Shuru
Apke Nagar Ki App…
ಅಂಗನವಾಡಿ ಕಾರ್ಯಕರ್ತೆಯರ ಮೆಗಾ ಬೇಡಿಕೆ! ಗ್ರಾಚ್ಯುಟಿ, ಪಿಂಚಣಿ, ಗೌರವಧನಕ್ಕೆ ಆಗ್ರಹ #ಚಿತ್ರದುರ್ಗ #ಅಂಗನವಾಡಿ #ಅಂಗನವಾಡಿಕಾರ್ಯಕರ್ತೆಯರು #ಅಂಗನವಾಡಿಸಹಾಯಕಿಯರು #Anganwadi #AnganwadiWorkers #AnganwadiNews #ಚಿತ್ರದುರ್ಗನ್ಯೂಸ್ #ಕರ್ನಾಟಕನ್ಯೂಸ್ #ಗೌರವಧನ #ಗ್ರಾಚ್ಯುಟಿ #ಪಿಂಚಣಿ #ಅಂಗನವಾಡಿಬೇಡಿಕೆ #ಕರ್ನಾಟಕಸರ್ಕಾರ #DKShivakumar #KarnatakaNews #BreakingNews #ViralNews #CtownNews #CTownNews #NewsUpdate #KannadaNews #LatestNews
Ctownnews16
ಅಂಗನವಾಡಿ ಕಾರ್ಯಕರ್ತೆಯರ ಮೆಗಾ ಬೇಡಿಕೆ! ಗ್ರಾಚ್ಯುಟಿ, ಪಿಂಚಣಿ, ಗೌರವಧನಕ್ಕೆ ಆಗ್ರಹ #ಚಿತ್ರದುರ್ಗ #ಅಂಗನವಾಡಿ #ಅಂಗನವಾಡಿಕಾರ್ಯಕರ್ತೆಯರು #ಅಂಗನವಾಡಿಸಹಾಯಕಿಯರು #Anganwadi #AnganwadiWorkers #AnganwadiNews #ಚಿತ್ರದುರ್ಗನ್ಯೂಸ್ #ಕರ್ನಾಟಕನ್ಯೂಸ್ #ಗೌರವಧನ #ಗ್ರಾಚ್ಯುಟಿ #ಪಿಂಚಣಿ #ಅಂಗನವಾಡಿಬೇಡಿಕೆ #ಕರ್ನಾಟಕಸರ್ಕಾರ #DKShivakumar #KarnatakaNews #BreakingNews #ViralNews #CtownNews #CTownNews #NewsUpdate #KannadaNews #LatestNews
More news from ಕರ್ನಾಟಕ and nearby areas
- ಹುಣಸೆಕಟ್ಟೆ ಗ್ರಾಮದ ರೈತರ ಜಮೀನಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ ಹುಣಸೆಕಟ್ಟೆ ಗ್ರಾಮದ ರೈತರ ಜಮೀನಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ ನಡೆಸಿದೆ. ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಹುಣಸೇಕಟ್ಟೆ ಗ್ರಾಮದ ಸೇವಂತಿಗೆ ಬೆಳೆಗಾರರ ಜಮೀನುಗಳಿಗೆ ತೋಟಗಾರಿಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ವೇಳೆ ಸೇವಂತಿ ಬೆಳೆಗೆ ಮಾರಕವಾದ ‘ಫ್ಯೂಜೇರಿಯಂ ವಿಲ್ಟ್' ತಗುಲಿರುವುದು ಕಂಡುಬಂದಿದ್ದು, ರೋಗ ಹತೋಟಿಗೆ ತೋಟಗಾರಿಕೆ ಅಧಿಕಾರಿಗಳು ತಾಂತ್ರಿಕ ಸಲಹೆ ನೀಡಿದ್ದಾರೆ. ಫ್ಯೂಜೇರಿಯಂ ಆಕ್ಸಿಸ್ಪೋರಂ ಕ್ರೈಸಾಂತಮಿ ಎಂಬ ಶಿಲೀಂದ್ರದಿಂದ ಬರುವ ಈ ರೋಗವು ಮಣ್ಣಿನಲ್ಲಿ ಜೀವಿಸುತ್ತದೆ ಹಾಗೂ ರೋಗಗ್ರಸ್ತ ಗಿಡಗಳಿಂದ ಮಾಡಿದ ಕಟಿಂಗ್ಸ್ ಮೂಲಕ ಹರಡುತ್ತದೆ. ಇದರಿಂದ ಗಿಡಗಳ ಬೇರುಗಳು ಹಾನಿಗೊಳಗಾಗಿ ಪೂರ್ತಿ ಗಿಡವೇ ಒಣಗಿಹೋಗುತ್ತದೆ. ಇದರ ನಿಯಂತ್ರಣಕ್ಕಾಗಿ ರೈತರು ಕಳೆದ ಸಾಲಿನಲ್ಲಿ ರೋಗ ಬಂದ ಭೂಮಿಯಲ್ಲಿ ಪುನಃ ಸೇವಂತಿಗೆ ಬೆಳೆಯಬಾರದು. ಬೆಳೆಯುವ ಮುನ್ನ 1 ಲೀಟರ್ ನೀರಿಗೆ 2 ಗ್ರಾಂ ಕಾರ್ಬನ್ಡೇಜಿಂ 50 WP ಬೆರೆಸಿದ ದ್ರಾವಣದಲ್ಲಿ ಸಸಿಗಳನ್ನು ಅದ್ದಿ ನಾಟಿ ಮಾಡಬೇಕು. ಅಲ್ಲದೆ, Trichoderma harzianum ಮತ್ತು Bacillus subtilis ಮಿಶ್ರಿತ ಕೊಟ್ಟಿಗೆ ಗೊಬ್ಬರ ಅಥವಾ ಬೇವಿನ ಹಿಂಡಿಯನ್ನು ಮಣ್ಣಿಗೆ ಸೇರಿಸುವುದು ಸೂಕ್ತ. ಔಷಧೋಪಚಾರಕ್ಕಾಗಿ ತೈಯೋಪನೆಟ್ ಮಿಥೇಲ್ 70% WP 1 ಗ್ರಾಂ ಅಥವಾ ಕಾರ್ಬನ್ಡೇಜಿಂ 40% WP 1 ಗ್ರಾಂ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು. ಅದೇ ರೀತಿ ಇವುಗಳನ್ನು ಪ್ರತಿ ಲೀಟರ್ ನೀರಿಗೆ 2 ಗ್ರಾಂ ನಂತೆ ಬೆರೆಸಿ ಮಣ್ಣಿಗೆ ಸುರಿಯಬೇಕು ಪರ್ಯಾಯವಾಗಿ ಡೈಫಿನೊಕೊನಜೋಲ್ 25% EC ನೀರಿಗೆ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಹಾಗೂ ಮಣ್ಣಿಗೆ ಹಾಕಿ ಭೂಮಿಯನ್ನು ಚೆನ್ನಾಗಿ ನೆನೆಸಬೇಕು. ರೋಗಪೀಡಿತ ಮಣ್ಣಿನಲ್ಲಿ ಯಾವುದೇ ಕಾರಣಕ್ಕೂ ಮರುನಾಟಿ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.1
- ಶಾಸಕ ರೇವಣ್ಣ ವಿರುದ್ಧ ಕೂಡ್ಲಿಗಿ ತಾಲೂಕಿನ ವಾಲ್ಮೀಕಿ ಸಂಘಟನೆ ವತಿಯಿಂದ ಪ್ರತಿಭಟನೆ ಶಾಸಕ ರೇವಣ್ಣ ವಿರುದ್ಧ ಕೂಡ್ಲಿಗಿ ತಾಲೂಕಿನ ವಾಲ್ಮೀಕಿ ಸಂಘಟನೆ ವತಿಯಿಂದ ಪ್ರತಿಭಟನೆ *ಕೂಡ್ಲಿಗಿ*: ದಲಿತ ಮಹಿಳೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರ ಕುರಿತು ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ, ಕೂಡ್ಲಿಗಿ ತಾಲ್ಲೂಕಿನ ಮಹರ್ಷಿ ವಾಲ್ಮೀಕಿ ನಾಯಕ ಸಮುದಾಯದ ಮುಖಂಡರು ಹಾಗೂ ವಿವಿಧ ನಾಯಕ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ಪಟ್ಟಣದ ಪ್ರವಾಸಿ ಮಂದಿರದಿಂದ ಡಾ. ಬಿ. ಆರ್. ಅಂಬೇಡ್ಕರ್ ಸರ್ಕಲ್, ಮದಕರಿ ನಾಯಕ ವೃತ್ತದಿಂದ ಸಾಗಿದ ಪ್ರತಿಭಟನಾಕಾರರು ಮೆರವಣಿಗೆ ಮುಖಾಂತರ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ನೀಡಿದರು. ಮಹಿಳಾ ಅಧಿಕಾರಿಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಕೂಡಲೇ ಶಾಸಕ ರೇವಣ್ಣ ರಾಜೀನಾಮೆ ನೀಡಬೇಕು, ಜಿಲ್ಲಾಧಿಕಾರಿ ಲತಾಕುಮಾರಿ ಅವರಿಗೆ ಕ್ಷಮೆ ಕೇಳಬೇಕು, ಮುಂದಿನ ದಿನಗಳಲ್ಲಿ ನಮ್ಮ ನಾಯಕ ಜನಾಂಗಷತಕ್ಕ ಪಾಠ ಕಲಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕ ಜೀವನದಲ್ಲಿರುವ ಜನಪ್ರತಿನಿಧಿಗಳು ಮಹಿಳೆಯರು ಹಾಗೂ ಅಧಿಕಾರಿಗಳ ಬಗ್ಗೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಅವಹೇಳನಕಾರಿ ಹೇಳಿಕೆ ನೀಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕೂಡ್ಲಿಗಿ ತಾಲೂಕಿನ ಮಹರ್ಷಿ ವಾಲ್ಮೀಕಿ ನಾಯಕ ಸಮುದಾಯದ ನಿವೃತ್ತ ಇಒ ಜಿ. ಬಸಣ್ಣ, ತಳವಾರ್ ಶರಣಪ್ಪ, ಜಿಂಕಲ್ ನಾಗಮಣಿ, ಗುನ್ನಳ್ಳಿ ರಾಘವೇಂದ್ರ, ಕಾವಲಿ ಶಿವಪ್ಪನಾಯಕ, ವಾಲ್ಮೀಕಿ ಸಂಘದ ಅದ್ಯಕ್ಷ ಸುರೇಶ್, ಜಯರಾಮ್ ನಾಯಕ್, ಹುಡೇಂ ಪಾಪನಾಯಕ, ಅಶೋಕ್,ಕಾಟೇರ್ ಹಾಲೇಶ್, ರೖತಸಂಘದ ಮಹೇಶಪ್ಪ, ವಕೀಲ ಓಂಕಾರಪ್ಪ, ಮಹದೇವಪುರ ಓಬಯ್ಯ, ನಿವೃತ್ತ ಪ್ರಾಂಶುಪಾಲೆ ಕೋತ್ಲಮ್ಮ,ಹಾಲಸಾಗರ ಮಂಜಣ್ಣ, ಅಜಯ್, ಪಾಪಯ್ಯ, ಸಣ್ಣೊಬಯ್ಯ,ಗುಂಡುಮುಣಗು ಮಂಜಣ್ಣ, ಡಾ. ಸಿದ್ದೇಶ್, ಚಿರತಗುಂಡು ದಡ್ಡಯ್ಯ, ಗೋವಿಂದ ರೆಡ್ಡಿ, ರಾಮಸಾಗರ ರಾಜಶೇಖರ್, ಸೇರಿದಂತೆ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.1
- ಭದ್ರಾವತಿ : ಲಾಠಿ ಹಿಡಿಯುತ್ತಿದ್ದ ಕೈ ತುಂಬಾ ರಾಖಿಪ್ರಾಂಶುಪಾಲೆ ರೇಷ್ಮಾ ನೇತೃತ್ವದಲ್ಲಿ ಹಬ್ಬ ಆರಕ್ಷಕರ ಪಾದ ಸ್ಪರ್ಶಿಸುವ ಮೂಲಕ ಗೌರವ ನೀಡಿದ ಮಕ್ಕಳು ....... ಖಾಕಿ ಜತೆ ಟೈಮ್ಸ್ ಮಕ್ಕಳ ರಾಖಿ ... ಹೈಲೈಟ್ಸ್ * ,* ಪೆರೆಡೇ ಗ್ರೌಂಡ್ ನಲ್ಲಿ ರಕ್ಷಾ ಬಂಧನ *ಡಿವೈಎಸ್ಪಿ ರಾಥೋಡ್ ಗೆ ರಾಖಿ ಕಟ್ಟುವ ಮೂಲಕ ಚಾಲನೆ ..... ನಂದೀಶ್ ಭದ್ರಾವತಿ, ಶಿವಮೊಗ್ಗ ಅಲ್ಲಿ ಖಾಕಿ ಪಡೆ ನೆರೆದಿತ್ತು, ಪುಟ್ಟ ಮಕ್ಕಳು ತಾವೇ ತಯಾರಿಸಿದ ರಾಖಿ ಕಟ್ಟಿ, ಪಾದ ಸ್ಪರ್ಶಿಸುವ ಮೂಲಕ ರಕ್ಷಾ ಬಂಧನ ಆಚರಿಸಿದರು. ಹೌದು..ನಗರದ ಮಿಲ್ಟ್ರೀ ಕ್ಯಾಂಪನ್ ಮಕ್ಕಳ ಜತೆ ಟೈಮ್ಸ್ ಶಾಲೆಯ ಮಕ್ಕಳು ಪ್ರಾಶುಂಪಾಲೆ ರೇಷ್ಮಾ ನೇತೃತ್ವದಲ್ಲಿ ನೆರೆದಿದ್ದವರಿಗೆ ರಾಖಿ ಕಟ್ಟಿದರು. ಡಿವೈಎಸ್ಪಿ ಪ್ರಕಾಶ್ ರಾಥೋಡ್ ಗೆ ಟೈಮ್ಸ್ ಶಾಲೆ ಮುಖ್ಯ ಶಿಕ್ಷಕಿ ರೇಷ್ಮಾ ಆರತಿ ಎತ್ತಿ ರಾಖಿ ಕಟ್ಟುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿದರು. ನಂತರ ಮಕ್ಕಳು ಇತರೆ ಸಿಬ್ಬಂದಿಗಳಿಗೆ ರಾಖಿ ಕಟ್ಟಿ ಆರ್ಶೀವಾದ ಪಡೆದರು. ಪ್ರಾಂಶುಪಾಲೆ ರೇಷ್ಮಾ ಮಾತನಾಡಿ, ರಾಖಿ ಹಬ್ಬ ವಿಶೇಷವಾದದ್ದು. ಇದು ಸಹೋದರಿಯರು ತಮ್ಮ ಸಹೋದರರಿಂದ ರಕ್ಷಣೆ ಬಯಸುವಂತಹ ಅರ್ಥಪೂರ್ಣವಾದ ದಿನ. ಪ್ರತಿ ದಿನ ಪೊಲೀಸರು ಹಾಗೂ ಯೋಧರು ಕರ್ತವ್ಯದಲ್ಲಿರುತ್ತಾರೆ. ಅವರು ಸಮಾಜದ ಹಾಗೂ ನಮ್ಮ ರಕ್ಷಣೆಗಾಗಿ ತ್ಯಾಗ ಮಾಡುತ್ತಾರೆ. ಎಂತಹ ಕಷ್ಟದ ಸನ್ನಿವೇಶದಲ್ಲಿಯೂ ಅವರು ರಕ್ಷಣೆ ನೀಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ರಾಖಿ ಕಟ್ಟಿ ಸಹೋದರಿಯ ಪ್ರೀತಿಯನ್ನು ವ್ಯಕ್ತಪಡಿಸಿದ್ದೇವೆ. ಆ ಮೂಲಕ ಕರ್ತವ್ಯವನ್ನೂ ನೆನಪಿಸಿದ್ದೇವೆ. ಸಾರ್ವಜನಿಕರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವವರ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಳವಾದ ಗೌರವವನ್ನು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. "ನಮ್ಮ ಪೊಲೀಸ್ ಅಧಿಕಾರಿಗಳಿಗೆ ರಾಖಿಗಳನ್ನು ಕಟ್ಟುವ ಮೂಲಕ, ಪ್ರತಿದಿನ ನಮಗೆ ಗುರಾಣಿಯಾಗಿ ನಿಲ್ಲುವ, ತಮ್ಮ ಜೀವವನ್ನು ಪಣಕ್ಕಿಡುವ ನಮ್ಮ ಸಮಾಜದ ರಕ್ಷಕರನ್ನು ನಾವು ಗೌರವಿಸುತ್ತಿದ್ದೇವೆ" ಎಂದು ಅವರು ಹೇಳಿದರು. ಡಿವೈಎಸ್ಪಿ ರಾಥೋಡ್ ಮಾತನಾಡಿ, ಟೈಮ್ಸ್ ಶಾಲೆ ಮಕ್ಕಳು ಈ ರೀತಿ ರಕ್ಷಾ ಬಂಧನವನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಸಹೋದರ ಸಹೋದರಿಯರ ನಡುವೆ ಇರುವ ಸಂಬಂಧವನ್ನು ಈ ಹಬ್ಬ ಗಟ್ಟಿಗೊಳಿಸುತ್ತದೆ. ಒಂದು ಬಂಧವನ್ನು ರಾಖಿ ಬೆಸೆಯುತ್ತದೆ. ನಾವು ಆರಕ್ಷಕರಾಗಿದ್ದು, ಸಮಾಜದ ಎಲ್ಲ ಸಹೋದರಿಯರ ರಕ್ಷಣೆಗೆ ಕಟಿಬದ್ದವಾಗಿದ್ದೇವೆ ಎಂದು ಹೇಳಿದರು. ಒಟ್ಟಿನಲ್ಲಿ ರಾಖಿ ಹಬ್ಬ ಪೊಲೀಸರೊಂದಿಗೆ ಅರ್ಥಪೂರ್ಣವಾಗಿ ನಡೆಯಿತು. ... ಬಾಕ್ಸ್ ಮಕ್ಕಳೇ ತಯಾರಿಸಿದ ರಾಖಿ ರಕ್ಷಾ ಬಂಧನದ ನಿಮಿತ್ತ ಮಕ್ಕಳೇ ಮನೆಯಲ್ಲಿ ರಾಖಿ ತಯಾರಿ ಮಾಡಿದ್ದರು. ಪುಟ್ಟ ಕೈಗಳಿಂದ ಮಾಡಿದ ರಾಖಿ ಆರಕ್ಷಕರ ಕೈ ಸೇರಿದಾಗ ಮಕ್ಕಳ ಸಂತೋಷಕ್ಕೆ ಪಾರವೇ ಇರಲಿಲ್ಲ..ಇನ್ನು ಆಕ್ಷಕರು ಮಕ್ಕಳಿಗೆ ಸಿಹಿ ತಿನಿಸುವ ಮೂಲಕ ಒಂದಿಷ್ಟು ಸಂತೋಷ ಪಟ್ಟರು. ... ಕಾಲಿಗೆ ಬಿದ್ದ ಮಕ್ಕಳು ಮೊದಲಿಗೆ ಪ್ರಾಂಶುಪಾಲೆ ರೇಷ್ಮಾ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಗೆ ರಾಖಿ ಕಟ್ಟಿ, ಕಾಲಿಗೆ ಬಿದ್ದರು. ನಂತರ ಮಕ್ಕಳು ಕೂಡ ಪೊಲೀಸರ ಕಾಲಿಗೆ ನಮಸ್ಕರಿಸಿ ಆರ್ಶೀವಾದ ಪಡೆದರು. .... ಮಕ್ಕಳಿಂದ ತುಂಬಿದ ಪೆರೇಡ್ ಮೈದಾನ ಇಡೀ ಮೈದಾನ ಮಕ್ಕಳಿಂದ ತುಂಬಿತ್ತು.. ಆರಕ್ಷಕರು ಅವರನ್ನು ಎತ್ತಿಕೊಂಡು ಮುದ್ದಾಡಿದರು..ಚೆನ್ನಾಗಿ ಓದಬೇಕು, ನಮ್ಮ ಪೊಲೀಸ್ ಆಗಬೇಕೆಂದು ಹಿತನುಡಿಗಳನ್ನಾಡಿದರು. ಕೆಲವರು ಸೆಲ್ಫಿ ತೆಗೆಸಿಕೊಂಡು ತಮ್ಮ ಡಿಪಿಗೆ ಹಾಕಿಕೊಂಡರು. ... ಮಹಿಳಾ ಪೊಲೀಸ್ ಗೂ ರಾಖಿ ಕಟ್ಟಿದ ಮಕ್ಕಳು ಪೆರೆಡ್ ಮೈದಾನದಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದ್ದರೂ, ಮಕ್ಕಳು ಅವರಿಗೂ ರಾಖಿ ಕಟ್ಟಿದರು. ಅವರು ಕೂಡ ಮಕ್ಕಳಿಗೆ ಆರ್ಶೀವಾದ ನೀಡಿದರು.1
- ಧನ-ಧಾನ್ಯ ಸಮೃದ್ಧಿಗಾಗಿ ಕಂಬಳಿಪುರ ಕಾಟೇರಮ್ಮ ಸನ್ನಿಧಿಯಲ್ಲಿ ವಿಶೇಷ ಕುಬೇರ ಮಹಾಲಕ್ಷ್ಮೀ ಪೂಜೆ1
- ಇಂದು ಜಿಲ್ಲಾಡಳಿತ ಭವನದಲ್ಲಿ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ ಬೆಂಗಳೂರು ಗ್ರಾಮಾಂತರ ಜಿಲ್ಲೆ: ನುಲಿಯ ಚಂದಯ್ಯನವರು ತಮ್ಮ ಕಾಯಕ, ಭಕ್ತಿ ಮತ್ತು ಸರಳ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು. ತಮ್ಮ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾ, ಕಾಯಕಕ್ಕೆ ಗೌರವ ನೀಡಬೇಕು ಎಂಬ ಸಂದೇಶವನ್ನು ಸಾರಿದರು. ಜೀವನದಲ್ಲಿ ಶ್ರಮ, ಪ್ರಾಮಾಣಿಕತೆ, ಭಕ್ತಿ ಮತ್ತು ಸಮಾನತೆಗೆ ವಿಶೇಷ ಸ್ಥಾನಮಾನ ನೀಡಿದ್ದರು. ಈ ಮಹಾನ್ ಶರಣರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಹೇಳಿದರು. ಇಂದು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ನುಲಿಯ ಚಂದಯ್ಯ ಹಾಗೂ ತತ್ವಜ್ಞಾನಿ, ಆಧ್ಯಾತ್ಮಿಕ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ನುಲಿಯ ಚಂದಯ್ಯನವರು 12ನೇ ಶತಮಾನದ ಪ್ರಮುಖ ಶರಣರಲ್ಲಿ ಒಬ್ಬರು. ಅವರು ತಮ್ಮ ಕಾಯಕ, ಭಕ್ತಿ ಮತ್ತು ಸರಳ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದರು. ನುಲಿಯ ಚಂದಯ್ಯನವರು ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಜಾತಿ-ಭೇದ, ಅಹಂಕಾರ ಮತ್ತು ಮೂಢನಂಬಿಕೆಗಳನ್ನು ವಿರೋಧಿಸಿ, ಎಲ್ಲರೂ ಸಮಾನರು ಎಂಬ ಮಾನವೀಯ ಸಂದೇಶವನ್ನು ನೀಡಿದರು. ಅವರ ವಚನಗಳು ಮತ್ತು ಜೀವನಾದರ್ಶಗಳು ಇಂದಿಗೂ ನಮಗೆ ಸ್ಪೂರ್ತಿಯಾಗಿವೆ ಎಂದರು. ನಾವು ನುಲಿಯ ಚಂದಯ್ಯನವರ ಜೀವನದಿಂದ ಪ್ರಾಮಾಣಿಕವಾಗಿ ದುಡಿಯುವುದು, ಎಲ್ಲರನ್ನು ಸಮಾನವಾಗಿ ಗೌರವಿಸುವುದು ಮತ್ತು ಸಮಾಜದ ಒಳಿತಿಗಾಗಿ ಶ್ರಮಿಸುವುದು ಎಂಬ ಗುಣಗಳನ್ನು ಕಲಿಯಬೇಕು ಎಂದು ತಿಳಿಸಿದರು. ಮಹಾನ್ ಸಮಾಜ ಸುಧಾರಕ, ತತ್ವಜ್ಞಾನಿ ಹಾಗೂ ಆಧ್ಯಾತ್ಮಿಕ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜದಲ್ಲಿದ್ದ ಜಾತಿ ಭೇದ, ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದರು. ಎಲ್ಲ ಮನುಷ್ಯರೂ ಸಮಾನರು ಎಂಬ ಸಂದೇಶವನ್ನು ತಮ್ಮ ಜೀವನದ ಮೂಲಕ ಸಾರಿದರು. "ಒಂದು ಜಾತಿ, ಒಂದು ಧರ್ಮ, ಒಬ್ಬ ದೇವರು ಮನುಷ್ಯನಿಗೆ" ಎಂಬ ಅವರ ಮಹತ್ವದ ಸಂದೇಶವು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದೆ. ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಪ್ರಮುಖ ಸಾಧನ ಎಂದು ನಂಬಿದ್ದ ಅವರು, ಜನರಲ್ಲಿ ಶಿಕ್ಷಣ, ಸ್ವಾಭಿಮಾನ, ಸ್ವಚ್ಛತೆ ಮತ್ತು ಸಾಮಾಜಿಕ ಜಾಗೃತಿಯನ್ನು ಬೆಳೆಸಲು ಶ್ರಮಿಸಿದರು. ಅವರ ಸರಳ ಜೀವನ ಮತ್ತು ಉನ್ನತ ಚಿಂತನೆಗಳು ನಮಗೆ ಸದಾ ಸ್ಫೂರ್ತಿಯಾಗಿವೆ. ನಾವು ನಾರಾಯಣ ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಜಾತಿ-ಮತ ಭೇದವಿಲ್ಲದೆ ಎಲ್ಲರನ್ನು ಗೌರವಿಸೋಣ. ಶಿಕ್ಷಣ ಪಡೆದು, ಸಮಾಜದ ಒಳಿತಿಗಾಗಿ ಕೆಲಸ ಮಾಡೋಣ ಮತ್ತು ಸಮಾನತೆ ಹಾಗೂ ಸಹೋದರತ್ವವನ್ನು ಬೆಳೆಸೋಣ ಎಂದರು. ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ ಚಂದ್ರಣ್ಣ ಮಾತನಾಡಿ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನದ ಆದರ್ಶ, ಅವರ ಸೇವೆಯನ್ನು ಸ್ಮರಿಸಿದರು. ಸಮಾಜದಲ್ಲಿ ಅವರ ಆದರ್ಶ ತತ್ವಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ.ಬಿ. ಕೃಷ್ಣಪ್ಪ ಮಾತನಾಡಿ ನುಲಿಯ ಚಂದಯ್ಯ ಅವರು ಹಗ್ಗ ಒಸೆದು ಸಂತೆಯಲ್ಲಿ ಮಾರಿ ಬಂದ ಹಣದಿಂದ ದಾಸೋಹ ಮಾಡುತ್ತಿದ್ದರು. ಕಾಯಕ ನಿಷ್ಠೆಗೆ ಮಹತ್ವವನ್ನು ನೀಡಿದ್ದರು ಎಂದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದು ಜಾತಿ, ಒಂದು ಧರ್ಮ, ಒಬ್ಬ ದೇವರು ಎಂಬ ಸಂದೇಶವನ್ನು ಸಾರಿದ್ದಾರೆ. ಅವರ ತತ್ವ ಆದರ್ಶಗಳು ಸಮಾಜಕ್ಕೆ ಎಂದೆಂದಿಗೂ ಪ್ರಸ್ತುತ ಎಂದರು. ಕಾರ್ಯಕ್ರಮದಲ್ಲಿ ಕೊರಮ ಜನಾಂಗ ಸಂಘದ ಉಪಾಧ್ಯಕ್ಷ ಚೆನ್ನಕೇಶವ, ಮಾಜಿ ಅಧ್ಯಕ್ಷ ಪ್ರಭಾಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕಲ್ಪನ ಆರ್, ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.3
- ಹುಳಿಯಾರು ಹೋಬಳಿ ದಸೂಡಿ ಸೊಸೈಟಿಯಲ್ಲಿ ಸರ್ವರ್ ಸಮಸ್ಯೆ ತಿಂಗಳು ಮುಗಿಯುತ್ತಾ ಬಂದಿದ್ದರು ಅಕ್ಕಿ ಇನ್ನೂ ಸಿಕ್ಕಿಲ್ಲ ಹುಳಿಯಾರು ಹೋಬಳಿ ದಸೂಡಿ ಸೊಸೈಟಿಯಲ್ಲಿ ಸರ್ವರ್ ಸಮಸ್ಯೆ ತಿಂಗಳು ಮುಗಿಯುತ್ತಾ ಬಂದಿದ್ದರು ಅಕ್ಕಿ ಇನ್ನೂ ಸಿಕ್ಕಿಲ್ಲ1
- ಬಾಗೇನಹಾಳ್ ಗ್ರಾಮದ ರಸ್ತೆಯಲ್ಲಿನ ಸೇತುವೆ ಹದಗೆಟ್ಟಿದ್ದು ದುರಸ್ತಿಗೆ ಸ್ಥಳೀಯರು ಆಗ್ರಹ ಬಾಗೇನಹಾಳ್ ಗ್ರಾಮದ ರಸ್ತೆಯಲ್ಲಿನ ಸೇತುವೆ ಹದಗೆಟ್ಟಿದ್ದು ದುರಸ್ತಿಗೆ ಸ್ಥಳೀಯರು ಆಗ್ರಹ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಬಾಗೇನಹಾಳ್ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿದೆ. ಇನ್ನೂ ಬಾಗೇನಹಾಳ್ ಗ್ರಾಮದಿಂದ ಕಲ್ಲೇನಹಳ್ಳಿಗೆ ಹೋಗುವ ಮಾರ್ಗದ ರಸ್ತೆಯಲ್ಲಿರುವ ಸೇತುವೆ ಸಂಪೂರ್ಣ ಶಿಥಿಲವಾಗಿದ್ದು ಬಿರುಕು ಬಿಟ್ಟು ಕಬ್ಬಿಣದ ರಾಡುಗಳು ಕಾಣುತ್ತಿವೆ. ರೈತರ ಬಹುತೇಕ ಜಮೀನುಗಳು ಸಹ ಇದೇ ಮಾರ್ಗದಲ್ಲಿ ಇದ್ದು ವಾಹನ ಸವಾರರು ರೈತರು ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ರೈತರು ರಾತ್ರಿ ವೇಳೆಯಲ್ಲಿ ಸಂಚರಿಸಲು ಸಮಸ್ಯೆ ಉಂಟಾಗುತ್ತಿದ್ದು ಶಾಲಾ ಮಕ್ಕಳು ಸಹ ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ಸರ್ಕಾರದ ಹಣ ದುರುಪಯೋಗ ಆಗುತ್ತಿದ್ದು ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಶೀಘ್ರವಾಗಿ ಸಂಬಂದಪಟ್ಟ ಇಲಾಖೆ ಅಧಿಕಾರಿಗಳು ಸರ್ಕಾರ ಗಮನ ಹರಿಸಿ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಾಗುವಂತೆಯೂ ಕೂಡ ಆಗ್ರಹ ಮಾಡಿದ್ದಾರೆ.1
- ಎತ್ತುಗಳ ಕೊರತೆ .ಶೇಂಗಾ ಬೆಳೆಯಲ್ಲಿ ಎಡೆಕುಂಟೆ ಹೋಡೆಯಲಿಕ್ಕೆ ಹಳೆ ಸೈಕಲ್ ಮೊರೆ ಹೊದ ರೈತ..ಯೂಟುಬ್ ನೋಡಿಕೊಂಡು ಅನುಪಯುಕ್ತ ಸೈಕಲ್ ನ್ನೆ ಎಡೆಕುಂಟೆ ಮಾಡಿಕೊಂಡ ರೈತ..1
- ಶ್ರಾವಣ ಹುಣ್ಣಿಮೆ ವಿಶೇಷ: ಶ್ರೀ ಕಾಟೇರಮ್ಮ ದೇವಿಯ ಸನ್ನಿಧಿಯಲ್ಲಿ ಭಕ್ತಿ-ಶ್ರದ್ಧೆಯಿಂದ ವರಮಹಾಲಕ್ಷ್ಮಿ ಹೋಮ ಹಾಗೂ ಪೂಜೆ.1