ಹೊಸಪೇಟೆ: ಕರ್ತವ್ಯ ನಿರತ ಪೊಲೀಸ್ ಮೇಲೆ ಹಲ್ಲೆ ಮಾಡಿದ್ದ ಮೂವರಿಗೆ 7 ವರ್ಷ ಜೈಲು ಹೊಸಪೇಟೆ (ವಿಜಯನಗರ): ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಮೂವರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಬುಧವಾರ ಆದೇಶ ನೀಡಿದೆ.ತಳವಾರಕೇರಿಯ ಅಣ್ಣಪ್ಪ, ಬಾಣದಕೇರಿಯ ಶ್ರೀಕಾಂತ, ಹಳೆಮಲಪನಗುಡಿಯ ಮೌಲಾ ಹುಸೇನ್ ತಪ್ಪು ಎಸಗಿರುವುದು ಸಾಬೀತಾಗಿದೆ ಎಂದು ಕಂಡುಕೊಂಡ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ ಈ ಆದೇಶ ನೀಡದರು ಹಾಗೂ ₹58 ಸಾವಿರ ದಂಡ ವಿಧಿಸಿದರು. ದಂಡದ ಮೊತ್ತದಲ್ಲಿ ₹30 ಸಾವಿರ ಪೊಲೀಸ್ ಕಾನ್‌ಸ್ಟೆಬಲ್‌ಗೆ ನೀಡಬೇಕು ಮತ್ತು ₹28 ಸಾವಿರ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಮಧ್ಯರಾತ್ರ ಘಟನೆಯ ವಿವರ: 2020ರ ಮಾರ್ಚ್ 14ರಂದು ಮಧ್ಯರಾತ್ರಿ 1.20ರ ಸುಮಾರಿಗೆ ಪೊಲೀಸ್ ಕಾನ್‌ಸ್ಟೆಬಲ್ ಮತ್ತಣ್ಣ ಅವರು ನಗರದ ಮುಖ್ಯ ಮಸೀದಿಯ ಮುಂದೆ ಕರ್ತವ್ಯದಲ್ಲಿದ್ದಾಗ ಈ ಮೂವರು ಆರೋಪಿಗಳು ಎರಡು ಬೈಕ್‌ಗಳಲ್ಲಿ ಕೇಕೆ ಹಾಕುತ್ತ, ಸೈಲೆನ್ಸರ್ ಶಬ್ದ ಮಾಡುತ್ತ ಬರುತ್ತಿದ್ದರು. ಮತ್ತಣ್ಣ ಅವರು ಇವರನ್ನು ತಡೆದು, ಗಲಾಟೆ ಮಾಡಬೇಡಿ, ಮನೆಗೆ ಹೋಗಿ ಎಂದು ಬುದ್ಧಿವಾದ ಹೇಳಿದ್ದರು. ಇದರಿಂದ ಕುಪಿತಗೊಂಡ ಅಣ್ಣಪ್ಪ ಬೈಕ್ ಅನ್ನು ಪೊಲೀಸ್ ಮೇಲೆ ಹತ್ತಿಸಲು ಯತ್ನಿಸಿದ್ದ, ಇತರ ಇಬ್ಬರು ಕಲ್ಲಿನಿಂದ ಮುಖಕ್ಕೆ ಜಜ್ಜಿ ಗಾಯಗೊಳಿಸಿದ್ದರು. ತನಿಖಾಧಿಕಾರಿಯಾಗಿದ್ದ ಇನ್‌ಸ್ಪೆಕ್ಟರ್ ಪ್ರಸಾದ್ ಕೆ.ಗೋಖಲೆ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಹೊಸಪೇಟೆ ಪಟ್ಟಣ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ಶಿವು ನಾಯ್ಕ ಅವರು ಸಾಕ್ಷಿದಾರರನ್ನು ಹಾಜರುಪಡಿಸಲು ಸಹಕರಿಸಿದ್ದರು.ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಟಿ.ಅಂಬಣ್ಣ ವಾದಿಸಿದ್ದರು.

- ಬೂದುಗುಂಪ ಗಂಗಾವತಿ ರೂಟ್ ಸೆಂಟ್ರಲ್ಲಿ ಆಗಿರುವಂತ ಅಪಘಾತ ಮೂವರು ಸ್ಥಳದಲ್ಲಿ 3 ಸಾವು ಹೊಸಳ್ಳಿ ಗ್ರಾಮದ ಯುವಕರು ಅವರ ಹೆಸರು ಇಮ್ರಾನ್ ಮತ್ತು ಅಜೀಜ್ ಮತ್ತು ರಾಜಹಂಸೇನ್ 15 ರಿಂದ 16 ವಯಸ್ಸಿನ ಮಕ್ಕಳು1
- Post by Shiva Prasad1
- Post by SRI RABINDRANATH TAGORE HIGH SCHOOL BIJAPUR1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಬೆಂಗಳುರು ಡೋರ್ ಸ್ಟೆಪ್ ಟ್ರೆಟ್ಮೆಂಟ್ಸ್ ಲಭ್ಯವಿದೆ1
- Post by Mahadev c c1
- ಬಿ ಎಸ್ ಲಾವೇಂದ್ರರವರ ಹೋಮಿಯೋಪತಿ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ 27 ವರ್ಷ ಸೇವೆ1
- *ಭಾರತ ನಲ್ಲಿ ವೈರಲ್*1
- ಹೆಚ್ ಟಿ ಎಂ ಹೆರ್ಬೇಸ್ ಸ್ಟೋರ್ ಬೆಂಗಳೂರು 88617278651