ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಪೋಷಕ, ಶಿಕ್ಷಕರ ಕರ್ತವ್ಯ ಔರಾದ್: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದು ಪೋಷಕರ ಹಾಗೂ ಶಾಲೆಗಳ ಆದ್ಯ ಕರ್ತವ್ಯ ಎಂದು ಹೇಡಗಾಪುರ ಶ್ರೀ ದಾರುಕಲಿಂಗ ಶಿವಾಚಾರ್ಯರು ಹೇಳಿದರು. ತಾಲೂಕಿನ ಮಸ್ಕಯ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ವಿಜ್ಞಾನ ಮೇಳ ಹಾಗೂ 8ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಮಕ್ಕಳು ಆಧುನಿಕವಾಗಿ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವವರಾಗಿದ್ದು, ವಿಜ್ಞಾನ ಕ್ಷೇತ್ರದಲ್ಲಿ ದೇಶದ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಈ ದಿಸೆಯಲ್ಲಿ ಶಾಲೆಗಳಲ್ಲಿ ಹಮ್ಮಿಕೊಳ್ಳುವ ವಿಜ್ಞಾನ ಪ್ರದರ್ಶನಗಳು ಮಕ್ಕಳಲ್ಲಿ ವಿಜ್ಞಾನ ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿಸುತ್ತವೆ ಎಂದು ಹೇಳಿದರು. ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಇಲ್ಲದೆ ಜೀವನವೇ ಇಲ್ಲ. ದೈನಂದಿನ ಪ್ರತಿಯೊಂದು ಕಾರ್ಯದಲ್ಲೂ ತಿಳಿದೋ ತಿಳಿಯದೆಯೋ ವಿಜ್ಞಾನವನ್ನು ನಾವು ಬಳಸುತ್ತೇವೆ. ವಿವಿಧ ಹಬ್ಬಗಳಂತೆ ವಿಜ್ಞಾನ ಮೇಳವೂ ಮಕ್ಕಳಿಗೆ ಮಹತ್ವದ ಹಬ್ಬವಾಗಿದೆ. ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸಲು ಇಂತಹ ವಿಜ್ಞಾನ ಹಬ್ಬಗಳು ಸಹಕಾರಿ ಎಂದು ಹೇಳಿದರು. ಇಲ್ಲಿ ಹಲವು ಕುತೂಹಲಕಾರಿ ವಿಷಯಗಳನ್ನು ಪ್ರಯೋಗ, ಚಟುವಟಿಕೆ, ಆಟ ಹಾಗೂ ಹಾಡಿನ ಮೂಲಕ ತಿಳಿದುಕೊಳ್ಳುವ ವಾತಾವರಣ ಇದೆ ಎಂದರು. ಪಿಡಿಒ ಸಂತೋಷ ಪಾಟೀಲ್ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಪಂಚಾಯತಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಶಾಲೆಯಲ್ಲಿ ವಿಜ್ಞಾನ ಮೇಳ ಆಯೋಜಿಸಿರುವುದು ಸಂತೋಷ ತಂದಿದೆ ಎಂದರು. ಶಿಕ್ಷಕ ಡಾ. ಶಿವಲಿಂಗ ಹೇಡೆ ವಿಶೇಷ ಉಪನ್ಯಾಸ ನೀಡಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮೊಕ್ತೆದಾರ್ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಶರಣಬಸಪ್ಪ ಚಿದ್ರೆ ಅಧ್ಯಕ್ಷತೆ ವಹಿಸಿದರು. ಶಿಕ್ಷಕ ಬಸವರಾಜ ಪಾಂಚಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಆರ್‌ಪಿ ಜ್ಯೋತಿ ಜಿರ್ಗೆ, ಶಿವಾನಂದ ಸ್ವಾಮಿ, ಪತ್ರಕರ್ತ ಮಲ್ಲಪ್ಪ ಗೌಡಾ, ಶಿವಾಜಿ ಬಿರಾದಾರ್, ಚಂದ್ರಶೇಖರ, ಸಿದ್ರಾಮ ಪಾಟೀಲ್, ಶಿವಕುಮಾರ ಚಿದ್ರೆ, ವಿಜಯಕುಮಾರ ಪಾಟೀಲ್, ವಾಣಿ ರಾಜಕುಮಾರ, ವೀರಶೆಟ್ಟಿ ಕುಮಟೆ, ಸಂತೋಷ ಚಾರೆ, ಮುಜೀಫ್, ಅನಿಲ್ ಹಟ್ಕರ್, ಶಿಲ್ಪಾ ಪಾಟೀಲ್, ಬಸವರಾಜ ಕಾಡೆ, ಈಶ್ವರಯ್ಯ ಸ್ವಾಮಿ, ಬಸವರಾಜ ಹಟ್ಕರ್, ಗುರುಪಾದಯ್ಯ ಸ್ವಾಮಿ ಸೇರಿದಂತೆ ಅನೇಕರಿದ್ದರು. ವಿದ್ಯಾರ್ಥಿಗಳಾದ ನುವೇದಿತಾ, ಶಾಲಿನಿ, ಮಹಾದೇವ ಹಾಗೂ ಬಸವಲಿಂಗ ಪ್ರಾರ್ಥನಾ ಗೀತೆ ಹಾಡಿದರು. ಮುಖ್ಯಗುರು ಶಿವಪುತ್ರ ಮುಕ್ರಂಬೆ ಸ್ವಾಗತಿಸಿದರು. ನವನಾಥ ಹಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ತಂಬಾಕೆ ವಂದಿಸಿದರು.

- Post by Star Kannada News 24×71
- Supar luxury || Yadgir Gurmatkal kodangal parigi mannaguda chevella minabada mehendipatnam hyderabad Yadgir Departure time Timming 11:20Am Hyderabad Arrival time 4:೦೦pm Rs 390 Plotfrom Hyderabad 6:00 am Yadgir 10:40 am1
- Post by Nava karnataka News channel1
- Post by ABU NEWS CHANNEL ಸಂಪಾದಕರು1
- KL Rahul mant 💗😎🥰1
- ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಜಾಲಹಳ್ಳಿ ಪ್ರವಾಸಿ ಮಂದಿರದಲ್ಲಿ 14-04-2026 ರಂದು ಕಮಲದಿನ್ನಿ ಗ್ರಾಮದ ದಲಿತ ಹೋರಾಟಗಾರರಾದ ಸಾಬಣ್ಣ ಕಮಲದಿನ್ನಿ ಅವರಿಗೆ ಗ್ರಾಮಸ್ಥರಿಂದ ಗೌರವ ಸನ್ಮಾನ ನೆರವೇರಿತು.ಬಾಬು ಜಗಜೀವನ್ ರಾಮ್ ಜಯಂತಿ ಅಂಗವಾಗಿ ದೇವದುರ್ಗ ತಾಲೂಕು ಆಡಳಿತ ವತಿಯಿಂದ ಸಮಾಜಸೇವಾ ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ, ಕಮಲದಿನ್ನಿ ಹಾಗೂ ಜಾಲಹಳ್ಳಿ ಗ್ರಾಮದ ಮುಖಂಡರು ಸೇರಿ ಶಾಲು ಹೊದಿಸಿ, ಹಾರ ಹಾಕಿ, ಡಾ. ಅಂಬೇಡ್ಕರ್ ಅವರ ಭಾವಚಿತ್ರ ನೀಡಿ ಸನ್ಮಾನಿಸಿದರು.ಈ ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಅಮರೇಗೌಡ ಕಮಲದಿನ್ನಿ ಹಾಗೂ ಶರಣಗೌಡ ಕಮಲದಿನ್ನಿ ಆಯೋಜಿಸಿದ್ದರು.1
- ವಿಜಯಪುರ: ನಾನು ಸಾಯುವ ಒಳಗೆ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ವಿಜಯಪುರದಲ್ಲಿ ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಅವರು, ರಾಜ್ಯಕ್ಕೆ ದಲಿತ ಮುಖ್ಯಮಂತ್ರಿ ಆಗಬೇಕು ಎಂದು ಮೊಟ್ಟಮೊದಲು ಹೇಳಿದ್ದು ನಾನೇ ಎಂದು ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತಾವು ಈ ಹೇಳಿಕೆ ನೀಡಿದ್ದಾಗ ಕಾಂಗ್ರೆಸ್ ನಲ್ಲಿದ್ದ ದಲಿತರು ಈಗ ಎಚ್ಚೆತ್ತುಕೊಂಡು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. ಅಂದು ಕೇಳಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಆಗುತ್ತಿದ್ದರು, ಆಗ ಪಕ್ಷ ಬೇರೆಯಾದರೂ ತಮ್ಮ ಸಮಾಜದವರು ಮುಖ್ಯಮಂತ್ರಿಯಾಗಿದ್ದಕ್ಕೆ ತಮಗೆಲ್ಲರಿಗೂ ಖುಷಿಯಾಗುತ್ತಿತ್ತು ಎಂದು ಅವರು ತಿಳಿಸಿದರು.1
- ಅಫಜಲಪೂರ : ತಾಲೂಕಿನಲ್ಲಿ ಈ ಬಾರಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಉತ್ತಮವಾಗಿ ಹೊರಬಂದಿದ್ದು, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಸರ್ಕಾರಿ ಕಾಲೇಜುಗಳಲ್ಲಿಯೇ ಅತ್ಯುತ್ತಮ ಫಲಿತಾಂಶವನ್ನು ಈ ಕಾಲೇಜು ದಾಖಲಿಸಿದ್ದು, ಭಾಗಣ್ಣ ಎಂಬ ವಿದ್ಯಾರ್ಥಿ ಶೇ. 97.16 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಕೀರ್ತಿಯನ್ನು ತಂದಿದ್ದಾನೆ. ವಾಣಿಜ್ಯ ವಿಭಾಗದಲ್ಲಿ ಶೇ 85% ಫಲಿತಾಂಶ ಹಾಗೂ ವಿಜ್ಞಾನ ವಿಭಾಗದಲ್ಲಿಯೂ ಉತ್ತಮ ಸಾಧನೆ ಕಂಡುಬಂದಿದ್ದು, ಕುಮಾರಿ ಅಂಕಿತಾ ಅವರು ಶೇ. 82.33 ಅಂಕಗಳನ್ನು ಪಡೆದು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಶಿಕ್ಷಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಶ್ರಮ ಪ್ರಮುಖ ಕಾರಣವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಗುರುಲಿಂಗಯ್ಯ ಸಾಲಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.1