logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ; ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ – ಸಚಿವ ಕೆ.ಹೆಚ್.ಮುನಿಯಪ್ಪ ಬೆಂಗಳೂರು ಗ್ರಾಮಾಂತರ: ಮದ್ಯಪಾನ, ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇಂದು ಅಮಿಟಿ ವಿಶ್ವವಿದ್ಯಾಲಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವಿಭಾಗದ ವತಿಯಿಂದ ಹ್ಮಮಿಕೊಂಡಿದ್ದ ಡ್ರಗ್ಸ್ ಮುಕ್ತ ಸಮಾಜಕ್ಕಾಗಿ *ಡ್ರಗ್ಸ್ ಬೇಡ ಬ್ರೊ* ಜಾಗೃತಿ ಅಭಿಯಾನಕ್ಕೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಯುವಕರು ಮಾದಕ ವಸ್ತುಗಳಿಂದ ದೂರವಿದ್ದು ಸದ್ಗುಣ, ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರುವಂತೆ ನೋಡಿಕೊಳ್ಳುವುದು ಶೈಕ್ಷಣಿಕ ಸಂಸ್ಥೆ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದರು. ಮಹಾತ್ಮ ಗಾಂಧೀಜಿ, ಸರದಾರ್ ವಲ್ಲಭಾಯ್ ಪಟೇಲ್ ಸೇರಿದಂತೆ ದೇಶಭಕ್ತರ ನಮ್ಮ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕೆಂದು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಮಹಾತ್ಮರು ಉಳಿಸಿ ಬೆಳೆಸಿದ ನಮ್ಮ ದೇಶವನ್ನು ಯುವ ಪೀಳಿಗೆ ಕೊಂಡೊಯ್ಯುವ ಕೆಲಸ ಮಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಕ್ಕಳು ದೇಶದ ಆಸ್ತಿ, ನಮ್ಮ ದೇಶದ ಅಭಿವೃದ್ಧಿಯ ಪಥದಲ್ಲಿ ಸಾಗಲು ಪೂರಕವಾಗುವಂತಹ ಕಾರ್ಯವನ್ನು ಮಾಡಿ. ತಂದೆ-ತಾಯಿ, ಕುಟುಂಬ, ಸಮಾಜಕ್ಕೆ ಸತ್ಕೀರ್ತಿ ಯನ್ನು ತನ್ನಿ. ಡ್ರಗ್ಸ್ ಮುಕ್ತ ಸಮಾಜಕ್ಕೆ ವೈಜ್ಞಾನಿಕ ಸಲಹೆಗಳು ಇದ್ದರೆ ಪೋಲಿಸ್ ಇಲಾಖೆ ತಿಳಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಮಾತನಾಡಿ ಯುವ ಪೀಳಿಗೆ ಸನ್ಮಾರ್ಗದಲ್ಲಿ ನಡೆಯಬೇಕು. ಒಂದು ಬಾರಿ ಡ್ರಗ್ಸ್ ಸೇವನೆಯಿಂದ ಏನು ಆಗುವುದಿಲ್ಲ ಎಂದು ನಿಮ್ಮ ಸ್ನೇಹಿತರು ನಿಮಗೆ ಸಲಹೆಯನ್ನು ಕೊಟ್ಟರೆ ಅದನ್ನು ಎಂದಿಗೂ ನೀವು ಪಾಲಿಸಬೇಡಿ. ಡ್ರಗ್ ಸೇವನೆ ಹವ್ಯಾಸವಾಗಿ ಮಾರ್ಪಾಟ್ಟು ಜೀವನ ಹಾಳಾಗುವುದರ ಜೊತೆಗೆ ಕುಟುಂಬವು ನೋವು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. ಇಂದಿನಿಂದಲೇ ದೃಢ ನಿರ್ಧಾರ ತೆಗೆದುಕೊಂಡು ಡ್ರಗ್ಸ್ ಮುಕ್ತ ದೇಶ ನಿರ್ಮಾಣಕ್ಕೆ ಯುವ ಪೀಳಿಗೆ ಜೊತೆಯಾಗಬೇಕು. ಶಾಲಾ ಕಾಲೇಜು ಸುತ್ತಮುತ್ತ ಡ್ರಗ್ಸ್ ಮಾರಾಟ ಅಥವಾ ಮಾರಾಟ ಮಾಡುವವರು ಕಂಡು ಬಂದರೆ ಮಕ್ಕಳ ಸಹಾಯವಾಣಿ 1098 ಕರೆ ಮಾಡಿ ಅಥವಾ ಪೊಲೀಸರಿಗೆ ಮಾಹಿತಿ ನೀಡಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಮಾತನಾಡಿ ಡ್ರಗ್ಸ್ ಮಾರಾಟಗಾರರು ದುಡಿಯುವ ವರ್ಗ, ಯುವ ಸಮೂಹವನ್ನು ಗುರಿಯಾಗಿಸಿದೆ. ಎಷ್ಟೋ ಕುಟುಂಬಗಳು ಡ್ರಗ್ಸ್ ಜಾಲದಲ್ಲಿ ಸಿಲುಕಿ ಇಂದು ಕಣ್ಣೀರು ಹಾಕುತ್ತಿದ್ದಾರೆ. ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟದಿದ್ದರೆ ಮುಂದೆ ಕೆಟ್ಟ ಪರಿಣಾಮವನ್ನು ಸಮಾಜ ಎದುರಿಸಬೇಕಾಗುತ್ತದೆ ಎಂದರು. ಇಂದಿನ ಪರಿಸ್ಥಿಯಲ್ಲಿ ನಾವು ಎಲ್ಲಾ ಕಡೆಗಳಲ್ಲೂ ಮನೆ, ಮಕ್ಕಳ ಕೊಠಡಿ, ಪುಸ್ತಕಗಳಲ್ಲಿ ಮಾದಕ ವಸ್ತುಗಳು ಪರಿಶೋಧನೆ ಮಾಡುವಂಥ ಪರಿಸ್ಥಿತಿ ಉದ್ಭವಾಗಿದೆ. ದುಶ್ಚಟಗಳಿಂದ ದೂರವಿದ್ದು ಒಳ್ಳೆಯ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶವನ್ನು ಮುನ್ನಡೆಸುವ ಕಾರ್ಯ ಯುವ ಪೀಳಿಗೆ ನಿಮ್ಮ ಮೇಲಿದೆ ಎಂದರು. ಇದೇ ಸಂದರ್ಭದಲ್ಲಿ ಡ್ರಗ್ಸ್ ಬೇಡ ಬ್ರೋ ಅಭಿಯಾನದದ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ವಿವಿಧ ಶಾಲಾ ಕಾಲೇಜುಗಳಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಎಎಸ್ಪಿ ಲಕ್ಷ್ಮಿನಾರಾಯಣ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಾಜಣ್ಣ, ಅಮಿಟಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಸುಧಾಕರ್, ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.

19 hrs ago
user_Lavanya
Lavanya
Local News Reporter ಪಾವಗಡ, ತುಮಕೂರು, ಕರ್ನಾಟಕ•
19 hrs ago
8b7ce904-b4d8-445c-a63a-52f45a23af16

ಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ; ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ – ಸಚಿವ ಕೆ.ಹೆಚ್.ಮುನಿಯಪ್ಪ ಬೆಂಗಳೂರು ಗ್ರಾಮಾಂತರ: ಮದ್ಯಪಾನ, ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗದೆ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ ಎಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇಂದು ಅಮಿಟಿ ವಿಶ್ವವಿದ್ಯಾಲಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವಿಭಾಗದ ವತಿಯಿಂದ ಹ್ಮಮಿಕೊಂಡಿದ್ದ ಡ್ರಗ್ಸ್ ಮುಕ್ತ ಸಮಾಜಕ್ಕಾಗಿ *ಡ್ರಗ್ಸ್ ಬೇಡ ಬ್ರೊ* ಜಾಗೃತಿ ಅಭಿಯಾನಕ್ಕೆ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಯುವಕರು ಮಾದಕ ವಸ್ತುಗಳಿಂದ ದೂರವಿದ್ದು ಸದ್ಗುಣ, ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿರುವಂತೆ ನೋಡಿಕೊಳ್ಳುವುದು ಶೈಕ್ಷಣಿಕ ಸಂಸ್ಥೆ ಮತ್ತು ಸಮಾಜದ ಜವಾಬ್ದಾರಿಯಾಗಿದೆ ಎಂದರು. ಮಹಾತ್ಮ ಗಾಂಧೀಜಿ, ಸರದಾರ್ ವಲ್ಲಭಾಯ್ ಪಟೇಲ್ ಸೇರಿದಂತೆ ದೇಶಭಕ್ತರ ನಮ್ಮ ದೇಶವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಬೇಕೆಂದು ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಮಹಾತ್ಮರು ಉಳಿಸಿ ಬೆಳೆಸಿದ ನಮ್ಮ ದೇಶವನ್ನು ಯುವ ಪೀಳಿಗೆ ಕೊಂಡೊಯ್ಯುವ ಕೆಲಸ ಮಾಡಿ ಬಲಿಷ್ಠ

29701d2b-ff0e-4f49-b0e0-b0e6ca98e535

ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಮಕ್ಕಳು ದೇಶದ ಆಸ್ತಿ, ನಮ್ಮ ದೇಶದ ಅಭಿವೃದ್ಧಿಯ ಪಥದಲ್ಲಿ ಸಾಗಲು ಪೂರಕವಾಗುವಂತಹ ಕಾರ್ಯವನ್ನು ಮಾಡಿ. ತಂದೆ-ತಾಯಿ, ಕುಟುಂಬ, ಸಮಾಜಕ್ಕೆ ಸತ್ಕೀರ್ತಿ ಯನ್ನು ತನ್ನಿ. ಡ್ರಗ್ಸ್ ಮುಕ್ತ ಸಮಾಜಕ್ಕೆ ವೈಜ್ಞಾನಿಕ ಸಲಹೆಗಳು ಇದ್ದರೆ ಪೋಲಿಸ್ ಇಲಾಖೆ ತಿಳಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಮಾತನಾಡಿ ಯುವ ಪೀಳಿಗೆ ಸನ್ಮಾರ್ಗದಲ್ಲಿ ನಡೆಯಬೇಕು. ಒಂದು ಬಾರಿ ಡ್ರಗ್ಸ್ ಸೇವನೆಯಿಂದ ಏನು ಆಗುವುದಿಲ್ಲ ಎಂದು ನಿಮ್ಮ ಸ್ನೇಹಿತರು ನಿಮಗೆ ಸಲಹೆಯನ್ನು ಕೊಟ್ಟರೆ ಅದನ್ನು ಎಂದಿಗೂ ನೀವು ಪಾಲಿಸಬೇಡಿ. ಡ್ರಗ್ ಸೇವನೆ ಹವ್ಯಾಸವಾಗಿ ಮಾರ್ಪಾಟ್ಟು ಜೀವನ ಹಾಳಾಗುವುದರ ಜೊತೆಗೆ ಕುಟುಂಬವು ನೋವು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು. ಇಂದಿನಿಂದಲೇ ದೃಢ ನಿರ್ಧಾರ ತೆಗೆದುಕೊಂಡು ಡ್ರಗ್ಸ್ ಮುಕ್ತ ದೇಶ ನಿರ್ಮಾಣಕ್ಕೆ ಯುವ ಪೀಳಿಗೆ ಜೊತೆಯಾಗಬೇಕು. ಶಾಲಾ ಕಾಲೇಜು ಸುತ್ತಮುತ್ತ ಡ್ರಗ್ಸ್ ಮಾರಾಟ ಅಥವಾ ಮಾರಾಟ ಮಾಡುವವರು ಕಂಡು ಬಂದರೆ ಮಕ್ಕಳ ಸಹಾಯವಾಣಿ 1098 ಕರೆ ಮಾಡಿ ಅಥವಾ ಪೊಲೀಸರಿಗೆ ಮಾಹಿತಿ ನೀಡಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

1db9b99b-cbe6-45e9-a816-b124cb6c9532

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಮಾತನಾಡಿ ಡ್ರಗ್ಸ್ ಮಾರಾಟಗಾರರು ದುಡಿಯುವ ವರ್ಗ, ಯುವ ಸಮೂಹವನ್ನು ಗುರಿಯಾಗಿಸಿದೆ. ಎಷ್ಟೋ ಕುಟುಂಬಗಳು ಡ್ರಗ್ಸ್ ಜಾಲದಲ್ಲಿ ಸಿಲುಕಿ ಇಂದು ಕಣ್ಣೀರು ಹಾಕುತ್ತಿದ್ದಾರೆ. ಮಾದಕ ವಸ್ತುಗಳ ಬಳಕೆಯನ್ನು ತಡೆಗಟ್ಟದಿದ್ದರೆ ಮುಂದೆ ಕೆಟ್ಟ ಪರಿಣಾಮವನ್ನು ಸಮಾಜ ಎದುರಿಸಬೇಕಾಗುತ್ತದೆ ಎಂದರು. ಇಂದಿನ ಪರಿಸ್ಥಿಯಲ್ಲಿ ನಾವು ಎಲ್ಲಾ ಕಡೆಗಳಲ್ಲೂ ಮನೆ, ಮಕ್ಕಳ ಕೊಠಡಿ, ಪುಸ್ತಕಗಳಲ್ಲಿ ಮಾದಕ ವಸ್ತುಗಳು ಪರಿಶೋಧನೆ ಮಾಡುವಂಥ ಪರಿಸ್ಥಿತಿ ಉದ್ಭವಾಗಿದೆ. ದುಶ್ಚಟಗಳಿಂದ ದೂರವಿದ್ದು ಒಳ್ಳೆಯ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶವನ್ನು ಮುನ್ನಡೆಸುವ ಕಾರ್ಯ ಯುವ ಪೀಳಿಗೆ ನಿಮ್ಮ ಮೇಲಿದೆ ಎಂದರು. ಇದೇ ಸಂದರ್ಭದಲ್ಲಿ ಡ್ರಗ್ಸ್ ಬೇಡ ಬ್ರೋ ಅಭಿಯಾನದದ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ವಿವಿಧ ಶಾಲಾ ಕಾಲೇಜುಗಳಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಎಎಸ್ಪಿ ಲಕ್ಷ್ಮಿನಾರಾಯಣ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರಾಜಣ್ಣ, ಅಮಿಟಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಸುಧಾಕರ್, ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.

More news from ಕರ್ನಾಟಕ and nearby areas
  • ಯಾವುದೇ ಕಾರಣಕ್ಕೂ ಬಂದ್‌ ಬೇಡ, ಅದರಿಂದ ಪರಿಹಾರ ಸಿಗಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಬೆಂಗಳೂರು, ಜುಲೈ 31: ರಾಜ್ಯದಲ್ಲಿ ಕಾವೇರಿ ಜಲ ವಿವಾದ ಮತ್ತೆ ಕಾವು ಪಡೆದುಕೊಂಡಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ ಆದೇಶವನ್ನು ಖಂಡಿಸಿ, ಕನ್ನಡಪರ ಸಂಘಟನೆಗಳು ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಕುರಿತು ಶಾಸನಸೌಧದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಂದ್ ನಿರ್ಧಾರವನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ. ಬಂದ್‌ನಿಂದ ಜನಸಾಮಾನ್ಯರಿಗೆ ತೊಂದರೆ "ಯಾವುದೇ ಕಾರಣಕ್ಕೂ ಬಂದ್‌ ಬೇಡ, ಬಂದ್‌ನಿಂದ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ" ಎಂದು ಸಿಎಂ ಸ್ಪಷ್ಟಪಡಿಸಿದರು. ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದ ಅವರು, "CWMA ಸಭೆಗೆ ರಾಜ್ಯದ ಪರವಾಗಿ ಮೂವರು ಹಿರಿಯ ಅಧಿಕಾರಿಗಳು ಹಾಜರಾಗಿದ್ದರು. ಎಸಿಎಸ್‌ ಗೌರವ್ ಗುಪ್ತಾ ಅವರು ರಾಜ್ಯದ ಪರ ಬಲವಾದ ವಾದ ಮಂಡಿಸಿ, ನೀರು ಬಿಡುಗಡೆಗೆ ಕಾಲಾವಕಾಶ ಕೋರಿದ್ದರು. ಆದರೆ ಪ್ರಾಧಿಕಾರವು 4.5 ಟಿಎಂಸಿ ನೀರು ಬಿಡುವಂತೆ ಆದೇಶಿಸಿದೆ" ಎಂದು ವಿವರಿಸಿದರು. ರಾಜ್ಯದ ರೈತರು ಮತ್ತು ಸಾರ್ವಜನಿಕರ ಹಿತರಕ್ಷಣೆಗೆ ಬದ್ಧ ರಾಜ್ಯದ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟವನ್ನು ವಿವರಿಸಿದ ಸಿಎಂ: ಹಾರಂಗಿ: ಶೇ. 95 ಕಬಿನಿ: ಶೇ. 83 ಹೇಮಾವತಿ: ಶೇ. 67 ಕೆಆರ್‌ಎಸ್: ಶೇ. 36 "ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿದ್ದು, ಕುಡಿಯುವ ನೀರು ಹಾಗೂ ರೈತರ ಹಿತವನ್ನು ಕಾಪಾಡಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಈ ಹಿಂದೆಯೂ ಶಾಸಕರ ಸಭೆ ಕರೆದು ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಈಗಲೂ ರಾಜ್ಯದ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆ" ಎಂದು ಅವರು ಭರವಸೆ ನೀಡಿದರು. ತಮಿಳುನಾಡು ಸಿಎಂ ಭೇಟಿ ಮುಂದೂಡುವಂತೆ ಮನವಿ ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್‌ ಅವರು ಕರ್ನಾಟಕಕ್ಕೆ ಆಗಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ತಮಿಳುನಾಡು ಮುಖ್ಯ ಕಾರ್ಯದರ್ಶಿಯವರಿಂದ ಬಂದಿದ್ದ ಪತ್ರದ ಹಿನ್ನೆಲೆಯಲ್ಲಿ ನಾನು ಸ್ವತಃ ತಮಿಳುನಾಡು ಸಿಎಂ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪ್ರಸ್ತುತ ಕಾವೇರಿ ವಿಚಾರವಾಗಿ ವಾತಾವರಣ ಸರಿಯಿಲ್ಲದ ಕಾರಣ, ಆಗಸ್ಟ್ 3ರ ಭೇಟಿಯನ್ನು ಮುಂದೂಡಿ ಬೇರೊಂದು ದಿನ ಬರುವಂತೆ ಕೋರಿದ್ದೇನೆ. ಉಭಯ ರಾಜ್ಯಗಳ ಸೌಹಾರ್ದತೆಗೆ ಧಕ್ಕೆಯಾಗದಂತೆ ಈ ವಿವಾದವನ್ನು ಬಗೆಹರಿಸಬೇಕಿದೆ" ಎಂದು ತಿಳಿಸಿದರು.
    1
    ಯಾವುದೇ ಕಾರಣಕ್ಕೂ ಬಂದ್‌ ಬೇಡ, ಅದರಿಂದ ಪರಿಹಾರ ಸಿಗಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ
ಬೆಂಗಳೂರು, ಜುಲೈ 31: ರಾಜ್ಯದಲ್ಲಿ ಕಾವೇರಿ ಜಲ ವಿವಾದ ಮತ್ತೆ ಕಾವು ಪಡೆದುಕೊಂಡಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ ಆದೇಶವನ್ನು ಖಂಡಿಸಿ, ಕನ್ನಡಪರ ಸಂಘಟನೆಗಳು ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಕುರಿತು ಶಾಸನಸೌಧದ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಂದ್ ನಿರ್ಧಾರವನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ.
ಬಂದ್‌ನಿಂದ ಜನಸಾಮಾನ್ಯರಿಗೆ ತೊಂದರೆ
"ಯಾವುದೇ ಕಾರಣಕ್ಕೂ ಬಂದ್‌ ಬೇಡ, ಬಂದ್‌ನಿಂದ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ" ಎಂದು ಸಿಎಂ ಸ್ಪಷ್ಟಪಡಿಸಿದರು.
ವಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡಿದ ಅವರು, "CWMA ಸಭೆಗೆ ರಾಜ್ಯದ ಪರವಾಗಿ ಮೂವರು ಹಿರಿಯ ಅಧಿಕಾರಿಗಳು ಹಾಜರಾಗಿದ್ದರು. ಎಸಿಎಸ್‌ ಗೌರವ್ ಗುಪ್ತಾ ಅವರು ರಾಜ್ಯದ ಪರ ಬಲವಾದ ವಾದ ಮಂಡಿಸಿ, ನೀರು ಬಿಡುಗಡೆಗೆ ಕಾಲಾವಕಾಶ ಕೋರಿದ್ದರು. ಆದರೆ ಪ್ರಾಧಿಕಾರವು 4.5 ಟಿಎಂಸಿ ನೀರು ಬಿಡುವಂತೆ ಆದೇಶಿಸಿದೆ" ಎಂದು ವಿವರಿಸಿದರು.
ರಾಜ್ಯದ ರೈತರು ಮತ್ತು ಸಾರ್ವಜನಿಕರ ಹಿತರಕ್ಷಣೆಗೆ ಬದ್ಧ
ರಾಜ್ಯದ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟವನ್ನು ವಿವರಿಸಿದ ಸಿಎಂ:
ಹಾರಂಗಿ: ಶೇ. 95
ಕಬಿನಿ: ಶೇ. 83
ಹೇಮಾವತಿ: ಶೇ. 67
ಕೆಆರ್‌ಎಸ್: ಶೇ. 36
"ಜಲಾಶಯಗಳಿಗೆ ಒಳಹರಿವು ಹೆಚ್ಚುತ್ತಿದ್ದು, ಕುಡಿಯುವ ನೀರು ಹಾಗೂ ರೈತರ ಹಿತವನ್ನು ಕಾಪಾಡಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ. ಈ ಹಿಂದೆಯೂ ಶಾಸಕರ ಸಭೆ ಕರೆದು ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಈಗಲೂ ರಾಜ್ಯದ ಹಿತರಕ್ಷಣೆಯೇ ನಮ್ಮ ಮೊದಲ ಆದ್ಯತೆ" ಎಂದು ಅವರು ಭರವಸೆ ನೀಡಿದರು.
ತಮಿಳುನಾಡು ಸಿಎಂ ಭೇಟಿ ಮುಂದೂಡುವಂತೆ ಮನವಿ
ಆಗಸ್ಟ್ 3 ರಂದು ತಮಿಳುನಾಡು ಸಿಎಂ ವಿಜಯ್‌ ಅವರು ಕರ್ನಾಟಕಕ್ಕೆ ಆಗಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, "ತಮಿಳುನಾಡು ಮುಖ್ಯ ಕಾರ್ಯದರ್ಶಿಯವರಿಂದ ಬಂದಿದ್ದ ಪತ್ರದ ಹಿನ್ನೆಲೆಯಲ್ಲಿ ನಾನು ಸ್ವತಃ ತಮಿಳುನಾಡು ಸಿಎಂ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪ್ರಸ್ತುತ ಕಾವೇರಿ ವಿಚಾರವಾಗಿ ವಾತಾವರಣ ಸರಿಯಿಲ್ಲದ ಕಾರಣ, ಆಗಸ್ಟ್ 3ರ ಭೇಟಿಯನ್ನು ಮುಂದೂಡಿ ಬೇರೊಂದು ದಿನ ಬರುವಂತೆ ಕೋರಿದ್ದೇನೆ. ಉಭಯ ರಾಜ್ಯಗಳ ಸೌಹಾರ್ದತೆಗೆ ಧಕ್ಕೆಯಾಗದಂತೆ ಈ ವಿವಾದವನ್ನು ಬಗೆಹರಿಸಬೇಕಿದೆ" ಎಂದು ತಿಳಿಸಿದರು.
    user_Lavanya
    Lavanya
    Local News Reporter ಪಾವಗಡ, ತುಮಕೂರು, ಕರ್ನಾಟಕ•
    20 hrs ago
  • *ಆರೋಗ್ಯ ಇಲಾಖೆಯಲ್ಲಿ ಸೇವಾ ಮನೋಭಾವನೆಯಿಂದ ವಿಶಿಷ್ಟ ಛಾಪು ಮೂಡಿಸಿದ ಜಯಚಂದ್ರಾರೆಡ್ಡಿ-ಡಿ ಎಚ್ ಓ ಡಾ. ಚೇತನ್* ಚಿಕ್ಕಬಳ್ಳಾಪುರ : ಭಾಗ್ಯನಗರ ತಾಲೂಕಿನ ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಜಯಚಂದ್ರಾರೆಡ್ಡಿ ಅವರು ಆರೋಗ್ಯ ಇಲಾಖೆಯ ಹೆಮ್ಮೆ ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಯಾಗಿ ಔಷಧ ವಿತರಣೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಅವರು ತೋರಿದ ಜವಾಬ್ದಾರಿಯುತ ಕಾರ್ಯವೈಖರಿ ಇಲಾಖೆಗೆ ಉತ್ತಮ ಹೆಸರು ತಂದುಕೊಟ್ಟಿದೆ ಎಂದು ಜಿಲ್ಲಾ ಅರೋಗ್ಯಧಿಕಾರಿ ಡಾ! ಚೇತನ್ ತಿಳಿಸಿದ್ದಾರೆ. ಪಟ್ಟಣದ ಕೊಡಿಕೊಂಡ ರಸ್ತೆಯ ಜಾಮೀಯಾ ಷಾದಿ ಮಹಲ್‌ ಆವರಣದಲ್ಲಿ ಕೇಂದ್ರದ ಫಾರ್ಮಸಿ ಅಧಿಕಾರಿಯಾಗಿದ್ದ ಸಿ.ಹೆಚ್. ಜಯಚಂದ್ರಾರೆಡ್ಡಿ ವಯೋನಿವೃತ್ತಿ ಅಂಗವಾಗಿ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮನಡೆಯಿತು,ಬೀಳ್ಕೊಡುಗೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಜಿಲ್ಲಾ ಅರೋಗ್ಯಧಿಕಾರಿ ಡಾ! ಚೇತನ್,ಸರ್ಕಾರಿ ಸೇವೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸಿ ಸಾರ್ವಜನಿಕರ ವಿಶ್ವಾಸ ಗಳಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮಸಿ ಅಧಿಕಾರಿಗಳಾದ ಸಿ.ಹೆಚ್. ಜಯಚಂದ್ರಾರೆಡ್ಡಿ ಅವರ ವಯೋನಿವೃತ್ತಿ ಸುಖಮಯವಾಗಿ ಇರಬೇಕು ಹಾಗೂ ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಜಯಚಂದ್ರಾರೆಡ್ಡಿ ಅವರು ಆರೋಗ್ಯ ಇಲಾಖೆಯ ಹೆಮ್ಮೆಯ ಅಧಿಕಾರಿಯಾಗಿದ್ದಾರೆ ಎಂದು ಹೇಳಿದರು. ಔಷಧ ವಿತರಣೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಅವರು ತೋರಿದ ಜವಾಬ್ದಾರಿಯುತ ಕಾರ್ಯವೈಖರಿ ಇಲಾಖೆಗೆ ಉತ್ತಮ ಹೆಸರು ತಂದುಕೊಟ್ಟಿದೆ. ಅವರ ಸೇವಾ ಮನೋಭಾವವು ಕಿರಿಯ ಸಿಬ್ಬಂದಿಗೆ ಸದಾ ಮಾದರಿಯಾಗಿದ್ದು, ನಿವೃತ್ತಿಯ ನಂತರವೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಂಗವಾಗಿ ಜಯಚಂದ್ರಾರೆಡ್ಡಿ ಅವರನ್ನು ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಹೋದ್ಯೋಗಿಗಳು ಅವರೊಂದಿಗೆ ಕಳೆದ ಸೇವಾ ದಿನಗಳ ಅನುಭವಗಳನ್ನು ಹಂಚಿಕೊಂಡು, ನಿವೃತ್ತ ಜೀವನ ಸುಖ, ಶಾಂತಿ, ಉತ್ತಮ ಆರೋಗ್ಯ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು. ಸಮಾರಂಭವು ಆತ್ಮೀಯ ವಾತಾವರಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸತ್ಯನಾರಾಯಣರೆಡ್ಡಿ,ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವಿನಯ್,ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಟಿ ಡಿ ಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಎ.ಶ್ರೀನಿವಾಸ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎ. ನಂಜುಂಡಪ್ಪ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಹನುಮಂತ ರೆಡ್ಡಿ,ವೈದ್ಯರಾದ ಡಾ.ಜಗ್ನಾಥ್,ಡಾ! ಸುಜಿತ್,ಮುಖಂಡರಾದ ಪ್ರಭಾಕರ್ ರೆಡ್ಡಿ, ಸೇರಿದಂತೆ ಅನೇಕ ಗಣ್ಯರು ಶುಭಹಾರೈಯಿಸಿದರು..
    4
    *ಆರೋಗ್ಯ ಇಲಾಖೆಯಲ್ಲಿ  ಸೇವಾ ಮನೋಭಾವನೆಯಿಂದ ವಿಶಿಷ್ಟ ಛಾಪು ಮೂಡಿಸಿದ ಜಯಚಂದ್ರಾರೆಡ್ಡಿ-ಡಿ ಎಚ್ ಓ ಡಾ. ಚೇತನ್*




ಚಿಕ್ಕಬಳ್ಳಾಪುರ :  ಭಾಗ್ಯನಗರ ತಾಲೂಕಿನ ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಜಯಚಂದ್ರಾರೆಡ್ಡಿ ಅವರು ಆರೋಗ್ಯ ಇಲಾಖೆಯ ಹೆಮ್ಮೆ ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಯಾಗಿ ಔಷಧ ವಿತರಣೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಅವರು ತೋರಿದ ಜವಾಬ್ದಾರಿಯುತ ಕಾರ್ಯವೈಖರಿ ಇಲಾಖೆಗೆ ಉತ್ತಮ ಹೆಸರು ತಂದುಕೊಟ್ಟಿದೆ ಎಂದು ಜಿಲ್ಲಾ ಅರೋಗ್ಯಧಿಕಾರಿ ಡಾ! ಚೇತನ್ ತಿಳಿಸಿದ್ದಾರೆ.

ಪಟ್ಟಣದ ಕೊಡಿಕೊಂಡ ರಸ್ತೆಯ ಜಾಮೀಯಾ ಷಾದಿ ಮಹಲ್‌ ಆವರಣದಲ್ಲಿ ಕೇಂದ್ರದ ಫಾರ್ಮಸಿ ಅಧಿಕಾರಿಯಾಗಿದ್ದ ಸಿ.ಹೆಚ್. ಜಯಚಂದ್ರಾರೆಡ್ಡಿ  ವಯೋನಿವೃತ್ತಿ ಅಂಗವಾಗಿ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮನಡೆಯಿತು,ಬೀಳ್ಕೊಡುಗೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ 
ಜಿಲ್ಲಾ ಅರೋಗ್ಯಧಿಕಾರಿ ಡಾ! ಚೇತನ್,ಸರ್ಕಾರಿ ಸೇವೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಹಾಗೂ ಸೇವಾ ಮನೋಭಾವದೊಂದಿಗೆ ಕಾರ್ಯನಿರ್ವಹಿಸಿ ಸಾರ್ವಜನಿಕರ ವಿಶ್ವಾಸ ಗಳಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮಸಿ ಅಧಿಕಾರಿಗಳಾದ ಸಿ.ಹೆಚ್. ಜಯಚಂದ್ರಾರೆಡ್ಡಿ ಅವರ ವಯೋನಿವೃತ್ತಿ ಸುಖಮಯವಾಗಿ ಇರಬೇಕು ಹಾಗೂ ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ ಜಯಚಂದ್ರಾರೆಡ್ಡಿ ಅವರು ಆರೋಗ್ಯ ಇಲಾಖೆಯ ಹೆಮ್ಮೆಯ ಅಧಿಕಾರಿಯಾಗಿದ್ದಾರೆ ಎಂದು ಹೇಳಿದರು. ಔಷಧ ವಿತರಣೆ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಅವರು ತೋರಿದ ಜವಾಬ್ದಾರಿಯುತ ಕಾರ್ಯವೈಖರಿ ಇಲಾಖೆಗೆ ಉತ್ತಮ ಹೆಸರು ತಂದುಕೊಟ್ಟಿದೆ. ಅವರ ಸೇವಾ ಮನೋಭಾವವು ಕಿರಿಯ ಸಿಬ್ಬಂದಿಗೆ ಸದಾ ಮಾದರಿಯಾಗಿದ್ದು, ನಿವೃತ್ತಿಯ ನಂತರವೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಂಗವಾಗಿ ಜಯಚಂದ್ರಾರೆಡ್ಡಿ ಅವರನ್ನು ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಹೋದ್ಯೋಗಿಗಳು ಅವರೊಂದಿಗೆ ಕಳೆದ ಸೇವಾ ದಿನಗಳ ಅನುಭವಗಳನ್ನು ಹಂಚಿಕೊಂಡು, ನಿವೃತ್ತ ಜೀವನ ಸುಖ, ಶಾಂತಿ, ಉತ್ತಮ ಆರೋಗ್ಯ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು. ಸಮಾರಂಭವು ಆತ್ಮೀಯ ವಾತಾವರಣದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ  ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸತ್ಯನಾರಾಯಣರೆಡ್ಡಿ,ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವಿನಯ್,ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಎಸ್ ಟಿ ಡಿ ಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಎ.ಶ್ರೀನಿವಾಸ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎ. ನಂಜುಂಡಪ್ಪ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್. ಹನುಮಂತ ರೆಡ್ಡಿ,ವೈದ್ಯರಾದ ಡಾ.ಜಗ್ನಾಥ್,ಡಾ! ಸುಜಿತ್,ಮುಖಂಡರಾದ ಪ್ರಭಾಕರ್ ರೆಡ್ಡಿ, ಸೇರಿದಂತೆ ಅನೇಕ ಗಣ್ಯರು ಶುಭಹಾರೈಯಿಸಿದರು..
    user_Govindappa K
    Govindappa K
    Local News Reporter ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
    19 hrs ago
  • ಚಿತ್ರದಲ್ಲಿರುವ ಪತ್ರದ ವಿವರಗಳನ್ನು ಆಧರಿಸಿ ಸಿದ್ಧಪಡಿಸಲಾದ ಸುದ್ದಿ ವರದಿ ಇಲ್ಲಿದೆ: ಚಿತ್ರದಲ್ಲಿರುವ ಪತ್ರದ ವಿವರಗಳನ್ನು ಆಧರಿಸಿ ಸಿದ್ಧಪಡಿಸಲಾದ ಸುದ್ದಿ ವರದಿ ಇಲ್ಲಿದೆ: ಚಿತ್ರದುರ್ಗ: ಆಗಸ್ಟ್ 3 ರೊಳಗೆ ಕ್ರಮ ಕೈಗೊಳ್ಳದಿದ್ದರೆ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹದ ಎಚ್ಚರಿಕೆ ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರು ಹೋಬಳಿ, ಗೂಳಯ್ಯನಹಟ್ಟಿ ಗ್ರಾಮದ ಜಮೀನು ವರ್ಗಾವಣೆಯಲ್ಲಿ ನಡೆದಿರುವ ಅಧಿಕಾರ ದುರುಪಯೋಗ ಮತ್ತು ಅನ್ಯಾಯವನ್ನು ಖಂಡಿಸಿ, ಬರುವ ಆಗಸ್ಟ್ 3 ರೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತಾಲೂಕು ದಂಡಾಧಿಕಾರಿಗಳಾದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕರುನಾಡು ವಿಜಯ ಸೇನೆ ಹಾಗೂ ಬಿ.ಜೆ.ಪಿ. ನಗರ ಉಪಾಧ್ಯಕ್ಷರಾದ ಬಿ.ಆರ್. ನಾಗರಾಜ್ ಮತ್ತು ರೈತರು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗಿದ್ದು, ಅದರ ಪ್ರಮುಖ ವಿವರಗಳು ಈ ಕೆಳಗಿನಂತಿವೆ: ಪ್ರಕರಣದ ಹಿನ್ನೆಲೆ: ಗೂಳಯ್ಯನಹಟ್ಟಿ ಗ್ರಾಮದ ನಿವಾಸಿಯಾದ ಚಂದ್ರಪ್ಪ ಬಿನ್ ಈರಪ್ಪ ಎಂಬುವವರ ಹೆಸರಿಗೆ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಹೋಬಳಿಯ ಸ. ನಂ: 8/1 ರಲ್ಲಿ ಒಟ್ಟು 2 ಎಕರೆ 20 ಗುಂಟೆ ಜಮೀನು ಇರುತ್ತದೆ. ಜಮೀನು ವರ್ಗಾವಣೆ: ಈ ಜಮೀನಿನ ಪೈಕಿ 1 ಎಕರೆ 20 ಗುಂಟೆ ಜಮೀನನ್ನು ಸರ್ವೆ ಸ್ಕೆಚ್ ನಕ್ಷೆ ಸಂಖ್ಯೆ: 13030925111232001 ರ ಪ್ರಕಾರ ದಿನಾಂಕ 19-05-2026 ರಂದು ಶ್ರೀಮತಿ ಜಯಲಕ್ಷ್ಮಿ ಎಂಬುವವರಿಗೆ ಚಿತ್ರದುರ್ಗ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಕೊಡಲಾಗಿತ್ತು. ಕಾನೂನುಬದ್ಧವಾಗಿ ಕೇವಲ 1 ಎಕರೆ 20 ಗುಂಟೆ ಜಮೀನು ಮಾತ್ರ ವರ್ಗಾವಣೆಯಾಗಬೇಕಿತ್ತು. ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ: ತಾಲೂಕು ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದಾಗಿ, ಇಡೀ 2 ಎಕರೆ 20 ಗುಂಟೆ ಜಮೀನನ್ನು ಶ್ರೀಮತಿ ಜಯಲಕ್ಷ್ಮಿ ಅವರ ಹೆಸರಿಗೆ ಪಹಣಿ ಮಾಡಲು ಮುಂದಾಗಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ. ಇದರಿಂದಾಗಿ ಚಂದ್ರಪ್ಪ ಅವರಿಗೆ ಉಳಿಯಬೇಕಾದ 1 ಎಕರೆ ಜಮೀನು ಕೈತಪ್ಪಿ ಅನ್ಯಾಯವಾಗುತ್ತಿದೆ. ಅರ್ಜಿ ತಿರಸ್ಕಾರ: ಈ ಅನ್ಯಾಯದ ವಿರುದ್ಧ ಚಂದ್ರಪ್ಪ ಅವರು ದಿನಾಂಕ 31-08-2026 ರಂದು (ಪತ್ರದಲ್ಲಿ ಉಲ್ಲೇಖಿಸಿರುವಂತೆ) ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಿದ್ದರೂ ಸಹ, ಅಧಿಕಾರಿಗಳು ಯಾವುದೇ ಆನ್‌ಲೈನ್ ಅರ್ಜಿಯನ್ನು ಸ್ವೀಕರಿಸದೆ ತಿರಸ್ಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರತಿಭಟನೆಯ ಎಚ್ಚರಿಕೆ: ಈ ಗಂಭೀರ ಜಮೀನು ಅಕ್ರಮ ಹಾಗೂ ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ದಿನಾಂಕ 03-08-2026 ರ ಒಳಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಸಮಾಜ ಸೇವಕರು ಹಾಗೂ ಬಿ.ಜೆ.ಪಿ. ನಗರ ಉಪಾಧ್ಯಕ್ಷರಾದ ಬಿ.ಆರ್. ನಾಗರಾಜ್ ಮತ್ತು ಸಮಸ್ತ ರೈತರು ಒಟ್ಟಾಗಿ ತಾಲೂಕು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಪತ್ರದ ಮೂಲಕ ಕರುನಾಡು ವಿಜಯ ಸೇನೆಯ ಜಿಲ್ಲಾಧ್ಯಕ್ಷರಾದ ಕೆ.ಟಿ. ಶಿವಕುಮಾರ್ ಎಚ್ಚರಿಸಿದ್ದಾರೆ. ಮನವಿ ಪತ್ರಕ್ಕೆ ಹಲವು ರೈತರು ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ.
    2
    ಚಿತ್ರದಲ್ಲಿರುವ ಪತ್ರದ ವಿವರಗಳನ್ನು ಆಧರಿಸಿ ಸಿದ್ಧಪಡಿಸಲಾದ ಸುದ್ದಿ ವರದಿ ಇಲ್ಲಿದೆ:
ಚಿತ್ರದಲ್ಲಿರುವ ಪತ್ರದ ವಿವರಗಳನ್ನು ಆಧರಿಸಿ ಸಿದ್ಧಪಡಿಸಲಾದ 
ಸುದ್ದಿ ವರದಿ ಇಲ್ಲಿದೆ:
ಚಿತ್ರದುರ್ಗ: 
ಆಗಸ್ಟ್ 3 ರೊಳಗೆ ಕ್ರಮ ಕೈಗೊಳ್ಳದಿದ್ದರೆ ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹದ ಎಚ್ಚರಿಕೆ
ಚಿತ್ರದುರ್ಗ: ತಾಲೂಕಿನ ಹಿರೇಗುಂಟನೂರು ಹೋಬಳಿ, ಗೂಳಯ್ಯನಹಟ್ಟಿ ಗ್ರಾಮದ ಜಮೀನು ವರ್ಗಾವಣೆಯಲ್ಲಿ ನಡೆದಿರುವ ಅಧಿಕಾರ ದುರುಪಯೋಗ ಮತ್ತು ಅನ್ಯಾಯವನ್ನು ಖಂಡಿಸಿ, ಬರುವ ಆಗಸ್ಟ್ 3 ರೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ತಾಲೂಕು ದಂಡಾಧಿಕಾರಿಗಳಾದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಕರುನಾಡು ವಿಜಯ ಸೇನೆ ಹಾಗೂ ಬಿ.ಜೆ.ಪಿ. ನಗರ ಉಪಾಧ್ಯಕ್ಷರಾದ ಬಿ.ಆರ್. ನಾಗರಾಜ್ ಮತ್ತು ರೈತರು ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಚಿತ್ರದುರ್ಗ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಲಾಗಿದ್ದು, ಅದರ ಪ್ರಮುಖ ವಿವರಗಳು ಈ ಕೆಳಗಿನಂತಿವೆ:
ಪ್ರಕರಣದ ಹಿನ್ನೆಲೆ: ಗೂಳಯ್ಯನಹಟ್ಟಿ ಗ್ರಾಮದ ನಿವಾಸಿಯಾದ ಚಂದ್ರಪ್ಪ ಬಿನ್ ಈರಪ್ಪ ಎಂಬುವವರ ಹೆಸರಿಗೆ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಹೋಬಳಿಯ ಸ. ನಂ: 8/1 ರಲ್ಲಿ ಒಟ್ಟು 2 ಎಕರೆ 20 ಗುಂಟೆ ಜಮೀನು ಇರುತ್ತದೆ.
ಜಮೀನು ವರ್ಗಾವಣೆ: ಈ ಜಮೀನಿನ ಪೈಕಿ 1 ಎಕರೆ 20 ಗುಂಟೆ ಜಮೀನನ್ನು ಸರ್ವೆ ಸ್ಕೆಚ್ ನಕ್ಷೆ ಸಂಖ್ಯೆ: 13030925111232001 ರ ಪ್ರಕಾರ ದಿನಾಂಕ 19-05-2026 ರಂದು ಶ್ರೀಮತಿ ಜಯಲಕ್ಷ್ಮಿ ಎಂಬುವವರಿಗೆ ಚಿತ್ರದುರ್ಗ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಕೊಡಲಾಗಿತ್ತು. ಕಾನೂನುಬದ್ಧವಾಗಿ ಕೇವಲ 1 ಎಕರೆ 20 ಗುಂಟೆ ಜಮೀನು ಮಾತ್ರ ವರ್ಗಾವಣೆಯಾಗಬೇಕಿತ್ತು.
ಅಧಿಕಾರಿಗಳ ನಿರ್ಲಕ್ಷ್ಯದ ಆರೋಪ: ತಾಲೂಕು ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನದಿಂದಾಗಿ, ಇಡೀ 2 ಎಕರೆ 20 ಗುಂಟೆ ಜಮೀನನ್ನು ಶ್ರೀಮತಿ ಜಯಲಕ್ಷ್ಮಿ ಅವರ ಹೆಸರಿಗೆ ಪಹಣಿ ಮಾಡಲು ಮುಂದಾಗಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ. ಇದರಿಂದಾಗಿ ಚಂದ್ರಪ್ಪ ಅವರಿಗೆ ಉಳಿಯಬೇಕಾದ 1 ಎಕರೆ ಜಮೀನು ಕೈತಪ್ಪಿ ಅನ್ಯಾಯವಾಗುತ್ತಿದೆ.
ಅರ್ಜಿ ತಿರಸ್ಕಾರ: ಈ ಅನ್ಯಾಯದ ವಿರುದ್ಧ ಚಂದ್ರಪ್ಪ ಅವರು ದಿನಾಂಕ 31-08-2026 ರಂದು (ಪತ್ರದಲ್ಲಿ ಉಲ್ಲೇಖಿಸಿರುವಂತೆ) ಸಂಬಂಧಪಟ್ಟ ಅಧಿಕಾರಿಗಳಿಗೆ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಿದ್ದರೂ ಸಹ, ಅಧಿಕಾರಿಗಳು ಯಾವುದೇ ಆನ್‌ಲೈನ್ ಅರ್ಜಿಯನ್ನು ಸ್ವೀಕರಿಸದೆ ತಿರಸ್ಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರತಿಭಟನೆಯ ಎಚ್ಚರಿಕೆ:
ಈ ಗಂಭೀರ ಜಮೀನು ಅಕ್ರಮ ಹಾಗೂ ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ದಿನಾಂಕ 03-08-2026 ರ ಒಳಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಸಮಾಜ ಸೇವಕರು ಹಾಗೂ ಬಿ.ಜೆ.ಪಿ. ನಗರ ಉಪಾಧ್ಯಕ್ಷರಾದ ಬಿ.ಆರ್. ನಾಗರಾಜ್ ಮತ್ತು ಸಮಸ್ತ ರೈತರು ಒಟ್ಟಾಗಿ ತಾಲೂಕು ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಪತ್ರದ ಮೂಲಕ ಕರುನಾಡು ವಿಜಯ ಸೇನೆಯ ಜಿಲ್ಲಾಧ್ಯಕ್ಷರಾದ ಕೆ.ಟಿ. ಶಿವಕುಮಾರ್ ಎಚ್ಚರಿಸಿದ್ದಾರೆ. ಮನವಿ ಪತ್ರಕ್ಕೆ ಹಲವು ರೈತರು ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ.
    user_Nagesh BR Durgavara
    Nagesh BR Durgavara
    Photographer Chitradurga, Karnataka•
    19 min ago
  • ಹೊಳಲ್ಕೆರೆಯನ್ನ ಬರಪೀಡಿತ ತಾಲ್ಲೂಕಾಗಿ ಘೋಷಿಸುವಂತೆ ರೈತ ಸಂಘದಿಂದ ತಹಶಿಲ್ದಾರ್ ಗೆ ಮನವಿ ಹೊಳಲ್ಕೆರೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಒತ್ತಾಯಿಸಿ ತಹಶಿಲ್ದಾರ್ ಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು. ಹೊಸ ತಾಲೂಕ್ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಿದ್ದಾರೆ. ಹೊಳಲ್ಕೆರೆ ತಾಲೂಕಿನಾಧ್ಯಂತ ಭೀಕರ ಬರಗಾಲ ತಾಂಡವವಾಡುತ್ತಿದ್ದು ಮುಂಗಾರುಮಳೆ ಮುಗಿಯುತ್ತಾ ಬಂದಿದ್ದು ತಾಲೂಕಿನಾಧ್ಯಂತ ಶೇಕಡ 25ರಷ್ಟು ಮಾತ್ರ ಬಿತ್ತನೆ ಮಾಡಿದ್ದು ಉಳಿದ 75ರಷ್ಟು ಭೂಮಿ ಬಿತ್ತನೆ ಮಾಡದೆ ರೈತರು ಮುಗಿಲು ನೋಡುತ್ತ ಕುಳಿತಿದ್ದಾರೆ, ಕೊಳವೆ ಬಾವಿಗಳೆಲ್ಲ ಬತ್ತಿದ್ದು ಕುಡಿಯುವ ನೀರಿಗಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು, ಜಾನುವಾರುಗಳು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ, ರೈತರು ಸಾಲ ಮಾಡಿ ಬೀಜ ಗೊಬ್ಬರ ತಂದು ಭೂಮಿಗೆ ಹಾಕಿ ಕೈಚೆಲ್ಲಿದ್ದಾರೆ. ಈ ಹಿನ್ನೆಲೆ ಸರ್ಕಾರವು ಶೀಘ್ರವೇ ಹೊಳಲ್ಕೆರೆ ತಾಲೂಕನ್ನು ಬರಪೀಡಿತ ಪ್ರದೇಶವನ್ನು ಘೋಷಣೆ ಮಾಡಬೇಕು ಎಂದು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದ್ದಾರೆ.
    1
    ಹೊಳಲ್ಕೆರೆಯನ್ನ ಬರಪೀಡಿತ ತಾಲ್ಲೂಕಾಗಿ ಘೋಷಿಸುವಂತೆ ರೈತ ಸಂಘದಿಂದ ತಹಶಿಲ್ದಾರ್ ಗೆ ಮನವಿ
ಹೊಳಲ್ಕೆರೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಲು ಒತ್ತಾಯಿಸಿ ತಹಶಿಲ್ದಾರ್ ಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು.  ಹೊಸ ತಾಲೂಕ್ ರೈತ ಸಂಘದ ವತಿಯಿಂದ ಮನವಿ ಸಲ್ಲಿಸಿದ್ದಾರೆ.  ಹೊಳಲ್ಕೆರೆ ತಾಲೂಕಿನಾಧ್ಯಂತ ಭೀಕರ ಬರಗಾಲ ತಾಂಡವವಾಡುತ್ತಿದ್ದು ಮುಂಗಾರುಮಳೆ ಮುಗಿಯುತ್ತಾ ಬಂದಿದ್ದು ತಾಲೂಕಿನಾಧ್ಯಂತ ಶೇಕಡ 25ರಷ್ಟು ಮಾತ್ರ ಬಿತ್ತನೆ ಮಾಡಿದ್ದು ಉಳಿದ 75ರಷ್ಟು ಭೂಮಿ ಬಿತ್ತನೆ ಮಾಡದೆ ರೈತರು ಮುಗಿಲು ನೋಡುತ್ತ ಕುಳಿತಿದ್ದಾರೆ, ಕೊಳವೆ ಬಾವಿಗಳೆಲ್ಲ ಬತ್ತಿದ್ದು ಕುಡಿಯುವ ನೀರಿಗಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು, ಜಾನುವಾರುಗಳು ದಿನನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ, ರೈತರು ಸಾಲ ಮಾಡಿ ಬೀಜ ಗೊಬ್ಬರ ತಂದು ಭೂಮಿಗೆ ಹಾಕಿ ಕೈಚೆಲ್ಲಿದ್ದಾರೆ. ಈ ಹಿನ್ನೆಲೆ ಸರ್ಕಾರವು ಶೀಘ್ರವೇ ಹೊಳಲ್ಕೆರೆ ತಾಲೂಕನ್ನು ಬರಪೀಡಿತ ಪ್ರದೇಶವನ್ನು ಘೋಷಣೆ ಮಾಡಬೇಕು ಎಂದು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದ್ದಾರೆ.
    user_Vinay P palekar
    Vinay P palekar
    ಮಾಧ್ಯಮ ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
  • *ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆ *ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ದಿನಾಂಕ:28-07- 2026 ರಂದು ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರ್ಜಾರಿ ಪ್ರೌಢಶಾಲೆಯ ಅವನದ ಬಯಲು ರಂಗ ಮಂದಿರದ ಮುಂಭಾಗದಲ್ಲಿ ನಡೆದ ನಾಯಕನಹಟ್ಟಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಥಮ:ನಿತೀಶ್ ಮತ್ತು ತಂಡ ಕಬಡ್ಡಿ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆ ಕ್ರೀಡಾಪಟುಗಳಾಗಿದ್ದಾರೆ ವಿನಯ್ ಕುಮಾರ್ ಮತ್ತು ತಂಡ ವಾಲಿಬಾಲ್ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ *ಖೋ ಖೋ* ದ್ವಿತೀಯ: ತ್ರಿಶಾ ಮತ್ತು ತಂಡ *ಎತ್ತರ ಜಿಗಿತ* ತೃತೀಯ : ಮೇಘನಾ *400 ಮೀಟರ್ ಓಟ* ತೃತೀಯ: ತಿಪ್ಪೇಸ್ವಾಮಿ ಎಲ್ಲಾ ಕ್ರೀಡಾಪಟುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ಕೆ.ಎಸ್. ಕೆ.ಎಸ್,ಮುಖ್ಯ ಶಿಕ್ಷಕಕರಾದ ನಿರ್ಮಲ B, ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಾಟಯ್ಯ , ಶಿಕ್ಷಕರಾದ ನಾಗಭೂಷಣ್, B.P ಹಾಗೂ ಊರಿನ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
    1
    *ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆ
*ಕ್ರೀಡೆ: ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ಚಳ್ಳಕೆರೆ ತಾಲ್ಲೂಕಿನ
ನಾಯಕನಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ದಿನಾಂಕ:28-07- 2026 ರಂದು ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರ್ಜಾರಿ ಪ್ರೌಢಶಾಲೆಯ ಅವನದ ಬಯಲು ರಂಗ ಮಂದಿರದ ಮುಂಭಾಗದಲ್ಲಿ ನಡೆದ  ನಾಯಕನಹಟ್ಟಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 
ಪ್ರಥಮ:ನಿತೀಶ್ ಮತ್ತು ತಂಡ   ಕಬಡ್ಡಿ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆ ಕ್ರೀಡಾಪಟುಗಳಾಗಿದ್ದಾರೆ
ವಿನಯ್ ಕುಮಾರ್ ಮತ್ತು ತಂಡ ವಾಲಿಬಾಲ್ ಕ್ರೀಡೆಯಲ್ಲಿ ಗೆದ್ದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
*ಖೋ ಖೋ* ದ್ವಿತೀಯ: ತ್ರಿಶಾ ಮತ್ತು ತಂಡ 
*ಎತ್ತರ ಜಿಗಿತ* ತೃತೀಯ : ಮೇಘನಾ 
*400 ಮೀಟರ್ ಓಟ* ತೃತೀಯ: ತಿಪ್ಪೇಸ್ವಾಮಿ ಎಲ್ಲಾ ಕ್ರೀಡಾಪಟುಗಳಿಗೆ
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ಕೆ.ಎಸ್. ಕೆ.ಎಸ್,ಮುಖ್ಯ ಶಿಕ್ಷಕಕರಾದ  ನಿರ್ಮಲ B, ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಾಟಯ್ಯ , ಶಿಕ್ಷಕರಾದ  ನಾಗಭೂಷಣ್,  B.P
ಹಾಗೂ ಊರಿನ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
    user_Suresh Belagere
    Suresh Belagere
    Video Creator ಚಿತ್ರದುರ್ಗ, ಚಿತ್ರದುರ್ಗ, ಕರ್ನಾಟಕ•
    3 hrs ago
  • ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ರೈತರು ಅಹೋರಾತ್ರಿ ಧರಣೀಯ ಮುಂದುವರಿಸಿದ್ದಾರೆ
    4
    ಚಿಕ್ಕನಾಯಕನಹಳ್ಳಿಯಲ್ಲಿ ಹೇಮಾವತಿ ನೀರಿಗಾಗಿ ರೈತರು ಅಹೋರಾತ್ರಿ ಧರಣೀಯ ಮುಂದುವರಿಸಿದ್ದಾರೆ
    user_Huliyarkiran
    Huliyarkiran
    ಚಿಕ್ಕನಾಯಕನಹಳ್ಳಿ, ತುಮಕೂರು, ಕರ್ನಾಟಕ•
    7 hrs ago
  • ರೈಟ್ ಟು ಲಿವ್  NGO ಸಂಸ್ಥೆ ಸೇವಾ ಕಾರ್ಯ ಶ್ಲಾಘನೀಯ-ಶಾಸಕ ಎಸ್. ಎನ್. ಸುಬ್ಬಾರೆಡ್ಡಿ*  ಚಿಕ್ಕಬಳ್ಳಾಪುರ :   ಭಾಗ್ಯನಗರ ತಾಲೂಕಿನ ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಅದರಂತೆ  ರೈಟ್ ಟು ಲಿವ್ ಸಂಸ್ಥೆ ಸರ್ಕಾರಿ ಶಾಲಾ ಮಕ್ಕಳಿಗಾಗಿ ಕೈಗೊಂಡಿರುವ ಈ ಸೇವಾ ಕಾರ್ಯ ಶ್ಲಾಘನೀಯವಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು  ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಹೇಳಿದರು. ತಾಲೂಕಿನ ಗೂಳೂರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ  ಯುನೈಟೆಡ್ ವೆ NGO ಸoಸ್ಥೆ ವತಿಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸುಮಾರು 127 ಸೈಕಲ್‌  ವಿತರಣಾ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ,ರೈಟ್ ಟು ಲಿವ್ ಸಂಸ್ಥೆಯು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವ ರೈಟ್ ಟು ಲಿವ್  NGO ಸಂಸ್ಥೆ ಸೇವಾ ಕಾರ್ಯ ಶ್ಲಾಘನೀಯ ಎಂದರು. ಸೈಕಲ್‌ಗಳ ವಿತರಣೆಯಿಂದ ದೂರದ ಗ್ರಾಮಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಶಿಕ್ಷಣ ಮುಂದುವರಿಸಲು ಇದು ಮಹತ್ವದ ನೆರವಾಗಲಿದೆ ಎಂದು ಪೋಷಕರು ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಕೆ., ತಾಲ್ಲೂಕು ದೈಹಿಕ ಶಿಕ್ಷಣ ನಿರ್ದೇಶಕ ರಂಗನಾಥ್, ಪ್ರಾಜೆಕ್ಟ್ ಕೋಆರ್ಡಿನೇಟರ್ ಸುನಿಲ್, ರೈಟ್ ಟು ಲಿವ್ ಸಂಸ್ಥೆಯ ಹರೀಶ್,ವೆಂಕಟೇಶ್, ಶಿಕ್ಷಕರಾದ,ನಾಯಜ್,ಪಾಷಾ,ನವೀನ್ ಕುಮಾರ್ ನವೀನ್, ತ್ಯಾಗರಾಜ್, ಪುಷ್ಪ,ಪ್ರತಿನಿಧಿ ಗಣೇಶ್,ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು,ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
    4
    ರೈಟ್ ಟು ಲಿವ್  NGO ಸಂಸ್ಥೆ ಸೇವಾ ಕಾರ್ಯ ಶ್ಲಾಘನೀಯ-ಶಾಸಕ ಎಸ್. ಎನ್. ಸುಬ್ಬಾರೆಡ್ಡಿ*




 ಚಿಕ್ಕಬಳ್ಳಾಪುರ :   ಭಾಗ್ಯನಗರ ತಾಲೂಕಿನ ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಅದರಂತೆ  ರೈಟ್ ಟು ಲಿವ್ ಸಂಸ್ಥೆ ಸರ್ಕಾರಿ ಶಾಲಾ ಮಕ್ಕಳಿಗಾಗಿ ಕೈಗೊಂಡಿರುವ ಈ ಸೇವಾ ಕಾರ್ಯ ಶ್ಲಾಘನೀಯವಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು  ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಹೇಳಿದರು.


ತಾಲೂಕಿನ ಗೂಳೂರು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ  ಯುನೈಟೆಡ್ ವೆ NGO ಸoಸ್ಥೆ ವತಿಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸುಮಾರು 127 ಸೈಕಲ್‌  ವಿತರಣಾ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ,ರೈಟ್ ಟು ಲಿವ್ ಸಂಸ್ಥೆಯು ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿರುವ ರೈಟ್ ಟು ಲಿವ್  NGO ಸಂಸ್ಥೆ ಸೇವಾ ಕಾರ್ಯ ಶ್ಲಾಘನೀಯ ಎಂದರು.



ಸೈಕಲ್‌ಗಳ ವಿತರಣೆಯಿಂದ ದೂರದ ಗ್ರಾಮಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಶಿಕ್ಷಣ ಮುಂದುವರಿಸಲು ಇದು ಮಹತ್ವದ ನೆರವಾಗಲಿದೆ ಎಂದು ಪೋಷಕರು ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದರು.


ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ್ ಕೆ., ತಾಲ್ಲೂಕು ದೈಹಿಕ ಶಿಕ್ಷಣ ನಿರ್ದೇಶಕ ರಂಗನಾಥ್, ಪ್ರಾಜೆಕ್ಟ್ ಕೋಆರ್ಡಿನೇಟರ್ ಸುನಿಲ್, ರೈಟ್ ಟು ಲಿವ್ ಸಂಸ್ಥೆಯ ಹರೀಶ್,ವೆಂಕಟೇಶ್, ಶಿಕ್ಷಕರಾದ,ನಾಯಜ್,ಪಾಷಾ,ನವೀನ್ ಕುಮಾರ್ ನವೀನ್, ತ್ಯಾಗರಾಜ್, ಪುಷ್ಪ,ಪ್ರತಿನಿಧಿ ಗಣೇಶ್,ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು,ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
    user_Govindappa K
    Govindappa K
    Local News Reporter ಚಿಕ್ಕಬಳ್ಳಾಪುರ, ಚಿಕ್ಕಬಳ್ಳಾಪುರ, ಕರ್ನಾಟಕ•
    19 hrs ago
  • ಅಪಘಾತವಾದಾಗ ರಸ್ತೆಯಲ್ಲಿ ಟಮೋಟೊ ಬ್ಯಾಗುಗಳಿಗೆ ಟೊಮೊಟೊ ತುಂಬಿದ ಪಿ ಎಸ್ ಐ ಶಿರಾ ಅಪಘಾತದ ಆಘಾತದಲ್ಲಿ ಕಣ್ಣೀರಿಡುತ್ತಿದ್ದ ಆ ರೈತನಿಗೆ, ನೋವಿನ ಕಡಲಲ್ಲಿ ಮುಳುಗಿದ್ದ ಆ ಬದುಕಿಗೆ... ಇಂದು ಆಸರೆಯಾಗಿದ್ದು ಖಾಕಿ ಧರಿಸಿದ ಕರುಣೆಯ ಮನಸ್ಸು > ಹೌದು, ಶಿರಾ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವಕುಮಾರ್ ಮತ್ತು ಅವರ ತಂಡ, ಕೇವಲ ಕರ್ತವ್ಯಕ್ಕೆ ಮಾತ್ರ ಸೀಮಿತವಾಗಲಿಲ್ಲ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆ ಹಸಿರು-ಕೆಂಪು ಬಣ್ಣದ ಟೊಮೆಟೊಗಳನ್ನು ನೋಡಿ ಅಳುತ್ತಿದ್ದ ರೈತನ ಕಣ್ಣೀರು ಒರೆಸಲು ಸ್ವತಃ ತಾವೇ ಮುಂದಾದರು! > ಸಿಬ್ಬಂದಿಯನ್ನು, ಸಾರ್ವಜನಿಕರನ್ನು ಒಟ್ಟುಗೂಡಿಸಿ, ತಮ್ಮ ಕೈಯಿಂದಲೇ ಕ್ರೇಟ್‌ಗಳಲ್ಲಿ ಹಣ್ಣುಗಳನ್ನು ತುಂಬಿಸಿ, ಮತ್ತೊಂದು ಲಾರಿಗೆ ಸುರಕ್ಷಿತವಾಗಿ ಲೋಡ್ ಮಾಡಿಸಿ ಕಳುಹಿಸಿದ ಆ ಕ್ಷಣ... ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಅತಿ ದೊಡ್ಡ ಸಾಕ್ಷಿ. > ಕಷ್ಟದಲ್ಲಿದ್ದ ಅನ್ನದಾತನಿಗೆ ಕೈಹಿಡಿದು ನಿಂತ ನಮ್ಮ ಹೆಮ್ಮೆಯ ಪೊಲೀಸರಿಗೆ ಹ್ಯಾಟ್ಸಾಫ್ ಹೇಳಲೇಬೇಕು!" >
    1
    ಅಪಘಾತವಾದಾಗ ರಸ್ತೆಯಲ್ಲಿ ಟಮೋಟೊ ಬ್ಯಾಗುಗಳಿಗೆ ಟೊಮೊಟೊ  ತುಂಬಿದ ಪಿ ಎಸ್ ಐ 
ಶಿರಾ ಅಪಘಾತದ ಆಘಾತದಲ್ಲಿ ಕಣ್ಣೀರಿಡುತ್ತಿದ್ದ ಆ ರೈತನಿಗೆ, ನೋವಿನ ಕಡಲಲ್ಲಿ ಮುಳುಗಿದ್ದ ಆ ಬದುಕಿಗೆ... ಇಂದು ಆಸರೆಯಾಗಿದ್ದು ಖಾಕಿ ಧರಿಸಿದ ಕರುಣೆಯ ಮನಸ್ಸು 
> ಹೌದು, ಶಿರಾ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವಕುಮಾರ್ ಮತ್ತು ಅವರ ತಂಡ, ಕೇವಲ ಕರ್ತವ್ಯಕ್ಕೆ ಮಾತ್ರ ಸೀಮಿತವಾಗಲಿಲ್ಲ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಆ ಹಸಿರು-ಕೆಂಪು ಬಣ್ಣದ ಟೊಮೆಟೊಗಳನ್ನು ನೋಡಿ ಅಳುತ್ತಿದ್ದ ರೈತನ ಕಣ್ಣೀರು ಒರೆಸಲು ಸ್ವತಃ ತಾವೇ ಮುಂದಾದರು!
> ಸಿಬ್ಬಂದಿಯನ್ನು, ಸಾರ್ವಜನಿಕರನ್ನು ಒಟ್ಟುಗೂಡಿಸಿ, ತಮ್ಮ ಕೈಯಿಂದಲೇ ಕ್ರೇಟ್‌ಗಳಲ್ಲಿ ಹಣ್ಣುಗಳನ್ನು ತುಂಬಿಸಿ, ಮತ್ತೊಂದು ಲಾರಿಗೆ ಸುರಕ್ಷಿತವಾಗಿ ಲೋಡ್ ಮಾಡಿಸಿ ಕಳುಹಿಸಿದ ಆ ಕ್ಷಣ... ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಅತಿ ದೊಡ್ಡ ಸಾಕ್ಷಿ.
> ಕಷ್ಟದಲ್ಲಿದ್ದ ಅನ್ನದಾತನಿಗೆ ಕೈಹಿಡಿದು ನಿಂತ ನಮ್ಮ ಹೆಮ್ಮೆಯ ಪೊಲೀಸರಿಗೆ ಹ್ಯಾಟ್ಸಾಫ್ ಹೇಳಲೇಬೇಕು!"
>
    user_ಪ್ರಸನ್ನ ದೊಡ್ಡಗುಣಿ
    ಪ್ರಸನ್ನ ದೊಡ್ಡಗುಣಿ
    ಗುಬ್ಬಿ, ತುಮಕೂರು, ಕರ್ನಾಟಕ•
    3 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.