logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಕಲಘಟಗಿಯ ನ್ಯಾಯಾಲಯದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿವಿಧ ದಾವೆಯ ಒಟ್ಟು 69 ಪ್ರಕರಣಗಳು ಇತ್ಯರ್ಥಗೊಂಡಿವೆ. ಈ ಅದಾಲತ್‌ಗಾಗಿ ಪಟ್ಟಣದ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಲೋಕ ಅದಾಲತ್ ಪೀಠಗಳನ್ನು ರಚಿಸಲಾಗಿತ್ತು. ಹಿರಿಯ ದಿವಾಣಿ ನ್ಯಾಯಾಧೀಶ ರವೀಂದ್ರ ಹೊನೋಲೆ ಅವರ ನೇತೃತ್ವದ ಪೀಠದಲ್ಲಿ 2 ಚೆಕ್ ಬೌನ್ಸ್, 28 ಅಸಲಿ ದಾವೆ, 1 ವಾಟ್ನಿ ದಾವೆ, 1 ನಿರ್ದಿಷ್ಟ ಕಾರ್ಯ ಕಾರ್ಯಕ್ಷಮತೆ ಹಾಗೂ 1 ಇತರೆ ಪ್ರಕರಣ ಸೇರಿದಂತೆ ಒಟ್ಟು 33 ಪ್ರಕರಣಗಳು ಇತ್ಯರ್ಥವಾಗಿದ್ದು, 48,85,000 ಸಾವಿರ ಹಣ ವಸೂಲಿಯಾಗಿದೆ. ಮತ್ತೊಂದು ಪೀಠದಲ್ಲಿದ್ದ ದಿವಾಣಿ ನ್ಯಾಯಾಧೀಶ ಜಿ. ಸಂಜೀವಕುಮಾರ ಅವರ ಸಮ್ಮುಖದಲ್ಲಿ 4 ಚೆಕ್ ಬೌನ್ಸ್, 3 ಅಸಲಿ ದಾವೆ, 17 ಜನನ ಪ್ರಕರಣಗಳು, 5 ದಂಡ ಪ್ರಕ್ರಿಯೆಗಳು ಹಾಗೂ 7 ಇತರೆ ಪ್ರಕರಣಗಳು ಸೇರಿದಂತೆ ಒಟ್ಟು 36 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 4,95,250 ರೂ. ಹಣ ವಸೂಲಿಯಾಗಿದೆ ಎಂದು ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.

2 hrs ago
user_Kallappa m mirji
Kallappa m mirji
Farmer ಕಳಘಟಗಿ, ಧಾರವಾಡ, ಕರ್ನಾಟಕ•
2 hrs ago
1c4e036e-3b78-447b-9f6d-4ea6f7242cc5

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಕಲಘಟಗಿಯ ನ್ಯಾಯಾಲಯದಲ್ಲಿ ಶನಿವಾರ ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ವಿವಿಧ ದಾವೆಯ ಒಟ್ಟು 69 ಪ್ರಕರಣಗಳು ಇತ್ಯರ್ಥಗೊಂಡಿವೆ. ಈ ಅದಾಲತ್‌ಗಾಗಿ ಪಟ್ಟಣದ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಲೋಕ ಅದಾಲತ್ ಪೀಠಗಳನ್ನು ರಚಿಸಲಾಗಿತ್ತು. ಹಿರಿಯ ದಿವಾಣಿ ನ್ಯಾಯಾಧೀಶ ರವೀಂದ್ರ ಹೊನೋಲೆ ಅವರ ನೇತೃತ್ವದ ಪೀಠದಲ್ಲಿ 2 ಚೆಕ್ ಬೌನ್ಸ್, 28 ಅಸಲಿ ದಾವೆ, 1 ವಾಟ್ನಿ ದಾವೆ, 1 ನಿರ್ದಿಷ್ಟ ಕಾರ್ಯ ಕಾರ್ಯಕ್ಷಮತೆ ಹಾಗೂ 1 ಇತರೆ ಪ್ರಕರಣ ಸೇರಿದಂತೆ ಒಟ್ಟು 33 ಪ್ರಕರಣಗಳು ಇತ್ಯರ್ಥವಾಗಿದ್ದು, 48,85,000 ಸಾವಿರ ಹಣ ವಸೂಲಿಯಾಗಿದೆ. ಮತ್ತೊಂದು ಪೀಠದಲ್ಲಿದ್ದ ದಿವಾಣಿ ನ್ಯಾಯಾಧೀಶ ಜಿ. ಸಂಜೀವಕುಮಾರ ಅವರ ಸಮ್ಮುಖದಲ್ಲಿ 4 ಚೆಕ್ ಬೌನ್ಸ್, 3 ಅಸಲಿ ದಾವೆ, 17 ಜನನ ಪ್ರಕರಣಗಳು, 5 ದಂಡ ಪ್ರಕ್ರಿಯೆಗಳು ಹಾಗೂ 7 ಇತರೆ ಪ್ರಕರಣಗಳು ಸೇರಿದಂತೆ ಒಟ್ಟು 36 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 4,95,250 ರೂ. ಹಣ ವಸೂಲಿಯಾಗಿದೆ ಎಂದು ನ್ಯಾಯಾಲಯದ ಪ್ರಕಟಣೆ ತಿಳಿಸಿದೆ.

More news from ಕರ್ನಾಟಕ and nearby areas
  • ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಸಮಾಜವನ್ನು ಉದ್ಧಾರ ಮಾಡುವ ರಾಜಕಾರಣಿಗಳು ಈಗ ಯಾರೂ ಇಲ್ಲ ಎಂದು ರೈತರೊಬ್ಬರು ರಾಜಕಾರಣಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿನ ರಾಜಕೀಯ ವ್ಯವಸ್ಥೆಯೇ ಸರಿಯಿಲ್ಲ ಎಂದು ಕಿಡಿಕಾರಿರುವ ರೈತರು, ರಾಜಕಾರಣಿಗಳ ಜನ್ಮ ಜಾಲಾಡಿದ್ದಾರೆ.
    1
    ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಸಮಾಜವನ್ನು ಉದ್ಧಾರ ಮಾಡುವ ರಾಜಕಾರಣಿಗಳು ಈಗ ಯಾರೂ ಇಲ್ಲ ಎಂದು ರೈತರೊಬ್ಬರು ರಾಜಕಾರಣಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿನ ರಾಜಕೀಯ ವ್ಯವಸ್ಥೆಯೇ ಸರಿಯಿಲ್ಲ ಎಂದು ಕಿಡಿಕಾರಿರುವ ರೈತರು, ರಾಜಕಾರಣಿಗಳ ಜನ್ಮ ಜಾಲಾಡಿದ್ದಾರೆ.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    29 min ago
  • ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ದೇಶ ಪ್ರೇಮಿಗಳಿಗೆ ಅಕೌಂಟ್ ಇರಬೇಕಲ್ವಾ ಎಂದು ಪ್ರಶ್ನಿಸಿ ತೀವ್ರವಾಗಿ ಕಿಡಿಕಾರಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಆಕ್ರೋಶವನ್ನು ಹೊರಹಾಕಿರುವ ಅವರು, ದೇಶಪ್ರೇಮಿಗಳ ಅಕೌಂಟ್ ಕುರಿತಾಗಿ ನೇರ ಪ್ರಶ್ನೆಯನ್ನು ಎತ್ತುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    1
    ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ದೇಶ ಪ್ರೇಮಿಗಳಿಗೆ ಅಕೌಂಟ್ ಇರಬೇಕಲ್ವಾ ಎಂದು ಪ್ರಶ್ನಿಸಿ ತೀವ್ರವಾಗಿ ಕಿಡಿಕಾರಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಆಕ್ರೋಶವನ್ನು ಹೊರಹಾಕಿರುವ ಅವರು, ದೇಶಪ್ರೇಮಿಗಳ ಅಕೌಂಟ್ ಕುರಿತಾಗಿ ನೇರ ಪ್ರಶ್ನೆಯನ್ನು ಎತ್ತುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    user_H M ಹರಕುಣಿ
    H M ಹರಕುಣಿ
    Local News Reporter ಶಿಗ್ಗಾಂವ್, ಹಾವೇರಿ, ಕರ್ನಾಟಕ•
    7 hrs ago
  • ಧಾರವಾಡ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ ಪಾಟೀಲ ಅವರು, ಜಿ.ಬಿ.ಎ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರವು ಕುಂಟು ನೆಪ ಹೇಳುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಿದ್ಧತೆ ಮಾಡಿಕೊಂಡಿದ್ದರೂ ಸಹ, ಸರ್ಕಾರವು ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದ ಎಸ್.ಐ.ಆರ್ ಎಂಬ ಕುಂಟು ನೆಪವನ್ನು ಹೇಳಿ ಅರ್ಜಿ ಸಲ್ಲಿಸಿದೆ ಎಂದು ಅವರು ದೂರಿದ್ದಾರೆ. ಪ್ರತಿಯೊಂದಕ್ಕೂ ಎಸ್.ಐ.ಆರ್ ಎನ್ನುವುದು ಸೂಕ್ತವಲ್ಲ ಮತ್ತು ಬಹುತೇಕ ಕಾಂಗ್ರೆಸ್ ಮುಖಂಡರಿಗೆ ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವೇ ಇಲ್ಲ ಎಂದು ಅವರು ಟೀಕಿಸಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಜಿ.ಬಿ.ಎ ಚುನಾವಣೆ ನಡೆದಿಲ್ಲ ಎಂದಾಕ್ಷಣ ಈ ಸರ್ಕಾರವೂ ಅದನ್ನು ನಡೆಸಬಾರದೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದಿದ್ದು, ಇನ್ನು ಆರು ತಿಂಗಳು ಇರುವಾಗಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಹೇಳಿದರು. ನಮಗೆ ಇರುವುದೇ ನಾಲ್ಕೂವರೆ ವರ್ಷಗಳ ಅಧಿಕಾರ ಅವಧಿಯಾಗಿದ್ದು, ಈ ಅವಧಿಯಲ್ಲೇ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
    1
    ಧಾರವಾಡ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ.ಸಿ ಪಾಟೀಲ ಅವರು, ಜಿ.ಬಿ.ಎ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರವು ಕುಂಟು ನೆಪ ಹೇಳುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಚುನಾವಣೆ ನಡೆಸಲು ಚುನಾವಣಾ ಆಯೋಗವು ಸಿದ್ಧತೆ ಮಾಡಿಕೊಂಡಿದ್ದರೂ ಸಹ, ಸರ್ಕಾರವು ಚುನಾವಣೆಯನ್ನು ಮುಂದೂಡುವ ಉದ್ದೇಶದಿಂದ ಎಸ್.ಐ.ಆರ್ ಎಂಬ ಕುಂಟು ನೆಪವನ್ನು ಹೇಳಿ ಅರ್ಜಿ ಸಲ್ಲಿಸಿದೆ ಎಂದು ಅವರು ದೂರಿದ್ದಾರೆ.

ಪ್ರತಿಯೊಂದಕ್ಕೂ ಎಸ್.ಐ.ಆರ್ ಎನ್ನುವುದು ಸೂಕ್ತವಲ್ಲ ಮತ್ತು ಬಹುತೇಕ ಕಾಂಗ್ರೆಸ್ ಮುಖಂಡರಿಗೆ ಈ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವೇ ಇಲ್ಲ ಎಂದು ಅವರು ಟೀಕಿಸಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಜಿ.ಬಿ.ಎ ಚುನಾವಣೆ ನಡೆದಿಲ್ಲ ಎಂದಾಕ್ಷಣ ಈ ಸರ್ಕಾರವೂ ಅದನ್ನು ನಡೆಸಬಾರದೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳು ಕಳೆದಿದ್ದು, ಇನ್ನು ಆರು ತಿಂಗಳು ಇರುವಾಗಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಹೇಳಿದರು. ನಮಗೆ ಇರುವುದೇ ನಾಲ್ಕೂವರೆ ವರ್ಷಗಳ ಅಧಿಕಾರ ಅವಧಿಯಾಗಿದ್ದು, ಈ ಅವಧಿಯಲ್ಲೇ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
    user_Manjunath kavali
    Manjunath kavali
    Local News Reporter ಧಾರವಾಡ, ಧಾರವಾಡ, ಕರ್ನಾಟಕ•
    22 hrs ago
  • ಪಂಚಕರ್ಮ ಚಿಕಿತ್ಸೆಯು ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂಬುದನ್ನು ಅಂಬಿಕಾ ಸ್ವಾಮೀಜಿ ಅವರು ಡಾ. ಜೆ. ಬಿ. ಮಾನೆ ಅವರೊಂದಿಗೆ ವಿವರವಾಗಿ ಹಂಚಿಕೊಂಡಿದ್ದಾರೆ.
    2
    ಪಂಚಕರ್ಮ ಚಿಕಿತ್ಸೆಯು ಆರೋಗ್ಯಕ್ಕೆ ಹೇಗೆ ಒಳ್ಳೆಯದು ಎಂಬುದನ್ನು ಅಂಬಿಕಾ ಸ್ವಾಮೀಜಿ ಅವರು ಡಾ. ಜೆ. ಬಿ. ಮಾನೆ ಅವರೊಂದಿಗೆ ವಿವರವಾಗಿ ಹಂಚಿಕೊಂಡಿದ್ದಾರೆ.
    user_SAMATA NEWS KANNADA 1
    SAMATA NEWS KANNADA 1
    Advertising agency ಬೆಳಗಾವಿ, ಬೆಳಗಾವಿ, ಕರ್ನಾಟಕ•
    5 hrs ago
  • ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ನೂತನ ಕಾರ್ಯಕ್ರಮ ವೇದಿಕೆ ನಿರ್ಮಾಣದ ಗುದ್ದಲಿ ಪೂಜೆ, ಶಿಕ್ಷಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಪ್ರವೀಣ ನಾಯಿಕ ಅವರು ನೂತನ ವೇದಿಕೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರವೀಣ ನಾಯಿಕ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸರ್ವೋತ್ತಮ ಬೆಳವಣಿಗೆಯಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಪ್ರಮುಖವಾಗಿದೆ ಎಂದರು. ಮಕ್ಕಳ ಸಾಂಸ್ಕೃತಿಕ ಹಾಗೂ ಭೌತಿಕ ವಿಕಸನಕ್ಕೆ ಉತ್ತಮ ವೇದಿಕೆಯ ಅಗತ್ಯವಿದ್ದು, ಗ್ರಾಮ ಪಂಚಾಯತ್ ಅಡಿಯಲ್ಲಿ ಈ ವೇದಿಕೆ ನಿರ್ಮಾಣವಾಗುತ್ತಿರುವುದು ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಉತ್ತಮ ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದರು. ಅಲ್ಲದೆ, ಬಡ ಮಕ್ಕಳ ಹಿತದೃಷ್ಟಿಯಿಂದ ಇಲ್ಲಿಗೆ ಸರ್ಕಾರಿ ಪ್ರೌಢಶಾಲೆಯ ಅವಶ್ಯಕತೆ ಇರುವುದರಿಂದ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸುವ ಶಿಕ್ಷಕರ ಸೇವೆ ಅನನ್ಯವಾಗಿದ್ದು, ಶಾಲೆಯ ಶಿಸ್ತು ಮತ್ತು ಗುಣಮಟ್ಟ ಕಾಪಾಡಿಕೊಂಡಿರುವ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಯನ್ನು ಸನ್ಮಾನಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ಎ ಚೌಗಲಾ ಅವರು, ಎಸ್‌ಡಿಎಂಸಿ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರ ಸಹಾಯ ಮತ್ತು ಸಹಕಾರದೊಂದಿಗೆ ಶಾಲೆ ಹಾಗೂ ಮಕ್ಕಳ ಅಭಿವೃದ್ಧಿ ಮಾಡುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು. ಇದೇ ವೇಳೆ ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಮೂಲಸೌಕರ್ಯಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಖಾ ಮಡಿವಾಳ, ಸದಸ್ಯರಾದ ಮಲ್ಲೇಶ ಖಟಾವಿ, ನಾಗರಾಜ ಹಡಪದ, ಸಂಗೀತ ಮಗದುಮ್ಮ, ರುಕ್ಷಾನ ಅಲಾಸ, ಅಶ್ವಿನಿ ಗಾರಿಮನಿ, ಶಾಂತ ಕಾಂಬಳೆ, ಸುನಿತಾ ನಾಯಕ, ಸುಮಿತ್ರ ಬೀಸೆ, ಸುವರ್ಣಾ ನಿರ್ಲೇಕರ ಹಾಗೂ ಶಿಕ್ಷಕರಾದ ಎಸ್ ಎನ್ ಮಾಕನವರ, ಕೆ ಎಸ್ ನಾಯ್ಕೋಡಿ, ಪಿ ಎಸ್ ಪಕೀರೆ, ವಿ ಬಿ ಪಾಟೀಲ, ಆರ್ ಬಿ ನಿಲಜಗಿ, ಎ ಎಸ್ ಚೌಗಲಾ, ವಿ ಎಂ ಪೂಜಾರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
    4
    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಮೇಶ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ನೂತನ ಕಾರ್ಯಕ್ರಮ ವೇದಿಕೆ ನಿರ್ಮಾಣದ ಗುದ್ದಲಿ ಪೂಜೆ, ಶಿಕ್ಷಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಪ್ರವೀಣ ನಾಯಿಕ ಅವರು ನೂತನ ವೇದಿಕೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರವೀಣ ನಾಯಿಕ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸರ್ವೋತ್ತಮ ಬೆಳವಣಿಗೆಯಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಪ್ರಮುಖವಾಗಿದೆ ಎಂದರು. ಮಕ್ಕಳ ಸಾಂಸ್ಕೃತಿಕ ಹಾಗೂ ಭೌತಿಕ ವಿಕಸನಕ್ಕೆ ಉತ್ತಮ ವೇದಿಕೆಯ ಅಗತ್ಯವಿದ್ದು, ಗ್ರಾಮ ಪಂಚಾಯತ್ ಅಡಿಯಲ್ಲಿ ಈ ವೇದಿಕೆ ನಿರ್ಮಾಣವಾಗುತ್ತಿರುವುದು ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಉತ್ತಮ ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದರು. ಅಲ್ಲದೆ, ಬಡ ಮಕ್ಕಳ ಹಿತದೃಷ್ಟಿಯಿಂದ ಇಲ್ಲಿಗೆ ಸರ್ಕಾರಿ ಪ್ರೌಢಶಾಲೆಯ ಅವಶ್ಯಕತೆ ಇರುವುದರಿಂದ ಶಾಸಕರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸುವ ಶಿಕ್ಷಕರ ಸೇವೆ ಅನನ್ಯವಾಗಿದ್ದು, ಶಾಲೆಯ ಶಿಸ್ತು ಮತ್ತು ಗುಣಮಟ್ಟ ಕಾಪಾಡಿಕೊಂಡಿರುವ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಯನ್ನು ಸನ್ಮಾನಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್ ಎ ಚೌಗಲಾ ಅವರು, ಎಸ್‌ಡಿಎಂಸಿ ಆಡಳಿತ ಮಂಡಳಿ, ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರ ಸಹಾಯ ಮತ್ತು ಸಹಕಾರದೊಂದಿಗೆ ಶಾಲೆ ಹಾಗೂ ಮಕ್ಕಳ ಅಭಿವೃದ್ಧಿ ಮಾಡುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು. ಇದೇ ವೇಳೆ ಶಾಲೆಯ ಶೈಕ್ಷಣಿಕ ಪ್ರಗತಿ ಮತ್ತು ಮೂಲಸೌಕರ್ಯಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ರೇಖಾ ಮಡಿವಾಳ, ಸದಸ್ಯರಾದ ಮಲ್ಲೇಶ ಖಟಾವಿ, ನಾಗರಾಜ ಹಡಪದ, ಸಂಗೀತ ಮಗದುಮ್ಮ, ರುಕ್ಷಾನ ಅಲಾಸ, ಅಶ್ವಿನಿ ಗಾರಿಮನಿ, ಶಾಂತ ಕಾಂಬಳೆ, ಸುನಿತಾ ನಾಯಕ, ಸುಮಿತ್ರ ಬೀಸೆ, ಸುವರ್ಣಾ ನಿರ್ಲೇಕರ ಹಾಗೂ ಶಿಕ್ಷಕರಾದ ಎಸ್ ಎನ್ ಮಾಕನವರ, ಕೆ ಎಸ್ ನಾಯ್ಕೋಡಿ, ಪಿ ಎಸ್ ಪಕೀರೆ, ವಿ ಬಿ ಪಾಟೀಲ, ಆರ್ ಬಿ ನಿಲಜಗಿ, ಎ ಎಸ್ ಚೌಗಲಾ, ವಿ ಎಂ ಪೂಜಾರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
    user_Mahesh sharma
    Mahesh sharma
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    14 hrs ago
  • ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ಹೆಸರು ಅಜರಾಮರವಾಗಿದೆ. ಆದರೆ ಕುಕನೂರು ಪಟ್ಟಣದಲ್ಲಿರುವ ಅವರದೇ ಹೆಸರಿನ ಗಾಂಧಿನಗರಕ್ಕೆ ಇಂದಿಗೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಅಲ್ಲಿನ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ 12ನೇ ವಾರ್ಡ್‌ನ ಗಾಂಧಿನಗರದಲ್ಲಿ ಚರಂಡಿಗಳು ತುಂಬಿ ಹರಿಯುತ್ತಿದ್ದು, ಕಸಕಡ್ಡಿಗಳೆಲ್ಲ ಮನೆಗಳ ಬಾಗಿಲಿಗೆ ಬಂದು ನಿಲ್ಲುತ್ತಿವೆ. ಇದರಿಂದಾಗಿ ನಿವಾಸಿಗಳು ಮೂಗು ಮುಚ್ಚಿಕೊಂಡು ವಾಸಿಸುವಂತಾಗಿದ್ದು, ವಿವಿಧ ರೋಗರುಜಿನಗಳಿಗೆ ತುತ್ತಾಗುವ ಭೀತಿ ಎದುರಾಗಿದೆ. ಚರಂಡಿ ಮಾರ್ಗಗಳಲ್ಲಿ ಅನಧಿಕೃತವಾಗಿ ಅಕ್ರಮ ಕಟ್ಟಡಗಳು ನಿರ್ಮಾಣಗೊಂಡಿರುವುದೇ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಚರಂಡಿ ನೀರು ಸುಗಮವಾಗಿ ಹರಿದು ಹೋಗಲು ದಾರಿ ಕಲ್ಪಿಸಿಕೊಡುವಂತೆ 12ನೇ ವಾರ್ಡಿನ ನಿವಾಸಿಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಅಧಿಕಾರಿಗಳು ಗಾಂಧಿನಗರಕ್ಕೆ ಸ್ವಾತಂತ್ರ್ಯ ಸಿಗದ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರದ ವತಿಯಿಂದ ಸ್ವಚ್ಛತೆ ಮತ್ತು ಸಾರ್ವಜನಿಕರ ಆರೋಗ್ಯಕ್ಕಾಗಿ ಸಾಕಷ್ಟು ಹಣ ಬಿಡುಗಡೆಯಾಗುತ್ತಿದ್ದರೂ, ತಾಲೂಕು ಕೇಂದ್ರವಾದ ಪಟ್ಟಣದಲ್ಲಿಯೇ ಇಂತಹ ದುಸ್ಥಿತಿ ಇದೆ ಎಂದರೆ ಇನ್ನು ಹಳ್ಳಿಗಳ ಪಾಡೇನು ಎಂದು ನಿವಾಸಿಗಳು ಪ್ರಶ್ನಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಸ್ವಚ್ಛತೆಯ ಕೊರತೆಯ ಜೊತೆಗೆ ಗಾಂಧಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದ್ದು, ಸರಿಯಾದ ಸಮಯಕ್ಕೆ ನೀರು ಬಾರದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೇವಲ ಮತ ಬ್ಯಾಂಕ್‌ಗಾಗಿ ಚುನಾವಣೆ ಸಮಯದಲ್ಲಿ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು, ತಮ್ಮ ಮತಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸ್ವಲ್ಪಮಟ್ಟಿಗಾದರೂ ತಿಳಿದುಕೊಂಡಿರಬೇಕು ಎಂದು ವಾರ್ಡಿನ ನಿವಾಸಿಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಈ ವರದಿಯನ್ನಾದರೂ ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇನ್ನು ಮುಂದಾದರೂ ಗಾಂಧಿನಗರಕ್ಕೆ ಸ್ವಚ್ಛತೆಯ ಸ್ವಾತಂತ್ರ್ಯವನ್ನು ಕಲ್ಪಿಸಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. (ವರದಿ: ಚನ್ನಯ್ಯ ಹಿರೇಮಠ, ಕುಕನೂರು)
    4
    ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ಹೆಸರು ಅಜರಾಮರವಾಗಿದೆ. ಆದರೆ ಕುಕನೂರು ಪಟ್ಟಣದಲ್ಲಿರುವ ಅವರದೇ ಹೆಸರಿನ ಗಾಂಧಿನಗರಕ್ಕೆ ಇಂದಿಗೂ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದು ಅಲ್ಲಿನ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ 12ನೇ ವಾರ್ಡ್‌ನ ಗಾಂಧಿನಗರದಲ್ಲಿ ಚರಂಡಿಗಳು ತುಂಬಿ ಹರಿಯುತ್ತಿದ್ದು, ಕಸಕಡ್ಡಿಗಳೆಲ್ಲ ಮನೆಗಳ ಬಾಗಿಲಿಗೆ ಬಂದು ನಿಲ್ಲುತ್ತಿವೆ. ಇದರಿಂದಾಗಿ ನಿವಾಸಿಗಳು ಮೂಗು ಮುಚ್ಚಿಕೊಂಡು ವಾಸಿಸುವಂತಾಗಿದ್ದು, ವಿವಿಧ ರೋಗರುಜಿನಗಳಿಗೆ ತುತ್ತಾಗುವ ಭೀತಿ ಎದುರಾಗಿದೆ.

ಚರಂಡಿ ಮಾರ್ಗಗಳಲ್ಲಿ ಅನಧಿಕೃತವಾಗಿ ಅಕ್ರಮ ಕಟ್ಟಡಗಳು ನಿರ್ಮಾಣಗೊಂಡಿರುವುದೇ ಈ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಈ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಚರಂಡಿ ನೀರು ಸುಗಮವಾಗಿ ಹರಿದು ಹೋಗಲು ದಾರಿ ಕಲ್ಪಿಸಿಕೊಡುವಂತೆ 12ನೇ ವಾರ್ಡಿನ ನಿವಾಸಿಗಳು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಅಧಿಕಾರಿಗಳು ಗಾಂಧಿನಗರಕ್ಕೆ ಸ್ವಾತಂತ್ರ್ಯ ಸಿಗದ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಸರ್ಕಾರದ ವತಿಯಿಂದ ಸ್ವಚ್ಛತೆ ಮತ್ತು ಸಾರ್ವಜನಿಕರ ಆರೋಗ್ಯಕ್ಕಾಗಿ ಸಾಕಷ್ಟು ಹಣ ಬಿಡುಗಡೆಯಾಗುತ್ತಿದ್ದರೂ, ತಾಲೂಕು ಕೇಂದ್ರವಾದ ಪಟ್ಟಣದಲ್ಲಿಯೇ ಇಂತಹ ದುಸ್ಥಿತಿ ಇದೆ ಎಂದರೆ ಇನ್ನು ಹಳ್ಳಿಗಳ ಪಾಡೇನು ಎಂದು ನಿವಾಸಿಗಳು ಪ್ರಶ್ನಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸ್ವಚ್ಛತೆಯ ಕೊರತೆಯ ಜೊತೆಗೆ ಗಾಂಧಿನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದ್ದು, ಸರಿಯಾದ ಸಮಯಕ್ಕೆ ನೀರು ಬಾರದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕೇವಲ ಮತ ಬ್ಯಾಂಕ್‌ಗಾಗಿ ಚುನಾವಣೆ ಸಮಯದಲ್ಲಿ ಮನೆ ಬಾಗಿಲಿಗೆ ಬರುವ ಜನಪ್ರತಿನಿಧಿಗಳು, ತಮ್ಮ ಮತಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸ್ವಲ್ಪಮಟ್ಟಿಗಾದರೂ ತಿಳಿದುಕೊಂಡಿರಬೇಕು ಎಂದು ವಾರ್ಡಿನ ನಿವಾಸಿಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಈ ವರದಿಯನ್ನಾದರೂ ವೀಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇನ್ನು ಮುಂದಾದರೂ ಗಾಂಧಿನಗರಕ್ಕೆ ಸ್ವಚ್ಛತೆಯ ಸ್ವಾತಂತ್ರ್ಯವನ್ನು ಕಲ್ಪಿಸಿಕೊಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. (ವರದಿ: ಚನ್ನಯ್ಯ ಹಿರೇಮಠ, ಕುಕನೂರು)
    user_ಚನ್ನಯ್ಯ ಹಿರೇಮಠ ಕುಕನೂರು
    ಚನ್ನಯ್ಯ ಹಿರೇಮಠ ಕುಕನೂರು
    ಕೊಪ್ಪಳ, ಕೊಪ್ಪಳ, ಕರ್ನಾಟಕ•
    4 hrs ago
  • ಪ್ರಸಿದ್ಧ ಗಾಯಕಿ ಎಸ್. ಜಾನಕಿ ಅವರ ನೆನಪಿನಲ್ಲಿ ಮೈಸೂರಿನಲ್ಲಿ ಸುಸಜ್ಜಿತ ಸ್ಮಾರಕವೊಂದನ್ನು ನಿರ್ಮಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್. ಜಾನಕಿ ಅವರು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ, ತಮ್ಮ ಹಾಡುಗಳು ಮತ್ತು ಸಂಗೀತದ ಮೂಲಕ ಕನ್ನಡಿಗರ ಹೃದಯದಲ್ಲಿ ಎಂದಿಗೂ ಚಿರಸ್ಥಾಯಿಯಾಗಿ ಇರಲಿದ್ದಾರೆ ಎಂದು ಸ್ಮರಿಸಿದರು. ಎಸ್. ಜಾನಕಿ ಅವರ ಸಾಧನೆಯನ್ನು ಕೊಂಡಾಡಿದ ಬೊಮ್ಮಾಯಿ, ಅವರು ಐದು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಸೇವೆ ಸಲ್ಲಿಸಿದ್ದು, ಕನ್ನಡ, ತಮಿಳು, ತೆಲುಗು ಸೇರಿದಂತೆ 17 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಎಂದು ಹೇಳಿದರು. ಮಗುವಿನ ಧ್ವನಿಯಿಂದ ಹಿಡಿದು ವಯೋವೃದ್ಧರ ಧ್ವನಿಯವರೆಗೆ ಧ್ವನಿ ಬದಲಾಯಿಸುವ ಅದ್ಭುತ ಶಕ್ತಿ ಹೊಂದಿದ್ದ ಅವರು ಸಾಕ್ಷಾತ್ ಸರಸ್ವತಿಯ ಪ್ರತಿರೂಪದಂತಿದ್ದರು ಎಂದರು. ಅಲ್ಲದೆ, ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆಯಬೇಕೆಂಬ ಮತ್ತು ತಮ್ಮ ಅಂತಿಮ ಸಂಸ್ಕಾರವೂ ಮೈಸೂರಿನಲ್ಲೇ ನಡೆಯಬೇಕೆಂಬ ಜಾನಕಿ ಅವರ ಇಚ್ಛೆಯು ಅವರಿಗೆ ಕರ್ನಾಟಕದ ಮೇಲಿದ್ದ ಪ್ರೀತಿಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು. ಮೈಸೂರಿನಲ್ಲಿ ನಿರ್ಮಿಸಬೇಕಾದ ಸ್ಮಾರಕದಲ್ಲಿ ಜಾನಕಿ ಅವರು ಹಾಡಿರುವ ವಿವಿಧ ಪ್ರಕಾರದ ಹಾಡುಗಳ ಸಂಗ್ರಹ, ಅವರ ಹಾಡುವ ಶೈಲಿಯ ಬಗ್ಗೆ ಸಂಶೋಧನೆ ನಡೆಸಲು ಅವಕಾಶ ಮತ್ತು ಸಂಗೀತ ಕಲಿಯುವ ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು. ಇದೇ ವೇಳೆ, ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ಆಯೋಜಿಸುವ ಕುರಿತು ನಡೆಯುತ್ತಿರುವ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಾಧಕ-ಬಾಧಕಗಳ ಚರ್ಚೆ ಸಹಜವಾಗಿದ್ದು, ಅಂತಿಮ ನಿರ್ಧಾರವನ್ನು ಮೈಸೂರು ದಸರಾ ಸಮಿತಿಯೇ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
    1
    ಪ್ರಸಿದ್ಧ ಗಾಯಕಿ ಎಸ್. ಜಾನಕಿ ಅವರ ನೆನಪಿನಲ್ಲಿ ಮೈಸೂರಿನಲ್ಲಿ ಸುಸಜ್ಜಿತ ಸ್ಮಾರಕವೊಂದನ್ನು ನಿರ್ಮಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್. ಜಾನಕಿ ಅವರು ಭೌತಿಕವಾಗಿ ನಮ್ಮನ್ನು ಅಗಲಿದ್ದರೂ, ತಮ್ಮ ಹಾಡುಗಳು ಮತ್ತು ಸಂಗೀತದ ಮೂಲಕ ಕನ್ನಡಿಗರ ಹೃದಯದಲ್ಲಿ ಎಂದಿಗೂ ಚಿರಸ್ಥಾಯಿಯಾಗಿ ಇರಲಿದ್ದಾರೆ ಎಂದು ಸ್ಮರಿಸಿದರು.

ಎಸ್. ಜಾನಕಿ ಅವರ ಸಾಧನೆಯನ್ನು ಕೊಂಡಾಡಿದ ಬೊಮ್ಮಾಯಿ, ಅವರು ಐದು ದಶಕಗಳಿಗೂ ಹೆಚ್ಚು ಕಾಲ ಸಂಗೀತ ಸೇವೆ ಸಲ್ಲಿಸಿದ್ದು, ಕನ್ನಡ, ತಮಿಳು, ತೆಲುಗು ಸೇರಿದಂತೆ 17 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ ಎಂದು ಹೇಳಿದರು. ಮಗುವಿನ ಧ್ವನಿಯಿಂದ ಹಿಡಿದು ವಯೋವೃದ್ಧರ ಧ್ವನಿಯವರೆಗೆ ಧ್ವನಿ ಬದಲಾಯಿಸುವ ಅದ್ಭುತ ಶಕ್ತಿ ಹೊಂದಿದ್ದ ಅವರು ಸಾಕ್ಷಾತ್ ಸರಸ್ವತಿಯ ಪ್ರತಿರೂಪದಂತಿದ್ದರು ಎಂದರು. ಅಲ್ಲದೆ, ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆಯಬೇಕೆಂಬ ಮತ್ತು ತಮ್ಮ ಅಂತಿಮ ಸಂಸ್ಕಾರವೂ ಮೈಸೂರಿನಲ್ಲೇ ನಡೆಯಬೇಕೆಂಬ ಜಾನಕಿ ಅವರ ಇಚ್ಛೆಯು ಅವರಿಗೆ ಕರ್ನಾಟಕದ ಮೇಲಿದ್ದ ಪ್ರೀತಿಯನ್ನು ತೋರಿಸುತ್ತದೆ ಎಂದು ಅವರು ತಿಳಿಸಿದರು.

ಮೈಸೂರಿನಲ್ಲಿ ನಿರ್ಮಿಸಬೇಕಾದ ಸ್ಮಾರಕದಲ್ಲಿ ಜಾನಕಿ ಅವರು ಹಾಡಿರುವ ವಿವಿಧ ಪ್ರಕಾರದ ಹಾಡುಗಳ ಸಂಗ್ರಹ, ಅವರ ಹಾಡುವ ಶೈಲಿಯ ಬಗ್ಗೆ ಸಂಶೋಧನೆ ನಡೆಸಲು ಅವಕಾಶ ಮತ್ತು ಸಂಗೀತ ಕಲಿಯುವ ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು. ಇದೇ ವೇಳೆ, ಮೈಸೂರು ದಸರಾದಲ್ಲಿ ಕಂಬಳ ಕ್ರೀಡೆ ಆಯೋಜಿಸುವ ಕುರಿತು ನಡೆಯುತ್ತಿರುವ ಚರ್ಚೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಾಧಕ-ಬಾಧಕಗಳ ಚರ್ಚೆ ಸಹಜವಾಗಿದ್ದು, ಅಂತಿಮ ನಿರ್ಧಾರವನ್ನು ಮೈಸೂರು ದಸರಾ ಸಮಿತಿಯೇ ತೆಗೆದುಕೊಳ್ಳಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
    user_ಬಸವರಾಜ ವೀ ಎಚ್
    ಬಸವರಾಜ ವೀ ಎಚ್
    ಶಿಗ್ಗಾಂವ್, ಹಾವೇರಿ, ಕರ್ನಾಟಕ•
    3 hrs ago
  • ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಜಮೀನು ವಿಚಾರವಾಗಿ ಭೀಕರ ಮಾರಾಮಾರಿ ನಡೆದಿದ್ದು, ಕಬ್ಬು ಕಟಾವು ಮಾಡುವ ವಿಷಯದಲ್ಲಿ ಉಂಟಾದ ಗಲಾಟೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ನಿಡಗುಂದಿ ನಿವಾಸಿ ಮಿಥುನ ಯಮನಪ್ಪ ಭಜಂತ್ರಿ ಎಂಬುವವರು ಅಣ್ಣಾಸಾಬ ಖೇಮಲಾಪುರ್ ಅವರ 6 ಎಕರೆ ಜಮೀನಿನ ಪೈಕಿ 2 ಎಕರೆ ಜಮೀನಿನಲ್ಲಿ ಕಳೆದ 5 ವರ್ಷಗಳಿಂದ ಪಾಲುದಾರಿಕೆ ಆಧಾರದ ಮೇಲೆ ಕಬ್ಬು ಬೆಳೆದು ಕಟಾವು ಮಾಡುತ್ತಿದ್ದರು. ಈ ವೇಳೆ ಅವರು ಹಾಗೂ ಅವರ ಚಿಕ್ಕಪ್ಪನ ಮಗ ಯಮನಪ್ಪ ಭಜಂತ್ರಿ ಸೇರಿ ಬೆಳೆದಿದ್ದ ಕಬ್ಬನ್ನು ಸುಮಾರು 12ಕ್ಕೂ ಹೆಚ್ಚು ಮಂದಿ ಯಾವುದೇ ಅನುಮತಿಯಿಲ್ಲದೆ ಏಕಾಏಕಿ ಬಂದು ಕಟಾವು ಮಾಡಲು ಆರಂಭಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಇದನ್ನು ಪ್ರಶ್ನಿಸಲು ಹೋದಾಗ ಸುಕುಮಾರ ದೇವಪ್ಪ ಖೆಮಲಾಪೂರೆ ಎಂಬಾತ ತಲೆಗೆ ಹೊಡೆಯಲು ಯತ್ನಿಸಿದ್ದು, ತಪ್ಪಿಸಿಕೊಳ್ಳುವಾಗ ಮಿಥುನ ಅವರ ಕೈಗೆ ಗಾಯವಾಗಿದೆ. ಆ ಬಳಿಕ ಬಾಹುಬಲಿ ಮನೋಹರ ಖೆಮಲಾಪೂರೆ ಎಂಬಾತ ಕಬ್ಬಿನ ಮಡ್ಡಿನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಲಾಟೆಯನ್ನು ಬಿಡಿಸಲು ಬಂದ ಇತರರ ಮೇಲೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಲಾಗಿದ್ದು, ಗಾಯಗೊಂಡ ಮಿಥುನ ಯಮನಪ್ಪ ಭಜಂತ್ರಿ ಹಾಗೂ ಪ್ರವೀಣಕುಮಾರ ಅಣ್ಣಾಸಾಬ ಖೆಮಲಾಪೂರೆ ಅವರನ್ನು ರಾಯಬಾಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತರು ಒತ್ತಾಯಿಸಿದ್ದಾರೆ.
    1
    ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಜಮೀನು ವಿಚಾರವಾಗಿ ಭೀಕರ ಮಾರಾಮಾರಿ ನಡೆದಿದ್ದು, ಕಬ್ಬು ಕಟಾವು ಮಾಡುವ ವಿಷಯದಲ್ಲಿ ಉಂಟಾದ ಗಲಾಟೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ನಿಡಗುಂದಿ ನಿವಾಸಿ ಮಿಥುನ ಯಮನಪ್ಪ ಭಜಂತ್ರಿ ಎಂಬುವವರು ಅಣ್ಣಾಸಾಬ ಖೇಮಲಾಪುರ್ ಅವರ 6 ಎಕರೆ ಜಮೀನಿನ ಪೈಕಿ 2 ಎಕರೆ ಜಮೀನಿನಲ್ಲಿ ಕಳೆದ 5 ವರ್ಷಗಳಿಂದ ಪಾಲುದಾರಿಕೆ ಆಧಾರದ ಮೇಲೆ ಕಬ್ಬು ಬೆಳೆದು ಕಟಾವು ಮಾಡುತ್ತಿದ್ದರು. ಈ ವೇಳೆ ಅವರು ಹಾಗೂ ಅವರ ಚಿಕ್ಕಪ್ಪನ ಮಗ ಯಮನಪ್ಪ ಭಜಂತ್ರಿ ಸೇರಿ ಬೆಳೆದಿದ್ದ ಕಬ್ಬನ್ನು ಸುಮಾರು 12ಕ್ಕೂ ಹೆಚ್ಚು ಮಂದಿ ಯಾವುದೇ ಅನುಮತಿಯಿಲ್ಲದೆ ಏಕಾಏಕಿ ಬಂದು ಕಟಾವು ಮಾಡಲು ಆರಂಭಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ಇದನ್ನು ಪ್ರಶ್ನಿಸಲು ಹೋದಾಗ ಸುಕುಮಾರ ದೇವಪ್ಪ ಖೆಮಲಾಪೂರೆ ಎಂಬಾತ ತಲೆಗೆ ಹೊಡೆಯಲು ಯತ್ನಿಸಿದ್ದು, ತಪ್ಪಿಸಿಕೊಳ್ಳುವಾಗ ಮಿಥುನ ಅವರ ಕೈಗೆ ಗಾಯವಾಗಿದೆ. ಆ ಬಳಿಕ ಬಾಹುಬಲಿ ಮನೋಹರ ಖೆಮಲಾಪೂರೆ ಎಂಬಾತ ಕಬ್ಬಿನ ಮಡ್ಡಿನಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಲಾಟೆಯನ್ನು ಬಿಡಿಸಲು ಬಂದ ಇತರರ ಮೇಲೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಲಾಗಿದ್ದು, ಗಾಯಗೊಂಡ ಮಿಥುನ ಯಮನಪ್ಪ ಭಜಂತ್ರಿ ಹಾಗೂ ಪ್ರವೀಣಕುಮಾರ ಅಣ್ಣಾಸಾಬ ಖೆಮಲಾಪೂರೆ ಅವರನ್ನು ರಾಯಬಾಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತರು ಒತ್ತಾಯಿಸಿದ್ದಾರೆ.
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    1 hr ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.