಜನರ ಮೇಲೆ ಚಿಕಿತ್ಸೆ ನೀಡಿ ಸರಿಪಡಿಸಬೇಕಾದ ವೈದ್ಯರು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಗೆ ಬರೆದು ಉಚಿತ ಆಂಬುಲೆನ್ಸ್ ಸೇವೆ ಇದ್ದರೂ ಕೂಡ ವಯಸ್ಸಾದ ರೋಗಿಗಳ ಬಳಿ ಸಾವಿರ ರೂಪಾಯಿಗಳ ಸುಲಿಗೆ ಮಾಡಲು ಮುಂದಾಗಿದ್ದಾರೆ.1
- All About,A serious question for those party members who are seriously demanding a ministerial berth for their leaders *ಭಾರತ ನಲ್ಲಿ ವೈರಲ್*1
- ಗೋ ಹತ್ಯೆ ವಿರುದ್ಧ ಹೋರಾಟಕ್ಕೆ ಮೈಸೂರಿಗೆ ಪುನೀತ್ ಕೆರೆಹಳ್ಳಿ ಆಗಮನ ಜಿಲ್ಲಾಧಿಕಾರಿ ಕಚೇರಿ ಬಳಿ ಬಂಧನ ಮೈಸೂರಿನಲ್ಲಿ ಗೋ ಹತ್ಯೆ ವಿರೋಧಿಸಿ ಪ್ರತಿಭಟನೆ ನಡೆಸಲು ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಆಗಮಿಸಿದರು. ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ಕಾರ್ಯಕರ್ತರು ಪುನೀತ್ ಕೆರೆಹಳ್ಳಿಗೆ ಆರತಿ ಬೆಳಗಿ ಸ್ವಾಗತಿಸಿದರು. ಗೋ ರಫ್ತು ಮತ್ತು ಗೋ ಮಾರಾಟ ತಡೆಯಬೇಕು, ಗೋ ಹತ್ಯೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು. ಮೈಸೂರಿನ ಉದಯಗಿರಿ ಭಾಗದಲ್ಲಿ ಗೋ ಹತ್ಯೆ ಹೆಚ್ಚಾಗಿದೆ ಎಂದು ಆರೋಪಿಸಿದ ಪುನೀತ್ ಕೆರೆಹಳ್ಳಿ, ಗೋ ಹತ್ಯೆ ತಡೆಗೆ ಆದೇಶಗಳಿದ್ದರೂ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಈ ನಡುವೆ ಜಿಲ್ಲಾಧಿಕಾರಿ ಕಚೇರಿ ಬಳಿ ಪುನೀತ್ ಕೆರೆಹಳ್ಳಿ ಹಾಗೂ ಅವರ ಜೊತೆಗಿದ್ದ ಕೆಲ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಬಂಧನಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಯಾರು ಏನೇ ಮಾಡಿದರೂ ಗೋ ಹತ್ಯೆ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಪುನೀತ್ ಕೆರೆಹಳ್ಳಿ ಹೇಳಿದ್ದಾರೆ.1
- ಮಳವಳ್ಳಿಯಲ್ಲಿ ಮಾಮರ ಸೌಹಾರ್ದ ಸಹಕಾರ ಸಂಘದ ಸ್ಥಾಪನೆ ಕುರಿತು ಅಧ್ಯಕ್ಷ ಎಮ್ ಶಿವಕುಮಾರ್ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮನದಾಳದ ಮಾತು ಮಾಮರ ಸೌಹಾರ್ದ ಸಹಕಾರ ಸಂಘದ ಸ್ಥಾಪನೆಯ ಕುರಿತು ಅಧ್ಯಕ್ಷ ಎಂ ಶಿವಕುಮಾರ್ ಮನದಾಳದ ಮಾತು1