Shuru
Apke Nagar Ki App…
ಬೆಳಗೆರೆ ಶ್ರೀ ಕಾಟಂಲಿಂಗೇಶ್ವರ ಸ್ವಾಮಿಯ ಗೋಪುರ ಕಳಸ ಸ್ಥಾಪನೆ ,ವಿಗ್ರಹ ಪ್ರತಿಷ್ಠಾಪನೆ..
Suresh Belagere
ಬೆಳಗೆರೆ ಶ್ರೀ ಕಾಟಂಲಿಂಗೇಶ್ವರ ಸ್ವಾಮಿಯ ಗೋಪುರ ಕಳಸ ಸ್ಥಾಪನೆ ,ವಿಗ್ರಹ ಪ್ರತಿಷ್ಠಾಪನೆ..
More news from ಕರ್ನಾಟಕ and nearby areas
- Post by Suresh Belagere1
- ಯುವಕನ ಕತ್ತು ಕೊಯ್ದು ಚಾಕುವಿನಿಂದ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ಉಮರ್ ಸರ್ಕಲ್ ಬಳಿ ಭಾನುವಾರ ನಡೆದಿದೆ. ಕೊಲೆಯಾದ ಯುವಕನನ್ನು ಪ್ರಮೋದ್ ಬಾಬು ಎಂದು ಗುರುತಿಸಲಾಗಿದೆ. ಪ್ರಮೋದ್ ಬಾಬುವನ್ನು ಬರ್ಬರವಾಗಿ ಕೊಲೆ ಮಾಡಿದ ಕಾರಣ ತಿಳಿದು ಬಂದಿಲ್ಲ. ಪ್ರಮೋದ್ ಬಾಬು ಎಸ್ ಆರ್ ಇ ಬಸ್ ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ರಾತ್ರಿ ಬಂದು ಮನೆಗೆ ಮಲಗಿದಾಗ ಈ ಘಟನೆ ನಡೆದಿದೆ. ಸಹೋದರನನ್ನು ಕಳೆದು ಕೊಂಡ ಅಕ್ಕ ತಂಗಿಯರ ಆಕ್ರಂದನ ಮುಗಿಲು ಮುಟ್ಟಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.1
- Post by Karibasava Balal1
- Post by ALTAF,❤️🙏1
- Post by Hanumantha yadav1
- ಯಡಿಯೂರಪ್ಪ ಅಭಿಮಾನೋತ್ಸವ: ಚಿತ್ರದುರ್ಗದಲ್ಲಿ ಮೇ 9ರಂದು 10 ಲಕ್ಷ ಜನ ಸೇರುವ ನಿರೀಕ್ಷೆ – ಬಿ. ಶ್ರೀರಾಮುಲು, ಮೇ 9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿ.ಎಸ್. ಯಡಿಯೂರಪ್ಪ ಅಭಿಮಾನೋತ್ಸವಕ್ಕೆ 10 ಲಕ್ಷ ಜನ ಸೇರಲಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷವನ್ನು ಕಟ್ಟಿ ಬೆಳೆಸಿದ ಧೀಮಂತ ನಾಯಕ ಯಡಿಯೂರಪ್ಪ ಅವರನ್ನು ಬಲವಂತವಾಗಿ ಒಪ್ಪಿಸಿ ಸನ್ಮಾನಿಸಲಾಗುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಆಗಮಿಸುತ್ತಿದ್ದಾರೆ. ಇದೇ ವೇಳೆ ಪಕ್ಷದ ಬೆಳವಣಿಗೆಗೆ ಶ್ರಮಿಸಿದ ಇತರ ಹಿರಿಯ ನಾಯಕರನ್ನೂ ಅವರು ಸ್ಮರಿಸಿದರು.1
- ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಇಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಹಿರಿಯ ಚಲನಚಿತ್ರ ನಿರ್ಮಾಪಕ ಸಾರಾ ಗೋವಿಂದ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಕಳೆದ ಶನಿವಾರ ಸಾರಾ ಗೋವಿಂದ್ ಅವರು ಚೇತನ್ ಅವರ ಮನೆಗೆ ಬಂದು ಗಲಾಟೆ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನ್, ಇದು ಕೇವಲ ನನ್ನೊಬ್ಬನ ಹೋರಾಟವಲ್ಲ ಎಂದು ಸ್ಪಷ್ಟಪಡಿಸಿದರು. ಅವರಿಗೆ ಬೆಂಬಲವಾಗಿ ಹಲವು ಸಂಘಟನೆಗಳು ಸಾಥ್ ನೀಡಿವೆ: ದಲಿತ ಪರ ಸಂಘಟನೆಗಳು ಮಹಿಳಾ ಪರ ಸಂಘಟನೆಗಳು ಆದಿವಾಸಿ, ರೈತ ಮತ್ತು ಕಾರ್ಮಿಕ ಸಂಘಟನೆಗಳು ಭ್ರಷ್ಟಾಚಾರ ವಿರೋಧಿ ಮತ್ತು ಪ್ರಾದೇಶಿಕ ಕನ್ನಡ ಭಾಷಾ ಸಂಘಟನೆಗಳು "ನ್ಯಾಯಕ್ಕಾಗಿ ನಿಂತಿರುವ ಎಲ್ಲಾ ಸಂಘಟನೆಗಳು ನನ್ನ ಜೊತೆಗಿವೆ. ಸಾರಾ ಗೋವಿಂದ ಅವರ ವರ್ತನೆಯ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು," ಎಂದು ಚೇತನ್ ಅಹಿಂಸಾ ಒತ್ತಾಯಿಸಿದ್ದಾರೆ.1
- ಅದ್ದೂರಿಯಾಗಿ ಜರುಗಿದ ಶ್ರೀ ವೀರಭದ್ರ ಸ್ವಾಮಿ ಜಾತ್ರಾ ಮಹೋತ್ಸವ: ಮುಕ್ತಿ ಬಾವುಟ 9 ಲಕ್ಷಕ್ಕೆ ಹರಾಜು ಚಳ್ಳಕೆರೆ: ನಗರದ ಆರಾಧ್ಯ ದೈವವಾದ ಶ್ರೀ ವೀರಭದ್ರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವವು ಶನಿವಾರ ಸಂಜೆ 5.15ರ ವೇಳೆಗೆ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಜರುಗಿತು. ವೀರಭದ್ರಸ್ವಾಮಿಗೆ ಬೃಹತ್ ಹೂವಿನ ಹಾರಗಳು, ಬಣ್ಣ ಬಣ್ಣದ ಬಾವುಟಗಳಿಂದ ಅಲಂಕರಿಸಲ್ಪಟ್ಟ ಭವ್ಯ ರಥದಲ್ಲಿ ದೇವರನ್ನು ಆಸೀನಗೊಳಿಸಿ ಪೂಜೆ ಸಲ್ಲಿಸಿದ ಬಳಿಕ ಜಯಘೋಷಗಳ ಮಧ್ಯೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ರಥವು ನಗರದ ತೇರು ಬೀದಿಯಲ್ಲಿ ಗಾಂಭೀರ್ಯದಿಂದ ಸಾಗಿತು. ಸಾವಿರಾರು ಭಕ್ತರು ಭಕ್ತಿಭಾವದಿಂದ ಭಾಗವಹಿಸಿದರು. ರಥೋತ್ಸವದ ಮುಂಭಾಗದಲ್ಲಿ ಮಂಗಳವಾದ್ಯಗಳು, ಕರಡಿ ಮಜಲು, ನಂದಿಕೋಲು, ಕೋಲಾಟ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದವು. ಭಕ್ತರು “ಸ್ವಾಮಿಗೆ ಜಯಕಾರ” ಕೂಗುತ್ತಾ ಸೂರುಬೆಲ್ಲ, ಮೆಣಸು, ಬಾಳೆಹಣ್ಣುಗಳನ್ನು ತೇರಿಗೆ ಎಸೆಯುವ ಮೂಲಕ ತಮ್ಮ ಹರಕೆಗಳನ್ನು ಸಲ್ಲಿಸಿ ಭಕ್ತಿ ಭಾವ ವ್ಯಕ್ತಪಡಿಸಿದರು. ಜಾತ್ರೆಯ ವಿಶೇಷ ಆಕರ್ಷಣೆಯಾಗಿರುವ “ಮುಕ್ತಿ ಬಾವುಟ” ಹರಾಜು ಪ್ರಕ್ರಿಯೆಯೂ ಭಾರೀ ಕುತೂಹಲಕ್ಕೆ ಕಾರಣವಾಯಿತು. ಈ ವೇಳೆ ನಗರದ ವಾಣಿಜ್ಯೋದ್ಯಮಿ ಎಸ್. ರುದ್ರಮನಿಯಪ್ಪ 9ಲಕ್ಷ ರೂಪಾಯಿಗೆ ಬಿಡ್ ಮಾಡುವ ಮೂಲಕ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು. ಈ ಸಂದರ್ಭ ಭಕ್ತರು ಜಯಘೋಷಗಳ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಜಾತ್ರಾ ಮಹೋತ್ಸವದ ಅಂಗವಾಗಿ ಮೇ 6ರಿಂದ ಸೂಜಿಮಲ್ಲೇಶ್ವರ ನಗರದಲ್ಲಿ ಒಂದು ವಾರದ ದನಗಳ ಜಾತ್ರೆ ನಡೆಯಲಿದೆ. ದನಗಳಿಗೆ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗಿದ್ದು, ರೈತರು ತಮ್ಮ ದನಗಳೊಂದಿಗೆ ಮೇವು ತರಬೇಕೆಂದು ದೇವಸ್ಥಾನ ಸಮಿತಿ ಮನವಿ ಮಾಡಿದೆ. ಈ ಸಂದರ್ಭದಲ್ಲಿ ಶಾಸಕರಾದ ಟಿ ರಘುಮೂರ್ತಿ.ಕೆ.ಸಿ ವಿರೇಂದ್ರ ಪಪ್ಪಿ ವೀರಭದ್ರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.1